☀ಅರ್ಥ್ ಅವರ್ ಅಂದರೇನು? ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿದಂತೆ ಅದರ ಮಹತ್ವವೇನು?
(What do you mean by 'Earth Hour'? what is Its significance in relation to global warming?)
━━━━━━━━━━━━━━━━━━━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ (ಅಂತರ್ರಾಷ್ಟ್ರೀಯ)
(General Studies (International)
●.ಜಾಗತಿಕ ತಾಪಮಾನ ಏರಿಕೆ, ವಿದ್ಯುತ್ ಶಾಖದಿಂದ ಭೂಮಿಯನ್ನು ಕಾಪಾಡುವ ಸಲುವಾಗಿ ಮಾ.28 (ಶನಿವಾರ) 2015 ರಂದು ವಿಶ್ವದಾದ್ಯಂತ ಅರ್ಥ್ ಅವರ್ ಆಚರಿಸಲಾಯಿತು.
— ರಾತ್ರಿ 8.30 ರಿಂದ 9.30ರ ವರೆಗೆ ಸ್ವಯಂ ಪ್ರೇರಿತವಾಗಿ ವಿದ್ಯುತ್ ದೀಪಗಳನ್ನುಆರಿಸುವ ಮೂಲಕ ಅರ್ಥ್ ಅವರ್‌ನ ಆಚರಣೆ ನಡೆಯುವುದು.
— ಇದೊಂದು ಆಚರಣೆ ಅಷ್ಟೇ ಅಲ್ಲ, ಜಾಗತಿಕ ತಾಪಮಾನ ಏರಿಕೆ ಮತ್ತು ಇಂಧನ ಉಳಿತಾಯದ ಆಂದೋಲನವಾಗಿ ರೂಪುಗೊಂಡಿದೆ.
— ಈ ಹಿನ್ನೆಲೆಯಲ್ಲಿ ಅರ್ಥ್ ಅವರ್ ಅಂದರೇನು? ಅದರ ಮಹತ್ವವೇನು? ಇದನ್ನು ಯಾವ್ಯಾವ ದೇಶದಲ್ಲಿ ಹೇಗೆಲ್ಲಾ ಆಚರಿಸಲಾಗುತ್ತದೆ ಎನ್ನುವ ಕುರಿತ ಮಾಹಿತಿ ಇಲ್ಲಿದೆ...
●.ಅರ್ಥ್ ಅವರ್ ಅಂದರೇನು?('Earth Hour'):
━━━━━━━━━━━━━━━━━━━━━━━━━━
— ಆಸ್ಟ್ರೇಲಿಯಾದ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಸ್ವಯಂ ಸೇವಾ ಸಂಸ್ಥೆ ಈ ಆಂದೋಲನದ ಜನಕ.
—2007ರಲ್ಲಿ ಸಿಡ್ನಿಯಲ್ಲಿ ಜಾರಿಗೆ ಬಂದ ಇದು ಜಾಗತಿಕವಾಗಿ ಮನ್ನಣೆ ಪಡೆಯಿತು.
—ಈ ಅಭಿಯಾನದಲ್ಲಿ ಭಾರತ ಸೇರಿದಂತೆ 162 ದೇಶಗಳು ಭಾಗವಹಿಸಿವೆ.ಬೆಂಗಳೂರು ಸೇರಿದಂತೆ 7 ಸಾವಿರಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿವೆ.
— ಸಾಮಾನ್ಯವಾಗಿ ಮಾರ್ಚ್ 28 ಅಥವಾ 29ರಂದು ಇದನ್ನು ಆಚರಿಸಲಾಗುತ್ತದೆ.
— ಈ ವರ್ಷ ಮಾ.28ರಂದು ಅರ್ಥ್ ಅವರ್ ಆಚರಿಸಲಾಯಿತು. ಅರ್ಥ್ ಅವರ್ ಆಚರಣೆ ಕಡ್ಡಾಯ ವೇನೂ ಅಲ್ಲ. ಆದರೂ, ಈ ಅಭಿಯಾನ ಎಷ್ಟು ಜನಪ್ರೀಯ ವಾಗಿದೆಯೆಂದರೆ, 2011ರಲ್ಲಿ 120 ಕೋಟಿ, 2013ರಲ್ಲಿ 180 ಕೋಟಿ ಜನರು ಇದರಲ್ಲಿ ಭಾಗವಹಿಸಿದ್ದರು.
●.ಅರ್ಥ್ ಅವರ್ ಆಚರಣೆಯಲ್ಲಿ ಹಣ ಸಂಗ್ರಹ:
━━━━━━━━━━━━━━━━━━━━━━━
— ಈ ಆಂದೊಲನದ ಅಂಗವಾಗಿ ಸಾಮಾಜಿಕ ಸಂಘ ಸಂಸ್ಥೆಗಳು ಹಣವನ್ನೂ ಸಂಗ್ರಹಿಸಲಾಗುತ್ತವೆ. 2014ರಲ್ಲಿ ಅರ್ಥ್ ಅವರ್ ಆಚರಣೆಯ ವೇಳೆ 36 ಲಕ್ಷ ರೂ. ಸಂಗ್ರಹಿಸಲಾಗಿತ್ತು.
— ಅಭಿಯಾನದಿಂದ ಪರೋಕ್ಷವಾಗಿ ಸಂಗ್ರಹವಾಗುವ ಅಪಾರ ಧನ ಸಂಪತ್ತು ಸೌರಶಕ್ತಿ ಉಪಕರಣಗಳ ಸದ್ಬಳಕೆ ಮತ್ತು ಅರಣ್ಯನಾಶ ತಡೆಯುವ ಜಾಗೃತಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.
— ಭಾರತದಲ್ಲಿ ಅರ್ಥ್ ಅವರ್ ಆಚರಣೆಯಿಂದ 1000 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗುತ್ತದೆ.
— ಅರ್ಥ್ ಅವರ ಕೇವಲ ನಗರದ ಗಗನ ಚುಂಬಿ ಕಟ್ಟಡಗಳಿಗಷ್ಟೇ ಸೀಮಿತವಾಗಿಲ್ಲ.ಇದರಲ್ಲಿ ಜನಸಾಮಾನ್ಯರು ಕೂಡ ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು.
●.ಅರ್ಥ್ ಅವರ್ ಆಚರಣೆಗೆ 5 ಪ್ರಮುಖ ಕಾರಣಗಳು:
━━━━━━━━━━━━━━━━━━━━━━━━━━━
1.ಅರಿವು ಮೂಡಿಸುವ ಸಣ್ಣ ಪ್ರಯತ್ನ ವರ್ಷಕ್ಕೆ ಒಂದು ತಾಸು ವಿದ್ಯುತ್ ಸ್ವಿಚ್‌ಗಳನ್ನು ಆಫ್ ಮಾಡುವುದರಿಂದ ಜಾಗತಿಕ ತಾಪಮಾನ ಕಡಿಮೆಯಾಗಿ ಬಿಡುತ್ತದೆಯೇ ಎಂದು ಎಲ್ಲರೂ ಪ್ರಶ್ನಿಸಬಹುದು. ಆದರೆ, ಉತ್ತಮ ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಮಿತವ್ಯಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಭವಿಷ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಿದಂತೆಲ್ಲಾ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗುತ್ತದೆ. ಹೀಗಾಗಿ ಶಾಖ ಸೂಸುವ ಬಲ್ಬ್ಗಳನ್ನು ಆರಿಸುವ ಮೂಲಕ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಸಣ್ಣ ಪ್ರಯತ್ನವೇ ಅರ್ಥ ಅವರ್ ಆಚರಣೆ.
2.ಸಣ್ಣ ಪ್ರಯತ್ನ ದೊಡ್ಡ ಬದಲಾವಣೆ ಮನೆಯಲ್ಲಿ ಕೋಣೆಯನ್ನು ಉಪಯೋಗಿಸದೇ ಇದ್ದಾಗ ಲೈಟ್ ಆಫ್ ಮಾಡುವುದು, ಅನಗತ್ಯ ವಿದ್ಯುತ್ ಬಳಸದೇ ಇರುವುದು, ಕಡಿಮೆ ಶಾಖದ ಬಲ್ಬ್ಗಳನ್ನು ಬಳಸುವು ದಿಂದ ಕೋಣೆಯ ತಾಪಮಾನ ನಿಯಂತ್ರಣ ದಲ್ಲಿರುತ್ತದೆ. ಹೀಗೆ ವಿದ್ಯುತ್ ಉಳಿತಾಯದಲ್ಲಿ ಸಣ್ಣ ಪುಟ್ಟ ಕ್ರಮಗಳು ಕೂಡ ತಾಪಮಾನ ನಿಯಂತ್ರಣದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ.
3.ವಿಶ್ವ ಸಮುದಾಯಕ್ಕೆ ಸಂದೇಶ ಇಂದು ಜಾಗತಿಕ ತಾಪಮಾನ ಏರಿಕೆಯಿಂದ ವಿಶ್ವವೇ ತತ್ತರಿಸಿದೆ. ಅನೇಕ ಪ್ರಾಣಿಸಂಕುಲಗಳು ಅಳಿವಿನ ಅಂಚನ್ನು ತಲುಪಿವೆ. ಈ ನಿಟ್ಟಿನಲ್ಲಿ ಅರ್ಥ್ ಅವರ್ ಆಚರಣೆ ವಿಶ್ವದಾದ್ಯಂತ ಒಂದು ಪ್ರಬಲ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ. 162 ದೇಶಗಳ 7000ಕ್ಕೂ ಹೆಚ್ಚು ನಗರಗಳು ಈ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಈ ಆಂದೋಲನಕ್ಕೆ ಕೈಜೋಡಿಸಿವೆ.
4.ಮುಂದಿನ ಪೀಳಿಗೆಗಾಗಿ ಯೋಚಿಸಿನಮ್ಮ ಇಂದಿನ ತಲೆಮಾರು ವೇಗವಾಗಿ ಬೆಳೆಯುತ್ತಿದೆ. ತಾಪಮಾನ ಏರಿಕೆಯ ಪರಿಣಾಮದ ಬಿಸಿಯನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸುದು ಬೇಡ. ಹೀಗಾಗಿ ಈಗಿನಿಂದಲೇ ಒಂದಷ್ಟು ಕ್ರಮಗಳನ್ನು ಕೈಗೊಂಡರೆ ಮುಂದಿನ ಪೀಳಿಗೆಗೆ ಕೆಲವನ್ನಾದರೂ ನಾವು ಉಳಿಸಬಹುದು.
5.ಕರೆಂಟ್ ಆರಿಸಿ ಕ್ಯಾಂಡಲ್ ಲೈಟ್ ಡಿನ್ನರ್!ಒಂದು ತಾಸು ವಿದ್ಯುತ್ ಬಲ್ಬ್ ಗಳನ್ನು ಆಫ್ ಮಾಡುವುದು ತುಂಬಾ ಸುಲಭ. ಅಷ್ಟೇ ಅಲ್ಲ ಆನಂದವನ್ನು ಪಡೆಯ ಬಹುದು. ವಿದ್ಯುತ್ ದೀಪಗಳನ್ನು ಆರಿಸಿ ಕ್ಯಾಂಡಲ್ ಲೈಟ್ ಡಿನ್ನರ್ ಅನ್ನು ಆನಂದಿಸಬಹುದು. ಆಕಾಶದ ತಾರೆಗಳನ್ನು ಎಣಿಸುತ್ತಾ ಗೌಜು ಗದ್ದಲಗಳಿಲ್ಲದೇ ಪ್ರಶಾಂತ ವಾತಾವರಣದ ಅನುಭೂತಿ ಪಡೆಯಬಹದು. ಸಂಗೀತ ಕೇಳುತ್ತಾ ಮೈ ಮರೆಯಬಹುದು.
●.ಯಾವ ದೇಶದಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?
━━━━━━━━━━━━━━━━━━━━━━━━
●.ಸಿಡ್ನಿ:
— ಅರ್ಥ್ ಅವರ್ ಆಚರಣೆಯ ವೇಳೆ ಸಿಡ್ನಿಯಲ್ಲಿ ಒಂದು ಗಂಟೆ ಕತ್ತಲು ಆವರಿಸುತ್ತದೆ. ಒಪೆರಾ ಹೌಸ್ ಮತ್ತು ಹಾರ್ಬರ್ ಬ್ರಿಡ್ಜ್ಗಳಲ್ಲಿ ವಿದ್ಯುತ್ ದೀಪಗಳನ್ನು ಆರಿಸಲಾಗುತ್ತದೆ. ಅಲ್ಲದೆ, ಈ ಸಮುದಲ್ಲಿ ಖ್ಯಾತ ವಾದ್ಯವೃಂದಗಳನ್ನು ಕರೆಸಿ ಸಂಗೀತ ಕಾರ್ಯ ಕ್ರಮವನ್ನು ಆಯೋಜಿಸಲಾಗುತ್ತದೆ.
●.ಫ್ರಾನ್: (ಐಫೆಲ್ ಟವರ್)
— ಫ್ರಾನ್ಸ್‌ನ ಪ್ರಸಿದ್ಧ ಪ್ರವಾಸಿ ತಾಣ ಐಫೆಲ್ ಟವರ್‌ನ ವಿದ್ಯುತ್ ದೀಪಗಳನ್ನು ಅರ್ಥ್ ಅವರ್ ಸಮಯದಲ್ಲಿ ಆರಿಸಲಾಗುತ್ತದೆ. ಅದರ ಬದಲು ಮೊಂಬತ್ತಿಗಳನ್ನು ಬೆಳಗುವ ಮೂಲಕ ವಿದ್ಯುತ್ ಅನ್ನು ಉಳಿಸಿ ಎಂಬ ಸಂದೇಶವನ್ನು ನೀಡಲಾಗುತ್ತದೆ. ದೀಪದ ಬೆಳಕಿನಲ್ಲಿ ಸಾಂಪ್ರದಾಯಿಕ ನೃತ್ಯ ಆಯೊಜಿಸಲಾಗುತ್ತದೆ.
●.ಅಮೇರಿಕ: ( ಗೊಲ್ಡನ್ ಗೇಟ್ ಬ್ರಿಡ್ಜ್)
ಅರ್ಥ್ ಅವರ್‌ನಲ್ಲಿ ಅಮೆರಿಕದ ನ್ಯೂಯಾರ್ಕ್ ಕೂಡ ಸಂಭ್ರಮದಿಂದ ಭಾಗವಹಿಸುತ್ತದೆ. ಅಲ್ಲಿನ ಗಗನ ಚುಂಬಿ ಕಟ್ಟಡಗಳಲ್ಲಿ ದೀಪಗಳನ್ನು ಆರಿಸಲಾಗುತ್ತದೆ. ಜಗತ್‌ಪ್ರಸಿದ್ಧ ಗೊಲ್ಡನ್ ಗೇಟ್ ಬ್ರಿಡ್ಜ್ನಲ್ಲಿ ಒಂದು ತಾಸು ಕತ್ತಲು ಆವರಿಸುತ್ತದೆ.
●.ನ್ಯೂಜಿಲೆಂಡ್: ( ಸ್ಕೈ ಟವರ್)
ಸದಾ ಪ್ರಕಾಶಮಾನವಾದ ಬೆಳಿಕಿನಿಂದ ಮಿಂಚುವ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿರುವ ಪ್ರಸಿದ್ಧ ಸ್ಕೈ ಟವರ್ ಅರ್ಥ್ ಅವರ್ ಸಮಯದಲ್ಲಿ ಮಂಕಾಗುತ್ತದೆ. ಆಗ ಕಟ್ಟಡದ ಎಲ್ಲಾ ಫ್ಲಡ್ ಲೈಟ್‌ಗಳನ್ನು ಆಫ್ ಮಾಡಲಾಗುತ್ತದೆ.
●.ದುಬೈ: ( ಬುರ್ಜ್ ಅಲ್‌ಖಲೀಫಾ)
ಅರ್ಥ್ ಅವರ್ ಸಮಯದಲ್ಲಿ ದುಬೈನ ಬುರ್ಜ್ ಅಲ್ ಕಲಿಫಾದ ಎಲ್ಲಾ ಸ್ವೀಚ್ ಗಳನ್ನು ಆಫ್ ಮಾಡ ಲಾಗುತ್ತದೆ. ಅದೇ ರೀತಿ ಬೇಅವೆನ್ಯು ಪಾರ್ಕ್‌ನಲ್ಲಿ ಕೂಡ ಕರೆಂಟ್ ತೆಗೆಯಲಾಗುತ್ತದೆ.
●.ಭಾರತ: (ರಾಷ್ಟ್ರಪತಿ ಭವನ)
ಅರ್ಥ್ ಅವರ್ ಅನ್ನು ದೆಹಲಿಯ ರಾಷ್ಟಪತಿ ಭವನದಲ್ಲೂ ಆಚರಿಸಲಾಗುತ್ತದೆ. ರಾತ್ರಿ 8.30ರಿಂದ 9.30ರವರೆಗೆ ಎಲ್ಲಾ ಕೋಣೆಗಳ ವಿದ್ಯುತ್ ದೀಪಗಳನ್ನು ಆರಿಸುತ್ತಾರೆ. ರಾಷ್ಟಪತಿ ಭವನ 340 ಕೋಣೆಗಳನ್ನು ಹೊಂದಿದ್ದು, 320 ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿದೆ.
(ಕೃಪೆ: ಉದಯವಾಣಿ)

No comments:
Post a Comment