★ “ಟೀಕಾ ಎಕ್ಸ್ ಪ್ರೆಸ್ ಯೋಜನೆ (Teeka Express programme)” :
(ಟಿಪ್ಪಣಿ ಬರಹ)
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡಿ ಈ “ಟೀಕಾ ಎಕ್ಸ್ ಪ್ರೆಸ್” ಯೋಜನೆಯನ್ನು ಜಾರಿಗೆ ತಂದಿದ್ದು, ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಕಾಡುವ ಕಾಯಿಲೆಗಳಿಂದ ರಕ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.
* ಏನಿದು ಟೀಕಾ ಎಕ್ಸ್ ಪ್ರೆಸ್ ಯೋಜನೆ:
ಅಗತ್ಯವಿರುವ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯೇ ಟೀಕಾ ಎಕ್ಸ್ ಪ್ರೆಸ್ ಯೋಜನೆ.
ಈ ಯೋಜನೆಯಡಿ ಲಸಿಕೆ ಹಾಕಿಸುವ ಸ್ಥಳಕ್ಕೆ ಔಷಧಿ ಸಂರಕ್ಷಣಾ ಕೇಂದ್ರದಿಂದ ಇದಕ್ಕಾಗಿಯೇ ಮೀಸಲಿಡಲಾದ ಟೀಕಾ ಎಕ್ಸ್ ಪ್ರೆಸ್ ವಾಹನದಲ್ಲಿ ಸಾಗಿಸಲಾಗುವುದು.
*.ಔಷಧಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಸಮರ್ಪಕ ಬಳಕೆ ಮತ್ತು ಬಳಕೆಯಾಗದೇ ಇರುವ ಔಷಧಗಳನ್ನು ಪುನಃ ಹಿಂದಕ್ಕೆ ಕೊಂಡ್ಯೊಯ್ಯುವ ಮೂಲಕ ಔಷಧಿಗಳು ವಿನಾಃ ಕಾರಣ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ.
*.ಸೂಕ್ತ ಆರೋಗ್ಯ ಚಿಕಿತ್ಸೆ ಇಲ್ಲದ ಸ್ಥಳಗಳಲ್ಲಿ ಇದು ಮೊಬೈಲ್ ಕ್ಲಿನಿಕ್ ಆಗಿ ಸೇವೆ ನಿರ್ವಹಸಲಿದೆ. ಅಲ್ಲದೇ ಬಳಕೆಯಾದ ಔಷಧಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಇದು ಅನುಕೂವಾಗಲಿದೆ.
*.ಮೊದಲ ಹಂತದಲ್ಲಿ ಈ ಯೋಜನೆಯನ್ನು ಅತಿ ಅಗತ್ಯವಿರುವ 69 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಇದಕ್ಕಾಗಿ 1,850 ವಾಹನಗಳನ್ನು ಖರೀದಿಸಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.
*.ಈ ಯೋಜನೆಯ ಅನುಷ್ಠಾನಕ್ಕೆ ತಗುಲುವ ವೆಚ್ಚವನ್ನು “ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್” ಅಡಿ ಭರಿಸಲಾಗುವುದು.
No comments:
Post a Comment