"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 14 June 2015

☀3ಡಿ ಲೋಹ ಮುದ್ರಣ ಯಂತ್ರ: ವಿಜ್ಞಾನ ಲೋಕದಲ್ಲೊಂದು ಕ್ರಾಂತಿಕಾರಿ ಅವಿಷ್ಕಾರ:  (ಟಿಪ್ಪಣಿ ಬರಹ)  (3D Metal Printer):(Short Notes) 

☀3ಡಿ ಲೋಹ ಮುದ್ರಣ ಯಂತ್ರ: ವಿಜ್ಞಾನ ಲೋಕದಲ್ಲೊಂದು ಕ್ರಾಂತಿಕಾರಿ ಅವಿಷ್ಕಾರ:  (ಟಿಪ್ಪಣಿ ಬರಹ)
(3D Metal Printer):(Short Notes)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ವಿಜ್ಞಾನ (ಪ್ರಚಲಿತ)
(General Science)


— ವಿಜ್ಞಾನಿಗಳು ಇದೀಗ ಅತಿ ಕಡಿಮೆ ವೆಚ್ಚದಲ್ಲಿ, ಮುಕ್ತವಾಗಿ ಎಲ್ಲೆಡೆ ಲಭ್ಯವಾಗಬಲ್ಲಂತಹ 3ಡಿ ಲೋಹ ಮುದ್ರಣಯಂತ್ರವನ್ನು (3 ಡಿ ಮೆಟಲ್ ಪ್ರಿಂಟರ್) ನಿರ್ಮಿಸಿದ್ದಾರೆ. ಅಂದರೆ ಯಾರು ಬೇಕಿದ್ದರೂ ಅದನ್ನು ಬಳಸಿ ತಮಗೆ ಬೇಕಾದ ಲೋಹದ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು.


●.ಏನಿದು ಆವಿಷ್ಕಾರ?
━━━━━━━━━━━━

— ಈವರೆಗೆ, 3ಡಿ ಮುದ್ರಣ ಪಾಲಿಮರ್ ವ್ಯವಹಾರವಾಗಿತ್ತು. ಬಹುತೇಕ ನಿರ್ಮಾಪಕರು 3ಡಿ ಮುದ್ರಣಯಂತ್ರಗಳನ್ನು ಬಳಸಿಕೊಂಡು ಟೆಂಟ್ ನಿಂದ ಚೆಸ್ ಸೆಟ್ ವರೆಗೆ ಎಲ್ಲ ಬಗೆಯ ಗ್ರಾಹಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮಿಸುತ್ತಿದ್ದರು. ಮಿಷಿಗನ್ ತಂತ್ರಜ್ಞಾನ ವಿಶ್ವ ವಿದ್ಯಾಲಯದ ಜೊಶುವಾ ಪೀಯರ್ಸ್ ಮತ್ತು ಅವರ ತಂಡವು ನಿರ್ಮಿಸಿರುವ ಹೊಸ 3ಡಿ ಮುದ್ರಣಯಂತ್ರವು ಈ ಉತ್ಪನ್ನಗಳ ಪಟ್ಟಿಗೆ ಇದೀಗ ಸುತ್ತಿಗೆಯನ್ನೂ ಸೇರಿಸಿದೆ.ವಿವಿಧ ಉತ್ಪನ್ನಗಳ ವಿವರವಾದ ನಕ್ಷೆಗಳು, ಸಾಫ್ಟ ವೇರ್ ಇತ್ಯಾದಿಗಳೆಲ್ಲ ಈಗ ಮುಕ್ತವಾಗಿ ಎಲ್ಲೆಡೆಯಲ್ಲೂ ಲಭಿಸುತ್ತವೆ. ಅಂದರೆ ಈಗ ಇದನ್ನು ಬಳಸಿಕೊಂಡು ಯಾರು ಬೇಕಿದ್ದರೂ ಈ ಹೊಸ 3 ಡಿ ಮುದ್ರಣಯಂತ್ರವನ್ನು ತಮ್ಮ ಸ್ವಂತ ಕೆಲಸಗಳಿಗಾಗಿ ತಯಾರಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.


●.ಪೀಯರ್ಸ್ ತಂಡ :
━━━━━━━━━━━

— ಪೀಯರ್ಸ್ ತಂಡವು 1500 ಅಮೆರಿಕನ್ ಡಾಲರ್ ಗೂ ಕಡಿಮೆ ಬೆಲೆಯ ಸಾಧನಗಳನ್ನು ಬಳಸಿ ಈ 3 ಡಿ ಲೋಹ ಮುದ್ರಣಯಂತ್ರವನ್ನು ತಯಾರಿಸಿದೆ.ಅವರು ಇದಕ್ಕಾಗಿ ಬಳಸಿದ ವಸ್ತುಗಳಲ್ಲಿ ಪುಟ್ಟ ಕಮರ್ಷಿಯಲ್ ಮಿಗ್ ವೆಲ್ಡರ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭಿಸುವ ಮೈಕ್ರೋ - ಕಂಟ್ರೋಲರ್ ಸೇರಿವೆ.ವಾಣಿಜ್ಯ ಬಳಕೆಯ ಲೋಹ ಮುದ್ರಣಯಂತ್ರಗಳು ಲಭ್ಯ ಇವೆ. ಆದರೆ ಅವು ತುಂಬಾ ದುಬಾರಿ. ಅವುಗಳ ಬೆಲೆ 5 ಲಕ್ಷ ಡಾಲರ್ ಗಳಿಗೂ ಹೆಚ್ಚು.


●.ಅಪಾಯಗಳು:
━━━━━━━━━━

— 3ಡಿ ಲೋಹ ಮುದ್ರಣಯಂತ್ರವು ಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುವುದರ ಜೊತೆಗೇ, ಮನೆಯಲ್ಲೇ ಮದ್ದು ಗುಂಡುಗಳನ್ನು ತಯಾರಿಸುವ ಅಪಾಯವೂ ಇದೆ. ವಾಣಿಜ್ಯ ಬಳಕೆಯ ಲೋಹ ಹಾಗೂ ಪ್ಲಾಸ್ಟಿಕ್ 3 ಡಿ ಮುದ್ರಣ ಯಂತ್ರಗಳನ್ನು ಬಳಸಿ ಪಿಸ್ತೂಲುಗಳನ್ನು ತಯಾರಿಸಿರುವ ಕೆಲವರು ಇದನ್ನು ತಮ್ಮ ಉದ್ದೇಶಕ್ಕೆ ಬಳಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

No comments:

Post a Comment