"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 16 April 2016

☀️"ಎಸ್ಮಾ ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ" (ESMA-Essential Services Maintenance Act)

☀️"ಎಸ್ಮಾ ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ"
(ESMA-Essential Services Maintenance Act)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ
(General Studies)

ಎಸ್ಮಾ ಅನುಸಾರ ಸೂಚಿತ ಸೇವೆಗಳಲ್ಲಿ ತೊಡಗಿರುವವರು ಇತರೆ ಇಲಾಖೆಗಳಲ್ಲಿರುವಂತೆ ಇಷ್ಟಾನುಸಾರ ಮುಷ್ಕರಕ್ಕೆ ಇಳಿಯುವಂತಿಲ್ಲ. ಆದರೆ ಇದಕ್ಕೂ ಒಂದು Exception ಇದೆ. ಏನಪಾ ಅಂದರೆ 14 ದಿನಕ್ಕೆ ಮುಂಚೆಯೇ ಲಿಖಿತ ನೋಟಿಸ್ ನೀಡಿ ಮುಷ್ಕರ ಮಾಡಬಹುದು.

☀️ ಎಸ್ಮಾಸ್ತ್ರ:
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಾರಿಗೆ ವ್ಯವಸ್ಥೆಯೂ ಅಗತ್ಯ ಸೇವೆಯಾಗಿದೆ. ಹಾಗಾಗಿ, ಕೆಎಸ್ಸಾರ್ಟಿಸಿ ನೌಕರರು ಇಷ್ಟಾನುಸಾರ ಮುಷ್ಕರ ಹೂಡುವಂತಿಲ್ಲ.

☀️ ಏಸ್ಮಾ ಎಂದರೆ... :
ಜನಸಾಮಾನ್ಯರಿಗೆ ದೈನಂದಿನ ಜೀವನಕ್ಕೆ ತೊಡಕುಂಟಾಗದಂತೆ ಕೆಲವೊಂದು ಸೇವೆಗಳನ್ನು ಅಗತ್ಯ/ತುರ್ತು ಸೇವೆಗಳೆಂದು ವರ್ಗೀಕರಿಸಲಾಗಿದೆ. ಆ ಸೇವೆಗಳಲ್ಲಿ ತೊಡಗಿರುವ ನೌಕರರು ಕೆಲಸ ಬಿಟ್ಟು ಮುಷ್ಕರಕ್ಕಿಳಿದು ಜನ ಜೀವನ ಏರುಪೇರುಗೊಳಿಸಿದರೆ ಎಸ್ಮಾ ಜಾರಿಗೆ ತರಬಹುದು. ಇದಕ್ಕೆ ಸರಕಾರಕ್ಕೆ ಕಾನೂನಿನ ಬಲವೂ ಇರುತ್ತದೆ.

★ ಭಾರತದಲ್ಲಿ 1968ರಲ್ಲಿ ಇದನ್ನು ಜಾರಿಗೆ ತರಲಾಯಿತು. ಏಸ್ಮಾ ಪ್ರಕಾರ ಅಗತ್ಯ ಸೇವೆಗಳು ಯಾವುವೆಂದರೆ...
- ಸಾರ್ವಜನಿಕ ಸಂರಕ್ಷಣೆ,
- ನೈರ್ಮಲ್ಯ,
- ನೀರು ಸರಬರಾಜು,
- ಆಸ್ಪತ್ರೆ
- ದೇಶದ ರಕ್ಷಣೆಗೆ ಸಂಬಂಧಪಟ್ಟ ಸೇವೆಗಳು.
- ಪೆಟ್ರೋಲಿಯಂ ಉತ್ಪನ್ನಗಳು,
- ಕಲ್ಲಿದ್ದಲು,
- ಉಕ್ಕು
- ರಸಗೊಬ್ಬರಗಳ ತಯಾರಿಕೆ, ಸರಬರಾಜು ಮತ್ತು ವಿತರಣೆಯಲ್ಲಿ ತೊಡಗಿರುವ ಸರಕಾರಿ ಸಂಸ್ಥೆಗಳು,
- ದೂರ ಸಂಪರ್ಕ
- ಸಾರಿಗೆ ಸೇವೆ,
- ಆಹಾರ ಸಾಮಗ್ರಿ ಖರೀದಿ/ವಿತರಣೆ ವ್ಯವಸ್ಥೆಯಡಿ ಬರುವ ಸೇವೆಗಳು.

☀️ ಹಾಗಾದರೆ ಮುಷ್ಕರ ನಡೆಸಲೇಬಾರದ...??:

ಮುಷ್ಕರವೆಂಬುದು ಮೂಲಭೂತ ಹಕ್ಕು. ಆದರೆ ಮೇಲಿನ ಸೇವೆಗಳಡಿ ಬರುವ ನೌಕರರು ಅಗತ್ಯವಾಗಿ ಮುಷ್ಕರ ನಡೆಸುವಂತಿಲ್ಲ

ಇದರ ಹೊರತಾಗಿಯೂ ಈ ನೌಕರರು ಮುಷ್ಕರದಲ್ಲಿ ತೊಡಗಿದರೆ ಸರಕಾರ ತನ್ನ ವಿಶೇಷ ಅಧಿಕಾರ ಬಳಸಿ ಎಸ್ಮಾಸ್ತ್ರ ಘೋಷಿಸಿದರೆ ಅಂತಹ ಮುಷ್ಕರಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ.

☀️ ಎಸ್ಮಾಸ್ತ್ರಕ್ಕೆ ಬಗ್ಗದ ನೌಕರರ ಮೇಲೆ ಏನು ಕ್ರಮ ಕೈಗೊಳ್ಳಬಹುದೆಂದರೆ...:

ಮುಷ್ಕರದಲ್ಲಿ ತೊಡಗಿದ ಅಥವಾ ಮುಷ್ಕರಕ್ಕೆ ಪ್ರಚೋದನೆ ನೀಡಿದ ಯಾವುದೇ ನೌಕರನನ್ನು ಸೀದಾ ಕೆಲಸದಿಂದ ತೆಗೆದುಹಾಕಬಹುದು. ನಂತರ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಜೈಲುವಾಸವೂ ಆಗಬಹುದು.

No comments:

Post a Comment