"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 31 January 2017

☀ ಭಾರತದ ಸಂವಿಧಾನದ ಕುರಿತ FDA, SDA, ಮತ್ತು ಇತರೇ ಪರೀಕ್ಷಾ ಸಂಭವನೀಯ ಪ್ರಶ್ನೆಗಳು : (Important Notes on Indian Constitution)

 ಭಾರತದ ಸಂವಿಧಾನದ ಕುರಿತ FDA, SDA, ಮತ್ತು ಇತರೇ ಪರೀಕ್ಷಾ ಸಂಭವನೀಯ ಪ್ರಶ್ನೆಗಳು :
(Important Notes on Indian Constitution)
━━━━━━━━━━━━━━━━━━━━━━━━━━━━━━━━━━━━━━━━━━━━━

★ಭಾರತದ ಸಂವಿಧಾನ
(Indian Constitution)


*.ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿಕೊಟ್ಟ ಆಯೋಗ:
-ಕ್ಯಾಬಿನೆಟ್ ಆಯೋಗ(1946)

*ಸಂವಿಧಾನ ರಚನಾ ಸಭೆಯ ಮೊದಲ ಸಭೆ
 -ಡಿ. 9, 1946

*ತಾತ್ಕಾಲಿಕ ಅಧ್ಯಕರು:
-ಸಚ್ಚಿದಾನಂದ ಸಿನ್ಹಾ

*ಸಂವಿಧಾನವು ಒಟ್ಟು 22 ಸಮಿತಿಗಳನ್ನೂ ಒಳಗೊಂಡಿತ್ತು.ಅದ್ರಲ್ಲಿ 10ಪ್ರಮುಖ ಸಮಿತಿಗಳು &12 ಉಪಸಮಿತಿಗಳನ್ನು ಒಳಗೊಂಡಿದೆ

*ಕರಡು ಸಮಿತಿ ಅಧ್ಯಕ್ಷರು :
-ಡಾ.ಬಿ.ರ್.ಅಂಬೇಡ್ಕರ್

*ಮೂಲಭೂತ ಹಕ್ಕುಗಳ ಸಮಿತಿ ಅದ್ಯಕ್ಷರು:
 -ಸರ್ದಾರ್ ವಲ್ಲಭಬಾಯಿ ಪಟೇಲ್

*ಮೂಲಭೂತ ಹಕ್ಕುಗಳ ಉಪಸಮಿತಿ ಅಧ್ಯಕ್ಷರು:
-ಜೆ.ಬಿ.ಕೃಪಲಾನಿ

*ಒಟ್ಟು ಸಂವಿಧಾನ ರಚನಾ ಸಮಿತಿಯ ಅಧಿವೆಶನಗಳು:
-11

*ಸಂವಿಧಾನ ರಚೆನೆಯ ಅವಧಿ:
- 2ವರ್ಷ 11 ತಿಂಗಳು 18 ದಿನ

*ಸಂವಿಧಾನವು ಅಂಗಿಕಾರವಾದ ದಿನ:
- ನವೆಂಬರ್ 26, 1949

*ಸಂವಿಧಾನ ಜಾರಿಗೆ ಬಂದ ದಿನ :
- ಜನವರಿ 26, 1950

*ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು:
 -15 ಜನ


*.ವಿಷಯಗಳನ್ನು ಏರವಲು ತೆಗೆದುಕೊಂಡದ್ದು :
*ಬ್ರಿಟನ್ ಸಂವಿಧಾನದಿಂದ :
-ಸಂಸದೀಯ ಪದ್ಧತಿ;ಏಕಪೌರತ್;ದ್ವಿಸಧನ;ರಿಟ್ ಈ ಪ್ರಮುಖ ಅಂಶಗಳನ್ನು ತೆಗೆದುಕೊಂಡಿದೆ

*ಅಮೆರಿಕ ಸಂವಿಧಾನದಿಂದ:
- ಮೂಲಭೂತ ಹಕ್ಕುಗಳು ತೆಗೆದುಕೊಂಡಿದೆ

*ಆಸ್ಟ್ರೇಲಿಯಾ ಸಂವಿಧಾನದಿಂದ:
- ಸಮವರ್ತಿ ಪಟ್ಟಿ ತೆಗೆದುಕೊಂಡಿದೆ

*ಜರ್ಮನ್ ಸಂವಿಧಾನದಿಂದ:
- ತುರ್ತುಪರಿಸ್ಥಿತಿ ತೆಗೆದುಕೊಂಡಿದೆ

*ರಷ್ಯಾ ಸಂವಿಧಾನದಿಂದ:
- ಮೂಲಭೂತ- ಕರ್ತವ್ಯಗಳು

*ದಕ್ಷಿಣ ಆಫ್ರಿಕಾದಿಂದ:
 -ಸಂವಿಧಾನ ತಿದ್ದುಪಡಿ

*ಕೆನಡಾ ಸಂವಿಧಾನದಿಂದ:
 - ಒಕ್ಕೂಟ

*ಐರಿಷ್ ಸಂವಿಧಾನ ದಿಂದ:
-ರಾಜ್ಯ ನಿರ್ದೇಶಕ ತತ್ವಗಳು

*ಜಪಾನ್ ಸಂವಿಧಾನದಿಂದ:
-ಕಾನೂನಿನ ವಿಧಾನಗಳು


*ಮೂಲ ಸಂವಿಧಾನದಲ್ಲಿ 395 ವಿಧಿಗಳು ,8 ಅನುಸೂಚಿಗಳು,22ಭಾಗಗಳು ಇದ್ದವು .

*..ಪ್ರಸ್ತುತವಾಗಿ 450 ವಿಧಿಗಳು ,12 ಅನುಸೂಚಿಗಳು,25 ಭಾಗಗಳನ್ನು ಒಳಗೊಂಡಿದೆ.

*ಸಂವಿಧಾನದಲ್ಲಿ ಇಲ್ಲಿಯವರೆಗೆ ಒಟ್ಟು100ತಿದ್ದುಪಡಿಗಳನ್ನು ಮಾಡಲಾಗಿದೆ.

*.ಮೊದಲ ತಿದ್ದುಪಡಿ 1951,ಜೂನ್ 18ಕ್ಕೆ ಅದು ಭುಸುಧಾರಣೆಗೆ ಸಂಬಂಧಿಸಿದಂತೆ ಮಾಡಲಾಯಿತು.

*ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು:
- ಜೆ.ನೆಹರು

*1976 ,42ನೇ ತಿದ್ದುಪಡಿ ಮೂಲಕ ಸಮಾಜವಾದಿ , ಜ್ಯಾತ್ಯತಿತ ಎಂಬ ಪದಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ

*ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್:
 -ಮೌಂಟ್ ಬ್ಯಾಟನ್

*ಲೋಕಸಭೆಯ ಗರಿಷ್ಠ ಸಂಖ್ಯಾಬಲ: -552  
ಪ್ರಸ್ತುತ ಸ್ಥಾನಗಳ ಸಂಖ್ಯೆ:- 545

*ದೇಶದಲ್ಲೇ ಅತೀ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ:
 -ಉತ್ತರ ಪ್ರದೇಶ (80)

*ರಾಜ್ಯಸಭೆಯ ಗರಿಷ್ಠ ಸಂಖ್ಯಾಬಲ:-250
ಪ್ರಸ್ತುತ ಸ್ಥಾನಗಳ ಸಂಖ್ಯೆ :245

*.ಭಾಷಾ ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯ:
 -ಆಂಧ್ರಪ್ರದೇಶ


*ಪೌರತ್ವ ಕಾಯ್ದೆ: -1955 ಡಿ.30

*17ನೇ ವಿಧಿ-ಅಸ್ಪೃಶತಾ ಆಚರಣೆ ನಿಷೇಧ

*18ನೇ ವಿಧಿ-ಬಿರುದುಗಳ ರದ್ದತಿ

*21ಎ ವಿಧಿ-ಶಿಕ್ಷಣದ ಹಕ್ಕು (6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಒದಗಿಸುವದು)

*24 ನೇ ವಿಧಿ - ಬಾಲಕಾರ್ಮಿಕ ನಿಷೇಧ

*29ನೇ ವಿಧಿ -ಅಲ್ಪಸಂಖ್ಯಾತರ ಹಿತಾಸಕ್ತಿಗಳ ಸಂರಕ್ಷಣೆ

*32 ನೇ ವಿಧಿಯನ್ನು ಡಾ. ಬಿ.ರ್. ಅಂಬೇಡ್ಕರ್ ಅವರು "ಸಂವಿಧಾನದ ಆತ್ಮ ಮತ್ತು ಹೃದಯ "ಎಂದಿದ್ದಾರೆ


*5 ರಿಟ್ ಗಳು
1)ಹೆಬಿಯಸ್ ಕಾರ್ಪಸ್:
-ಬಂಧಿತ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು

2)ಮ್ಯಾಂಡಮಸ್:
-ಸರ್ಕಾರಿ ಅಧಿಕಾರಿಗಳಿಗೆ ಕೆಲಸವನ್ನು ನಿರ್ವಹಿಸುವಂತೆ ನ್ಯಾಯಾಲಯ ಆದೆಷಿಸುವುದು

3)ಸರ್ಷಿಯರರಿ:
-ಕೆಳ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದಾಗ.

4)ಕೋ-ವಾರಂಟ್:
- ಅಕ್ರಮವಾಗಿ ಸಾರ್ವಜನಿಕ ಹುದ್ದೆ ಪಡೆದವರ ವಿರುದ್ಧ ಹೊರಡಿಸುವ ರಿಟ್


*40ನೇ ವಿಧಿ -ಪಂಚಾಯತಿ ಸ್ಥಾಪನೆಯ ಬಗ್ಗೆ ತಿಳಿಸುತ್ತದೆ.

*50ನೇ ವಿಧಿ- ನ್ಯಾಯಾಂಗವನ್ನು ಕಾರ್ಯಂಗದಿಂದ ಬೆರ್ಪಡಿಸುವದು.


*ಮೂಲಭೂತ ಕರ್ತವ್ಯಗಳು (4A) :- 11
*11ನೆಯ ಮೂಲಭೂತ ಕರ್ತವ್ಯ :
-6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವದು ಪಾಲಕರ ಕರ್ತವ್ಯ  (2002 ಕ್ಕೆ ಜಾರಿಗೆ)

*52 ನೇ ವಿಧಿ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ

*72 ನೇ ವಿಧಿ ರಾಷ್ಟ್ರಪತಿಗಳು ಕ್ಷಮಾದಾನ ಅಧಿಕಾರ ಹೊಂದಿದ್ದಾರೆ

*ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ:
- ನೀಲಂ ಸಂಜೀವ್ ರೆಡ್ಡಿ

*ಸಂವಿಧಾನ ರಚನಾ ಸಭೆಗೆ ಆಯ್ಕೆಯಾದ ಏಕೈಕ ಮುಸ್ಲಿಂ ಮಹಿಳೆ:
 -ರಸುಲ್ಲಾ ಬೇಗ


*ಸಂವಿಧಾನ ಭಾಗಗಳು:
 ಭಾಗ 1)ಕೇಂದ್ರ ಹಾಗು ಅದರ ಭೂಪ್ರದೇಶಗಳು
ಭಾಗ2)ಪೌರತ್ವ
ಭಾಗ3)ಮೂಲಭೂತ ಹಕ್ಕುಗಳು
ಭಾಗ4)ರಾಜ್ಯಾನಿತಿ ನಿರ್ದೆಶಕತತ್ವಗಳು -ಇವು ಗಾಂಧೀಜಿಯವರ ರಾಮ ರಾಜ್ಯ ಕಲ್ಪನೆ ಹೊಂದಿವೆ
ಭಾಗ 4) ಮೂಲಭೂತ ಕರ್ತವ್ಯಗಳು
ಭಾಗ 5)ಕೇಂದ್ರ ಸರ್ಕಾರ
ಭಾಗ6) ರಾಜ್ಯ ಸರ್ಕಾರ
ಭಾಗ9)ಪಂಚಾಯಿತಿಗಳು
ಭಾಗ15)  ಚುನಾವಣೆಗಳು
ಭಾಗ18) ತುರ್ತು ಪರಿಸ್ಥಿತಿ
ಭಾಗ20)ತಿದ್ದುಪಡಿ

(Courtesy : Hanamant. Halyalkar (Telegram Group)

Saturday, 28 January 2017

☀️ ಇಂಗ್ಲೀಷ್ ಗ್ರಾಮರ್ : ಭಾಗ-II- ಉಪಯುಕ್ತ 200 ಇಂಗ್ಲೀಷ್ ವಿರುದ್ಧಾರ್ಥ ಪದಗಳು (Antonyms) ★ (Important 200 Antonyms Words for competitive Exams )

☀️ ಇಂಗ್ಲೀಷ್ ಗ್ರಾಮರ್ : ಭಾಗ-II- ಉಪಯುಕ್ತ 200 ಇಂಗ್ಲೀಷ್ ವಿರುದ್ಧಾರ್ಥ ಪದಗಳು (Antonyms)
★ (Important 200 Antonyms Words for competitive Exams )
━━━━━━━━━━━━━━━━━━━━━━━━━━━━━━━━━━━━━━━━━━━━━

★️ಇಂಗ್ಲೀಷ್ ಗ್ರಾಮರ್
(English grammar for exams)


...ಮುಂದುವರೆದ ಭಾಗ.

★ Antonyms - PART II

•► ಇತ್ತೀಚೆಗೆ ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಗ್ರಾಮರ್ ಗೆ ಸಂಬಂಧಿಸಿದಂತೆ ಹೆಚ್ಚು ಒತ್ತು ಕೊಡುತ್ತಿದ್ದು, ಅವುಗಳಲ್ಲಿ Antonyms ಭಾಗ ಕೂಡ ಮಹತ್ವದ್ದಾಗಿದೆ. ಅದಕ್ಕಾಗಿ ನಾನು ಇಲ್ಲಿ 'ಸ್ಪರ್ಧಾಲೋಕ'ದಲ್ಲಿ 200 Antonyms (ಇಂಗ್ಲೀಷ್ ವಿರುದ್ಧಾರ್ಥ ಪದ) ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ, ತಪ್ಪು-ತಡೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ..

101. Prosperity- Adversity
102. Deliberate- Unintentional
103. Disputable- Indisputable
104. Make- Break
105. Depressed- Elated
106. Ham-fisted- Adroit
107. Capture- Liberate
108. Misery- Joy
109. Anarchy- Order
110. Monotony- Variety
111. Latter- Former
112. Diligent- Lazy
113. Philistine- Cultured
114. Ingest- Disgorge
115. Laceration- Healing
116. Disorderly- Organized
117. Glossy- Dull
118. Accomplish- Fail
119. Orderly- Chaotic
120. Strife- Peace
121. Antique- Recent
122. Rapid- Slow
123. Initiated- Concluded
124. Fatigued- Rigid
125. Dynamic- Static
126. Hereditary- Acquired
127. Heretical- Orthodox
128. Implicate- Exonerate
129. Liberty- Slavery
130. Elevation- Reduction
131. Boon- Bane
132. Famous- Obscure
133. Gloomy- Radiant
134. Isolation- Association
135. Contented- Dissatisfied
136. Severe- Mild
137. Fatigued- Energised
138. Flexible- Rigid
139. Delete- Include
140. Evanescent- Eternal
141. Virtue- Vice
142. Confident- Diffident
143. Adamant- Yielding
144. Callous- Sensitive
145. Procrastinate- Expedite
146. Probity- Dishonesty
147. Sporadic- Continual
148. Apposite- Inappropriate
149. Chivalry- Cowardice
150. Sanguine temper- Despairing nature
151. Imperil- Safeguard
152. Consolidated- Disjoined
153. Vituperative- Laudatory
154. Benefactor- Enemy
155. Barren- Fertile
156. Nervous- Composed
157. Evident- Hidden
158. Professional- Amateur
159. Cessation- Commencement
160. Potent- Weak
161. Gregarious- Unsociable
162. Implication- Exoneration
163. Dismal- Bright
164. Meagre- Surplus
165. Flamboyant- Not showy
166. Chronic- Temporary
167. Awkward- Graceful
168. Despair- Hope
169. Validate- Disprove
170. Smug- Dissatisfied
171. Vicious- Virtuous
172. Obscure- Clear
173. Enervate- Strengthen
174. Autonomous- Dependent
175. Exonerate- Convict
176. Controversial- Indisputable
177. Accord- Disagreement
178. Feasible- Impractical
179. Acquit- Condemn
180. Affluence- Poverty
181. Harmonious- Discordant
182. Factual- Unrealistic
183. Assent- Disagreement
184. Discreet- Careless in behavior
185. Unjust- Fair-minded
186. Oppressive- Gentle
187. Clinch- Lose
188. To put up with- To dislike
189. Deceitful- Honest
190. Exaggerate- Understate
191. Synthetic- Natural
192. Infirmity- Strength
193. Deny- Accept
194. Benediction- Curse
195. Forbid- Permit
196. Inconspicuous- Prominent
197. Abandon- Retain
198. Fickle- Constant
199. Articulate- Unable to express oneself.
200. Humble- Powerful

Friday, 27 January 2017

☀ ಕನ್ನಡ ವ್ಯಾಕರಣ : ಪರೀಕ್ಷಾ ದೃಷ್ಟಿಯಿಂದ ಉಪಯುಕ್ತವೆನಿಸಿರುವ ತತ್ಸಮ-ತದ್ಭವಗಳು (Important Kannada Grammar for competitive Exams)

☀ ಕನ್ನಡ ವ್ಯಾಕರಣ : ಪರೀಕ್ಷಾ ದೃಷ್ಟಿಯಿಂದ ಉಪಯುಕ್ತವೆನಿಸಿರುವ ತತ್ಸಮ-ತದ್ಭವಗಳು
(Important Kannada Grammar for competitive Exams)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ವ್ಯಾಕರಣ
(Kannada Grammar)

★ ತತ್ಸಮ-ತದ್ಭವಗಳು

●.ಅ
ಅರ್ಕ-ಅಕ್ಕ                             ಅಕ್ಷತೆ– ಅಚ್ಚತೆ                      ಅಕ್ಷರ – ಅಕ್ಕರ    
ಅಕ್ಷಯ – ಅಚ್ಚಯ                     ಅರ್ಕಶಾಲೆ– ಅಗಸಾಲೆ               ಅಂದುಕ – ಅಂದುಗೆ
ಅರ್ಚಕ – ಅಚ್ಚಿಗ                      ಅಂಬಾ– ಅಮ್ಮ                       ಅಂಗರಕ್ಷಕ – ಅಂಗರೇಕು
ಅಖಿಲ – ಅಕಿಲ                        ಅರ್ಗಲ– ಅಗುಳೆ                     ಅಕ್ಷೋಟ – ಅಕ್ಕೋಟ
ಅಗ್ಗಿಷ್ಟಿಕೆ – ಅಗ್ಗಿಟಿಕೆ                    ಅರ್ಘ್ಯ – ಅಗ್ಗ                          ಅಂಗುಷ್ಟ – ಅಂಗುಟ
ಅಂಶು – ಅಂಚು                       ಅಧ್ಯಕ್ಷ– ಅದ್ದಿಕ                        ಅಕ್ಷಿ – ಅಕ್ಕಿ
ಅಗಸ್ತಿ – ಅಗಸೆ                        ಅಂಗಾರ– ಇಂಗಳ                   ಅಬ್ದಿ – ಅಬುದಿ
ಅಭಿಜ್ಞಾನ – ಅಭಿಸಂಗ                ಅಭ್ಯಾಸ – ಅಬ್ಬೆಸ                     ಅಭ್ಯುದಯ – ಅಬ್ಯುದಯ
ಅಮಾವಾಸ್ಯೆ – ಅಮಾಸೆ              ಅರೋಟಿಕಾ – ಅರೋಸಿಗೆ            ಅಮೃತ – ಅಮರ್ದು
ಅಮೆಲಾ – ಅಮೇಲೆ                   ಅರ್ಮ – ಅರಮ                       ಅಯೋಗ್ಯ – ಅಯೋಗ
ಅಲಘು – ಅಲಗೆ                       ಅವಸರ – ಓಸರ                      ಅವಸಾರಕ – ಓಸರಿಗೆ
ಅರ್ಧ – ಅದ್ದ                           ಅರ್ಹ– ಅರುಹ                        ಅಲಕಾ – ಅಳಕೆ
ಅವಸ್ಥಾ – ಅವತೆ                      ಅಶನಿ– ಅಸನಿ                        ಅಶ್ರದ್ಧಾ – ಅಸಡ್ಡೆ
ಅಸ್ತರಣ – ಅತ್ತರಣ                    ಅಸಹ್ಯ – ಅಸಯ್ಯ                     ಅಸ್ಥಿ – ಅಸ್ತಿ
ಅಸ್ತವ್ಯಸ್ತ – ಅತ್ತಬೆತ್ತ                   ಅಷ್ಟ – ಅಟ್ಟ                           ಅವ್ಯಾಪಾರಿನ್ – ಅಬ್ಬೇಪಾರಿ
ಅಲಘ – ಅಲಗು                       ಅಸಾಧ್ಯ– ಅಸದಳ                   ಅವಾಂತರ – ಅವಾಂತ್ರ
ಅಭ್ರಕ – ಅಂಬರಕ                    ಅಮೆಂಡ – ಅವುಡಲ                  ಅಮರೀ – ಅವರೀ
ಅರ್ಹಂತ – ಅರಿಹಂತ                 ಅಶೋಕ - ಅಸುಗೆ

ಅರ್ಗಲಿಕಾ - ಅಗ್ಗಳಿಕೆ ಅಗ್ನಿ - ಅಗ್ಗಿ       ಅಂತಃಪುರ - ಅಂತಪುರ
ಅತಸಿ - ಅಗಸೆ       ಅಂಕುಶ - ಅಂಕುಸ ಅಗ್ರಿಗ - ಅಗ್ಗಿಗ
ಅರ್ಗಲ - ಅಗುಳಿ   ಅಂದುಕ - ಅಂದುಗೆ ಅಂಕನ - ಅಂಗಣ(ಅಂಗಳ)

ಅರ್ಘ್ಯವಾಣಿ - ಅಗ್ಗವಣಿ ಅಪ್ಸರ - ಅಚ್ಚರ ಅಷ್ಟಮಿ - ಅಟ್ಟಮಿ
ಅಟವೀ - ಅಡವಿ    ಅಜ್ಜುಕಾ - ಅಜ್ಜುಗೆ ಅಟ್ಟಹಾಸ - ಅಟ್ಟಾಸ
ಅಣಕು - ಅಣಕ      ಅತ್ತಿಕಾ - ಅತ್ತಿಗೆ ಅಪರರಾತ್ರಿ- ಅತರಾತ್ರಿ
ಅಭಿಲಾಷಾ - ಅಭಿಲಾಷೆ    ಅಬ್ಜಾನನೆ - ಅಬುಜಾನನೆ ಅಂಬಷ್ಠೆ - ಅಮಟೆ
ಅಲೇಖ - ಅಳಕ     ಅವಗ್ರಾಹ - ಅವಗಾಹ

●.ಆ
ಆಂದೋಲ - ಅಂದಲ ಆಯಾಸ - ಅಯಸ        ಆಜ್ಞಾಪನೆ - ಅಪ್ಪಣೆ
ಆಚಾರ್ಯ - ಆಚಾರಿ ಆಕಾರ - ಆಗಾರ        ಆತ್ಮ - ಆತುಮ
ಆದಿತ್ಯವಾರ - ಆಯ್ತಾರ ಆಜ್ಞಪ್ತಿ - ಅಣತಿ        ಆರ್ತ - ಅರತ

ಆಯುಷ್ಯ - ಅಯಸ  ಆರ್ಯ - ಅಜ್ಜ ಆಶ್ಚರ್ಯ - ಅಚ್ಚರಿ
ಆಲಸ್ಯ - ಅಳಸೆ ಆಶ್ರಯ - ಆಸರೆ ಆಶ್ವಯುಜ - ಅಶ್ವೀಜ
ಆವಲಕ - ಅಳಿಗೆ ಆರ್ದ್ರ - ಅರಿದು ಆಷಾಡ - ಆಸಾಡ (ಅಸಡ)
ಆರಾಮ - ಅರವೆ ಆಕರ್ಷಣ - ಅಕುರಸಣ ಆಮ್ಲ - ಆಮ್ರ
ಆಕಾಶ - ಆಗಸ ಆಜ್ಞಾ - ಆಣೆ

●.ಇ
ಇಷ್ಟಿಕಾ- ಇಟ್ಟಿಗೆ      ಇಂದ್ರ - ಇಂದಿರ ಇಳಾ - ಇಳೆ
ಇಕ್ಷಾಲಿಕ - ಇಕ್ಕಳಿಗೆ    ಇಂಗುದ - ಇಂಗಳ ಇಕ್ಕುಳಿಕೆ - ಇಕ್ವಾಲಿಕೆ
ಇಚ್ಛಾ - ಇಚ್ಚೆ


●.ಈ
ಈಶ್ವರ - ಈಸರ ಈಶ - ಈಸ ಈಲಿಕಾ - ಈಳಿಗೆ
ಈಷೆ - ಈಜು


●.ಉ
ಉಚ್ವಾಸ - ಉಸ್ವಾಸ ಉದ್ದೇಶ - ಉಗಡ ಉತ್ಸವ - ಉಕ್ಕೆವ
ಉತ್ಕುಣ - ಒಕ್ಕಣ       ಉಡ್ಡಯಣ - ಉಡಾವಣೆ ಉಜ್ಜಯಿನಿ - ಉಜಿನಿ
ಉಜ್ವಲ - ಉಜ್ಜಳ    ಉದ್ಘೋಷಣೆ - ಉಗ್ಗಡಣೆ ಉದ್ವೇಗ - ಉಬ್ಬೆಗ
ಉತ್ಕಟ - ಉಗ್ಗಟ    ಉನ್ಮತ್ತ - ಉಮ್ಮತ್ತ ಉದ್ಧಿತ - ಉದ್ದಟ
ಉಚ್ಚಶೃಂಗಿ - ಉಚ್ಚಂಗಿ      ಉತ್ಪಾತ - ಉತುಪಾದ ಉಪ್ಪರಿಕಾ - ಉಪ್ಪರಿಗೆ
ಉತ್ಪತ್ತಿ - ಉತುಪತಿ         ಉದ್ದಹಣ - ಉಗ್ರಾಣ ಉಜಮ - ಉದ್ದಿಮೆ
ಉತ್ಪಲ - ಉಪ್ಪಡ         ಉಷ್ಟ್ರ - ಒಂಟೆ ಉತ್ಸಾಹ - ಉಚ್ಚಾಹ

●.ಊ
ಊನ - ಊಣ ಊರ್ಧ್ವಶ್ವಾಸ - ಉಬ್ಬಸ ಊರ್ಣ - ಉಣ್ಣೆ
ಊಹಾ - ಊಹೆ


●.ಏ-ಐ
ಏಕ - ಎಕ್ಕ  ಏಕಪತ್ರ - ಎಕ್ಕಪತ್ರ ಏಕತ್ರ - ಏಕಟ
ಏಕಭಾಗ - ಎಕ್ಕಭಾಗ ಏಕಶಕ್ಯತಾ - ಎಕ್ಕಸಕ್ಕತನ ಏಕಸ್ವರ - ಎಕ್ಕಸರ
ಏಕಾವಳಿ - ಎಕ್ಕಾವಳಿ ಏಕಕ್ರ - ಏಕಟ ಐಶ್ವರ್ಯ - ಐಸಿರಿ
ಐರಾವತ - ಅಯಿರಾವತ ಐಹಿಕ - ಆಯಿಕ

●.ಓ-ಔ
ಓಲಿಕ - ಓಳಿಗ ಓಘ - ಓಗ ಔಷಧ - ಅವುಸದಿ
ಔದಾರ್ಯ - ಉದಾರ ಔದಾಸೀನ - ಉದಾಸೀನ   ಔಶೀರ - ಔಶರ

...ಮುಂದುವರೆಯುವುದು.
(Courtesy : ಕನ್ನಡ ದೀವಿಗೆ) 

☀ ಕೆಪಿಎಸ್ ಸಿ, ಪಿಡಿಓ, ಮತ್ತು ಪದವಿ ಆಧಾರಿತ ಪರೀಕ್ಷೆಗಳಿಗೆ ಸಹಾಯಕವಾಗುವ ಮಹತ್ವಪೂರ್ಣ ಇಂಗ್ಲೀಷ್ ಜ್ಞಾನ : ನುಡಿಗಟ್ಟುಗಳು ( One word substitution - PART 2 ) ( One word substitution for Competitive Exams):

☀ ಕೆಪಿಎಸ್ ಸಿ, ಪಿಡಿಓ, ಮತ್ತು ಪದವಿ ಆಧಾರಿತ ಪರೀಕ್ಷೆಗಳಿಗೆ ಸಹಾಯಕವಾಗುವ ಮಹತ್ವಪೂರ್ಣ ಇಂಗ್ಲೀಷ್ ಜ್ಞಾನ : ನುಡಿಗಟ್ಟುಗಳು
( One word substitution - PART 2 )
( One word substitution for Competitive Exams):
━━━━━━━━━━━━━━━━━━━━━━━━━━━━━━━━━━━━━━━━━━━━━

★ ಇಂಗ್ಲೀಷ್ ಗ್ರಾಮರ್
(English Grammar)

★ One word substitution - PART 2


51. A small room in a big house, hotel, ship etc. where glasses, dishes, spoons, food etc. are kept - Pantry
52. Doing something according to one’s own free will - Voluntarily
53. A person who gambles or bets - Punter
54. An abandoned child of unknown parents who is found by somebody - Foundling
55. A written statement about someone’s character, usually provided by an employer - Testimonial
56. One who hates women - Misogynist
57. A raised passageway in a building - Walkway
58. One who cannot speak - Dumb
59. To look at someone in an angry or threatening way - Glower
60. Something that causes death - Fatal
61. A person who loves mankind - Philanthropist
62. One who has narrow and prejudiced religious views - Bigot
63. To confirm with the help of evidence - Corroborate
64. The time between midnight and noon- Ante - meridiem
65. Fear of height - Acrophobia
66. Feeling inside you which tells you what is right and what is wrong - Conscience
67. Loss of memory - Amnesia
68. A system of naming things - Nomenclature
69. A cure for all diseases - Panacea
70. A post with little work but high salary - Sinecure
71. A person who writes decoratively - Calligrapher
72. A woman with dark brown hair - Brunette
73. The action of looking within or into one’s own mind - Introspection
74. One who is a dabbler in Arts, Science or Literature - Dilettante
 75. Still existing and known - Extant
76. The highest point - Zenith
77. Release of a prisoner from jail on certain terms and condition - Parole 78. To struggle helplessly - Flounder
79. A person who is talkative - Garrulous
80. One who cuts precious stones - Lapidist
81. Specialist of Kidney - Nephrologist
82. Thick skinned animal - Pachyderm
83. A person who is always dissatisfied - Malcontent
84. A funeral bell - Knell
85. Capable of being interpreted in two ways - Ambiguous

Aphnology → science of wealth (ಹಣದ ಅಧ್ಯಯನ )

Apiology → study of bees (ಜೇನು ನೊಣಗಳು ಅಧ್ಯಯನದ)

Arachnology → study of spiders ( ಜೇಡರಹುಳುಗಳ ಅಧ್ಯಯನ  )

Archaeology → study of human material remains (ಮಾನವ ಸಾಮಗ್ರಿಗಳ ಪುರಾತತ್ತ್ವ ಅಧ್ಯಯನ)

Anesthesiology → study of diseases of weakening and aging (ನಿಶ್ಯಕ್ತಿ ಹಾಗೂ ವಯಸ್ಸಾಗುವ ರೋಗಗಳ ಕುರಿತು ಅಧ್ಯಯನ)

Astrogeology → study of extraterrestrial geology ( ಅಲೌಕಿಕ ಪರಗ್ರಹ ಭೂ ವಿಜ್ಞಾನದ ಅಧ್ಯಯನ)

Astrology → study of influence of stars on people (ಮನುಷ್ಯರ ಮೇಲೆ ನಕ್ಷತ್ರಗಳ ಪ್ರಭಾವದ ಅಧ್ಯಯನ )

Astrometeorology → study of effect of stars on climate (ಜಲ-ವಾಯು ಮೇಲೆ ನಕ್ಷತ್ರಗಳ ಪ್ರಭಾವದ ಅಧ್ಯಯನ)

Astronomy → study of celestial bodies ( ಖಗೋಲದ ವಸ್ತುಗಳ ಅಧ್ಯಯನ)

Tuesday, 24 January 2017

☀ ಕೆಪಿಎಸ್ ಸಿ, ಪಿಡಿಓ, ಮತ್ತು ಪದವಿ ಆಧಾರಿತ ಪರೀಕ್ಷೆಗಳಿಗೆ ಸಹಾಯಕವಾಗುವ ಮಹತ್ವಪೂರ್ಣ ಇಂಗ್ಲೀಷ್ ಜ್ಞಾನ : ನುಡಿಗಟ್ಟುಗಳು PART-1 ( One word substitution for Competitive Exams):

 ☀ ಕೆಪಿಎಸ್ ಸಿ, ಪಿಡಿಓ, ಮತ್ತು ಪದವಿ ಆಧಾರಿತ ಪರೀಕ್ಷೆಗಳಿಗೆ ಸಹಾಯಕವಾಗುವ ಮಹತ್ವಪೂರ್ಣ ಇಂಗ್ಲೀಷ್ ಜ್ಞಾನ :
ನುಡಿಗಟ್ಟುಗಳು PART-1
( One word substitution for Competitive Exams):
━━━━━━━━━━━━━━━━━━━━━━━━━━━━━━━━━━━━━━━━━━━━━
★ ಇಂಗ್ಲೀಷ್ ಗ್ರಾಮರ್
(English Grammar)


★One word substitution PART-1


1. Able to use the left hand and right hand equally well - Ambidextrous
2. A man who hates marriage - Misogamist
3. A person who enters without any invitation - Intruder
4. The words with opposite meanings used together - Oxymoron
5. A person leaving his native country to settle in another - Emigrant
6. One who compiles a dictionary - Lexicographer
7. Too much official formality - Red tapism
8. One who devotes his life to the welfare and the interests of other people - Altruist
9. A person who opposes another - Antagonist
10. A person who does not want to see the realities of life and tries to escape - Escapist
11. A game in which in which no one wins - Drawn
12. What cannot be heard - Inaudible
13. One who knows many languages - Polyglot or multilingual
14. A place where everything is perfect - Utopia
15. A sweet music - Melody
16. A person who is pure and clean - Immaculate
17. To send back a person to one’s country - Repatriate
18. One who tends to take a hopeful view of life - Optimist
19. To be known for bad acts - Notorious
20. Instruments to measure atmospheric pressure - Barometer
21. One who pretends to be what he is not - Hypocrite
22. An official call to appear in a court of law - Summon
23. Murder of a brother - Fratricide
24. A list of items to be transacted at a meeting - Agenda
25. A continuous process of change is known as - Metamorphosis
26. Circular building or hall with a dome - Rotunda
27. An order requiring a person to attend a court - Subpoena
28. An extreme fear of being in a small confined place - Claustrophobia
29. Allowance due to a wife from her husband on separation - Alimony
30. Belonging to all parts of the world - Universal
31. Words of similar meaning - Synonyms
32. A speech delivered without previous preparation - Extempore
33. Study of heavenly bodies - Astronomy
34. To cut apart a person’s body - Mutilate
35. One who is filled with excessive and mistaken enthusiasm about his religion - Fanatic 36. An involuntary action under a stimulus is described as a - Reflex
37. The use of many words where only a few are necessary - Circumlocution
38. One who is a citizen not of a country but of the world - Cosmopolitan
39. An imaginary name assumed by an author for disguise - Pseudonym
40. A person who has no money to pay off his debts - Insolvent
41. A number of ships - Fleet
42. A test in which cells from diseased organs are removed and tested - Biopsy
43. A foreigner who settles in a country - Immigrant
44. Place that provides refuge - Asylum
45. Art of writing for newspapers and magazines - Journalism
46. Parts of a country behind the coast of a river bank - Hinterland
47. One who does not make mistakes - Infallible
48. A professional rider in horse races - Jockey
49. Words uttered impiously about God - Blasphemy
50. A person who is bad in spelling - Cacographist

... ಮುಂದುವರೆಯುವುದು. 

☀️ X.ಸಬಲಾ. (ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ) (SABALA)

☀️ X.ಸಬಲಾ. (ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ)
(SABALA)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


★ ಸಬಲಾ


•► ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ – ಸಬಲಾ:

— ಜೀವನದಲ್ಲಿ ಕಿಶೋರಾವಸ್ಥೆಯು ಮಾನಸಿಕ, ಬೌದ್ಧಿಕ, ಭಾವನಾತ್ಮಕ ಬೆಳವಣಿಗೆಗೆ ಸಂಬಂದಿಸಿದಂತೆ ಒಂದು ಪ್ರಮುಖ ಅವದಿಯಾಗಿದೆ.  ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಒದಗಿಸುವುದಕ್ಕಾಗಿ  ಹೊಸ ಚಿಂತನೆಯ ರೂಪದಲ್ಲಿ ಕಿಶೋರಿ ಶಕ್ತಿ ಯೋಜನೆ ಹಾಗು ಪ್ರಾಯಪೂರ್ವ ಬಾಲಕಿಯರಿಗೆ ಪೌಷ್ಠಿಕ ಆಹಾರ ಕಾರ್ಯಕ್ರಮ ಈ ಎರಡು ಯೋಜನೆಗಳನ್ನು ವಿಲೀನಗೊಳಿಸಿ ಕೇಂದ್ರ ಸಕರ್ಾರವು ಸಬಲ ಎಂಬ ಹೊಸ ಯೋಜನೆಯನ್ನು  ಜಾರಿಗೊಳಿಸಲು , ಕೇಂದ್ರ  ಹಾಗೂ ರಾಜ್ಯ ಸಕರ್ಾರದಿಂದ ಆದೇಶ ಹೊರಡಿಸಲಾಗಿದೆ.

•► ಈ ಯೋಜನೆಯಡಿ  ರಾಜ್ಯದ  9 ಜಿಲ್ಲೆಗಳನ್ನು (ಗುಲ್ಬಗರ್ಾ, ಕೋಲಾರ, ಬೆಂಗಳೂರು, ಬಳ್ಳಾರಿ, ಬಿಜಾಪುರ, ಧಾರವಾಡ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು )   ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ.

•► ಸಬಲ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ಮತ್ತು ಪೌಷ್ಠಿಕೇತರ ಅಂಶಗಳ ಸೇವೆಯನ್ನು ಕಿಶೋರಿಯರಿಗೆ ನೀಡಲಾಗುತ್ತಿದೆ. ಪೂರಕ ಪೌಷ್ಠಿಕ ಆಹಾರ ವನ್ನು 11-14 ವರ್ಷದ ಶಾಲೆ ಬಿಟ್ಟಿರುವ ಮತ್ತು 14-18 ವರ್ಷದ ಎಲ್ಲಾ ಕಿಶೋರಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸಮಗ್ರ ಶಿಶು ಅಬಿವೃದ್ದಿ ಯೋಜನೆಯಡಿ ಒದಗಿಸಲು ಕೇಂದ್ರ ಸಕರ್ಾರದ ನಿದರ್ೇಶನವಿರುತ್ತದೆ.

•► ಪೌಷ್ಠಿಕೇತರ ಅಂಶದಡಿ  ಕಿಶೋರಿಯರಿಗೆ ಆರೋಗ್ಯ ತಪಾಸಣೆ,  ಪೌಷ್ಠಕತೆ ಮತ್ತು ಆರೋಗ್ಯ ಶಿಕ್ಷಣ ,ಕುಟುಂಬ ಕಲ್ಯಾಣ, ಮಕ್ಕಳ ಪಾಲನೆ, ಗೃಹ ನಿರ್ವಹಣೆ, ಸಂತಾನೋತ್ಪತಿ ಮತ್ತು ಲೈಂಗಿಕ ಆರೋಗ್ಯ, ಜೀವನ ಕೌಶಲ್ಯ ಶಿಕ್ಷಣ, ವೃತ್ತಿಪರ/ಕೌಶಲ್ಯ ಅಬಿವೃದ್ದಿ ತರಬೇತಿಯನ್ನು ನೀಡಲಾಗುತ್ತದೆ.

•► 2012-13 ನೇ ಸಾಲಿಗೆ ರೂ.290.55 ಲಕ್ಷಗಳು ಅನುದಾನವನ್ನು ಬಿಡುಗಡೆಗೊಳಿಸಿದ್ದು, ರೂ.290.55 ಲಕ್ಷಗಳ ವೆಚ್ಚ ಮಾಡಲಾಗಿದೆ.

☀️ IX.ಸಾಂತ್ವನ. (SANTVAN)

☀️ IX.ಸಾಂತ್ವನ.
(SANTVAN)
━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


★ ಸಾಂತ್ವನ

•►  ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ  ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸಾಂತ್ವನ ಯೋಜನೆಯನ್ನು   2000-2001 ನೇ ಸಾಲಿನಲ್ಲಿ ಮಂಜೂರು ಮಾಡಲಾಯಿತು. ಇಂತಹ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆರ್ಥಿಕ  ಪರಿಹಾರ, ಹಾಗೂ ತರಬೇತಿ  ನೀಡಿ ಸ್ವಾವಲಂಬಿಗಳಾಗುವಂತೆ ಮಾಡಿ ಸ್ವತಂತ್ರ ಬದುಕು ಸಾಗಿಸಲು ನೆರವಾಗುವುದರ ಜೊತೆಗೆ, ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ  ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿರುತ್ತದೆ.

•►  ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಪ್ರತಿಯೊಂದು ಕೇಂದ್ರದಲ್ಲಿ  ಶುಲ್ಕ ರಹಿತ ದೂರವಾಣಿ ಒದಗಿಸಲಾಗಿದೆ. ಈ ಮಹಿಳಾ ಸಹಾಯವಾಣಿಯು ದಿನದ 24 ಗಂಟೆಗಳೂ ಸಂಕಷ್ಟಕ್ಕೊಳಕಾದ ಮಹಿಳೆಯರಿಂದ ಕರೆಗಳನ್ನು ಸ್ವೀಕರಿಸುತ್ತದೆ. ಇಂತಹ ಮಹಿಳೆಯರಿಗೆ  ಜಿಲ್ಲಾ  ಸಮಿತಿಯ ಶಿಫಾರಸ್ಸಿನ ಮೇರೆಗೆ ಅವಶ್ಯ ಸೌಲಭ್ಯ ಹಾಗು ಪುನರ್ವಸತಿ   ಸೇವೆಗಳನ್ನು ಪ್ರತಿ ಪ್ರಕರಣದ ಅರ್ಹತೆ ಗನುಗುಣವಾಗಿ ನೀಡಲಾಗುತ್ತದೆ.

•►  ದೌರ್ಜನ್ಯಕ್ಕೊಳಗಾದ ಮಹಿಳೆಗೆ ತಕ್ಷಣ ಆರ್ಥಿಕ ನೆರವು ಅವಶ್ಯಕತೆ ಇದ್ದಲ್ಲಿ 2000 ರೂಪಾಯಿಂದ ಗರಿಷ್ಥ 10,000 ರೂಪಾಯಿಗಳವರೆಗೆ ನೆರವು ನೀಡಲಾಗುವುದು.  ಪ್ರಸ್ತುತ ರಾಜ್ಯದಲ್ಲಿ ಒಟ್ಟು 172 ಸಾಂತ್ವನ  ಕೇಂದ್ರಗಳು ಕಾರ್ಯನಿರತವಾಗಿವೆ.

•►  2013-14ನೇ ಸಾಲಿನಲ್ಲಿ ರೂ.425.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ.  ಇದರೊಂದಿಗೆ ಹೆಚ್ಚುವರಿ ರೂ.17.50 ಲಕ್ಷಗಳನ್ನು ಲೆಕ್ಕ ಶೀರ್ಷಿಕೆ 2235-02-103-0-62-059 ಯಿಂದ ಮರು ಹೊಂದಾಣಿಕೆ ಮಾಡಿಕೊಂಡು, ಒಟ್ಟು ರೂ.442.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರ್ಚ್ 2014ರ ಅಂತ್ಯದವರೆಗೆ ರೂ.442.50 ಲಕ್ಷಗಳ ವೆಚ್ಚ ಭರಿಸಲಾಗಿದೆ.

•►  2014-15ನೇ ಸಾಲಿನಲ್ಲಿ ರೂ.800.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ. ಇದರಲ್ಲಿ ಮೊದಲನೇ ಕಂತಿನ ಅನುದಾನ ರೂ.356.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ನವೆಂಬರ್ 2014ರ ಅಂತ್ಯದವರೆಗೆ ರೂ.350.46 ಲಕ್ಷಗಳ ವೆಚ್ಚ ಭರಿಸಲಾಗಿದೆ.

☀️ VIII.ಅಂಬೇಡ್ಕರ್‌ ನಿವಾಸ ಯೋಜನೆ. (Ambedkar Niwas Yojana)

☀️ VIII.ಅಂಬೇಡ್ಕರ್‌ ನಿವಾಸ ಯೋಜನೆ.
(Ambedkar Niwas Yojana)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


★ ಅಂಬೇಡ್ಕರ್‌ ನಿವಾಸ ಯೋಜನೆ

•► ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜಯಂತಿ ಅಂಗವಾಗಿ 2015–16ನೇ ಸಾಲಿನಲ್ಲಿ ಪರಿಶಿಷ್ಟರಿಗೆ ವಸತಿ ಒದಗಿಸಲು ಅಂಬೇಡ್ಕರ್‌ ನಿವಾಸ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

•►  ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯ ಅಡಿಯಲ್ಲೇ ಈ ಯೋಜನೆಗೆ ಅನುದಾನ ಹೊಂದಿಸಲಾಗುವುದು.

•►  ಗ್ರಾಮೀಣ ಪ್ರದೇಶಲ್ಲಿ ಮನೆ ನಿರ್ಮಿಸಲು ಫಲಾನುಭವಿಗಳಿಗೆ ₹ 1.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ₹1.8 ಲಕ್ಷ ಅನುದಾನ ನೀಡಲಾಗುವುದು.

•►  ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಆಧರಿಸಿ, ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 50 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.

•►  ಎರಡು ವರ್ಷಗಳ ಒಳಗೆ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು

Friday, 13 January 2017

☀️ ಭಾಗ - VII: 2016 ರ ಕರ್ನಾಟಕದ (ಸ್ಥಳೀಯ) ಪ್ರಮುಖ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - VII: 2016 ರ ಕರ್ನಾಟಕದ (ಸ್ಥಳೀಯ) ಪ್ರಮುಖ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



•► ಕರ್ನಾಟಕ ರಾಜಕೀಯ -ಆಡಳಿತ ರಂಗ

 ಈ ವರ್ಷ ರಾಜ್ಯದ ಪಾಲಿಗೆ ಸಿಹಿಗಿಂತ ಕಹಿಯನ್ನೆ ಹೆಚ್ಚು ಕೊಟ್ಟಿತೆನ್ನಬೇಕು. ಮಹದಾಯಿ ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಜತೆಗೆ ಹಲವು ವಿವಾದಗಳು ಕಾಡಿದವು. ಮೂರೂ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ, ಭಿನ್ನಮತ ಕಂಡುಬಂತು. ಸಚಿವ ಮೇಟಿ ಅವರ ಲೈಂಗಿಕ ಪ್ರಕರಣದ ಸಿ.ಡಿ. ಬಿಡುಗಡೆ ವರ್ಷಾಂತ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಇವುಗಳ ನಡುವೆಯೂ ರಾಜ್ಯಕ್ಕೆ ಸಂದ ಕೆಲ ಪ್ರಶಸ್ತಿಗಳು, ಸರ್ಕಾರ ಕೈಗೊಂಡ ಕೆಲ ಯೋಜನೆಗಳು, ರಾಯಚೂರಿಗೆ ಐಐಐಟಿ ಮಂಜೂರಾಗಿದ್ದು ಸ್ವಲ್ಪ ನೆಮ್ಮದಿ ತಂದವು.


•►  ಅಬ್ಬಾ, ಎಂಥ ಮದುವೆ!

ಈ ವರ್ಷ ಎರಡು ಮದುವೆಗಳು ನಾಡಿನ ಗಮನ ಸೆಳೆದವು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೃಹಸ್ಥಾಶ್ರಮ ಪ್ರವೇಶಿಸಿದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿಯ ವಿವಾಹ ಕೋಟ್ಯಂತರ ರೂ.ಗಳ ಖರ್ಚಿನಿಂದಾಗಿ ಗಮನ ಸೆಳೆಯುವುದರ ಜತೆಗೆ ಚರ್ಚೆಗೂ ಗ್ರಾಸವಾಯಿತು. ರೆಡ್ಡಿ ಮಗಳ ಮದುವೆ ಸಂಬಂಧ ತೆರಿಗೆ ಇಲಾಖೆ ನೋಟಿಸನ್ನೂ ರವಾನಿಸಿದೆ.


•►  ಪಕ್ಷ ಪ್ರವರ

*.ಬಿಜೆಪಿ:
ಯುಗಾದಿ ಹಬ್ಬದ ದಿನವೇ ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷರಾಗಿ ನೇಮಕವಾಗುವುದರೊಂದಿಗೆ ಪಕ್ಷಕ್ಕೆ ಹೊಸ ಉತ್ಸಾಹ ಬಂದಿದ್ದು ಸುಳ್ಳಲ್ಲ. ತಮ್ಮ ವಿರುದ್ಧದ ಆರೋಪಗಳಿಂದ ಖುಲಾಸೆಯಾಗಿದ್ದು ಅವರ ಶಕ್ತಿಯನ್ನು ಹೆಚ್ಚಿಸಿತು. ಆದರೆ ಪದಾಧಿಕಾರಿಗಳ ಆಯ್ಕೆಯಲ್ಲಿ ಆದ ಅಸಮಾಧಾನ ಇನ್ನೂ ತಣಿದಿಲ್ಲ. ವಿಧಾನಪರಿಷತ್​ನಲ್ಲಿ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಪರ್ಯಾಯವಾಗಿ ಸಂಘಟನೆ ಮಾಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮೂಲಕ ಎಚ್ಚರಿಕೆ ಕೊಡಿಸಿದ್ದರೂ ಪ್ರಯೋಜನವಾಗಿಲ್ಲ.


*.ಜೆಡಿಎಸ್:
ವರ್ಷದ ಆರಂಭದಿಂದಲೂ ಭಿನ್ನಮತೀಯ ಶಾಸಕರು ಪಕ್ಷದ ಮುಖಂಡರಿಗೆ ತಲೆಬಿಸಿ ತಂದರು. ರಾಜ್ಯಸಭೆ ಚುನಾವಣೆಯಲ್ಲಿ ಎಂಟು ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಪಕ್ಷದ ಅಭ್ಯರ್ಥಿ ಫಾರೂಕ್ ಅವರನ್ನು ಸೋಲಿಸಿದರು. ಆ ನಂತರ ಆ ಶಾಸಕರನ್ನು ಅಮಾನತು ಮಾಡಲಾಯಿತು. ಬೆಂಗಳೂರಿನ ಗೋಪಾಲಯ್ಯ ಮಾತ್ರ ಮತ್ತೆ ಪಕ್ಷದತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಇದರ ನಡುವೆ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಎಚ್.ಡಿ. ಕುಮಾರಸ್ವಾಮಿ ಪುನರಾಯ್ಕೆಯಾಗಿದ್ದಾರೆ. ಕುಮಾರಸ್ವಾಮಿ ಉತ್ತರ ಕರ್ನಾಟಕದಲ್ಲಿ ಸಂಘಟನೆಗೆ ಒತ್ತು ನೀಡಲೆಂದು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾರೆ.

ಕೆಲ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಮತಕ್ಕಾಗಿ ಕಾಸು ಕೇಳಿದರೆಂಬ ಆರೋಪ ಖಾಸಗಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಕೇಳಿಬಂದು, ಜೆಡಿಎಸ್ ಶಾಸಕ ಖೂಬಾ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿದೆ.

*.ಕಾಂಗ್ರೆಸ್:
ಕುತೂಹಲದ ಮೊಟ್ಟೆಯಾಗಿದ್ದ ಸಂಪುಟ ಪುನಾರಚನೆ ಅಂತೂ ಈ ವರ್ಷದ ಮಧ್ಯದಲ್ಲಿ ನಡೆಯಿತು. 14 ಮಂತ್ರಿಗಳನ್ನು ಕೈಬಿಟ್ಟು ಅಷ್ಟೇ ಸಂಖ್ಯೆಯ ಸಚಿವರನ್ನು ಸೇರಿಸಿಕೊಳ್ಳಲಾಯಿತು. ಆ ಮೂಲಕ ಸಿದ್ದರಾಮಯ್ಯ ತಮ್ಮ ಕೈಬಲಪಡಿಸಿಕೊಂಡರು. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಯತ್ನಿಸಿದರೂ ಮತ್ತೆ ಮತ್ತೆ ವಿವಾದಗಳಿಗೆ ತಲೆಕೊಡಬೇಕಾಯಿತು.


•► ನಿಗಮ ಮತ್ತು ಮಂಡಳಿಗಳಿಗೆ ಎರಡನೇ ಅವಧಿಗೆ ನೇಮಕಾತಿಯಾಗಿದೆ. ಇದರಲ್ಲಿ 21 ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಸಂಪುಟ ಪುನಾರಚನೆಯಲ್ಲಿ ಆಗಿದ್ದ ಅಸಮಾಧಾನ ಸ್ವಲ್ಪ ತಗ್ಗಿದೆ. ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಕೈಬಿಟ್ಟ ಶ್ರೀನಿವಾಸಪ್ರಸಾದ್, ಅಂಬರೀಷ್, ಬಾಬುರಾವ್ ಚಿಂಚನಸೂರು, ಖಮರುಲ್ ಇಸ್ಲಾಂ, ಸಂಪುಟದಲ್ಲಿ ಸ್ಥಾನ ಸಿಗದ ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಕೆಲ ದಿನ ಅತೃಪ್ತಿ ಹೊರ ಹಾಕಿದರು. ಶ್ರೀನಿವಾಸಪ್ರಸಾದ್ ಮಾತ್ರ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಮಂತ್ರಿಯಾಗುವ ಆಸೆ ಹೊಂದಿದ್ದ ಕಾಗೋಡು ತಿಮ್ಮಪ್ಪ, ರಮೇಶ್​ಕುಮಾರ್, ರಾಯರೆಡ್ಡಿ ಕೊನೆಗೂ ಸಂಪುಟ ಸೇರಿದರು. ಮಲ್ಲಿಕಾರ್ಜುನ ಖರ್ಗೆ ಅವರ ದನಿಯಡಗಿಸುವ ಸಲುವಾಗಿಯೇ ಅವರ ಪುತ್ರ ಪ್ರಿಯಾಂಕ ಖರ್ಗೆಯನ್ನು ಮಂತ್ರಿ ಮಾಡಿದ್ದು ಸಿದ್ದರಾಮಯ್ಯನವರ ಚಾಣಾಕ್ಷತನಕ್ಕೆ ಸಾಕ್ಷಿ. ಏತನ್ಮಧ್ಯೆ, ದಿನೇಶ್ ಗುಂಡೂರಾವ್ ಪಕ್ಷದ ಕಾರ್ಯಾಧ್ಯಕ್ಷರಾದರು. ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರರಲ್ಲಿ ಕೇವಲ ಒಂದು ಸ್ಥಾನ ಗೆದ್ದರೂ, ರಾಜ್ಯಸಭೆಯಲ್ಲಿ ನಾಲ್ಕಕ್ಕೆ ಮೂರು, ವಿಧಾನಪರಿಷತ್​ನಲ್ಲಿ 7ರಲ್ಲಿ 4 ಸ್ಥಾನ ಜಯಿಸುವ ಮೂಲಕ ಸ್ವಲ್ಪ ನಿರಾಳವಾಯಿತು. ಜೆಡಿಎಸ್ ಶಾಸಕರನ್ನು ಸೆಳೆಯುವ ತಂತ್ರ ಅನುಸರಿಸಿದ್ದು ಫಲಪ್ರದವಾಯಿತು. ಜಿಲ್ಲಾ ಪಂಚಾಯಿತಿಗಳಲ್ಲಿ ಸಹ ಹೆಚ್ಚು ಸ್ಥಾನಗಳನ್ನು ಗಳಿಸಿ ಮೊದಲ ಸ್ಥಾನ ಉಳಿಸಿಕೊಂಡಿತು. ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ಮೈತ್ರಿ ಮುಂದುವರಿಸಿ ಪದ್ಮಾವತಿ ಅವರನ್ನು ಮೇಯರ್ ಮಾಡಲಾಯಿತು.


•►  ರಮ್ಯಾ ಪಾಕ್ ಹೇಳಿಕೆ

ಪಾಕಿಸ್ತಾನಕ್ಕೆ ಹೋಗಿ ಬಂದ ನಟಿ, ಮಾಜಿ ಸಂಸದೆ ರಮ್ಯಾ ‘ಅಲ್ಲಿರುವವರೆಲ್ಲ ಕೆಟ್ಟವರೇನೂ ಅಲ್ಲ, ಅಲ್ಲಿಯೂ ಒಳ್ಳೆಯವರಿದ್ದಾರೆ’ ಎಂದಿದ್ದು ವಿವಾದ ಸೃಷ್ಟಿಸಿತ್ತು. ರಮ್ಯಾ ದೇಶದ ವಿರೋಧಿ ರಾಷ್ಟ್ರವನ್ನು ಹೊಗಳುತ್ತಿದ್ದಾರೆಂಬ ಟೀಕೆಗಳು ಕೇಳಿಬಂದು, ರಾಷ್ಟ್ರದ್ರೋಹ ಕಾನೂನಿನಡಿ ಪ್ರಕರಣವೂ ದಾಖಲಾಯಿತು.



•► ವಿವಾದ-ವಿಚಾರ

*.ಲೋಕಾಯುಕ್ತ ನೇಮಕ:
ಲೋಕಾಯುಕ್ತಕ್ಕೆ ನ್ಯಾಯಮೂರ್ತಿಯ ನೇಮಕ ಕುರಿತ ವಿವಾದ ಮುಂದುವರಿದಿದೆ. ಆಯ್ಕೆ ಸಮಿತಿಯಲ್ಲಿ ಸರ್ಕಾರ ನ್ಯಾ.ಎಸ್.ಆರ್. ನಾಯಕ್ ಹೆಸರು ಹೇಳಿದರೆ, ಪ್ರತಿಪಕ್ಷ ಮುಖಂಡರು ನ್ಯಾ. ವಿಕ್ರಮಜಿತ್ ಸೇನ್ ಹೆಸರನ್ನು ಮುಂದೆ ತಂದರು. ಸರ್ಕಾರ ನಾಯಕ್ ಹೆಸರನ್ನೇ ಶಿಫಾರಸು ಮಾಡಿತಾದರೂ ರಾಜ್ಯಪಾಲರು ಒಪ್ಪದೇ ಪ್ರಸ್ತಾಪ ನನೆಗುದಿಗೆ ಬಿತ್ತು.

*.ನ್ಯಾ. ಆಡಿ ಪ್ರಕರಣ:
ಲೋಕಾಯುಕ್ತರಾಗಿದ್ದ ನ್ಯಾ. ವೈ. ಭಾಸ್ಕರ ರಾವ್ ಅವರ ಪದಚ್ಯುತಿಗೆ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡ ರೀತಿಯಲ್ಲಿಯೇ, ಉಪ ಲೋಕಾಯುಕ್ತ ನ್ಯಾ. ಬಿ. ಸುಭಾಷ್ ಅಡಿ ಅವರ ವಿರುದ್ಧವೂ ನಿರ್ಣಯ ಕೈಗೊಳ್ಳಲು ಸರ್ಕಾರ ಮುಂದಾಗಿತ್ತು. ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ನಂತರ ಸಭಾಧ್ಯಕ್ಷರು ಪ್ರಕರಣ ಕೈಬಿಟ್ಟರು. ಈ ಇಡೀ ಪ್ರಕರಣದಲ್ಲಿ ಸರ್ಕಾರ ಮುಖಭಂಗ ಅನುಭವಿಸಿತು.

*.ಎಸಿಬಿ ರಚನೆ-
ಆಂಟಿ ಕರಪ್ಶನ್ ಬ್ಯೂರೋ(ಭ್ರಷ್ಟಾಚಾರ ನಿಗ್ರಹ ದಳ)ವನ್ನು ಸರ್ಕಾರ ಜೂನ್​ನಲ್ಲಿ ರಚಿಸಿದ್ದು, ಇದು ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆ. ಇದು ನೇರವಾಗಿ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿರುವ ಕಾರಣ ಇದರ ಕೆಲಸ ಕಾರ್ಯಗಳು ಜನರಲ್ಲಿ ಇನ್ನೂ ವಿಶ್ವಾಸ ಹುಟ್ಟಿಸಿಲ್ಲ.


•►  ಗವರ್ನರ್ v/s ಗವರ್ನಮೆಂಟ್

ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ತಿಕ್ಕಾಟ ಮುಂದುವರಿಯಿತು. ಕೆಪಿಎಸ್​ಸಿಗೆ ಟಿ. ಶ್ಯಾಂ ಭಟ್ ಅವರ ನೇಮಕ ಶಿಫಾರಸನ್ನು ಎರಡು ಬಾರಿ ತಿರಸ್ಕರಿಸಿದ್ದ ರಾಜ್ಯಪಾಲರು ಮೂರನೇ ಬಾರಿ ಒಪ್ಪಿ ಅಚ್ಚರಿ ಮೂಡಿಸಿದರು. ಲೋಕಾಯುಕ್ತಕ್ಕೆ ನ್ಯಾ. ಎಸ್.ಆರ್. ನಾಯಕ್ ಅವರನ್ನು ನೇಮಿಸುವ ಸರ್ಕಾರದ ಉದ್ದೇಶಕ್ಕೆ ರಾಜ್ಯಪಾಲರು ಅಸ್ತು ಎನ್ನಲಿಲ್ಲ. ಪರಿಶಿಷ್ಟರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನೂ ಒಪ್ಪಲಿಲ್ಲ. ಪಂಚಾಯಿತಿ ಸಮಗ್ರ ತಿದ್ದುಪಡಿ ವಿಧೇಯಕಕ್ಕೆ ಆರಂಭದಲ್ಲಿ ಅಸಮ್ಮತಿಸಿದ್ದರಾದರೂ ಸರ್ಕಾರ ವಿವರಿಸಿದ ನಂತರ ಒಪ್ಪಿದರು. ಅರ್ಕಾವತಿ ರೀಡೂ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ನಕಾರ ಸೂಚಿಸಿದ್ದು ವಿಶೇಷ.



 •► ಆಡಳಿತ ಲೋಪ-ದೋಷ

•►  ಗ್ರಾಮೀಣಾಭಿವೃದ್ಧಿಯಲ್ಲಿ ಕಳ್ಳಗಂಟು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಈ ವರ್ಷ ಸಾಕಷ್ಟು ಸದ್ದು ಮಾಡಿತು. ಇಲಾಖೆಯ ಹಣವನ್ನು ಬಳಸದೇ ಬೇರೆ ಬೇರೆ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟು ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರೇ ಪತ್ತೆ ಹಚ್ಚಿ 745 ಕೋಟಿ ರೂ.ಗಳನ್ನು ವಾಪಾಸು ಇಲಾಖೆಗೆ ತಂದರು. ಅದೇ ರೀತಿ ಬೇರೆ ಬೇರೆ ಇಲಾಖೆಯಲ್ಲಿ 10 ಸಾವಿರ ಕೋಟಿ ರೂ.ಗಳಷ್ಟು ಕಳ್ಳಗಂಟು ಇರಬಹುದೆಂಬ ಅಂದಾಜಿದೆ.


•► ಮುಖ್ಯಮಂತ್ರಿ ಪರಿಹಾರ ನಿಧಿಗೆ ಕನ್ನ

ಬಡವರ ಆರೋಗ್ಯಕ್ಕೆ ನೆರವಾಗುವ ಉದ್ದೇಶದಿಂದ ಇರುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಕಲಿ ಬಿಲ್ ಮೂಲಕ ಕೆಲವರು ಕನ್ನ ಹಾಕಲು ಮುಂದಾಗಿರುವುದು ಬಯಲಿಗೆ ಬಂತು. ಆ ಬಗ್ಗೆ 75 ಮೊಕದ್ದಮೆಗಳು ದಾಖಲಾಗಿದ್ದು ಸಿಐಡಿ ತನಿಖೆ ನಡೆಯುತ್ತಿದೆ.


•► ಸರ್ಕಾರ ಫೇಲ್!

ಪಿಯುಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಸರ್ಕಾರವೇ ಫೇಲ್ ಆಯಿತು. ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಎರಡು ಬಾರಿ ಲೀಕ್ ಆಯಿತು. ಸಿಐಡಿ ಹಗರಣದ ಪ್ರಮುಖ ಕಿಂಗ್​ಪಿನ್​ಗಳನ್ನು ಬಂಧಿಸಿ ತನಿಖೆ ನಡೆಸುತ್ತಿದೆ.

ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಅವ್ಯವಹಾರದ ಆರೋಪ, ಅಬಕಾರಿ ಸಚಿವರಾಗಿದ್ದ ಎಚ್.ವೈ.ಮೇಟಿ ಲೈಂಗಿಕ ಪ್ರಕರಣದ ಸಿ.ಡಿ. ಕಾಂಗ್ರೆಸ್​ಗೆ ಆತಂಕ-ಮುಜುಗರ ಸೃಷ್ಟಿಸಿದವು.


•►  ವೆಂಕಯ್ಯ ನಿರ್ಗಮನ ನಿರ್ಮಲಾ ಆಗಮನ

ರಾಜ್ಯದಿಂದ ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದ ಎಂ. ವೆಂಕಯ್ಯ ನಾಯ್ಡು ಅವರು ನಾಲ್ಕನೆ ಬಾರಿ ಆಯ್ಕೆ ಬಯಸಿದಾಗ ಅವರ ವಿರುದ್ಧ ಟೀಕೆಗಳು ಕೇಳಿಬಂದವು. ಇದರಿಂದ ಬೇಸರಗೊಂಡ ಅವರು ರಾಜಸ್ಥಾನಕ್ಕೆ ವಲಸೆ ಹೋದರು. ಆದರೆ ವೆಂಕಯ್ಯ ನಾಯ್ಡು ಜಾಗಕ್ಕೆ ತಮಿಳುನಾಡಿನ ನಿರ್ಮಲಾ ಸೀತಾರಾಮನ್ ಅವರನ್ನು ಆಯ್ಕೆ ಮಾಡಲಾಯಿತು.


•► ಚುನಾವಣಾ ವರ್ಷ

ಈ ವರ್ಷ ಸಾಲು ಸಾಲು ಚುನಾವಣೆಗಳನ್ನು ರಾಜ್ಯ ನೋಡಿತು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ರಾಜ್ಯಸಭೆ ಹಾಗೂ ವಿಧಾನ ಪರಿಷತ್, ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಇಷ್ಟಾಗ್ಯೂ ವಿಧಾನಸಭೆ ಹಾಗೂ ವಿಧಾನಪರಿಷತ್​ನ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇದೆ.


•► ಜಾಧವ್​ಗೆ ಬಿಸಿ

ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ ಜಾಧವ್ ಸಂಸದೀಯ ಸಮಿತಿ ಸಭೆಗೆ ಹೋಗಿರಲಿಲ್ಲ. ಆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ತರಾಟೆ ತೆಗೆದುಕೊಂಡಿದ್ದರು. ಮಾಧ್ಯಮಗಳು ಪ್ರಶ್ನಿಸಲು ಹೋದಾಗ ಜಾಧವ್ ಅವರು ವಿಧಾನಸೌಧದ ಎರಡು ಮಹಡಿಗಳಲ್ಲಿ ಓಡಿ ಹೋಗಿ ಕೋಣೆಯೊಂದರಲ್ಲಿ ಬಾಗಿಲು ಹಾಕಿಕೊಂಡಿದ್ದರು.
ಅಧಿಕಾರದ ಕೊನೆ ಅವಧಿಯಲ್ಲಿ ಅರವಿಂದ ಜಾಧವರನ್ನು ಭೂಹಗರಣದ ಆಪಾದನೆಯೂ ಕಾಡಿತು. ಕೊನೆಗೆ ಸರ್ಕಾರದ ವರದಿ ಅವರ ಪರವಾಗಿ ಬಂದು ನಿರಾಳರಾದರು.

*.ಕುರುಡು ಕಾಂಚಾಣ!

ವಿಧಾನಸೌಧ ಆವರಣದಲ್ಲಿಯೇ ವಕೀಲರೊಬ್ಬರ ಕಾರಿನಲ್ಲಿ 1.9 ಕೋಟಿ ರೂ. ಸಿಕ್ಕ ಪ್ರಕರಣದಲ್ಲಿ ಆ ಹಣ ಯಾರದ್ದು, ಯಾರಿಗೆ ಕೊಡಲಾಗುತ್ತಿತ್ತು ಎಂಬುದು ಮಾತ್ರ ಬಹಿರಂಗವಾಗಲೇ ಇಲ್ಲ. ಅಧಿಕಾರಿಗಳಾದ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಅವರ ಮನೆಯಲ್ಲಿ ಅಕ್ರಮ ಆಸ್ತಿ ಪತ್ತೆ ಹಾಗೂ ರಾಜ್ಯದ ಕೆಲವೆಡೆ ಹೊಸ ನೋಟುಗಳು ಸಿಕ್ಕಿದ್ದು ಕಪ್ಪುಚುಕ್ಕೆಯೇ.

(courtesy :ವಿಜಯವಾಣಿ ಸುದ್ದಿಜಾಲ)

Tuesday, 3 January 2017

☀️ VII.ಜೀವನ್ ಪ್ರಮಾಣ್ ಯೋಜನೆ. (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (Jeevan Praman Yojana)

☀️ VII.ಜೀವನ್ ಪ್ರಮಾಣ್ ಯೋಜನೆ. (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(Jeevan Praman Yojana)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


★ ಜೀವನ್ ಪ್ರಮಾಣ್ ಯೋಜನೆ. :


•► ಜೀವನ್ ಪ್ರಮಾಣ್ ಹಿರಿಯ ನಾಗರಿಕರಿಗೆ ನೀಡುವ ಪೆನ್ಷನ್ ಯೋಜನೆಯ ಬಯೋಮೆಟ್ರಿಕ್ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಹಾಗೂ ಇತರೆ ಸರ್ಕಾರಿ ಪೆನ್ಷನ್‌ಗಳು ದೊರೆಯುತ್ತವೆ.


•► ದೇಶದಲ್ಲಿರುವ ಸುಮಾರು ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಪೆನ್ಷನ್ ಆಧಾರಿತ ಕುಟುಂಬಗಳಾಗಿದ್ದು, ನಿವೃತ್ತಿಗೊಂಡಿರುವ ನೌಕರ ಅಥವಾ ಅಧಿಕಾರಿಯ ವೇತನ ಹಾಗೂ ಲಭ್ಯತೆಗಳನ್ನು ಆಧರಿಸಿ ಸರ್ಕಾರಗಳ ನೀಡುವ ಪೆನ್ಷನ್ ಇದರ ಅಡಿಯಲ್ಲಿ ಬರಲಿದೆ.


•► ದೇಶದಲ್ಲಿ ಕೇಂದ್ರ ಸರ್ಕಾರದಿಂದ ಸುಮಾರು 50 ಲಕ್ಷದಷ್ಟು ನಿವೃತ್ತರು ಪೆನ್ಷನ್ ಪಡೆಯುತ್ತಿದ್ದರೆ, ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ಸಂಖ್ಯೆಯ ಪೆನ್ಷನ್‌ದಾರರಿದ್ದಾರೆ. ಇದರೊಂದಿಗೆ ಸೇನೆ ಹಾಗೂ ರಕ್ಷಣಾ ಇಲಾಖೆಯ ಸುಮಾರು 25 ಲಕ್ಷ ಯೋಧರೂ ಸಹ ಪೆನ್ಷನ್ ಪಡೆಯುತ್ತಿದ್ದಾರೆ.


•► ಇದೀಗ ಎಲ್ಲ ಪೆನ್ಷನ್‌ದಾರರನ್ನು ಒಂದೇ ಸೂರಿನಡಿ ತರಲು ನಿರ್ಧರಸಲಾಗಿದ್ದು, ಜೀವನ್ ಪ್ರಮಾಣ್ ಯೋಜನೆಯನ್ನು ಜಾರಿಗೊಳಿಸಿದೆ. ಈಗಾಗಲೇ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನು ಆನ್‌ಲೈನ್ ಮೂಲಕ ಅಥವಾ ಡಿಜಿಟಲೀಕರಣದ ಮೂಲಕ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದ್ದು, ಡಿಜಿಟಲ್ ಮೂಲಕವೇ ಸರ್ಟಿಫಿಕೇಟ್ ಪಡೆಯಲೂ ಸಹ ಅವಕಾಶವಿದೆ.


•► ಟಿಜಿಟಲ್ ಸರ್ಟಿಫಿಕೇಟ್‌ನಲ್ಲಿ ನಮೂದಾಗುವ ನೋಂದಣಿ ಸಂಖ್ಯೆಯೊಂದಿಗೆ ಪ್ರಮಾಣ್ ಗುರುತಿನ ಚೀಟಿಯನ್ನು ನಿಗದಿತ ಬ್ಯಾಂಕ್‌ನಲ್ಲಿ ಸಲ್ಲಿಸಿ, ಪೆನ್ಷನ್ ಪಡೆಯಬಹುದು. ನೋಂದಣಿ ಕುರಿತು ಮಾಹಿತಿ ಹಾಗೂ ಸಹಕಾರ ಪಡೆಯಲು ನಿಮ್ಮ ಮೊಬೈಲ್‌ನಲ್ಲಿಎಐಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ ನಿಮ್ಮ ನಗರದ ಪಿನ್‌ಕೋಡ್ ಟೈಪ್ ಮಾಡಿ 9938299899 ಸಂಖ್ಯೆಗೆ ಸಂದೇಶ ಕಳುಹಿಸಬಹುದು.

ಮಾಹಿತಿಗಾಗಿ : https://jeevanpramaan.gov.in/ ಗೆ ಸಂಪರ್ಕಿಸಬಹುದು.

☀️ VI.ಸಂಸದ್ ಆದರ್ಶ್ ಗ್ರಾಮ ಯೋಜನಾ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (Sansad Adarsh Gram Yojana)

☀️ VI.ಸಂಸದ್ ಆದರ್ಶ್ ಗ್ರಾಮ ಯೋಜನಾ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(Sansad Adarsh Gram Yojana)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)



★ ಸಂಸದ್ ಆದರ್ಶ್ ಗ್ರಾಮ ಯೋಜನಾ :

•► ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜಾರಿಗೆ ಬಂದ ಮಹತ್ವದ ಯೋಜನೆಗಳಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನಾ ಮುಖ್ಯವಾದುದು. 2014ರ ಅಕ್ಟೋಬರ್ 11 ರಂದು ಜಯಪ್ರಕಾಶ್ ನಾರಾಯಣರ ಜನ್ಮದಿನಾಚರಣೆಯಂದು ಈ ಯೋಜನೆಗೆ ಪ್ರಧಾನಿಯವರು ಚಾಲನೆ ನೀಡಿದ್ದರು.


•► ಪ್ರತಿ ಲೋಕಸಭಾ ಕ್ಷೇತ್ರದ ಗ್ರಾಮವೊಂದನ್ನು ಅಲ್ಲಿನ ಸಾಂಸದರು ದತ್ತು ತೆಗೆದುಕೊಳ್ಳುವ ಮೂಲಕ ಸಮಗ್ರ ಅಭಿವೃದ್ಧಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಯೇ ಇದರ ಮೂಲ ಉದ್ದೇಶವಾಗಿದ್ದು, ಹಳ್ಳಿಗಳಲ್ಲಿ ಸಾಮಾಜಿಕ ಅಭಿವೃದ್ಧಿ, ಸಾಂಸ್ಕೃತಿಕ ಬೆಳವಣಿಗೆಗಳ ಜೊತೆಯಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸುವುದು ಇದರ ಉದ್ದೇಶಗಳಲ್ಲಿ ಸೇರಿವೆ.


•► ಪ್ರತಿ ಸಾಂಸದನಲ್ಲೂ ಗ್ರಾಮೀಣಾಭಿವೃದ್ಧಿಯ ಜವಾಬ್ದಾರಿಯನ್ನು ಮೂಡಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಎಲ್ಲ ಪಕ್ಷಗಳಿಂದಲೂ ಆಯ್ಕೆಯಾಗಿರುವ ದೇಶದ ಯಾವುದೇ ಸಾಂಸದ ಇದರ ಅಡಿಯಲ್ಲಿ ಗ್ರಾಮಗಳನ್ನು ದತ್ತು ಪಡೆಯಬಹುದು.


•► ಗ್ರಾಮವೊಂದನ್ನು ದತ್ತು ಪಡೆಯುವ ಮೂಲಕ ಅಲ್ಲಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವುದು, ಸಾರಿಗೆ ಸಂಪರ್ಕ, ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಆದರ್ಶ ಗ್ರಾಮವನ್ನಾಗಿ ಮಾಡುವುದು ಸಾಂಸದನ ಕರ್ತವ್ಯವಾಗಿರುತ್ತದೆ. 2014ರಲ್ಲಿ ಯೋಜನೆ ಜಾರಿಯಾದ ನಂತರ ಆಯ್ಕೆ ಮಾಡಿಕೊಂಡ ಗ್ರಾಮವನು 2016ರ ಒಳಗಾಗಿ ಆದರ್ಶ ಗ್ರಾಮವನ್ನಾಗಿ ಮಾಡಬೇಕು. ಇದಾದನ ನಂತರ ಮತ್ತೆ ಎರಡರಿಂದ ಮೂರು ಗ್ರಾಮಗಳನ್ನು ದತ್ತು ಪಡೆದು 2019ರ ಒಳಗಾಗಿ ಆ ಗ್ರಾಮಗಳನ್ನು ಅಭಿವೃದ್ಧ ಮಾಡಲು ಅವಕಾಶವಿದೆ.


•► ಇದಲ್ಲದೇ ಕೇಂದ್ರ ಸರ್ಕಾರದ ಅನುದಾನ ಬಳಸಿಕೊಂಡು ಮುಂದಿನ ಹತ್ತು ವರ್ಷಗಳಲ್ಲಿ ಆಗಬೇಕಾದ ಆ ಗ್ರಾಮದ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿ, ಯೋಜನೆಗಳನ್ನು ಜಾರಿಗೊಳಿಸಬಹುದು.


•► ಇದರ ಅಡಿಯಲ್ಲಿ ಆಯ್ಕೆಯಾದ ಗ್ರಾಮವು ಸ್ಮಾರ್ಟ್ ಶಾಲೆಗಳು, ಅಲ್ಲಿನ ಗ್ರಾಮಸ್ಥರೆಲ್ಲರಿಗೂ ಸೂರು ಒದಗಿಸುವುದು, ಗ್ರಾಮದಲ್ಲೇ ಉತ್ತಮ ಆಸ್ಪತ್ರೆಯನ್ನು ನಿರ್ಮಿಸುವುದು ಸೇರಿದಂತೆ ಗುಣಮಟ್ಟದ ಸೌಲಭ್ಯ ದೊರೆಯುವಂತೆ ಮಾಡುವುದಾಗಿದೆ.


•► ಈ ಯೋಜನೆಯಡಿ ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದಲ್ಲಿರುವ ಜಯಪುರ ಗ್ರಾಮವನ್ನು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ ಬರೇಲಿಯ ಉದ್ವಾ, ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದ ದೀನ್, ಕೇಂದ್ರ ಸಚಿವ ವಿ.ಕೆ. ಸಿಂಗ್ ಗಾಜಿಯಾಬಾದ್‌ನ ಮಿರ್‌ಪುರ್ ಹಿಂದೂ, ಸಾಂಸದ ಅಹ್ಮದ್ ಪಟೇಲ್ ಗುಜರಾತ್‌ನ ವಂದರಿ, ಸಾಂಸದ ಸಚಿನ್ ತೆಂಡೂಲ್ಕರ್ ಆಂಧ್ರಪ್ರದೇಶದ ಗುಡಾರ್ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿದ್ದಾರೆ.

•► ಈ ಕುರಿತ ಮಾಹಿತಿಗಾಗಿ  http://www.saanjhi.gov.in/ ವೀಕ್ಷಸಬಹುದು.

☀️ ಭಾಗ - VI: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - VI: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━
★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



•► ವಾಹನ ಉತ್ಪಾದನೆ ಪ್ರಮಾಣ ಏರಿಕೆ

2006ರಿಂದ 2016ರ ಅವಧಿಯ ಸಂಯುಕ್ತ ವಾರ್ಷಿಕ ಅಭಿವೃದ್ಧಿ ಪ್ರಮಾಣ(ಸಿಎಜಿಆರ್) ದಲ್ಲಿ ವಾಹನ ಉತ್ಪಾದನೆ ಶೇ.9.4ರಷ್ಟು ಏರಿಕೆ ದಾಖಲಿಸಿದೆ. ಸಾರ್ವಜನಿಕ ವಾಹನ ಉತ್ಪಾದನೆ ಪ್ರಮಾಣ ಶೇ.10.09ರಷ್ಟು ಮತ್ತು ದ್ವಿಚಕ್ರ ವಾಹನಗಳ ಉತ್ಪಾದನಾ ಪ್ರಮಾಣ ಶೇ.9.48ರಷ್ಟು ಹೆಚ್ಚಾಗಿದೆ.


•► ಆರ್​ಬಿಐ ಸಾರಥ್ಯ ಬದಲು

ರಘುರಾಂ ರಾಜನ್ ಅವರೇ ಎರಡನೇ ಅವಧಿಗೂ ಆರ್​ಬಿಐನ ಗವರ್ನರ್ ಆಗಿ ಮುಂದುವರಿಯಬಹುದೆಂಬ ನಿರೀಕ್ಷೆ ಹಲವರಲ್ಲಿ ಇತ್ತು. ಆದರೆ, ವರ್ಷದ ಮಧ್ಯಭಾಗದಲ್ಲಿ ಉರ್ಜಿತ್ ಪಟೇಲ್ ಅವರನ್ನು ನೂತನ ಗವರ್ನರ್ ಎಂದು ಘೊಷಿಸಲಾಯಿತು. ಅವರು ಸೆ.4ರಂದು ಅಧಿಕಾರ ಸ್ವೀಕರಿಸಿದರು.


•► ಗಮನ ಸೆಳೆದ ನೇಮಕಾತಿಗಳು

ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋಗೆ ನೂತನ ಸಿಇಒ ಆಗಿ ಅಬಿದ್ ಅಲಿ ಅವರನ್ನು ಫೆ.1ರಂದು ನೇಮಿಸಲಾಯಿತು. ಕಾಪೋರೇಷನ್ ಬ್ಯಾಂಕ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಂಡಿ ಆಗಿ ಫೆ.1ರಂದು ಜೈಕುಮಾರ್ ಗರ್ಗ್ ನೇಮಕ.


•► ಬ್ಯಾಂಕ್ ಮುಳುಗಿಸಿದ್ದು ಶ್ರೀಮಂತರೇ…

ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ರೈತರು ಅಥವಾ ಮಧ್ಯಮವರ್ಗದ ಜನರಲ್ಲ. ಬದಲಿಗೆ ಶ್ರೀಮಂತರೇ ಎಂಬ ಮಾಹಿತಿ ಮಾರ್ಚ್​ನಲ್ಲಿ ಬಹಿರಂಗಗೊಂಡಿತು. 1 ಕೋಟಿ ರೂ.ಗಿಂತಲೂ ಹೆಚ್ಚು ಸಾಲವನ್ನು ಹೊಂದಿರುವ ಶ್ರೀಮಂತರು ಹಾಗೂ ಉದ್ಯಮಿಗಳು ಎಲ್ಲ ಬ್ಯಾಂಕ್​ಗಳ ಶೇ.73ರಷ್ಟು ಮರುಪಾವತಿಯಾಗದ ಸಾಲದ ಮೊತ್ತವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಪ್ರಮುಖ 10 ಉದ್ಯಮಿಗಳು ಒಟ್ಟು 1.21 ಲಕ್ಷ ಕೋಟಿ ರೂ. ಸಾಲ ಹೊಂದಿದ್ದಾರೆ. ಇದು ಎಲ್ಲ ಬ್ಯಾಂಕ್​ಗಳ ಅನುತ್ಪಾದಕ ಆಸ್ತಿಯ ಶೇ.40ರಷ್ಟಾಗಿದೆ.


•► ಸಂಸತ್ತಿನಲ್ಲೇ ಇದ್ದಾರೆ ಸುಸ್ತಿದಾರರು!:
 ದೇಶದ ವಿವಿಧ ಬ್ಯಾಂಕ್​ಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ಅನುತ್ಪಾದಕ ಆಸ್ತಿ (ಎನ್​ಪಿಎ) ಇದ್ದು, ಆಂಧ್ರದ ರಾಜಕಾರಣಿಗಳು ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಆಂಧ್ರ ವಿಭಜನೆ ವಿರೋಧಿಸಿ ಸಂಸತ್ತಿನಲ್ಲಿ ಪೆಪ್ಪರ್ ಸ್ಪ್ರೇ ಮಾಡಿದ ಲಗಡಪತಿ ರಾಜಗೋಪಾಲ್(34,000 ಕೋಟಿ ರೂ.)
ಕೇಂದ್ರ ಸಚಿವ ವೈ. ಎಸ್. ಚೌಧರಿ(106 ಕೋಟಿ ರೂ.)
ಟಿಡಿಪಿ ಸಂಸದ ರಾಯಪತಿ ಸಾಂಬಶಿವ (434 ಕೋಟಿ ರೂ.)
ಡೆಕ್ಕನ್ ಕ್ರಾನಿಕಲ್ ಸಂಸ್ಥೆಯ ಮುಖ್ಯಸ್ಥ/ಕಾಂಗ್ರೆಸ್ ಸಂಸದ ವೆಂಕಟರಾಮಿ ರೆಡ್ಡಿ(4,000 ಕೋಟಿ ರೂ.)
ಬಿಜೆಡಿ ಸಂಸದ ಜೈ ಪಾಂಡಾ(2,000 ಕೋಟಿ ರೂ.)


•► ಅಂಚೆ ಕಚೇರಿ ಬ್ಯಾಂಕ್

ಕೇಂದ್ರ ಸಚಿವ ಸಂಪುಟ ಜ.1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ) ಆರಂಭಕ್ಕೆ ಅನುಮೋದನೆ ನೀಡಿತು. ದೇಶಾದ್ಯಂತ ಒಟ್ಟು 650 ಶಾಖೆಗಳನ್ನು ತೆರೆಯಲು ಉದ್ದೇಶಿಸಿದ್ದು, ಆರ್​ಬಿಐನಿಂದ ಬ್ಯಾಂಕಿಂಗ್ ಪರವಾನಗಿ ಪಡೆದುಕೊಂಡ ಅಂಚೆ ಕಚೇರಿಗಳು ಪೇಮೆಂಟ್ ಬ್ಯಾಂಕ್ ಆರಂಭಿಸಬಹುದಾಗಿದೆ. ಇದರಿಂದ ಸುಮಾರು 2000 ಜನರಿಗೆ ಉದ್ಯೋಗಾವಕಾಶ ಸಿಗಲಿದೆ.

ಜಾರ್ಖಂಡ್​ನಲ್ಲಿ ಮೊದಲ ಐಪಿಪಿಬಿ: 2017ರ ಜನವರಿಯಲ್ಲಿ ದೇಶದ ಮೊದಲ ಪೋಸ್ಟ್ ಪೇಮೆಂಟ್ ಬ್ಯಾಂಕ್ ಜಾರ್ಖಂಡ್​ನಲ್ಲಿ ಆರಂಭವಾಗಲಿದೆ.


•► ರಿಲಯನ್ಸ್ ಜಿಯೋ ಡೇಟಾಗಿರಿ

4ಜಿ ನೆಟ್​ವರ್ಕ್ ಸೇವೆಯಲ್ಲಿ ರಿಲಯನ್ಸ್ ಜಿಯೋ ಹೊಸ ಸಂಚಲನವನ್ನೇ ಸೃಷ್ಟಿಸಿತು. ಸೆಪ್ಟೆಂಬರ್ 5ರಿಂದ ಆರಂಭವಾದ ಈ ಸೇವೆ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರದ ಹೊಸ ಶಕೆ ಆರಂಭಿಸಿತು. ಡಿ.31ರವರೆಗೆ ಕರೆ ಹಾಗೂ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಘೊಷಿಸಿದ್ದ ಕಂಪನಿ, ಈ ಕೊಡುಗೆಯನ್ನು ‘ನ್ಯೂ ಇಯರ್’ ಎಂಬ ಹೊಸಯೋಜನೆಯಡಿ 2017ರ ಮಾರ್ಚ್ 31ರವರೆಗೆ ವಿಸ್ತರಿಸಿದೆ. ಜಿಯೋ ತನ್ನ ಎಲ್ಲ ಪ್ಲ್ಯಾನ್​ಗಳಲ್ಲೂ ಕರೆ ಉಚಿತಗೊಳಿಸಿದ್ದು, ಡೇಟಾಗಳಿಗಷ್ಟೇ ದರ ವಿಧಿಸಿರುವುದು ವಿಶೇಷ.

ರಿಲಯನ್ಸ್ ಷೋರೂಂಗಳಲ್ಲಿ ಕ್ಯೂ: ಉಚಿತ ಅನಿಯಮಿತ ಕರೆ ಹಾಗೂ ಡೇಟಾ ಸೌಲಭ್ಯದ ವೆಲ್​ಕಮ್ ಆಫರ್ ಪಡೆಯಲು ಗ್ರಾಹಕರು ರಿಲಯನ್ಸ್ ಡಿಜಿಟಲ್ ಷೋರೂಂಗಳ ಮುಂದೆ ಕ್ಯೂನಲ್ಲಿ ನಿಂತ ದೃಶ್ಯಗಳು ಗಮನ ಸೆಳೆದವು.

ವಿಶ್ವದ ಅತಿದೊಡ್ಡ ಸ್ಟಾರ್ಟಪ್: ರಿಲಯನ್ಸ್ ಜಿಯೋಗಾಗಿ 1.50 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ವಿಶ್ವದ ಅತಿ ದೊಡ್ಡ ಸ್ಟಾರ್ಟಪ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಹೊಸದೇನು?: ರಿಲಯನ್ಸ್ ಜಿಯೋ 2017ರಲ್ಲಿ ಡಿಟಿಎಚ್ ಸೇವೆ ಆರಂಭಿಸಲಿದೆ. ಈ ಸೇವೆಗಾಗಿ ಹೈಸ್ಪೀಡ್ ಆಪ್ಟಿಕಲ್ ಫೈಬರ್ ಬಳಕೆ ಮಾಡಲಿದೆ.


•► ಭವಿಷ್ಯದ ಜಿಜ್ಞಾಸೆ

ಪಿಎಫ್ ಮೇಲಿನ ಬಡ್ಡಿದರ ಇಳಿಕೆ: ಡಿ.19ರಂದು ಬೆಂಗಳೂರಿನಲ್ಲಿ ಕಾರ್ವಿುಕ ಸಚಿವ ಬಂಡಾರು ದತ್ತಾತ್ರೇಯ ನೇತೃತ್ವದಲ್ಲಿ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಸಭೆಯಲ್ಲಿ 2016-17ರ ಆರ್ಥಿಕ ವರ್ಷಕ್ಕೆ ಪಿಎಫ್ ಮೇಲಿನ ಬಡ್ಡಿದರವನ್ನು 8.8ರಿಂದ ಶೇ.8.65ಕ್ಕೆ ಇಳಿಕೆ ಮಾಡಲಾಗಿದೆ. ಇದು ಕಳೆದ ಏಳು ವರ್ಷಗಳ ಅವಧಿಯಲ್ಲೇ ಕನಿಷ್ಠ ಬಡ್ಡಿದರವಾಗಿದೆ.


•► ತಿದ್ದುಪಡಿಗೆ ಸಿಗಲಿಲ್ಲ ಬೆಂಬಲ

ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ 1952ರ ಉದ್ಯೋಗಿಗಳ ಭವಿಷ್ಯನಿಧಿ ಯೋಜನೆ ಕಾಯ್ದೆಯಲ್ಲಿ ತಿದ್ದುಪಡಿ ತಂದಿತು. ಅದರಂತೆ ಕಾರ್ವಿುಕರು 58 ವರ್ಷಕ್ಕೂ ಮೊದಲೇ ಭವಿಷ್ಯನಿಧಿಯ ಮೊತ್ತದಲ್ಲಿ ಶೇ.60ರಷ್ಟನ್ನು ಮಾತ್ರ ತೆಗೆಯಬಹುದಾಗಿತ್ತು. ಈ ಬದಲಾವಣೆ ಫೆಬ್ರವರಿ 10ರಿಂದ ಜಾರಿಗೆ ಬಂದಿತ್ತು. ಆದರೆ ಇದಕ್ಕೆ ಕಾರ್ವಿುಕ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಸ್ಟ್​ನಲ್ಲಿ ಇದನ್ನು ಹಿಂಪಡೆದುಕೊಳ್ಳಲಾಯಿತು.


•► ಇಎಂಐಗೆ ಬಳಸಬಹುದು

2017-18ರಿಂದ ಭವಿಷ್ಯನಿಧಿ ಖಾತೆಯಲ್ಲಿರುವ ಮೊತ್ತವನ್ನು ಮನೆ ಖರೀದಿ ಮತ್ತು ಗೃಹಸಾಲದ ಇಎಂಐ ಸಂದಾಯಕ್ಕೆ ಬಳಸಬಹುದು. ಈ ಬಗ್ಗೆ ಅಕ್ಟೋಬರ್​ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಾರ್ವಿುಕರು ನಿವೃತ್ತಿಗೂ ಮೊದಲೇ ಸ್ವಂತ ಸೂರೊಂದನ್ನು ಹೊಂದಬೇಕೆಂಬುದು ಇದರ ಉದ್ದೇಶವಾಗಿದೆ. ಆದರೆ, ಈ ವ್ಯವಸ್ಥೆ ಕಡಿಮೆ ಬೆಲೆಯ ಮನೆಖರೀದಿಗೆ ಮಾತ್ರ ಅನ್ವಯವಾಗಲಿದೆ. ಇದೇ ರೀತಿ, ಆನ್​ಲೈನ್​ನಲ್ಲೇ ಪಿಎಫ್ ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.


•► ಸಿಎಸ್​ಆರ್​ನಿಂದ ಸಮಾಜಮುಖಿ ಕೆಲಸಗಳಿಗೆ ವೇಗ

ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಉದ್ಯಮಸಂಸ್ಥೆಗಳು, ಕಂಪನಿಗಳು ಆದಾಯದಲ್ಲಿ ಶೇಕಡ 2ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂಬ ಕಾನೂನು ಬಂದ ನಂತರ ಭಾರಿ ಬದಲಾವಣೆ ಕಂಡುಬಂದಿದೆ. ಹಲವು ಉದ್ಯಮಗಳು ಆದಾಯದ ಶೇ.2ರಷ್ಟನ್ನು ವೆಚ್ಚ ಮಾಡುತ್ತಿದ್ದರೆ ಇನ್ನೂ ಕೆಲವು ಉದ್ಯಮಗಳು ಶೇ.5ರಿಂದ 25ರವರೆಗೆ ವೆಚ್ಚ ಮಾಡುತ್ತಿವೆ. ಪರಿಣಾಮ, ಸಾಮಾಜಿಕ ಕಾರ್ಯಗಳಿಗೆ ವೇಗ ಸಿಕ್ಕಿದೆ. ನಿಫ್ಟಿ ಸೂಚ್ಯಂಕದ ಮೇಲೆ ಪ್ರಭಾವ ಬೀರುವ ದೇಶದ ಪ್ರಮುಖ 50 ಕಂಪನಿಗಳು 2016ರಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ 5,100 ಕೋಟಿ ರೂಪಾಯಿ ವೆಚ್ಚ ಮಾಡಿವೆ ಎಂದು ಕೇಂದ್ರ ಕಾಪೋರೇಟ್ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ಹೇಳುತ್ತವೆ. ಈ ಪೈಕಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ ಹರಿದುಬರುತ್ತಿದೆ.


•► ಸಹಾರಾ ಕೋಲಾಹಲ

ಹೂಡಿಕೆದಾರರಿಗೆ ಮರುಪಾವತಿ ಮಾಡದ ಪ್ರಕರಣದಲ್ಲಿ 2014ರ ಮಾರ್ಚ್​ನಲ್ಲಿ ಜೈಲು ಪಾಲಾಗಿರುವ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ಗೆ ಜಾಮೀನು ನೀಡಲು 10,000 ಕೋಟಿ ರೂ. ಬಾಂಡ್ ಹಾಗೂ ಕೆಲ ಷರತ್ತುಗಳನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. ಆದರೆ, ಈ ಷರತ್ತುಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಸುಬ್ರತಾ ರಾಯ್ ಜೈಲುವಾಸ ಮುಂದುವರಿದಿದೆ. ಸಹಾರಾ ಕಂಪನಿಯು ಹೂಡಿಕೆದಾರರಿಗೆ ಸುಮಾರು 36,000 ಕೋಟಿ ರೂ. ಮರುಪಾವತಿ ಮಾಡಬೇಕಿದೆ.


•► ವಿದೇಶ ಸೇರಿದ ವಿಜಯ್ ಮಲ್ಯ

ದೇಶದ ವಿವಿಧ ಬ್ಯಾಂಕ್​ಗಳಲ್ಲಿ 9,000 ಕೋಟಿ ರೂ.ನಷ್ಟು ಸಾಲ ಮಾಡಿ ಮರುಪಾವತಿ ಮಾಡದ ಉದ್ಯಮಿ ವಿಜಯ್ ಮಲ್ಯ ಮಾರ್ಚ್​ನಲ್ಲಿ ದೇಶ ಬಿಟ್ಟು ತೆರಳಿ ಲಂಡನ್​ನಲ್ಲಿ ನೆಲೆಕಂಡುಕೊಂಡಿದ್ದಾರೆ. ಮಲ್ಯ ಲಂಡನ್ನಿನ ವಿಶ್ವವಿಖ್ಯಾತ ಮೇಡಂ ಟುಸಾಡ್ಸ್ ಮ್ಯೂಸಿಯಂನಿಂದ ಎರಡು ಕಟ್ಟಡಗಳ ಪಕ್ಕದಲ್ಲೇ ಸ್ವಂತ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಟ್ವಿಟರ್​ನಲ್ಲಿ ಸಕ್ರಿಯವಾಗಿರುವ ಮಲ್ಯ, ‘‘ಈಗ ಒಳ್ಳೆಯ ದಿನಗಳು, ಆಟ ಈಗ ಶುರು’’ ಎಂದು ಟ್ವೀಟ್ ಮಾಡಿದ್ದರು. ಮಲ್ಯ ವಿಷಯ ಸಂಸತ್ತಿನಲ್ಲೂ ಪ್ರಸ್ತಾಪವಾಯಿತು. ಮೇನಲ್ಲಿ ಮಲ್ಯ ಲಂಡನ್​ನಿಂದಲೇ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಸಭಾಪತಿ ಹಮೀದ್ ಅನ್ಸಾರಿಗೆ ರವಾನಿಸಿದರು. ಮಲ್ಯರನ್ನು ವಾಪಸ್ ಭಾರತಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿರುವ ಸರ್ಕಾರ ಇಂಟರ್​ಪೋಲ್ ಸಹಕಾರವನ್ನೂ ಕೋರಿದೆ. ಏತನ್ಮಧ್ಯೆ, ಎಸ್​ಬಿಐ ಸೇರಿ 17 ಬ್ಯಾಂಕ್​ಗಳಿಗೆ ಸಾಲ ಮರುಪಾವತಿ ಮಾಡದ ಆರೋಪದಲ್ಲಿ ಮಲ್ಯ ವಿರುದ್ಧ ಸೆಪ್ಟೆಂಬರ್​ನಲ್ಲಿ ಎಫ್​ಐಆರ್ ದಾಖಲಾಗಿದೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮುಂಬೈನ ವಿಶೇಷ ನ್ಯಾಯಾಲಯದ ಮೂಲಕ ಬ್ರಿಟನ್ ಸರ್ಕಾರಕ್ಕೆ ಸಿಬಿಐ ನವೆಂಬರ್ ಕೊನೆಯಲ್ಲಿ ಮನವಿ ಮಾಡಿದೆ. ಬ್ಯಾಂಕ್​ಗಳು ಮಲ್ಯ ಆಸ್ತಿ ಹರಾಜಿಗೆ ಮುಂದಾದರೂ ಇವುಗಳನ್ನು ಕೊಳ್ಳಲು ಖರೀದಿದಾರರು ಮುಂದೆ ಬರಲಿಲ್ಲ.


-•► ಏಳು-ಬೀಳು ಕಂಡ ಫ್ಲಿಪ್​ಕಾರ್ಟ್

ಇ-ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಈ ವರ್ಷ ನಂಬರ್ 1 ಸ್ಥಾನವನ್ನು ಕಳೆದುಕೊಂಡಿತಾದರೂ 10 ಕೋಟಿ ಗ್ರಾಹಕರ ಗುರಿಯನ್ನು ತಲುಪುವ ಮೂಲಕ ಬೀಗಿತು. ಕಳಪೆ ನಿರ್ವಹಣೆಗಾಗಿ ಕಂಪನಿಯ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್​ಗೆ ಜನವರಿಯಲ್ಲಿ ಹಿಂಬಡ್ತಿ ನೀಡಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಸಿದ ಘಟನೆ ಚರ್ಚೆಗೆ ಕಾರಣವಾಯಿತು. ಸಚಿನ್ ಜಾಗಕ್ಕೆ ನೂತನ ಸಿಇಒ ಆಗಿ ಸಹಸಂಸ್ಥಾಪಕ ಬಿನ್ನಿ ಬನ್ಸಾಲ್ ನೇಮಕಗೊಂಡರು.

ಜಬಾಂಗ್ ಖರೀದಿ:
ಜಾಗತಿಕ ಆನ್​ಲೈನ್ ಫ್ಯಾಷನ್ ಉಡುಗೆ ಜಾಲತಾಣವಾದ ಜಬಾಂಗ್​ನ್ನು ಈ ವರ್ಷದ ಜುಲೈನಲ್ಲಿ 70 ಮಿಲಿಯನ್ ಡಾಲರ್ ಮೊತ್ತಕ್ಕೆ ಪ್ಲಿಪ್​ಕಾರ್ಟ್ ಸ್ವಾಮ್ಯದ ಮಿಂತ್ರಾ ಖರೀದಿಸಿತು. ಈ ಖರೀದಿ ಪ್ರಕ್ರಿಯೆಯಿಂದ ಮಿಂತ್ರಾ ಮಾಸಿಕ 1.5 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿತು.

ಉದ್ಯೋಗಿಗಳಿಗೆ ಗೇಟ್​ಪಾಸ್:
 30,000 ಉದ್ಯೋಗಿಗಳನ್ನು ಹೊಂದಿರುವ ಫ್ಲಿಪ್​ಕಾರ್ಟ್ ಕಳಪೆ ನಿರ್ವಹಣೆ ತೋರಿದ 1,000 ಉದ್ಯೋಗಿಗಳನ್ನು ಈ ವರ್ಷದ ಜುಲೈನಲ್ಲಿ ಕೈಬಿಟ್ಟಿತು.

(Courtesy : Vijayavani) 

☀️ ಭಾಗ - V: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - V: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.


•► ‘ಒಂದು ದೇಶ, ಒಂದು ತೆರಿಗೆ’, ‘ಏಕ್ ಭಾರತ್, ಶ್ರೇಷ್ಠ ಭಾರತ್’, ‘ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ’ ಹೀಗೆ ವಿವಿಧ ಯೋಜನೆಗಳ ಅನುಷ್ಠಾನದ ಮೂಲಕ ತೆರಿಗೆ ವ್ಯವಸ್ಥೆ, ಆರ್ಥಿಕತೆಗಳ ಸಮಗ್ರ ಬದಲಾವಣೆಗೆ ದೇಶ ಸಜ್ಜಾದ ವರ್ಷ ಇದು. ಕೈಗಾರಿಕಾ ರಂಗ ಬೆಳವಣಿಗೆಯತ್ತ ಮುಖ ಮಾಡಿದರೆ, ಕಾಪೋರೇಟ್ ಕಂಪನಿಗಳು ಸಿಹಿ-ಕಹಿ ಎರಡನ್ನೂ ಅನುಭವಿಸಿದವು. ದೂರಸಂಪರ್ಕ ಕ್ಷೇತ್ರದಲ್ಲಿ ಬೆಲೆಸಮರಕ್ಕೆ ನಾಂದಿಯಾದ ಈ ವರ್ಷದಲ್ಲಿ ಉದ್ಯಮಕ್ಷೇತ್ರಕ್ಕೆ ಯುವ ಮುಖಗಳು ಆಗಮಿಸಿ, ಆಯಕಟ್ಟಿನ ಹುದ್ದೆಗಳನ್ನು ಸ್ವೀಕರಿಸಿದ್ದು ಮಹತ್ವದ ಬೆಳವಣಿಗೆ.
ಒಂದು ದೇಶ ಒಂದು ತೆರಿಗೆ

•► ಉದಾರೀಕರಣ ನೀತಿಗೆ ಭಾರತ ತೆರೆದುಕೊಂಡು 25 ವರ್ಷಗಳಾಗಿವೆ. ತೆರಿಗೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗೆ ಕಾರಣವಾಗುವ ಜಿಎಸ್​ಟಿ(ಸರಕು ಮತ್ತು ಸೇವಾ ತೆರಿಗೆ) ಮಸೂದೆಯನ್ನು ಸಂಸತ್ತು ಈ ವರ್ಷ ಅಂಗೀಕರಿಸಿದೆ. ಒಂಭತ್ತು ವರ್ಷಗಳ ಹಿಂದಿನ ಈ ಮಸೂದೆ ಸಾಕಷ್ಟು ಪರಿಷ್ಕರಣೆಗಳನ್ನು ಕಂಡಿದೆ. ಈ ಪರಿಷ್ಕೃತ ಮಸೂದೆ ಕಳೆದ ವರ್ಷವೇ ಲೋಕಸಭೆಯ ಅಂಗೀಕಾರ ಪಡೆದಿತ್ತು. ಈ ವರ್ಷ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದ್ದು, ಮುಂದಿನ ಹಣಕಾಸು ವರ್ಷಾರಂಭದಲ್ಲೇ ಜಾರಿಗೊಳ್ಳುವ ನಿರೀಕ್ಷೆ ಇತ್ತಾದರೂ ವರ್ಷಾಂತ್ಯದಲ್ಲಿ ನಡೆದ ರಾಜ್ಯಗಳ ವಿತ್ತ ಸಚಿವರ ಸಭೆಯಲ್ಲಿ ಒಮ್ಮತ ಮೂಡದ್ದರಿಂದ ಈ ಸಾಧ್ಯತೆ ಅನುಮಾನಾಸ್ಪದವಾಗಿದೆ.

•► ಡಿಸೆಂಬರ್ 10 ಮತ್ತು 11ರಂದು ಜಿಎಸ್​ಟಿ ಸಭೆ ನಡೆಯಬೇಕಿತ್ತು. ಆದರೆ, ರಾಜ್ಯ-ಕೇಂದ್ರಗಳ ಪಾಲು ಹಂಚಿಕೆಗೆ ಸಂಬಂಧಿಸಿ ಮೂಡಿದ ಭಿನ್ನಮತದಿಂದಾಗಿ ಸಭೆ ಒಂದೇ ದಿನಕ್ಕೆ ಮೊಟಕುಗೊಂಡಿತು. ವಾರ್ಷಿಕ 1.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಇರುವ ಉದ್ಯಮಗಳನ್ನು ರಾಜ್ಯಗಳ ವ್ಯಾಪ್ತಿಗೆ ಮತ್ತು 1.5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಇರುವ ಉದ್ಯಮಗಳನ್ನು ಕೇಂದ್ರ ತೆರಿಗೆ ಮಂಡಳಿ ವ್ಯಾಪ್ತಿಗೆ ತರಬೇಕು ಎಂಬ ಪ್ರಸ್ತಾವನೆ ಜಿಎಸ್​ಟಿ ವಿಧೇಯಕದಲ್ಲಿದೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಈ ನಿಯಮವನ್ನು ವಿರೋಧಿಸುತ್ತಿವೆ. ವಹಿವಾಟು ಆಧರಿಸಿ ತೆರಿಗೆ ಹಂಚಿಕೆಯಾಗಲಿ ಎಂಬುದು ಈ ರಾಜ್ಯಗಳ ಅಭಿಪ್ರಾಯ.



•► ಸ್ಟಾರ್ಟಪ್ ಇಂಡಿಯಾ ಸ್ಟ್ಯಾಂಡಪ್ ಇಂಡಿಯಾ

ಉದ್ಯಮಶೀಲತೆಯ ಹೊಸ ಮಂತ್ರ

ಯುವರಂಗದ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನು ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ‘ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್​ಪ್ ಇಂಡಿಯಾ’ ಯೋಜನೆಗೆ ಜ.16ರಂದು ಚಾಲನೆ ನೀಡಿತು. ಪ್ರಸಕ್ತ ಭಾರತವು 4,200 ಸ್ಟಾರ್ಟಪ್​ಗಳನ್ನು ಹೊಂದುವ ಮೂಲಕ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದ್ದು, 2020ರೊಳಗೆ ನಂ.1 ಸ್ಥಾನಕ್ಕೇರುವ ಗುರಿ ಹೊಂದಿದೆ. ನ್ಯಾಸ್ಕಾಮ್ ಹಾಗೂ ಜಿನೇವಾ ಕನ್ಸಲ್ಟಿಂಗ್​ನ 2016ರ ಜಂಟಿ ವರದಿಯು ಭಾರತ ನವೋದ್ಯಮಕ್ಕೆ ಪ್ರಶಸ್ತ ತಾಣ ಎಂದು ಉಲ್ಲೇಖಿಸಿದೆ. ವಿಶೇಷವೆಂದರೆ, ಶೇಕಡ 72ರಷ್ಟು ನವೋದ್ಯಮಗಳನ್ನು ಆರಂಭಿಸಿರುವವರು 35 ವರ್ಷದೊಳಗಿನವರು. ಭಾರತವೂ ಅತಿ ಹೆಚ್ಚು ಸ್ಟಾರ್ಟಪ್​ಗಳು ಬೆಂಗಳೂರು, ಮುಂಬೈ ಹಾಗೂ ದೆಹಲಿಯಲ್ಲಿವೆ.


•► ಏಕ್ ಭಾರತ್ ಶ್ರೇಷ್ಠ ಭಾರತ್

ರಾಜ್ಯ-ರಾಜ್ಯಗಳ ನಡುವಿನ ಶಕ್ತಿ ವಿನಿಮಯದಿಂದ ವ್ಯಾಪಾರ, ಆರ್ಥಿಕ ಸಂಬಂಧಗಳನ್ನು ಬಲಗೊಳಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ನವೆಂಬರ್ 1ರಂದು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಯೋಜನೆಗೆ ಚಾಲನೆ ನೀಡಿತು. ಅದಕ್ಕೂ ಮುಂಚೆ, ಈ ಯೋಜನೆ ಬಗ್ಗೆ ಅಭಿಪ್ರಾಯ, ಸಲಹೆಗಳನ್ನು ಜನರಿಂದ ಆಹ್ವಾನಿಸಲಾಗಿತ್ತು. ‘ಮೈ ಗವರ್ನ್​ವೆುಂಟ್ ಡಾಟ್ ಇನ್’ನಲ್ಲಿ 50 ಸಾವಿರಕ್ಕೂ ಅಧಿಕ ಅಭಿಪ್ರಾಯ, ಸಲಹೆಗಳು ದಾಖಲಾದವು. ಇದರಲ್ಲಿ ಸರ್ಕಾರ ಮೂರು ಅತ್ಯುತ್ತಮ ಸಲಹೆಗಳನ್ನು ಆಯ್ದುಕೊಂಡು ಅವುಗಳಿಗೆ ಕ್ರಮವಾಗಿ 1 ಲಕ್ಷ ರೂ., 75 ಸಾವಿರ ರೂ., 50 ಸಾವಿರ ರೂ.ಗಳ ಬಹುಮಾನವನ್ನು ಘೊಷಿಸಿತು. ಈ ಯೋಜನೆಗಳ ಮೂಲೋದ್ದೇಶಗಳ ಅನ್ವಯ 2016ನೇ ವರ್ಷದಲ್ಲಿ ಹರಿಯಾಣದ ಕೃಷಿ ನೀತಿ-ಕೃಷಿ ತಂತ್ರಜ್ಞಾನವನ್ನು ತಮಿಳುನಾಡು ಅಳವಡಿಸಿಕೊಂಡಿತು, ತಮಿಳುನಾಡಿನ ಸಾಂಸ್ಕೃತಿಕ ವೈಶಿಷ್ಟ್ಯಳನ್ನು ಹರಿಯಾಣ ತನ್ನ ನೆಲದಲ್ಲಿ ಪಸರಿಸಿತು.


•► ಕುಸಿಯುತ್ತಿದೆ ಐಟಿ ಕ್ಷೇತ್ರ

1990ರಿಂದೀಚೆಗೆ ಅಭಿವೃದ್ಧಿ ಹಾದಿಯಲ್ಲೇ ಇದ್ದ ಭಾರತೀಯ ಐಟಿ ಕ್ಷೇತ್ರ ಇದೀಗ ಕುಸಿತದತ್ತ ಸಾಗಿದೆ. ಇನ್ಪೋಸಿಸ್, ವಿಪ್ರೋ, ಟಿಸಿಎಸ್ ಸೇರಿದಂತೆ ಹೆಚ್ಚಿನ ಐಟಿ ಸಂಸ್ಥೆಗಳು 2016ರಲ್ಲಿ ನಿರೀಕ್ಷೆಗಿಂತ ಕಡಿಮೆ ಆದಾಯ ಗಳಿಸಿವೆ. ಎಷ್ಟೋ ಸಂಸ್ಥೆಗಳು ನೂತನ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿಲ್ಲ. ಇನ್ನೆಷ್ಟೋ ಸಂಸ್ಥೆಗಳು ಸಿಬ್ಬಂದಿ ಕಡಿತ ಮಾಡುತ್ತಿವೆ. ಐಬಿಎಂ 5,000, ಮೈಕ್ರೋಸಾಫ್ಟ್ 2,850, ಸಿಸ್ಕೋ 5,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಹೆಚ್ಚಿನ ಸಂಸ್ಥೆಗಳು ಕ್ಲೌಡ್ ಬೇಸ್ಡ್ ಇನ್​ಫ್ರಾಸ್ಟ್ರಕ್ಚರ್​ನತ್ತ ಮುಖ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದು ಕೂಡ ಭಾರತದ ಐಟಿ ಉದ್ಯಮದ ಮೇಲೆ ಪ್ರಭಾವ ಬೀರಿದೆ. ಔಟ್ ಸೋರ್ಸಿಂಗ್ ಸ್ಥಗಿತಗೊಳಿಸುವುದಾಗಿ ಟ್ರಂಪ್ ಹೇಳಿರುವುದು ಇದಕ್ಕೆ ಕಾರಣ.



•► ಆನ್​ಲೈನ್ ಷಾಪಿಂಗ್

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದೆ. 2016ರಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ 50 ಕೋಟಿಗೆ ಏರಿದೆ ಎಂಬ ಅಂದಾಜಿದೆ. ಹೀಗಾಗಿ ಇ-ಕಾಮರ್ಸ್ ಕ್ಷೇತ್ರವೂ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಪ್ರತಿತಿಂಗಳು 60 ಲಕ್ಷ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ. ಫ್ಲಿಪ್​ಕಾರ್ಟ್, ಸ್ನ್ಯಾಪ್​ಡೀಲ್, ಅಮೆಜಾನ್ ಇಂಡಿಯಾ ಮುಂತಾದ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಇ-ಕಾಮರ್ಸ್ ಕ್ಷೇತ್ರ ವಿವಾದಗಳಿಂದೇನು ಹೊರತಲ್ಲ. ಬಿಗ್ ಬಿಲಿಯನ್ ಡೇ ಸೇಲ್​ನಿಂದಲೇ ಫ್ಲಿಪ್​ಕಾರ್ಟ್ ಭಾರಿ ವಿವಾದಕ್ಕೆ ಗುರಿಯಾಗಿತ್ತು. ಸೇಲ್ ದಿನ ಹಲವು ಉತ್ಪನ್ನಗಳ ಮಾರಾಟವನ್ನು ಸಂಸ್ಥೆಯೇ ಬ್ಲಾಕ್ ಮಾಡಿತ್ತು ಎಂದು ಮಾರಾಟಗಾರರು ಆರೋಪಿಸಿದ್ದರು. ನಂತರ ಕಂಪನಿ ಮಾರಾಟಗಾರರಲ್ಲಿ ಕ್ಷಮೆ ಕೇಳಿತ್ತು. ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದರಿಂದ ಕೆಲ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಕಂಪನಿ ತಿಳಿಸಿತು.

ಇ-ಕಾಮರ್ಸ್ ಗಮನ ಸೆಳೆದ ಟ್ರೆಂಡ್​ಗಳು: =ಕಳೆದ ಎರಡು ಮೂರು ವರ್ಷಗಳಲ್ಲಿ ಗ್ರಾಹಕರನ್ನು ಸೆಳೆಯುವುದೇ ಮೂಲಮಂತ್ರ ಎನ್ನುವಂತೆ ವರ್ತಿಸುತ್ತಿದ್ದ ಸಂಸ್ಥೆಗಳು ಈ ವರ್ಷ ಆದಾಯ ಗಳಿಕೆಯತ್ತ ಮುಖ ಮಾಡಿದ್ದವು. ಹೀಗಾಗಿ ಭಾರಿ ಬೆಲೆ ಕಡಿತದ ಮಾರಾಟ ಪ್ರಮಾಣ ತಗ್ಗಿತ್ತು. =ಕ್ಯಾಷ್ ಆನ್ ಡೆಲಿವರಿ ಪ್ರಮಾಣ ಇಳಿಕೆ ಮತ್ತು ಪೇಮೆಂಟ್ ವಾಲೆಟ್​ಗಳ ಬಳಕೆ ಏರಿಕೆ. =ಬಟ್ಟೆ, ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ಹೊರತಾಗಿಯೂ ಇತರ ಸೇವೆಗಳತ್ತ ವಿಸ್ತರಿಸಿಕೊಂಡಿದೆ. ಹಾಲು, ಕುಡಿಯುವ ನೀರು ಮುಂತಾದವುಗಳು ಕೂಡ ಇದರಲ್ಲಿ ಲಭ್ಯ. =ನಗರಗಳನ್ನೆ ಗುರಿಯಾಗಿಸಿಕೊಂಡು ಬೆಳೆಯುತ್ತಿದ್ದ ಉದ್ಯಮ ಗ್ರಾಮೀಣ ಭಾಗಕ್ಕೂ ವಿಸ್ತರಿಸುತ್ತಿದೆ.


•►  ಫ್ಯಾಟ್ ಟ್ಯಾಕ್ಸ್!

ಕೇರಳ ಸರ್ಕಾರ ಜಂಕ್​ಫುಡ್ ಮೇಲೆ ಈ ವರ್ಷದ ಜುಲೈಯಿಂದ ಶೇಕಡ 14.5ರಷ್ಟು ಫ್ಯಾಟ್ ಟ್ಯಾಕ್ಸ್ ಹೇರಿದೆ. ಪಿಜ್ಜಾ, ಬರ್ಗರ್, ಟೊಕೋಸ್, ಡಫ್​ನಟ್ಸ್, ಸ್ಯಾಂಡ್​ವಿಚ್, ಪಾಸ್ತಾ ಮತ್ತು ಇತರೆ ಫಾಸ್ಟ್​ಫುಡ್​ಗಳ ಮೇಲೆ ತೆರಿಗೆ ಹೇರಲಾಗಿದೆ. ಅಲ್ಲದೆ, ಬಿಹಾರ ಸರ್ಕಾರ ಸಮೋಸಾ, ಜಿಲೇಬಿ ಸೇರಿದಂತೆ ಹಲವು ತಿಂಡಿಗಳ ಮೇಲೆ ಶೇ.13.5ರಷ್ಟು ಐಷಾರಾಮಿ ತೆರಿಗೆ ವಿಧಿಸಿ, ಗಮನ ಸೆಳೆಯಿತು.


•► ಉದ್ಯಮಸಾಮ್ರಾಜ್ಯಕ್ಕೆ ಎರಡನೇ ಪೀಳಿಗೆ ಲಗ್ಗೆ

ದೇಶದ ಹಲವು ಪ್ರತಿಷ್ಠಿತ ಉದ್ಯಮಸಮೂಹ ಸಂಸ್ಥೆಗಳಲ್ಲಿ ಈ ಬಾರಿ ಬದಲಾವಣೆಯ ಗಾಳಿ ಜೋರಾಗಿಯೇ ಬೀಸಿತು. ಅಪ್ಪಂದಿರ ಹಾದಿಯಲ್ಲಿ ಸಾಗಿದ ಮಕ್ಕಳು ಕಂಪನಿಗಳ ಪ್ರಮುಖ ಜವಾಬ್ದಾರಿಗಳನ್ನು ಸ್ವೀಕರಿಸುವ ಮೂಲಕ ಗಮನಸೆಳೆದರು.


•► ಭರವಸೆ ಮೂಡಿಸಿದ ಹೊಸ ಮುಖಗಳು

ಜಿಯೋದಲ್ಲಿ ಮಕ್ಕಳ ಕಾರುಬಾರು: ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ಯೋಜನೆಯ ಹೊಣೆಗಾರಿಕೆಯನ್ನು 23 ವರ್ಷದ ಪುತ್ರ ಆಕಾಶ್ ಮತ್ತು 24 ವರ್ಷದ ಪುತ್ರಿ ಇಶಾ ಅವರಿಗೆ ವಹಿಸಿದರು. ಇಶಾ ಕಾಲೇಜು ದಿನಗಳಲ್ಲೇ ತಂದೆಯ ಉದ್ಯಮ ವ್ಯವಹಾರಗಳಲ್ಲಿ ಸಹಕರಿಸುತ್ತಿದ್ದರೆ, ಆಕಾಶ್ ಉದ್ಯಮದಲ್ಲಿ ಹೊಸ ಐಡಿಯಾಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಗಮನ ಸೆಳೆದಿದ್ದಾರೆ. ಜಿಯೋ ಅಕ್ಟೋಬರ್ ಅಂತ್ಯಕ್ಕೆ 1 ಕೋಟಿಗೂ ಹೆಚ್ಚು ಗ್ರಾಹಕರನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ಅನಿಲ್​ಗೆ ಜತೆಯಾದ ಅನ್​ವೋಲ್: ಅನಿಲ್ ಅಂಬಾನಿ ಪುತ್ರ 24 ವರ್ಷದ ಅನ್​ವೋಲ್ ರಿಲಯನ್ಸ್ ಕ್ಯಾಪಿಟಲ್​ನ ಪ್ರಮುಖ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ರಿಲಯನ್ಸ್​ನಲ್ಲಿ ಹಲವು ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಅನ್​ವೋಲ್, ಇಂಗ್ಲೆಂಡ್​ನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.



•► ಫೋರ್ಬ್ಸ್ ಪಟ್ಟಿಯಲ್ಲಿ ಮಿನುಗಿದ ಯಂಗಿಸ್ಥಾನ!

ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡಿದ 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಭಾರತ ಹಾಗೂ ಭಾರತೀಯ ಮೂಲದ 45 ಜನ ಸ್ಥಾನ ಪಡೆದುಕೊಂಡರು. ಆ ಪೈಕಿ ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ವಿಶೇಷ.

ರಿತೇಶ್ ಅಗರ್ವಾಲ್ (22), ಒಯೋ ರೂಮ್್ಸ ಸಿಇಒ
ಗಗನ್ ಬಿಯಾನಿ (28), ‘ಸ್ಪ್ರಿಂಗ್’ ಸಂಸ್ಥೆಯ ಸಹ-ಸಂಸ್ಥಾಪಕ
ನೀರಜ್ ಬೆರಿ (28), ‘ಸ್ಪ್ರಿಂಗ್’ ಸಂಸ್ಥೆಯ ಸಹ-ಸಂಸ್ಥಾಪಕ
ಕರಿಷ್ಮಾ ಷಾ (25), ಗೂಗಲ್ ಅಧಿಕಾರಿ
ಸಂಪ್ರೀತಿ ಭಟ್ಟಾಚಾರ್ಯ (28), ಹೈಡ್ರೊಸ್ವಾಮ್ರ್ ಸಂಸ್ಥೆ ಸಂಸ್ಥಾಪಕಿ
ಸಾಗರ್ ಗೋವಿಲ್ (29), ಸಿಇಒ ಸಿಮೆಟ್ರೆಕ್ಸ್
ಶಶಾಂಕ್ ಸಾಮ್ಲಾ (23), ಟೆಂಪೋ ಅಟೋಮೇಶನ್ ಸಂಸ್ಥೆಯ ಸಹ-ಸಂಸ್ಥಾಪಕ
ನೀಲಾ ದಾಸ್, ಸಿಟಿ ಗ್ರೂಪ್ ಉಪಾಧ್ಯಕ್ಷೆ
ದಿವ್ಯಾ ನೆಟ್ಮಿ (29), ವಿಕಿಂಗ್ ಗ್ಲೋಬಲ್ ಇನ್​ವೆಸ್ಟರ್ಸ್ ಸಂಸ್ಥೆಯಲ್ಲಿ ಬಂಡವಾಳ ಹೂಡಿಕೆ ವಿಶ್ಲೇಷಕಿ
ವಿಕಾಸ್ ಪಟೇಲ್ (29), ಮಿಲೇನಿಯಂ ಮ್ಯಾನೇಜರ್​ನ ಹಿರಿಯ ಅಧಿಕಾರಿ
ಮಿನೇಶ್ ಭಟ್, ಯುಬಿಎಸ್ ಸಂಸ್ಥೆ ನಿರ್ದೇಶಕ ?ರಮಣನ್ ಶಿವಲಿಂಗಮ್ (29), ಬ್ಯಾಂಕಿಂಗ್ ಕ್ಷೇತ್ರ
ಅನೀಶ್ ಸೋಹಾನಿ (27), ದ ನ್ಯೂ ಟೀಚರ್ಸ್ ಪ್ರಾಜೆಕ್ಟ್ ಅಧಿಕಾರಿ.
ವಿಪ್ರೋ ಕಂಪನಿ ಮುಖ್ಯಸ್ಥ ಅಜೀಂ ಪ್ರೇಮ್ೕ ಪುತ್ರ ರಿಷದ್ 2007ರಲ್ಲೇ ತಂದೆಯ ಉದ್ಯಮಕ್ಕೆ ಸೇರಿಕೊಂಡಿದ್ದರೂ ಈಗ ವಿಪ್ರೋದ ಆಡಳಿತ ಮಂಡಳಿ ಸದಸ್ಯರಾಗಿ ಮತ್ತು ಕಂಪನಿಯ ಕಾರ್ಯತಂತ್ರ ರೂಪಿಸುವ ಮುಖ್ಯ ಅಧಿಕಾರಿಯಾಗಿ ಜವಾಬ್ದಾರಿ ಹೊತ್ತಿದ್ದಾರೆ.


•► ಟಾಟಾ ಸಾಮ್ರಾಜ್ಯದಲ್ಲಿ ಕ್ಷಿಪ್ರಕ್ರಾಂತಿ

ಸೈರಸ್ ಔಟ್ ರತನ್ ಇನ್

ಭಾರತದ ಬೃಹತ್ ಉದ್ಯಮ ಸಮೂಹ ಟಾಟಾದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅಕ್ಟೋಬರ್ 24ರಂದು ಸೈರಸ್ ಮಿಸ್ತ್ರಿ ಟಾಟಾ ಸನ್ಸ್​ನ ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾಗಿ, ರತನ್ ಟಾಟಾ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡರು. ಐದು ವರ್ಷದ ಅಧಿಕಾರಾವಧಿ ಹೊಂದಿದ್ದ ಮಿಸ್ತ್ರಿ ನಾಲ್ಕು ವರ್ಷ ಪೂರೈಸಿದ್ದರು. ಲಾಭ ಉಂಟುಮಾಡುವ ಉದ್ಯಮಗಳನ್ನು ಮಾತ್ರ ಉಳಿಸಿ, ಬೆಳೆಸಬೇಕೆಂಬ ಅವರ ಕಾರ್ಯತಂತ್ರ ಟಾಟಾ ಟ್ರಸ್ಟ್, ವಿಶೇಷವಾಗಿ ರತನ್ ಟಾಟಾ ಅಸಮಾಧಾನಕ್ಕೆ ಕಾರಣವಾಯಿತು. ಟಾಟಾ ಸಮೂಹದಲ್ಲಿ ವಿವಿಧ ಕ್ಷೇತ್ರದ 100 ಉದ್ಯಮಗಳಿವೆ. ಈ ಪೈಕಿ ಲಾಭದಾಯಕ ಉದ್ಯಮವಾಗಿ ಸ್ಥಿರತೆ ಕಾಯ್ದುಕೊಂಡಿರುವುದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಗಳು. ಉಳಿದ ಕಂಪನಿಗಳು ಲಾಭದಾಯಕ ಉದ್ಯಮವಾಗಿ ಮುಂದುವರಿಯಲು, ಸ್ಥಿರತೆ ಕಂಡುಕೊಳ್ಳಲು ಹೋರಾಟ ನಡೆಸುತ್ತಿವೆ. ಇದೀಗ ಹೊಸ ಅಧ್ಯಕ್ಷರ ನೇಮಕಕ್ಕಾಗಿ ಟಾಟಾ ಟ್ರಸ್ಟ್ ಐವರು ಸದಸ್ಯರ ಶೋಧ ಸಮಿತಿಯನ್ನು ರಚಿಸಿದೆ.

ಮಿಸ್ತ್ರಿ ಕಾನೂನುಸಮರ: ಡಿ.19ರಂದು ಟಾಟಾ ಸಮೂಹ ಸಂಸ್ಥೆಯ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿರುವ ಮಿಸ್ತ್ರಿ ಟಾಟಾ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಘೊಷಿಸಿದ್ದಾರೆ.

(Courtesy :Vijayavani)