"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 17 April 2016

■. ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀ಮುಂಬೈ, ದೆಹಲಿ ಹಾಗೂ ಕೋಲ್ಕತ್ತ ಇವು ದೇಶದ ಮೂರು ದೊಡ್ಡ ನಗರಗಳಾಗಿವೆ.ಇನ್ನುಳಿದೆರಡು ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ. ಇದಕ್ಕೆ ಕಾರಣವೇನು? (Main Reasons to increase high Air pollution in Delhi)

■. ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
☀ಮುಂಬೈ, ದೆಹಲಿ ಹಾಗೂ ಕೋಲ್ಕತ್ತ ಇವು ದೇಶದ ಮೂರು ದೊಡ್ಡ ನಗರಗಳಾಗಿವೆ.ಇನ್ನುಳಿದೆರಡು ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ. ಇದಕ್ಕೆ ಕಾರಣವೇನು?
(Main Reasons to increase high Air pollution in Delhi)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಸಾಮಾನ್ಯ ಅಧ್ಯಯನ
(General Studies)

-ನನ್ನ ಜ್ಞಾನ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಏನಾದರೂ ಪ್ರಮಾದಗಳು ಕಂಡುಬಂದಲ್ಲಿ  ದಯವಿಟ್ಟು ತಾವು ಸಹಕರಿಸಬೇಕಾಗಿ ವಿನಂತಿ.


— ಸದ್ಯ ರಾಷ್ಟ್ರರಾಜಧಾನಿ ದೆಹಲಿಯು ತ್ವರಿತಗತಿಯಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ಮೆಟ್ರೋ ನಗರಗಳಲ್ಲೊಂದಾಗಿದ್ದು, ಅತಿ ಹೆಚ್ಚು ವಾಯು ಮಲೀನಗೋಳಿಸುವ ಅಭಿವೃದ್ಧಿ ಹೊಂದುತ್ತಿರುವ ಇತರೆ ನಗರಗಳಿಗಿಂತ ದೆಹಲಿ ಮುಂಚೂಣಿಯಲ್ಲಿದೆ. ಇದರೊಂದಿಗೆ ಭಾರತದಲ್ಲಿ ಅತಿ ಮಾಲಿನ್ಯವುಳ್ಳ ನಗರಗಳಲ್ಲಿ ಕೋಲ್ಕತ್ತಾ, ದೆಹಲಿ, ಲಕ್ನೋ, ಬೆಂಗಳೂರು, ಕಾನ್ಪುರ, ಮುಂಬೈ ಮುಂತಾದ ನಗರಗಳು ಕೂಡಾ ಅಗ್ರಸ್ಥಾನಗಳಲ್ಲಿವೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯೊಂದರ ಪ್ರಕಾರ ದೆಹಲಿಯು ಇಡೀ ವಿಶ್ವದಲ್ಲೇ ಅತೀ ಹೆಚ್ಚು ವಾಯು ಮಾಲಿನ್ಯ ಹೊಂದಿದ ಸಿಟಿ ಅನ್ನೋ ಕುಖ್ಯಾತಿ ಪಡ್ಕೊಂಡಿದ್ದಲ್ಲದೇ ದೆಹಲಿಯಲ್ಲಿ ವಾಯುಮಾಲಿನ್ಯವು ಚೀನಾದ ಬೀಜಿಂಗ್‌ಗಿಂತ ಅಪಾಯಕಾರಿ ಮಟ್ಟ ತಲುಪಿರುವುದು ಬಹಿರಂಗಗೊಂಡಿದೆ.

ಪ್ರಸ್ತುತ ದಿನಮಾನಗಳಲ್ಲಿ ಕೋಲ್ಕತ್ತಾ, ದೆಹಲಿ ಮತ್ತು ಮುಂಬೈಗಳು ಅತೀ ವೇಗವಾದ ಬೆಳವಣಿಗೆಯನ್ನು ಹೊಂದುವುದರ ಜೊತೆಗೆ ಅತಿ ಮಾಲಿನ್ಯವುಳ್ಳ ನಗರಗಳಾಗಿದ್ದು, ದೆಹಲಿ ಮಾತ್ರ ಉಳಿದವುಗಳಿಗಿಂತ ಮುಂಚೂಣಿಯಲ್ಲಿದೆ. ಕಾರಣಗಳೇನೆಂದರೆ,

ತೀವ್ರ ನಗರೀಕರಣಗೊಳ್ಳುತ್ತಿರುವುದು. ಮಿತಿಮೀರಿದ ಜನಸಂಖ್ಯೆ ಹಾಗೂ ಅಭಿವೃದ್ಧಿಯ ವೇಗ, ರಸ್ತೆಗಳ ದುರವಸ್ಥೆ, ಮಾಲಿನ್ಯದ ಅವೈಜ್ಞಾನಿಕ ನಿರ್ವಹಣೆ,  ಕೈಗಾರಿಕೆ­ಗಳ ತ್ಯಾಜ್ಯ ಮುಂತಾದವು ಇದಕ್ಕೆ ಪ್ರಮುಖ ಕಾರಣ.

ವಾಯು ಮಾಲಿನ್ಯಕ್ಕೆ ದಿನನಿತ್ಯದ ಸಂಚಾರ ದಟ್ಟಣೆಯೊಂದಿಗೆ ಲಾರಿಗಳು ಮತ್ತು ದ್ವಿಚಕ್ರ ವಾಹನಗಳು, ಪ್ರಯಾಣಿಕರ ಕಾರುಗಳಿಗಿಂತ ಹೊರಸೂಸುವ ಹೊಗೆಯ ಪ್ರಮಾಣದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿವೆ. ಅವುಗಳನ್ನು ನಿಯಂತ್ರಿಸದೇ ಇರುವುದು.

ಅತಿ ಹೆಚ್ಚು ವಾಹನ ಹೊಂದಿರುವ ಮೆಟ್ರೋ ನಗರಗಳ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದೆ. ಕಾರಣ ಮುಂಬೈ, ಕೋಲ್ಕತಾ ಹಾಗೂ ಚೆನ್ನೈನಲ್ಲಿರುವ ವಾಹನಗಳ ಕೂಡಿಸಿದರೆ ಆಗುವ ಒಟ್ಟು ಮಾಲಿನ್ಯ ದೆಹಲಿಯೊಂದರಲ್ಲೇ ಆಗುತ್ತದೆ!.

ರಸ್ತೆಯಲ್ಲಿನ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಯಿಂದ ಏಳುವ ಅತಿಯಾದ ಧೂಳು.

ಗಿಡ-ಮರಗಳ ಗಣನೀಯವಾದ ಕಡಿತ, ಮಿತಿಮೀರಿದ ಕಟ್ಟಡಗಳ ನಿರ್ಮಾಣ, ಹೆಚ್ಚುತ್ತಿರುವ ಅಡುಗೆ ತಯಾರಿಕೆ, ನಗರವ್ಯಾಪಿ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಸ್ಥಾವರಗಳು ಮತ್ತು ಕೈಗಾರಿಕೆಗಳು.

ದೆಹಲಿಯಲ್ಲಿ ಮಿತಿ­ಮೀರುತ್ತಿರುವ ವಾಯು ಮಾಲಿನ್ಯ ತಡೆಗೆ ಕೈಗೊಳ್ಳಬೇಕಾದ ಪರಿಣಾಮಕಾರಿ ಕ್ರಮಗಳನ್ನು ಇಲ್ಲಿಯವರೆಗೆ ಸರ್ಕಾರವು ನಿರ್ಲಕ್ಷಿಸಿರುವುದು.

ಇವೆಲ್ಲ ಮೇಲಿನ ಸಮಸ್ಯೆಗಳು ಕೋಲ್ಕತ್ತಾ, ದೆಹಲಿ ಮತ್ತು ಮುಂಬೈ ನಗರಗಳಲ್ಲಿಯೂ ಇವೆ ಆದರೆ ದೆಹಲಿಯಷ್ಷು ತೀವ್ರತೆಯಿಂದ ಕೂಡಿಲ್ಲ. ಕಾರಣ ಅಲ್ಲಿನ ಪ್ರಸ್ತುತ ನಗರಗಳ  ಸನ್ನಿವೇಶ, ಸರ್ಕಾರದ ಧೋರಣೆಗಳು, ಪರಿಸರದ ವ್ಯವಸ್ಥೆ ಮುಂತಾದವು.
-------------------

ಆದಾಗ್ಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಜ.1ರಿಂದ ಜ.15ರವರೆಗೆ ಸಮ- ಬೆಸ ವಾಹನ ಚಾಲನೆ ನಿಯಮವನ್ನು ಪಾಲಿಸಲಾಗುತ್ತಿದೆ. ಇದರಿಂದ ಕೆಲ ಮಟ್ಟಿಗೆ ವಾಯು ಮಾಲಿನ್ಯ ಪ್ರಮಾಣ ಇಳಿದಿರುವುದಂತೂ ನಿಜ. ಈ ಕುರಿತು ನಡೆಸಲಾದ ಅಧ್ಯಯನಗಳು ಕೂಡ ಇದನ್ನೇ ಹೇಳಿವೆ.

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರೇ ಈ ದೇಶದ ಬೆನ್ನೆಲುಬು. ಆದಾಗ್ಯೂ ಇತ್ತೀಚೆಗೆ ರೈತ ನಿಜಕ್ಕೂ ಆತ್ಮಹತ್ಯೆಯಂಥ ದಾರುಣ ಸ್ಥಿತಿಗೆ ತಲುಪಿದ್ದಾನೆ. ಯಾಕೆ? ಇದರ ಹಿಂದಿರುವ ಪ್ರಬಲ ಕಾರಣಗಳು ಯಾವವು?.. ವಿವರಿಸಿ. (Explain the Main Causes that led to Farmers' suicides recently) (200 words)

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :

☀ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರೇ ಈ ದೇಶದ ಬೆನ್ನೆಲುಬು. ಆದಾಗ್ಯೂ ಇತ್ತೀಚೆಗೆ ರೈತ ನಿಜಕ್ಕೂ ಆತ್ಮಹತ್ಯೆಯಂಥ ದಾರುಣ ಸ್ಥಿತಿಗೆ ತಲುಪಿದ್ದಾನೆ. ಯಾಕೆ? ಇದರ ಹಿಂದಿರುವ ಪ್ರಬಲ ಕಾರಣಗಳು ಯಾವವು?.. ವಿವರಿಸಿ.
(Explain the Main Causes that led to Farmers' suicides recently)
(200 words)

━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಸಾಮಾನ್ಯ ಅಧ್ಯಯನ
(General Studies)

-ನನ್ನ ಜ್ಞಾನ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಏನಾದರೂ ಪ್ರಮಾದಗಳು ಕಂಡುಬಂದಲ್ಲಿ  ದಯವಿಟ್ಟು ತಾವು ಸಹಕರಿಸಬೇಕಾಗಿ ವಿನಂತಿ.


— ರೈತರ ಆತ್ಮಹತ್ಯೆ ಒಂದು ದುರಂತವಾಗಿದ್ದು, ಭೌಗೋಳೀಕರಣ ಮತ್ತು ಖಾಸಗೀಕರಣದ ನಡುವೆ ಸಿಲುಕಿರುವ ರೈತರು ಬರ, ಬೆಳೆ ವೈಫಲ್ಯ ಮತ್ತು ಆರ್ಥಿಕ ದುಸ್ತಿತಿಯಿಂದ  ಆತ್ಮಹತ್ಯೆಯತ್ತ ಮುಖಮಾಡುವಂತೆ ಮಾಡುತ್ತಿರುವುದು ವಿಷಾದದ ಸಂಗತಿ. ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು, ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಸಾವಿರ ದಾಟಿದೆ. ಇಡೀ ವ್ಯವಸ್ಥೆಯ ‌ಬಗ್ಗೆ ರೈತರು ಹತಾಶಗೊಳ್ಳುವುದರ ಜೊತೆಗೆ ಈ ಕೆಳಗಿನ ಕಾರಣಗಳಿಂದ ಆತ್ಮಹತ್ಯೆಗೆ ಮುಖಮಾಡುತ್ತಿದ್ದಾರೆ.

ಕೃಷಿ ವೆಚ್ಚ ಜಾಸ್ತಿ, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊರತೆ, ಸರ್ಕಾರದ ನಿಲುವು, ಮಾರ್ಗದರ್ಶನದ ಕೊರತೆ ಮತ್ತಿತರ ಕಾರಣಗಳಿಂದಾಗಿ ಹತಾಶರಾಗುತ್ತಿರುವ ರೈತರ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಆಧುನಿಕ ಕೃಷಿ ವಿಧಾನಗಳು, ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಬೆಳೆಗಳ ಮಾಹಿತಿಯನ್ನು ಒದಗಿಸದೇ  ರೈತರ ನೋವಿಗೆ ವಿ.ವಿ.ಗಳು ಸ್ಪಂದಿಸುತ್ತಿಲ್ಲ, ಮಾರ್ಗದರ್ಶನ ನೀಡುತ್ತಿಲ್ಲ.

ಕೃಷಿ ಮೂಲದಿಂದ ಬರುವ ಆದಾಯ ಅತ್ಯಲ್ಪವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಕೃಷಿ ಉತ್ಪಾದನೆಗೆ ಸೂಕ್ತ ಬೆಲೆ ದೊರೆಯದೆ ನಷ್ಟ ಅನುಭವಿಸುವುದರ ಜೊತೆಗೆ ಸಾಲ ಮತ್ತು ಬಡ್ಡಿಯ ಹೊರೆ ಹೆಚ್ಚಾಗಿ ಗೌರವಯುತವಾದ ನೆಮ್ಮದಿಯ ಜೀವನ ನಡೆಸುವುದು ದುಸ್ತರವಾಗಿದೆ.

ಇತ್ತೀಚಿನ ಕೆಲವು ವರ್ಷಗಳಿಂದ ಕೃಷಿಕರು ತಮ್ಮ ಸಣ್ಣ ಹಿಡುವಳಿಯಲ್ಲಿ ಹೆಚ್ಚು ಕೆಲಸ ಇಲ್ಲದೆ ಅರೆ ಉದ್ಯೋಗಿಗಳಾಗಿ, ಪರ್ಯಾಯ ಉದ್ಯೋಗವೂ ಇಲ್ಲದೆ ಸಮಯ ಕಳೆಯಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಹೊರಗೂ ಕೂಲಿಗಳು ಸಿಗುತ್ತಿಲ್ಲ. ಇದರಿಂದ ಸಕಾಲಕ್ಕೆ ಬಿತ್ತನೆ ಆಗುತ್ತಿಲ್ಲ. ಉತ್ಪಾದನಾ ವೆಚ್ಚ ಜಾಸ್ತಿ ಆಗಿದೆ. ಅದಕ್ಕೆ ತಕ್ಕಂತೆ ಆದಾಯ ಬರುತ್ತಿಲ್ಲ.ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ಸಂಕಷ್ಟ ಮತ್ತು ಹತಾಶೆಯಿಂದ ಅವರ ಮನಸ್ಥೈರ್ಯ ಕುಸಿದು ಕೆಟ್ಟ ಚಟಗಳಿಗೆ ಮೊರೆಹೋಗುತ್ತಿದ್ದಾರೆ.

ಕೆಲವೊಮ್ಮೆ ಬೆಳೆಗಳನ್ನು ಸಹ ಬೇಡಿಕೆಗಿಂತ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಅನಿಯಮಿತವಾಗಿ ಬೆಳೆಯುವುದಲ್ಲದೇ , ಮಾರುಕಟ್ಟೆಗೆ ಬರುವ ವೇಳೆಗೆ ಅವುಗಳ ಬೆಲೆಯೂ ಕುಸಿಯುತ್ತದೆ. ಆಗ ಈ ಬೆಳೆಗಳ ಉತ್ಪಾದನಾ ವೆಚ್ಚವೂ ರೈತರಿಗೆ ಗಿಟ್ಟದೆ ನಷ್ಟ ಎದುರಿಸುವ ಸಂದರ್ಭಕ್ಕೊಳಗಾಗುತ್ತಿರುವುದು.

ರೈತರ ಸೋಲಿನಲ್ಲಿ ಮಧ್ಯವರ್ತಿಗಳ ಪಾಲು ದೊಡ್ಡದು.ಹೆಚ್ಚಿನ ಸಂದರ್ಭಗಳಲ್ಲಿ  ಲಾಭವನ್ನು ಮಧ್ಯವರ್ತಿಗಳೇ ದೋಚಿಕೊಳ್ಳುತ್ತಾರೆ. ಇಳುವರಿ ಬಂದ ಕೂಡಲೇ ಅದನ್ನು ಯೋಗ್ಯ ಬೆಲೆ ಬರುವವರೆಗೂ ಕಾಪಾಡಿಕೊಳ್ಳಲು ಇರಬೇಕಾದ ಸಂರಕ್ಷಣಾ ಸಂಗ್ರಹಾರಗಳಿರದಿರುವುದರಿಂದ ರೈತರು ಇದ್ದ ಬೆಲೆಯಲ್ಲಿ ಮಾರಾಟ ಮಾಡುವ ಆತುರಕ್ಕೊಳಗಾಗುವುದು.

ರೈತರ ಹಿತ ಕಾಯುವ ಸಹಕಾರ ಸಂಸ್ಥೆಗಳೂ ವಿರಳವಾಗಿವೆ. ಸರ್ಕಾರ ರೈತರಿಗೆ ಸಮಯೋಚಿತವಾದ ಸಲಹೆ ಮತ್ತು ಸೂಚನೆಗಳ ಮೂಲಕ ಪರ್ಯಾಯ ಬೆಳೆಗಳ ಉತ್ತೇಜನೆಗೆ ಕ್ರಮ ಕೈಗೊಳ್ಳದಿರುವುದು.

 ವಾಸ್ತವವಾಗಿ ಸಾಲಮನ್ನಾ ಯೋಜನೆ ಅವೈಜ್ಞಾನಿಕ ಹಾಗೂ ದೋಷಪೂರಿತವಾಗಿದೆ. ಆದ್ದರಿಂದ ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ಸೂಕ್ತ ಯೋಜನೆಯೊಂದನ್ನು ರೂಪಿಸಬೇಕು. ಕೃಷಿ ತಜ್ಞರು, ಮಾನಸಿಕ ಆರೋಗ್ಯ ತಜ್ಞರು, ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆನಿವಾರಣೆಗೆ ಸಮಗ್ರ ಯೋಜನೆ ರೂಪಿಸಬೇಕಾದ ಅಗತ್ಯವಿದೆ.

Saturday, 16 April 2016

☀️ ಏರಿಸ್ (ARIES) (ಟಿಪ್ಪಣಿ ಬರಹ)

☀️ ಏರಿಸ್ (ARIES) (ಟಿಪ್ಪಣಿ ಬರಹ)
━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

— ಏಷ್ಯಾದ ಅತಿದೊಡ್ಡ ಟೆಲೆಸ್ಕೋಪ್ (31/03/2016) ಉದ್ಘಾಟನೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೆಲ್ಜಿಯಂ ಪ್ರಧಾನಿ ಚಾಲ್ರ್ಸ್ ಮೈಕೆಲ್ ಅವರು ಏಷ್ಯಾದ ಅತಿದೊಡ್ಡ ಟೆಲೆಸ್ಕೋಪ್‍ಗೆ ರಿಮೋಟ್ ಮೂಲಕ ಚಾಲನೆ ನೀಡಿದರು.

ಆರ್ಯಭಟ ರೀಸರ್ಚ್ ಇನ್‍ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ -ಎಆರ್‍ಐಇಎಸ್(Aryabhatta Research Institute of Observational Sciences -ARIES) ಈ ದೂರದರ್ಶಕವನ್ನು ಬೆಲ್ಜಿಯಂನ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದು, ಇದು ಉತ್ತರಾಖಂಡದ ನೈನಿತಾಲ್ ಬಳಿಕ ದೇವಸ್ಥಳ ಎಂಬಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇದು 3.6 ಮೀಟರ್ ವಿಸ್ತಾರದ ಪ್ರಾಥಮಿಕ ಕನ್ನಡಿಯನ್ನು ಹೊಂದಿದೆ. ನಕ್ಷತ್ರಗಳ ಸಂರಚನೆ ಹಾಗೂ ಗುರುತ್ವಾಕರ್ಷಣೆ ಶಕ್ತಿ ಬಗ್ಗೆ ಅಧ್ಯಯನ ಮಾಡಲು ಇದನ್ನು ಬಳಸಲಾಗುತ್ತದೆ.

ಹೆಚ್ಚು ಕಡಿಮೆ ನಾಸಾದ ಹಬ್ಬಲ್ ಟೆಲಿಸ್ಕೋಪ್‍ಗೆ ಸರಿಸಮಾನಾದ ಸಾಮಾಥ್ರ್ಯ ಈ ದೂರದರ್ಶನಕ್ಕಿದೆ ಆದರೆ ಹಬ್ಬಲ್ ಬಾಹ್ಯಾಕಾಶದಲ್ಲಿ ಸ್ಥಾಪಿತವಾಗಿರುವುದರಿಂದ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಬಲ್ಲದು.

☀️"ಎಸ್ಮಾ ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ" (ESMA-Essential Services Maintenance Act)

☀️"ಎಸ್ಮಾ ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ"
(ESMA-Essential Services Maintenance Act)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ
(General Studies)

ಎಸ್ಮಾ ಅನುಸಾರ ಸೂಚಿತ ಸೇವೆಗಳಲ್ಲಿ ತೊಡಗಿರುವವರು ಇತರೆ ಇಲಾಖೆಗಳಲ್ಲಿರುವಂತೆ ಇಷ್ಟಾನುಸಾರ ಮುಷ್ಕರಕ್ಕೆ ಇಳಿಯುವಂತಿಲ್ಲ. ಆದರೆ ಇದಕ್ಕೂ ಒಂದು Exception ಇದೆ. ಏನಪಾ ಅಂದರೆ 14 ದಿನಕ್ಕೆ ಮುಂಚೆಯೇ ಲಿಖಿತ ನೋಟಿಸ್ ನೀಡಿ ಮುಷ್ಕರ ಮಾಡಬಹುದು.

☀️ ಎಸ್ಮಾಸ್ತ್ರ:
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಾರಿಗೆ ವ್ಯವಸ್ಥೆಯೂ ಅಗತ್ಯ ಸೇವೆಯಾಗಿದೆ. ಹಾಗಾಗಿ, ಕೆಎಸ್ಸಾರ್ಟಿಸಿ ನೌಕರರು ಇಷ್ಟಾನುಸಾರ ಮುಷ್ಕರ ಹೂಡುವಂತಿಲ್ಲ.

☀️ ಏಸ್ಮಾ ಎಂದರೆ... :
ಜನಸಾಮಾನ್ಯರಿಗೆ ದೈನಂದಿನ ಜೀವನಕ್ಕೆ ತೊಡಕುಂಟಾಗದಂತೆ ಕೆಲವೊಂದು ಸೇವೆಗಳನ್ನು ಅಗತ್ಯ/ತುರ್ತು ಸೇವೆಗಳೆಂದು ವರ್ಗೀಕರಿಸಲಾಗಿದೆ. ಆ ಸೇವೆಗಳಲ್ಲಿ ತೊಡಗಿರುವ ನೌಕರರು ಕೆಲಸ ಬಿಟ್ಟು ಮುಷ್ಕರಕ್ಕಿಳಿದು ಜನ ಜೀವನ ಏರುಪೇರುಗೊಳಿಸಿದರೆ ಎಸ್ಮಾ ಜಾರಿಗೆ ತರಬಹುದು. ಇದಕ್ಕೆ ಸರಕಾರಕ್ಕೆ ಕಾನೂನಿನ ಬಲವೂ ಇರುತ್ತದೆ.

★ ಭಾರತದಲ್ಲಿ 1968ರಲ್ಲಿ ಇದನ್ನು ಜಾರಿಗೆ ತರಲಾಯಿತು. ಏಸ್ಮಾ ಪ್ರಕಾರ ಅಗತ್ಯ ಸೇವೆಗಳು ಯಾವುವೆಂದರೆ...
- ಸಾರ್ವಜನಿಕ ಸಂರಕ್ಷಣೆ,
- ನೈರ್ಮಲ್ಯ,
- ನೀರು ಸರಬರಾಜು,
- ಆಸ್ಪತ್ರೆ
- ದೇಶದ ರಕ್ಷಣೆಗೆ ಸಂಬಂಧಪಟ್ಟ ಸೇವೆಗಳು.
- ಪೆಟ್ರೋಲಿಯಂ ಉತ್ಪನ್ನಗಳು,
- ಕಲ್ಲಿದ್ದಲು,
- ಉಕ್ಕು
- ರಸಗೊಬ್ಬರಗಳ ತಯಾರಿಕೆ, ಸರಬರಾಜು ಮತ್ತು ವಿತರಣೆಯಲ್ಲಿ ತೊಡಗಿರುವ ಸರಕಾರಿ ಸಂಸ್ಥೆಗಳು,
- ದೂರ ಸಂಪರ್ಕ
- ಸಾರಿಗೆ ಸೇವೆ,
- ಆಹಾರ ಸಾಮಗ್ರಿ ಖರೀದಿ/ವಿತರಣೆ ವ್ಯವಸ್ಥೆಯಡಿ ಬರುವ ಸೇವೆಗಳು.

☀️ ಹಾಗಾದರೆ ಮುಷ್ಕರ ನಡೆಸಲೇಬಾರದ...??:

ಮುಷ್ಕರವೆಂಬುದು ಮೂಲಭೂತ ಹಕ್ಕು. ಆದರೆ ಮೇಲಿನ ಸೇವೆಗಳಡಿ ಬರುವ ನೌಕರರು ಅಗತ್ಯವಾಗಿ ಮುಷ್ಕರ ನಡೆಸುವಂತಿಲ್ಲ

ಇದರ ಹೊರತಾಗಿಯೂ ಈ ನೌಕರರು ಮುಷ್ಕರದಲ್ಲಿ ತೊಡಗಿದರೆ ಸರಕಾರ ತನ್ನ ವಿಶೇಷ ಅಧಿಕಾರ ಬಳಸಿ ಎಸ್ಮಾಸ್ತ್ರ ಘೋಷಿಸಿದರೆ ಅಂತಹ ಮುಷ್ಕರಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ.

☀️ ಎಸ್ಮಾಸ್ತ್ರಕ್ಕೆ ಬಗ್ಗದ ನೌಕರರ ಮೇಲೆ ಏನು ಕ್ರಮ ಕೈಗೊಳ್ಳಬಹುದೆಂದರೆ...:

ಮುಷ್ಕರದಲ್ಲಿ ತೊಡಗಿದ ಅಥವಾ ಮುಷ್ಕರಕ್ಕೆ ಪ್ರಚೋದನೆ ನೀಡಿದ ಯಾವುದೇ ನೌಕರನನ್ನು ಸೀದಾ ಕೆಲಸದಿಂದ ತೆಗೆದುಹಾಕಬಹುದು. ನಂತರ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಜೈಲುವಾಸವೂ ಆಗಬಹುದು.

☀️ಸ್ಟಾಂಡ್ ಅಪ್ ಇಂಡಿಯಾ ಯೋಜನೆಯ ಗುರಿಗಳು ಮತ್ತು ಪ್ರಮುಖ ಅಂಶಗಳು : ( Features of Stand Up India initiative)

☀️ಸ್ಟಾಂಡ್ ಅಪ್ ಇಂಡಿಯಾ ಯೋಜನೆಯ ಗುರಿಗಳು ಮತ್ತು ಪ್ರಮುಖ ಅಂಶಗಳು :
( Features of Stand Up India initiative)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಟ್ಯಾಂಡ್‍ಅಪ್ ಇಂಡಿಯಾ ಯೋಜನೆಗೆ ಪ್ರದಾನಿ ನರೇಂದ್ರ ಮೋದಿ ಏಪ್ರಿಲ್ 5ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಾಳನೆ ನೀಡಲಿದ್ದಾರೆ. ಯೋಜನೆಗೆ ಪ್ರತ್ಯೇಕ ವೆಬ್ ಪೋರ್ಟಲ್‍ಗೂ ಚಾಲನೆ ನೀಡಲಿದ್ದಾರೆ. 2015ರ ಆಗಸ್ಟ್ 15ರಂದು ಪ್ರದಾನಿ ಮೋದಿ ‘ಸ್ಟಾರ್ಟ್‍ಅಪ್ ಇಂಡಿಯಾ: ಸ್ಟಾಂಡ್‍ಅಪ್ ಇಂಡಿಯಾ’ ಯೋಜನೆ ಘೋಷಿಸಿದ್ದರು.
ಇತ್ತೀಚೆಗಷ್ಟೇ ಸ್ಟಾರ್ಟ್ ಅಪ್ ಯೋಜನೆಗೆ ಚಾಲನೆ ನೀಡಲಾಗಿತ್ತು.
—ಏಪ್ರಿಲ್ 05, 2016ರಂದು ಚಾಲನೆ.

★ ಯೋಜನೆಯ ಗುರಿ:
━━━━━━━━━━━━━
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬುಡಕಟ್ಟು ಜನರು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸುವ ಪ್ರಮುಖ ಉದ್ದೇಶದಿಂದ ಸ್ಟ್ಯಾಂಡ್‍ಅಪ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆಯಡಿ ಫಲಾನುಭಿವಿಗಳಿಗೆ (ಉದ್ಯಮಿ) ಕನಿಷ್ಟ 10 ಲಕ್ಷ ರೂಪಾಯಿಯಿಂದ ಗರಿಷ್ಟ 1 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಷೆಡ್ಯೂಲ್ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‍ಗಳ ಮೂಲಕವೂ ಸೌಲಭ್ಯ ಒದಗಿಸಲಾಗುವುದು.


★ ಯೋಜನೆಯ ಪ್ರಮುಖ ಅಂಶಗಳು :
━━━━━━━━━━━━━━━━━━━━━
*.ಯಾವುದೇ ನೂತನ ಉದ್ಯಮ ಸ್ಥಾಪನೆಗೆ ಕಾರ್ಮಿಕ ಬಂಡವಾಳ ಸೇರಿದಂತೆ ಕನಿಷ್ಟ 10 ಲಕ್ಷ ರೂ.ಗರಿಷ್ಟ 1 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತದೆ.

*.ಡೆಬಿಟ್ ಕಾರ್ಡ್ (RuPay) ಶ್ರಮಿಕ ಬಂಡವಾಳ ತೆಗೆದುಕೊಳ್ಳಬಹುದು.

*.ಸಾಲದಾರರ ಸಾಲ ವಿವರಗಳನ್ನು ನಿರ್ವಹಿಸುವುದು.

*.ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಮೂಲಕ ಯೋಜನೆಯ ಮೂಲ ನಿಧಿಯದ 10 ಸಾವಿರ ಕೋಟಿ ರೂಪಾಯಿಯನ್ನು ಉದ್ಯಮಗಳಿಗೆ ಮರುಪೂರೈಕೆ ಮಾಡುವುದು.

*.ಎನ್‍ಸಿಜಿಟಿಸಿ (National Credit Guarantee Trustee Company Ltd) ಮೂಲಕ ಸಾಲ ಖಾತರಿಗಾಗಿ 5 ಸಾವಿರ ಕೋಟಿ ರೂ. ಮೂಲ ಧನ ಸಂಗ್ರಹಿಸುವುದು.

*.ಸಾಲಗಾರರಿಗೆ ಸಾಲಪೂರ್ವ ತರಬೇತಿ, ಮಾರ್ಕೆಟಿಂಗ್ ಮೊದಲಾದ ಸಮಗ್ರ ಸಹಾಯ ನೀಡುವುದು.

*.ಆನ್ ಲೈನ್ ರಿಜಿಸ್ಟ್ರೇಶನ್ ಹಾಗೂ ವಿವಿಧ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಆನ್‍ಲೈನ್ ಪೋರ್ಟಲ್‍ಗೆ ಚಾಲನೆ.

*.ಯೋಜನೆಯ ಒಟ್ಟಾರೆ ಉದ್ದೇಶ ಕೃಷಿಯೇತರ ವಲಯದ ಎಸ್ಸಿ, ಎಸ್ಟಿ ವರ್ಗದ ಜನರು ಹಾಗೂ ಮಹಿಳೆಯರಿಗೆ ಬ್ಯಾಂಕ್ ಸಾಲ ಒದಗಿಸುವುದು. ಈಗಾಗಲೇ ಪ್ರಚಲಿತದಲ್ಲಿರುವ ವಿವಿಧ ಇಲಾಖೆಗಳ ನಡುವೆ ಒಪ್ಪಂದ ಮಾಡಿಕೊಳ್ಳುವುದು.

★ ಸಂಪರ್ಕ ಕೇಂದ್ರಗಳು :
━━━━━━━━━━━━━━
*.ಯೋಜನೆಯು ಎಸ್‍ಐಡಿಬಿಐ ಮತ್ತು ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (DICCI) ಹಾಗೂ ವಿವಿಧ ಕ್ಷೇತ್ರಗಳ ಸಂಘಸಂಸ್ಥೆಗಳು ಸ್ಟ್ಯಾಂಡ್ ಅಪ್ ಯೋಜನೆ ಅನುಷ್ಟಾನದ ಜವಾಬ್ದಾರಿ ಹೊಂದಲಿವೆ.
*.SIDBI ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸ್ಟ್ಯಾಂಡ್‍ಅಪ್ ಸಂಪರ್ಕ ಕೇಂದ್ರ (SUCC)ಗಳನ್ನು ತೆರೆಯಲಿದ್ದು, ಯೋಜನೆಯ ಸಮರ್ಥ ಅನುಷ್ಟಾನಕ್ಕೆ ಶ್ರಮವಹಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಭಾರತೀಯ ಮೈಕ್ರೋ ಕ್ರೆಡಿಟ್ (BMC) ಮೂಲಕ 5100 ಇ-ರಿಕ್ಷ ವಿತರಣೆ ಮಾಡಲಾಗುವುದು. ಜತೆಗೆ ಜನಧನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ, ಅಟಲ್ ಪೆನ್ಶನ್ ಮೊದಲಾದ ಯೋಜನೆಗಳ ಫಲಾನುಭವಿಗಳಿಗೂ ಯೋಜನೆಗಳ ಸೌಲಭ್ಯ ವಿತರಿಸಲಾಗುವುದು.

★ ಇ-ರಿಕ್ಷಾ ಯೋಜನೆ :
━━━━━━━━━━━━━
ಸ್ಟ್ಯಾಂಡ್ ಅಪ್ ಯೋಜನೆ ಅಂಗವಾಗಿ ಸೈಕಲ್ ರಿಕ್ಷ ಓಡಿಸುತ್ತಿದ್ದವರಿಗೆ ಅವರ ಆರ್ಥಿಕ ಮಟ್ಟ ಹೆಚ್ಚಿಸಲು  ಇ-ರಿಕ್ಷಾ ವಿತರಿಸಲಾಗುತ್ತದೆ. ಮೊದಲ ಹಂತವಾಗಿ ನ್ಯಾಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಪೊರೇಶನ್ (NSDC) ಇ-ರಿಕ್ಷಾ ಚಾಲನೆ ಬಗ್ಗೆ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸುತ್ತಿದೆ. ಈಗಾಗಲೇ 150 ಮಹಿಳಾ ರಿಕ್ಷಾ ಚಾಲಕರಿಗೆ ತರಬೇತಿ ನೀಡಲಾಗಿದೆ. ಗ್ರಾಹಕರು ಓಲಾ ಕ್ಯಾಬ್ ಮೊಬೈಲ್ ಆಪ್ ಮೂಲಕವೂ ಇ-ರಿಕ್ಷ ಸೇವೆ ಬುಕ್ ಮಾಡಬಹುದಾಗಿದೆ. ಆನ್‍ಲೈನ್ ಮೂಲಕವೂ ಪಾವತಿ ಮಾಡಬಹುದಾಗಿದೆ.

☀ಪನಾಮಾ ಪೇಪರ್ ಎಂದರೇನು? ಪನಾಮಾ ಪೇಪರ್ಸ್ ಸೋರಿಕೆ ಎಂದರೇನು?

☀ಪನಾಮಾ ಪೇಪರ್ ಎಂದರೇನು?  ಪನಾಮಾ ಪೇಪರ್ಸ್ ಸೋರಿಕೆ ಎಂದರೇನು?
 ━━━━━━━━━━━━━━━━━━━━━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ
(General Studies)


★ ಪನಾಮಾ ಪೇಪರ್ :

ಪತ್ರಿಕೋದ್ಯಮ ಜಗತ್ತಿನ ಇತಿಹಾಸದಲ್ಲಿ ಬಹಿರಂಗಗೊಂಡ ಅತ್ಯಂತ ದೊಡ್ಡ ಸೋರಿಕೆ ಪನಾಮಾ ಪೇಪರ್ಸ್ ಸೋರಿಕೆ ಎಂದು ಪರಿಗಣಿಸಲಾಗಿದೆ.ಜಗತ್ತಿನಾದ್ಯಂತದ ಸಿರಿವಂತರು ತಮ್ಮ ಭಾರೀ ಪ್ರಮಾಣದ ಕಪ್ಪು ಹಣವನ್ನು ತೆರಿಗೆದಾರರ ಸ್ವರ್ಗವೆಂದೇ ಪರಿಗಣಿತವಾಗಿರುವ ಪನಾಮಾದಲ್ಲಿ ಇರಿಸಿರುವುದನ್ನು ಮೊಸ್ಸಾಕ್ ಫೊನ್ಸಿಕಾ ಸಂಸ್ಥೆ "ಪನಾಮಾ ದಾಖಲೆಪತ್ರಗಳ ಮೂಲಕ' ಬಹಿರಂಗಪಡಿಸಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಪಟ್ಟಿಯಲ್ಲಿ 500 ಮಂದಿ ಭಾರತೀಯರಿದ್ದಾರೆ. ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಐಶ್ವರ್ಯಾ ರೈ, ರಿಯಲ್ಟಿ ಉದ್ಯಮಿ ಕೆ ಪಿ ಸಿಂಗ್‌, ಇಂಡಿಯಾ ಬುಲ್ಸ್‌ ಮಾಲಕ ಸಮೀರ್‌ ಗೆಹ್ಲೋಟ್ ಪ್ರಮುಖರು.

ಪನಾಮಾ ಪೇಪರ್ ಎಂದೇ ಖ್ಯಾತವಾಗಿರುವ ವಿಶ್ವಾದ್ಯಂತದ ಸಿರಿವಂತರ ಕಪ್ಪು ಹಣದ ರಹಸ್ಯಗಳನ್ನು ಒಳಗೊಂಡ ದಾಖಲೆಪತ್ರಗಳು ಪನಾಮಾ ಮೂಲದ ಮೊಸ್ಸಾಕ್‌ ಫೊನೆಸ್ಕಾ ಎಂಬ ಕಾನೂನು ಸಂಸ್ಥೆಯ ರಹಸ್ಯ ಕಡತಗಳ ಭಾಗವಾಗಿದ್ದು ಇವು 1.10 ಕೋಟಿ ಸಂಖ್ಯೆಯ ದಾಖಲೆ ಪತ್ರಗಳನ್ನು ಒಳಗೊಂಡಿವೆ. ಜಗತ್ತಿನಲ್ಲಿಯೇ ಪನಾಮಾ ಪೇಪರ್ಸ್ ಅತಿದೊಡ್ಡ ಸಮೂಹವಾಗಿದೆ.

ಕಳೆದೊಂದು ವರ್ಷದಲ್ಲಿ ಸುಮಾರು ಸುಮಾರು 80 ದೇಶಗಳ 400ಮಂದಿ ಪತ್ರಕರ್ತರು 100 ಕ್ಕೂ ಹೆಚ್ಚು ಮಾಧ್ಯಮದವರು ದಾಖಲೆಗಳನ್ನು ಸಂಶೋಧನೆ ಮಾಡುವುದರಲ್ಲಿ ನಿರತರಾಗಿದ್ದರು. ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಬಿಬಿಸಿ, ಗಾರ್ಡಿಯನ್, ಸ್ಯೂಡಾಶ್‌ ಝೀಟಂಗ್‌, ಫಾಲ್ಟರ್ ಮೊದಲಾದವು ಈ ಕುರಿತು ಕೆಲಸ ಮಾಡಿವೆ.

ಪನಾಮಾ ಸಹಿತವಾಗಿ ವಿಶ್ವದ ವಿವಿಧ ತೆರಿಗೆದಾರರ ಸ್ವರ್ಗಗಳೆಂದೇ ಕುಖ್ಯಾತಿ ಹೊಂದಿರುವ ತಾಣಗಳಲ್ಲಿ ಭಾರತೀಯರ ಸಹಿತ ವಿಶ್ವದಾದ್ಯಂತದ ಸಿರಿವಂತರು ಕೂಡಿ ಹಾಕಿರುವ ಕಪ್ಪು ಹಣದ ಮಾಹಿತಿಗಳನ್ನು ಪನಾಮಾ ದಾಖಲೆಪತ್ರಗಳು ಹೊಂದಿವೆ.

ತೆರಿಗೆದಾರ ಸ್ವರ್ಗ ಎನಿಸಿಕೊಂಡಿರುವ ದೇಶಗಳಲ್ಲಿ ಸಾಗರೋತ್ತರ ಕಂಪೆನಿಗಳನ್ನು ಹುಟ್ಟು ಹಾಕಿ ಅವುಗಳ ಮೂಲಕ ತಮ್ಮ ದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ತೆರಿಗೆ ರಿಯಾಯಿತಿ ಇತ್ಯಾದಿ ಲಾಭ ಪಡೆದುಕೊಂಡು, ತಮ್ಮ ಸಂಪತ್ತನ್ನು ಆ ದೇಶಗಳಲ್ಲಿ ಶೇಖರಿಸಿಡುವುದು ಸಾಮಾನ್ಯವಾಗಿ ಅನುಸರಿಸಲಾಗುತ್ತಿರುವ ಉಪಾಯವಾಗಿದೆ.

ಪನಾಮಾ ಮೂಲದ ಈ ಕಾನೂನು ಸಂಸ್ಥೆಯ ನಿಗೂಢ ಕಪ್ಪು ಹಣ ದಾಖಲೆಪತ್ರಗಳನ್ನು ಜರ್ಮನಿಯ ಸ್ಯೂಡಾಶ್‌ ಝೀಟಂಗ್‌ ಎಂಬ ದೈನಿಕಕ್ಕೆ ಸೋರಿಕೆ ಮಾಡಿದವರು ಯಾರು ಎಂಬುದು ಈಗಿನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಮಾತ್ರವಲ್ಲ ಈ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಕೂಟವು (ಐಸಿಐಜೆ) ಜಾಗತಿಕ ಮಾಧ್ಯಮದೊಡನೆ ಹಂಚಿಕೊಳ್ಳಲು ಯಾರು ಕಾರಣ ಎಂಬುದು ಕೂಡ ಗೊತ್ತಾಗಿಲ್ಲ.

●. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರ ಮೇಲೆ ಬಹು ಆಯ್ಕೆಯ ಪ್ರಶ್ನೋತ್ತರಗಳು : ( Objective Type Questions on Karnataka Economic Servey)

●. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರ ಮೇಲೆ ಬಹು ಆಯ್ಕೆಯ ಪ್ರಶ್ನೋತ್ತರಗಳು :
( Objective Type Questions on Karnataka Economic Servey)
━━━━━━━━━━━━━━━━━━━━━━━━━━━━━━━━━━━━━━━━━━━━━

1. 2014-15ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ, ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿಮಾರಾಟ ತೆರಿಗೆ/ವ್ಯಾಟ್ ಮುಖ್ಯ ಮೂಲವಾಗಿದ್ದು, 2014-15ನೇ ಸಾಲಿನಲ್ಲಿ ಅದರ ಪಾಲು ಎಷ್ಟಿತ್ತು?
A. 43.31
B. 48.31
C. 53.31✅
D. 58.81
2. 2013-14ರಲ್ಲಿ ಅಭಿವೃದ್ಧಿ ವೆಚ್ಚ 81454.10 ಕೋಟಿ ರೂ. ಗಳಾಗಿತ್ತು. ಅದು 2014-15ರಲ್ಲಿ ಶೇ. ಎಷ್ಟು ಏರಿಕೆಯಾಯಿತು?
A. 10.57%
B. 12.67%
C. 15.57%✅
D. 17.77%
3. 2014-15ನೇ ಸಾಲಿನಲ್ಲಿ ಕೆಳಕಂಡ ಯಾವ ಭಾಗದ 4 ಮತ್ತು 5ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಸರಳ ರೀತಿಯಲ್ಲಿ ಗಣಿತ ಬೋಧನೆ ಸುಗಮಗೊಳಿಸಲು ಅಕ್ಷರ ಗಣಿತ ಕಿಟ್'ಗಳನ್ನು ವಿತರಿಸಲಾಯಿತು?
A. ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ
B. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ✅
C. ಹಳೆ ಮೈಸೂರು ಭಾಗದ ಜಿಲ್ಲೆಗಳಿಗೆ
D. ಕರಾವಳಿ ಜಿಲ್ಲೆಗಳಿಗೆ
4. 2014-15ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಕೆಳಕಂಡ ಯಾವ ಅವಧಿಗಾಗಿ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿತು?
A. 2014-16
B. 2014-17
C. 2014-19✅
D. 2014-20
5. 2014-15ರಲ್ಲಿ ಸರ್ಕಾರ ನೂತನ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿತು. ಇದರನ್ವಯ ಕೈಗಾರಿಕಾ ಬೆಳವಣಿಗೆಯ ದರವನ್ನು ಶೇ. 12ರಷ್ಚನ್ನು ಕಾಯ್ದುಕೊಂಡು, ರಾಜ್ಯ ಜಿಡಿಪಿಗೆ ಉತ್ಪಾದನಾ ಕ್ಷೇತ್ರದ ಕೊಡುಗೆಯನ್ನು ಶೇ.16.87ರಿಂದ ಶೇ.ಎಷ್ಟಕ್ಕೆ ಹೆಚ್ಚಿಸುವುದು ಗುರಿಯಾಗಿತ್ತು?
A. ಶೇ. 18
B. ಶೇ. 19
C. ಶೇ. 20✅
D. ಶೇ. 22
6. ಪ್ರಸಕ್ತ ಬೆಲೆಗಳಲ್ಲಿನ ರಾಜ್ಯದ ನಿವ್ವಳ ಉತ್ಪನ್ನವನ್ನು ವಿತ್ತೀಯ ವರ್ಷದ ಯಾವ ಅವಧಿಯಲ್ಲಿ ಇರಬಹುದಾದ ಅಂದಾಜು ಜನಸಂಖ್ಯೆಯಿಂದ ಭಾಗಿಸಿ ತಲಾಆದಾಯವನ್ನು ಲೆಕ್ಕ ಹಾಕಲಾಗುತ್ತದೆ?
A. ಏಪ್ರಿಲ್ 1
B. ಆಗಸ್ಟ್ 1
C. ಆಕ್ಟೋಬರ್ 1✅
D. ನವೆಂಬರ್ 1
7. ರಾಜ್ಯದ ತೆರಿಗೆಯೇತರ ವರಮಾನ ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ಇದೆ. ಕಳೆದ 2-3 ವರ್ಷಗಳಿಂದ ಅದು ಶೇಕಡಾ ಎಷ್ಟರ ಆಸುಪಾಸಿನಲ್ಲಿದೆಯೆಂದು ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರಲ್ಲಿ ಹೇಳಲಾಗಿದೆ?
A. 1%✅
B. 2%
C. 3%
D. 4%
8. 2014-15ನೇ ಸಾಲಿನಲ್ಲಿ ಒಟ್ಟು ಎಷ್ಟು ಹೊಸ ಕಾರ್ಯಕ್ರಮಗಳನ್ನುಘೋಷಿಸಲಾಗಿತ್ತು?
A. 77B. 87
C. 97✅
D. 107
9. 2014-15ನೇ ಸಾಲಿನಲ್ಲಿ ಘೋಷಿಸಲಾದ ಹೊಸ ಕಾರ್ಯಕ್ರಮಗಳನ್ನುಆಯಾ ಇಲಾಖೆವಾರು {ಅತಿ ಹೆಚ್ಚು ದಿಂದ ಕಡಿಮೆ} ಪಟ್ಟಿ ಮಾಡಿ.
A. ಸಮಾಜ ಕಲ್ಯಾಣ ಇಲಾಖ
ೆB. ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ
C. ಕನ್ನಡ, ಕಲೆ ಮತ್ತು ಮಾಹಿತಿ✅
D. ಯು.ಡಿ.ಡಿ
10. 2014-15ನೇ ಸಾಲಿನಲ್ಲಿ ವಿಶ್ವಬ್ಯಾಂಕ್ ಮತ್ತು ಇತರೆ ವಿದೇಶಿ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯದ ಒಟ್ಟು ಎಷ್ಟು ಯೋಜನೆಗಳಿಗೆ 10762.39 ಕೋ.ರೂ.ಗಳ ಅನುದಾನ ದೊರಕಿದೆ?
A. 10
B. 12
C. 15✅
D. 16
11. ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದ ಪ್ರಕಾರ, ಬೆಂಗಳೂರು ನಗರವು ಜಾಗತಿಕ ಮಾಹಿತಿ ತಂತ್ರಜ್ಞಾನ ಮುಂಚೂಣಿಯಲ್ಲಿದ್ದು, ಸುಮಾರು ಎಷ್ಟು ಕಂಪನಿಗಳು ಇಲ್ಲಿ ಹೊರಗುತ್ತಿಗೆ ವಹಿವಾಟನ್ನು ನಡೆಸುತ್ತಿವೆ?
A. 200
B. 300
C. 400
D. 500✅
12. IT/ITES ಸ್ಚಾರ್ಟ್ - ಅಪ್ಸ್ ಹಾಗೂ ಇತರೆ ಜ್ಞಾನಾಧಾರಿತ ಉದ್ದಿಮೆಗಳಿಗೆ 1964ರ ಕರ್ನಾಟಕ ಕೈಗಾರಿಕಾ ಉದ್ಯೋಗ (ನಿಲುವು ಆದೇಶ) ನಿಯಮಗಳಿಂದ ಎಷ್ಟು ವರ್ಷಗಳ ವಿನಾಯ್ತಿ ನೀಡಲಾಗಿದೆ?
A. 2 ವರ್ಷ
B. 3 ವರ್ಷ
C. 5 ವರ್ಷ✅
D. 10 ವರ್ಷ
13. ಕರ್ನಾಟಕವು ಸಾಫ್ಟವೇರ್/ಸೇವೆಗಳ ರಫ್ತಿನಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು,ಮಾರಾಟ ಸರಕು ರಫ್ತಿನಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂದು ಕ. ಆ. ಸ. 2014-15ರಲ್ಲಿ ತಿಳಿಸಲಾಗಿದೆ?
A. 2ನೇ
B. 3ನೇ
C. 4ನೇ✅
D. 5ನೇ
14. ಗ್ರಾಮೀಣ ಆಶ್ರಯ/ಬಸವ ವಸತಿ ಯೋಜನೆ ಹಾಗೂ ಗ್ರಾಮೀಣ ಅಂಬೇಡ್ಕರ್ ಯೋಜನೆಯನ್ವಯ ಎಷ್ಟು ವಾರ್ಷಿಕ ಆದಾಯಕ್ಕಿಂತ ಕಡಿಮೆ ಇರುವ ವಸತಿರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ?
A. 20,000ರೂ
B. 28,000ರೂ.
C. 32,000ರೂ.✅
D. 40,000ರೂ
15. 2013-14ನೇ ಸಾಲಿನಿಂದ ವಸತಿ ಯೋಜನೆಗಾಗಿ ಪ್ರತಿ ಮನೆಯ ಕನಿಷ್ಪ ಘಟಕ ವೆಚ್ಚವನ್ನು ಎಷ್ಟೆಂದುನಿಗದಿಪಡಿಸಲಾಯಿತು?
A. 1 ಲಕ್ಷ ರೂ.
B. 1.20 ಲಕ್ಷ ರೂ.
C. 1.50 ಲಕ್ಷ ರೂ.
D. 2 ಲಕ್ಷ ರೂ.
16. ' ಕರ್ನಾಟಕ ರೂರಲ್ ಇನ್'ಫ್ರಾಸ್ಟ್ರಕ್ಚರ್ ಡೆವಲಪ್'ಮೆಂಟ್ ಲಿಮಿಟೆಡ್' 2013-14ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ 2.45 ಕೋ.ರೂ.ಗಳ ಲಾಭಾಂಶವನ್ನು ನೀಡಿತು. ಅಂದಹಾಗೆ ಈ ನಿಗಮ ಆ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭವೆಷ್ಟು?
A. 59.22ಕೋ.ರೂ
B. 69.11ಕೋ.ರೂ.✅
C. 79.31ಕೋ.ರೂ
D. 89.41ಕೋ.ರೂ
17. ಈಗ 'ಕರ್ನಾಟಕ ರೂರಲ್ ಇನ್'ಫ್ರಾಸ್ಟ್ರಕ್ಚರ್ ಡೆವಲಪ್'ಮೆಂಟ್ ಲಿಮಿಟೆಡ್' ಆಗಿರುವ 'ಕರ್ನಾಟಕ ಭೂಸೇನಾ ನಿಗಮ' ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿ ಯಾವ ವರ್ಷ ಪ್ರಾರಂಭವಾಗಿತ್ತು?
A. 1970
B. 1972
C. 1974✅
D. 1976
18. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ವಯ 2014ರ ಡಿಸೆಂಬರ್ ಅಂತ್ಯದತನಕ ಎಷ್ಟು ಕುಟುಂಬಗಳಿಗೆ ಉದ್ಯೋಗ ನೀಡಲಾಗಿತ್ತೆಂದು ಕ. ಆ. ಸ. 2014-15ರಲ್ಲಿ ಹೇಳಲಾಗಿದೆ?
A. 6.56 ಲಕ್ಷ ಕುಟುಂಬಗಳಿಗೆ
B. 7.66 ಲಕ್ಷ ಕುಟುಂಬಗಳಿಗ
ೆC. 8.26 ಲಕ್ಷ ಕುಟುಂಬಗಳಿಗೆ✅
D. 9.76 ಲಕ್ಷ ಕುಟುಂಬಗಳಿಗ
ೆ19. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (National Urban Livelihood Mission - NULM ) ದನ್ವಯ ಎಷ್ಟು ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವಅರ್ಹತೆ ಪಡೆದಿರುತ್ತವೆ?
A. 50,000 ಮೇಲ್ಪಟ್ಟು
B. 75,000 ಮೇಲ್ಪಟ್ಟು
C. 1 ಲಕ್ಷಕ್ಕಿಂತ ಹೆಚ್ಚು✅
D. 2ಲಕ್ಷಕ್ಕಿಂತ ಹೆಚ್ಚು
20. 'ಭೂಚೇತನ ಪ್ಲಸ್' ಯೋಜನೆಯನ್ವಯ 2013-14ನೇ ಸಾಲಿನಿಂದ 2016-17ನೇ ಸಾಲಿನತನಕ ಪ್ರಾಯೋಗಿಕವಾಗಿ ಕೆಳಕಂಡ ಯಾವ ಜಿಲ್ಲೆಗಳು ಆಯ್ಕೆಯಾಗಿವೆ ?
A. ತುಮಕೂರು
B. ರಾಯಚೂರು
C. ಚಿಕ್ಕಮಗಳೂರು
D. ವಿಜಯಪುರ
21. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರಲ್ಲಿ ತಿಳಿಸಿದ ಪ್ರಕಾರ, ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡಾ ಎಷ್ಟು ಜನ ಕೆಲಸಗಾರರು?
A. ಶೇ.35.40
B. ಶೇ.40.50
C. ಶೇ.45.60✅
D. ಶೇ.50.60
22. 20
13-14ನೇ ಸಾಲಿನಲ್ಲಿ ರಾಜ್ಯದ ಒಟ್ಟು ಮೀನು ಉತ್ಪಾದನೆ 5.55ಲಕ್ಷ ಟನ್'ಗಳಷ್ಟಿತ್ತು.ಅಂದಹಾಗೆ ಇದು ದೇಶದ ರಾಷ್ಟ್ರೀಯ ಮೀನು ಉತ್ಪಾದನೆಯ ಶೇಕಡಾವಾರು ಪ್ರಮಾಣ ಎಷ್ಟು?
A. 2.3%
B. 3.8%
C. 4.6
D. 5.8%✅
23. 2013-14ನೇ ಸಾಲಿನಲ್ಲಿ ರಾಜ್ಯ ಸಮುದ್ರ ಮೀನು ಉತ್ಪಾದನೆ ಹಾಗೂ ಒಳನಾಡು ಮೀನು ಉತ್ಪಾದನೆಯಲ್ಲಿ ಕ್ರಮವಾಗಿ ಎಷ್ಟನೇ ಸ್ಥಾನದಲ್ಲಿತ್ತು?
A. 5 ಹಾಗೂ 7
B. 6 ಹಾಗೂ 9✅
C. 7 ಹಾಗೂ 9
D. 9 ಹಾಗೂ 6
24. 2012-13ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಶಾಲೆ ತೊರೆಯುವವರ ಸಂಖ್ಯೆ 2.56 ಇತ್ತು. ಅದು 2013-14ನೇ ಸಾಲಿನಲ್ಲಿ ಎಷ್ಟಕ್ಕೆ ಕಡಿಮೆಯಾಯಿತು ಅಥವಾ ಏರಿಕೆಯಾಯಿತು?
A. 1.96%
B. 2.16%
C. 2.96%✅
D. 3.16%
25. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 2001ರಲ್ಲಿ 1000ಕ್ಕೆ 41ಇದ್ದುದು 2013ನೇ ಸಾಲಿಗೆ ಶೇಕಡಾ ಎಷ್ಟಕ್ಕೆ ಏರಿಕೆ ಅಥವಾ ಇಳಿಕಯಾಯಿತು?
A. 46
B. 51
C. 31✅
D. 21
26. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15 ಪ್ರಕಾರ, ರಾಜ್ಯದ ಜಿಲ್ಲಾವಾರು ಅತಿಹೆಚ್ಚು ನಗರೀಕರಣಕ್ಕೊಳಗಾದಜಿಲ್ಲೆಗಳನ್ನು 1 - 4 ಈ ಕ್ರಮದಲ್ಲಿ ದಾಖಲಿಸಿ.A. ಧಾರವಾಡB. ಬೆಂಗಳೂರುC. ದಕ್ಷಿಣ ಕನ್ನಡD. ಮೈಸೂರು
ಉತ್ತರ: BACD.
27. ರಾಜ್ಯದ ಒಟ್ಟು ಕೆಲಸಗಾರರಲ್ಲಿ ಪುರುಷ ಹಾಗೂ ಮಹಿಳೆಯರ ಶೇಕಡಾವಾರು ಪ್ರಮಾಣ ಕ್ರಮವಾಗಿ ಎಷ್ಟು ?
A. 50% ಹಾಗೂ 40%
B. 59% ಹಾಗೂ 31%✅
C. 65% ಹಾಗೂ 25%
D. 60% ಹಾಗೂ 30%
28. ಕರ್ನಾಟಕದಲ್ವಿ 2011ರ ಜನಸಂಖ್ಯೆಯ ಪ್ರಕಾರ, ಕುಟುಂಬಗಳ ಜನಸಂಖ್ಯೆಯಲ್ಲಿ ಶೇ. 28.41ರಷ್ಟು ಬೆಳವಣಿಗೆಯಾಗಿದ್ದು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಎಷ್ಟು ಕುಟುಂಬಗಳು ಮಹಿಳಾಪ್ರಧಾನ ಕುಟುಂಬಗಳಾಗಿವೆ ?
A. 10. 9%
B. 12. 8%
C. 14. 91%✅
D. 15. 55%
29. ಮಹಿಳಾಪ್ರಧಾನ ಕುಟುಂಬಗಳ ಸಂಖ್ಯೆ ಅಖಿಲಭಾರತ ಮಟ್ಟದಲ್ಲಿ ಶೇಕಡಾ ಎಷ್ಟು ಇದೆ?
A. 08.9%
B. 10.9%✅
C. 12.9%
D. 15.3%
30. ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದ ಪ್ರಕಾರ, ರಾಜ್ಯದಲ್ಲಿ ಜಾನುವಾರು ಸಾಂದ್ರತೆ ಪ್ರತಿ ಕಿ.ಮೀ. ಗೆ 151. 21ರಷ್ಪಿದೆ. ಅಂದಹಾಗೆ ಪ್ರತಿ ಲಕ್ಷ ಮನುಷ್ಯರಿಗೆ ಎಷ್ಟು ಜಾನುವಾರುಗಳಿವೆಯೆಂದು ಅದರಲ್ಲಿ ತಿಳಿಸಲಾಗಿದೆ?
A. 32,478
B. 37,488
C. 42,498
D. 47,468✅
31. ಭಾರತದ ರಾಜ್ಯಗಳ ಪೈಕಿ ಕರ್ನಾಟಕ (2013-14ನೇ ಸಾಲಿನಲ್ಲಿ) ಹಾಲು ಉತ್ಪಾದನೆಯಲ್ಲಿ ಎಷ್ಟನೇಸ್ಥಾನದಲ್ಲಿತ್ತು?
A. 7ನೇ
B. 9ನೇ
C.11ನೇ✅
D.13ನೇ
32 2013-14ನೇ ಸಾಲಿನ ಅರಣ್ಯ ವರದಿಯ ಪ್ರಕಾರ, ಕರ್ನಾಟಕ 43, 356.47 ಚ. ಕಿ. ಮೀ. ಅರಣ್ಯ ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ ಭೌಗೋಳಿಕ ಪ್ರದೇಶದ ಶೇಕಡಾ ಎಷ್ಟು ?A. 18.61%
B. 21.36%
C.22.61%✅
D. 23. 86%
33. ಕರ್ನಾಟಕದ ರಾಜ್ಯದ ಒಟ್ಟು ಅರಣ್ಯ ಪ್ರದೇಶದಲ್ಲಿ ಮೀಸಲು ಅರಣ್ಯ ಪ್ರದೇಶದ ಪ್ರಮಾಣ ಶೇಕಡಾ ಎಷ್ಟು?
A. 13.84%
B. 15.48%✅
C. 16,67%
D. 17.87%
34. 2012-13ನೇ ಸಾಲಿನ ಜಿಲ್ಲಾ ತಲಾವಾರು ಆದಾಯದಲ್ಲಿ ಕೆಳಕಂಡ ಜಿಲ್ಲೆಗಳನ್ನು 1 - 4 ಕ್ರಮದಲ್ಲಿ ಬರೆಯಿರಿ.A. ದಕ್ಷಿಣ ಕನ್ನಡB. ಕೊಡಗುC. ಬೆಂಗಳೂರು ಗ್ರಾಮಾಂತರD. ಬೆಂಗಳೂರು ನಗರ
ಉತ್ತರ: DBCA
35. 2012-13ನೇ ಸಾಲಿನಲ್ಲಿ ಜಿಲ್ಲಾ ತಲಾವಾರು ಆದಾಯದಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿದ್ದ ಜಿಲ್ಲೆ ಯಾವುದು?
A. ರಾಯಚೂರು
B. ಕೊಪ್ಪಳ
C. ಯಾದಗಿರಿ✅
D. ಹಾವೇರಿ
36. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರ ಪ್ರಕಾರ, ಅತಿ ಕಡಿಮೆ ನಗರೀಕರಣಗೊಂಡ ಜಿಲ್ಲೆಗಳನ್ನು ಕೆಳಗಿನಿಂದ ಮೇಲಿನ ಕ್ರಮದಲ್ಲಿ ಬರೆಯಿರಿ.
A. ಯಾದಗೀರ
B. ಕೊಪ್ಪಳ
C. ಕೊಡಗು
D. ಮಂಡ್ಯ
E. ಚಾಮರಾಜನಗರಉತ್ತರ: CBDEA
A. 19%B. 17%C. 15%D. 17%E. 17%
37. ಅತ್ಯಂತ ದಟ್ಟ ಅರಣ್ಯ ಹೊಂದಿದ ಜಿಲ್ಲೆಗಳನ್ನು ಅತಿ ಹೆಚ್ಚು ವ್ಯಾಪ್ತಿಯಿಂದ ಕಡಿಮೆ ವ್ಯಾಪ್ತಿ ಈ ಕ್ರಮದಲ್ಲಿ ಬರೆಯಿರಿ.
A. ದಕ್ಷಿಣ ಕನ್ನಡ
B. ಚಿಕ್ಕಮಗಳೂರು
C. ಶಿವಮೊಗ
್ಗD. ಕೊಡಗುಉತ್ತರ: BADC
A. 253 ಚ. ಕಿ. ಮೀ.
B. 587 ಚ. ಕಿ. ಮೀ.
C. 205 ಚ. ಕಿ. ಮೀ.
D. 246 ಚ. ಕಿ. ಮೀ.
38. ಮಧ್ಯಮ ದಟ್ಟ ಅರಣ್ಯ ಹೊಂದಿದ ಜಿಲ್ಲೆಗಳನ್ಪು ಅತಿಹೆಚ್ಚು ಚ. ಕಿ. ಮೀ ವ್ಯಾಪ್ತಿಯಿಂದ ಕಡಿಮೆ ಚ. ಕಿ.ಮೀ. ಈ ಕ್ರಮದಲ್ಲಿ ಬರೆಯಿರಿ.
A. ಕೊಡಗು
B. ಉತ್ತರ ಕನ್ನಡ
C. ಶಿವಮೊಗ್ಗ
D. ಚಿಕ್ಕಮಗಳೂರು
ಉತ್ತರ : BCDA
A. 2142 ಚ. ಕಿ. ಮೀ
B. 5775 ಚ. ಕಿ. ಮೀ
C. 2008 ಚ. ಕಿ. ಮೀ
D. 2428 ಚ. ಕಿ. ಮೀ.
39. ಕೆಳಕಂಡ ರಾಷ್ಟ್ರೀಯ ಉದ್ಯಾನಗಳನ್ನು ಅವುಗಳ ಚ. ಕಿ. ಮೀ. ವ್ಯಾಪ್ತಿಗನುಗುಣವಾಗಿ 1 - 4 ಕ್ರಮದಲ್ಲಿ ಬರೆಯಿರಿ.
A. ಮಲೈ ಮಹದೇಶ್ವರ ವನ್ನಧಾಮ
B. ಕಾವೇರಿ ವನ್ನಧಾಮ
C. ದಾಂಡೇಲಿ ವನ್ಯಧಾಮ
D. ಬಂಡೀಪುರ ರಾಷ್ಟ್ರೀಯ ಉದ್ಯಾನ
ಉತ್ತರ: BACD.
A. 906.187 ಚ. ಕಿ. ಮೀ.
B. 1027.53 ಚ. ಕಿ. ಮೀ.
C. 886.41 ಚ. ಕಿ. ಮೀ.
D. 872.24 ಚ. ಕಿ. ಮೀ.
40. ಡಿಸೆಂಬರ್ 2014ರ ತನಕ ಕೆಳಕಂಡ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟ ಪ್ರವಾಸಿಗರ ಸಂಖ್ಯೆಗನುಣವಾಗಿ ಕ್ರಮವಾಗಿ ಬರೆಯಿರಿ.
A. ನಾಗರಹೊಳೆ ರಾಷ್ಟ್ರೀಯ ಉದ್ಯಾ
B. ಬಂಡಿಪುರ ರಾಷ್ಟ್ರೀಯ ಉದ್ಯಾನ
C. ರಂಗನತಿಟ್ಟು ಪಕ್ಷಿಧಾಮ
D. ಬ್ರಹ್ಮಗಿರಿ ವನ್ಯಜೀವಿ ಅಭಿಯಾರಣ್ಯ
ಉತ್ತರ: CBDA
A. 64, 768
B. 96, 888
C. 2, 46, 359
D. 96, 250
41. ಕರ್ನಾಟಕ 320ಕಿಮೀ. ಉದ್ದದ ಕರಾವಳಿ ಹೊಂದಿದ್ದು, ಕೆಳಕಂಡ ಜಿಲ್ಲೆಗಳನ್ನು ಅವುಗಳು ಹೊಂದಿದ ಕರಾವಳಿಯ ಉದ್ದಕ್ಕನುಗುಣವಾಗಿ ಕ್ರಮವಾಗಿ ಬರಿಯಿರಿ.
A. ಉಡುಪಿ
B. ದಕ್ಷಿಣ ಕನ್ನಡ
C. ಉತ್ತರ ಕನ್ನಡಉತ್ತರ: CABA. 098 ಕಿ. ಮೀB. 062C. 160ಕಿ. ಮೀ
42. ರಾಜ್ಯ ಸರ್ಕಾರ ರೂಪಿಸಿದ ನೀತಿ ಹಾಗೂ ವರ್ಷಕ್ಕೆ ಸಂಬಂಧಪಟ್ಟಂತೆ ಕೆಳಕಂಡವುಗಳಲ್ಲಿ ಯಾವುದು/ಯಾವುವು ಸರಿ?
A. ಕರ್ನಾಟಕ ಕೈಗಾರಿಕಾ ನೀತಿ- 2014-19
B. ಕರ್ನಾಟಕ ಜವಳಿ ನೀತಿ - 2013
C. ಕರ್ನಾಟಕ ಅಂತರಿಕ್ಷಯಾನ ನೀತಿ - 2013
D. ಕರ್ನಾಟಕ ಐ4 ನೀತಿ - 2013ಉತ್ತರ: ಎಲ್ಲವೂ ಸರಿ.
43. ಕರ್ನಾಟಕದಲ್ಲಿ ನೀರಾವರಿಗೆ ಕೆಳಕಂಡ ಮೂಲಗಳನ್ನು ಅನುಸರಿಸಲಾಗುತ್ತಿದ್ದು, ಅವುಗಳ ಬಳಕೆಯ ಪ್ರತಿಶತಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಕಾಲುವೆಗಳಿಂದ
B. ಕೆರೆಗಳಿಂದ
C. ಭಾವಿಗಳಿಂದ
D. ಕೊಳವೆ ಭಾ
ವಿಗಳಿಂದಉತ್ತರ : DACB.
A. 34. 24%
B. 05. 17%
C. 12. 30%
D. 37. 15%
44. 2013-14ರ ಕೈಗಾರಿಕಾ ಉತ್ಪಾದನಾ ಸಾಮಾನ್ಯ ಸೂಚ್ಯಂಕ 175.79 ಆಗಿತ್ತು. ಇದು ಹಿಂದಿನವರ್ಷಕ್ಕೆ ಹೋಲಿಸಿದರೆ ಎಷ್ಟು ಶೇಕಡಾ ವಾರ್ಷಿಕ ಬೆಳವಣಿಗೆಯಾಗಿದೆ?
A. 2.65%
B. 3.66%✅
C. 4.22%
D. 5.33%
45. 2014ರಲ್ಲಿ ಕರ್ನಾಟಕ 608.81 ಕೋ. ರೂ. ಗಳ ರೇಷ್ಮೆ ವಸ್ತುಗಳ ರಫ್ತು ವಹಿವಾಟು ನಡೆಸಿದ್ದು, ಇದು ದೇಶದ ಶೇಕಡಾವಾರು ಪ್ರಮಾಣ ಎಷ್ಟು?
A. 15.24%
B. 24.54%✅
C. 34.34%
D. 44.64%
46. 2013-14ರನ್ವಯ ದಕ್ಷಿಣದ ರಾಜ್ಯಗಳಲ್ಲಿ ತಮ್ಮ ಭೌಗೋಳಿಕ ಪ್ರದೇಶಕ್ಕನುಗುಣವಾಗಿ ಅತಿಹೆಚ್ಚುದಿಂದ ಅತಿ ಕಡಿಮೆ ಅರಣ್ಯ ವ್ಯಾಪ್ತಿ ಹೊಂದಿದ ರಾಜ್ಯಗಳನ್ನು ಕ್ರಮವಾಗಿ ಬರೆಯಿರಿ.
A. ಕರ್ನಾಟಕ
B. ಕೇರಳ
C. ತಮಿಳುನಾಡು
D. ಆಂಧ್ರಪ್ರದೇಶBACD
A. 18. 84%
B. 46. 12%
C. 18. 33%
D. 16. 77%
47. ರಾಜ್ಯ ಸರ್ಕಾರ ಕೆಳಕಂಡ ಯಾವ ವರ್ಷದಿಂದ ಯಾವ ವರ್ಷಕ್ಕೆ ಅನ್ವಯಿಸುವಂತೆ ಸೌರನೀತಿಯನ್ನು ಘೋಷಿಸಿತ್ತು?
A. 2010 - 2015
B. 2011 - 2016✅
C. 2012 - 2017
D. 2013 - 2018
48. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ 2001ರಲ್ಲಿ 7ನೇ ಸ್ಥಾನದಲ್ಲಿತ್ತು.2011ರಲ್ಲಿ ಅದರ ಸ್ದಾನ ಎಷ್ಟು?
A. 6ನೇ
B. 8ನೇ
C. 10ನೇ✅
D. 12ನೇ
49. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣದ ರಾಜ್ಯಗಳನ್ನು ಅವು ಹೊಂದಿದ ಸ್ಥಾನಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಆಂಧ್ರಪ್ರದೇಶ
B. ಕೇರಳ
C. ತಮಿಳುನಾಡು
D. ಕರ್ನಾಟಕಉತ್ತರ: BCDA.
50. ಕರ್ನಾಟಕದ ಸಾಕ್ಷರತಾ ಪ್ರಮಾಣ 2001ರಲ್ಲಿ 66.64ರಷ್ಟಿತ್ತು.2011ರಲ್ಲಿ ಅದರ ಪ್ರಮಾಣ ಎಷ್ಟಿತ್ತು?
A. 68.80%
B. 72.67%
C. 75.60%✅
D. 78.79%
51. ಕರ್ನಾಟಕದಲ್ಲಿ 2011ರಲ್ಲಿದ್ದ ಪುರುಷ ಹಾಗೂ ಮಹಿಳೆಯರ ಸಾಕ್ಷರತಾ ಪ್ರಮಾಣ ಕ್ರಮವಾಗಿ ಎಷ್ಟು?
A. 80 ಮತ್ತು 70
B. 82 ಮತ್ತು 68
C. 85 ಮತ್ತು 61✅
D. 90 ಮತ್ತು 60
52. ರಾಜ್ಯದ ವಿದ್ಯುತ್ ಗ್ರಾಹಕರಿಗೆ ಲಭಿಸುತ್ತಿರುವ ವಿವಿಧ ಮೂಲದ ವಿದ್ಯುತ್ ಉತ್ಪಾದನೆಯನ್ನು ಅವುಗಳ ಉತ್ಪಾದನೆ ಗನುಗುಣವಾಗಿ ಶೇಕಡಾವಾರು ಲೆಕ್ಕದಲ್ಲಿ ಕ್ರಮವಾಗಿ ಬರೆಯಿರಿ.
A. ರಾಜ್ಯದಲ್ವಿ ಉತ್ಪಾದನೆ - ಜಲವಿದ್ಯುತ್
B. ಶಾಖೋತ್ಪನ್ನ ಮೂಲದಿಂದ
C. ಖಾಸಗಿ ಕ್ಷೇತ್ರದಿಂದ
D. ಕೇಂದ್ರೀಯ ಉತ್ಪಾದನಾ ಘಟಕದ ಪಾಲುCADB
A. 25%
B. 18%
C. 34%
D. 19%
53. ವಿದ್ಯುತ್ ಪ್ರಸರಣ ಮತ್ತು ವಿತರಣಾ ನಷ್ಟ 2004-05ರಲ್ಲಿ 27.5ರಷ್ಟಿತ್ತು. ಅದು 2013-14ನೇ ಸಾಲಿನಷ್ಟೊತ್ತಿಗೆಶೇಕಡಾ ಎಷ್ಟಕ್ಕೆ ತಗ್ಗಿದೆ ?
A. 23.9%
B. 21.6%
C. 19.7%✅
D. 18.6%
54. ರಾಜ್ಯದಲ್ಲಿ ವಿದ್ಯುತ್ ಬಳಕೆಯ ಕುರಿತಂತೆ ಕೆಳಕಂಡ ಕ್ಷೇತ್ರಗಳನ್ನು ಅವು ಬಳಸಿದ ಶೇಕಡಾವಾರು ಕ ವಿದ್ಯುತ್ ಪ್ರಮಾಣಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಕೈಗಾರಿಕೆಗಳು
B. ಗೃಹಬಳಕೆ
C. ನೀರಾವರಿ ಪಂಪ್'ಸೆಟ್
D. ವಾಣಿಜ್ಯ ದೀಪಗಳುCBAD
A. 18. 08%
B. 20. 35%
C. 33. 53%
D. 12. 22%
55. 2014ರ ಮಾರ್ಚ್'ತನಕ ರಾಜ್ಯದಲ್ಲಿ ಎಷ್ಟು ವಾಣಿಜ್ಯ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದವು?A. 6578 ಮತ್ತು 1487
B. 6876 ಮತ್ತು 1547✅
C. 7686 ಮತ್ತು 1676
D. 8676 ಮತ್ತು 1878

(Courtesy : Mallesha CP)

Sunday, 3 April 2016

☀️ 2014ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ :

☀️ 2014ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ :
━━━━━━━━━━━━━━━━━━━━━━━━━━━━━━━━━━━━━━━━━━━━━━━

ಚಿಂತಕ ಡಾ.ಜಿ.ರಾಮಕೃಷ್ಣ, ಹಿರಿಯ ಸಂಶೋಧಕ ಷ.ಶೆಟ್ಟರ್, ಹಿರಿಯ ಕವಿ ಸುಬ್ಯಾಯ ಚೊಕ್ಕಾಡಿ, ಕವಯತ್ರಿಯವರಾದ ಶಿವಮೊಗ್ಗದ ಸವಿತಾ ನಾಗಭೂಷಣ ಮತ್ತು ಧಾರವಾಡದ ಪ್ರೊ.ಸುಕನ್ಯಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ ಇದರ ಜತೆಗೆ 2013ನೇ ಸಾಲಿನ ಪುಸ್ತಕ ಪ್ರಶಸ್ತಿ ಮತ್ತು 6 ದತ್ತಿನಿಧಿ ಪ್ರಶಸ್ತಿಗಳನ್ನೂ ಪ್ರಕಟಿಸಲಾಗಿದೆ. ಎಂದು ಅಕಾಡೆಮಿಯ ಅಧ್ಯಕ್ಷೆ ಪ್ರೋ. ಮಾಲತಿ ಪಟ್ಟಣಶೆಟ್ಟಿ ತಿಳಿಸಿದ್ದಾರೆ. ( 30-03-2016)

ಗೌರವ ಪ್ರಶಸ್ತಿಯು ತಲಾ 10 ಸಾವಿರ ರೂ. ನಗದನ್ನು ಒಳಗೊಂಡಿದ್ದರೆ ಪುಸ್ತಕ ಪ್ರಶಸ್ತಿ ಮತ್ತು ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ.ನಗದನ್ನು ಒಳಗೊಂಡಿದೆ. ಈ ಎಲ್ಲ ಪ್ರಶಸ್ತಿಗಳನ್ನು ಏಪ್ರಿಲ್ 29ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಪ್ರಧಾನ ಮಾಡಲಾಗುವುದು.


☀️2013ರ ದತ್ತಿನಿಧಿ ಬಹುಮಾನ

ಅನಾವರಣ: ಸಿ.ಆರ್.ಪಾರ್ಥಸಾರಥಿ (ಕಾದಂಬರಿ ಪ್ರಕಾರ, ಚದುರಂಗ ದತ್ತಿನಿಧಿ)

ನೆಲದೊಡಲ ಚಿಗುರು: ಎನ್.ಎಲ್.ಆನಂದ್-ಗುಂಡಪ್ಪ ದೇವಿಕೇರಿ(ಜೀವನಚರಿತ್ರೆ, ಸಿಂಪಿಲಿಂಗಣ್ಣ ದತ್ತಿನಿಧಿ)

ಸಾಹಿತ್ಯ ಸಿಂಚನ: ಬಸವರಾಜ ಸಬರದ (ಸಾಹಿತ್ಯ ವಿಮರ್ಶೆ, ಪಿ.ಶ್ರೀನಿವಾಸರಾವ್ ದತ್ತಿನಿಧಿ)

ಕುರಿಂಜಿ ಜೇನು: ಡಾ.ಅಶೋಕ್‍ಕುಮಾರ್ (ಅನುವಾದ ಎಲ್ ಗುಂಡಪ್ಪ – ಶಾರದಮ್ಮ ದತ್ತಿನಿಧಿ)

ಅಮೃತಕ್ಕೆ ಹಾರಿದ ಗರುಡ: ರಮೇಶ ಮ.ಕಲ್ಲನಗೌಡರ(ಲೇಖಕರ ಮೊದಲ ಕೃತಿ, ಮಧುರಚೆನ್ನ ದತ್ತಿನಿಧಿ)

ಹಂಟ್ ಬ್ಯಾಂಗಲ್ ಕೆಮಿಲಿಯನ್: ದೀಪಾ ಗಣೇಶ್ (ಕನ್ನಡದಿಂದ ಇಂಗ್ಲೀಷ್‍ಗೆ ಅನುವಾದ, ಅಮೆರಿಕನ್ನರ ದತ್ತಿನಿಧಿ)


☀️2013ರ ಪುಸ್ತಕ ಬಹುಮಾನ

• ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ: ಸುಬ್ಬು ಹೊಲೆಯಾರ್ (ಕಾವ್ಯ)
• ಆತ್ಮವೃತ್ತಾಂತ: ರಜನಿ ನರಹಳ್ಳಿ (ಕಾದಂಬರಿ)
• ಸಲ್ಮಾನ್ ಖಾನನ ಡಿಫಿಕಲ್ಟೀಸು: ಎಂ.ಎಸ್. ಶ್ರೀರಾಮ್ (ಸಣ್ಣಕತೆ)
• ಅನಭಿಜ್ಞ ಶಾಕುಂತಲ: ಕೆ.ವೈ. ನಾರಾಯಣಸ್ವಾಮಿ (ನಾಟಕ)
• ಮಹಾಮಾತೆ ಮಲ್ಲಕ್ಕ ಮತ್ತು ಇತರ ಪ್ರಬಂಧಗಳು:ಎಂ.ಡಿ. ಗೋಗೇರಿ (ಲಲಿತ ಪ್ರಬಂಧ)
• ಅಂಡಮಾನ್ ಕಂಡಹಾಗೆ : ಎಚ್.ಎಸ್.ಅನುಪಮಾ (ಪ್ರವಾಸ ಸಾಹಿತ್ಯ)
• ಅಲೆಮಾರಿಯ ಅಂತರಂಗ: ಕುಪ್ಪೆ ನಾಗರಾಜ (ಆತ್ಮಕತೆ)
• ಹಾರದಿರಲಿ ಪ್ರಾಣಪಕ್ಷಿ: ಹ.ಸ.ಬ್ಯಾಕೋಡ (ಮಕ್ಕಳ ಸಾಹಿತ್ಯ)
• ಕಾಡು ಕಲಿಸುವ ಪಾಠ: ಟಿ.ಎಸ್.ಗೋಪಾಲ್ (ವಿಜ್ಞಾನ ಸಾಹಿತ್ಯ)
• ಎಂದೂ ಮುಗಿಯದ ಯುದ್ದ: ಎನ್.ಜಗದೀಶ್ ಕೊಪ್ಪ (ಮಾನವಿಕ)
• ಮೈಯೇ ಸೂರು ಮನವೇ ಮಾತು: ಬಸವರಾಜ ಕಲ್ಗುಡಿ(ಸಂಶೋಧನೆ)
• ಬೇಗುದಿ: ಆರ್.ಲಕ್ಷ್ಮಿ ನಾರಾಯಣ(ಸೃಜನಶೀಲ ಅನುವಾದ)
• ತೆಲಂಗಾಣ ಹೋರಾಟ: ಬಿ.ಸುಜ್ಞಾನಮೂರ್ತಿ (ಸೃಜನೇತರ ಅನುವಾದ)
• ಬೆಟ್ಟ ಮಹಮದನ ಬಾಳಿಗೆ ಬಾರದಿದ್ದರೆ : ಲಕ್ಷ್ಮೀಶ ತೋಳ್ಪಾಡಿ (ಸಂಕೀರ್ಣ)
• ಬದುಕಿನ ದಿಕ್ಕು ಬದಲಿಸಿದ ಆಸ್ಟಿಯೊ ಸರ್ಕೋಮಾ: ಬಿ.ಎಸ್.ಶೃತಿ (ಲೇಖಕರ ಮೊದಲ ಕೃತಿ)

(Courtesy : Universal Coaching Centre Bangalore) 

■.ದಕ್ಷಿಣ ಏಷಿಯನ್ ಕ್ರೀಡಾಕೂಟ - 2016 (South Asian Games - 2016)

■.ದಕ್ಷಿಣ ಏಷಿಯನ್ ಕ್ರೀಡಾಕೂಟ - 2016
 (South Asian Games - 2016)

━━━━━━━━━━━━━━━━━━━━━━━━━━━━━━━━━━━━━━━━━━━━━━━

■.️12 ನೇ ದಕ್ಷಿಣ ಏಷಿಯನ್ ಕ್ರೀಡಾಕೂಟವನ್ನು ಭಾರತದ ಅಸ್ಸಾಂ ರಾಜ್ಯ ಮತ್ತು ಮೇಘಾಲಯ ರಾಜ್ಯಗಳು ಸೇರಿ ಆಯೋಜಿಸಿದ್ದವು. ಈ ಕ್ರೀಡಾಕೂಟವು ಫೆಬ್ರವರಿ 5, 2016 ರಂದು ಅಸ್ಸಾಂ ನ ಗೌಹಾತಿಯಲ್ಲಿ ಮತ್ತು ಫೆಬ್ರವರಿ 6, 2016 ರಂದು ಮೇಘಾಲಯದ ಶಿಲ್ಲಾಂಗ್ ನಲ್ಲಿ ಪ್ರಧಾನಿ ಮೋದಿಯವರು ಉದ್ಘಾಟಿಸಿದರು. ಇದು ಗೌಹಾತಿಯಲ್ಲಿರುವ ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂ ಮತ್ತು ಶಿಲ್ಲಾಂಗ್ ನ ಜವಾಹರಲಾಲ್ ನೆಹರೂ ಸ್ಟೇಡಿಯಂ ನಲ್ಲಿ ನಡೆಯಿತು.

■.️ಭಾಗವಹಿಸಿದ ರಾಷ್ಟ್ರಗಳು:- ಈ ಕ್ರೀಡಾಕೂಟದಲ್ಲಿ ದಕ್ಷಿಣ ಏಷ್ಯಾದ 8 ರಾಷ್ಟ್ರಗಳ ಭಾಗವಹಿಸಿದ್ದವು. ಅಫ್ಘಾನಿಸ್ತಾನ, ಭಾರತ, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್.

■.ಕ್ರೀಡಾ ಘೋಷಣೆ:- "Play for Peace, Progress and Prosperity" ಇದರರ್ಥ "ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಆಟ". ಎಂದರ್ಥ.

■.ಕ್ರೀಡೆಯ ಚಿಹ್ನೆ:- ಬಾಲ ಘೇಂಡಾಮೃಗ


■.ಈ ಒಂದು ಕ್ರೀಡಾಕೂಟದಲ್ಲಿ ಭಾರತವು ಅತಿ ಹೆಚ್ಚು ಪದಕಗಳನ್ನು ಪಡೆದು ಅಗ್ರಸ್ಥಾನವನ್ನು ಗಳಿಸಿತು. ಈ ಕ್ರೀಡಾಕೂಟದಲ್ಲಿ ವಿವಿಧ ರಾಷ್ಟ್ರಗಳು ಪಡೆದ ಪದಕಗಳ ವಿವರ ಈ ಕೆಳಗಿನಂತಿದೆ.

ಸ್ಥಾನ •┈┈• ರಾಷ್ಟ್ರ •┈┈• ಚಿನ್ನದ ಪದಕ— ಬೆಳ್ಳಿ ಪದಕ— ಕಂಚಿನ ಪದಕ— ಒಟ್ಟು
1 •┈┈• ಭಾರತ •┈┈• 188•┈┈•   90 •┈┈• 30•┈┈•  308
2 •┈┈• ಶ್ರೀಲಂಕಾ •┈┈• 25 •┈┈• 63 •┈┈• 98 •┈┈• 186
3 •┈┈• ಪಾಕಿಸ್ತಾನ •┈┈• 12 •┈┈• 37 •┈┈• 57 •┈┈• 106
4 •┈┈• ಅಫ್ಘಾನಿಸ್ತಾನ •┈┈• 7 •┈┈• 9 •┈┈• 19 •┈┈• 35
5 •┈┈• ಬಾಂಗ್ಲಾದೇಶ •┈┈• 4 •┈┈• 15 •┈┈• 56 •┈┈• 75
6 •┈┈• ನೇಪಾಳ •┈┈• 3 •┈┈• 23 •┈┈• 34 •┈┈• 60
7 •┈┈• ಮಾಲ್ಡಿವ್ಸ್ •┈┈• 0 •┈┈• 2 •┈┈• 1•┈┈•  3
8 •┈┈• ಭೂತಾನ್ •┈┈• 0 •┈┈• 1 •┈┈• 15 •┈┈• 16


■.ದಕ್ಷಿಣ ಏಷಿಯನ್ ಕ್ರೀಡೆಯ ವಿಶೇಷತೆ:-

ಈ ಕ್ರೀಡಾಕೂಟವು ಎರೆಡು ವರ್ಷಗಳಿಗೊಮ್ಮೆ ನಡೆಯುವ ಕ್ರೀಡಾಕೂಟವಾಗಿದೆ. ಇದು ಮೊದಲ ಬಾರಿ 1984 ರ ಸೆಪ್ಟೆಂಬರ್ ನಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆಯಿತು.

ಇಲ್ಲಿಯವರೆಗೆ ನಡೆದ ಕ್ರೀಡಾಕೂಟಗಳ ಮಾಹಿತಿಯನ್ನು ನಾವು ಈ ಕೆಳಗಿನಂತೆ ನೋಡಬಹುದಾಗಿದೆ.


■.ಕ್ರೀಡಾಕೂಟಗಳು — ನಡೆದ ವರ್ಷ— ಸ್ಥಳ
1 ನೇ ಕ್ರೀಡಾಕೂಟ  1984  ನೇಪಾಳದ ಕಠ್ಮಂಡು
2 1985 ಬಾಂಗ್ಲಾದೇಶದ ಢಾಕಾ
3 1987 ಭಾರತದ ಕೋಲ್ಕತ್ತಾ
4 1989 ಪಾಕಿಸ್ತಾನದ ಇಸ್ಲಾಮಾಬಾದ್
5 1991 ಶ್ರೀಲಂಕಾದ ಕೊಲಂಬೋ
6 1993 ಬಾಂಗ್ಲಾದೇಶದ ಢಾಕಾ
7 1995 ಭಾರತದ ಚೆನ್ನೈ
8 1999 ನೇಪಾಳದ ಕಠ್ಮಂಡು
9 2004 ಪಾಕಿಸ್ತಾನದ ಇಸ್ಲಾಮಾಬಾದ್
10 2006 ಶ್ರೀಲಂಕಾದ ಕೊಲಂಬೋ
11 2010 ಬಾಂಗ್ಲಾದೇಶದ ಢಾಕಾ
12 2016 ಭಾರತದ ಮೇಘಾಲಯ ಮತ್ತು ಅಸ್ಸಾಂ
13 2019 ನೇಪಾಳದ ಕಠ್ಮಂಡು