"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 December 2019

•► "ಭಾರತದ ಸಂವಿಧಾನದಲ್ಲಿ 'ವಿಪ್'‌ನ ಪಾತ್ರ" ‌: (The Role of Whip in Indian Constitution)

•► "ಭಾರತದ ಸಂವಿಧಾನದಲ್ಲಿ 'ವಿಪ್'‌ನ ಪಾತ್ರ" ‌:
(The Role of Whip in Indian Constitution)

━━━━━━━━━━━━━━━━━━━━━
★ ಭಾರತದ ಸಂವಿಧಾನ
(Indian Constitution)

★ ಪತ್ರಿಕೆ-3 ಸಾಮಾನ್ಯ ಅಧ್ಯಯನ-2
(Paper-3 General Studies-2)



• ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆಯಾಗಿದೆ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯ ಮೊದಲಾದ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲ್ಗೊಳ್ಳಲು ತಮ್ಮ ಜನಪ್ರತಿನಿಧಿಗಳಿಗೆ ಪಕ್ಷಗಳು ವಿಪ್ ಜಾರಿ ಮಾಡುತ್ತವೆ.

• ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್‌ ಅನ್ನು ಅಸ್ತ್ರದಂತೆ ಬಳಸುತ್ತದೆ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್‌ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ.

• ಪಕ್ಷದ ಮುಖ್ಯ ಸಚೇತಕರು ವಿಪ್‌ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್‌ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.

• ಪಕ್ಷದ 'ಬಿ' ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.


★ ವಿಪ್‌ನಲ್ಲಿ ಮೂರು ವಿಧಗಳು :
ಸಿಂಗಲ್ ಲೈನ್/ ಒನ್‌ಲೈನ್, ಡಬಲ್ ಲೈನ್ ಮತ್ತು ಥ್ರೀ ಲೈನ್ ವಿಪ್​
• ಒನ್‌ಲೈನ್‌ ವಿಪ್‌:  ವಿಶ್ವಾಸ ಮತ ಸಂದರ್ಭದಲ್ಲಿ ಸರಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್‌ ಅನ್ನು ಒನ್‌ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.

• ಟೂ ಲೈನ್‌ ವಿಪ್‌: ಬಜೆಟ್‌ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ಜಾರಿ ಮಾಡಲಾಗುವ ವಿಪ್‌ ಅನ್ನು ಟೂ ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.

• ತ್ರೀ ಲೈನ್‌ ವಿಪ್‌: ಅಧಿವೇಶನದಲ್ಲಿ ಹಾಜರಾತಿ, ವಿತ್ತೀಯ ಕಾರ‍್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್‌, ಅನುಮೋದನೆ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್‌.


★ ವಿಪ್‌ ಕುರಿತು ಮಹತ್ವದ ವಿಷಯಗಳು:
• ಸಿಂಗಲ್ ಲೈನ್ ವಿಪ್​ನಲ್ಲಿ ಮತದಾನದ ದಿನಾಂಕ ಮೊದಲಾದ ವಿವರವನ್ನು ನೋಟೀಸ್ ಮೂಲಕ ನೀಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನೂ ಇರುವುದಿಲ್ಲ.

• ಡಬಲ್ ಲೈನ್ ವಿಪ್​ನಲ್ಲಿ ಮತದಾನ ಮಾಡಲು ಪಕ್ಷವು ಸ್ವಲ್ಪಮಟ್ಟಿಗೆ ಕಡ್ಡಾಯ ಮಾಡಿರುತ್ತದೆ. ಸರಿಯಾದ ಕಾರಣ ಕೊಟ್ಟು ಮತದಾನದಿಂದ ದೂರು ಉಳಿಯುವ ಸ್ವಾತಂತ್ರ್ಯವನ್ನ ಕೊಟ್ಟಿರಲಾಗುತ್ತದೆ.

ಇನ್ನು, ಮೂರನೇಯದಾದ ಥ್ರೀಲೈನ್ ವಿಪ್​ನಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರಲಾಗುತ್ತದೆ.

• ಥ್ರೀಲೈನ್ ವಿಪ್ ಪಡೆದವರು ಮತದಾನ ಮಾಡಲಿಲ್ಲವೆಂದರೆ ಪಕ್ಷದಿಂದಲೇ ಅಮಾನತಾಗುವ ಸಾಧ್ಯತೆ ಇರುತ್ತದೆ. ಪಕ್ಷಗಳು ಕೊಡುವ ವಿಪ್ ಸಾಮಾನ್ಯವಾಗಿ ಥ್ರೀ ಲೈನ್ ವಿಪ್ ಆಗಿರುತ್ತದೆ.

- ಕಾಯಿದೆ ಪ್ರಕಾರ ಯಾವುದೇ ಶಾಸಕ, ಸಂಸದ ತನ್ನ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದ ಬಳಿಕವಷ್ಟೇ ಸ್ಪೀಕರ್‌ ಕ್ರಮ ಕೈಗೊಳ್ಳಬಹುದು.


★ ವಿಪ್ ಯಾವಾಗ ಪ್ರಯೋಗಿಸಬಹುದು?
- ಇದು ಯಾವ ಸದಸ್ಯರು, ಶಾಸಕರ ಮೇಲೆ ವಿಶ್ವಾಸ ಇರೋದಿಲ್ವೋ, ಪಕ್ಷದ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಕಂಡುಬರುತ್ತೋ, ಅಂತಹ ಟೈಮ್‌ನಲ್ಲಿ ವಿಪ್‌ ಜಾರಿ ಮಾಡಲಾಗುತ್ತದೆ. ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದಾದರೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.

Wednesday, 12 June 2019

ಹಿಂದೂ ಮಹಾಸಾಗರ (ವಲಯ) ಅಂಚಿನ ಸಹಕಾರ ಸಂಘಟನೆ (Indian Ocean Rim Association(IORA)

•► ಹಿಂದೂ ಮಹಾಸಾಗರ (ವಲಯ) ಅಂಚಿನ ಸಹಕಾರ ಸಂಘಟನೆ
(Indian Ocean Rim Association(IORA))  :
━━━━━━━━━━━━━━━━━━━━━


 — ಹಿಂದೂ ಮಹಾಸಾಗರದ ಗಡಿಪ್ರದೇಶದ ಕರಾವಳಿ ದೇಶಗಳನ್ನು ಒಳಗೊಂಡಿರುವ ಒಂದು ಅಂತರರಾಷ್ಟ್ರೀಯ ಸಂಘಟನೆ.
- ಎಲ್ಲ ಸರ್ಕಾರಗಳ, ವ್ಯವಹಾರ ಮತ್ತು ಶೈಕ್ಷಣಿಕ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಒಂದು ತ್ರಿಪಕ್ಷೀಯ (Trilateral) ಒಕ್ಕೂಟ
- ಮಾರಿಷಸ್ ನ ಎಬಿನ್ (Ebene, Mauritius) ನಲ್ಲಿರುವ IORA ನ ಸಚಿವಾಲಯದೊಂದಿಗೆ ಸಹಕರಿಸುವುದು.
 - ಇಂಡಿಯನ್‌ ಓಶನ್‌ ರಿಮ್‌ ಅಸೋಸಿಯೇಶನ್‌ನಲ್ಲಿ ಭಾರತ, ಆಸ್ಪ್ರೇಲಿಯ ಸೇರಿದಂತೆ 21 ದೇಶಗಳಿದ್ದು, ಈ ಪ್ರದೇಶದ ವಾಣಿಜ್ಯ ಬೆಳವಣಿಗೆ, ಮುಕ್ತ ವ್ಯಾಪಾರ ವಹಿವಾಟು, ಭದ್ರತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲು ಕಟಿಬದ್ಧವಾಗಿವೆ.
- ಇತ್ತೀಚೆಗೆ, ಮಾಲ್ಡೀವ್ಸ್ ಸೇರಿಕೊಂಡಿದೆ
-  ಮ್ಯಾನ್ಮಾರ್ ಮತ್ತು ಪಾಕಿಸ್ತಾನ ಇದರ ಸದಸ್ಯ ರಾಷ್ಟ್ರ ಅಲ್ಲ
- ಭಾರತ ಇದರ ಒಂದು ಸದಸ್ಯ.

Monday, 22 April 2019

•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ - NGT (IAS / KAS Prelims 2019) (National Green Tribunal)

•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ - NGT  (IAS / KAS Prelims 2019)
(National Green Tribunal)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪೂರ್ವಿಭಾವಿ ಪರೀಕ್ಷೆ ತಯಾರಿ
(IAS / KAS Prelims Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)




• ಇದು ಪರಿಸರವನ್ನು ರಕ್ಷಣೆಗೆ ಸಂಬಂಧಪಟ್ಟ, ಅರಣ್ಯ ಮತ್ತು ಪ್ರ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಪಟ್ಟ, ಪರಿಸರದ ಬಗೆಗಿನ ಕಾನೂನಾತ್ಮಕ ಹಕ್ಕುಗಳ ಜಾರಿಗೆ ಸಂಬಂಧಪಟ್ಟ ಮತ್ತು  ಪರಿಸರ ಹಾನಿಯಿಂದಾಗಿ ಆಸ್ಥಿಪಾಸ್ತಿಗಳ ನಷ್ಟಕ್ಕೆ ಗುರಿಯಾದವರಿಗೆ ಪುನರ್‌ವಸತಿ ಮತ್ತು ಪರಿಹಾರವನ್ನು ಕೊಡುವುದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಹೊಂದಿದೆ.
• ಪರಿಸರಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಅಗತ್ಯವಿರುವಷ್ಟು ಪರಿಣಿತಿಯಿಂದ ವಿಲೇವಾರಿ ಮಾಡಲೆಂದೇ ಈ ಮಂಡಳಿಯನ್ನು ಸ್ಥಾಪಿಸಲಾಯಿತು.

• ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ಥಾಪನೆಯಾದುದು 2010ರಲ್ಲಿ.
• 2010ರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯನ್ವಯ ಈ ಹಸಿರು ನ್ಯಾಯಮಂಡಳಿಯು ಏರ್ಪಟ್ಟಿದೆ.

• ಇದರ ಮುಖ್ಯ ಕಚೇರಿ ದೆಹಲಿಯಲ್ಲಿ ಇದೆ.
• ಭೋಪಾಲ್, ಪುಣೆ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಪ್ರಾಂತೀಯ ಕೇಂದ್ರಗಳಿವೆ.

• ಈ ನ್ಯಾಯಮಂಡಳಿಯ ಆದೇಶಗಳನ್ನು ಕೇವಲ ಸುಪ್ರೀಂ ಕೋರ್ಟು ಮಾತ್ರ ಬದಲಾಯಿಸಬಲ್ಲದು.

• ಇದರಲ್ಲಿ ಅಧ್ಯಕ್ಷರೂ ಸೇರಿದಂತೆ ಐದು ಮಂದಿ ಸದಸ್ಯರಿದ್ದಾರೆ. ಇವರೆಲ್ಲ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ ಅನುಭವ ಇರುವವರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಪರಿಣತಿ ಇರುವ, ಕಾನೂನು ಬಲ್ಲ ತಜ್ಞರೂ ಇದಕ್ಕೆ ನೆರವಾಗುತ್ತಿದ್ದಾರೆ.

• ಈವರೆಗೆ ಇದ್ದ ಕಾಯಿದೆಯ ಪ್ರಕಾರ ಹಸಿರು ಪೀಠದ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟಿನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಅಥವಾ ಯಾವುದಾದರೂ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಷ್ಟೆ ನೇಮಿಸಬಹುದಿತ್ತು. ಅರ್ಥಾತ್ ನ್ಯಾಯಿಕ ವಿಚಾರಗಳಲ್ಲಿ ಅನುಭವ ಇರುವವರು ಮಾತ್ರ ಈ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಹೊಸ ನಿಯಮಾವಳಿಗಳ ಪ್ರಕಾರ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗುವ ಅರ್ಹತೆ ಪಡೆದ ಯಾರು ಬೇಕಾದರೂ ಪೀಠದ ಮುಖ್ಯಸ್ಥರಾಗಬಹುದು. ಅಂದರೆ ಯಾವುದೇ ಹೈಕೋರ್ಟಿನಲ್ಲಿ 10 ವರ್ಷಗಳ ಕಾಲ ವಕೀಲನಾಗಿ ಸೇವೆ ಸಲ್ಲಿಸುವ ಮೂಲಕ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗಲು ತಾಂತ್ರಿಕವಾಗಿ ಅರ್ಹತೆ ಪಡೆದ ಯಾರನ್ನು ಬೇಕಾದರೂ ಹಸಿರು ಪೀಠದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬಹುದು. ಅಲ್ಲದೆ ಈವರೆಗೆ ಹಸಿರು ನ್ಯಾಯಮಂಡಳಿಯ ಇತರ ಸದಸ್ಯರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನೇಮಕವಾದ ಸಮಿತಿಯು ಆಯ್ಕೆ ಮಾಡುತ್ತಿತ್ತು. ಆದರೆ ಇನ್ನು ಮುಂದೆ ಮಂಡಳಿಯ ಸದಸ್ಯರನ್ನು ಸರ್ಕಾರಿ ಅಧಿಕಾರಿಗಳು ಆಯ್ಕೆ ಮಾಡುತ್ತಾರೆ.

• ಪರಿಸರ ಎನ್ನುವುದು ವಿಶಾಲವ್ಯಾಪ್ತಿಯದು. ಅರಣ್ಯ ಪರಿಸರ, ಜೈವಿಕ ವೈವಿಧ್ಯ, ನೆಲ-ನೀರು-ಬಾನಿನ ಮಾಲಿನ್ಯದ ಮೇಲಿನ ನಿಗಾ, ಸಂಸ್ಥೆಗಳು ಮಾಡುವ ಪರಿಸರ ವಿರೋಧಿ ಚಟುವಟಿಕೆಗಳು- ಇವೆಲ್ಲವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. ಎಷ್ಟೋ ವೇಳೆ ಸರ್ಕಾರದ ಕ್ರಮದ ವಿರುದ್ಧವೇ ತೀರ್ಪು ಕೊಡಬೇಕಾಗುತ್ತದೆ. ಇಂಥ ಸಂದರ್ಭಗಳು ಅನೇಕವಿವೆ.

• ಈವರೆಗೆ 25,447 ಮೊಕದ್ದಮೆಗಳನ್ನು ಇತ್ಯರ್ಥ ಮಾಡಿರುವುದು ಈ ಸಂಸ್ಥೆಗಿರುವ ಜವಾಬ್ದಾರಿಯ ಸಂಕೇತ.