ಇತ್ತೀಚೆಗೆ ಸುದ್ದಿಯಲ್ಲಿದ್ದ ರಾಷ್ಟ್ರೀಯ, ಅಂತರರಾಷ್ಟ್ರೀಯ ಜಂಟಿ ಸಮರಾಭ್ಯಾಸಗಳು: (Recently held major National, International joint military exercises (bilateral and multilateral))
━━━━━━━━━━━━━━━━━━━━━━━━━━━━━━━━━━
ಭಾರತದಲ್ಲಿ ಇತ್ತೀಚೆಗೆ ನಡೆದ ಪ್ರಮುಖ ದ್ವಿಪಕ್ಷೀಯ, ಬಹುಪಕ್ಷೀಯ ಹಾಗೂ ದೇಶೀಯ ತ್ರಿವಿಧ ಪಡೆಗಳ ಜಂಟಿ ಮಿಲಿಟರಿ ಸಮರಾಭ್ಯಾಸಗಳು:
ಅಂತರರಾಷ್ಟ್ರೀಯ ಜಂಟಿ ಸಮರಾಭ್ಯಾಸಗಳು
- ವಜ್ರ ಪ್ರಹಾರ (Vajra Prahar): ಭಾರತ ಮತ್ತು ಅಮೆರಿಕದ ವಿಶೇಷ ಪಡೆಗಳ (Special Forces) ನಡುವೆ ಹಿಮಾಚಲ ಪ್ರದೇಶದ ಬಕ್ಲೋಹ್‌ನಲ್ಲಿ ನಡೆದ ಜಂಟಿ ಸಮರಾಭ್ಯಾಸ.
- ಧರ್ಮ ಗಾರ್ಡಿಯನ್ (Dharma Guardian): ಭಾರತ ಮತ್ತು ಜಪಾನ್ ಭೂಸೇನೆಗಳ ನಡುವೆ ಉತ್ತರಾಖಂಡದಲ್ಲಿ ನಡೆದ ವಾರ್ಷಿಕ ಸಮರಾಭ್ಯಾಸ.
- ಖಂಜರ್ (Khanjar): ಭಾರತ ಮತ್ತು ಕಿರ್ಗಿಸ್ತಾನ್ ಸೇನೆಗಳ ನಡುವೆ ಅಸ್ಸಾಂನ ಮಿಸ್ಸಾಮಾರಿಯಲ್ಲಿ ನಡೆದ ವಿಶೇಷ ಕಾರ್ಯಾಚರಣೆ ತಾಲೀಮು.
- ಸೈಕ್ಲೋನ್ (Cyclone): ಭಾರತ ಮತ್ತು ಈಜಿಪ್ಟ್ ವಿಶೇಷ ಪಡೆಗಳ ನಡುವೆ ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ನಡೆದ ಜಂಟಿ ತಾಲೀಮು.
- ಡಸ್ಟ್ಲಿಕ್ (Dustlik): ಭಾರತ ಮತ್ತು ಉಜ್ಬೇಕಿಸ್ತಾನ್ ಸೇನೆಗಳ ನಡುವೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಮರಾಭ್ಯಾಸ.
- ಟೈಗರ್ ಟ್ರಯಂಫ್ (Tiger Triumph): ಭಾರತ ಮತ್ತು ಅಮೆರಿಕದ ತ್ರಿವಿಧ ಪಡೆಗಳು ಭಾಗವಹಿಸಿದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಅಭ್ಯಾಸ (ವಿಶಾಖಪಟ್ಟಣಂ ಮತ್ತು ಬಂಗಾಳ ಕೊಲ್ಲಿ ಕರಾವಳಿ).
- ಹರಿಮೌ ಶಕ್ತಿ (Harimau Shakti): ಭಾರತ ಮತ್ತು ಮಲೇಷ್ಯಾ ಸೇನೆಗಳ ನಡುವೆ ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ನಡೆದ ಸಮರಾಭ್ಯಾಸ.
- ಮೈತ್ರಿ (Maitree): ಭಾರತ ಮತ್ತು ಥೈಲ್ಯಾಂಡ್ ಸೇನೆಗಳ ನಡುವೆ ಮೇಘಾಲಯದ ಉಮ್ರೋಯಿ ಮಿಲಿಟರಿ ತಾಣದಲ್ಲಿ ನಡೆದ ಜಂಟಿ ಕಾರ್ಯಾಚರಣೆ.
ದೇಶೀಯ ತ್ರಿವಿಧ ಪಡೆಗಳ ಜಂಟಿ ಸಮರಾಭ್ಯಾಸಗಳು
- ತ್ರಿಶೂಲ್ (Exercise Trishul): ಭಾರತೀಯ ಭೂಸೇನೆ, ವಾಯುಪಡೆ, ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಬಿಎಸ್‌ಎಫ್ ಜಂಟಿಯಾಗಿ ರಾಜಸ್ಥಾನ, ಗುಜರಾತ್ ಹಾಗೂ ಉತ್ತರ ಅರಬ್ಬಿ ಸಮುದ್ರ ಭಾಗದಲ್ಲಿ ನಡೆಸಿದ ಬೃಹತ್ ಜಂಟಿ ತಾಲೀಮು.
- ಪೂರ್ವಿ ಪ್ರಚಂಡ ಪ್ರಹಾರ (Poorvi Prachand Prahar): ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಡ್ರೋನ್ ತಂತ್ರಜ್ಞಾನ ಮತ್ತು ಸುಧಾರಿತ ಫಿರಂಗಿ ಪಡೆಗಳನ್ನು ಸಂಯೋಜಿಸಿ ಮೂರೂ ಪಡೆಗಳು ನಡೆಸಿದ ಹೈ-ಆಲ್ಟಿಟ್ಯೂಡ್ ಜಂಟಿ ಕಾರ್ಯಾಚರಣೆ.
- ಆಂಫೆಕ್ಸ್ (AMPHEX): ಕರ್ನಾಟಕದ ಕಾರವಾರ ಕರಾವಳಿಯಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿದ ಉಭಯವಾಸಿ (Amphibious/ಸಮುದ್ರದಿಂದ ನೆಲಕ್ಕೆ ದಾಳಿ ನಡೆಸುವ) ಸಮರಾಭ್ಯಾಸ.
- ಭಾರತ್ ಶಕ್ತಿ (Bharat Shakti): ರಾಜಸ್ಥಾನದ ಪೋಖ್ರಾನ್‌ನಲ್ಲಿ ಸಂಪೂರ್ಣ ಸ್ವದೇಶಿ ನಿರ್ಮಿತ ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ನಡೆಸಲಾದ ತ್ರಿವಿಧ ಪಡೆಗಳ ಸಮಗ್ರ ಶಕ್ತಿ ಪ್ರದರ್ಶನ.
No comments:
Post a Comment