"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 23 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ II: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

●.ಪಿಡಿಓ (PDO) ಅಧ್ಯಯನ ಸಾಮಗ್ರಿ II: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



16. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.

17. ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.

18. ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.

19. ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.

20. ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು

21. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.

22. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.

23. ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.

24. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.

25. ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು .

26. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಯು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿ / ಕ್ಷೇತ್ರ ಸಿಬ್ಬಂದಿಗಳಿಗೆ ಸಭೆಯ ನೋಟಿಸನ್ನು ನೀಡಬೇಕು .

27. ಗ್ರಾಮ ಪಂಚಾಯಿತಿಗೆ ಸಾಮಾನ್. ಸಭೆಗೆ ಏಳು ಪೂರ್ಣ ದಿನಗಳ ನೋಟೀಸನ್ನು ನೀಡಬೇಕು . ಸಭೆಯ ಸೂಚನಾ ಪತ್ರದ ಪ್ರತಿಯನ್ನು ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಹಚ್ಚಿರಬೇಕು.

28. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಅರ್ಧ ಭಾಗ ( ಶೇ.50 ) ಸಭೆಯ ಕೋರಂ ಆಗಿರುತ್ತದೆ.

29. ಗ್ರಾಮ ಪಂಚಾಯಿತಿ ಸಭೆಗೆ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯಬೇಕು.

30. ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದಿನ ದಿನಕ್ಕೆ ಅಥವಾ ತರುವಾಯದ ದಿನಕ್ಕೆ ಮುಂದೂಡಬಹುದು , ಹಾಗೆ ನಿಗದಿಪಡಿಸಿದ ಸಭೆಯ ನೋಟೀಸನ್ನು ಗ್ರಾಮ ಪಂಚಾಯಿತಿ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕು.
...ಮುಂದುವರೆಯುವುದು. 

No comments:

Post a Comment