☀️ಸ್ಟಾಂಡ್ ಅಪ್ ಇಂಡಿಯಾ ಯೋಜನೆಯ ಗುರಿಗಳು ಮತ್ತು ಪ್ರಮುಖ ಅಂಶಗಳು :
( Features of Stand Up India initiative)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)
ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಟ್ಯಾಂಡ್‍ಅಪ್ ಇಂಡಿಯಾ ಯೋಜನೆಗೆ ಪ್ರದಾನಿ ನರೇಂದ್ರ ಮೋದಿ ಏಪ್ರಿಲ್ 5ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಾಳನೆ ನೀಡಲಿದ್ದಾರೆ. ಯೋಜನೆಗೆ ಪ್ರತ್ಯೇಕ ವೆಬ್ ಪೋರ್ಟಲ್‍ಗೂ ಚಾಲನೆ ನೀಡಲಿದ್ದಾರೆ. 2015ರ ಆಗಸ್ಟ್ 15ರಂದು ಪ್ರದಾನಿ ಮೋದಿ ‘ಸ್ಟಾರ್ಟ್‍ಅಪ್ ಇಂಡಿಯಾ: ಸ್ಟಾಂಡ್‍ಅಪ್ ಇಂಡಿಯಾ’ ಯೋಜನೆ ಘೋಷಿಸಿದ್ದರು.
ಇತ್ತೀಚೆಗಷ್ಟೇ ಸ್ಟಾರ್ಟ್ ಅಪ್ ಯೋಜನೆಗೆ ಚಾಲನೆ ನೀಡಲಾಗಿತ್ತು.
—ಏಪ್ರಿಲ್ 05, 2016ರಂದು ಚಾಲನೆ.
★ ಯೋಜನೆಯ ಗುರಿ:
━━━━━━━━━━━━━
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬುಡಕಟ್ಟು ಜನರು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸುವ ಪ್ರಮುಖ ಉದ್ದೇಶದಿಂದ ಸ್ಟ್ಯಾಂಡ್‍ಅಪ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆಯಡಿ ಫಲಾನುಭಿವಿಗಳಿಗೆ (ಉದ್ಯಮಿ) ಕನಿಷ್ಟ 10 ಲಕ್ಷ ರೂಪಾಯಿಯಿಂದ ಗರಿಷ್ಟ 1 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಷೆಡ್ಯೂಲ್ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‍ಗಳ ಮೂಲಕವೂ ಸೌಲಭ್ಯ ಒದಗಿಸಲಾಗುವುದು.
★ ಯೋಜನೆಯ ಪ್ರಮುಖ ಅಂಶಗಳು :
━━━━━━━━━━━━━━━━━━━━━
*.ಯಾವುದೇ ನೂತನ ಉದ್ಯಮ ಸ್ಥಾಪನೆಗೆ ಕಾರ್ಮಿಕ ಬಂಡವಾಳ ಸೇರಿದಂತೆ ಕನಿಷ್ಟ 10 ಲಕ್ಷ ರೂ.ಗರಿಷ್ಟ 1 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತದೆ.
*.ಡೆಬಿಟ್ ಕಾರ್ಡ್ (RuPay) ಶ್ರಮಿಕ ಬಂಡವಾಳ ತೆಗೆದುಕೊಳ್ಳಬಹುದು.
*.ಸಾಲದಾರರ ಸಾಲ ವಿವರಗಳನ್ನು ನಿರ್ವಹಿಸುವುದು.
*.ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಮೂಲಕ ಯೋಜನೆಯ ಮೂಲ ನಿಧಿಯದ 10 ಸಾವಿರ ಕೋಟಿ ರೂಪಾಯಿಯನ್ನು ಉದ್ಯಮಗಳಿಗೆ ಮರುಪೂರೈಕೆ ಮಾಡುವುದು.
*.ಎನ್‍ಸಿಜಿಟಿಸಿ (National Credit Guarantee Trustee Company Ltd) ಮೂಲಕ ಸಾಲ ಖಾತರಿಗಾಗಿ 5 ಸಾವಿರ ಕೋಟಿ ರೂ. ಮೂಲ ಧನ ಸಂಗ್ರಹಿಸುವುದು.
*.ಸಾಲಗಾರರಿಗೆ ಸಾಲಪೂರ್ವ ತರಬೇತಿ, ಮಾರ್ಕೆಟಿಂಗ್ ಮೊದಲಾದ ಸಮಗ್ರ ಸಹಾಯ ನೀಡುವುದು.
*.ಆನ್ ಲೈನ್ ರಿಜಿಸ್ಟ್ರೇಶನ್ ಹಾಗೂ ವಿವಿಧ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಆನ್‍ಲೈನ್ ಪೋರ್ಟಲ್‍ಗೆ ಚಾಲನೆ.
*.ಯೋಜನೆಯ ಒಟ್ಟಾರೆ ಉದ್ದೇಶ ಕೃಷಿಯೇತರ ವಲಯದ ಎಸ್ಸಿ, ಎಸ್ಟಿ ವರ್ಗದ ಜನರು ಹಾಗೂ ಮಹಿಳೆಯರಿಗೆ ಬ್ಯಾಂಕ್ ಸಾಲ ಒದಗಿಸುವುದು. ಈಗಾಗಲೇ ಪ್ರಚಲಿತದಲ್ಲಿರುವ ವಿವಿಧ ಇಲಾಖೆಗಳ ನಡುವೆ ಒಪ್ಪಂದ ಮಾಡಿಕೊಳ್ಳುವುದು.
★ ಸಂಪರ್ಕ ಕೇಂದ್ರಗಳು :
━━━━━━━━━━━━━━
*.ಯೋಜನೆಯು ಎಸ್‍ಐಡಿಬಿಐ ಮತ್ತು ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (DICCI) ಹಾಗೂ ವಿವಿಧ ಕ್ಷೇತ್ರಗಳ ಸಂಘಸಂಸ್ಥೆಗಳು ಸ್ಟ್ಯಾಂಡ್ ಅಪ್ ಯೋಜನೆ ಅನುಷ್ಟಾನದ ಜವಾಬ್ದಾರಿ ಹೊಂದಲಿವೆ.
*.SIDBI ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸ್ಟ್ಯಾಂಡ್‍ಅಪ್ ಸಂಪರ್ಕ ಕೇಂದ್ರ (SUCC)ಗಳನ್ನು ತೆರೆಯಲಿದ್ದು, ಯೋಜನೆಯ ಸಮರ್ಥ ಅನುಷ್ಟಾನಕ್ಕೆ ಶ್ರಮವಹಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಭಾರತೀಯ ಮೈಕ್ರೋ ಕ್ರೆಡಿಟ್ (BMC) ಮೂಲಕ 5100 ಇ-ರಿಕ್ಷ ವಿತರಣೆ ಮಾಡಲಾಗುವುದು. ಜತೆಗೆ ಜನಧನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ, ಅಟಲ್ ಪೆನ್ಶನ್ ಮೊದಲಾದ ಯೋಜನೆಗಳ ಫಲಾನುಭವಿಗಳಿಗೂ ಯೋಜನೆಗಳ ಸೌಲಭ್ಯ ವಿತರಿಸಲಾಗುವುದು.
★ ಇ-ರಿಕ್ಷಾ ಯೋಜನೆ :
━━━━━━━━━━━━━
ಸ್ಟ್ಯಾಂಡ್ ಅಪ್ ಯೋಜನೆ ಅಂಗವಾಗಿ ಸೈಕಲ್ ರಿಕ್ಷ ಓಡಿಸುತ್ತಿದ್ದವರಿಗೆ ಅವರ ಆರ್ಥಿಕ ಮಟ್ಟ ಹೆಚ್ಚಿಸಲು ಇ-ರಿಕ್ಷಾ ವಿತರಿಸಲಾಗುತ್ತದೆ. ಮೊದಲ ಹಂತವಾಗಿ ನ್ಯಾಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಪೊರೇಶನ್ (NSDC) ಇ-ರಿಕ್ಷಾ ಚಾಲನೆ ಬಗ್ಗೆ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸುತ್ತಿದೆ. ಈಗಾಗಲೇ 150 ಮಹಿಳಾ ರಿಕ್ಷಾ ಚಾಲಕರಿಗೆ ತರಬೇತಿ ನೀಡಲಾಗಿದೆ. ಗ್ರಾಹಕರು ಓಲಾ ಕ್ಯಾಬ್ ಮೊಬೈಲ್ ಆಪ್ ಮೂಲಕವೂ ಇ-ರಿಕ್ಷ ಸೇವೆ ಬುಕ್ ಮಾಡಬಹುದಾಗಿದೆ. ಆನ್‍ಲೈನ್ ಮೂಲಕವೂ ಪಾವತಿ ಮಾಡಬಹುದಾಗಿದೆ.

No comments:
Post a Comment