"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 14 June 2015

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅰ)  Multiple Choice Questions and Answers for IAS / KAS examinations. (Part -Ⅰ)

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅰ)
Multiple Choice Questions and Answers for IAS / KAS examinations. (Part -Ⅰ)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನಕ್ಕಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Multiple Choice for General studies)

★ ಕನ್ನಡದಲ್ಲಿ CSAT .
(CSAT in Kannada)


— ಆತ್ಮೀಯ ಪರೀಕ್ಷಾರ್ಥಿಗಳೆ, ವಿಶೇಷವಾಗಿ ಐಎಎಸ್ / ಕೆಎಎಸ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿಮ್ಮ ಸ್ಪರ್ಧಾಲೋಕ ಬ್ಲಾಗ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡಲು ಒಂದು ಚಿಕ್ಕ ಪ್ರಯತ್ನ ಕೈಗೊಳ್ಳುತ್ತಿದ್ದೇನೆ. ಮರೀಚಿಕೆಯಾದ ಕನ್ನಡ ಮಾಧ್ಯಮ ಕರ್ನಾಟಕದ ಪರೀಕ್ಷೆಗಳಲ್ಲಷ್ಟೇ ಅಲ್ಲ, ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲೂ ತನ್ನ ಕೀರ್ತಿ ಪತಾಕೆ ಹರಾಡಿಸಬೇಕೆಂಬ ಧ್ಯೇಯ ಹೊಂದಿರುವ ಪರೀಕ್ಷಾರ್ಥಿಗಳಿಗಾಗಿ ಸಹಕಾರಿಯಾಗಲು ಈ ನನ್ನದೊಂದು ಚಿಕ್ಕ ಪ್ರಯತ್ನ.

— ದಯವಿಟ್ಟು ತಪ್ಪಿದ್ದಲ್ಲಿ ಕ್ಷಮೆ ಇರಲಿ.

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.



●.1) ಇತ್ತೀಚೆಗೆ ಈ ಶತಮಾನದ (2100) ಅಂತ್ಯದ ವೇಳೆಗೆ ಹಿಮಾಲಯ ಶ್ರೇಣಿಯ ಎವರೆಸ್ಟ್ ಶಿಖರದ ಸುತ್ತಲಿನ ಹಿಮನದಿಗಳು ಶೇ 70ರಷ್ಟು ಕರಗುತ್ತದೆ ಇಲ್ಲವೆ ಸಂಪೂರ್ಣವಾಗಿ ಮಾಯವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕಾರಣ?
I) ಮಾಲಿನ್ಯ ಹೊರ ಸೂಸುವ ಪ್ರಮಾಣ ಹೆಚ್ಚುತ್ತಾ ಹೋದಂತೆ ತಾಪಮಾನ ಹೆಚ್ಚಳದಿಂದ ಈಗಿರುವ ಹಿಮನದಿ ಪ್ರದೇಶದ ವಿಸ್ತಾರಕ್ಕೆ ಅಡ್ಡಿ ಉಂಟಾಗುತ್ತದೆ
ll) ಎವರೆಸ್ಟ್ ಶಿಖರದ ಹಿಮನದಿ ಪ್ರದೇಶವು ಅತೀ ಸೂಕ್ಷ್ಮವಾಗಿದ್ದು, ಭೂಮಿಯ ತಾಪಮಾನ ಏರಿದಂತೆ ನಿಧಾನವಾಗಿ ಕರಗುತ್ತಾ ಹೋಗುತ್ತಿದೆ
lll) ಮಾಲಿನ್ಯ ಹೊರಸೂಸುವ ಪ್ರಮಾಣವು ಈ ಪ್ರದೇಶದ ತಾಪಮಾನ, ಮಳೆ ಮತ್ತು ಹಿಮಪಾತದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಹಿಮನದಿಗಳು ಕರಗುವ ಪ್ರಮಾಣ ಅವಲಂಬಿಸಿದೆ.
lV) ತಾಪಮಾನ ಹೆಚ್ಚಾದಂತೆ ಹಿಮ ಕರಗುವುದು ಜಾಸ್ತಿ ಅಗುತ್ತದೆ ಮತ್ತು ಮಳೆಯೂ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯು ಶಿಖರದ ಹಿಮನದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ.

— ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
ಎ. I ಮಾತ್ರ.
ಬಿ. II ಮಾತ್ರ.
ಸಿ. III ಮತ್ತು IV.
ಡಿ. ಮೇಲಿನೆಲ್ಲವೂ.

ಉತ್ತರ: ಡಿ.



●.2) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
i). ಗೌತಮ್ ಬುದ್ಧನನ್ನು ಶಕ್ಯಮುನಿ ಎಂದು ಕರೆಯಲಾಗುತ್ತದೆ.
ii).ಗೌತಮ್ ಬುದ್ಧನು ಕುಂದಗ್ರಾಮದಲ್ಲಿ ಜನಿಸಿದನು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ?.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: ಎ)



●.3) ಕುದಿಯುವ ಹಾಲು ಉಕ್ಕುವುದು ಆದರೆ ಕುದಿಯುವ ನೀರು ಉಕ್ಕುವುದಿಲ್ಲ ಏಕೆ?.
i) ಹಾಲು ನೀರಿಗಿಂತ ಸ್ವಲ್ಪ ಭಾರವಾಗಿರುವುದರಿಂದ .
ii) ಹಾಲು ನೀರಿಗಿಂತ ಹೆಚ್ಚು ಸ್ನಿಗ್ಧತೆ ಹೊಂದಿರುವುದರಿಂದ .
iii) ಗುಳ್ಳೆಗಳ ಕೆಳಗೆ ಹೆಚ್ಚಳಗೊಂಡ ಒತ್ತಡದ ಕಾರಣ.

— ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)



●.4).ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ .
i) ನಿಡಿದಾದ ಕಲ್ಲುಗಳು (Menhir) (ದೊಡ್ಡ ನಿಂತಿರುವ ಕಲ್ಲುಗಳು) ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಂಡುಬರುತ್ತವೆ.
ii) ಸಾಂಸ್ಕೃತಿಕ ಸಚಿವಾಲಯವು ವೆಂಗಚ್ಛಿಯಾ ದ ಬಳಿ ನಿಂತಿರುವ ನಿಡಿದಾದ ಕಲ್ಲುಗಳು ಮತ್ತು ಅದರ ಸುತ್ತಮುತ್ತಲಿನ ಗುಹೆಗಳು ಹಾಗು ಅರಣ್ಯವನ್ನು ಸಂರಕ್ಷಿತ ಪ್ರದೇಶಗಳು ಎಂದು ಘೋಷಿಸಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii).
(ಡಿ) ಯಾವುದೂ ಅಲ್ಲ.

ಉತ್ತರ: (ಸಿ)



●.5) ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಈ ಕೆಳಗಿನ ಯಾವ ಭಾಗಗಳಲ್ಲಿ ಕಂದಾಯ ನಿರಾಕರಣೆ ಚಳವಳಿ ನಡೆಸಲಾಗಿತ್ತು.
i) ಹಿರೇಕೆರೂರು
ii) ಅಂಕೋಲ
iii) ಸಿರಸಿ
iv) ವಿಧುರಾಶ್ವಥ್ಥ.

—ಮೇಲಿನ ಸ್ಥಳಗಳಲ್ಲಿ ಸರಿಯಾದುದು?
(ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: ಬಿ.


●.6).ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
i). ಮಹಾವೀರನನ್ನು "ಕಳಿಂಗ ಜಿನ" ಎಂದು ಕರೆಯಲಾಗುತ್ತದೆ.
ii). ಭದ್ರಬಾಹು ದಕ್ಷಿಣ ಭಾರತದಲ್ಲಿ ಜೈನ್ ಧರ್ಮ ಪ್ರಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ.
iii). ಅಶೋಕನ ಮೊಮ್ಮಗ ಸಂಪ್ರತಿಯು ಸುಹಸ್ಥಿ ಎಂಬ ಜೈನ ಸನ್ಯಾಸಿಯಿಂದ ಜೈನ ಧರ್ಮಕ್ಕೆ ಪರಿವರ್ತನೆಗೊಂಡನು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
(ಎ) (i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ : (ಬಿ)


●.7).ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
i). ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಗತ್ಯ ನಾಗರಿಕ ಸೇವೆಗಳನ್ನು ಒದಗಿಸುವವರ ಮುಷ್ಕರ ನಿಷೇಧಿಸಲು ಸರ್ಕಾರಕ್ಕೆ ಪ್ರಬಲ ಅಸ್ತ್ರವಾಗಿದೆ.
ii). (ಎಸ್ಮಾ) ಪ್ರಕಾರ ಜಲ ಹಾಗೂ ವಿದ್ಯುತ್‌ ತಯಾರಿಕೆ ಅಥವಾ ಉತ್ಪಾದನೆ, ಶೇಖರಣೆ, ಸಾಗಣೆ, ಸರಬರಾಜು, ವಿತರಣೆಗೆ ಸಂಬಂಧಿಸಿದ ಅಥವಾ ಸಾರಿಗೆ ಸೇವೆಗಳ ಮುಷ್ಕರ ನಿಷೇಧಕ್ಕೊಳಪಡುವಂತಹವು.
iii).ಈ ಕಾಯ್ದೆಯ ಪ್ರಕಾರ ಅಗತ್ಯ ಸೇವೆ ಒದಗಿಸುವವರು ಮುಷ್ಕರ ನಡೆಸಿದರೆ ಮಾತ್ರ ಜೈಲು ಶಿಕ್ಷೆಗೆ ಹಾಗು ದಂಡಕ್ಕೊಳಪಡುವರು. ಇದರಲ್ಲಿ ಮುಷ್ಕರಕ್ಕೆ ಪ್ರಚೋದನೆ ನೀಡಿದವರು ಹಾಗೂ ಕಾನೂನು ಬಾಹಿರ ಮುಷ್ಕರಕ್ಕೆ ಹಣಕಾಸಿನ ನೆರವು ನೀಡಿದವರಿಗೆ ಯಾವುದೇ ದಂಡ ವಿಧಿಸುವ ಕಾನೂನು ಇದರಲ್ಲಿ ಇಲ್ಲ.
iv). ಈ ಮೊದಲು 1994ರಲ್ಲಿ ಜಾರಿಗೆ ಬಂದಿದ್ದ ಈ ಕಾನೂನಿನ ಅವಧಿ 2004ರಲ್ಲಿ ಕೊನೆಗೊಂಡಿತ್ತು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ)(i), (ii) ಮತ್ತು (iii) ಮಾತ್ರ.
(ಬಿ) (i), (ii) ಮತ್ತು (iv) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ : (ಬಿ)


●.8).ಈ ಕೆಳಗಿನವುಗಳಲ್ಲಿ ಯಾರು ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವ ಸಮಿತಿಯ ಸದಸ್ಯರುಗಳಾಗಿರುವರು ?.
i). ಪ್ರಧಾನಿ.
ii). ಕೇಂದ್ರ ಜಾಗೃತ ಆಯುಕ್ತ.
iii). ಗೃಹ ಸಚಿವ.
 iv). ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅಥವಾ ಅವರು ನಾಮನಿರ್ದೇಶನ ಮಾಡುವ ನ್ಯಾಯಮೂರ್ತಿ.
 v). ವಿರೋಧ ಪಕ್ಷದ ನಾಯಕ.
 vi). ಗೃಹ ಕಾರ್ಯದರ್ಶಿ.

— ಮೇಲಿನವುಗಳಲ್ಲಿ ಯಾವುದು ಸರಿಯಾಗಿವೆ ಇದೆ ?.
(ಎ)(i), (iii) ಮತ್ತು (iv) ಮಾತ್ರ.
(ಬಿ) (i), (ii), (iii) ಮತ್ತು (vi) ಮಾತ್ರ.
(ಸಿ) (i), (iv) ಮತ್ತು (v) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಸಿ).
(ವಿವರಣೆ: ಸಿಬಿಐ ನಿರ್ದೇಶಕರ ಆಯ್ಕೆಯನ್ನು ಪ್ರಧಾನಿ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅಥವಾ ಅವರು ನಾಮನಿರ್ದೇಶನ ಮಾಡುವ ನ್ಯಾಯಮೂರ್ತಿಯೊಬ್ಬರು ಸದಸ್ಯರಾಗಿರುವ ಆಯ್ಕೆ ಸಮಿತಿಯು ಸೂಚಿಸಿದ ಹೆಸರಿನ ಅಧಾರದ ಮೇಲೆ ಕೇಂದ್ರ ಸರ್ಕಾರ ನಡೆಸಲಿದೆ.)



●.9).ಕೇಂದ್ರದ ಏಕರೂಪದ ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ಎಷ್ಟು ಸೇವೆಗಳು ಒಳಪಟ್ಟಿವೆ?
ಎ. 103
ಬಿ. 109
ಸಿ. 119
ಡಿ. 129

ಉತ್ತರ: ಸಿ.


●.10) ಭಾರತೀಯ ಅರಣ್ಯ ಮಸೂದೆ (ತಿದ್ದುಪಡಿ) 2012 ಬಗ್ಗೆ ಸರಿಯಾಗಿರುವುದು ?
(i) ಇದರ ಮುಖ್ಯ ಗುರಿ ಸಣ್ಣ ಅಪರಾಧಗಳಿಗೆ ಅರಣ್ಯ ನಿವಾಸಿಗಳಿಗೆ ಮತ್ತು ಆದಿವಾಸಿಗಳಿಗೆ ಕಿರುಕುಳ ಮತ್ತು ಕಾನೂನಿನ ಮುಂದೆ ನಿಲ್ಲಿಸುವುದನ್ನು ತಪ್ಪಿಸುವುದಾಗಿದೆ.
(II) ಈ ಅರಣ್ಯ ಕಾಯಿದೆಯಡಿ ಅರಣ್ಯ ಸಂಬಂಧಿ ಸಣ್ಣಪುಟ್ಟ ಅಪರಾಧಕ್ಕೆ ಕಡ್ಡಾಯವಾಗಿ ರೂ 50ರಿಂದ ರೂ 10,000 ವರೆಗೆ ದಂಡ ವಿಧಿಸುವುದಾಗಿದೆ.
(III) ಭಾರತೀಯ ಅರಣ್ಯ ಮಸೂದೆ (ತಿದ್ಡುಪಡಿ) ಪ್ರಕಾರ, ಅರಣ್ಯ ಸಂಬಂಧಿ ಅಪರಾಧ ಇತ್ಯರ್ಥಕ್ಕೆ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಸಭೆಗಳ ಲಿಖಿತ ರೂಪದ ಅನಿಸಿಕೆಗಳನ್ನು ಪಡೆಯುವುದು ಕೂಡ ಕಡ್ಡಾಯವಾಗಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ಇದೆ ?.
 (ಎ)(i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) (i), (ii) ಮತ್ತು (iii) ಮಾತ್ರ.

ಉತ್ತರ: ಡಿ.



●.11). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
(i). ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸದ ಒಣ ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ.
(ii). ಸರಕಾರವು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳ ನಿರ್ಮಾಣದಲ್ಲಿ ಶೇ100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ಇದೆ ?.
(ಎ)(i) ಮಾತ್ರ.
(ಬಿ) (ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) (i), (ii) ಮತ್ತು (iii) ಮಾತ್ರ.

ಉತ್ತರ: ಎ)



●.12) ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i). ಬಾರ್ಲಿಯು ರಬ್ಬಿ ಬೆಳೆಯಾಗಿದೆ.
(ii). ಜೋಳ ಹಿಂಗಾರು ಮತ್ತು ಮುಂಗಾರು ಬೆಳೆಯಾಗಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii).
(ಡಿ) ಯಾವುದೂ ಅಲ್ಲ.

ಉತ್ತರ: ಸಿ)


●.13) ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i).ನೆಲೊಂಗ್ ಕಣಿವೆಯು ಶೀತಲ ಮರುಭೂಮಿಯಾಗಿದೆ.
(ii).ನೆಲೊಂಗ್ ಕಣಿವೆಯು ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ.
(iii). ವಿದೇಶಿಯರಿಗೆ ಈ ಕಣಿವೆಯಲ್ಲಿ ಪ್ರವೇಶ ನಿಷಿದ್ಧ.
(iv). ಇದು ಹಿಮಾಚಲ ಪ್ರದೇಶದಲ್ಲಿದೆ.

— ಕೆಳಗಿನ ಯಾವ ಹೇಳಿಕೆಯು ನಿಜವಾಗಿದೆ?
(ಎ)(i), (ii) ಮತ್ತು (iii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಎ)



●.14) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i).ಓಡಿಯಾ ಭಾಷೆಯು ಇಂಡೋ-ಆರ್ಯನ್ ಗುಂಪಿನಿಂದ ಶಾಸ್ತ್ರೀಯ ಸ್ಥಾನಮಾನ ಪಡೆದ ಪ್ರಥಮ ಭಾಷೆಯಾಗಿದೆ.
(ii).ಸಂಸ್ಕೃತ ಭಾಷೆಯು ಪ್ರಥಮವಾಗಿ ಶಾಸ್ತ್ರೀಯ ಭಾಷೆಯಾಗಿ ಘೋಷಿಸಲ್ಪಟ್ಟ ಭಾಷೆ.

 — ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: (ಎ)



●.15) ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ.
(i). ಮಹಾನಿಯಂತ್ರಕರನ್ನು ಸಂವಿಧಾನದ 148 ನೇ ವಿಧಿಯ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ.
(ii). ಮಹಾನಿಯಂತ್ರಕರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಪಡೆಯಬಹುದಾದ ಎಲ್ಲಾ ಸೇವಾ-ಸವಲತ್ತುಗಳನ್ನು ಪಡೆಯುತ್ತಾರೆ
(iii). ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಲೆಕ್ಕಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ.
(iV). ಇವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅರ್ಹರಾಗಿರುತ್ತಾರೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(ಎ)(i) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: ಸಿ.

....ಮುಂದುವರೆಯುವುದು.

No comments:

Post a Comment