"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 16 April 2016

☀ಪನಾಮಾ ಪೇಪರ್ ಎಂದರೇನು? ಪನಾಮಾ ಪೇಪರ್ಸ್ ಸೋರಿಕೆ ಎಂದರೇನು?

☀ಪನಾಮಾ ಪೇಪರ್ ಎಂದರೇನು?  ಪನಾಮಾ ಪೇಪರ್ಸ್ ಸೋರಿಕೆ ಎಂದರೇನು?
 ━━━━━━━━━━━━━━━━━━━━━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ
(General Studies)


★ ಪನಾಮಾ ಪೇಪರ್ :

ಪತ್ರಿಕೋದ್ಯಮ ಜಗತ್ತಿನ ಇತಿಹಾಸದಲ್ಲಿ ಬಹಿರಂಗಗೊಂಡ ಅತ್ಯಂತ ದೊಡ್ಡ ಸೋರಿಕೆ ಪನಾಮಾ ಪೇಪರ್ಸ್ ಸೋರಿಕೆ ಎಂದು ಪರಿಗಣಿಸಲಾಗಿದೆ.ಜಗತ್ತಿನಾದ್ಯಂತದ ಸಿರಿವಂತರು ತಮ್ಮ ಭಾರೀ ಪ್ರಮಾಣದ ಕಪ್ಪು ಹಣವನ್ನು ತೆರಿಗೆದಾರರ ಸ್ವರ್ಗವೆಂದೇ ಪರಿಗಣಿತವಾಗಿರುವ ಪನಾಮಾದಲ್ಲಿ ಇರಿಸಿರುವುದನ್ನು ಮೊಸ್ಸಾಕ್ ಫೊನ್ಸಿಕಾ ಸಂಸ್ಥೆ "ಪನಾಮಾ ದಾಖಲೆಪತ್ರಗಳ ಮೂಲಕ' ಬಹಿರಂಗಪಡಿಸಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಪಟ್ಟಿಯಲ್ಲಿ 500 ಮಂದಿ ಭಾರತೀಯರಿದ್ದಾರೆ. ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಐಶ್ವರ್ಯಾ ರೈ, ರಿಯಲ್ಟಿ ಉದ್ಯಮಿ ಕೆ ಪಿ ಸಿಂಗ್‌, ಇಂಡಿಯಾ ಬುಲ್ಸ್‌ ಮಾಲಕ ಸಮೀರ್‌ ಗೆಹ್ಲೋಟ್ ಪ್ರಮುಖರು.

ಪನಾಮಾ ಪೇಪರ್ ಎಂದೇ ಖ್ಯಾತವಾಗಿರುವ ವಿಶ್ವಾದ್ಯಂತದ ಸಿರಿವಂತರ ಕಪ್ಪು ಹಣದ ರಹಸ್ಯಗಳನ್ನು ಒಳಗೊಂಡ ದಾಖಲೆಪತ್ರಗಳು ಪನಾಮಾ ಮೂಲದ ಮೊಸ್ಸಾಕ್‌ ಫೊನೆಸ್ಕಾ ಎಂಬ ಕಾನೂನು ಸಂಸ್ಥೆಯ ರಹಸ್ಯ ಕಡತಗಳ ಭಾಗವಾಗಿದ್ದು ಇವು 1.10 ಕೋಟಿ ಸಂಖ್ಯೆಯ ದಾಖಲೆ ಪತ್ರಗಳನ್ನು ಒಳಗೊಂಡಿವೆ. ಜಗತ್ತಿನಲ್ಲಿಯೇ ಪನಾಮಾ ಪೇಪರ್ಸ್ ಅತಿದೊಡ್ಡ ಸಮೂಹವಾಗಿದೆ.

ಕಳೆದೊಂದು ವರ್ಷದಲ್ಲಿ ಸುಮಾರು ಸುಮಾರು 80 ದೇಶಗಳ 400ಮಂದಿ ಪತ್ರಕರ್ತರು 100 ಕ್ಕೂ ಹೆಚ್ಚು ಮಾಧ್ಯಮದವರು ದಾಖಲೆಗಳನ್ನು ಸಂಶೋಧನೆ ಮಾಡುವುದರಲ್ಲಿ ನಿರತರಾಗಿದ್ದರು. ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಬಿಬಿಸಿ, ಗಾರ್ಡಿಯನ್, ಸ್ಯೂಡಾಶ್‌ ಝೀಟಂಗ್‌, ಫಾಲ್ಟರ್ ಮೊದಲಾದವು ಈ ಕುರಿತು ಕೆಲಸ ಮಾಡಿವೆ.

ಪನಾಮಾ ಸಹಿತವಾಗಿ ವಿಶ್ವದ ವಿವಿಧ ತೆರಿಗೆದಾರರ ಸ್ವರ್ಗಗಳೆಂದೇ ಕುಖ್ಯಾತಿ ಹೊಂದಿರುವ ತಾಣಗಳಲ್ಲಿ ಭಾರತೀಯರ ಸಹಿತ ವಿಶ್ವದಾದ್ಯಂತದ ಸಿರಿವಂತರು ಕೂಡಿ ಹಾಕಿರುವ ಕಪ್ಪು ಹಣದ ಮಾಹಿತಿಗಳನ್ನು ಪನಾಮಾ ದಾಖಲೆಪತ್ರಗಳು ಹೊಂದಿವೆ.

ತೆರಿಗೆದಾರ ಸ್ವರ್ಗ ಎನಿಸಿಕೊಂಡಿರುವ ದೇಶಗಳಲ್ಲಿ ಸಾಗರೋತ್ತರ ಕಂಪೆನಿಗಳನ್ನು ಹುಟ್ಟು ಹಾಕಿ ಅವುಗಳ ಮೂಲಕ ತಮ್ಮ ದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ತೆರಿಗೆ ರಿಯಾಯಿತಿ ಇತ್ಯಾದಿ ಲಾಭ ಪಡೆದುಕೊಂಡು, ತಮ್ಮ ಸಂಪತ್ತನ್ನು ಆ ದೇಶಗಳಲ್ಲಿ ಶೇಖರಿಸಿಡುವುದು ಸಾಮಾನ್ಯವಾಗಿ ಅನುಸರಿಸಲಾಗುತ್ತಿರುವ ಉಪಾಯವಾಗಿದೆ.

ಪನಾಮಾ ಮೂಲದ ಈ ಕಾನೂನು ಸಂಸ್ಥೆಯ ನಿಗೂಢ ಕಪ್ಪು ಹಣ ದಾಖಲೆಪತ್ರಗಳನ್ನು ಜರ್ಮನಿಯ ಸ್ಯೂಡಾಶ್‌ ಝೀಟಂಗ್‌ ಎಂಬ ದೈನಿಕಕ್ಕೆ ಸೋರಿಕೆ ಮಾಡಿದವರು ಯಾರು ಎಂಬುದು ಈಗಿನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಮಾತ್ರವಲ್ಲ ಈ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಕೂಟವು (ಐಸಿಐಜೆ) ಜಾಗತಿಕ ಮಾಧ್ಯಮದೊಡನೆ ಹಂಚಿಕೊಳ್ಳಲು ಯಾರು ಕಾರಣ ಎಂಬುದು ಕೂಡ ಗೊತ್ತಾಗಿಲ್ಲ.

No comments:

Post a Comment