"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 23 February 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿ :— ಭಾಗ-II (UPSC, KPSC Examination Preparation :— PART-II)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿ :— ಭಾಗ-II
(UPSC, KPSC Examination Preparation :— PART-II)
━━━━━━━━━━━━━━━━━━━━━━━━━━━━━━━━━━━━━━━
ಈಗಾಗಲೇ ಭಾಗ-Iರಲ್ಲಿ
ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಅವಶ್ಯವೆನಿಸಿದ ಪ್ರಮುಖ ಅಂಶಗಳನ್ನು ನಿಮ್ಮ ಮುಂದಿರಿಸಿದ್ದೇನೆ, ಅದರಂತೆ ಮತ್ತಷ್ಟು ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಸಂದರ್ಶನಕ್ಕೆ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-II.■
━━━━━━━━

16) ಗ್ಲೋಬಲ್ ವಾರ್ಮಿಂಗ್, ಕ್ಲೈಮೇಟ್ ಚೇಂಜ್, ಸಿಓಪಿ21 ಕಾನ್ಫರನ್ಸ್ (COP 21). ಹವಾಮಾನ ವೈಪರೀತ್ಯ ಕುರಿತಂತೆ ಪ್ಯಾರಿಸಿನ ಒಪ್ಪಂದ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

•► ವಿಶೇಷವಾಗಿ ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳು,

•► ‘ಕಾರ್ಬನ್‌ ಬಜೆಟ್‌’,

•► ‘ರಾಷ್ಟ್ರೀಯವಾಗಿ ನಿಶ್ಚಯಿಸಿರುವ ಉದ್ದೇಶಿತ ಇಂಗಾಲ ಕಡಿತ ದೇಣಿಗೆ’ (Intended Nationally Determined Contributions- INDCs )

•► ‘ಭೂ ಮೇಲ್ಮೈ  ತಾಪಮಾನ’  (Land surface temperature - LST).

•► ಸೃಜನಾತ್ಮಕ ಬರ ಪರಿಹಾರ ಕ್ರಮಗಳು.

•► ಹವಾಮಾನ ಬದಲಾವಣೆ & ಸುಸ್ಥಿರ ಅಭಿವೃದ್ಧಿ. ಪರಿಸರ ಸುಸ್ಥಿರತೆ.

•► ಹವಾಮಾನ ಬದಲಾವಣೆ & ಸುಸ್ಥಿರ ಅಭಿವೃದ್ಧಿ ಗುರಿಗಳು (SDG's)
.
--------------------------------------------------------------------------------------------------------------

17) ''ಡಿಸಾಸ್ಟರ್ ಮ್ಯಾನೇಜ್ಮೆಂಟ್''ನ ಕಾರ್ಯವೈಖರಿ.

•► ಪ್ರಕೋಪ ನಿರ್ವಹಣೆಗಾಗಿ ರಾಷ್ಟ್ರೀಯ ನೀತಿ.

•► ಪ್ರಕೋಪ ನಿರ್ವಹಣೆಗಾಗಿ ಅಳವಡಿಸಿಕೊಳ್ಳುಬೇಕಾದ ದಿಟ್ಟ ಕ್ರಮಗಳು.

•► ನವೀಕರಿಸಬಹುದಾದ ಇಂಧನದ (Renewable Energy) ಸುಸ್ಥಿರ ಬಳಕೆ.


18) ಚೆನೈನಲ್ಲಿ ಸಂಭವಿಸಿದ ಜಲವಿಪ್ಲವಕ್ಕೆ ಕಾರಣಗಳು. ಭವಿಷ್ಯತ್ತಿನಲ್ಲಿ ಇಂತಹ ಅವಘಡ ಸಂಭವಿಸಿದಂತೆ ಕೈಗೊಳ್ಳಬಹುದಾದ ಧೀರ್ಘಾವಧಿಯ ಕ್ರಮಗಳು.


19) ಎಲ್‌ನಿನೋ ಮತ್ತು ಭಾರತ.

•► ಭಾರತದಲ್ಲಿ ಕೃಷಿರಂಗದ ಮೇಲೆ ಎಲ್‌ನಿನೋದ ಪ್ರಭಾವ.

•► ಎಲ್‌ನಿನೋ ಮತ್ತು ಭಾರತದ ಸಾಮಾಜಿಕ ವ್ಯವಸ್ಥೆಯ ವೈಪರೀತ್ಯ.


20).ಹಿಮಾಲಯ ಪ್ರದೇಶದಲ್ಲಿ ಪದೇ ಪದೇ ಭೂಕಂಪ ಉಂಟಾಗಲು ಕಾರಣಗಳು ಏನು? (ನೇಪಾಳದಲ್ಲಿ ಹಾಗೂ ಭಾರತದಲ್ಲೂ ಇತ್ತೀಚೆಗೆ ಸಂಭವಿಸಿದ ಭೂಕಂಪಗಳನ್ನು ಗಮನದಲ್ಲಿಟ್ಟುಕೊಂಡು)

•► ಕರ್ನಾಟಕದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಇವೆಯೇ?

•► ಭೂಕಂಪದ ಹಾನಿ ಕಡಿಮೆ ಮಾಡಲು ತಂತ್ರಜ್ಞಾನಗಳಿವೆಯೇ? ಯಾವವು?

•► ಭಾರತದ ಯಾವ ಪ್ರದೇಶಗಳು ಭೂಕಂಪದ ಅಪಾಯ ಎದುರಿಸುತ್ತಿವೆ? ಏಕೆ?

•► ಜಲಾಶಯಗಳೂ ಭೂಕಂಪಕ್ಕೆ ಕಾರಣವಾಗುತ್ತವೆ ಎನ್ನುತ್ತಾರೆ, ನಿಜವೇ? ಪ್ರಮುಖ ಕಾರಣಗಳಾವವು?


21) ಭಾರತದ ಕೃಷಿರಂಗದ ಮೇಲೆ ಹವಾಮಾನ ವೈಪರೀತ್ಯದ ಪ್ರಭಾವ. ಪರಿಹಾರ ಕ್ರಮಗಳು.

•► ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಕೃಷಿರಂಗದ ಪ್ರಸ್ತುತ ಕೊಡುಗೆ.

•► ಭಾರತದ ಕೃಷಿರಂಗದ ಯಾಂತ್ರಿಕರಣ & ಜಾಗತೀಕರಣ.

•► ಸುಸ್ಥಿರ ಕೃಷಿ ಅಭಿವೃದ್ಧಿ.
.
--------------------------------------------------------------------------------------------------------------

22) ಕೊಲಿಜಿಯಂ Vs ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ.

•► ಕೊಲಿಜಿಯಂ ಯಾಕೆ ಪ್ರಸ್ತುತ?

•► ಕೊಲಿಜಿಯಂ ರದ್ದತಿಗೆ ಕಾರಣೀಭೂತವಾದ ಬೆಳವಣಿಗೆಗಳು.

•► ಕೊಲಿಜಿಯಂ & ರಾಜಕೀಯ ಪ್ರಭಾವ.

•► ಭಾರತದ ನ್ಯಾಯಾಂಗ ಎಷ್ಟು ಸ್ವತಂತ್ರ?

•► NJAC ರದ್ದತಿ ಸೂಕ್ತವೇ?


23) ನ್ಯಾಷನಲ್ ಹೆರಾಲ್ಡ್ ಖರೀದಿ ಪ್ರಕರಣ.


24) ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ). ಸವಾಲುಗಳು.

•► ದುರ್ಬಲವಾಗುತ್ತಿದೆಯೇ ಆರ್‌ಟಿಐ?


25) ‘ವ್ಯಾಪಂ’ ಹಗರಣ.

•► ಅತ್ಯಂತ ಗಂಭೀರವಾದ ವ್ಯಾಪಂ ಹಗರಣ ಕುರಿತು ಸಿಬಿಐ ಅಥವಾ ಸ್ವತಂತ್ರ ತನಿಖೆ ಏಕಿಲ್ಲ?

•► ಶಿಕ್ಷಣ & ರಾಜಕಾರಣ.  
.
--------------------------------------------------------------------------------------------------------------

26) ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಕರ್ನಾಟಕದ ಪ್ರಯತ್ನ.

•► “ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡಕ್ಕಿರುವ ಸವಾಲುಗಳು”

•► ಭಾರತೀಯ ಸಂವಿಧಾನಕ್ಕೆ ಕನ್ನಡಿಗರ ಕೊಡುಗೆ ಏನು?

•► ಕರ್ನಾಟಕದಲ್ಲಿ ಮಾಹಿತಿ -ತಂತ್ರಜ್ಞಾನದ ಬೆಳವಣಿಗೆ. ಜಾಗತಿಕ ಮಟ್ಟದಲ್ಲಿ ವಿಸ್ತರಿಸುವಲ್ಲಿ ಎದುರಿಸುತ್ತಿರುವ ಸವಾಲುಗಳು. ಪರಿಹಾರ ಕ್ರಮಗಳು.

•► ‘ಕರ್ನಾಟಕ ಕೃಷಿ, ವಾಣಿಜ್ಯ ಹಾಗೂ ಆಹಾರ ಸಂಸ್ಕರಣೆ ನೀತಿ-2015’.

•► ತುಮಕೂರು ಮೆಗಾಫುಡ್ ಪಾರ್ಕ್ ನ ವಿಶೇಷತೆ ಏನು? ಸವಾಲುಗಳು.

•► ಬರ ಸಂಭಾವ್ಯ ಪ್ರದೇಶದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಕರ್ನಾಟಕಕ್ಕಿದೆ. ನೀವು ಕೈಗೊಳ್ಳಬಹುದಾದ ಬರ ನಿರ್ವಹಣೆಯ ಸೂಕ್ತ ಕ್ರಮಗಳು ಯಾವವು?
.
--------------------------------------------------------------------------------------------------------------

27) ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಸಿ) ಮತ್ತು ಭಾರತದ ಆಹಾರ ಭದ್ರತೆ.(ವಿಶೇಷವಾಗಿ ಕೃಷಿ - ಆಹಾರ ಸಬ್ಸಿಡಿಗಳು).. ಇತ್ತೀಚಿನ ಬೆಳವಣಿಗೆಗಳು.

•► ವಿಶ್ವ ವ್ಯಾಪಾರ ಸಂಘಟನೆಯ ವ್ಯಾಪಾರ ಸೌಲಭ್ಯ ಒಪ್ಪಂದದ ಸವಾಲು ಮತ್ತು ಸಾರ್ಕ್‌ ರಾಷ್ಟ್ರಗಳ ಮೇಲೆ ಇದರ ಪರಿಣಾಮ - ಪರಿಹಾರ.


28) ವಿಶ್ವ ವಾಣಿಜ್ಯ ಸಂಘಟನೆಯ ಜಾಗತೀಕರಣ. ಭಾರತ
.
--------------------------------------------------------------------------------------------------------------

29) ಪರಿಷೃತ ಬಾಲಾಪರಾಧಿ ಕಾನೂನು.. ನಿಮ್ಮ ಅನಿಸಿಕೆಗಳು.

•► ಈ ಕಾನೂನು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

•► ಬಾಲಾಪರಾಧ ವಯಸ್ಸಿನ ಮಿತಿ ಇಳಿಕೆ ಸಮಂಜಸವೇ?

•► ಅಪರಾಧಿ ಮನೋಭಾವ ಹೆಚ್ಚಾಗಲು ಸಂವಹನ ಮಾಧ್ಯಮಗಳ ಕೊಡುಗೆ.
.
--------------------------------------------------------------------------------------------------------------

30) Terrorism as a Global Threat.

•► ಮಧ್ಯೆ ಏಷ್ಯಾದಲ್ಲಿ ಭಯೋತ್ಪಾದನೆ. ಅದರ ವಿಸ್ತರಣೆಗೆ ಕಾರಣಗಳು.

•► ISISI ಕಡೆಗೆ ಭಾರತೀಯ ಯುವಕರ ಆಕರ್ಷಣೆಗೆ ಕಾರಣಗಳು & ತಡೆಯುವ ಕ್ರಮಗಳು.        

•► ಇರಾಕ್‌ ಮತ್ತು ಸಿರಿಯಾ ದೇಶಗಳು ಕುಸಿಯುವುದನ್ನು ತಡೆಯುವುದರ ಕುರಿತು ನಿಮ್ಮ ಅಭಿಪ್ರಾಯಗಳೇನು?

•► ಅಂತಾರಾಷ್ಟ್ರೀಯ ಶಾಂತಿ-ಭದ್ರತೆಗಾಗಿ 'ಹಿಂಸಾತ್ಮಕ ತೀವ್ರವಾದವನ್ನು ತಡೆಯುವಲ್ಲಿ ನಿಮ್ಮ ಕ್ರಿಯಾ ಯೋಜನೆ'.

•► ಬ್ರಿಟನ್‌: ನೂತನ ವಲಸೆ ನೀತಿ- ಭಾರತದ ಮೇಲಾಗಿ ಪರಿಣಾಮ.

.....ಮುಂದುವರಿಯುವುದು.

Monday, 22 February 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯರಿ :— ಭಾಗ-I (UPSC, KPSC Examination Preparation :— PART-I)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-I
(UPSC, KPSC Examination Preparation :— PART-I)
━━━━━━━━━━━━━━━━━━━━━━━━━━━━━━━━━━━━━━━


ಇತ್ತೀಚೆಗೆ ನಾಗರಿಕ ಸೇವೆಗಳ (ಐಎಎಸ್‌, ಐಎಫ್‌ಎಸ್‌, ಐಪಿಎಸ್‌) ಮುಖ್ಯ ಪರೀಕ್ಷೆ ಫಲಿತಾಂಶ  ಹೊರಬಿದ್ದಿದ್ದು, ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರ ಪಟ್ಟಿಯನ್ನು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ www.upsc.gov.in ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರು ಮಾರ್ಚ್‌ 8 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದ್ದು

ಸದ್ಯದಲ್ಲೇ ಕೆಪಿಎಸ್‌ಸಿಯು ನಡೆಸಿದ ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಿದ್ಧತೆಯಲ್ಲಿರುವುದು. ಕೆಎಎಸ್ ಅಕಾಂಕ್ಷಿಗಳೂ ಕೂಡಾ ಸಂದರ್ಶನದ ತಯಾರಿಯಲ್ಲಿರಬೇಕು.

ಅಭ್ಯರ್ಥಿಗಳು ತಮ್ಮ ಅಧ್ಯಯನ ವಿಷಯಗಳನ್ನು ಅವಲೋಕಿಸಿ ತಯಾರಾಗಲು ಸಮಯ ತುಂಬಾ ಕಡಿಮೆ ಇರುವುದನ್ನು ಗಮನಿಸಬೇಕು.
ದಿನಪತ್ರಿಕೆಗಳನ್ನು ಓದಿ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಜ್ಞಾನವನ್ನು ಅವಲೋಕಿಸಿಕೊಳ್ಳುತ್ತಾ, ನೀವು ಸಂದರ್ಶನಕ್ಕೆ ಸಿದ್ಧರಾಗಿದ್ದೀರಾ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ.

ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-I.■
━━━━━━━━

1) ಸುಸ್ಥಿರ ಅಭಿವೃದ್ಧಿ ಮತ್ತು ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಕುರಿತು ಇತ್ತೀಚಿನ ಬೆಳವಣಿಗೆ.

•► ಸುಸ್ಥಿರ ಅಭಿವೃದ್ಧಿ ಗುರಿಗಳು (SDG's). ಜಾಗತಿಕ ಸ್ಪಂದನೆ.

•► ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಆರೋಗ್ಯ.

•► ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತ.


2) ಸಹಸ್ರಮಾನ ಅಭಿವೃದ್ಧಿ ಗುರಿಗಳು ( MDG's) ಮತ್ತು ಭಾರತ.

•► MDG's ಗುರಿಗಳನ್ನು ಭಾರತ ಸಂಪೂರ್ಣವಾಗಿ ಸಾಧಿಸಿದೆಯೇ?

•► MDG's ಗುರಿಗಳ ಸಾಧನೆಗೆ ಎದುರಾದ ಸವಾಲುಗಳು.

•► MDG's ಗುರಿಗಳನ್ನೇ ಸಾಧಿಸಲು ಸಾಧ್ಯವಾಗದ ಭಾರತವು SDG's ಗುರಿಗಳನ್ನು ಹೇಗೆ ತಾನೇ ಅನುಷ್ಠಾನಗೊಳಿಸುವುದು?


3) Swachh Bharath abhiyan ಬಗ್ಗೆ ಇಲ್ಲಿಯವರೆಗಿನ ಏಳು-ಬೀಳು.

•► ಸ್ವಚ್ಛ ಭಾರತ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕೆ ನಿಮ್ಮ ಸಲಹೆಗಳು.

•► ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನ. ಸವಾಲು -ಪರಿಹಾರ ಕ್ರಮಗಳು.

•► ಸ್ವಚ್ಛ ಭಾರತ ಮತ್ತು ಸೆಸ್


4) Make in India slogan ಹಾಗೂ ಜಾಗತಿಕ ಪಾಲ್ಗೊಳ್ಳುವಿಕೆ.

•► Make in Indiaದ ಭಾರತದ ರಾಜ್ಯವಾರು ಪ್ರಗತಿ.(especially Karnataka)


5) ಕೇಂದ್ರ ಸರ್ಕಾರದ ‘ಭೂಸ್ವಾಧೀನ ತಿದ್ದುಪಡಿ ಮಸೂದೆ’

•►  ‘ಭೂಸ್ವಾಧೀನ ತಿದ್ದುಪಡಿ ಮಸೂದೆ’ಯು ರೈತರ ಮೇಲೆ ಪರಿಣಾಮ ಬೀರಬಹುದು?


6) 'ಡಿಜಿಟಲ್‌ ಭಾರತ' ಕನಸಿಗೆ ಪೂರಕವಾಗಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಜನಧನ ಯೋಜನೆಯ ಕೊಡುಗೆ.


7).ಸ್ಮಾರ್ಟ್ ಸಿಟಿ ಯೋಜನೆ-ಭವಿಷ್ಯ.

•► ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದ ವಿಮರ್ಶೆ.


8).ಹೊಸ ಪಿಂಚಣಿ ಯೋಜನೆ (New Pension Scheam; NPS)


9).ಸ್ಟಾರ್ಟ್ ಅಪ್, ಸ್ಮಾರ್ಟ್ ಅಪ್ ಯೋಜನೆಗಳು.

•► ಸ್ಟಾರ್ಟ್ ಅಪ್ ಯೋಜನೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳು.

10).ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ (Inclusive Growth)

11).ಇಂಪ್ರಿಂಟ್ ಇಂಡಿಯಾ-ಸವಾಲುಗಳು.

12).ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ.

13).ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯ ರೂಪಿಸುವಲ್ಲಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಅವಲೋಕನ.

.
--------------------------------------------------------------------------------------------------------------


14).ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ದೇಶದ GDPಗೆ ಕರ್ನಾಟಕ ರಾಜ್ಯದ ಕೊಡುಗೆ.

•► ಕರ್ನಾಟಕದ ರಾಜ್ಯದ ಪ್ರವಾಸೋದ್ಯಮ. ಅಭಿವೃದ್ಧಿಗೆ ನಿಮ್ಮ ಸಲಹೆಗಳು.

•► ಕರ್ನಾಟಕದ ಭೌಗೋಳಿಕ ವೈಪರೀತ್ಯ (ಪ್ರಾದೇಶಿಕ ಅಸಮಾನತೆ) . (North-South)

•► ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ. -ತಡೆಯಲು ತತ್ ಕ್ಷಣದ ಪ್ರಯತ್ನಗಳು.

•► ನದಿ ನೀರಿನ ಹಂಚಿಕೆ ವಿವಾದಗಳು-ಪರಿಹಾರ.

•► ಒಂದು ಕಾಲದಲ್ಲಿ ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡುತ್ತಾ ಲೋಕಾಯುಕ್ತ ಸಂಸ್ಥೆಗೆ ದೇಶದಲ್ಲೆಲ್ಲಾ ಮನ್ನಣೆ ತಂದುಕೊಟ್ಟ ಕರ್ನಾಟಕದ ಲೋಕಾಯುಕ್ತ, ಅದರ ಕಚೇರಿಯಲ್ಲಿಯೇ ಇಂದು ಭ್ರಷ್ಟಾಚಾರ ನಡೆದಿದೆ ಎಂಬ ಆಪಾದನೆ ಕಂಡುಬಂತು. ಯಾಕೆ?

•► ಕಳೆದ 3 ವರ್ಷಗಳಿಂದ ಅತೀ ಹೆಚ್ಚು ಡ್ರಗ್ಸ್ ವಹಿವಾಟು (ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟ) ಕರ್ನಾಟಕದಲ್ಲಿ ಬಹು ವ್ಯಾಪಕವಾಗಿ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣಗಳೇನು,? ಹೇಗೆ ನಿಯಂತ್ರಿಸಬಹುದು?

•► ಡ್ರಗ್ಸ್ ವಹಿವಾಟಿಗೆ ಹೆಚ್ಚಾಗಿ ಯುವತಿಯರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾಕೆ?

•► ಕರ್ನಾಟಕದಲ್ಲಿ ವಿದೇಶಿಗರ ವಲಸಿಗರ ಸಮಸ್ಯೆ.

•► 'ಇನ್‌ವೆಸ್ಟ್ ಕರ್ನಾಟಕ-2016'ದ ಪ್ರಸ್ತುತತೆ ಮತ್ತು ಅದರ ಮುಂದಿನ ಸವಾಲುಗಳು.

•► ಉದ್ಯೋಗಾಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ಕೊಡುವ ಯೋಜನೆ

•► ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಯಕ್ಷಗಾನ ನೃತ್ಯ ಹಾಗು ಸಾಹಿತ್ಯ.

•► ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015’

.
--------------------------------------------------------------------------------------------------------------


15) ಭಾರತದ ನೆರೆಯ ದೇಶಗಳೊಂದಿಗಿನ ಸಂಬಂಧ (specially with ಚೀನಾ, ಪಾಕಿಸ್ತಾನ, ದಕ್ಷಿಣ ಪೂರ್ವ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳು)

•► ಪಾಕಿಸ್ತಾನ ಮತ್ತು ಶಾಂತಿ ಮಾತುಕತೆ ಕುರಿತಾದ ಕೇಂದ್ರದ ನೀತಿಯನ್ನು ಬದಲಿಸುವ ಅಗತ್ಯವಿದೆಯೇ? ಇತ್ತೀಚಿನ ಪಠಾಣಕೋಟ್ ಘಟನೆಯ ಗಂಭೀರತೆಯೊಂದಿಗೆ ನಿಮ್ಮ ಅಭಿಪ್ರಾಯ ತಿಳಿಸಿ.              

•► ಪಾಕಿಸ್ತಾನದೊಂದಿಗೆ ಭಯೋತ್ಪಾದನೆ ಹಾಗೂ ಶಾಂತಿ ಮಾತುಕತೆಯನ್ನು ಪ್ರತ್ಯೇಕ ವಿಷಯವಾಗಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ?    

•► ‘ಹೊಸ ಸಿಲ್ಕ್ ರೂಟ್ ಪ್ರಾಜೆಕ್ಟ್’, ಮಾರಿಟೈಮ್​ಸಿಲ್ಕ್ ರೋಡ್’,

•► ದಕ್ಷಿಣ ಚೀನಾ ಸಾಗರದ ಮೇಲೆ ಭಾರತ-ಚೀನಾಗಳ ಒಡೆತನ ಸ್ಥಾಪಿಸುವಲ್ಲಿ ಜಟಾಪಟಿ.

•► ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತದ ಸ್ಥಾಮಾನ. ವಿದೇಶಿ ವ್ಯಾಪಾರದ ಪಾತ್ರ.

•► ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾದ ಆರ್ಥಿಕತೆ ಕುಸಿದಿರುವುದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿದೆಯೇ?

•► ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ.

•► ಭಾರತ-ಬಾಂಗ್ಲಾ  ದೇಶಗಳ ನಡುವೆ ಪರಾವೃತವಾಗಿರುವ ಭೂಮಿಯನ್ನು ವಿನಿಮಯ ಮಾಡಿಕೊಳ್ಳುವ ಮಸೂದೆ ಅಂಗೀಕಾರ.

•► ಭಾರತ-ಬಾಂಗ್ಲಾ ಭೂ ಗಡಿ ಒಪ್ಪಂದವು ಉಭಯ ದೇಶಗಳ ಬಾಂಧವ್ಯವೃದ್ಧಿಗೆ ಪೂರಕವಾಗುವುದೇ? ಅಕ್ರಮ ನುಸುಳುವಿಕೆ, ಪುನರ್ವಸತಿ, ಜನಾಂಗೀಯ ಘರ್ಷಣೆ ಮುಂತಾದವು ಪ್ರಬಲ ಸವಾಲುಗಳಾಗಲಿವೆಯೇ?
.
..ಮುಂದುವರಿಯುವುದು. 

Saturday, 6 February 2016

☀"ಸ್ಪರ್ಧಾಲೋಕ ಇಂದಿಗೆ 1ಲಕ್ಷ ವೀಕ್ಷಕರಿಗೆ ಜ್ಞಾನ ಧಾರೆ.

☀ಸ್ಪರ್ಧಾಲೋಕ☀

"ಸ್ಪರ್ಧಾಲೋಕ ಇಂದಿಗೆ 1ಲಕ್ಷ ವೀಕ್ಷಕರಿಗೆ ಜ್ಞಾನ ಧಾರೆಯೆರೆದಿದೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ.👍

Friday, 5 February 2016

☀️ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಅತ್ಯಂತ ಸುಧೀರ್ಘ ಅವಧಿಯವರೆಗೆ ಇದ್ದ ಐದು ನಿದರ್ಶನಗಳು : (The Major Instances of imposed President Rule in India for a Long term)

☀️ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಅತ್ಯಂತ ಸುಧೀರ್ಘ ಅವಧಿಯವರೆಗೆ ಇದ್ದ ಐದು ನಿದರ್ಶನಗಳು :
(The Major Instances of imposed President Rule in India for a Long term)
━━━━━━━━━━━━━━━━━━━━━━━━━━━━━━━━━━━━━━━━━━━━━
★ಭಾರತದ ಸಂವಿಧಾನ ಮತ್ತು ರಾಜಕೀಯ
(Constitution of India and Polity)


1. ಜಮ್ಮು ಕಾಶ್ಮೀರ
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 6 ವರ್ಷ ಹಾಗೂ 264 ದಿನಗಳು. 1990ರ ಜನವರಿ 19ರಿಂದ 1996ರ ಅಕ್ಟೋಬರ್ 9ರವರೆಗೆ.
★ಕಾರಣ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ವಾತಾರವಣ ಸದಾ ಆತಂಕದ ಸ್ಥಿತಿಯಲ್ಲಿರುತ್ತದೆ. ಸ್ವಾತಂತ್ರ್ಯದ ಬಳಿಕ ಈ ರಾಜ್ಯ ಸದಾ ಚೀನಾ ಹಾಗೂ ಪಾಕಿಸ್ತಾನದಿಂದ ಅತಿಕ್ರಮಣ ಭೀತಿಯನ್ನು ಎದುರಿಸುತ್ತಲೇ ಬಂದಿದೆ. 1990ರಲ್ಲಿ, ಈ ಉತ್ತರ ರಾಜ್ಯದಲ್ಲಿ ರಾಜಕೀಯ ವಾತಾವರಣ ವಿಕೋಪಕ್ಕೆ ತಿರುಗಿತು. ಪಾಕಿಸ್ತಾನದಿಂದ ಸೇನಾ ಆಕ್ರಮಣದ ಅಪಾಯವನ್ನು ಮನಗಂಡ ಕೇಂದ್ರ ಸರ್ಕಾರ ಅದನ್ನು ತಡೆಯುವ ಪ್ರಯತ್ನವಾಗಿ ಸಶಸ್ತ್ರ ಪಡೆಗಳ ಕಾಯ್ದೆಯನ್ನು ಜಾರಿಗೊಳಿಸಿತು. ಈ ಹಿನ್ನೆಲೆಯಲ್ಲಿ ರಾಜ್ಯ ಆರು ವರ್ಷಗಳ ರಾಷ್ಟ್ರಪತಿ ಆಡಳಿತವನ್ನು ಅನುಭವಿಸಬೇಕಾಯಿತು. ಇದೇ ವೇಳೆ ಈ ರಾಜ್ಯ ಭಾರತದ ಸಂವಿಧಾನದ 370ನೇ ವಿಧಿ ಅನ್ವಯ ವಿಶೇಷ ಸ್ವಾಯತ್ತತೆಯನ್ನೂ ಅನುಭವಿಸಿತು.


2. ಪಂಜಾಬ್
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 4 ವರ್ಷ 259 ದಿನಗಳು. 1987ರ ಜೂನ್ 11ರಿಂದ 1992ರ ಫೆಬ್ರುವರಿ 25ರವರೆಗೆ.
★ಕಾರಣ: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆ ಬಳಿಕ, ರಾಜ್ಯದಲ್ಲಿ ಉಗ್ರಗಾಮಿ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ದೊಡ್ಡ ಪ್ರಹಾರವನ್ನೇ ಮಾಡಿತು. 1987ರಲ್ಲಿ 34 ಮಂದಿ ಹಿಂದೂ ಬಸ್ ಪ್ರಯಾಣಿಕರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಪಂಜಾಬ್ ಹಗೂ ಹರ್ಯಾಣಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಲಿಸ್ತಾನ ಕಮಾಂಡೊ ಫೋರ್ಸ್ ಎಂಬ ಉಗ್ರ ಸಂಘಟನೆಯ ಈ ಕೃತ್ಯವನ್ನು ಹತ್ತಿಕ್ಕುವ ಸಲುವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.


3. ಪುದುಚೇರಿ
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 3 ವರ್ಷ 96 ದಿನಗಳು (1974ರ ಮಾರ್ಚ್ 28ರಿಂದ 1977ರ ಜುಲೈ ಎರಡರವರೆಗೆ)
★ಕಾರಣ: ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಹಾಗೂ ಸಂಸ್ಥಾ ಕಾಂಗ್ರೆಸ್ ಮೈತ್ರಿಕೂಟದ ರಾಜ್ಯ ಸರ್ಕಾರ ಪತನವಾದ ಬಳಿಕ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲಾಯಿತು. ಕಾಂಗ್ರೆಸ್ ರಿಕ್ವಿಸಿಷನ್ ಪಾರ್ಟಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ ಜತೆ ಸೇರಿ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದರಿಂದ ಸರ್ಕಾರ ಪತನವಾಗಿತ್ತು. ಈ ಕೇಂದ್ರಾಡಳಿತ ಪ್ರದೇಶ ಮೂರು ವರ್ಷಗಳಿಗೂ ಹೆಚ್ಚು ಅವಧಿಗೆ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತು.


4. ವಿಂಧ್ಯಪ್ರದೇಶ
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 2 ವರ್ಷ ಹಾಗೂ 340 ದಿನಗಳು. 1949ರ ಏಪ್ರಿಲ್ 8ರಿಂದ 1952ರ ಮಾರ್ಚ್ ತಿಂಗಳ 13ರ ವರೆಗೆ.
★ಕಾರಣ: ವಿಂಧ್ಯಪ್ರದೇಶ ಎನ್ನುವುದು ಭಾರತದ ಮಾಜಿ ರಾಜ್ಯ. ಇದು ಸ್ವಾತಂತ್ರ್ಯಾ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಬಳಿಕ ಆಧುನಿಕ ರಾಜ್ಯವಾದ ಮಧ್ಯಪ್ರದೇಶದ ಭಾಗವಾಗಿದೆ. ಈ ರಾಜ್ಯ 1948ರಲ್ಲಿ ಇತರ 35 ರಾಜಾಡಳಿತದ ರಾಜ್ಯಗಳ ಜತೆಗೆ ಅಸ್ತಿತ್ವಕ್ಕೆ ಬಂತು. ಕ್ಷಿಪ್ರ ಅವಧಿಯಲ್ಲೇ ಸರಣಿಯೋಪಾದಿಯಲಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಗಳನ್ನು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿತು. ಕಾಂಗ್ರೆಸ್ ಸದಸ್ಯ ಎಸ್.ಎನ್.ಶುಕ್ಲಾ ಅವರು 1952ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಿತು. 1956ರ ಅಕ್ಟೋಬರ್ 31ರಂದು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲಾಯಿತು. ಶುಕ್ಲಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಈ ರಾಜ್ಯವನ್ನು ಮಧ್ಯಪ್ರದೇಶ ರಾಜ್ಯದ ವ್ಯಾಪ್ತಿಗೆ ಒಳಪಡಿಸಿದರು.


5. ನಾಗಾಲ್ಯಾಂಡ್
★ರಾಷ್ಟ್ರಪತಿ ಆಳ್ವಿಕೆಯ ಅವಧಿ: 2 ವರ್ಷ 250 ದಿನಗಳು. 1975ರ ಮಾರ್ಚ್ 20ರಿಂದ 1977ರ ನವೆಂಬರ್ ತಿಂಗಳ 25ರವರೆಗೆ
★ಕಾರಣ: 1975ರಲ್ಲಿ ನಾಗಾಲ್ಯಾಂಡಿನ ರಾಜಕೀಯ ವಾತಾವರಣ ಪ್ರಕ್ಷುಬ್ಧಗೊಂಡಿತ್ತು. ಬುಡಕಟ್ಟು ಜನಾಂಗಗಳ ನಡುವಿನ ಪೈಪೊಟಿ ಹಾಗೂ ನಾಗಾ ಸಮುದಾಯದಲ್ಲೇ ವೈಯಕ್ತಿಕ ದ್ವೇಷದ ಕಾರಣದಿಂದಾಗಿ ರಾಜಕೀಯ ಅರಾಜಕತೆ ತಾಂಡವವಾಡುತ್ತಿತ್ತು. ಇಲ್ಲಿ ಭಿನ್ನಮತ, ಪಕ್ಷ ವಿಭಜನೆ ಹಾಗೂ ಭಿನ್ನಮತಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳು ಸಾಮಾನ್ಯ ಲಕ್ಷಣವಾಗಿತ್ತು. ಈ ಹಂತದಲ್ಲಿ ಅಂದಿನ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಪ್ರಧಾನಿ ಇಂದಿರಾಗಾಂಧಿಯವರ ನಿರ್ದೇಶನದ ಅನ್ವಯ ರಾಷ್ಟ್ರಪತಿ ಆಳ್ವಿಕೆಯನ್ನು ರಾಜ್ಯದಲ್ಲಿ ಹೇರಲಾಯಿತು.


6. ಅರುಣಾಚಲ ಪ್ರದೇಶ:
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಸ್ತಾವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಂಗೀಕಾರ ನೀಡಿದ್ದಾರೆ. ಈ ನಿರ್ಧಾರ ಭಾರತದ ಕೇಂದ್ರ- ರಾಜ್ಯ ಸಂಬಂಧದ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ. ಅದಾಗ್ಯೂ ಈ ನಿರ್ಧಾರ ಸುಪ್ರೀಂಕೋರ್ಟ್‍ನ ತೀಕ್ಷ್ಣ ಅವಲೋಕನಕ್ಕೆ ಗುರಿಯಾಗಿದ್ದು, ಅರುಣಾಚಲ ಪ್ರದೇಶದ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‍ಖೋವಾ ಅವರಿಂದ ಸುಪ್ರೀಂಕೋರ್ಟ್ ಈಗಾಗಲೇ ವರದಿ ಕೇಳಿದೆ. ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಿದ ಕ್ರಮಕ್ಕೆ ಸಮರ್ಥನೆ ನೀಡುವಂತೆ ಕೋರ್ಟ್ ಸೂಚಿಸಿದೆ.


☀️ವಿಶೇಷ ಉಲ್ಲೇಖ:
*.ಕೇವಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಮಾತ್ರವಲ್ಲದೇ ರಾಷ್ಟ್ರ ರಾಜಧಾನಿಯೂ ಇತ್ತೀಚೆಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ.
*.ತೀರಾ ಇತ್ತೀಚಿನ ನಿರ್ದಶನವೆಂದರೆ ದೆಹಲಿಯ ಮೇಲೆ ಒಂದು ವರ್ಷಗಳ ಅವಧಿಯ ರಾಷ್ಟ್ರಪತಿ ಆಳ್ವಿಕೆ ಹೇರಿಕೆ. 2014ರ ಫೆಬ್ರವರಿ 14ರಂದು ದೆಹಲಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರೀವಾಲ್ ದಿಢೀರನೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ಕಾರಣದಿಂದ ಕೇಂದ್ರ ಸರ್ಕಾರ ರಾಜ್ಯದಲ್ಲಿ ಸಂವಿಧಾನ 356ನೇ ವಿಧಿ ಅನ್ವಯ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತು.
*.ದೆಹಲಿ ವಿಧಾನಸಭೆಯಲ್ಲಿ ಲೋಕಪಾಲ ಮಸೂದೆ ಆಂಗೀಕಾರವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿ ಆಳ್ವಿಕೆ 2015ರ ಫೆಬ್ರವರಿ 11ರವರೆಗೂ ಮುಂದುವರಿದಿತ್ತು.

☀️ರಾಷ್ಟ್ರಪತಿ ಆಡಳಿತ (ಭಾರತ ಸಂವಿಧಾನದ 356ನೇ ವಿಧಿಯ ಬಳಕೆ) : ಒಂದು ಅವಲೋಕನ. (President Rule : An Overview)

☀️ರಾಷ್ಟ್ರಪತಿ ಆಡಳಿತ (ಭಾರತ ಸಂವಿಧಾನದ 356ನೇ ವಿಧಿಯ ಬಳಕೆ) : ಒಂದು ಅವಲೋಕನ.
(President Rule : An Overview)
━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಸಂವಿಧಾನ ಮತ್ತು ರಾಜಕೀಯ.
(Indian Constitution and Polity)


●. ರಾಷ್ಟ್ರಪತಿ ಆಡಳಿತ ಎಂದರೇನು?
ಸಂವಿಧಾನ ವ್ಯವಸ್ಥೆಯನ್ನು ನಿರ್ವಹಿಸಿಕೊಂಡು ಹೋಗಲು ಅಸಮರ್ಥವಾದ ರಾಜ್ಯವೊಂದರ ಮೇಲೆ ಭಾರತ ಸಂವಿಧಾನದ 356ನೇ ವಿಧಿಯನ್ನು ವಿಧಿಸುವ ಕ್ರಮವನ್ನು ರಾಷ್ಟ್ರಪತಿ ಆಡಳಿತ ಎಂದು ಪರಿಗಣಿಸುತ್ತೇವೆ. ಇಂಥ ಪರಿಸ್ಥಿತಿಯಲ್ಲಿ ಆ ರಾಜ್ಯವು ನೇರವಾಗಿ ಕೇಂದ್ರದ ಆಡಳಿತಕ್ಕೆ ಒಳಪಡುತ್ತದೆ. ಇದನ್ನು ಆ ರಾಜ್ಯ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ ಎಂದು ಪರಿಗಣಿಸಲ್ಪಡುತ್ತದೆ. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ, ರಾಜ್ಯದ ಕಾರ್ಯನಿರ್ವಹಣೆಯ ಹೊಣೆಯನ್ನು ಕೇಂದ್ರದಿಂದ ನಿಯುಕ್ತರಾದ ರಾಜ್ಯಪಾಲರಿಗೆ ನೇರವಾಗಿ ವಹಿಸುತ್ತಾರೆ.

●. ಯಾಕೆ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ?
ಈ ಕೆಳಗಿನ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುತ್ತದೆ.
* ಯಾವುದೇ ರಾಜ್ಯ ಮುಖ್ಯಮಂತ್ರಿಯಾಗಿ ತನ್ನ ಮುಖಂಡನನ್ನು ಆಯ್ಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ.
* ರಾಜ್ಯದ ಮೈತ್ರಿ ಸರ್ಕಾರ ವಿಫಲವಾದಾಗ
* ಅನಿವಾರ್ಯ ಕಾರಣಗಳಿಂದಾಗಿ ರಾಜ್ಯದ ಚುನಾವಣೆಗಳು ಮುಂದೂಡಲ್ಪಟ್ಟಾಗ
* ರಾಜ್ಯವು ಸಂವಿಧಾನಾತ್ಮಕ ರೂಢಿಗಳಿಗೆ ಬದ್ಧವಾಗಲು ವಿಫಲವಾದಾಗ

●. ರಾಷ್ಟ್ರಪತಿಗಳು ತನ್ನ ಆಡಳಿತ ಅವಧಿಯಲ್ಲಿ ಏನು ಮಾಡಬಹುದು?
*.1994ರವರೆಗೂ ಯಾವುದೇ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಕಂಡುಬಂದರೆ ಅಂಥ ರಾಜ್ಯದ ಮೇಲೆ ಸಂವಿಧಾನದ 356ನೇ ವಿಧಿ ಅನ್ವಯ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಷ್ಟ್ರಪತಿಗಳಿಗೆ ಸಂಪೂರ್ಣ ಹಾಗೂ ಅನಿಯಂತ್ರಿತ ಅಧಿಕಾರ ಇತ್ತು. ಭಾರತ- ಚೀನಾ ಯುದ್ಧ, ಭಾರತ- ಪಾಕಿಸ್ತಾನ ಯುದ್ಧ, ನಾಗರಿಕ ಸಂಘರ್ಷ ಹಾಗೂ ರಾಜಕೀಯ ವ್ಯತ್ಯಯಗಳ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
*.1994ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಈ ಪರಿಪಾಠವನ್ನು ಬದಲಿಸಲಾಯಿತು. ರಾಷ್ಟ್ರಪತಿ ಸಂವಿಧಾನಕ್ಕಿಂತ ಮೇಲ್ಪಟ್ಟ ಹುದ್ದೆಯಲ್ಲ. ಆದ್ದರಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಅನಿಯಂತ್ರಿತ ಹಾಗೂ ಸಂಪೂರ್ಣ ಅಧಿಕಾರ ಅವರಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ರಾಷ್ಟ್ರಪತಿಗಳ ನಿರ್ಧಾರವು, ತೊಂದರೆಗೀಡಾದ ರಾಜ್ಯಗಳ ರಾಜ್ಯಪಾಲರ ಶಿಫಾರಸ್ಸಿಗೆ ಅನುಗುಣವಾಗಿರಬೇಕು ಎಂದು ತೀರ್ಪು ನೀಡಿತು. ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಸ್ತಾವ ಸಂಸತ್ತಿನ ಎರಡೂ ಸದನಗಳಲ್ಲಿ ಆಂಗೀಕಾರವಾದಲ್ಲಿ ಮಾತ್ರ ರಾಷ್ಟ್ರಪತಿಗಳಿಗೆ ಆ ಅಧಿಕಾರವಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.
*.ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಭಾರತಕ್ಕೆ ಹೊಸದಲ್ಲ. ಭಾರತದ ರಾಜ್ಯಗಳು ಇದುವರೆಗೆ ಒಟ್ಟು 124 ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ನಿರ್ದಶನಗಳು. ಬಹಳಷ್ಟು ಬಾರಿ ನಿರ್ದಿಷ್ಟ ರಾಜ್ಯಗಳು ರಾಜಕೀಯ ಸಂಘರ್ಷವನ್ನು ಎದುರಿಸಿದ ಸಂದರ್ಭದಲ್ಲಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅನಿವಾರ್ಯ ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

☀️ ಝಿಕಾ ವೈರಸ್ ರೋಗ : ಒಂದು ಅವಲೋಕನ. (Disease of Zika Virus : An Overview)

☀️ ಝಿಕಾ ವೈರಸ್ ರೋಗ : ಒಂದು ಅವಲೋಕನ.
(Disease of Zika Virus : An Overview)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)

☀️ಝಿಕಾ ವೈರಸ್ ರೋಗ ಏನು?
ಝಿಕಾ ಎಂಬ ರೋಗವು ಝಿಕಾ ವೈರಸ್‍ನಿಂದ ಬರುತ್ತದೆ. ಇದು ಮೂಲಭೂತವಾಗಿ ಝಿಕಾ ಸೋಂಕು ತಗುಲಿದ ಈಡಿಸ್ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ. ಝಿಕಾ ರೋಗದ ಮುಖ್ಯ ಗುಣಲಕ್ಷಣಗಳೆಂದರೆ, ಜ್ವರ, ಗುಳ್ಳೆಗಳು, ಗಂಟು ನೋವು ಹಾಗೂ ಕೆಂಗಣ್ಣು. ಇದರ ಲಕ್ಷಣಗಳು ಮಂದವಾಗಿ ಕಂಡುಬಂದರೂ ಹಲವು ದಿನಗಳವರೆಗೆ ಅಥವಾ ಹಲವು ವಾರಗಳ ವರೆಗೂ ಇರಬಹುದು.

ಝಿಕಾದಿಂದ ಸೋಂಕು ತಗುಲಿದ ಪ್ರತಿ ಐವರಲ್ಲಿ ಒಬ್ಬರು ರೋಗಕ್ಕೆ ತುತ್ತಾಗುತ್ತಾರೆ. ಈ ರೋಗಕ್ಕೆ ತುತ್ತಾದವರಿಗೆ ರೋಗಲಕ್ಷಣ ಕೂಡಾ ತೀರಾ ಗಂಭೀರವಾಗಿರುವುದಿಲ್ಲ. ಈ ಕಾರಣದಿಂದ ಝಿಕಾ ಸೋಂಕು ತಗುಲಿರುವ ಬಹುತೇಕ ಮಂದಿಗೆ ತಾವು ರೋಗಪೀಡಿತರಾಗಿರುವ ಬಗ್ಗೆ ತಿಳಿವಳಿಕೆಯೇ ಇರುವುದಿಲ್ಲ.

ಝಿಕಾ ರೋಗದ ಮುಖ್ಯ ಗುಣಲಕ್ಷಣಗಳೆಂದರೆ, ಜ್ವರ, ಗುಳ್ಳೆಗಳು, ಗಂಟು ನೋವು ಹಾಗೂ ಕೆಂಗಣ್ಣು. ಸೋಂಕುಪೀಡಿತ ಸೊಳ್ಳೆ ಕಚ್ಚಿದ ಎರಡರಿಂದ ಏಳು ದಿನಗಳ ಬಳಿಕ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


☀️ಝಿಕಾ ಹೇಗೆ ಹರಡುತ್ತದೆ?
ಝಿಕಾ ಮೂಲಭೂತವಾಗಿ ಸೋಂಕು ತಗುಲಿದ ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಸೋಂಕಿಗೆ ಒಳಗಾದ ಸೊಳ್ಳೆಗಳು ಕಡಿದಾಗ ಅದು ಮನುಷ್ಯನಿಗೆ ವರ್ಗಾವಣೆಯಾಗುತ್ತದೆ. ಡೆಂಗೆ ಹಾಗೂ ಚಿಕೂನ್‍ಗುನ್ಯ ಹರಡುವ ಸೊಳ್ಳೆಯೇ ಈ ವೈರಸ್‍ಗಳನ್ನು ಕೂಡಾ ಹಬ್ಬಿಸುತ್ತದೆ. ಈ ಸೊಳ್ಳೆಗಳು ರಾತ್ರಿಗಿಂತ ಹೆಚ್ಚಾಗಿ ಹಗಲಿನ ವೇಳೆಯಲ್ಲಿ ಕಡಿಯುತ್ತವೆ. ಈಗಾಗಲೇ ವೈರಸ್ ಸೋಂಕಿಗೆ ಒಳಗಾಗಿರುವ ಮನುಷ್ಯನನ್ನು ಕಡಿದ ಬಳಿಕ ಆ ಸೊಳ್ಳೆಗೂ ಸೋಂಕು ತಗುಲುತ್ತದೆ. ಬಳಿಕ ಈ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಗೆ ಕಡಿದಾಗ ಆತನಿಗೂ ಸೋಂಕು ಹರಡುತ್ತದೆ. ಈ ಸೋಂಕು ಗರ್ಭಿಣಿ ತಾಯಿಯಿಂದ ಮಗುವಿಗೆ ಕೂಡಾ ಗರ್ಭದಲ್ಲೇ ಹರಡುತ್ತದೆ. ಅಥವಾ ಹುಟ್ಟುವ ವೇಳೆಗೆ ಮಗು ಈ ಸೋಂಕಿಗೆ ತುತ್ತಾಗಬಹುದು.


☀️ಯಾರು ಸೋಂಕಿಗೆ ಒಳಗಾಗುವ ಸಾಧ್ಯತೆ ಅಧಿಕ?
ಝಿಕಾ ಸೋಂಕು ಇರುವ ಪ್ರದೇಶದಲ್ಲಿ ವಾಸಿಸುವ ಅಥವಾ ಅಲ್ಲಿ ಪ್ರಯಾಣ ಬೆಳೆಸುವ ಯಾವುದೇ ಆರೋಗ್ಯವಂತ ವ್ಯಕ್ತಿಗೆ ಇದು ತಗುಲುವ ಸಾಧ್ಯತೆ ಇರುತ್ತದೆ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಈ ಸಾಧ್ಯತೆ ಅಧಿಕ.


☀️ಝಿಕಾ ವೈರಸ್ ಎಲ್ಲಿ ಪತ್ತೆಯಾಗಿದೆ?
* 2015ಕ್ಕೆ ಮುನ್ನ ಝಿಕಾ ವೈರಸ್ ಸೋಂಕು ಆಫ್ರಿಕಾದ ಹಲವು ಪ್ರದೇಶಗಳಲ್ಲಿ, ಆಗ್ನೇಯ ಏಷ್ಯಾ ದೇಶಗಳಲ್ಲಿ ಹಾಗೂ ಫೆಸಿಫಿಕ್ ದ್ವೀಪಗಳಲ್ಲಿ ಪತ್ತೆಯಾಗಿತ್ತು.
* 2015ರ ಮೇ ತಿಂಗಳಲ್ಲಿ ಪಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಷನ್ ಬ್ರೆಜಿಲ್‍ನಲ್ಲಿ ಮೊಟ್ಟಮೊದಲ ಝಿಕಾ ಸೋಂಕು ಪತ್ತೆಯಾದ ಬಳಿಕ ಕಟ್ಟೆಚ್ಚರ ವಿಧಿಸಿತ್ತು.
* ಇದೀಗ ಹಲವು ದೇಶಗಳಲ್ಲಿ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ.
* ಝಿಕಾ ವೈರಸ್ ಮತ್ತಷ್ಟು ಹರಡುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಎಷ್ಟು ವ್ಯಾಪಕವಾಗಿ ಹರಡಬಹುದು ಎನ್ನುವುದನ್ನು ಈಗಲೇ ನಿರ್ಧರಿಸುವುದು ಕಷ್ಟ. ಝಿಕಾ ಸೋಂಕಿನ ದೇಶಗಳು ಹಾಗೂ ಪ್ರದೇಶಗಳ ಬಗ್ಗೆ ನಿರ್ಧರಿಸುವುದು ಕಷ್ಟ.


☀️ಝಿಕಾ ಸೋಂಕು ತಡೆ ಹೇಗೆ?
ಝಿಕಾ ನಿಯಂತ್ರಿಸುವ ಯಾವುದೇ ಲಸಿಕೆ ಸದ್ಯಕ್ಕಿಲ್ಲ. ಆದ್ದರಿಂದ ಇದನ್ನು ತಡೆಯುವ ಉತ್ತಮ ವಿಧಾನವೆಂದರೆ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು. ನೀವು ಹಾಗೂ ನಿಮ್ಮ ಕುಟುಂಬವನ್ನು ಸೊಳ್ಳೆಕಡಿತದಿಂದ ರಕ್ಷಿಸಿಕೊಳ್ಳಬಹುದಾದ ಕೆಲ ವಿಧಾನಗಳು ಇಲ್ಲಿವೆ.
* ಉದ್ದ ತೋಳಿನ ಅಂಗಿ ಹಾಗೂ ಪೂರ್ಣ ಪ್ಯಾಂಟ್‍ಗಳನ್ನು ಧರಿಸಿ.
* ಹವಾನಿಯಂತ್ರಿತ ಪ್ರದೇಶಗಳಲ್ಲಿ ಇರಲು ಪ್ರಯತ್ನಿಸಿ ಹಾಗೂ ಕಿಟಕಿ, ಬಾಗಿಲುಗಳನ್ನು ಭದ್ರಪಡಿಸಿ, ಸೊಳ್ಳೆಗಳು ಒಳಕ್ಕೆ ಪ್ರವೇಶಿಸದಂತೆ ಎಚ್ಚರ ವಹಿಸಿ.
* ಅಂತರರಾಷ್ಟ್ರೀಯ ಸುರಕ್ಷತಾ ಏಜೆನ್ಸಿಯಲ್ಲಿ ನೊಂದಣಿಯಾಗಿರುವ ಸೊಳ್ಳೆ ನಿಯಂತ್ರಕಗಳನ್ನು ಬಳಸಿ.
* ಸೊಳ್ಳೆಪರದೆಗಳ ಸುರಕ್ಷೆಯಲ್ಲೇ ನಿದ್ದೆ ಮಾಡಿ.


☀️ಇದು ಹೊಸ ವೈರಸ್?
ಅಲ್ಲ. ಆಫ್ರಿಕಾ, ಆಗ್ನೇಯ ಏಷ್ಯಾ ಹಾಗೂ ಫೆಸಿಫಿಕ್ ದ್ವೀಪ ಪ್ರದೇಶದಲ್ಲಿ ಝಿಕಾ ವೈರಸ್ ಹಿಂದೆಯೂ ಪತ್ತೆಯಾಗಿತ್ತು. ಝಿಕಾ ವೈರಸ್ ಹೊಸ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇರುತ್ತದೆ. 2015ರ ಮೇ ತಿಂಗಳಲ್ಲಿ ಪಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಷನ್ ಬ್ರೆಜಿಲ್‍ನಲ್ಲಿ ಮೊಟ್ಟಮೊದಲ ಝಿಕಾ ಸೋಂಕು ಪತ್ತೆಯಾದ ಬಳಿಕ ಕಟ್ಟೆಚ್ಚರ ವಿಧಿಸಿತ್ತು.


☀️ಭಾರತದ ಪೂರ್ವಸಿದ್ಧತೆ
ಝಿಕಾ ವೈರಸ್ ಸೋಂಕಿನಿಂದ ಪೀಡಿತವಾಗಿರುವ ದೇಶಗಳಿಂದ ಬರುವ ಜನರಿಗೆ ಭಾರತ ಕಟ್ಟುನಿಟ್ಟಿನ ತಪಾಸಣೆ ಕ್ರಮವನ್ನು ಕೈಗೊಳ್ಳುತ್ತಿದೆ. ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೊಳ್ಳೆಯಿಂದ ಹರಡುವ ವೈರಸ್ ಹರಡದಂತೆ ಎಚ್ಚರ ವಹಿಸಲಿದೆ.

ಇತ್ತೀಚೆಗೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಗಳು ವಿಶ್ವ ಆರೋಗ್ಯ ಸಂಸ್ಥೆಗೆ ತಪಾಸಣಾ ಕಿಟ್‍ಗಳನ್ನು ಸರಬರಾಜು ಮಾಡುವಂತೆ ಮನವಿ ಸಲ್ಲಿಸಿವೆ.


☀️ಮುಂಜಾಗ್ರತಾ ಕ್ರಮಗಳು:
ಭಾರತಕ್ಕೆ ದೊಡ್ಡ ಸಂಖ್ಯೆಯ ವಿದೇಶಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡಾ ಇದು ಹರಡುವ ಎಲ್ಲ ಲಕ್ಷಣಗಳಿವೆ. ಝಿಕಾ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ಕೇಂದ್ರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜತೆ ತಜ್ಞರು ಸಂಪರ್ಕದಲ್ಲಿದ್ದಾರೆ. ಜನಾರೋಗ್ಯದ ಮೇಲೆ ಇದರ ಪರಿಣಾಮ ಹಾಗೂ ಅದನ್ನು ತಪಾಸಣೆ ಮಾಡುವ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

ಈಗಾಗಲೇ ನವದೆಹಲಿ, ಮುಂಬೈ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇದರ ತಫಾಸಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದು ಹರಡದಂತೆ ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ.

ಕೇಂದ್ರದ ಆರೋಗ್ಯ ಸಚಿವಾಲಯ ಕೂಡಾ ಝಿಕಾ ವೈರಸ್ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಇದು ಹರಡುವ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ತಪಾಸಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಿದೆ.

ಇದು ಹಾಲಿ ಇರುವವರಿಗೆ ಮಾತ್ರವಲ್ಲದೇ ಮುಂದಿನ ಪೀಳಿಗೆಯ ಭವಿಷ್ಯಕ್ಕೂ ಮಾರಕವಾಗಲಿದ್ದು, ಗರ್ಭಿಣಿಯರ ಮೂಲಕ ಮಕ್ಕಳಿಗೆ ಹರಡುವ ಕಾರಣದಿಂದ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ.