"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 26 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ VI: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ VI: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



76. ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳ ಕರ್ತವ್ಯಗಳು :

· ಗ್ರಾಮ ಪಂಚಾಯಿತಿಯ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯ ಸಮಗ್ರ ಜವಾಬ್ದಾರಿ
· ಗ್ರಾಮ ಪಂಚಾಯಿತಿ ನಿಧಿಯ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ
· ರಾಜ್ಯ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳ ಸಮರ್ಪಕ ಮತ್ತು ಸಕಾಲಿಕ ಅನುಷ್ಟಾನದ ಜವಾಬ್ದಾರಿ.
· ಗ್ರಾಮ ಪಂಚಾಯಿತಿ ಸಭೆಯ ನಿರ್ಣಯಗಳ ಜಾರಿಯ ಜವಾಬ್ದಾರಿ .
· ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ವಹಿಗಳ ನಿರ್ವಹಣಾ ಜವಾಬ್ದಾರಿ .
· ಸರ್ಕಾರ , ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮಾಸಿಕ ವರದಿ ಮತ್ತು ಎಂ.ಐ.ಎಸ್. ಸಲ್ಲಿಸುವ ಜವಾಬ್ದಾರಿ.
· ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕರ ಪರಿಷ್ಕರಣೆ ಮತ್ತು ಕರ ವಸೂಲಾತಿಯ ಸಮಗ್ರ ಜವಾಬ್ದಾರಿ.
· ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಟಾನದ ಎಂ.ಐ.ಎಸ್ ಮತ್ತು ಪಂಚತಂತ್ರ ತಂತ್ರಾಶದ ನಿರ್ವಹಣೆ .
· ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು.
· ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ಮೇಲ್ವಿಚಾರಣೆ.


77. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕರ್ತವ್ಯಗಳು :

· ಗ್ರಾಮ ಪಂಚಾಯಿತಿ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೆರವು ನೀಡುವುದು.
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವುದು
· ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ , ಸ್ಥಾಯಿ ಸಮಿತಿಗಳ ಸಭೆ , ಇನ್ನಿತರ ಸಭೆಗಳಿಗೆ ತಿಳುವಳಿಕೆ ಪತ್ರ ಹೊರಡಿಸುವುದು.
· ಮೇಲಿನ ಸಭೆಗಳ ಸುಗಮ ನಿರ್ವಹಣೆ ಮತ್ತು ನಿರ್ಣಯಗಳ ದಾಖಲೀಕರಣ ಮಾಡುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಸಕಾಲದಲ್ಲಿ ಕರೆಯಲು ತಿಳುವಳಿಕೆ ಪತ್ರ ಹೊರಡಿಸುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳ ಸಭಾ ನಡವಳಿಗಳನ್ನು ದಾಖಲಿಸುವುದು.
· ಗ್ರಾಮ ಪಂಚಾಯಿತಿ ಜಮಾಬಂದಿ ಕಾರ್ಯಕ್ರಮ ಸಂಪೂರ್ಣ ಜವಾಬ್ದಾರಿ.
· ಗ್ರಾಮ ಪಂಚಾಯಿತಿಗಳ ಆಡಿಟ್ ವರದಿಗಳಿಗೆ ಅನುಪಾಲನಾ ವರದಿ ಸಿದ್ಧಪಡಿಸುವುದು.
· ಬೀದಿ ದೀಪ , ಕುಡಿಯುವ ನೀರಿನ ನಿರ್ವಹಣೆ
· ಸಾರ್ವಜನಿಕ ದೂರಗಳ ಪರಿಶೀಲನೆ , ಜನಸ್ಪಂದನ ಅರ್ಜಿಗಳ ವಿಲೇವಾರಿ
· ಗ್ರಾಮ ಪಂಚಾಯಿತಿಗಳ ಬಜೆಟ್ ತಯಾರಿಸಿ ಅನುಮೋದನೆಗೆ ಮಂಡಿಸುವುದು.
· ಗ್ರಾಮ ಪಂಚಾಯಿತಿಗಳ ವಿವಿಧ ವಹಿಗಳ ನಿರ್ವಹಣೆ
· ಗ್ರಾಮ ಪಂಚಾಯಿತಿಗ ಸದಸ್ಯರ ತರಬೇತಿ ನಿರ್ವಹಣೆ
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸುವ ಇತರ ಜವಾಬ್ದಾರಿಗಳ ನಿರ್ವಹಣೆ

78. ಪ್ರಸಕ್ತ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರರು , ವಾಟರ್ ಮೆನ್ , ಸ್ವಚ್ಛತಾ ಕಾರ್ಮಿಕರ ಸ್ಥಳೀಯ ನೇಮಕಾತಿಗೆ ಅವಕಾಶ ಕಲ್ಪಿಸಿದೆ. ಇವರು ಗ್ರಾಮ ಪಂಚಾಯಿತಿ ನೌಕರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮೋದನೆಯೊಂದಿಗೆ ನೌಕರರನ್ನು ನೇಮಕ ಮಾಡಿ , ಅವರ ವೇತನವನ್ನು ಗ್ರಾಮ ಪಂಚಾಯಿತಿ ನಿಧಿಯಿಂದ ಭರಿಸಬಹುದು.

79. ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಂಡ ಯಾವುದೇ ನೌಕರರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿ ದಂಡ ವಿಧಿಸಬಹುದು , ವಾರ್ಷಿಕ ಬಡ್ತಿಯನ್ನು ತಡೆಹಿಡಿಯಬಹುದು.

80. ಪ್ರತಿ ವರ್ಷ ಶೇ.10 ರಷ್ಟು ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಾಲಯಗಳನ್ನು ಒದಗಿಸುವುದು ಅಲ್ಲದೇ ಪುರುಷರು ಮತ್ತು ಮಹಿಳೆಯರಿಗೆ ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು.

81. ಪ್ರಸಕ್ತ ಕುಡಿಯುವ ನೀರಿನ ಯೋಜನೆಗಳ ಅನುಷ್ಟಾನವನ್ನು ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿಗೆ ವಹಿಸಿದೆ.ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ.

82. ರಾಜ್ಯ ಪಂಚಾಯಿತಿ ಪರಿಷತ್ತಿನ ಅಧ್ಯಕ್ಷರು – ಮುಖ್ಯಮಂತ್ರಿಗಳು


83. ರಾಜ್ಯ ಪಂಚಾಯಿತಿ ಪರಿಷತ್ತಿನ ಉಪಾಧ್ಯಕ್ಷರು – ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರು

84. ರಾಜ್ಯ ಪಂಚಾಯಿತಿ ಪರಿಷತ್ತಿಗೆ ಸರ್ಕಾರದಿದಂ ನಾಮ ನಿರ್ದೇಶಿಸಲ್ಪಟ್ಟ ಐವರು ಸಚಿವರು ಮತ್ತು 10 ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳು ಇದರ ಸದಸ್ಯರಾಗಿದ್ದಾರೆ.

85. ರಾಜ್ಯ ಪಂಚಾಯಿತಿ ಪರಿಷತ್ತು ಸಮಿಯಿ ವರ್ಷಕ್ಕೆ ಎರಡು ಬಾರಿಯಾದರೂ ಸಭೆ ಸೇರಬೇಕು.

86. ಮುಂದಿನ ಆರ್ಥಿಕ ವರ್ಷದ , ಅಂದರೆ ಏಪ್ರಿಲ್ 1ನೇ ತಾರಿಖೀನಿಂದ ಮಾರ್ಚಿ 31ನೇ ತಾರೀಖಿನವರೆಗೆ ಅಯವ್ಯವನ್ನು ಗ್ರಾಮ ಪಂಚಾಯಿತಿ ಸಿದ್ಧಪಡಿಸಬೇಕು .ಆಯವ್ಯ ಮತ್ತು ಲೆಕ್ಕಪತ್ರ ನಿಯಮಗಳು 2006 ನಿಯಮ 11 ಮತ್ತು 12 ರನ್ವಯ ಫೇಬ್ರವರಿ 1 ರಿಂದ ಮಾರ್ಚ್ 10 ರೊಳಗೆ ನಡೆಯುವ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆಯಬೇಕು.

87. 2005 ರಲ್ಲಿ ಕರ್ನಾಟಕ ಸರ್ಕಾರವು ಪಂಚಾಯಿತಿ ಜಮಾಬಂದಿ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು.

88. ಪಂಚಾಯತ್ ಜಮಾಬಂದಿ ಎಂದರೆ – ಯೋಜನೆಗಳನ್ನು ಜಾರಿಗೊಳಿಸಬೇಕು, ಅವುಗಳಿಗೆ ಹಣಬೇಕು , ಬಳಸಿದ ಹಣವನ್ನು ಪುಸ್ತಕಗಳಲ್ಲಿ ದಾಖಲೀಕರಿಸಬೇಕು. ನಡೆಸಲಾದ ಕಾಮಗಾರಿಗಳ ಗುಣಮಟ್ಟಕ್ಕೂ ಖರ್ಚು ಮಾಡಿದ ಹಣಕ್ಕೂ ಹೊಂದಾಣಿಕೆಯಾಗಬೇಕು . ಈ ಪ್ರಕ್ರಿಯೆಗಳನ್ನು ವರ್ಷಕ್ಕೊಮ್ಮೆ ಸಾರ್ವಜನಿಕರ ಸಮ್ಮುಖದಲ್ಲಿ ತನಿಖೆ ನಡೆಸಿ ತಪ್ಪು ಒಪ್ಪುಗಳನ್ನು ತಿಳಿಯುವುದೇ ಪಂಚಾಯತ್ ಜಮಾಬಂದಿ.

89. ಗ್ರಾಮ ಪಂಚಾಯಿತಿ ಜಮಾಬಂದಿ ತಂಡವನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ( ಇಓ ) ಮಾಡಬೇಕು.

90. ಗ್ರಾಮ ಪಂಚಾಯಿತಿ ಜಮಾಬಂದಿಯು ಪ್ರತಿ ವರ್ಷ ಆಗಸ್ಟ್ 16 ರಿಂದ ಸೆಪ್ಟೇಂಬರ್ 15 ರೊಳಗೆ ನಡೆಯಬೇಕು.

91. ಕಾರ್ಯನಿರ್ವಾಹಕ ಅಧಿಕಾರಿ ಜಮಾಬಂದಿ ನಡೆಯುವ ದಿನವನ್ನು ಗ್ರಾಮ ಪಂಚಾಯಿತಿಗಳಿಗೆ 30 ದಿನ ಮೊದಲು ತಿಳಿಸಿರಬೇಕು.

92. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ನೌಕರರು ಜಮಾಬಂದಿ ನಡೆಯುವಾಗ ಇರಬೇಕು . ಗ್ರಾಮ ಪಂಚಾಯಿತಿಯ ಕಿರಿಯ ಇಂಜಿನಿಯರ್ ಇರುವುದು ಕಡ್ಡಾಯ.

93. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮುಂತಾದ ಅಧಿಕಾರಿಗಳು ಜಮಾಬಂದಿ ಮಾಡಬೇಕು . ಎಲ್ಲಾ ಗ್ರಾಮಗಳಲ್ಲೂ ಅಲ್ಲ . ಕಡೆಯ ಪಕ್ಷ ತಾಲ್ಲೂಕಿನ 2 ಗ್ರಾಮಗಳಲ್ಲಿ ಮಾಡಬೇಕು.

94. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ದಿನಾಂಕ/07/09/2005 ರಲ್ಲಿ ಜಾರಿಗೆ ಬಂದಿತು.

95. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ ಬೀದರ್ , ಗುಲ್ಬರ್ಗ , ರಾಯಚೂರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ದಿನಾಂಕ/01/04/2006 ರಿಂದ ಜಾರಿಯಲ್ಲಿ ತರಲಾಯಿತು.

96. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಎರಡನೇ ಹಂತದಲ್ಲಿ ರಾಜ್ಯದ ಬೆಳಗಾವಿ, ಬಳ್ಳಾರಿ , ಚಿಕ್ಕಮಗಳೂರು , ಶಿವಮೊಗ್ಗ , ಹಾಸನ , ಮತ್ತು ಕೊಡಗು ಜಿಲ್ಲೆಗಳಲ್ಲಿ ದಿನಾಂಕ/01/04/2007 ರಿಂದ ವಿಸ್ತರಿಸಲಾಯಿತು.

97. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸದ್ಯ ರಾಜ್ಯದ ಉಳಿದ ಜಿಲ್ಲೆಗಳಿಗೂ ದಿನಾಂಕ/01/04/2008 ರಿಂದ ಜಾರಿಗೊಳಿಸಲಾಯಿತು.

98. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಅಧಿಕಾರ ಪಡೆಯುತ್ತದೆ.

99. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕುಶಲ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ಗಿನಗಳಿಗೆ ಕೂಲಿಯ ಶೇ.25 ರಷ್ಟು ಮತ್ತು ಉಳಿದ ಅವಧಿಗೆ ಶೇ.50 ರಷ್ಟು ನಿರುದ್ಯೋಗ ಭತ್ಯೆಯನ್ನು ಪಡೆಯಲು ಹಕ್ಕು ಹೊದಿರುತ್ತಾರೆ.

100. ಸಾಧ್ಯವಾದಷ್ಟು ಮಟ್ಟಿಗೆ ಕೆಲಸಗಳನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಕೂಲಿ ಕಾರ್ಮಿಕರು ವಾಸವಿರುವ ಗ್ರಾಮದಿಂದ 5 ಕಿ.ಮೀ. ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದಾಗ ನಿಗದಿತ ದರದ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಪಡೆಯಲು ಈ ಕೂಲಿ ಕಾರ್ಮಿಕರಿಗೆ ಹಕ್ಕಿದೆ.

No comments:

Post a Comment