"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 14 April 2014

★ ಭಾರತದ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾದ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಗುರುತಿಸಿರಿ. (in 250 words) (IAS-2000 / GS-I)

★ ಭಾರತದ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾದ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಗುರುತಿಸಿರಿ.
(in 250 words) (IAS-2000 / GS-I)

 * ಭಾರತದಲ್ಲಿನ ಇಂದಿನ ಜನಪ್ರತಿನಿಧಿಗಳು 30 ಅಥವಾ 40 ವರ್ಷಗಳ ಹಿಂದೆ ಇದ್ದ ಜನಪ್ರತಿನಿಧಿಗಳಿಗಿಂತ ಭಿನ್ನವಾಗಿದ್ದಾರೆ. ರಾಜ್ಯ ಶಾಸನ ಸಭೆಗಳಲ್ಲಿ ಬಡಿದಾಟಗಳು ಸಾಮಾನ್ಯ ದೃಶ್ಯವಾಗಿವೆ. ಸಂಸತ್ತಿನಲ್ಲಿ ಅಸಂಸದೀಯ ನಡುವಳಿಕೆಗಳು ಅಧಿಕವಾಗಿವೆ. ಸಂಶಯಿತ ಹಿನ್ನೆಲೆಯ ವ್ಯಕ್ತಿಗಳು ಶಾಸನ ಸಭೆಗಳಲ್ಲಿ ಅಧಿಕವಾಗುತ್ತಿದ್ದಾರೆ. ಜನಪ್ರತಿನಿಧಿಗಳು ಚಲಾವಣೆಯಾದ ಮತದ ಅಲ್ಪಸಂಖ್ಯಾತ ಮತಗಳನ್ನು ಮಾತ್ರ ಪಡೆದರೂ ಆಯ್ಕೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಗೋಸ್ವಾಮಿ ಸಮಿತಿ ಚುನಾವಣಾ ಆಯೋಗವು ಸೇರಿದಂತೆ ಅನೇಕ ಮೂಲೆಗಳಿಂದ ಅನೇಕ ಸಲಹೆಗಳು ಬಂದಿವೆ, ಬರುತ್ತಲೂ ಇವೆ. ಈ ನಿಟ್ಟಿನಲ್ಲಿ ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆಗೆ ನಾವು ಎಲ್ಲಾ ಮೂಲೆಗಳಿಂದ ಬರುವ ಸಲಹೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಪಂಚಾಯತ್ ರಾಜ್ ಸಂಸ್ಥೆಗಳನ್ನುಳಿದು ಉಳಿದ ಸದನಗಳಿಗೆ ಪರೋಕ್ಷ ಚುನಾವಣೆಯನ್ನು ರದ್ದು ಮಾಡಬೇಕು. ವಿಜೇತ ಅಭ್ಯರ್ಥಿಯು ಶೇ.50 ಕ್ಕಿಂತ ಅಧಿಕ ಮತಗಳನ್ನು ಪಡೆಯುವುದನ್ನು ಕಡ್ಡಾಯ ಮಾಡಬೇಕು. ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಪ್ರಭಾವ ಕುಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರಾಜಕೀಯ ರಂಗ ಅಪರಾಧೀಕರಣ ಆಗುವುದನ್ನು ಇದರಿಂದ ತಡೆಯಬಹುದು. ಯಾವುದೇ ಅಪರಾಧಿ ಹಿನ್ನೆಲೆಯಿರುವ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು. ಚುನಾವಣೆಯಲ್ಲಿ ಹಣದ ಪ್ರಭಾವ ತಪ್ಪಿಸಲು ರಾಜ್ಯವೇ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಭರಿಸಬೇಕು. ಚುನಾವಣಾ ಆಕ್ರಮಗಳನ್ನು ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಕಡ್ಡಾಯವಾಗಿ ಬಳಸಿ, ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಬೇಕು. ರಾಜ್ಯಗಳಲ್ಲಿ ಚುನಾವಣಾ ಸಮಯದಲ್ಲಿ ಆಡಳಿತ ಪಕ್ಷದಿಂದ ಆಡಳಿತ ಯಂತ್ರ ದುರುಪಯೋಗವಾಗದಂತೆ ತಡೆಯಲು, ಚುನಾವಣಾ ಸಮಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಹಾಗೂ ಚುನಾವಣಾ ಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಕೈಗೊಂಡಿರುವ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಸರ್ಕಾರಿ ಯಂತ್ರವನ್ನು ದುರುಪಯೋಗವಾಗದಂತೆ ತಡೆಹಿಡಿಯುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿ ತರಬೇಕು.

No comments:

Post a Comment