"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 23 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ III: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ III: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



31. ಕೋರಂ ಇಲ್ಲದೇ ಯಾವುದೇ ಸಭೆಯನ್ನು ನಡೆಸಲು ಸಾಧ್ಯವಿಲ್ಲ.

32. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಬೇಕು.

33. ಅಧ್ಯಕ್ಷರು ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಬೇಕು. ಇವರಿಬ್ಬರ ಗೈರುಹಾಜರಿಯಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು ತಮ್ಮಲ್ಲೇ ಒಬ್ಬರನ್ನು ಆ ಸಭೆಗೆ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡಿಕೊಳ್ಳಬಹುದು.

34. ಸಭೆಯ ನಿರ್ಣಯಗಳನ್ನು ಸಭೆಯಲ್ಲಿ ಹಾಜರಿರುವ ಚಿನಾಯಿತ ಸದಸ್ಯರ ಬಹುಮತದ ಮೂಲಕ ತೀರ್ಮಾನಿಸಬೇಕು.

35. ಸಮಾನ ಮತಗಳು ಬಂದಲ್ಲಿ ಅಧ್ಯಕ್ಷರು ತಮ್ಮ ನಿರ್ಣಯಕ ಮತವನ್ನು ಹೆಚ್ಚುವರಿಯಾಗಿ ಕೊಡಲು ಅವಕಾಶವಿದೆ.

36. ಗ್ರಾಮ ಪಂಚಾಯಿತಿಯ ಯಾವುದೇ ಸದಸ್ಯರು ಹಣಕಾಸಿನ ಹಿತಾಸಕ್ತಿ ಇರುವ ವಿಷಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಬಾರದು ಹಾಗೂ ಮತ ನೀಡಬಾರದು . ಹಾಗೇಯೇ ಅಧ್ಯಕ್ಷತೆ ವಹಿಸುವ ವ್ಯಕ್ತಿಯೂ ಕೂಡ ಹಣಕಾಸಿನ ಹಿತಾಸಕ್ತಿ ಹೊಂದಿದ್ದರೆ. ಅಂತಹ ವಿಷಯದ ಚರ್ಚೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ವಹಿಸಬಾರದು.

37. ಗ್ರಾಮ ಪಂಚಾಯಿತಿ ಸಭೆಗಳು ಅಥವಾ ಸ್ಥಾಯಿ ಸಮಿತಿಗಳ ಸಭೆಗಳಿಗೆ ಹಾಜರಾಗುವ ಸದಸ್ಯರಿಗೆ ಭಾಗವಹಿಸುವಿಕೆ ಭತ್ಯೆಯನ್ನು ಸಂದಾಯ ಮಾಡಬೇಕು. ಪ್ರಸ್ತುತ ಸರ್ಕಾರದ ಆದೇಶದಂತೆ ಸದಸ್ಯರು ಹಾಜರಾದ ಪ್ರತಿ ಸಭೆಗೆ ರೂ.100/- ರಂತೆ ಸಂದಾಯ ಮಾಡಬೇಕು.

38. ಅವಶ್ಯವೆಂದು ಭಾವಿಸಿದಾಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ವಿಶೇಷ ಸಭೆ ಕರೆಯಬಹುದು.

39. ಗ್ರಾಮ ಪಂಚಾಯಿತಿಯ ಸದಸ್ಯರ ಮೂರನೇ ಒಂದು ಭಾಗ (1/3) ದಷ್ಟು ಸದಸ್ಯರು ಲಿಖಿತ ಕೋರಿಕೆ ಸಲ್ಲಿಸಿದರೂ ವಿಶೇಷ ಸಭೆ ಕರೆಯಲು ಅವಕಾಶವಿದೆ. ಲಿಖಿತ ಕೋರಿಕೆಯು ತಲುಪಿದ 15 ದಿವಸಗಳೊಳಗೆ ವಿಶೇಷ ಸಭೆಯನ್ನು ಕರೆಯಬೇಕು.

40. ವಿಶೇಷ ಸಭೆಯನ್ನು ಕರೆಯಲು ಅಧ್ಯಕ್ಷರು ಒಪ್ಪದಿದ್ದಲ್ಲಿ ಉಪಾಧ್ಯಕ್ಷರು ಕರೆಯಬೇಕು. ಉಪಾಧ್ಯಕ್ಷರು ಸಹ ಒಪ್ಪದಿದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಸಭೆಯ ನೋಟೀಸು ಜಾರಿ ಮಾಡುವರು.

41. ವಿಶೇಷ ಸಭೆಗೆ ಮೂರು ಪೂರ್ಣ ದಿವಸಗಳ ನೋಟೀಸನ್ನು ಕಾರ್ಯದರ್ಶಿ ನೀಡಬೇಕಾಗುತ್ತದೆ.

42. ವಿಶೇಷ ಸಭೆಗೆ ಸಾಮಾನ್ಯ ಸಭೆಯಂತೆಯೇ ಶೇ. 50 ರಷ್ಟು ಕೋರಂ ಅವಶ್ಯವಿರುತ್ತದೆ.

43. ತುರ್ತು ಸಭೆಯನ್ನು ಅಧ್ಯಕ್ಷರು 24 ಗಂಟೆಯೊಳಗಾಗಿ ಕರೆಯಬಹುದು.

44. ತುರ್ತು ಸಭೆಯನ್ನು ನೈಸರ್ಗಿಕ ವಿಪತ್ತುಗಳಾದ ಮಳೆ ಹಾನಿ , ಬೆಂಕಿ ಅನಾಹುತ ಮತ್ತಿತರ ಪ್ರಕೃತಿ ವಿಕೋಪಗಳ ತುರ್ತು ನಿರ್ವಹಣೆಗೆ ಸಂಬಂಧಿಸಿದ ತುರ್ತು ಕ್ರಮ ತೆಗೆದುಕೊಳ್ಳಲು ಇಂತಹ ತುರ್ತು ಸಭೆಗಳನ್ನು ಕರೆಯಬಹುದು.

45. ನಡವಳಿ ಪುಸ್ತಕವು ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ / ಕಾರ್ಯದರ್ಶಿಗಳ ಸುಪರ್ದಿಯಲ್ಲಿರಬೇಕು.
...ಮುಂದುವರೆಯುವುದು. 

No comments:

Post a Comment