•► ವೈಟ್ ರಾಬಿಟ್ ತಂತ್ರಜ್ಞಾನ (White Rabbit Technology) & 'ಒಂದು ದೇಶ, ಒಂದು ಸಮಯ':
━━━━━━━━━━━━━━━━━━━━━━━━━━━━━━━━━
( GS-3: ವಿಜ್ಞಾನ ಮತ್ತು ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ಮೂಲಸೌಕರ್ಯ (Digital Infrastructure))
-
ಏನಿದು ತಂತ್ರಜ್ಞಾನ?
- 'ವೈಟ್ ರ್ಯಾಬಿಟ್' ಎಂಬುದು ಆಪ್ಟಿಕಲ್ ಫೈಬರ್ (Fiber-optic) ನೆಟ್‌ವರ್ಕ್ ಮೂಲಕ ಅತ್ಯಂತ ನಿಖರವಾದ ಸಮಯವನ್ನು (Time Synchronization) ವಿತರಿಸುವ ಒಂದು ತಂತ್ರಜ್ಞಾನವಾಗಿದೆ.
- ಇದನ್ನು ಆರಂಭದಲ್ಲಿ ಯುರೋಪ್‌ನ CERN ಸಂಸ್ಥೆಯಲ್ಲಿ ನ್ಯೂಕ್ಲಿಯರ್ ಸಂಶೋಧನೆಗಾಗಿ ಅಭಿವೃದ್ಧಿಪಡಿಸಲಾಗಿತ್ತು. ಇದು ಸೆಕೆಂಡಿನ ನೂರು ಕೋಟಿಯ ಒಂದು ಭಾಗದಷ್ಟು (1 Nanosecond ಗಿಂತಲೂ ಕಡಿಮೆ) ನಿಖರತೆಯಲ್ಲಿ ಸಮಯವನ್ನು ಹೊಂದಿಸುತ್ತದೆ.
- ಭಾರತಕ್ಕೆ ಇದರ ಅಗತ್ಯವೇನು? (Why it Matters):
- GPS ಮೇಲಿನ ಅವಲಂಬನೆ ಕಡಿಮೆ ಮಾಡುವುದು: ಪ್ರಸ್ತುತ ಭಾರತದ ಬ್ಯಾಂಕಿಂಗ್, ಆಟೋಮೇಷನ್, ಟೆಲಿಕಾಂ ಮತ್ತು ವಿದ್ಯುತ್ ಗ್ರಿಡ್‌ಗಳು ಅಮೆರಿಕದ GPS ಸಮಯವನ್ನು ನೆಚ್ಚಿಕೊಂಡಿವೆ. ವಿದೇಶಿ ಉಪಗ್ರಹ ಸಂಕೇತಗಳನ್ನು 'ಬ್ಲಾಕ್' (Jamming) ಮಾಡಿದರೆ ಅಥವಾ 'ಹ್ಯಾಕ್' (Spoofing) ಮಾಡಿದರೆ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ.
- ಸೈಬರ್ ಭದ್ರತೆ ಮತ್ತು ಹಣಕಾಸು ವ್ಯವಹಾರ: ಷೇರು ಮಾರುಕಟ್ಟೆ (High-frequency trading) ಮತ್ತು ಬ್ಯಾಂಕಿಂಗ್ ಡಿಜಿಟಲ್ ಪಾವತಿಗಳಲ್ಲಿ ಮಿಲಿಸೆಕೆಂಡ್ ವ್ಯತ್ಯಾಸವಾದರೂ ಕೋಟ್ಯಂತರ ರೂಪಾಯಿ ವಂಚನೆ ನಡೆಯಬಹುದು. ಈ ತಂತ್ರಜ್ಞಾನ ಸಂಪೂರ್ಣ ಭದ್ರತೆ ಒದಗಿಸುತ್ತದೆ.
-
ಯಾರು ಜಾರಿಗೆ ತರುತ್ತಿದ್ದಾರೆ?
- ಕೇಂದ್ರ ಉಪಭೋಕ್ತೃ ವ್ಯವಹಾರಗಳ ಸಚಿವಾಲಯ, CSIR–NPL (ರಾಷ್ಟ್ರೀಯ ಭೌತಿಕ ಪ್ರಯೋಗಾಲಯ) ಮತ್ತು ISRO ಜಂಟಿಯಾಗಿ 'ಒಂದು ದೇಶ, ಒಂದು ಸಮಯ' (One Nation, One Time) ಕಾರ್ಯಕ್ರಮದಡಿ ಇದನ್ನು ಜಾರಿಗೊಳಿಸುತ್ತಿವೆ.
No comments:
Post a Comment