"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 23 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ I: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ I: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



1. ಪ್ರತಿ 5000 – 7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.

2. ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ( ಉದಾ. ಬೇಳಗಾಂ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾಡ , ಹಾಸನ , ಕೊಡಗು , ಶಿವಮೊಗ್ಗ , ಉಡುಪಿ , ಹಾವೇರಿ , ಹಾಗೂ ಉತ್ತರ ಕನ್ನಡ ಜಿಲ್ಲೆಗಳು ) 2500 ಜನಸಂಖ್ಯೆಗೆ ಕಡಿಮೆ ಇಲ್ಲದ ಪ್ರದೇಶವನ್ನು ಒಳಗೊಂಡಂತೆ ಪಂಚಾಯಿತಿ ರಚಿಸಬಹುದಾಗಿದೆ.

3. ಅವಶ್ಯಕವೆಂದು ಕಂಡುಬಂದಲ್ಲಿ , ಗ್ರಾಮದ ಕೇಂದ್ರದಿಂದ ಐದು ಕಿ.ಮೀ. ಸುತ್ತಳತೆಯಲ್ಲಿರುವ ಪ್ರದೇಶವನ್ನು ಸಹ ಪಂಚಾಯಿತಿ ವ್ಯಾಪ್ತಿಯೆಂದು ಪರಿಗಣಿಸಬಹುದು.

4. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿಗೆ ಸದಸ್ಯರ ಆಯ್ಕೆ ನಡೆಯುತ್ತದೆ.

5. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿದೆ.

6. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000 ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.

7. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 11 ಮಂದಿ ಚುನಾಯಿತ ಸದಸ್ಯರಿರಬೇಕು.

8. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆಯ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ. ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಸಭಾ , ರಾಜ್ಯಸಭಾ , ವಿಧಾನ ಪರಿಷತ್ ಸದಸ್ಯರು ಜೊತೆಗೆ ಒಂದು ವರ್ಷದ ಅವಧಿಗೆ , ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.

9. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ.

10. 40,000 ಜನಸಂಖ್ಯೆಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.

11. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಗೆ 18,000 ಜನಸಂಖ್ಯೆಗೆ ಒಬ್ಬರಂತೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.

12. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೇ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಾಸಭಾ , ರಾಜ್ಯಸಭಾ , ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.

13. ಮೀಸಲಿಟ್ಟ ಹಾಗೂ ಮೀಸಲಿರಿಸದ ( ಸಮಾನ್ಯ ) ಒಟ್ಟು ಸ್ಥಾನಗಳಲ್ಲಿ 1/3 ಕ್ಕಿಂತ ಕಡಿಮೆಯಿಲ್ಲದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.

14. ಚುನಾಯಿತರಾದ ಸದಸ್ಯರ ಅವಧಿಯು ಗ್ರಾಮ ಪಂಚಾಯಿತಿಯ ಪ್ರಥಮ ಸಭೆ ಅಂದರೆ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆಗಾಗಿ ಗೊತ್ತುಪಡಿಸಿದ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷಗಳವೆರೆಗೆ ಇರುತ್ತದೆ.

15. ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ. ಗ್ರಾಮ ಪಂಚಾಯಿತಿಯ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಅನುಕ್ರಮವಾಗಿ ಗೈರುಹಾಜರಾದರೆ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
..ಮುಂದುವರೆಯುವುದು. 

No comments:

Post a Comment