Day 03: SDA, FDA, PC, PSI ಪರೀಕ್ಷೆಗಳಿಗಾಗಿ ದೈನಂದಿನ ಪ್ರಚಲಿತ ಘಟನೆಗಳ ಮೇಲೆ 15 ಪ್ರಮುಖ ಒಂದು ವಾಕ್ಯದ ಪ್ರಶ್ನೋತ್ತರಗಳು (Daily Current Affairs Q&A for Competitive Exams):
━━━━━━━━━━━━━━━━━━━━━━━━━━━
-
ಪ್ರಶ್ನೆ: ಭಾರತೀಯ ಸಂವಿಧಾನದ ಯಾವ ಅನುಚ್ಛೇದವು ಹೊಸ 'ಅಖಿಲ ಭಾರತ ಸೇವೆಗಳ' (All India Services) ಸೃಷ್ಟಿಗೆ ರಾಜ್ಯಸಭೆಗೆ ವಿಶೇಷ ಅಧಿಕಾರ ನೀಡುತ್ತದೆ?
- ಉತ್ತರ: ಅನುಚ್ಛೇದ 312 (Article 312).
- ಪ್ರಶ್ನೆ: ಇಸ್ರೋ ನಿರ್ಮಿಸಲು ಉದ್ದೇಶಿಸಿರುವ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣದ ಹೆಸರೇನು?
- ಉತ್ತರ: ಭಾರತೀಯ ಅಂತರೀಕ್ಷ ನಿಲ್ದಾಣ (Bharatiya Antariksha Station - BAS).
- ಪ್ರಶ್ನೆ: ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸಲು ಭಾರತ ಪ್ರಾರಂಭಿಸಿದ 'Mission LiFE' ನ ಪೂರ್ಣರೂಪವೇನು?
- ಉತ್ತರ: Lifestyle for Environment.
- ಪ್ರಶ್ನೆ: 'ಮಿಷನ್ ಲೈಫ್' (Mission LiFE) ಪರಿಕಲ್ಪನೆಯನ್ನು ಭಾರತದ ಪ್ರಧಾನಿಯವರು ಮೊದಲ ಬಾರಿಗೆ ಯಾವ ಹವಾಮಾನ ಶೃಂಗಸಭೆಯಲ್ಲಿ ಪರಿಚಯಿಸಿದರು?
- ಉತ್ತರ: ಗ್ಲ್ಯಾಸ್ಗೋದಲ್ಲಿ ನಡೆದ COP26 ಶೃಂಗಸಭೆಯಲ್ಲಿ.
- ಪ್ರಶ್ನೆ: ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಒಟ್ಟು ಠೇವಣಿಯ ಒಂದು ನಿಗದಿತ ಭಾಗವನ್ನು ಆರ್‌ಬಿಐನಲ್ಲಿ ನಗದು ರೂಪದಲ್ಲೇ ಇರಿಸಬೇಕಾದ ನಿಯಮವನ್ನು ಏನೆಂದು ಕರೆಯುತ್ತಾರೆ?
- ಉತ್ತರ: ಕ್ಯಾಶ್ ರಿಸರ್ವ್ ರೇಶಿಯೋ (CRR).
- ಪ್ರಶ್ನೆ: ಸಂಸತ್ತಿನಲ್ಲಿ 'ತಾರಾಂಕಿತ ಪ್ರಶ್ನೆಗಳಿಗೆ' (Starred Questions) ಸಂಬಂಧಿಸಿದ ಸಚಿವರು ಯಾವ ರೂಪದಲ್ಲಿ ಉತ್ತರಿಸಬೇಕು?
- ಉತ್ತರ: ಮೌಖಿಕವಾಗಿ (Oral Answer).
- ಪ್ರಶ್ನೆ: ಸಂಸತ್ತಿನ ಉಭಯ ಸದನಗಳ ಪೈಕಿ 'ಪ್ರಶ್ನೋತ್ತರ ವೇಳೆ' ಸಭೆಯ ಯಾವ ಸಮಯದಲ್ಲಿ ನಡೆಯುತ್ತದೆ?
- ಉತ್ತರ: ಸಭೆಯ ಮೊದಲ ಗಂಟೆಯಲ್ಲಿ (ಬೆಳಿಗ್ಗೆ 11:00 ರಿಂದ 12:00).
- ಪ್ರಶ್ನೆ: ಇಸ್ರೋ ನಿರ್ಮಿಸಿದ ಭಾರತದ ಮೊದಲ ಬಹು-ತರಂಗಾಂತರ ಖಗೋಳ ವೀಕ್ಷಣಾಲಯ ಉಪಗ್ರಹ ಯಾವುದು?
- ಉತ್ತರ: ಅಸ್ಟೋಸ್ಯಾಟ್ (AstroSat).
- ಪ್ರಶ್ನೆ: ಭಾರತದಲ್ಲಿ 'ಪರಿಸರ ಪ್ರಭಾವ ಮೌಲ್ಯಮಾಪನ' (EIA) ಯಾವ ಕಾಯ್ದೆಯಡಿ ಹೊರಡಿಸಲಾಗುತ್ತದೆ?
- ಉತ್ತರ: ಪರಿಸರ ಸಂರಕ್ಷಣಾ ಕಾಯ್ದೆ, 1986.
- ಪ್ರಶ್ನೆ: ಪೋಲಿಸ್ ಸುಧಾರಣೆಗಳಿಗೆ ಸಂಬಂಧಿಸಿದ 'ಪ್ರಕಾಶ್ ಸಿಂಗ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ' ಪ್ರಕರಣ ತೀರ್ಪು ಬಂದ ವರ್ಷ ಯಾವುದು?
- ಉತ್ತರ: 2006 ರಲ್ಲ.
- ಪ್ರಶ್ನೆ: ಅಂತರರಾಷ್ಟ್ರೀಯ ನದಿ ನೀರು ವಿವಾದಗಳ ಇತ್ಯರ್ಥಕ್ಕೆ ಸಂಸತ್ತಿಗೆ ಅಧಿಕಾರ ನೀಡುವ ಸಂವಿಧಾನದ ಅನುಚ್ಛೇದ ಯಾವುದು?
- ಉತ್ತರ: ಅನುಚ್ಛೇದ 262.
- ಪ್ರಶ್ನೆ: ನಾಸಾ ಮತ್ತು ಇಸ್ರೋ ಜಂಟಿ ಸಹಯೋಗದ ದ್ವಿ-ಆವರ್ತನ ರಾಡಾರ್ ಉಪಗ್ರಹ ಯಾವುದು?
- ಉತ್ತರ: ನಿಸಾರ್ (NISAR).
- ಪ್ರಶ್ನೆ: ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಗೆ ಮಾನ್ಯತೆ ನೀಡಿದ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ' ಜಾರಿಯಾದ ವರ್ಷ ಯಾವುದು?
- ಉತ್ತರ: 1993.
- ಪ್ರಶ್ನೆ: ಭಾರತದ ಖಾಸಗಿ ಬಾಹ್ಯಾಕಾಶ ಕಂಪನಿ 'ಸ್ಕೈರೂಟ್ ಏರೋಸ್ಪೇಸ್' ನಿರ್ಮಿಸಿದ ರಾಕೆಟ್ ಯಾವುದು?
- ಉತ್ತರ: ವಿಕ್ರಮ್-೧ (Vikram-1).
- ಪ್ರಶ್ನೆ: ಅಂತರರಾಷ್ಟ್ರೀಯ ಸೌರ ಒಕ್ಕೂಟದ (ISA) ಪ್ರಧಾನ ಕಚೇರಿ ಎಲ್ಲಿದೆ?
- ಉತ್ತರ: ಗುರುಗ್ರಾಮ (ಹರಿಯಾಣ, ಭಾರತ).
No comments:
Post a Comment