"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 28 January 2016

☀(ಭಾಗ-28 ಸಾಮಾನ್ಯ ಜ್ಞಾನ) ಕರ್ನಾಟಕ ರಾಜ್ಯದ ಜನಗಣತಿ-2011ರ ಮೇಲೆ ತೆಗೆಯಲಾದ ಉಪಯುಕ್ತ ಬಹು ಆಯ್ಕೆಯ ಪ್ರಶ್ನೋತ್ತರಗಳು.: ( Objective Type Question Paper on Karnataka State Census -2011)

☀(ಭಾಗ-28 ಸಾಮಾನ್ಯ ಜ್ಞಾನ) ಕರ್ನಾಟಕ ರಾಜ್ಯದ ಜನಗಣತಿ-2011ರ ಮೇಲೆ ತೆಗೆಯಲಾದ ಉಪಯುಕ್ತ ಬಹು ಆಯ್ಕೆಯ ಪ್ರಶ್ನೋತ್ತರಗಳು.:
( Objective Type Question Paper on Karnataka State Census -2011)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ 'ಕರ್ನಾಟಕ ರಾಜ್ಯದ ಜನಗಣತಿ'ಯ ಬಗ್ಗೆ ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ ಆಯ್ದು ಉಪಯುಕ್ತವಾದ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಈ 'ಸ್ಪರ್ಧಾಲೋಕ'ದಲ್ಲಿಡಲು ಒಂದು ಚಿಕ್ಕ ಪ್ರಯತ್ನ ಮಾಡಿರುವೆನು. ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.


1001) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಪ್ರಮಾಣವೆಷ್ಟು?
A] 6.11 ಕೋಟಿ √
B] 5.28 ಕೋಟಿ
C] 7.12 ಕೋಟಿ
D] 5.50 ಕೋಟಿ


1002) 2001-2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ ಬೆಳವಣಿಗೆ ದರ ಎಷ್ಟು ಪ್ರತಿಶತ ಇದೆ?
A] ಶೇ.18.51ರಷ್ಟು
B] ಶೇ.17.51 ರಷ್ಟು
C] ಶೇ. 15.67 ರಷ್ಟು √
D] ಶೇ.13.20 ರಷ್ಟು


1003) 2001-2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪುರುಷರ ಬೆಳವಣಿಗೆ ಪ್ರಮಾಣ ಎಷ್ಟು ಪ್ರತಿಶತ ಇದೆ?
A] ಶೇ.15.46ರಷ್ಟು√
B] ಶೇ.16.46ರಷ್ಟು
C] ಶೇ.17.51ರಷ್ಟು
D] ಶೇ.18.00ರಷ್ಟು


1004) 2001-2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಬೆಳವಣಿಗೆ ಪ್ರಮಾಣ ಎಷ್ಟು ಪ್ರತಿಶತ ಇದೆ?
A] ಶೇ.15.46ರಷ್ಟು
B] ಶೇ.16.33ರಷ್ಟು
C] ಶೇ.15.88ರಷ್ಟು√
D] ಶೇ.12.20ರಷ್ಟು


1005) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಕಡಿಮೆ ಜನಸಂಖ್ಯೆ ಬೆಳವಣಿಗೆ ದರ ಹೊಂದಿದ ಜಿಲ್ಲೆ ಯಾವುದು?
A] ಚಾಮರಾಜನಗರ
B] ಚಿಕ್ಕಮಗಳೂರು√
C] ಕೊಡುಗು
D] ಮೈಸೂರು


1006) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಬೆಳವಣಿಗೆ ದರ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ಕೊಡುಗು
D] ಮೈಸೂರು


1007) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅಧಿಕ ಬೆಳವಣಿಗೆ ದರ ಹೊಂದಿರುವ ಮೊದಲ 3 ಜಿಲ್ಲೆಗಳು ಯಾವವು?
A] ಬೆಂಗಳೂರು, ಬಳ್ಳಾರಿ, ಯಾದಗಿರಿ √
B] ಬೆಳಗಾವಿ, ಬೆಂಗಳೂರು, ರಾಯಚೂರು
C] ಬೆಂಗಳೂರು, ಬೆಳಗಾವಿ, ಉಡುಪಿ
D] ಬೆಳಗಾವಿ, ಯಾದಗಿರಿ, ಚಿಕ್ಕಮಗಳೂರು


1008) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಕಡಿಮೆ ಬೆಳವಣಿಗೆ ದರ ಹೊಂದಿರುವ ಕೊನೆಯ 3 ಜಿಲ್ಲೆಗಳು ಯಾವವು?
A] ಉಡುಪಿ , ಮಂಡ್ಯ, ದಕ್ಷಿಣ ಕನ್ನಡ
B] ಚಿಕ್ಕಮಗಳೂರು, ಕೊಡುಗು, ಮಂಡ್ಯ√
C] ಚಿಕ್ಕಮಗಳೂರು, ಹಾಸನ, ಉಡುಪಿ
D] ಉಡುಪಿ , ಯಾದಗಿರಿ, ಕೊಡಗು


1009) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ಬಳ್ಳಾರಿ
D] ಮೈಸೂರು


1010) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲ ಐದು ಜಿಲ್ಲೆಗಳು ಯಾವವು?
A] ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು, ಗುಲ್ಬರ್ಗಾ√
B] ಬೆಳಗಾವಿ, ಬೆಂಗಳೂರು, ರಾಯಚೂರು, ಗುಲ್ಬರ್ಗಾ, ಕೊಡುಗು
C] ಬೆಂಗಳೂರು, ಬೆಳಗಾವಿ, ದಕ್ಷಿಣ ಕನ್ನಡ, ತುಮಕೂರು, ಉಡುಪಿ
D] ಬೆಳಗಾವಿ, ಮಂಡ್ಯ, ತುಮಕೂರು, ಯಾದಗಿರಿ, ಚಿಕ್ಕಮಗಳೂರು


1011) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆ ಯಾವುದು?
A] ಚಾಮರಾಜನಗರ
B] ಬೆಂಗಳೂರು ಗ್ರಾಮಾಂತರ
C] ಕೊಡುಗು√
D] ಉಡುಪಿ


1012) 2011ರ ಜನಗಣತಿಯ ಪ್ರಕಾರ ಯಾವ ಎರಡು ಜಿಲ್ಲೆಗಳನ್ನು ಹೊತರುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ?
A] ಕೊಡುಗು ಮತ್ತು ಉಡುಪಿ ಜಿಲ್ಲೆ
B] ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ √
C] ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಉಡುಪಿ ಜಿಲ್ಲೆ
D] ಚಿಕ್ಕಮಗಳೂರು ಮತ್ತು ಕೊಡುಗು


1013) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆ ಪ್ರಮಾಣವೆಷ್ಟು?
A] 70.55 ಲಕ್ಷ
B] 38.70 ಲಕ್ಷ
C] 68.55 ಲಕ್ಷ √
D] 50.15 ಲಕ್ಷ


1014) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ ಗಂಡು ಮಕ್ಕಳ ಪ್ರಮಾಣವೆಷ್ಟು?
A] 35.27 ಲಕ್ಷ √
B] 38.30 ಲಕ್ಷ
C] 40.75 ಲಕ್ಷ
D] 43.12 ಲಕ್ಷ


1015) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಪ್ರಮಾಣವೆಷ್ಟು?
A] 35.27 ಲಕ್ಷ
B] 33.27 ಲಕ್ಷ√
C] 28.53 ಲಕ್ಷ
D] 25.30 ಲಕ್ಷ


1016) 2001-2011ರ ಪ್ರಸಕ್ತ ದಶಕದಲ್ಲಿ ರಾಜ್ಯದ ಒಟ್ಟು 0-6 ಮಕ್ಕಳ ಜನಸಂಖ್ಯೆಯ ಒಟ್ಟು ಬೆಳವಣಿಗೆಯಲ್ಲಿ ಶೇ. ಎಷ್ಟು ಪ್ರತಿಶತ ಕುಸಿತ ಕಂಡಿದೆ?
A] ಶೇ. 4.54ರಷ್ಟು√
B] ಶೇ.8.53ರಷ್ಟು
C] ಶೇ.9.06ರಷ್ಟು
D] ಶೇ.12.20ರಷ್ಟು


1017) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯ ಅತಿ ಹೆಚ್ಚು ಜನಸಂಖ್ಯಾ ಅನುಪಾತ ಹೊಂದಿದ ಜಿಲ್ಲೆ ಯಾವುದು ?
A] ಉಡುಪಿ ಜಿಲ್ಲೆ
B] ಯಾದಗಿರಿ ಜಿಲ್ಲೆ√
C] ಕೊಪ್ಪಳ ಜಿಲ್ಲೆ
D] ಚಿಕ್ಕಮಗಳೂರು ಜಿಲ್ಲೆ


1018) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಜನಸಂಖ್ಯಾ ಅನುಪಾತ ಹೊಂದಿದ ಜಿಲ್ಲೆ ಯಾವುದು ?
A] ಉಡುಪಿ ಜಿಲ್ಲೆ √
B] ಹಾಸನ ಜಿಲ್ಲೆ
C] ಕೊಪ್ಪಳ ಜಿಲ್ಲೆ
D] ರಾಯಚೂರು ಜಿಲ್ಲೆ


1019) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಹೆಚ್ಚು ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಮೊದಲ 3 ಜಿಲ್ಲೆಗಳು ಯಾವವು?
A] ಉಡುಪಿ , ಮಂಡ್ಯ, ದಕ್ಷಿಣ ಕನ್ನಡ
B] ಯಾದಗಿರಿ, ರಾಯಚೂರು, ಕೊಪ್ಪಳ√
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಯಾದಗಿರಿ, ಮಂಡ್ಯ, ಕೊಡಗು


1020) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಕಡಿಮೆ ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಮೊದಲ 3 ಜಿಲ್ಲೆಗಳು ಯಾವವು?
A] ಉಡುಪಿ, ಹಾಸನ, ಚಿಕ್ಕಮಗಳೂರು√
B] ಚಿಕ್ಕಮಗಳೂರು, ರಾಯಚೂರು, ಕೊಪ್ಪಳ
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಉಡುಪಿ, ಮಂಡ್ಯ, ಹಾಸನ


1021) 2011ರ ಜನಗಣತಿ ಪ್ರಕಾರ ರಾಜ್ಯದ ಜನಸಾಂದ್ರತೆಯ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ ಎಷ್ಟಿದೆ?
A] 345
B] 457
C] 319√
D] 276


1022) 2011ರ ಜನಗಣತಿ ಪ್ರಕಾರ ರಾಜ್ಯದಲ್ಲೇ ಅತಿ ಹೆಚ್ಚು ಜನಸಾಂದ್ರತೆಯ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ದಕ್ಷಿಣ ಕನ್ನಡ
D] ಚಿಕ್ಕಮಗಳೂರು


1023) 2011ರ ಜನಗಣತಿ ಪ್ರಕಾರ ರಾಜ್ಯದ ಕಡಿಮೆ ಜನಸಾಂದ್ರತೆಯ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ಉತ್ತರ ಕನ್ನಡ
B] ಕೊಡುಗು√
C] ದಕ್ಷಿಣ ಕನ್ನಡ
D] ಚಿಕ್ಕಮಗಳೂರು


1024) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪುರುಷರ ಪ್ರಮಾಣ ಎಷ್ಟಿದೆ?
A] 3.10ಕೋಟಿ√
B] 3.00ಕೋಟಿ
C] 4.10ಕೋಟಿ
D] 4.50ಕೋಟಿ


1025) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಎಷ್ಟಿದೆ?
A] 3.10ಕೋಟಿ
B] 3.00ಕೋಟಿ√
C] 4.10ಕೋಟಿ
D] 4.50ಕೋಟಿ


1026) 2011ರ ಜನಗಣತಿ ಪ್ರಕಾರ ರಾಜ್ಯದ ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಎಷ್ಟಿದೆ?
A] 951
B] 908
C] 965
D] 968√


1027) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಕಡಿಮೆ ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಉಡುಪಿ
C] ಕೊಡುಗು
D] ಬಿಜಾಪುರ


1028) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಹೊಂದಿದ ಜಿಲ್ಲೆ ಯಾವುದು?
A] ಯಾದಗಿರಿ
B] ಉಡುಪಿ√
C] ದಕ್ಷಿಣ ಕನ್ನಡ
D] ಕೊಡುಗು


1029) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಹೊಂದಿದ ಮೊದಲ ಮೂರು ಜಿಲ್ಲೆಗಳು ಯಾವವು?
A] ಉಡುಪಿ, ಹಾಸನ, ಚಿಕ್ಕಮಗಳೂರು
B] ಚಿಕ್ಕಮಗಳೂರು, ರಾಯಚೂರು, ಕೊಪ್ಪಳ
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಉಡುಪಿ, ಕೊಡುಗು, ದಕ್ಷಿಣ ಕನ್ನಡ√


1030) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಹೆಚ್ಚು ಲಿಂಗಾನುಪಾತ ಹೊಂದಿದ ಮೊದಲ ಮೂರು ಜಿಲ್ಲೆಗಳು ಯಾವವು?
A] ಬೆಂಗಳೂರು, ಹಾವೇರಿ, ಚಿಕ್ಕಮಗಳೂರು
B] ಕೊಡುಗು, ಹಾಸನ, ಚಿಕ್ಕಮಗಳೂರು√
C] ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾವೇರಿ
D] ಬೆಂಗಳೂರು ಗ್ರಾಮಾಂತರ, ಕೊಡುಗು, ದಕ್ಷಿಣ ಕನ್ನಡ


1031) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಕಡಿಮೆ ಲಿಂಗಾನುಪಾತ ಹೊಂದಿದ ಮೊದಲ ಮೂರು ಜಿಲ್ಲೆಗಳು ಯಾವವು?
A] ಬಿಜಾಪುರ, ಬಾಗಲಕೋಟೆ, ಯಾದಗಿರಿ
B] ರಾಯಚೂರು, ದಾವಣಗೆರೆ, ಯಾದಗಿರಿ,
C] ಬೆಂಗಳೂರು ಗ್ರಾಮಾಂತರ, ಹಾವೇರಿ, ಕೊಡಗು.
D] ಬಾಗಲಕೋಟೆ, ಬಿಜಾಪುರ , ದಾವಣಗೆರೆ√


1032) 2011ರ ಜನಗಣತಿ ಪ್ರಾಥಮಿಕ ವರದಿ ಪ್ರಕಾರ ರಾಜ್ಯದ ಒಟ್ಟು ಸಾಕ್ಷರತೆ ಪ್ರಮಾಣ ಎಷ್ಟು?
A] ಶೇ. 66.64
B] ಶೇ.82.85
C] ಶೇ.68.13
D] ಶೇ.75.60√


1033) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಸಾಕ್ಷರತೆಯಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಎಷ್ಟು?
A] ಶೇ. 66.64
B] ಶೇ.82.85√
C] ಶೇ.68.13
D] ಶೇ.75.60


1034) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಸಾಕ್ಷರತೆಯಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಎಷ್ಟು?
A] ಶೇ. 66.64
B] ಶೇ.82.85
C] ಶೇ.68.13√
D] ಶೇ.75.60


1035) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು
B] ದಕ್ಷಿಣ ಕನ್ನಡ √
C] ಹಾಸನ
D] ಮೈಸೂರು


1036) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಕಡಿಮೆ ಸಾಕ್ಷರತೆ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ವಿಜಾಪುರ
B] ರಾಯಚೂರು
C] ಹಾಸನ
D] ಯಾದಗಿರಿ√
.......••••…………••••……

Monday, 11 January 2016

■.ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : — ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಯಲ್ಲಿ ತಂದ, ಮಹಾತ್ಮಾ ಗಾಂಧಿಜಿಯವರ ಕನಸಿನ ಕೂಸಾದ 'ಸ್ವಚ್ಛ ಭಾರತ ಮಿಷನ್' ಯೋಜನೆಯ ಇಲ್ಲಿಯವರೆಗಿನ ಕಾರ್ಯ ನಿರ್ವಹಣೆಯ (ಕಾರ್ಯಚರಣೆ) ಕುರಿತು ವಿಮರ್ಶಾತ್ಮಕವಾಗಿ ವಿವರಿಸಿ. (200 ಶಬ್ದಗಳಲ್ಲಿ) (Critically comment on the performance of the Swachh Bharat Mission (SBM).)

■.ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : 
— ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಯಲ್ಲಿ ತಂದ, ಮಹಾತ್ಮಾ ಗಾಂಧಿಜಿಯವರ ಕನಸಿನ ಕೂಸಾದ 'ಸ್ವಚ್ಛ ಭಾರತ ಮಿಷನ್' ಯೋಜನೆಯ ಇಲ್ಲಿಯವರೆಗಿನ ಕಾರ್ಯ ನಿರ್ವಹಣೆಯ (ಕಾರ್ಯಚರಣೆ) ಕುರಿತು ವಿಮರ್ಶಾತ್ಮಕವಾಗಿ ವಿವರಿಸಿ.  (200 ಶಬ್ದಗಳಲ್ಲಿ) 
(Critically comment on the performance of the Swachh Bharat Mission (SBM).)
━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ಸಾಮಾನ್ಯ ಅಧ್ಯಯನ -ಪತ್ರಿಕೆ II
(General Studies Paper II)


●.ಬರೆಯುವ ಮುನ್ನ :
━━━━━━━━━━━━

━━►️ ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಪರೀಕ್ಷೆ-ಮೇನ್ಸ್ ಎಕ್ಸಾಂ ಗೆ ನೇರವಾಗಿ ಸಹಾಯವಾಗುವ ರೀತಿಯಲ್ಲಿ ಪ್ರತಿದಿನ  GS-1, GS-2, GS-3, GS-4 ಪರೀಕ್ಷೆಗೆ ಸಂಬಂಧಪಟ್ಟಂತೆ ಇಲ್ಲಿ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡುವ  ಉದ್ದೇಶದಿಂದ "ಸ್ಪರ್ಧಾಲೋಕ"ದಲ್ಲಿ ಮಾಡುತ್ತಿರುವ ಒಂದು ಚಿಕ್ಕ ಪ್ರಯತ್ನ ಮೊದಲಿನಿಂದಲೂ ಜಾರಿಯಲ್ಲಿದೆ. 

━━►️ ️ಪ್ರಶ್ನೋತ್ತರಗಳನ್ನು ಶಬ್ದಗಳ ಮಿತಿಯಲ್ಲಿ ಬರೆಯುವುದರಿಂದ (150, 200, 250 ಶಬ್ಧಗಳ ಮಿತಿಯಲ್ಲಿ) ಇದು ಮೇನ್ಸ್ ಪರೀಕ್ಷೆ ತಯಾರಿ ನಡೆಸಿರುವ ಸ್ಪರ್ಧಾರ್ಥಿಗಳಿಗೆ  ಖಂಡಿತ ಸಹಾಯ ಆಗೇ ಆಗುತ್ತೆ. ಎಷ್ಟೋ  ಸ್ಪರ್ಧಾರ್ಥಿಗಳಿಗೆ ಶಬ್ದಗಳ ಮಿತಿಯಲ್ಲಿ ಉತ್ತರಗಳನ್ನು ಬರೆಯುವುದು ತುಂಬಾ ಕಷ್ಟದಾಯಕ ಆಗಿರುವುದು ಸರ್ವೇ ಸಾಮಾನ್ಯ.

━━►️ ಇದು ಕನ್ನಡದಲ್ಲಿ ಮೇನ್ಸ್ ಪರೀಕ್ಷೆ ತಯಾರಿ ನಡೆಸಿರುವ  ಆಗ್ತಿರೋ IAS/KAS ಆಕಾಂಕ್ಷಿಗಳಿಗೆ ಗಳಿಗೆ ತುಂಬಾನೇ ಸಹಾಯ ಆಗುತ್ತೇ ಅಂತಾ ನನ್ನ ಅಭಿಪ್ರಾಯ. ಇದು ನಮ್ಮ ಕನ್ನಡ ಭಾಷೆಯ ಪ್ರಬುದ್ಧತೆಗೂ ಸಹಕಾರಿ.

━━►️ ಇದು ನನ್ನ ಜ್ಞಾನದ ಮಿತಿಯಲ್ಲಿ ಪ್ರಶ್ನೋತ್ತರಗಳನ್ನು ತಯಾರಿಸಿದ್ದು, ದಯವಿಟ್ಟು ಸ್ಪರ್ಧಾರ್ಥಿಗಳು ಸಹಕರಿಸಬೇಕಾಗಿ ವಿನಂತಿ.
••┈┈┈┈┈┈┈••••┈┈┈┈┈┈┈••••┈┈┈┈┈┈┈••••┈┈┈┈┈┈┈••••┈┈┈┈┈┈┈••••┈┈┈┈┈┈┈••





— ಸ್ವಚ್ಛ ಭಾರತ ಅಭಿಯಾನವು ರಾಷ್ಟ್ರೀಯ ಆಂದೋಲನವಾಗಿದ್ದು, 2019ರಲ್ಲಿ ಗಾಂಧಿಯವರ 150 ನೇ ಹುಟ್ಟುಹಬ್ಬದ ಒಳಗೆ ಗ್ರಾಮೀಣ ಭಾರತದ ಎಲ್ಲ ನಾಗರಿಕರಿಗೆ ಶೌಚಾಲಯ ಸೌಲಭ್ಯ ಕಲ್ಪಿಸುವುದು ಮತ್ತು  ಬಯಲು ಶೌಚ ರಹಿತ ಗ್ರಾಮ- ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.

●.ಸಾಧನೆಗಳು: 
••┈┈┈┈┈┈┈••
1. ಅಭಿಯಾನವು "ಬಯಲು ಮುಕ್ತ ಶೌಚಾ­ಲಯ" ವೆಂಬ ಸಂಗತಿಯೊಂದಿಗೆ ಭಾರೀ ಕಾರ್ಯಾಚರಣೆಯನ್ನು ಕೈಗೊಂಡಿತು. ಇದು ಜನ ಸಾಮಾನ್ಯನಿಗಾಗಿ ಜಾರಿಗೊಂಡ ಮೊದಲ ನಿದರ್ಶನವಾಗಿದೆ. ಇದಕ್ಕೆ ಸ್ಪೂರ್ತಿ ಎಂಬಂತೆ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ಛತ್ತೀಸಗಢ, ಆಂಧ್ರಪ್ರದೇಶ, ರಾಜಸ್ಥಾನ್, ಹರಿಯಾಣಾ ರಾಜ್ಯಗಳಲ್ಲಿ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ.
 2. ಇದುವರೆಗೆ ಸುಮಾರು 80 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ 
3. ರೈಲ್ವೆ ಸಚಿವಾಲಯವು ಇದರ ಅಂಗವಾಗಿ ರೈಲು ಕೋಚ್ ಗಳಲ್ಲಿ  ಜೈವಿಕ ಶೌಚಾಲಯಗಳನ್ನು ನಿರ್ಮಿಸಿದೆ ಮತ್ತು ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿದೆ 
4. ಖಾಸಗಿ ವಲಯ ಮತ್ತು ಅನೇಕ ಸಾಮಾಜಿಕ ಸೇವಾ ಸಂಘಟನೆಗಳು ನೋಡಲ್ ಸಂಸ್ಥೆಗಳೊಂದಿಗೆ ಪೂರ್ಣ ಆವೇಗ ಕೆಲಸದಲ್ಲಿ ಕೈಜೋಡಿಸಿವೆ. 

●.ನ್ಯೂನತೆಗಳು: 
••┈┈┈┈┈┈┈┈••
1. ಇದು ಆರಂಭಗೊಂಡು ಒಂದು ವರ್ಷವಾದರೂ, ದೇಶದ ಶೇ.72ರಷ್ಟು ನಗರಗಳು ಇನ್ನೂ ಸ್ವಚ್ಛವಾಗಿಲ್ಲ. ಇನ್ನೂ ಹಳ್ಳಿಗಾಡಿನಲ್ಲಿ ಶೇ.67ರಷ್ಟು, ನಗರ ಪ್ರದೇಶದಲ್ಲಿ ಶೇ.13ರಷ್ಟು ಬಯಲೇ ಶೌಚಾಲಯವಾಗಿದೆ.
2. ತಮ್ಮ ಕ್ಷೇತ್ರಗಳಲ್ಲಿ ಸ್ವತಃ ಭಾಗಿಯಾಗುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಮುಂದಾಗಿದ್ದ ನೇತಾರರೆಲ್ಲರೂ ಕಾಲ ಗತಿಸಿದಂತೆ ಇದನ್ನು  ನಿರ್ಲಕ್ಷಿಸಿದ್ದಾರೆ. 
3. ಇದು ನಗರಗಳ ಮೇಲೆ ಸೀಮಿತ ಪರಿಣಾಮ ಹೊಂದಿದೆ. ಇನ್ನೂ ಬೀದಿಗಳಲ್ಲಿ ಮತ್ತು ರಸ್ತೆಗಳಲ್ಲಿ ಕಸ, ತ್ಯಾಜ್ಯ ಕೊಳಕು ಹಬ್ಬಿಕೊಂಡಿರುವುದು. 
4. ಸ್ವಚ್ಛ ಭಾರತ ಅಭಿಯಾನದ ವೇಗದ ಗತಿ 2019ರ ಗುರಿಗೆ ತಕ್ಕಂತೆ ಪೂರಕವಾಗಿಲ್ಲ. ಗುರಿಯಂತೆ ದಿನಕ್ಕೆ 185 ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಆದರೆ ಪ್ರಸ್ತುತ ದಿನವೊಂದಕ್ಕೆ 8 ಮಾತ್ರ ನಿರ್ಮಾಣಗೊಳ್ಳುತ್ತಿವೆ. ಇದೇ ವೇಗದಲ್ಲಿ ಸಾಗಿದರೆ ಗುರಿ 2085ಕ್ಕೆ ಸಾಧಿಸಬಹುದು. 
5. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 'ಸ್ವಚ್ಛ ಭಾರತ್ ಸೆಸ್' ತೆರಿಗೆಯು ಟೆಲಿಕಾಂ ಸೇವೆಗಳು, ಇಂಧನ ಮತ್ತು ಖನಿಜಗಳ ಮೇಲೆ ವಿಧಿಸುತ್ತಿರುವುದು ಸರಿಯಲ್ಲ. .
➡ ನಮ್ಮ ದೇಶದ ಹೆಚ್ಚಿನ ನಾಗರಿಕರಲ್ಲಿ ಅನಕ್ಷರತೆ ಮನೆಮಾಡಿದ್ದು ಸ್ವಚ್ಛ ಭಾರತ ಕಲ್ಪನೆ­ಯ ಬಗ್ಗೆ ತಿಳಿ­ವಳಿಕೆಯ ಕೊರತೆ ಹಾಗೂ ಸಾರ್ವಜನಿ­ಕರ ಸಕ್ರಿಯ ಭಾಗವಹಿ­ಸುವಿಕೆ ಇಲ್ಲದಿರುವುದು ಅಭಿಯಾನ ಹಿಂದುಳಿಯಲು ಕಾರ­ಣ­ವಾಗಿದೆ.



●.Extra Tips :
••┈┈┈┈┈┈┈┈••
•► ಇದಕ್ಕಾಗಿ  ₨ 2 ಲಕ್ಷ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.
ಅಭಿಯಾನವು ಉತ್ತರಪ್ರದೇಶ ಹಾಗೂ ಬಿಹಾರದಂಥ ದೊಡ್ಡ ರಾಜ್ಯಗಳಲ್ಲಿ ಪಡೆದುಕೊಳ್ಳಬೇಕಾದಷ್ಟು ವೇಗವನ್ನು ಇನ್ನೂ ಪಡೆದುಕೊಂಡಿಲ್ಲ. ಈ ಅಭಿಯಾನದ ಅಡಿಯಲ್ಲಿ ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನು ಶೌಚಾಲಯ ನಿರ್ಮಾಣ ಆರಂಭವಾಗಿಲ್ಲ.

•► ಇದುವರೆಗೆ ಸುಮಾರು 80 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ, ಗ್ರಾಮೀಣ ಮಿಷನ್ ನ ನೂಡಲ್ ಸಂಸ್ಥೆಗಳು ಹೇಳಿಕೊಂಡಿವೆ.

•► ಗ್ರಾಮೀಣ ಮಟ್ಟದಲ್ಲಂತೂ ಆಮೆ ವೇಗದ ಪ್ರಗತಿ.

•► ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಈ ಅಭಿಯಾನಕ್ಕಾಗಿ ಪ್ರತ್ಯೇಕ ಹಣಕಾಸಿನ ನೆರವು, ನಿರಂತರ ನಿಗಾ ವಹಿಸುವಿಕೆ, ತ್ಯಾಜ್ಯ ಸಂಗ್ರ­ಹಣೆ ಮತ್ತು ನಿರ್ವ­ಹಣೆಯ ಕುರಿ­ತಂತೆ ಜಾಗೃತಿ, ಪರಿಣಾ­ಮಕಾರಿ ಕಾನೂ­­ನಿನ ಅನು­ಷ್ಠಾನ, ಕಾನೂನು ಉಲ್ಲಂಘಿ­ಸುವವರಿಗೆ ಶಿಕ್ಷೆ, ಶಾಲೆ ಕಾಲೇಜು­ಗಳ ವಿದ್ಯಾ­ರ್ಥಿ­­ಗಳನ್ನು, ಸಮುದಾಯಗಳನ್ನು ಈ ಅಭಿಯಾನ­ದಲ್ಲಿ ಬಳಸಿ­­ಕೊಳ್ಳುವುದು. ಈ ಗುರಿ ತಲುಪುವಲ್ಲಿ ನಿರ್ವಹಿಸಬೇಕಾದ ಅಂಶಗಳು. 

•► ಕಸವನ್ನು ಮೂಲ­ದಲ್ಲೇ ಬೇರ್ಪಡಿಸಿ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಪ್ರತಿ­ಯೊಬ್ಬ ನಾಗರಿಕರೂ ನಿರ್ವಹಿಸದ ಹೊರತು ಸ್ವಚ್ಛ ಭಾರತ ಅಭಿಯಾನ ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ದೊಡ್ಡದೊಂದು ಆಂದೋಲನವೇ ಆಗ­ಬೇಕು. ಇದು ಸುದೀರ್ಘವಾದ ಪಯಣ ಹಾಗೂ ನಿರಂತರವಾದುದು.

Sunday, 10 January 2016

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀ಭಾರತದಂತಹ ಮುಂದುವರೆಯುತ್ತಿರುವ ದೇಶಗಳ ಮೇಲೆ ಜಾಗತಿಕ ಹವಾಮಾನ ವೈಪರೀತ್ಯ (ಗ್ಲೋಬಲ್ ವಾರ್ಮಿಂಗ್) ದಿಂದ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿ. (250 ಶಬ್ದಗಳಲ್ಲಿ) (Discuss the effects of the Global Climate Change (Global Warming) on developing countries like India.(in 250 words))

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
☀ಭಾರತದಂತಹ ಮುಂದುವರೆಯುತ್ತಿರುವ ದೇಶಗಳ ಮೇಲೆ ಜಾಗತಿಕ ಹವಾಮಾನ ವೈಪರೀತ್ಯ (ಗ್ಲೋಬಲ್ ವಾರ್ಮಿಂಗ್) ದಿಂದ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿ.
(250 ಶಬ್ದಗಳಲ್ಲಿ) 
 (Discuss the effects of the Global Climate Change (Global Warming) on developing countries like India.(in 250 words))
━━━━━━━━━━━━━━━━━━━━━━━━━━━━━━━━━━━━━━━━

★ ಪ್ರಾಕೃತಿಕ ಮತ್ತು ಭೌಗೋಳಿಕ ಅಧ್ಯಯನ 
(Environmental Geophysical Studies)

★ಸಾಮಾನ್ಯ ಅಧ್ಯಯನ -ಪತ್ರಿಕೆ III
(General Studies Paper III)


•► ಹವಾಮಾನ ವೈಪರೀತ್ಯ ಇಂದು ಜಾಗತಿಕ ಸಮಸ್ಯೆಯಾಗಿದ್ದು, ಇವತ್ತು ಜಗತ್ತಿನೆಲ್ಲೆಡೆ ಚರ್ಚೆಗೊಳಪಡುತ್ತಿದೆ. ಹವಾಮಾನ ಮಾಪಕಗಳಾದ ಉಷ್ಣತೆ, ಮಳೆ, ಗಾಳಿ ಮತ್ತು ಆದ್ರತೆಗಳಲ್ಲುಂಟಾಗುವ ದೀರ್ಘ‌ಕಾಲೀನ ಬದಲಾವಣೆಯೇ ಹವಾಮಾನ ಬದಲಾವಣೆ. 

•► ಈ ಸಮಸ್ಯೆಗೆ ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳೆಲ್ಲವೂ ಕಾರಣಕರ್ತರು. ಆದರೆ ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳನ್ನು ಹೊಂದಿದ ಮುಂದುವರಿಯುತ್ತಿರುವ ದೇಶಗಳ ಮೇಲೆ ಅತ್ಯಂತ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತಿರುವುದು. 


●. ಕಾರಣಗಳು :
••┈┈┈┈┈┈┈┈••
•► ಈ ಬಗೆಯ ಹವಾಗುಣ ಬದಲಾವಣೆಯು ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಉಂಟಾಗುತ್ತಿದೆ; ಇದಕ್ಕೆ ಮನುಷ್ಯರ ಚಟುವಟಿಕೆಗಳಿಂದ ಉಂಟಾಗುವ ಹಸಿರುಮನೆ ಪರಿಣಾಮವು ಮುಖ್ಯ ಕಾರಣವಾಗಿದೆ. 
•► ಹವಾಗುಣ ಬದಲಾವಣೆಗೆ ಹೆಚ್ಚುತ್ತಿರುವ ಜಲ ಹಾಗೂ ವಾಯು ಮಾಲಿನ್ಯ, ಅತಿಯಾದ ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ಮಿತಿಮೀರಿದ ಕೈಗಾರೀಕರಣ, ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆ ಮುಂತಾದವು ಕೂಡಾ ಮುಂದುವರೆಯುತ್ತಿರುವ ದೇಶಗಳ ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಹೆಚ್ಚಾಗಿರುವುದಕ್ಕೆ ಕಾರಣ.


●. ಪರಿಣಾಮಗಳು :
••┈┈┈┈┈┈┈┈┈••
•► ಜಾಗತಿಕ ತಾಪಮಾನದ ಈ ಏರಿಕೆಯಿಂದಾಗಿ ಭಾರತ ಸೇರಿದಂತೆ ಮುಂದುವರೆಯುತ್ತಿರುವ ಹಲವು ರಾಷ್ಟ್ರಗಳಲ್ಲಿ ಆಹಾರ ಉತ್ಪಾದನೆಯ ಕೊರತೆ, ಅಪೌಷ್ಠಿಕತೆ, ಒಣ ಭೂಮಿಯ ಹೆಚ್ಚಳ, ಉಷ್ಣಾಂಶದಲ್ಲಿ ಹೆಚ್ಚಳ, ಚಂಡಮಾರುತ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳಿಗೆ ಎಡೆ ಮಾಡಿಕೊಡಲಿದೆ.

•► ಮಳೆಬೀಳುವ ಪ್ರಮಾಣದಲ್ಲಿ ಆಗುವ ಬದಲಾವಣೆಗಳು ಕೃಷಿ ಹಾಗೂ ಜಲಮೂಲಗಳ ಮೇಲೆ ಪರಿಣಾಮ ಬೀರುತ್ತವೆ. ವಿಶೇಷವಾಗಿ ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳ ದೇಶಗಳ ಮೇಲೆ ಅತ್ಯಂತ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ.

•► ದೇಶದ ಅಭಿವೃದ್ಧಿಯಲ್ಲಿ ಕೃಷಿ ಗಣನೀಯ ಕಾಣಿಕೆ ನೀಡುವ ಈ ದೇಶಗಳಲ್ಲಿ ಕೃಷಿಯೆಂಬುದು ಪರಿಸರದ ಮೇಲೆ ಅವಲಂಬಿತವಾದ ಕಸುಬು. ಹವಾಮಾನ ಬದಲಾವಣೆಯ ಬಿಸಿ ಮೊದಲು ತಟ್ಟುವುದು ಕೃಷಿಕರಿಗೆ. ಕೃಷಿ ಬಡಕಲಾದರೆ ಕೃಷಿಕರು ನಿರ್ಗತಿಕರಾಗುತ್ತಾರೆ. ನೈಸರ್ಗಿಕ ಅಸಮತೋಲನದಿಂದಾಗಿ ಆರ್ಥಿಕತೆಯಲ್ಲಿ ಏರುಪೇರು ಆಗುವುದು.

•► ಸಣ್ಣ ಕೃಷಿಕರಂತೂ ಮೂಲೆಗುಂಪಾಗುವುದು ಖಂಡಿತ. ತತ್ಪರಿಣಾಮ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ನಿರುದ್ಯೋಗದ ಸೃಷ್ಟಿಯಾಗುತ್ತದೆ. ಆತಂಕಗಳು ನೂರಾರು.

•► ಬಿತ್ತನೆ ಮತ್ತು ಇಳುವರಿ ಕಾಲಾವಧಿಯಲ್ಲೂ ಏರುಪೇರು ಉಂಟಾಗುತ್ತಿದೆ. ಸುಡು ಬಿಸಿಲು; ಅಕಾಲಿಕ/ವಿಪರೀತ ಮಳೆ; ಬೆಳೆನಷ್ಟ; ಸಾಂಕ್ರಾಮಿಕ ರೋಗಗಳಲ್ಲಿ ಹೆಚ್ಚಳ; ಪಕ್ಷಿ-ಜಾನುವಾರುಗಳ ಆರೋಗ್ಯ, ಸಂತಾನೋತ್ಪತ್ತಿ ಮತ್ತು ರೋಗನಿರೋಧಕ ಶಕ್ತಿಯಲ್ಲಿ ಇಳಿಕೆ ಕಂಡುಬಂರುವುದು.


●. ಉಪಸಂಹಾರ :
••┈┈┈┈┈┈┈┈┈┈••
•► ಹವಾಮಾನ ಬದಲಾವಣೆಯ ಅನಾಹುತಕ್ಕೆ ಮಾನವನೇ ಕಾರಣನಾದ್ದರಿಂದ ಸಮಸ್ಯೆಯ ಪರಿಹಾರವೂ ನಮ್ಮ ಕೈಯಲ್ಲೆ ಇದೆ. 
•► ವಾತಾವರಣವನ್ನು ಕಲುಷಿತಗೊಳಿಸುವ ವಸ್ತುಗಳ ಉತ್ಪಾದನೆಯನ್ನು ನಿಯಂತ್ರಿಸಬೇಕಾಗಿದೆ. 
•► ಜಲ ಮತ್ತು ಅರಣ್ಯ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಮರುಸಂಸ್ಕರಣ ಪದ್ಧತಿ, ಮತ್ತು ಪರಿಸರ ಸಂರಕ್ಷಣೆಯ ಕಾಳಜಿ ನಮ್ಮದಾಗಬೇಕು.

•► "ನಾವು ಪರಿಸರವನ್ನು ಬಳಸಿಕೊಳ್ಳುವ ಗ್ರಾಹಕರಾಗಬಾರದು. ಪರಿಸರವನ್ನು ಸಂರಕ್ಷಿಸುವ ಪ್ರತಿಪಾದಕರಾಗಬೇಕು"

Friday, 8 January 2016

☀ಪ್ರಮುಖ ಕಿರ್ತನಕಾರರ ಅಂಕಿತನಾಮಗಳು (Famous Psalmist in India)

☀ಪ್ರಮುಖ ಕಿರ್ತನಕಾರರ ಅಂಕಿತನಾಮಗಳು:
(Famous Psalmist in India)
━━━━━━━━━━━━━━━━━━━━━━━━━━━━━
★ ಭಾರತೀಯ ಸಂಸ್ಕೃತಿ
(Indian Traditions)

★ ಭಾರತೀಯ ಸಮಾಜೋಧಾರ್ಮಿಕ ಸಂಸ್ಕೃತಿ
(Indian Socio-Religious Tradition)


★ಕೀರ್ತನಕಾರರು              ★ ಅಂಕಿತನಾಮಗಳು
●. ನರಹರಿ ತೀರ್ಥರು ━━━━━━━━► ಶ್ರೀರಘುಪತಿ

●. ಶ್ರೀಪಾದರಾಯರು ━━━━━━━━► ರಂಗ ವಿಠಲ

●. ವ್ಯಾಸರಾಯರು ━━━━━━━━► ಶ್ರೀ ಕೃಷ್ಣ

●. ವಾದಿರಾಜ ━━━━━━━━► ಹಯವದನ

●. ಪುರಂದರದಾಸರು ━━━━━━━━► ಪುರಂದರವಿಠಲ

●. ಕನಕದಾಸರು ━━━━━━━━► ಕಾಗೀನೆಲೆ ಆದಿಕೇಶವ

●. ವೈಕುಂಠದಾಸ━━━━━━━━► ವೈಕುಂಠಕೇಶವ

●. ರಾಘವೇಂದ್ರ ತೀರ್ಥ ━━━━━━━━► ವೇಣುಗೋಪಾಲ

●. ಪ್ರಸನ್ನ ವೆಂಕಟದಾಸ ━━━━━━━━► ಪ್ರಸನ್ನ ವೆಂಕಟಕೃಷ್ಣ

●. ವಿಜಯದಾಸರು ━━━━━━━━► ಹಯವದನ ವಿಠಲ

●. ಗೋಪಾಲದಾಸರು ━━━━━━━━► ಗೋಪಾಲ ವಿಠಲ

●. ಜಗನ್ನಾಥ ದಾಸರು ━━━━━━━━► ಜಗನ್ನಾಥ ವಿಠಲ

Sunday, 3 January 2016

☀ಭೌಗೋಳಿಕ ಸಮಾನ ಬಿಂದು ರೇಖೆಗಳು ಅಥವಾ ಭೌಗೋಳಿಕವಾಗಿ ಸಂಪರ್ಕಿಸುವ ಸಮಾನ ಬಿಂದುಗಳ ಮೂಲಕ ಸಾಗುವ ಕಾಲ್ಪನಿಕ ರೇಖೆಗಳು : (The geographically connecting equivalent atmospheric point lines / The geographic equivalent point lines)

☀ಭೌಗೋಳಿಕ ಸಮಾನ ಬಿಂದು ರೇಖೆಗಳು ಅಥವಾ ಭೌಗೋಳಿಕವಾಗಿ ಸಂಪರ್ಕಿಸುವ ಸಮಾನ ಬಿಂದುಗಳ ಮೂಲಕ ಸಾಗುವ ಕಾಲ್ಪನಿಕ ರೇಖೆಗಳು :
(The geographically connecting equivalent atmospheric point lines / The geographic equivalent point lines)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

●.ಪ್ರಾಕೃತಿಕ ಭೂಗೋಳಶಾಸ್ತ್ರ
(Physical Geography)

●.ಸಾಮಾನ್ಯ ಭೂಗೋಳಶಾಸ್ತ್ರ
(General Geography)


■.ಐಸೋಬಾತ್️ ━━━━━━━► ️ಸಮಾನ ಪ್ರಮಾಣದ ಸಮುದ್ರ ಆಳದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋಥರ್ಮ ━━━━━━━► ️️ಸಮಾನ ಪ್ರಮಾಣದ ಉಷ್ಣತೆಯ ಬಿಂದುಗಳನ್ನು ಸೇರಿಸುವ ರೇಖೆ


■.ಐಸೊಕೇಮ್ ━━━━━━━►  ಸಮಾನ ಪ್ರಮಾಣದ ಚಳಿಗಾಲದ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೊನೆಫ್️ ━━━━━━━► ಸಮಾನ ಪ್ರಮಾಣದ ಮೋಡಗಳ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋಐಪ್️ ━━━━━━━► ️ಸಮಾನ ಪ್ರಮಾಣದ ಸಮುದ್ರ ಮಟ್ಟದಿಂದ ಎತ್ತರದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋಗೋನಿಕ್️ ━━━━━━━► ️ಕಾಂತೀಯ ಕೋನವು ಸಮಾನವಾಗಿರುವ ಸ್ಥಳಗಳ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋಹೆಲನ್ ━━━━━━━► ️ಸಮಾನ ಪ್ರಮಾಣದ ಸಮುದ್ರ ಲವಣಾಂಶದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೊಬ್ರಾಂಡ್ಸ್ ━━━━━━━► ️ಗುಡುಗು ಸಿಡಿಲು ಸಮೇತ ಮಳೆಯಾಗುವ ಪ್ರದೇಶದ ಬಿಂದುಗಳನ್ನು ಸೇರಿಸುವ ರೇಖೆ.


■.ಐಸೋ ಹೆಲ್ ━━━━━━━► ️ಸಮಾನ ಪ್ರಮಾಣದ ಸೌರ ಪ್ರಕಾಶ / ️ಬಿಸಿಲಿನ ಅವಧಿಯ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋಬಾರ್ ━━━━━━━► ಸಮಾನ ಪ್ರಮಾಣದ ವಾತಾವರಣದ ಒತ್ತಡದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋದೇರ್ ━━━━━━━► ಸಮಾನ ಪ್ರಮಾಣದ ️ಬೇಸಿಗೆಯ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋಟ್ಯಾಚ್️ ━━━━━━━► ️ಸಮಾನ ಪ್ರಮಾಣದ ಗಾಳಿ / ಮಾರುತಗಳ ವೇಗದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೊಹೈಟ್️ ━━━━━━━► ಸಮಾನ ಪ್ರಮಾಣದ ಮಳೆಯ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೋ ನಿಫ್ ━━━━━━━► ️ಸಮಾನ ಪ್ರಮಾಣದ ಹಿಮದ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ


■.ಐಸೊಸಿಸ್ಮಲ್ ━━━━━━━► ️️ಭೂಕಂಪನ ತೀವ್ರತೆಯ ಬಿಂದುಗಳನ್ನು ಸೇರಿಸುವ ರೇಖೆ.


■.ಐಸೋರೈಮ್️ ━━━━━━━► ️ಸಮಾನ ಪ್ರಮಾಣದ ಹಿಮಗಡ್ಡೆಯ ಪ್ರಮಾಣ/ಮಂಜು  ಬಿಂದುಗಳನ್ನು ಸೇರಿಸುವ ರೇಖೆ

Saturday, 2 January 2016

☀(ಭಾಗ -27) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-27)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ -27) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-27))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.


976) ಇತ್ತೀಚೆಗೆ ಚೀನಾ ದೇಶದ ಅಧಿಕೃತ ಕರೆನ್ಸಿಯಾದ 'ಯೆನ್ ಕರೆನ್ಸಿ'ಯನ್ನು ತನ್ನ ದೇಶದಲ್ಲಿ ಅಳವಡಿಸಿಕೊಳ್ಳಲಿರುವ ರಾಷ್ಟ್ರ ಯಾವುದು?
••►  ಜಿಂಬಾಬ್ವೆ (2015ರ ಡಿಸೆಂಬರ್ 21)


977) ಇತ್ತೀಚೆಗೆ '2015ರ ಐಸಿಸಿ ವರ್ಷದ ಕ್ರಿಕೆಟಿಗ' ಪ್ರಶಸ್ತಿಯ ಜೊತೆಗೆ ‘ವರ್ಷದ ಶ್ರೇಷ್ಠ ಟೆಸ್ಟ್ ಆಟಗಾರ’ ಪ್ರಶಸ್ತಿಯನ್ನೂ ಕೂಡ ಪಡೆದ ಕ್ರಿಕೆಟಿಗ ಯಾರು?
••► ಸ್ಟೀವನ್ ಸ್ಮಿತ್(ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ)
(ಈ ಮೂಲಕ ಒಂದೇ ಸಾಲಿನಲ್ಲಿ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗಳೆರಡನ್ನೂ ಪಡೆದ ವಿಶ್ವದ 7ನೇ ಆಟಗಾರನೆಂಬ ಹಿರಿಮೆಯನ್ನು ಸ್ಮಿತ್ ಪಡೆದಿದ್ದಾರೆ.)


978) ಭಾರತದಲ್ಲಿ 'ರಾಷ್ಟ್ರೀಯ ಗ್ರಾಹಕರ ದಿನ'ವಾಗಿ ಯಾವ ದಿನದಂದು ಆಚರಿಸಲಾಗುತ್ತದೆ?
••► ಡಿಸೆಂಬರ್ 24.


979) ಜಾಗತಿಕ ಮಟ್ಟದಲ್ಲಿ 'ವಿಶ್ವ ಗ್ರಾಹಕರ ದಿನ'ವನ್ನಾಗಿ ಯಾವ ದಿನದಂದು ಆಚರಿಸಲಾಗುತ್ತದೆ?
••► ಮಾರ್ಚ್ 15.


980) ಇತ್ತೀಚೆಗೆ ಘೋಷಿಸಲಾದ '2015ರ ಬಿಬಿಸಿ (ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್‍) ವರ್ಷದ ಕ್ರೀಡಾಪಟು' ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾ ಪಟು ಯಾರು?
••► ಬ್ರಿಟನ್‍ನ ಆಂಡಿ ಮರ್ರೆ. (2015ರ ಡಿಸೆಂಬರ್ 20)


981) ವಿಶ್ವಖ್ಯಾತ ಐರ್ಲೆಂಡಿನ 'ಬರ್ರೆ ಮೆಕ್‍ಗ್ಯುಗನ್' ಕ್ರೀಡಾಪಟು ಯಾವ ಆಟದ ದಂತಕಥೆ ಎಂದು ಪ್ರಸಿದ್ಧವಾಗಿರುವನು?
••► ಬಾಕ್ಸಿಂಗ್.


982) ಇತ್ತೀಚೆಗೆ ಘೋಷಿಸಲಾದ '2015ರ ಬಿಬಿಸಿ (ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್‍) ವರ್ಷದ ಕ್ರೀಡಾಪಟು' ಪ್ರಶಸ್ತಿಗೆ ಆಯ್ಕೆಯಾದ 'ಆಂಡಿ ಮರ್ರೆ'ಯು ಯಾವ ಆಟದ ಪ್ರಸಿದ್ಧ ಕ್ರೀಡಾ ಪಟು?
••► ಟೆನಿಸ್ (ಸ್ಕಾಟ್ಲೆಂಡ್)


983) ಯಾರ ಹುಟ್ಟುಹಬ್ಬದ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ?
••► ಖ್ಯಾತ ಗಣಿತಶಾಶ್ತ್ರಜ್ಞ ಡಾ..ಶ್ರೀನಿವಾಸ ರಾಮಾನುಜಂ.


984) ದೇಶಾದ್ಯಂತ 'ರಾಷ್ಟ್ರೀಯ ಗಣಿತ ದಿನ'ವಾಗಿ ಯಾವ ದಿನದಂದು ಆಚರಿಸಲಾಗುತ್ತದೆ?
••► ಡಿಸೆಂಬರ್ 22.


985) ಸೂರ್ಯನ ಸೌರಮಂಡಲದ ಸಾಂದ್ರವಾದ ವಿಸ್ಮಯಕಾರಿ ಕಪ್ಪು ವಸ್ತುವಿನ ಮೇಲೆ ಬೆಳಕು ಚೆಲ್ಲುವ ಮಹದುದ್ದೇಶದಿಂದ ಇತ್ತೀಚೆಗೆ ಡ್ಯಾಂಪಲ್ ಉಪಗ್ರಹ ಉಡಾವಣೆ ಮಾಡಿದ ದೇಶ ಯಾವುದು?
••► ಚೀನಾ .
(ಇದು ದೇಶದ ಪ್ರಪ್ರಥಮ ಬಾಹ್ಯಾಕಾಶ ದೂರದರ್ಶಕವಾಗಿದ್ದು, ಲಾಂಗ್‍ಮಾರ್ಚ್ 2-ಡಿ ರಾಕೆಟ್ ಮೂಲಕ ಜ್ಯೂಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ 2015ರ ಡಿಸೆಂಬರ್ 17ರಂದು  ಇದನ್ನು ಹಾರಿಬಿಡಲಾಯಿತು. ಈ ಉಪಗ್ರಹಕ್ಕೆ ವೂಕಾಂಗ್ ಎಂದು ಹೆಸರಿಸಲಾಗಿದೆ.)


986) ಇತ್ತೀಚೆಗೆ ಭಾರತ ಸರ್ಕಾರವು 'ಸಲ್ಮಾ ಅಣೆಕಟ್ಟ'ನ್ನು ಪುನರ್ ನಿರ್ಮಾಣ ಮಾಡುವ ಮತ್ತು ಪೂರ್ಣಗೊಳಿಸುವ ಮಹತ್ವದ ಯೋಜನೆಯನ್ನು ಕೈಗೊಂಡಿದ್ದು, ಹಾಗಾದರೆ ಈ 'ಸಲ್ಮಾ ಅಣೆಕಟ್ಟು' ಯಾವ ದೇಶದಲ್ಲಿದೆ?
••► ಅಫ್ಘಾನಿಸ್ತಾನ.


987) 'ಸಲ್ಮಾ ಅಣೆಕಟ್ಟ'ನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ?
••► ಹರಿ ರುದ್ ನದಿ.(ಅಫ್ಘಾನಿಸ್ತಾನ)


988) ಇತ್ತೀಚೆಗೆ ‘ಡೆಂಗೆ ನಿಯಂತ್ರಿಸುವ ಔಷಧ(ಲಸಿಕೆ ಡೆಂಗ್‍ವಾಕ್ಸಿಯಾ)ಕ್ಕೆ ಅನುಮತಿ ನೀಡಿದ ಏಷ್ಯಾದ ಮೊಟ್ಟಮೊದಲ ದೇಶ’ ಎಂಬ ಹೆಗ್ಗಳಿಕೆಗೆ ಪಾತ್ರವಾದ ದೇಶ ಯಾವುದು?
••► ಫಿಲಿಫೀನ್ಸ್.


989) ಇತ್ತೀಚೆಗೆ ಡೆಂಗೆ ನಿಯಂತ್ರಿಸುವ ಔಷಧ ಲಸಿಕೆ 'ಡೆಂಗ್‍ವಾಕ್ಸಿಯಾ' ಅನ್ನು ತಯಾರಿಸಿದ ಕಂಪನಿ ಯಾವುದು?
••► ಫ್ರೆಂಚ್ ಕಂಪನಿ ಸನೋಫಿ ಪಾಶ್ಚರ್


990) ದೇಶಾದ್ಯಂತ ಪ್ರತಿ ವರ್ಷ ಡಿಸೆಂಬರ್ 23ರಂದು ಯಾರ ಸ್ಮರಣಾರ್ಥ 'ಕಿಸಾನ್ ದಿನ'ವಾಗಿ ಆಚರಿಸಲಾಗುತ್ತದೆ?
••► ಚೌಧರಿ ಚರಣ್ ಸಿಂಗ್ (ಭಾರತದ ಐದನೇ ಪ್ರಧಾನಿ)


991) ಈಗಾಗಲೇ ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದೇಶದ ಎಷ್ಟು ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳು ಸೇರ್ಪಡೆಗೊಂಡಿವೆ?
••► 32


992) ಅಳಿವಿನಂಚಿನಲ್ಲಿರುವ ಪ್ಯಾಂಥೆರಾ ಲಿಯೊ ಲಿಯೊ ಮತ್ತು ಪ್ಯಾಂಥೆರಾ ಲಿಯೊ ಮೆಲಾನೊಚೈತ ಎಂಬ ಪ್ರಭೇದಗಳು ಯಾವ ವನ್ಯಜೀವಿಗೆ ಸಂಬಂಧಪಟ್ಟಿವೆ?
••► ಸಿಂಹ.


993) ಇತ್ತೀಚೆಗೆ ಗ್ರಾಮ ಪಂಚಾಯ್ತಿ ಹಾಗೂ ಮುನ್ಸಿಪಾಲಿಟಿ ಕಾರ್ಪೋರೇಶನ್ ಚುನಾವಣೆಗಳಿಗೆ ಸ್ಪರ್ಧಿಸಲು ಕನಿಷ್ಟ ಶಿಕ್ಷಣ ಅರ್ಹತೆ ನಿಗದಿಗೊಳಿಸಿದ್ದ ದೇಶದ ಪ್ರಥಮ ರಾಜ್ಯ ಯಾವುದು?
••► ಹರಿಯಾಣ.


994) ವಾಯು ಮಾಲಿನ್ಯ ಪ್ರಮಾಣ ಇಂದು ತುರ್ತು ಸ್ವರೂಪವನ್ನು ಪಡೆದ ಹಿನ್ನೆಲೆಯಲ್ಲಿ ಶಾಸನಾತ್ಮಕ ವಿಧಿಗಳ, ನಿಯಮಾವಳಿಗಳ ಅನ್ವಯ, ಮಾಲಿನ್ಯಕಾರಕ ಕಣಗಳು (ಪಿಎಂ-ಪರ್ಟಿಕ್ಯುಲೇಟ್ ಮ್ಯಾಟರ್) ಒಂದು ಘನ ಮೀಟರ್ ಪ್ರದೇಶದಲ್ಲಿ ದಿನಕ್ಕೆ ಎಷ್ಟು ಮೈಕ್ರೊಗ್ರಾಂಗಳನ್ನು ಮೀರುವಂತಿಲ್ಲ?
••► 60 ಮೈಕ್ರೊಗ್ರಾಂಗಳಿಂದ 100 ಮೈಕ್ರೊಗ್ರಾಂಗಳು.


995) ಪ್ರಸ್ತುತ ರಾಜ್ಯಸಭೆಯ ಉಪಾಧ್ಯಕ್ಷರು ಯಾರು?
••► ಪಿ.ಜೆ. ಕುರಿಯನ್ (14dec2015)


996) ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆಯ ಮುಖ್ಯಸ್ಥರು ಯಾರಿದ್ದಾರೆ?
••► ಮೈಕೆಲ್ ಜರಾಡ್ (25Nov2015)


997) ಪ್ರಸ್ತುತ ದೇಶದ ಹಸಿರು ನ್ಯಾಯಪೀಠ (NGT) ದ ಅಧ್ಯಕ್ಷರು ಯಾರು?  
••►  ನ್ಯಾಯಮೂರ್ತಿ ಸ್ವತಂತ್ರಕುಮಾರ್ (Dec 11, 2015)


998) ಇತ್ತಿಚೆಗೆ ನೇಪಾಳದ ಇತಿಹಾಸದಲ್ಲೆ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು?
••► ವಿದ್ಯಾದೇವಿ ಭಂಡಾರಿ.


999) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಇತ್ತೀಚೆಗೆ ಪ್ರಕಟಿಸಿದ ‘ಸಮನ್ವಯ್‌’ ಯೋಜನೆಯನ್ನು ಯಾವುದಕ್ಕೆ ಸಂಬಂಧಿಸಿದೆ?
••► ಗ್ರಾಮ ಪಂಚಾಯ್ತಿ


1000) 'TAPI ಅನಿಲ ಕೊಳವೆ ಮಾರ್ಗ ಯೋಜನೆ' ಯಾವ ದೇಶಗಳಿಗೆ ಸಂಬಂಧಿಸಿದೆ?
••► ತುರ್ಕ್ ಮೆನಿಸ್ಥಾನ್— ಅಫಘಾನಿಸ್ತಾನ— ಪಾಕಿಸ್ತಾನ— ಇಂಡಿಯಾ

- ಇಲ್ಲಿಯವರೆಗೆ 27 ಭಾಗಗಳಲ್ಲಿ 1,000 (ಒಂದು ಸಾವಿರ) ಪ್ರಮುಖ ಪ್ರಚಲಿತ ಘಟನೆಗಳ ಮೇಲೆ ಪ್ರಶ್ನೆಗಳನ್ನು ತಯಾರಿಸಿ ಉತ್ತರಗಳೊಂದಿಗೆ 'ಸ್ಪರ್ಧಾಲೋಕ'ದಲ್ಲಿ ವಿವರಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವು ತುಂಬಾ ಉಪಯುಕ್ತವಾಗಿರುವವು. ಸ್ಪರ್ಧಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಲ್ಲಿ ನನ್ನ ಅವಿರತ ಶ್ರಮಕ್ಕೆ ಒಂದು ನಿಜವಾದ ಅರ್ಥದೊರೆಯುವುದು.

ಧನ್ಯವಾದಗಳು...

Friday, 1 January 2016

☀(ಭಾಗ -26) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-26)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ -26) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-26))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.

   
951) ಇತ್ತೀಚೆಗೆ ನಿಧನರಾದ ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ಕೇರಳ ಮತ್ತು ಕರ್ನಾಟಕ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯಾರು?
••► ವಿ.ಎಸ್‌.ಮಳಿಮಠ (86) (23 Dec, 2015)


952) ಇತ್ತೀಚೆಗೆ ಪರಿಷ್ಕರಣೆಗೊಂಡ ಆರೋಗ್ಯ ಸಚಿವಾಲಯ ಸಿದ್ಧಪಡಿಸಲಾದ  '2015ರ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ 2011' (ಎನ್ಎಲ್‌ಇಎಂ) ಗೆ ಈವರೆಗೆ ಸೇರಿದ ಒಟ್ಟು ಅಗತ್ಯ ಔಷಧಗಳ ಸಂಖ್ಯೆ ಎಷ್ಟು?
••► 376


953) ಇತ್ತೀಚೆಗೆ ಅಭಿಪ್ರಾಯ ಸಂಶೋಧನಾ ವ್ಯವಹಾರ (ORB) ಇಂಟರ್‌ನ್ಯಾಷನಲ್‌  ಸಂಸ್ಥೆಯ ವಿನ್‌/ಗ್ಯಾಲಪ್‌ ವಿಭಾಗವು ನಡೆಸಿದ ‘ಅಂತರರಾಷ್ಟ್ರೀಯ ಜಾಗತಿಕ ನಾಯಕರ ಅನುಕ್ರಮಣಿಕೆ’ ಸಮೀಕ್ಷೆಯಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಪ್ರಥಮ ಸ್ಥಾನ ಪಡೆದವರು ಯಾರು?
••► ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ


954)ಇತ್ತೀಚೆಗೆ ಅಭಿಪ್ರಾಯ ಸಂಶೋಧನಾ ವ್ಯವಹಾರ (ORB) ಇಂಟರ್‌ನ್ಯಾಷನಲ್‌  ಸಂಸ್ಥೆಯ ವಿನ್‌/ಗ್ಯಾಲಪ್‌ ವಿಭಾಗವು ನಡೆಸಿದ ‘ಅಂತರರಾಷ್ಟ್ರೀಯ ಜಾಗತಿಕ ನಾಯಕರ ಅನುಕ್ರಮಣಿಕೆ’ ಸಮೀಕ್ಷೆಯಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎಷ್ಟನೇ ಸ್ಥಾನ ಪಡೆದಿದ್ದಾರೆ?
••► ಏಳನೇ ಸ್ಥಾನ


955) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಸಂಶೋಧನೆಗೆ ಹಾಗೂ ವಿವಿಧ ಎಂಜಿನಿಯರಿಂಗ್ ಒಳಗೊಂಡಂತೆ ನೇರ ವೈಜ್ಞಾನಿಕ ಸಂಶೋಧನಾ ಕಾರ್ಯಗಳಿಗೆ ಉತ್ತೇಜಿಸಲು ಜಾರಿಯಲ್ಲಿ ತಂದ ಮಹತ್ವಾಕಾಂಕ್ಷಿ ಯೋಜನೆ ಯಾವುದು?
••► ಇಂಪ್ರಿಂಟ್ ಇಂಡಿಯಾ ಯೋಜನೆ.


956) ಜಗತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನ ಹಕ್ಕು ನೀಡಿದ ದೇಶ ಯಾವುದು?
‌••► ನ್ಯೂಜಿಲೆಂಡ್ (1893ರಲ್ಲಿ)


957) ಭಾರತದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ದೊರೆತಿದ್ದು ಯಾವಾಗ?
••► 1920ರಲ್ಲಿ.


958) ಒಂದು ಲೀಟರ್‌ ನೀರಿನಲ್ಲಿ ಅರ್ಸೆನಿಕ್ ಎಷ್ಟು ಮಿಲಿ ಗ್ರಾಂ‌ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಕುಡಿಯಲು ಯೋಗ್ಯವಲ್ಲ
••► 0.05 ಮಿಲಿ ಗ್ರಾಂ


959) ಇತ್ತೀಚೆಗೆ ಪ್ರಸಕ್ತ ಸಾಲಿನ ‘ಭುವನ ಸುಂದರಿ’ಯಾಗಿ (‘ಮಿಸ್‌ ಯೂನಿವರ್ಸ್‌ 2015’) ಆಯ್ಕೆಯಾಗೊಂಡವರು ಯಾರು?
••► ಪಿಯಾ ಅಲೊಂಜೊ ವುರ್ತ್‌ಬಕ್


960) ಪ್ರಸಕ್ತ ಸಾಲಿನ ‘ಭುವನ ಸುಂದರಿ’ಯಾಗಿ (‘ಮಿಸ್‌ ಯೂನಿವರ್ಸ್‌ 2015’) ಆಯ್ಕೆಯಾಗೊಂಡ 'ಪಿಯಾ ಅಲೊಂಜೊ ವುರ್ತ್‌ಬಕ್' ಯಾವ ದೇಶದ ಸುಂದರಿ ?
••► ಫಿಲಿಪ್ಪೀನ್ಸ್.


961) ಇತ್ತೀಚೆಗೆ ಹತ್ತನೇ 'ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಸಮಾವೇಶ-2015' ಎಲ್ಲಿ ನಡೆಯಿತು?
••► ನೈರೋಬಿ , ಕಿನ್ಯಾ.(21 Dec, 2015)


962) ಪ್ರಸ್ತುತ (ಡಬ್ಲ್ಯುಟಿಒ) 'ವಿಶ್ವ ವ್ಯಾಪಾರ ಸಂಘಟನೆಯ ಮಹಾ ನಿರ್ದೇಶಕರು ಯಾರಿದ್ದಾರೆ?
 ••► ರೋಬರ್ಟೊ ಅಜೆವೆಡೊ.(21 Dec, 2015)


963) ಇತ್ತೀಚೆಗೆ ವಿದ್ಯುತ್ ವಿತರಣಾ ಕಂಪನಿಗಳ ಹಣಕಾಸು ಪುನರ್ರಚನೆ ಮತ್ತು ಸಮಗ್ರ ವಿದ್ಯುತ್ ಕ್ಷೇತ್ರದ ಸುಧಾರಣೆಯ ಕುರಿತು ಕೇಂದ್ರ ಸರ್ಕಾರವು ಜಾರಿಯಲ್ಲಿ ತಂದ ಮಹತ್ವಾಕಾಂಕ್ಷಿ ಯೋಜನೆ ಯಾವುದು?
••► ಉದಯ್ (ಉಜ್ವಲ್ ಡಿಸ್‍ಕಾಮ್ ಅಶ್ಶೂರೆನ್ಸ್ ಯೋಜನಾ) ಯೋಜನೆ


964) ಇತ್ತೀಚೆಗೆ 'ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ‘ವಿಶ್ವದ ಅತ್ಯಂತ ಪ್ರಭಾವಿ ಜನರು-2015 ಪಟ್ಟಿ' ಯಲ್ಲಿ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಪ್ರಥಮ ಸ್ಥಾನ ಪಡೆದ ವ್ಯಕ್ತಿ ಯಾರು?
••► ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (2015ರ ನವೆಂಬರ್ 4)


966) ಇತ್ತೀಚೆಗೆ 'ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ‘ವಿಶ್ವದ ಅತ್ಯಂತ ಪ್ರಭಾವಿ ಜನರು-2015 ಪಟ್ಟಿ'ಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎಷ್ಟನೇ ಸ್ಥಾನ ಪಡೆದಿದ್ದಾರೆ?
••► 9ನೇಯ ಸ್ಥಾನ.(2015ರ ನವೆಂಬರ್ 4)
— (ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸತತ ಮೂರನೇ ವರ್ಷ ಇವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಜರ್ಮನ್ ಚಾನ್ಸ್‍ಲರ್ ಅಂಜೆಲಾ ಮೊರ್ಕೆಲ್ ಎರಡನೇ ಸ್ಥಾನದಲ್ಲಿದ್ದು, ಕಳೆದ ವರ್ಷದ ಪಟ್ಟಿಯಲ್ಲಿ ಇವರು ಮೂರನೇ ಸ್ಥಾನದಲ್ಲಿದ್ದರು. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಬರಾಕ್ ಒಬಾಮಾ ಒಂದು ಸ್ಥಾನ ಕುಸಿದು ಮೂರನೇ ಸ್ಥಾನಲ್ಲಿದ್ದಾರೆ. ಅಮೆರಿಕದ ಹಾಲಿ ಅಧ್ಯಕ್ಷರು ಅಗ್ರ ಇಬ್ಬರ ಪೈಕಿ ಸ್ಥಾನ ಪಡೆಯದಿರುವುದು ಇದೇ ಮೊದಲು. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರಭಾವಿ ವ್ಯಕ್ತಿಗಳ ಪೈಕಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. 2014ರಲ್ಲಿ ಇವರು 14ನೇ ಸ್ಥಾನದಲ್ಲಿದ್ದರು.)


967) ಇತ್ತೀಚೆಗೆ ಕ್ರೀಡೆಯಲ್ಲಿ ಉದ್ದೀಪನ ಮದ್ದು ಸೇವನೆ ಕುರಿತ ವರದಿಯನ್ನು ತಯಾರಿಸಿ ‘ವಿಶ್ವ ಉದ್ದೀಪನಾ ವಿರೋಧಿ ಸಂಸ್ಥೆ’ಗೆ ಸಲ್ಲಿಸಿದ ಸ್ವತಂತ್ರ ಆಯೋಗದ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದರು?
••► ರಿಚಡ್ ಪ್ರೌಡ್ (2015ರ ನವೆಂಬರ್ 9)


968) ಇತ್ತೀಚೆಗೆ ದಿವಾಳಿ ಕಾನೂನುಗಳ ಸುಧಾರಣೆ ಸಂಬಂಧ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಸಮಿತಿ ಯಾವುದು?
••► ಡಾ.ಟಿ.ವಿಶ್ವನಾಥನ್ ಸಮಿತಿ


969) ಇತ್ತೀಚೆಗೆ 11ನೇ ರಾಷ್ಟ್ರೀಯ ಬುಡಕಟ್ಟು ‘ಕರಕುಶಲ ಮೇಳ ಆದಿಶಿಲ್ಪ’ ವು ಎಲ್ಲಿ ಜರುಗಿತು?
••► ನವದೆಹಲಿಯಲ್ಲಿ


970) ವಿಶ್ವದ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಾದ 'ಬ್ಯಾಂಕ್ ಆಫ್ ಇಂಟರ್‍ನ್ಯಾಷನಲ್ ಸೆಟ್ಲ್‍ಮೆಂಟ್ಸ್ (ಬಿಐಎಸ್)' ನ ಕೇಂದ್ರ ಕಚೇರಿ ಎಲ್ಲಿದೆ?
••► ಸ್ವಿಡ್ಜರ್‍ಲೆಂಡ್‍ನ ಬಸೆಲ್‍ನಲ್ಲಿದೆ.


971) ಸದ್ಯ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ 162 ಸದಸ್ಯ ರಾಷ್ಟ್ರಗಳಿದ್ದು, ಹೊಸದಾಗಿ ಇತ್ತೀಚೆಗೆ 163ನೇ ಸದಸ್ಯದೇಶವಾಗಿ ಸೇರ್ಪಡೆಯಾದ ರಾಷ್ಟ್ರ ಯಾವುದು?
••► ಅಫ್ಘಾನಿಸ್ತಾನ


972) ಪ್ರಸ್ತುತ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷರು ಯಾರು?
••► ಡಾ. ಎಂ.ಎಸ್.ಮೂರ್ತಿ


973) ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ನ ವಿಶ್ವ ಮಟ್ಟದ ಉಸ್ತುವಾರಿ ಸಂಸ್ಥೆಯಾದ ಫಿಫಾ (ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಫುಟ್‌ಬಾಲ್ ಅಸೋಸಿಯೇಷನ್) ನಿಂದ ಎಂಟು ವರ್ಷಗಳ ಕಾಲ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆ, ಕ್ರೀಡೆಯ ಆಡಳಿತ ಅಥವಾ ಇತರ ಯಾವುದೇ ಅಧಿಕಾರದಿಂದ  ನಿಷೇಧಕ್ಕೊಳಪಟ್ಟ ಫಿಫಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಯಾರು?
••► ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಹಾಗೂ ಉಪಾಧ್ಯಕ್ಷ ಮೈಕೆಲ್ ಪ್ಲಾಟಿನಿ


974) ಇತ್ತೀಚೆಗೆ ಭಾರತದ ಆಹಾರ ನಿಯಂತ್ರಣ ಸಂಸ್ಥೆಯಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ' (ಎಫ್‍ಎಸ್‍ಎಸ್‍ಎಐ)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡವರು ಯಾರು?
••► ಪವನ್ ಕುಮಾರ್ ಅಗರ್‍ವಾಲ್ (24-12-2015)


975) ಪ್ರಸ್ತುತ ಭಾರತದ ಆಹಾರ ನಿಯಂತ್ರಣ ಸಂಸ್ಥೆಯಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ' (ಎಫ್‍ಎಸ್‍ಎಸ್‍ಎಐ)ದ ಅಧ್ಯಕ್ಷರು ಯಾರು?
••► ಆಶೀಶ್ ಬಹುಗುಣ.


To be continued...

☀ ಭಾರತೀಯ ರಾಷ್ಟ್ರೀಯ ಟ್ರೋಫಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕ್ರೀಡೆಗಳು : (Indian National Trophies and Associated Games)

☀ ಭಾರತೀಯ ರಾಷ್ಟ್ರೀಯ ಟ್ರೋಫಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕ್ರೀಡೆಗಳು :
(Indian National Trophies and Associated Games)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ರಾಷ್ಟ್ರೀಯ ಟ್ರೋಫಿಗಳು ••┈┈┈┈┈┈┈┈┈┈┈┈┈┈┈┈┈┈•• ●.ಕ್ರೀಡೆಗಳು:
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

■. ಅಗಾ ಖಾನ್ ಕಪ್ ••┈┈┈┈┈•• ಹಾಕಿ (ಪಶ್ಚಿಮ ಭಾರತ).

■. ಬೈಗ್ಟನ್ ಕಪ್ ಹಾಕಿ ••┈┈┈┈┈•• ಹಾಕಿ (ಕಲ್ಕತ್ತಾ).

■. ಡಿ.ಸಿ.ಎಮ್.ಟ್ರೋಫಿ ••┈┈┈┈┈•• ಫುಟ್ಬಾಲ್.

■. ಧ್ಯಾನ್ ಚಂದ್ ಟ್ರೋಫಿ ••┈┈┈┈┈•• ಹಾಕಿ.

■. ಡಾ.ಬಿ.ಸಿ.ರಾಯ್ ಟ್ರೋಫಿ ••┈┈┈┈┈•• ರಾಷ್ಟ್ರೀಯ ಫುಟ್ಬಾಲ್ (ಜೂನಿಯರ್).

■. ದುಲೀಪ್ ಟ್ರೋಫಿ ••┈┈┈┈┈•• ಕ್ರಿಕೆಟ್.

■. ಡ್ಯುರಾಂಡ್ ಕಪ್ ••┈┈┈┈┈•• ಫುಟ್ಬಾಲ್.

■. ಐ.ಎಫ್.ಎ.ಸೀಲ್ಡ್ ••┈┈┈┈┈•• ಫುಟ್ಬಾಲ್ (ಕಲ್ಕತ್ತಾ).

■. ಇರಾನಿ ಕಪ್ ••┈┈┈┈┈•• ಕ್ರಿಕೆಟ್.

■. ಜಯಲಕ್ಷ್ಮಿ ಕಪ್ ••┈┈┈┈┈•• ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ (ಮಹಿಳೆ).

■. ನೆಹರು ಕಪ್ ••┈┈┈┈┈•• ಫುಟ್ಬಾಲ್.

■. ರೂಯಿಯಾ ಚಾಲೆಂಜ್ ಗೋಲ್ಡ್ ಟ್ರೋಫಿ ••┈┈┈┈┈•• ಬ್ರಿಡ್ಜ್.

■. ರಂಗಸ್ವಾಮಿ ಕಪ್ ••┈┈┈┈┈•• ರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್.

■. ರಣಜಿ ಟ್ರೋಫಿ ••┈┈┈┈┈•• ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್ ಶಿಪ್.

■. ರೋಹಿನಂಟನ್ ಬರಿಯಾ ಟ್ರೋಫಿ ••┈┈┈┈┈•• ಕ್ರಿಕೆಟ್ (ಅಂತರ ವಿಶ್ವವಿದ್ಯಾಲಯ).

■. ರೋವರ್ಸ್ ಕಪ್ ••┈┈┈┈┈•• ಫುಟ್ಬಾಲ್.

■. ಸಂತೋಷ್ ಟ್ರೋಫಿ ••┈┈┈┈┈•• ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಶಿಪ್.

■. ಸುಬ್ರೊತೊ ಮುಖರ್ಜಿ ಕಪ್ ••┈┈┈┈┈•• ಫುಟ್ಬಾಲ್ (ಅಂತರ್ ಶಾಲೆ).

■. ವಿಜ್ಜೀ ಟ್ರೋಫಿ ••┈┈┈┈┈•• ಕ್ರಿಕೆಟ್.

■. ವೆಲ್ಲಿಂಗ್ಟನ್ ಟ್ರೋಫಿ ••┈┈┈┈┈•• ರೋಯಿಂಗ್.

■. ಫೆಡರೇಷನ್ ಕಪ್  ••┈┈┈┈┈•• ಫುಟ್ಬಾಲ್.

☀ಜಗತ್ತಿನ ಪ್ರಮುಖ ಬೆಹುಗಾರಿಕೆ / ಗುಪ್ತಚರ ಇಲಾಖೆಗಳು ಹಾಗು ಸಂಸ್ಥೆಗಳು. (Intelligence and Detective Agencies of the world)

☀ಜಗತ್ತಿನ ಪ್ರಮುಖ ಬೆಹುಗಾರಿಕೆ / ಗುಪ್ತಚರ ಇಲಾಖೆಗಳು ಹಾಗು ಸಂಸ್ಥೆಗಳು.
(Intelligence and Detective Agencies of the world)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)

★ ಸಾಮಾನ್ಯ ಅಧ್ಯಯನ
(General Studies)


★ಡಿಟೆಕ್ಟಿವ್ ಏಜೆನ್ಸೀಸ್. ••┈┈┈┈┈┈┈┈┈┈┈┈┈┈┈┈• ★ದೇಶಗಳು.
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

1.ಚೀನಾ ••┈┈┈┈┈┈┈┈• ಕೇಂದ್ರ ವಿದೇಶಾಂಗ ಸಂಪರ್ಕ ಇಲಾಖೆ (CELD)

2.ಆಸ್ಟ್ರೇಲಿಯಾ ••┈┈┈┈┈┈┈┈• ಆಸ್ಟ್ರೇಲಿಯನ್ ಭದ್ರತೆ ಮತ್ತು ಗುಪ್ತಚರ ಸಂಸ್ಥೆ.(ASIO)

3.ರಷ್ಯಾ ••┈┈┈┈┈┈┈┈• ಕೆ.ಜಿ.ಬಿ/ ಜಿ.ಆರ್.ಯು. (K.G.B. / G.R.U.)

4.ಯುನೈಟೆಡ್ ಕಿಂಗ್ಡಮ್ (UK) ••┈┈┈┈┈┈┈┈• ಮಿಲಿಟರಿ ಗುಪ್ತಚರ-5&6 (M.I-5&6), ವಿಶೇಷ ಶಾಖೆ, ಜಂಟಿ ಗುಪ್ತಚರ ಸಂಸ್ಥೆ

5.ಪಾಕಿಸ್ತಾನ ••┈┈┈┈┈┈┈┈• ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ISI).

6.ಭಾರತ ••┈┈┈┈┈┈┈┈• ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (RAW), ಇಂಟೆಲಿಜೆನ್ಸ್ ಬ್ಯೂರೋ (IB), ಕೇಂದ್ರೀಯ ತನಿಖಾ ದಳ (CBI).

7.ಯು.ಎಸ್.ಎ ••┈┈┈┈┈┈┈┈• ಕೇಂದ್ರ ಗುಪ್ತಚರ ಸಂಸ್ಥೆ (CIA), ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI).

8.ಇಸ್ರೇಲ್ ••┈┈┈┈┈┈┈┈• ಮೊಸಾದ್.

9.ಈಜಿಪ್ತ್ ••┈┈┈┈┈┈┈┈• ಮುಖ್ಬರಾತ್.

10.ಜಪಾನ್ ••┈┈┈┈┈┈┈┈• ನೈಕೊ .

11.ಇರಾನ್ ••┈┈┈┈┈┈┈┈• ಸವಕ್ (Sazamane Etelaat de Amniate Kechvar).

12.ಇರಾಕ್ ••┈┈┈┈┈┈┈┈• ಎಐ ಮುಕ್ಬರಾತ್.

13.ಫ್ರಾನ್ಸ್ ••┈┈┈┈┈┈┈┈• ಡಿ.ಜಿ.ಎಸ್.ಇ (DGSE)

14.ದಕ್ಷಿಣ ಆಫ್ರಿಕಾ ••┈┈┈┈┈┈┈┈• ಬ್ಯೂರೋ ಆಪ್ ಸ್ಟೇಟ್ ಸೆಕ್ಯುರಿಟಿ (B.O.S.S).