"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 28 June 2015

☀ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳ ದೇಶಗಳ ಮೇಲೆ ಜಾಗತಿಕ ಹವಾಗುಣ ಬದಲಾವಣೆ (ಗ್ಲೋಬಲ್ ವಾರ್ಮಿಂಗ್) ಯಿಂದ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿ. ವಿಶೇಷವಾಗಿ ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳ ಕುರಿತು ಸಂಕ್ಷಿಪ್ತವಾಗಿ ವಿಶ್ಲೇಷಿಸಿ.   Discuss the effects of the Global Climate Change (Global Warming) on countries those have same as Agricultural, organic diversity as India. Briefly analyze the issues of climate change that especially on the national (India), local (state) Climate.

☀ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳ ದೇಶಗಳ ಮೇಲೆ ಜಾಗತಿಕ ಹವಾಗುಣ ಬದಲಾವಣೆ (ಗ್ಲೋಬಲ್ ವಾರ್ಮಿಂಗ್) ಯಿಂದ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿ. ವಿಶೇಷವಾಗಿ ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳ ಕುರಿತು ಸಂಕ್ಷಿಪ್ತವಾಗಿ ವಿಶ್ಲೇಷಿಸಿ.

 — Discuss the effects of the Global Climate Change (Global Warming) on countries those have same as Agricultural, organic diversity as India. Briefly analyze the issues of climate change that especially on the national (India), local (state) Climate.

━━━━━━━━━━━━━━━━━━━━━━━━━━━━━━━━━━━━━━━━━━━━━

(Ecology, Environmental Studies)
★ ಪರಿಸರ, ಪರಿಸರ ಅಧ್ಯಯನ

✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)


●.`ಹವಾಗುಣ ಬದಲಾವಣೆ’(Climate Change) ಮತ್ತು ಜಾಗತಿಕ ಹವಾಗುಣ ಬದಲಾವಣೆ (Global Warming):
— ಬಹು ದೀರ್ಘ ಕಾಲಾವಧಿಯಲ್ಲಿ ಹವಾಗುಣದಲ್ಲಿ ಉಂಟಾಗುವ ಖಾಯಂ ಬದಲಾವಣೆಗಳನ್ನು `ಹವಾಗುಣ ಬದಲಾವಣೆ’ ಎಂದು (ಕ್ಲೈಮೇಟ್ ಚೇಂಜ್) ಕರೆಯುತ್ತಾರೆ.

— ಭೂಮಿಯ ಮೇಲೆ ಮನುಷ್ಯರ ವಾಸವು ಆರಂಭವಾಗುವುದಕ್ಕಿಂತ ಮುನ್ನವೇ ಈ ಬಗೆಯ ಹವಾಗುಣ ಬದಲಾವಣೆಯು ನೈಸರ್ಗಿಕವಾಗಿಯೇ ಆಗುತ್ತಿತ್ತು. ಆದರೆ ಈಗ ಮಾನವನ ವಿವಿಧ ಚಟುವಟಿಕೆಗಳ ಕಾರಣದಿಂದ ಈ ಹವಾಗುಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇದನ್ನೇ ಮಾನವನಿರ್ಮಿತ ಜಾಗತಿಕ ಹವಾಗುಣ ಬದಲಾವಣೆ (ಗ್ಲೋಬಲ್ ವಾರ್ಮಿಂಗ್) ಎಂದು ಹೇಳುತ್ತಾರೆ.
—  ಈ ಬಗೆಯ ಹವಾಗುಣ ಬದಲಾವಣೆಯು ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಉಂಟಾಗುತ್ತಿದೆ; ಇದಕ್ಕೆ ಮನುಷ್ಯರ ಚಟುವಟಿಕೆಗಳಿಂದ ಉಂಟಾಗುವ ಹಸಿರುಮನೆ ಪರಿಣಾಮವು ಮುಖ್ಯ ಕಾರಣವಾಗಿದೆ.


☀.ಜಾಗತಿಕ ಹವಾಗುಣ ಬದಲಾವಣೆ (ಗ್ಲೋಬಲ್ ವಾರ್ಮಿಂಗ್) ಯಿಂದ ಉಂಟಾಗುವ ಪರಿಣಾಮಗಳು:
━━━━━━━━━━━━━━━━━━━━━━━━━━━━━━━━━━━━━━━━━━━━━━

●.ಹವಾಗುಣ ಬದಲಾವಣೆಯು ಇಂದು ನಾವು ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಜಾಗತಿಕ ಪಾರಿಸರಿಕ ಸವಾಲು ಎಂಬುದನ್ನು 1980ರ ದಶಕದಲ್ಲಿ ನಡೆಸಿದ ಹಲವು ಸಂಶೋಧನೆಗಳು ಖಚಿತಪಡಿಸಿವೆ.
— ಜಾಗತಿಕ ವಿಜ್ಞಾನಿಗಳ ಸಮುದಾಯದ ಪ್ರಕಾರ ವಾತಾವರಣದಲ್ಲಿನ  ರಾಸಾಯನಿಕಗಳ ಸಂಯೋಜನೆಯಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಹಸಿರುಮನೆ ಅನಿಲಗಳ (ಸಿಎಚ್‌ಜಿ:ಗ್ರೀನ್‌ಹೌಸ್ ಗ್ಯಾಸ್) ಸಾಂದ್ರತೆಯಲ್ಲಿ ಹೆಚ್ಚಳ – ಇವು ಮಳೆ ಪ್ರಮಾಣ, ಭೂಮಿಯ ಉಷ್ಣತೆ ಸೇರಿದಂತೆ ಪಾರಿಸರಿಕ ಸಮತೋಲನ ಮತ್ತು ಜೈವಿಕ-ಭೌಗೋಳಿಕ-ರಾಸಾಯನಿಕ ಚಕ್ರಕ್ಕೆ ಗಮನಾರ್ಹವಾದ ಧಕ್ಕೆಯನ್ನು ಒಡ್ಡಿವೆ.
— ಹವಾಗುಣ ಬದಲಾವಣೆ ಕುರಿತ ಅಂತರ್-ಸರ್ಕಾರಿ ಸಮಿತಿಯು (ಐಪಿಸಿಸಿ, ಇಂಟರ್ ನ್ಯಾಶನಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್) ಪ್ರಕಟಿಸಿದ ಐದೂ ಅನುಕ್ರಮ ವಾರ್ಷಿಕ ವರದಿಗಳಲ್ಲಿ ಇಂಥ ನೈಸರ್ಗಿಕ ಜೀವನಚಕ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಜಾಗತಿಕ – ಪ್ರಾದೇಶಿಕ ಮಟ್ಟದಲ್ಲಿ ಸಮಾಜೋ-ಆಕ ಸನ್ನಿವೇಶದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಮತ್ತು  ಸಮಾಜದ ಎಲ್ಲ ರಂಗಗಳ ಮೇಲೂ ಪ್ರಭಾವ ಬೀರುತ್ತವೆ ಎಂದು ತಿಳಿಸಿವೆ.

●.ಮಳೆಬೀಳುವ ಪ್ರಮಾಣದಲ್ಲಿ ಆಗುವ ಬದಲಾವಣೆಗಳು ಕೃಷಿ ಹಾಗೂ ಜಲಮೂಲಗಳ ಮೇಲೆ ಪರಿಣಾಮ ಬೀರುತ್ತವೆ.
—  2014ರಲ್ಲಿ ಐಪಿಸಿಸಿಯು ಪ್ರಕಟಿಸಿದ ಐದನೆಯ ಅಂದಾಜು ವರದಿಯು ಈ ಹಿಂದಿನ ವರದಿಗಳನ್ನೇ ಪುನರುಚ್ಚರಿಸಿದೆ. ಅಂದರೆ ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳ ದೇಶಗಳ ಮೇಲೆ ಅತ್ಯಂತ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ವರದಿಯ ಮುಖ್ಯಾಂಶ. ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತವು ಜನಸಂಖ್ಯಾತ್ಮಕವಾಗಿ ಪ್ರಪಂಚದಲ್ಲೇ ಎರಡನೇ ಅತಿದೊಡ್ಡ ದೇಶವಾಗಿದ್ದು, ಇಲ್ಲಿ ಜನಸಂಖ್ಯೆಯು ಇಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳಿಗೆ ಅನುಗುಣವಾಗಿ ಚದುರಿಕೊಂಡಿಲ್ಲ. ಆದ್ದರಿಂದ ಇಲ್ಲಿನ ಸಮಾಜದ ಪ್ರತಿಯೊಂದೂ ರಂಗದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಅಂದಾಜು ಮಾಡಲಾಗಿದೆ.

●.ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಹೆಚ್ಚಾಗಿರುವುದಕ್ಕೆ ಹೆಚ್ಚುತ್ತಿರುವ ಜಲ ಹಾಗೂ ವಾಯು ಮಾಲಿನ್ಯವೇ ಕಾರಣ. ಇದರಿಂದಾಗಿ ಮನುಕುಲದ ಧೀರ್ಘಾವಧಿ ಕಲ್ಯಾಣವೇ ಧಕ್ಕೆಗೆ ಒಳಗಾಗಿದೆ.
— ಔದ್ಯಮಿಕ ಪ್ರದೇಶ ಮತ್ತು ನಗರೀಕರಣವಾದ ಪ್ರದೇಶಗಳಲ್ಲಿ  ಕಲುಷಿತ ಜಲಮೂಲಗಳು, ಮಲಿನವಾದ ಗಾಳಿಯ ರೂಪದಲ್ಲಿ ಈ ಬಗೆಯ ಮಾಲಿನ್ಯದ ಪರಿಣಾಮವನ್ನು ಕಾಣಬಹುದಾಗಿದೆ.
— ವಾತಾವರಣಕ್ಕೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಗಟ್ಟಲು ಈ ಬಗೆಯ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುವುದೇ ಸಮರ್ಥ ಪರಿಹಾರವಾಗಿದೆ.


☀.ಹವಾಗುಣ ಬದಲಾವಣೆಯಿಂದ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳ ಪರಿಣಾಮಗಳು :
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

●.ಭಾರತ ಸರ್ಕಾರದ ಅಂದಾಜಿನ ಪ್ರಕಾರವೇ ಹವಾಗುಣ ಬದಲಾವಣೆಯಿಂದ ಕೃಷಿರಂಗವು ಅತ್ಯಂತ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಉಷ್ಣತೆ ಹೆಚ್ಚುತ್ತಿದೆ; ಮಳೆಯು ಎರ್ರಾಬಿರ್ರಿಯಾಗಿ ಬರುತ್ತಿದೆ; ಪ್ರವಾಹ, ಬರಗಾಲ ಮತ್ತು ಚಂಡಮಾರುತಗಳ ತೀವ್ರತೆ ಮತ್ತು ಸಂಖ್ಯೆಯೂ ಹೆಚ್ಚುತ್ತಿದೆ.

●.ಭಾರತವು ಹವಾಗುಣ ಬದಲಾವಣೆಗೆ ತಕ್ಕಂತೆ ತನ್ನ ನೀತಿಯನ್ನು ಬದಲಿಸಿಕೊಳ್ಳದಿದ್ದರೆ ಜಾಗತಿಕ ತಾಪಮಾನ ಏರಿಕೆಯಿಂದ ಕ್ರಿ.ಶ. 2080-2100ರ ವರ್ಷದ ಹೊತ್ತಿಗೆ ಭಾರತದ ಧಾನ್ಯ ಉತ್ಪಾದನೆಯಲ್ಲಿ ಶೇ. 10ರಿಂದ 40ರಷ್ಟು ಕುಸಿತ ಉಂಟಾಗಲಿದೆ. ಆಕರಗಳ ಬೆಳವಣಿಗೆ, ಆಹಾರ ಭದ್ರತೆ ಮತ್ತು ಬಡತನದ ವಿರುದ್ಧದ ಹೋರಾಟಗಳ ವಿಫಲವಾಗಲಿವೆ. ಹವಾಗುಣ ಬದಲಾವಣೆಯನ್ನು ತಡೆಯಲು ಮಧ್ಯಮಾವಧಿ ಮತ್ತು ದೀರ್ಘಾವಧಿ ತಡೆ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಿದೆ.

●.ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೇಲೂ ಹಲವು ಗಂಭೀರ ಪರಿಣಾಮಗಳು ಉಂಟಾಗಲಿವೆ. ರಾಜ್ಯದ ಶೇ. 77ರಷ್ಟು ಭೂಪ್ರದೇಶವು ಶುಷ್ಕ ಅಥವಾ ಅರೆಶುಷ್ಕ ಪ್ರದೇಶ ಎಂದು  ಅಧಿಕೃತವಾಗಿ ಅಂದಾಜು ಮಾಡಲಾಗಿದೆ.

●.ರಾಜ್ಯದ ಮೂರನೇ ಎರಡರಷ್ಟು ಪ್ರದೇಶವು ವಾರ್ಷಿಕ ಕೇವಲ 750 ಮಿಲಿಮೀಟರ್ಗಿಂತ ಕಡಿಮೆ ಪ್ರಮಾಣದ ಮಳೆಯನ್ನು ಪಡೆಯುತ್ತಿದೆ; ಇದರಿಂದಾಗಿ ಬರಗಾಲದ ಅಪಾಯ ಇದ್ದೇ ಇದೆ. ರಾಜ್ಯದ ಶೇ. 54ರಷ್ಟು ಭೂಪ್ರದೇಶವು ಬರಗಾಲ ಸಾಧ್ಯತೆಯ ವ್ಯಾಪ್ತಿಯಲ್ಲಿದೆ.

●.ರಾಜ್ಯದಲ್ಲಿ ಒಟ್ಟು ಭೂಪ್ರದೇಶದ ಶೇ. 19.96ರಷ್ಟು ಮಾತ್ರ ಕಾಡಿನಿಂದ ಆವೃತವಾಗಿದೆ. ಈ ರಾಜ್ಯದ ಪಶ್ಚಿಮಟ್ಟ ಪ್ರದೇಶವು ಜಾಗತಿಕ ಜೀವವೈವಿಧ್ಯದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಇಂಗಾಲವನ್ನು ಹುಗಿಯುವಲ್ಲಿ ರಾಜ್ಯಕ್ಕೆ ಅತ್ಯಂತ ಪ್ರಮುಖವಾದ ಪಾತ್ರವಿದೆ.

Saturday, 27 June 2015

☀ಭಾರತದ ಮಟ್ಟಿಗೆ ಮಾನ್ಸೂನ್‌ ಅಥವಾ ಮುಂಗಾರು ಮಹತ್ವದ ವಿದ್ಯಮಾನ. ಈ ಹಿನ್ನೆಲೆಯಲ್ಲಿ  ಮುಂಗಾರು (ಮಾನ್ಸೂನ್) ಎಂದರೆ ಏನು? ಅದು ಹೇಗೆ ಹುಟ್ಟುತ್ತದೆ? ಹೇಗೆ ಮಳೆ ಸುರಿಸುತ್ತದೆ? ಸಂಕ್ಷಿಪ್ತವಾಗಿ ವಿಶ್ಲೇಷಿಸಿ. (Monsoon India, is a significant phenomenon. In this context, what do you mean by the Monsoon? How does it originate? How it brings the Rain? Analyze briefly.)

☀ಭಾರತದ ಮಟ್ಟಿಗೆ ಮಾನ್ಸೂನ್‌ ಅಥವಾ ಮುಂಗಾರು ಮಹತ್ವದ ವಿದ್ಯಮಾನ. ಈ ಹಿನ್ನೆಲೆಯಲ್ಲಿ  ಮುಂಗಾರು (ಮಾನ್ಸೂನ್) ಎಂದರೆ ಏನು? ಅದು ಹೇಗೆ ಹುಟ್ಟುತ್ತದೆ? ಹೇಗೆ ಮಳೆ ಸುರಿಸುತ್ತದೆ? ಸಂಕ್ಷಿಪ್ತವಾಗಿ ವಿಶ್ಲೇಷಿಸಿ.

(Monsoon India, is a significant phenomenon. In this context, what do you mean by the Monsoon? How does it originate? How it brings the Rain? Analyze briefly.)

━━━━━━━━━━━━━━━━━━━━━━━━━━━━━━━━━━━━━━━━━━━━━

✧.ಭಾರತದ ಭೌಗೋಳಿಕ ಅರ್ಥವ್ಯವಸ್ಥೆ.
(Indian physical Economics)

✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)



●. ಭಾರತದಲ್ಲಿ ಮಾನ್ಸೂನ್‌ ಅಥವಾ ಮುಂಗಾರು (Monsoon) :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
— ಭಾರತದ ಮಟ್ಟಿಗೆ ಮಾನ್ಸೂನ್‌ ಅಥವಾ ಮುಂಗಾರು ಮಹತ್ವದ ವಿದ್ಯಮಾನ. ದೇಶದ ಆರ್ಥಿಕತೆ ಮತ್ತು ಕೃಷಿ ಚಟುವಟಿಕೆ ಮುಂಗಾರಿನ ಮೇಲೆಯೇ ಆಧಾರಿತವಾಗಿದೆ. ಮುಂಗಾರು ಮಾರುತ ಭಾರತ ಮಾತ್ರವಲ್ಲದೇ ಜಗತ್ತಿನ ಎಲ್ಲ ಕಡೆ ಬೀಸುತ್ತದೆ. ನಮ್ಮಲ್ಲಿ ಮುಂಗಾರು ಯಾವಾಗಲೂ ನೈಋತ್ಯ ದಿಕ್ಕಿನಿಂದ ಬೀಸುತ್ತದೆ. ಅಲ್ಲದೆ ಉತ್ತರ ಅಮೆರಿಕ ಮುಂಗಾರು, ಪಶ್ಚಿಮ ಆಫ್ರಿಕಾ ಮುಂಗಾರು, ಏಷಿಯಾ ಆಸ್ಟ್ರೇಲಿಯಾ ಮುಂಗಾರು ಮುಖ್ಯಮಾರುತಗಳು.
— ಇದರ ವ್ಯವಸ್ಥಿತ ಅಧ್ಯಯನ ಸುಮಾರು ಮುನ್ನೂರು ವರ್ಷಗಳ ಹಿಂದೆ ಆರಂಭವಾಯಿತು.
— ಮಾನ್ಸೂನನ್ನು ಪ್ರಥಮವಾಗಿ ಗುರುತಿಸಿದವರು ಅರಬ್ಬೀ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾವಿಕರು.


●. ಮಾನ್ಸೂನ್‌ ಅಂದರೇನು?
•┈┈┈┈┈┈┈┈┈┈┈┈┈┈•
— ಮಾನ್ಸೂನ್‌ ಪದದ ಮೂಲ ಅರಬ್ಬಿಯ ಮಾಸಿಮ… ಅಥವಾ ಮೋಸಮ…, ಅಂದರೆ ಋತು ಎಂದರ್ಥ.
— ಮುಂಗಾರು ಅಂದರೆ ದೊಡ್ಡ ಪ್ರಮಾಣದಲ್ಲಿ ಬೀಸುವ ಗಾಳಿ.
— ಹಗಲಿನಲ್ಲಿ ಬಿಸಿಯಾದ ಭೂಮಿಯ ಮೇಲಿನ ಗಾಳಿ ಹಗುರಾಗಿ ಮೆಲೇರಿದಾಗ ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಹೀಗೆ ಕಡಿಮೆ ಒತ್ತಡದ ಪ್ರದೇಶಕ್ಕೆ ಹೆಚ್ಚು ಒತ್ತಡದಿಂದ ಕೂಡಿದ ಸಮುದ್ರದ ಮೇಲಿನ ತಣ್ಣಗಿನ ಗಾಳಿ ನುಗ್ಗುತ್ತದೆ. ಹೀಗಾದಾಗ ಮಳೆ ಸುರಿಯಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇರುತ್ತದೆ.


●.ಭಾರತದಲ್ಲಿ ಮಾನ್ಸೂನ್ ಮಾರುತವನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ.
1).ನೈಋತ್ಯ ಮಾನ್ಸೂನ್‌ ಮತ್ತು
2).ಈಶಾನ್ಯ ಮುಂಗಾರು


●.ನೈಋತ್ಯ ಮುಂಗಾರು:
•┈┈┈┈┈┈┈┈┈┈┈┈•
— ನೈಋತ್ಯ ಮುಂಗಾರು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ ಸುರಿಸುತ್ತದೆ.

— ಇದರಲ್ಲಿ ಮತ್ತೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಬೀಸುವ ಮಾರುತ ಎನ್ನುವ ಎರಡು ವಿಧಗಳನ್ನು ಗುರುತಿಸಬಹುದು. — ಅರಬ್ಬೀ ಸಮುದ್ರವಾಗಿ ಬೀಸುವ ಮಾರುತ ಸಾಮಾನ್ಯವಾಗಿ ಜೂನ್‌ 1ರಂದು ಕೇರಳ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಮುಂದೆ ಅದು ಪಶ್ಚಿಮ ಘಟ್ಟದ ಮೇಲೆ ಸಾಗುತ್ತಾ ಮಲೆನಾಡು, ಕನರ್ನಾಟಕ, ಗೋವಾ, ಮಹಾರಾಷ್ಟ್ರದ ಕೊಂಕಣ ಕರಾವಳಿಯ ಮೇಲೆ ಮಳೆಸುರಿಸುತ್ತದೆ. ಘಟ್ಟದ ತಪ್ಪಲಿನಲ್ಲಿ ಕಡಿಮೆ ಮಳೆ ಸುರಿಸುತ್ತದೆ.
— ಬಂಗಾಳ ಕೊಲ್ಲಿಯಭಾಗದಲ್ಲಿಯೂ ಸರಿಸುಮಾರು ಅದೇ ಸಮಯದಲ್ಲಿಯೇ ಮಳೆ ಆರಂಭವಾಗುತ್ತದೆ. ಮೊದಲು ಅಂಡಮಾನ್‌ನಲ್ಲಿ ಮಳೆ ಸುರಿಸುತ್ತದೆ. ಬಳಿಕ ಅದು ಪೂರ್ವಭಾಗದತ್ತ ಸಾಗುತ್ತದೆ.
— ಈ ಮಾರುತ ಹಿಮಾಲಯದ ವರೆಗೂ ಮಳೆಯನ್ನು ಸುರಿಸುತ್ತದೆ. ಮೇಘಾಲಯದ ಚಿರಾಪುಂಜಿ ಮತ್ತು ಮಾಸಿನ್ರಾಮ್‌ನಲ್ಲಿ ಜಗತ್ತಿನಲ್ಲಿಯೇ ಅತಿಹೆಚ್ಚು ಮಳೆ ಸುರಿಸುತ್ತದೆ.


●.ಈಶಾನ್ಯ ಮಾರುತ (ಹಿಂಗಾರು ಮಳೆ):
•┈┈┈┈┈┈┈┈┈┈┈┈┈┈┈┈┈┈┈┈┈•
— ಇದು ಸೆಪ್ಟೆಂಬರ್‌ ನಿಂದ ಆರಂಭವಾಗುತ್ತದೆ.
— ಇದನ್ನು ಚಳಿಗಾಲದ ಮಳೆ ಎನ್ನುತ್ತಾರೆ.
— ಇದು ನೈರುತ್ಯ ಮುಂಗಾರಿನ ವಿರುದ್ಧ ದಿಕ್ಕಿನಲ್ಲಿ ಉಂಟಾಗುವಂಥದ್ದು.
— ಮುಂಗಾರು ಮಾರುತ ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಮಾಡಿದರೆ, ಹಿಂಗಾರು ಮಾರುತ ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣ ಮಾಡುತ್ತದೆ. ಬಂಗಾಳ ಕೊಲ್ಲಿಯ ಮೇಲೆ ಬೀಸುವ ಹಿಂಗಾರು ಮಾರುತ ತೇವಾಂಶವನ್ನು ಹೀರಿ ಮಳೆ ಸುರಿಸುತ್ತದೆ. ಹೀಗಾಗಿ ತಮಿಳುನಾಡಿನಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ.
— ಒಡಿಶಾ, ಆಂಧ್ರ, ಕನರ್ನಾಟಕದ ಪೂರ್ವಭಾಗ ಹಿಂಗಾರು ಮಳೆ ಸುರಿಯುತ್ತದೆ. ಮುಂಗಾರಿಗೆ ಹೋಲಿಸಿದರೆ ಹಿಂಗಾರಿನ ಮಳೆಯ ಆರ್ಭಟ ಕಡಿಮೆ.


●. ಮುಂಗಾರು ಹೇಗೆ ಸೃಷ್ಟಿಯಾಗುತ್ತದೆ?
•┈┈┈┈┈┈┈┈┈┈┈┈┈┈┈┈┈┈┈┈•
— ದೈನಂದಿಕ ಸಾಗರ ಮಾರುತ ಬರೀ ಗಾಳಿ ಬೀಸಿದರೆ, ನೈಋತ್ಯ ಮಾರುತ ಅಂದರೆ ಮಾನ್ಸೂನ್‌ ಆವಿಯಾದ ಸಮುದ್ರದ ನೀರನ್ನು ಹೊತ್ತುತಂದು ಮಳೆ ಸುರಿಸುತ್ತದೆ. ಇದೇ ಮುಂಗಾರು ಮಳೆ. ಇದನ್ನು ಬೇಸಿಗೆ ಮುಂಗಾರು ಅಂತಲೂ ಕರೆಯುತ್ತಾರೆ.
— ಜೂನ್‌ನಿಂದ ಆರಂಭವಾದ ಮುಂಗಾರು ಒಂದು, ಒಂದುವರೆ ತಿಂಗಳಿನಲ್ಲಿ ಸಂಪೂರ್ಣ ದೇಶವನ್ನು ಆವರಿಸಿಕೊಳ್ಳುತ್ತದೆ.


●. ಇತರ ಮಾರುತಗಳ ಪ್ರಭಾವ:
•┈┈┈┈┈┈┈┈┈┈┈┈┈┈┈┈┈•
— ಭಾರತದ ಮುಂಗಾರು ಕ್ಲಿಷ್ಟ ಹವಾಮಾನ ವ್ಯವಸ್ಥೆ. ಭೂಮಿಯ ಮೇಲಿನ ಇತರ ಪ್ರದೇಶದ ಹವಾಮಾನವೂ ನಮ್ಮ ಮುಂಗಾರಿನ ಮೇಲೆ ಪ್ರಭಾವ ಬೀರುತ್ತದೆ.
— ಪೆಸಿಫಿಕ್‌ ಸಮುದ್ರದಲ್ಲಿ ಎಲ್ ನಿನೊ ಮಾರುತ ಉಂಟಾದ ಸಂದರ್ಭದಲ್ಲಿ ನಮ್ಮ ಮುಂಗಾರು ಕ್ಷೀಣವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಲಾ ನಿನೋ ಮಾರುತ ಹೆಚ್ಚು ಮಳೆ ಸುರಿಸುತ್ತದೆ.
— ಭಾರತದಲ್ಲಿ ಮುಂಗಾರು ಮಹತ್ವ ಪಡೆಯಲು ಅದರ ವಿಶಿಷ್ಟ ಭೌಗೋಳಿಕ ರಚನೆಯೇ ಕಾರಣ. ಒಂದುಕಡೆ ವಿಶಾಲವಾದ ನೆಲ. ಇನ್ನೊಂದೆಡೆ ಹೆಚ್ಚು ಬಿಸಿಯಾಗುವ ಥಾರ್‌ ಮರುಭೂಮಿ. ಉತ್ತರದಿಕ್ಕಿಗೆ ಗೋಡೆಯಂತಿರುವ ಹಿಮಾಲಯ, ಉಳಿದ ಕಡೆ ಸುತ್ತಲೂ ಸಮುದ್ರ, ದಖನ್‌ ಪ್ರಸ್ಥಭೂಮಿಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟ ಮಳೆ ಸುರಿಸುವಲ್ಲಿ ಕೊಡುಗೆ ನೀಡುತ್ತಿದೆ.

Friday, 19 June 2015

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅱ)  Multiple Choice Questions and Answers for IAS / KAS examinations. (Part -Ⅱ)

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅱ)
Multiple Choice Questions and Answers for IAS / KAS examinations. (Part -Ⅱ)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನಕ್ಕಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Multiple Choice Questions for General studies)


— ಆತ್ಮೀಯ ಪರೀಕ್ಷಾರ್ಥಿಗಳೆ, ವಿಶೇಷವಾಗಿ ಐಎಎಸ್ / ಕೆಎಎಸ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿಮ್ಮ ಸ್ಪರ್ಧಾಲೋಕ ಬ್ಲಾಗ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡಲು ಒಂದು ಚಿಕ್ಕ ಪ್ರಯತ್ನ ಕೈಗೊಳ್ಳುತ್ತಿದ್ದೇನೆ. ಮರೀಚಿಕೆಯಾದ ಕನ್ನಡ ಮಾಧ್ಯಮ ಕರ್ನಾಟಕದ ಪರೀಕ್ಷೆಗಳಲ್ಲಷ್ಟೇ ಅಲ್ಲ, ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲೂ ತನ್ನ ಕೀರ್ತಿ ಪತಾಕೆ ಹರಾಡಿಸಬೇಕೆಂಬ ಧ್ಯೇಯ ಹೊಂದಿರುವ ಪರೀಕ್ಷಾರ್ಥಿಗಳಿಗಾಗಿ ಸಹಕಾರಿಯಾಗಲು ಈ ನನ್ನದೊಂದು ಚಿಕ್ಕ ಪ್ರಯತ್ನ.
— ದಯವಿಟ್ಟು ತಪ್ಪಿದ್ದಲ್ಲಿ ಕ್ಷಮೆ ಇರಲಿ.
— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.


●..... ಮುಂದುವರೆದ ಭಾಗ.

16).ಅಭಿವೃದ್ದಿಯನ್ನು ಮಾಪನ ಮಾಡಲು ಬಳಸುವ ‘ಮಾನವ ಅಭಿವೃದ್ದಿ ಸೂಚ್ಯಂಕ’ದ ಕುರಿತು ಕೆಳಕಂಡ ಸೂಚಿಗಳನ್ನು ಗಮನಿಸಿ.
(i).ಜನರ ಆರೋಗ್ಯವನ್ನು ಸೂಚಿಸುವ ಜೀವನಾಯುಷ್ಯ.
(ii).ಜನರ ಜ್ಞಾನದ ಮಟ್ಟವನ್ನು ಸೂಚಿಸುವ ವಯಸ್ಕರ ಸಾಕ್ಷರತೆ
ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ.
(iii).ಸಂಪನ್ಮೂಲಗಳ ಮೇಲಿನ ಅಧಿಕಾರವನ್ನು ಸೂಚಿಸುವ ತಲಾವರಮಾನ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.
ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

17) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ
(i).ಭಾರತದ ರಕ್ಷಿತ ಕಾಡುಪ್ರದೇಶಗಳಲ್ಲಿ, 75 ಭಾರತೀಯ ರಾಷ್ಟ್ರೀಯ ಉದ್ಯಾನವನಗಳು ಮತ್ತು 421 ಅಭಯಾರಣ್ಯಗಳಿವೆ.
(ii).ಇವುಗಳಲ್ಲಿ 19 ಪ್ರಾಜೆಕ್ಟ್‌ ಟೈಗರ್‌ ಯೋಜನೆಯ ವ್ಯಾಪ್ತಿಯಲ್ಲಿವೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ)ಮೇಲಿನೆಲ್ಲವೂ.
(ಡಿ) ಯಾವುದು ಅಲ್ಲ.
ಉತ್ತರ: (ಡಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

18).ಅಟಾರ್ನಿ ಜನರಲ್ ನ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಸಂಸತ್ ಸದಸ್ಯನಲ್ಲದಿದ್ದರೂ ಅಧಿವೇಶನದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ.
(ii)ಇವರು ಭಾರತದ ಕಾನೂನಿನ ಪ್ರಥಮ ನ್ಯಾಯಾದೀಶ.
(iii).ಇವರು ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಾಗಿರುತ್ತಾರೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.
ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

19).ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ
(i).ತೇವ ಭರಿತ ಉಷ್ಣವಲಯ ಸ್ಥಿತಿಗಳಲ್ಲಿ ಶಿಲೆಗಳ ಸವೆತದಿಮ್ದ ಉಂಟಾದ ಕೆಂಪು ಶೇಷ ನಿಕ್ಷೇಪವನ್ನು ಈ ಮಣ್ಣು ಹೋಂದಿರುತ್ತದೆ
(ii).ಇದು ಮುಖ್ಯವಾಗಿ ಕಬ್ಬಿಣ ಹಾಗೂ ಆಲ್ಯೂಮಿನಿಯಂ ಆಕ್ಲೈಡಗಳನ್ನು ಹೊಂದಿರುತ್ತದೆ ಮತ್ತು ಹೆಚ್ಚು ಉಬ್ಬಿಲ್ಲದ ಸಮತಲ ಮೇಲ್ಮೈಗಳಲ್ಲಿ ಕಂಡು ಬರುತ್ತದೆ ?

— ಇಲ್ಲಿ ಸೂಚಿಸಲಾಗಿರುವ ಮಣ್ಣು ಯಾವುದು?
ಎ) ಕೆಂಪು ಮಣ್ಣೂ
ಬಿ) ಜಂಬಿಟ್ಟಿಗೆ ಮಣ್ಣು
ಸಿ) ಉಷ್ಣ್ವವಲಯದ ಕಪ್ಪಭೂಮಿ
ಡಿ) ಫಲವತ್ತಾದ ಕಪ್ಪಮಣ್ಣು

ಉತ್ತರ: (ಬಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

20) ಭಾರತದ ಸಂವಿಧಾನದ ತಿದ್ದುಪಡಿಯ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು 42 ನೇ ತಿದ್ದುಪಡಿಯಿಂದ ಜಾರಿಗೆ ತರಲಾಯಿತು
(ii).12ನೇ ತಿದ್ದುಪಡಿಯ ಮೂಲಕ 1962ರಲ್ಲಿ ಗೋವಾ, ದೀವ್ ಮತ್ತು ದಮನ್ ಗಳನ್ನು ಭಾರತದ ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಲಾಯಿತು.
(iii).21ನೇ ತಿದ್ದುಪಡಿ ಸಂವಿಧಾನದ 8ನೇ ಅನುಸೂಚಿಯಲ್ಲಿ ಸಿಂಧಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಲಾದ ವರ್ಷ: 1967.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) ಮೇಲಿನೆಲ್ಲವೂ
(ಡಿ) ಯಾವುದು ಅಲ್ಲ.

ಉತ್ತರ: (ಸಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

21).ಇತ್ತೀಚೆಗೆ ಚಂಡ ಮಾರುತಗಳು ಅಪಾರ ಪ್ರಮಾಣದ ಆಸ್ತಿ- ಪಾಸ್ತಿ ಮತ್ತು ಜೀವಹಾನಿಗೆ ಕಾರಣವಾಗಿದ್ದು, ಅವುಗಳ ಕುರಿತ ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i)..ಅಟ್ಲಾಂಟಿಕ್ ಸಾಗರದಲ್ಲಿ ರೂಪುಗೊಳ್ಳುವ ಚಂಡ ಮಾರುತಕ್ಕೆ ಹರಿಕೇನ್ (hurricane), ಹಿಂದೂ ಮಹಾಸಾಗರದಲ್ಲಿನ ವಿದ್ಯಮಾನಕ್ಕೆ `ಸೈಕ್ಲೋನ್ (cyclone) ಮತ್ತು ಫಿಲಿಪ್ಪೀನ್ಸ್ ಮತ್ತು ಪ್ಯಾಸಿಫಿಕ್ ಸಾಗರದಲ್ಲಿನ ಬಿರುಗಾಳಿಗೆ `ಟೈಫೂನ್ (typhoon) ಎಂದು ಕರೆಯುತ್ತಾರೆ.
(ii).ಹರಿಕೇನ್, ಸೈಕ್ಲೋನ್ ಮತ್ತು ಟೈಫೂನ್‌ಗಳನ್ನು ವಿಭಿನ್ನ ಮಾನದಂಡಗಳಿಂದಲೇ ಅಳೆಯಲಾಗುತ್ತದೆ.
(iii).ಜಿನೀವಾದಲ್ಲಿನ ವಿಶ್ವ ಹವಾಮಾನ ಸಂಘಟನೆಯು ಚಂಡಮಾರುತಗಳಿಗೆ ಹೆಸರು ಇಡುವ ಕೆಲಸ ನಿರ್ವಹಿಸುತ್ತಿದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (i) ಮತ್ತು (ii) ಮಾತ್ರ.
 (ಸಿ) (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಡಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

22).ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆಯ ಉದ್ದೇಶಿತ ತಿದ್ದುಪಡಿ (2014) ಯಲ್ಲಿನ ಬಾಲಾರೋಪಿಗಳಿಗೆ ಸಂಬಂಧಪಟ್ಟ ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಘೋರ ಅಪರಾಧ ಎಸಗುವ 16 ರಿಂದ 18 ವರ್ಷದ ಒಳಗಿನ ಬಾಲಾರೋಪಿಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅನ್ವಯ ಇತರ ಪ್ರೌಢ ಆರೋಪಿಗಳಂತೆ ಸಾಮಾನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಗುರಿಪಡಿಸಬಹುದು.
(ii).ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆಯ ಉದ್ದೇಶಿತ ತಿದ್ದುಪಡಿ (2014) ಯ ಪ್ರಕಾರ ಮಾನಸಿಕ ತಜ್ಞರನ್ನು ಒಳಗೊಂಡ ಬಾಲಾಪರಾಧ ನ್ಯಾಯ ಮಂಡಳಿಯು ಅಪರಾಧಿಯ ವಯೋಮಿತಿಯನ್ನು ನಿರ್ಧರಿಸುವುದು.
(iii).ಆರೋಪ ಸಾಬೀತಾದಾರೂ ಗರಿಷ್ಠ ಮೂರು ವರ್ಷ ಮಾತ್ರ ಶಿಕ್ಷೆ . ಅವರನ್ನು ಜೀವಾವಧಿ, ಗಲ್ಲು ಶಿಕ್ಷೆಗೆ ಗುರಿಪಡಿಸುವಂತಿಲ್ಲ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (i) ಮತ್ತು (ii) ಮಾತ್ರ.
 (ಸಿ) (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಸಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

23).ನಾಲಂದಾ ವಿಶ್ವವಿದ್ಯಾಲಯದ ಕುರಿತು ಈ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(i).ಬೌದ್ಧಮತ ಜ್ಞಾನಕ್ಕಾಗಿ ಹುಯೆ‍ನ್‍ತ್ಸಾಂಗನು ಚೀನದಿಂದ ಇಲ್ಲಿಗೆ ಬಂದಿದ್ದನು.
(ii).ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಶೀಲಭದ್ರನು ಒಬ್ಬನೇ ಒಬ್ಬ ಪ್ರಧಾನಾಧ್ಯಾಪಕನಾಗಿದ್ದನು .
(iii).ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ತಂಗಲು ವಾಸಗೃಹ (Residential Hestel) ಗಳ ಅನುಕೂಲವನ್ನು ಒದಗಿಸಲಾಗಿತ್ತು.

— ಸಂಕೇತಗಳು.
ಎ) (i) ಮತ್ತು (ii) ಮಾತ್ರ.
 (ಬಿ) (ii) ಮಾತ್ರ.
 (ಸಿ) (i) ಮತ್ತು (iii) ಮಾತ್ರ.
(ಡಿ) ಯಾವುದು ಅಲ್ಲ.

ಉತ್ತರ: (ಡಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

 24).2003 ರಲ್ಲಿ ಪ್ರಾರಂಬಿಸಲಾದ ಹರ್ಯಾಲಿ ಯೋಜನೆಯ ಮುಖ್ಯ ಗುರಿ...
(i).ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಬ್ಯ ಒದಗಿಸುವಿಕೆ.
(ii).ಗ್ರಾಮಗಳಲ್ಲಿ ವಾಟರ್ ಶೆಡ್ ಯೋಜನೆಗಳ ಅಭಿವ್ರದ್ದಿಗಾಗಿ.
(iii).ಕೊಳಚೆ ಪ್ರದೇಶದಲ್ಲಿ ಮನೆ ನಿರ್ಮಾಣ.
(iV).ಗ್ರಾಮೀಣ ಪ್ರದೇಶದ ಹರಿಣಗಳ ಅಭಿವ್ರದ್ದಿ

— ಸಂಕೇತಗಳು:
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
 (ಡಿ) ಯಾವುದು ಅಲ್ಲ.

ಉತ್ತರ: (ಬಿ)


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

25). ಪರಿಸರ ಸೂಕ್ಷ್ಮವಲಯ (ಇಕೊ ಸೆನ್ಸಿಟಿವ್‌ ಜೋನ್‌ ಅಥವಾ ಬಫರ್‌ ಜೋನ್‌) ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ವನ್ಯಪ್ರಾಣಿಗಳ ಸುರಕ್ಷತೆಗಾಗಿ ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಧಾಮಗಳ ಸುತ್ತಲಿನ 10 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗಿದೆ.
(ii).ದೇಶದಲ್ಲೇ ಮೊಟ್ಟ ಮೊದಲು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿದ್ದು ಬಂಡೀಪುರ ಅರಣ್ಯ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) ಮೇಲಿನೆಲ್ಲವೂ
(ಡಿ) ಯಾವುದು ಅಲ್ಲ.

ಉತ್ತರ: (ಸಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

26). ಕನ್ನಡ ಭಾಷೆಯ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ.
(ii).ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆ ಇದಾಗಿದೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) ಮೇಲಿನೆಲ್ಲವೂ
(ಡಿ) ಯಾವುದು ಅಲ್ಲ.

ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

27). ಇತ್ತೀಚೆಗಷ್ಟೇ ಆದಾಯ ತೆರಿಗೆಯಲ್ಲಿನ ಮಿತಿಯಲ್ಲಾದ ಬದಲಾವಣೆ ಕುರಿತು ಕೆಳಕಂಡ ಹೇಳಿಕೆಯನ್ನು ಗಮನಿಸಿ.
(i).ಈಗಿರುವ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ 2 ಲಕ್ಷದಿಂದ 2.50 ಲಕ್ಷಕ್ಕೆ ಏರಿಸಲಾಗಿದೆ.
(ii).ಹಿರಿಯ ನಾಗರಿಕರಿಗೆ ರೂ 2.50ಲಕ್ಷದಿಂದ ದಿಂದ 3 ಲಕ್ಷದವರೆಗೆ ವಿನಾಯಿತಿ ಕಲ್ಪಿಸಲಾಗಿದೆ.
(iii).ತೆರಿಗೆ ವಿನಾಯಿತಿಯಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ರಿಯಾಯ್ತಿ ಘೋಷಿಸಿದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (ii) ಮಾತ್ರ.
 (ಸಿ) (iii) ಮಾತ್ರ.
 (ಡಿ) ಯಾವುದು ಅಲ್ಲ.

ಉತ್ತರ: (ಸಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

28).ವಾತಾವರಣದ ವಿಷಯಕ್ಕೆ ಬಂದಾಗ ನಗರಗಳನ್ನು ಉಷ್ಣದ್ವೀಪಗಳು ಎಂದು ಕರೆಯುವರು. ನಗರಗಳಲ್ಲಿನ ತಾಪಮಾನ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಓದಿ.
(i).ವಾಹನಗಳ ಸಂಚಾರದ ಪರಿಣಾಮ ಉಂಟಾಗುವ ಮಾಲಿನ್ಯ-ಹಸಿರುಮನೆ ಪರಿಣಾಮ
(ii).ಪಾದಚಾರಿ ರಸ್ತೆಗಳಿಗೆ ಹಾಕಿರುವ ಪೇವ್‌ಮೆಂಟ್ ಹಾಗೂ ಡಾಂಬರು ರಸ್ತೆಗಳು ಶಾಖವನ್ನು ಕ್ಷಿಪ್ರವಾಗಿ ಹೊರಸೂಸಿ, ಗಾಳಿಗೆ ಬಿಡುತ್ತವೆ.
(iii).ತಣ್ಣಗಾಗಿಸಲು ಬಳಸುವ ಹವಾನಿಯಂತ್ರಕ ಯಂತ್ರಗಳೂ ಕೂಡ ನಗರದ ಉಷ್ಣತೆಗೆ ಮತ್ತಷ್ಟು ಪೂರಕವಾಗಿವೆ.
(iV).ನಗರಗಳಲ್ಲಿ ನೆರಳಿನ ವಾತಾವರಣ ನಿರ್ಮಿಸುವ ಮೂಲಕ ನಗರಗಳ ವಾತಾವರಣದಲ್ಲಿ ಭಾರೀ ಬದಲಾವಣೆ ತರಬಹುದು.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
(ಎ) (i) ಮತ್ತು (ii) ಮಾತ್ರ.
 (ಬಿ) (i), (ii) ಮತ್ತು (iii) ಮಾತ್ರ.
(ಸಿ) (ii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ).


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

29).ಕಲ್ಲಿದ್ದಲ್ಲನ್ನು ಅತ್ಯಂತ ಕೆಟ್ಟ ಪರಿಸರ ಹಾನಿಕಾರಿಕ ಎಂದು ಹೇಳಲಾಗುತ್ತದೆ. ಅದು ಸುಟ್ಟ ಬಳಿಕ ಕೆಳಕಂಡವುಗಳಲ್ಲಿ ಯಾವುವು ಉತ್ಸರ್ಜನೆಯಾಗುತ್ತವೆ ಎಂಬುದನ್ನು ಸಂಕೇತಗಳನ್ನು ಆಧರಿಸಿ ಹೇಳಿ.
(i). ಕಾರ್ಬನ್ ಡೈ ಆಕ್ಸೈಡ್
(ii). ಸಲ್ಫರ್ ಡೈ ಆಕ್ಸೈಡ್
(iii). ನೈಟ್ರೋಜನ್ ಡೈ ಆಕ್ಸೈಡ್
(iV). ಮಿಥೇನ್ ಡೈ ಆಕ್ಸೈಡ್

— ಸಂಕೇತಗಳು:
(ಎ) (i) ಮತ್ತು (iv) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: ಬಿ.


✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

30).ಈಗಾಗಲೇ ಸಾವಿರಾರು ಮಂದಿಯ ಪ್ರಾಣ ತೆಗೆದುಕೊಂಡು ಜಗತ್ತನ್ನು ತಲ್ಲಣಗೊಳಿಸಿದ ಎಬೋಲ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಓದಿ.
(i).ಎಬೋಲ ವೈರಸ್ ನಿಂದ ಉಂಟಾಗುವಂಥದ್ದು. ಮೊದಲ ಬಾರಿಗೆ ಸುಡಾನ್ ಹಾಗು ಕಾಂಗೋ ನಾಡುಗಳಲ್ಲಿ ಗುರುತಿಸಲಾಯಿತು.
(ii).ಈ ವೈರಸ್ ಹೆಚ್ಚಾಗಿ ಉಷ್ಣವಲಯದ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.
(iii).ಎಬೋಲಾ ಮೊಟ್ಟಮೊದಲಿಗೆ ಬಾವಲಿಗಳಲ್ಲಿ ಕಂಡುಬಂದಿದ್ದಾಗಿ ತಿಳಿದುಬಂದಿದೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
(ಎ) (i) ಮಾತ್ರ.
(ಬಿ) (i) ಮತ್ತು (ii) ಮಾತ್ರ.
(ಸಿ) (i) ಮತ್ತು (iii) ಮಾತ್ರ.
 (ಡಿ) ಮೇಲಿನೆಲ್ಲವೂ.

ಉತ್ತರ : (ಡಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

....ಮುಂದುವರೆಯುವುದು. 

Sunday, 14 June 2015

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅰ)  Multiple Choice Questions and Answers for IAS / KAS examinations. (Part -Ⅰ)

☀ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.(ಭಾಗ-Ⅰ)
Multiple Choice Questions and Answers for IAS / KAS examinations. (Part -Ⅰ)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನಕ್ಕಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Multiple Choice for General studies)

★ ಕನ್ನಡದಲ್ಲಿ CSAT .
(CSAT in Kannada)


— ಆತ್ಮೀಯ ಪರೀಕ್ಷಾರ್ಥಿಗಳೆ, ವಿಶೇಷವಾಗಿ ಐಎಎಸ್ / ಕೆಎಎಸ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿಮ್ಮ ಸ್ಪರ್ಧಾಲೋಕ ಬ್ಲಾಗ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡಲು ಒಂದು ಚಿಕ್ಕ ಪ್ರಯತ್ನ ಕೈಗೊಳ್ಳುತ್ತಿದ್ದೇನೆ. ಮರೀಚಿಕೆಯಾದ ಕನ್ನಡ ಮಾಧ್ಯಮ ಕರ್ನಾಟಕದ ಪರೀಕ್ಷೆಗಳಲ್ಲಷ್ಟೇ ಅಲ್ಲ, ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲೂ ತನ್ನ ಕೀರ್ತಿ ಪತಾಕೆ ಹರಾಡಿಸಬೇಕೆಂಬ ಧ್ಯೇಯ ಹೊಂದಿರುವ ಪರೀಕ್ಷಾರ್ಥಿಗಳಿಗಾಗಿ ಸಹಕಾರಿಯಾಗಲು ಈ ನನ್ನದೊಂದು ಚಿಕ್ಕ ಪ್ರಯತ್ನ.

— ದಯವಿಟ್ಟು ತಪ್ಪಿದ್ದಲ್ಲಿ ಕ್ಷಮೆ ಇರಲಿ.

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.



●.1) ಇತ್ತೀಚೆಗೆ ಈ ಶತಮಾನದ (2100) ಅಂತ್ಯದ ವೇಳೆಗೆ ಹಿಮಾಲಯ ಶ್ರೇಣಿಯ ಎವರೆಸ್ಟ್ ಶಿಖರದ ಸುತ್ತಲಿನ ಹಿಮನದಿಗಳು ಶೇ 70ರಷ್ಟು ಕರಗುತ್ತದೆ ಇಲ್ಲವೆ ಸಂಪೂರ್ಣವಾಗಿ ಮಾಯವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕಾರಣ?
I) ಮಾಲಿನ್ಯ ಹೊರ ಸೂಸುವ ಪ್ರಮಾಣ ಹೆಚ್ಚುತ್ತಾ ಹೋದಂತೆ ತಾಪಮಾನ ಹೆಚ್ಚಳದಿಂದ ಈಗಿರುವ ಹಿಮನದಿ ಪ್ರದೇಶದ ವಿಸ್ತಾರಕ್ಕೆ ಅಡ್ಡಿ ಉಂಟಾಗುತ್ತದೆ
ll) ಎವರೆಸ್ಟ್ ಶಿಖರದ ಹಿಮನದಿ ಪ್ರದೇಶವು ಅತೀ ಸೂಕ್ಷ್ಮವಾಗಿದ್ದು, ಭೂಮಿಯ ತಾಪಮಾನ ಏರಿದಂತೆ ನಿಧಾನವಾಗಿ ಕರಗುತ್ತಾ ಹೋಗುತ್ತಿದೆ
lll) ಮಾಲಿನ್ಯ ಹೊರಸೂಸುವ ಪ್ರಮಾಣವು ಈ ಪ್ರದೇಶದ ತಾಪಮಾನ, ಮಳೆ ಮತ್ತು ಹಿಮಪಾತದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಹಿಮನದಿಗಳು ಕರಗುವ ಪ್ರಮಾಣ ಅವಲಂಬಿಸಿದೆ.
lV) ತಾಪಮಾನ ಹೆಚ್ಚಾದಂತೆ ಹಿಮ ಕರಗುವುದು ಜಾಸ್ತಿ ಅಗುತ್ತದೆ ಮತ್ತು ಮಳೆಯೂ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯು ಶಿಖರದ ಹಿಮನದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ.

— ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
ಎ. I ಮಾತ್ರ.
ಬಿ. II ಮಾತ್ರ.
ಸಿ. III ಮತ್ತು IV.
ಡಿ. ಮೇಲಿನೆಲ್ಲವೂ.

ಉತ್ತರ: ಡಿ.



●.2) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
i). ಗೌತಮ್ ಬುದ್ಧನನ್ನು ಶಕ್ಯಮುನಿ ಎಂದು ಕರೆಯಲಾಗುತ್ತದೆ.
ii).ಗೌತಮ್ ಬುದ್ಧನು ಕುಂದಗ್ರಾಮದಲ್ಲಿ ಜನಿಸಿದನು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ?.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: ಎ)



●.3) ಕುದಿಯುವ ಹಾಲು ಉಕ್ಕುವುದು ಆದರೆ ಕುದಿಯುವ ನೀರು ಉಕ್ಕುವುದಿಲ್ಲ ಏಕೆ?.
i) ಹಾಲು ನೀರಿಗಿಂತ ಸ್ವಲ್ಪ ಭಾರವಾಗಿರುವುದರಿಂದ .
ii) ಹಾಲು ನೀರಿಗಿಂತ ಹೆಚ್ಚು ಸ್ನಿಗ್ಧತೆ ಹೊಂದಿರುವುದರಿಂದ .
iii) ಗುಳ್ಳೆಗಳ ಕೆಳಗೆ ಹೆಚ್ಚಳಗೊಂಡ ಒತ್ತಡದ ಕಾರಣ.

— ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)



●.4).ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ .
i) ನಿಡಿದಾದ ಕಲ್ಲುಗಳು (Menhir) (ದೊಡ್ಡ ನಿಂತಿರುವ ಕಲ್ಲುಗಳು) ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಂಡುಬರುತ್ತವೆ.
ii) ಸಾಂಸ್ಕೃತಿಕ ಸಚಿವಾಲಯವು ವೆಂಗಚ್ಛಿಯಾ ದ ಬಳಿ ನಿಂತಿರುವ ನಿಡಿದಾದ ಕಲ್ಲುಗಳು ಮತ್ತು ಅದರ ಸುತ್ತಮುತ್ತಲಿನ ಗುಹೆಗಳು ಹಾಗು ಅರಣ್ಯವನ್ನು ಸಂರಕ್ಷಿತ ಪ್ರದೇಶಗಳು ಎಂದು ಘೋಷಿಸಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii).
(ಡಿ) ಯಾವುದೂ ಅಲ್ಲ.

ಉತ್ತರ: (ಸಿ)



●.5) ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಈ ಕೆಳಗಿನ ಯಾವ ಭಾಗಗಳಲ್ಲಿ ಕಂದಾಯ ನಿರಾಕರಣೆ ಚಳವಳಿ ನಡೆಸಲಾಗಿತ್ತು.
i) ಹಿರೇಕೆರೂರು
ii) ಅಂಕೋಲ
iii) ಸಿರಸಿ
iv) ವಿಧುರಾಶ್ವಥ್ಥ.

—ಮೇಲಿನ ಸ್ಥಳಗಳಲ್ಲಿ ಸರಿಯಾದುದು?
(ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: ಬಿ.


●.6).ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
i). ಮಹಾವೀರನನ್ನು "ಕಳಿಂಗ ಜಿನ" ಎಂದು ಕರೆಯಲಾಗುತ್ತದೆ.
ii). ಭದ್ರಬಾಹು ದಕ್ಷಿಣ ಭಾರತದಲ್ಲಿ ಜೈನ್ ಧರ್ಮ ಪ್ರಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ.
iii). ಅಶೋಕನ ಮೊಮ್ಮಗ ಸಂಪ್ರತಿಯು ಸುಹಸ್ಥಿ ಎಂಬ ಜೈನ ಸನ್ಯಾಸಿಯಿಂದ ಜೈನ ಧರ್ಮಕ್ಕೆ ಪರಿವರ್ತನೆಗೊಂಡನು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
(ಎ) (i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ : (ಬಿ)


●.7).ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
i). ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಗತ್ಯ ನಾಗರಿಕ ಸೇವೆಗಳನ್ನು ಒದಗಿಸುವವರ ಮುಷ್ಕರ ನಿಷೇಧಿಸಲು ಸರ್ಕಾರಕ್ಕೆ ಪ್ರಬಲ ಅಸ್ತ್ರವಾಗಿದೆ.
ii). (ಎಸ್ಮಾ) ಪ್ರಕಾರ ಜಲ ಹಾಗೂ ವಿದ್ಯುತ್‌ ತಯಾರಿಕೆ ಅಥವಾ ಉತ್ಪಾದನೆ, ಶೇಖರಣೆ, ಸಾಗಣೆ, ಸರಬರಾಜು, ವಿತರಣೆಗೆ ಸಂಬಂಧಿಸಿದ ಅಥವಾ ಸಾರಿಗೆ ಸೇವೆಗಳ ಮುಷ್ಕರ ನಿಷೇಧಕ್ಕೊಳಪಡುವಂತಹವು.
iii).ಈ ಕಾಯ್ದೆಯ ಪ್ರಕಾರ ಅಗತ್ಯ ಸೇವೆ ಒದಗಿಸುವವರು ಮುಷ್ಕರ ನಡೆಸಿದರೆ ಮಾತ್ರ ಜೈಲು ಶಿಕ್ಷೆಗೆ ಹಾಗು ದಂಡಕ್ಕೊಳಪಡುವರು. ಇದರಲ್ಲಿ ಮುಷ್ಕರಕ್ಕೆ ಪ್ರಚೋದನೆ ನೀಡಿದವರು ಹಾಗೂ ಕಾನೂನು ಬಾಹಿರ ಮುಷ್ಕರಕ್ಕೆ ಹಣಕಾಸಿನ ನೆರವು ನೀಡಿದವರಿಗೆ ಯಾವುದೇ ದಂಡ ವಿಧಿಸುವ ಕಾನೂನು ಇದರಲ್ಲಿ ಇಲ್ಲ.
iv). ಈ ಮೊದಲು 1994ರಲ್ಲಿ ಜಾರಿಗೆ ಬಂದಿದ್ದ ಈ ಕಾನೂನಿನ ಅವಧಿ 2004ರಲ್ಲಿ ಕೊನೆಗೊಂಡಿತ್ತು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ)(i), (ii) ಮತ್ತು (iii) ಮಾತ್ರ.
(ಬಿ) (i), (ii) ಮತ್ತು (iv) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ : (ಬಿ)


●.8).ಈ ಕೆಳಗಿನವುಗಳಲ್ಲಿ ಯಾರು ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವ ಸಮಿತಿಯ ಸದಸ್ಯರುಗಳಾಗಿರುವರು ?.
i). ಪ್ರಧಾನಿ.
ii). ಕೇಂದ್ರ ಜಾಗೃತ ಆಯುಕ್ತ.
iii). ಗೃಹ ಸಚಿವ.
 iv). ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅಥವಾ ಅವರು ನಾಮನಿರ್ದೇಶನ ಮಾಡುವ ನ್ಯಾಯಮೂರ್ತಿ.
 v). ವಿರೋಧ ಪಕ್ಷದ ನಾಯಕ.
 vi). ಗೃಹ ಕಾರ್ಯದರ್ಶಿ.

— ಮೇಲಿನವುಗಳಲ್ಲಿ ಯಾವುದು ಸರಿಯಾಗಿವೆ ಇದೆ ?.
(ಎ)(i), (iii) ಮತ್ತು (iv) ಮಾತ್ರ.
(ಬಿ) (i), (ii), (iii) ಮತ್ತು (vi) ಮಾತ್ರ.
(ಸಿ) (i), (iv) ಮತ್ತು (v) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಸಿ).
(ವಿವರಣೆ: ಸಿಬಿಐ ನಿರ್ದೇಶಕರ ಆಯ್ಕೆಯನ್ನು ಪ್ರಧಾನಿ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅಥವಾ ಅವರು ನಾಮನಿರ್ದೇಶನ ಮಾಡುವ ನ್ಯಾಯಮೂರ್ತಿಯೊಬ್ಬರು ಸದಸ್ಯರಾಗಿರುವ ಆಯ್ಕೆ ಸಮಿತಿಯು ಸೂಚಿಸಿದ ಹೆಸರಿನ ಅಧಾರದ ಮೇಲೆ ಕೇಂದ್ರ ಸರ್ಕಾರ ನಡೆಸಲಿದೆ.)



●.9).ಕೇಂದ್ರದ ಏಕರೂಪದ ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ಎಷ್ಟು ಸೇವೆಗಳು ಒಳಪಟ್ಟಿವೆ?
ಎ. 103
ಬಿ. 109
ಸಿ. 119
ಡಿ. 129

ಉತ್ತರ: ಸಿ.


●.10) ಭಾರತೀಯ ಅರಣ್ಯ ಮಸೂದೆ (ತಿದ್ದುಪಡಿ) 2012 ಬಗ್ಗೆ ಸರಿಯಾಗಿರುವುದು ?
(i) ಇದರ ಮುಖ್ಯ ಗುರಿ ಸಣ್ಣ ಅಪರಾಧಗಳಿಗೆ ಅರಣ್ಯ ನಿವಾಸಿಗಳಿಗೆ ಮತ್ತು ಆದಿವಾಸಿಗಳಿಗೆ ಕಿರುಕುಳ ಮತ್ತು ಕಾನೂನಿನ ಮುಂದೆ ನಿಲ್ಲಿಸುವುದನ್ನು ತಪ್ಪಿಸುವುದಾಗಿದೆ.
(II) ಈ ಅರಣ್ಯ ಕಾಯಿದೆಯಡಿ ಅರಣ್ಯ ಸಂಬಂಧಿ ಸಣ್ಣಪುಟ್ಟ ಅಪರಾಧಕ್ಕೆ ಕಡ್ಡಾಯವಾಗಿ ರೂ 50ರಿಂದ ರೂ 10,000 ವರೆಗೆ ದಂಡ ವಿಧಿಸುವುದಾಗಿದೆ.
(III) ಭಾರತೀಯ ಅರಣ್ಯ ಮಸೂದೆ (ತಿದ್ಡುಪಡಿ) ಪ್ರಕಾರ, ಅರಣ್ಯ ಸಂಬಂಧಿ ಅಪರಾಧ ಇತ್ಯರ್ಥಕ್ಕೆ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಸಭೆಗಳ ಲಿಖಿತ ರೂಪದ ಅನಿಸಿಕೆಗಳನ್ನು ಪಡೆಯುವುದು ಕೂಡ ಕಡ್ಡಾಯವಾಗಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ಇದೆ ?.
 (ಎ)(i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) (i), (ii) ಮತ್ತು (iii) ಮಾತ್ರ.

ಉತ್ತರ: ಡಿ.



●.11). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
(i). ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸದ ಒಣ ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ.
(ii). ಸರಕಾರವು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳ ನಿರ್ಮಾಣದಲ್ಲಿ ಶೇ100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ಇದೆ ?.
(ಎ)(i) ಮಾತ್ರ.
(ಬಿ) (ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) (i), (ii) ಮತ್ತು (iii) ಮಾತ್ರ.

ಉತ್ತರ: ಎ)



●.12) ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i). ಬಾರ್ಲಿಯು ರಬ್ಬಿ ಬೆಳೆಯಾಗಿದೆ.
(ii). ಜೋಳ ಹಿಂಗಾರು ಮತ್ತು ಮುಂಗಾರು ಬೆಳೆಯಾಗಿದೆ.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii).
(ಡಿ) ಯಾವುದೂ ಅಲ್ಲ.

ಉತ್ತರ: ಸಿ)


●.13) ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i).ನೆಲೊಂಗ್ ಕಣಿವೆಯು ಶೀತಲ ಮರುಭೂಮಿಯಾಗಿದೆ.
(ii).ನೆಲೊಂಗ್ ಕಣಿವೆಯು ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ.
(iii). ವಿದೇಶಿಯರಿಗೆ ಈ ಕಣಿವೆಯಲ್ಲಿ ಪ್ರವೇಶ ನಿಷಿದ್ಧ.
(iv). ಇದು ಹಿಮಾಚಲ ಪ್ರದೇಶದಲ್ಲಿದೆ.

— ಕೆಳಗಿನ ಯಾವ ಹೇಳಿಕೆಯು ನಿಜವಾಗಿದೆ?
(ಎ)(i), (ii) ಮತ್ತು (iii) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (ii), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಎ)



●.14) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i).ಓಡಿಯಾ ಭಾಷೆಯು ಇಂಡೋ-ಆರ್ಯನ್ ಗುಂಪಿನಿಂದ ಶಾಸ್ತ್ರೀಯ ಸ್ಥಾನಮಾನ ಪಡೆದ ಪ್ರಥಮ ಭಾಷೆಯಾಗಿದೆ.
(ii).ಸಂಸ್ಕೃತ ಭಾಷೆಯು ಪ್ರಥಮವಾಗಿ ಶಾಸ್ತ್ರೀಯ ಭಾಷೆಯಾಗಿ ಘೋಷಿಸಲ್ಪಟ್ಟ ಭಾಷೆ.

 — ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ)(i) ಮಾತ್ರ.
(ಬಿ) (ii) ಮಾತ್ರ.
(ಸಿ) (i) ಮತ್ತು (ii) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: (ಎ)



●.15) ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ.
(i). ಮಹಾನಿಯಂತ್ರಕರನ್ನು ಸಂವಿಧಾನದ 148 ನೇ ವಿಧಿಯ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ.
(ii). ಮಹಾನಿಯಂತ್ರಕರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಪಡೆಯಬಹುದಾದ ಎಲ್ಲಾ ಸೇವಾ-ಸವಲತ್ತುಗಳನ್ನು ಪಡೆಯುತ್ತಾರೆ
(iii). ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಲೆಕ್ಕಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ.
(iV). ಇವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅರ್ಹರಾಗಿರುತ್ತಾರೆ.

— ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(ಎ)(i) ಮಾತ್ರ.
(ಬಿ) (i) ಮತ್ತು (iii) ಮಾತ್ರ.
(ಸಿ) (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: ಸಿ.

....ಮುಂದುವರೆಯುವುದು.

☀3ಡಿ ಲೋಹ ಮುದ್ರಣ ಯಂತ್ರ: ವಿಜ್ಞಾನ ಲೋಕದಲ್ಲೊಂದು ಕ್ರಾಂತಿಕಾರಿ ಅವಿಷ್ಕಾರ:  (ಟಿಪ್ಪಣಿ ಬರಹ)  (3D Metal Printer):(Short Notes) 

☀3ಡಿ ಲೋಹ ಮುದ್ರಣ ಯಂತ್ರ: ವಿಜ್ಞಾನ ಲೋಕದಲ್ಲೊಂದು ಕ್ರಾಂತಿಕಾರಿ ಅವಿಷ್ಕಾರ:  (ಟಿಪ್ಪಣಿ ಬರಹ)
(3D Metal Printer):(Short Notes)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ವಿಜ್ಞಾನ (ಪ್ರಚಲಿತ)
(General Science)


— ವಿಜ್ಞಾನಿಗಳು ಇದೀಗ ಅತಿ ಕಡಿಮೆ ವೆಚ್ಚದಲ್ಲಿ, ಮುಕ್ತವಾಗಿ ಎಲ್ಲೆಡೆ ಲಭ್ಯವಾಗಬಲ್ಲಂತಹ 3ಡಿ ಲೋಹ ಮುದ್ರಣಯಂತ್ರವನ್ನು (3 ಡಿ ಮೆಟಲ್ ಪ್ರಿಂಟರ್) ನಿರ್ಮಿಸಿದ್ದಾರೆ. ಅಂದರೆ ಯಾರು ಬೇಕಿದ್ದರೂ ಅದನ್ನು ಬಳಸಿ ತಮಗೆ ಬೇಕಾದ ಲೋಹದ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು.


●.ಏನಿದು ಆವಿಷ್ಕಾರ?
━━━━━━━━━━━━

— ಈವರೆಗೆ, 3ಡಿ ಮುದ್ರಣ ಪಾಲಿಮರ್ ವ್ಯವಹಾರವಾಗಿತ್ತು. ಬಹುತೇಕ ನಿರ್ಮಾಪಕರು 3ಡಿ ಮುದ್ರಣಯಂತ್ರಗಳನ್ನು ಬಳಸಿಕೊಂಡು ಟೆಂಟ್ ನಿಂದ ಚೆಸ್ ಸೆಟ್ ವರೆಗೆ ಎಲ್ಲ ಬಗೆಯ ಗ್ರಾಹಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮಿಸುತ್ತಿದ್ದರು. ಮಿಷಿಗನ್ ತಂತ್ರಜ್ಞಾನ ವಿಶ್ವ ವಿದ್ಯಾಲಯದ ಜೊಶುವಾ ಪೀಯರ್ಸ್ ಮತ್ತು ಅವರ ತಂಡವು ನಿರ್ಮಿಸಿರುವ ಹೊಸ 3ಡಿ ಮುದ್ರಣಯಂತ್ರವು ಈ ಉತ್ಪನ್ನಗಳ ಪಟ್ಟಿಗೆ ಇದೀಗ ಸುತ್ತಿಗೆಯನ್ನೂ ಸೇರಿಸಿದೆ.ವಿವಿಧ ಉತ್ಪನ್ನಗಳ ವಿವರವಾದ ನಕ್ಷೆಗಳು, ಸಾಫ್ಟ ವೇರ್ ಇತ್ಯಾದಿಗಳೆಲ್ಲ ಈಗ ಮುಕ್ತವಾಗಿ ಎಲ್ಲೆಡೆಯಲ್ಲೂ ಲಭಿಸುತ್ತವೆ. ಅಂದರೆ ಈಗ ಇದನ್ನು ಬಳಸಿಕೊಂಡು ಯಾರು ಬೇಕಿದ್ದರೂ ಈ ಹೊಸ 3 ಡಿ ಮುದ್ರಣಯಂತ್ರವನ್ನು ತಮ್ಮ ಸ್ವಂತ ಕೆಲಸಗಳಿಗಾಗಿ ತಯಾರಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.


●.ಪೀಯರ್ಸ್ ತಂಡ :
━━━━━━━━━━━

— ಪೀಯರ್ಸ್ ತಂಡವು 1500 ಅಮೆರಿಕನ್ ಡಾಲರ್ ಗೂ ಕಡಿಮೆ ಬೆಲೆಯ ಸಾಧನಗಳನ್ನು ಬಳಸಿ ಈ 3 ಡಿ ಲೋಹ ಮುದ್ರಣಯಂತ್ರವನ್ನು ತಯಾರಿಸಿದೆ.ಅವರು ಇದಕ್ಕಾಗಿ ಬಳಸಿದ ವಸ್ತುಗಳಲ್ಲಿ ಪುಟ್ಟ ಕಮರ್ಷಿಯಲ್ ಮಿಗ್ ವೆಲ್ಡರ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭಿಸುವ ಮೈಕ್ರೋ - ಕಂಟ್ರೋಲರ್ ಸೇರಿವೆ.ವಾಣಿಜ್ಯ ಬಳಕೆಯ ಲೋಹ ಮುದ್ರಣಯಂತ್ರಗಳು ಲಭ್ಯ ಇವೆ. ಆದರೆ ಅವು ತುಂಬಾ ದುಬಾರಿ. ಅವುಗಳ ಬೆಲೆ 5 ಲಕ್ಷ ಡಾಲರ್ ಗಳಿಗೂ ಹೆಚ್ಚು.


●.ಅಪಾಯಗಳು:
━━━━━━━━━━

— 3ಡಿ ಲೋಹ ಮುದ್ರಣಯಂತ್ರವು ಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುವುದರ ಜೊತೆಗೇ, ಮನೆಯಲ್ಲೇ ಮದ್ದು ಗುಂಡುಗಳನ್ನು ತಯಾರಿಸುವ ಅಪಾಯವೂ ಇದೆ. ವಾಣಿಜ್ಯ ಬಳಕೆಯ ಲೋಹ ಹಾಗೂ ಪ್ಲಾಸ್ಟಿಕ್ 3 ಡಿ ಮುದ್ರಣ ಯಂತ್ರಗಳನ್ನು ಬಳಸಿ ಪಿಸ್ತೂಲುಗಳನ್ನು ತಯಾರಿಸಿರುವ ಕೆಲವರು ಇದನ್ನು ತಮ್ಮ ಉದ್ದೇಶಕ್ಕೆ ಬಳಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

Saturday, 13 June 2015

☀ಅರ್ಥ್ ಅವರ್‌ ಅಂದರೇನು? ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿದಂತೆ ಅದರ ಮಹತ್ವವೇನು?  (What do you mean by 'Earth Hour'? what is Its significance in relation to global warming?)

☀ಅರ್ಥ್ ಅವರ್‌ ಅಂದರೇನು? ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿದಂತೆ ಅದರ ಮಹತ್ವವೇನು?
(What do you mean by 'Earth Hour'? what is Its significance in relation to global warming?)
━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನ (ಅಂತರ್ರಾಷ್ಟ್ರೀಯ)
(General Studies (International)


●.ಜಾಗತಿಕ ತಾಪಮಾನ ಏರಿಕೆ, ವಿದ್ಯುತ್‌ ಶಾಖದಿಂದ ಭೂಮಿಯನ್ನು ಕಾಪಾಡುವ ಸಲುವಾಗಿ ಮಾ.28 (ಶನಿವಾರ) 2015 ರಂದು ವಿಶ್ವದಾದ್ಯಂತ ಅರ್ಥ್ ಅವರ್‌ ಆಚರಿಸಲಾಯಿತು.
— ರಾತ್ರಿ 8.30 ರಿಂದ 9.30ರ ವರೆಗೆ ಸ್ವಯಂ ಪ್ರೇರಿತವಾಗಿ ವಿದ್ಯುತ್‌ ದೀಪಗಳನ್ನುಆರಿಸುವ ಮೂಲಕ ಅರ್ಥ್ ಅವರ್‌ನ ಆಚರಣೆ ನಡೆಯುವುದು.
— ಇದೊಂದು ಆಚರಣೆ ಅಷ್ಟೇ ಅಲ್ಲ, ಜಾಗತಿಕ ತಾಪಮಾನ ಏರಿಕೆ ಮತ್ತು ಇಂಧನ ಉಳಿತಾಯದ ಆಂದೋಲನವಾಗಿ ರೂಪುಗೊಂಡಿದೆ.
—  ಈ ಹಿನ್ನೆಲೆಯಲ್ಲಿ ಅರ್ಥ್ ಅವರ್‌ ಅಂದರೇನು? ಅದರ ಮಹತ್ವವೇನು? ಇದನ್ನು ಯಾವ್ಯಾವ ದೇಶದಲ್ಲಿ ಹೇಗೆಲ್ಲಾ ಆಚರಿಸಲಾಗುತ್ತದೆ ಎನ್ನುವ ಕುರಿತ ಮಾಹಿತಿ ಇಲ್ಲಿದೆ...


●.ಅರ್ಥ್ ಅವರ್ ಅಂದರೇನು?('Earth Hour'):
━━━━━━━━━━━━━━━━━━━━━━━━━━‌

— ಆಸ್ಟ್ರೇಲಿಯಾದ ವರ್ಲ್ಡ್ ವೈಡ್‌ ಫಂಡ್‌ ಫಾರ್‌ ನೇಚರ್‌ (ಡಬ್ಲ್ಯುಡಬ್ಲ್ಯುಎಫ್) ಸ್ವಯಂ ಸೇವಾ ಸಂಸ್ಥೆ ಈ ಆಂದೋಲನದ ಜನಕ.
—2007ರಲ್ಲಿ ಸಿಡ್ನಿಯಲ್ಲಿ ಜಾರಿಗೆ ಬಂದ ಇದು ಜಾಗತಿಕವಾಗಿ ಮನ್ನಣೆ ಪಡೆಯಿತು.
—ಈ ಅಭಿಯಾನದಲ್ಲಿ ಭಾರತ ಸೇರಿದಂತೆ 162 ದೇಶಗಳು ಭಾಗವಹಿಸಿವೆ.ಬೆಂಗಳೂರು ಸೇರಿದಂತೆ 7 ಸಾವಿರಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿವೆ.
— ಸಾಮಾನ್ಯವಾಗಿ ಮಾರ್ಚ್‌ 28 ಅಥವಾ 29ರಂದು ಇದನ್ನು ಆಚರಿಸಲಾಗುತ್ತದೆ.
— ಈ ವರ್ಷ ಮಾ.28ರಂದು ಅರ್ಥ್ ಅವರ್‌ ಆಚರಿಸಲಾಯಿತು. ಅರ್ಥ್ ಅವರ್‌ ಆಚರಣೆ ಕಡ್ಡಾಯ ವೇನೂ ಅಲ್ಲ. ಆದರೂ, ಈ ಅಭಿಯಾನ ಎಷ್ಟು ಜನಪ್ರೀಯ ವಾಗಿದೆಯೆಂದರೆ, 2011ರಲ್ಲಿ 120 ಕೋಟಿ, 2013ರಲ್ಲಿ 180 ಕೋಟಿ ಜನರು ಇದರಲ್ಲಿ ಭಾಗವಹಿಸಿದ್ದರು.


●.ಅರ್ಥ್ ಅವರ್‌ ಆಚರಣೆಯಲ್ಲಿ ಹಣ ಸಂಗ್ರಹ:
━━━━━━━━━━━━━━━━━━━━━━━
— ಈ ಆಂದೊಲನದ ಅಂಗವಾಗಿ ಸಾಮಾಜಿಕ ಸಂಘ ಸಂಸ್ಥೆಗಳು ಹಣವನ್ನೂ ಸಂಗ್ರಹಿಸಲಾಗುತ್ತವೆ. 2014ರಲ್ಲಿ ಅರ್ಥ್ ಅವರ್‌ ಆಚರಣೆಯ ವೇಳೆ 36 ಲಕ್ಷ ರೂ. ಸಂಗ್ರಹಿಸಲಾಗಿತ್ತು.
— ಅಭಿಯಾನದಿಂದ ಪರೋಕ್ಷವಾಗಿ ಸಂಗ್ರಹವಾಗುವ ಅಪಾರ ಧನ ಸಂಪತ್ತು ಸೌರಶಕ್ತಿ ಉಪಕರಣಗಳ ಸದ್ಬಳಕೆ ಮತ್ತು ಅರಣ್ಯನಾಶ ತಡೆಯುವ ಜಾಗೃತಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.
— ಭಾರತದಲ್ಲಿ ಅರ್ಥ್ ಅವರ್‌ ಆಚರಣೆಯಿಂದ 1000 ಮೆಗಾವ್ಯಾಟ್‌ ವಿದ್ಯುತ್‌ ಉಳಿತಾಯವಾಗುತ್ತದೆ.
— ಅರ್ಥ್ ಅವರ ಕೇವಲ ನಗರದ ಗಗನ ಚುಂಬಿ ಕಟ್ಟಡಗಳಿಗಷ್ಟೇ ಸೀಮಿತವಾಗಿಲ್ಲ.ಇದರಲ್ಲಿ ಜನಸಾಮಾನ್ಯರು ಕೂಡ ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು.


●.ಅರ್ಥ್ ಅವರ್‌ ಆಚರಣೆಗೆ 5 ಪ್ರಮುಖ ಕಾರಣಗಳು:
━━━━━━━━━━━━━━━━━━━━━━━━━━━

1.ಅರಿವು ಮೂಡಿಸುವ ಸಣ್ಣ ಪ್ರಯತ್ನ ವರ್ಷಕ್ಕೆ ಒಂದು ತಾಸು ವಿದ್ಯುತ್‌ ಸ್ವಿಚ್‌ಗಳನ್ನು ಆಫ್ ಮಾಡುವುದರಿಂದ ಜಾಗತಿಕ ತಾಪಮಾನ ಕಡಿಮೆಯಾಗಿ ಬಿಡುತ್ತದೆಯೇ ಎಂದು ಎಲ್ಲರೂ ಪ್ರಶ್ನಿಸಬಹುದು. ಆದರೆ, ಉತ್ತಮ ಭವಿಷ್ಯದ ದೃಷ್ಟಿಯಿಂದ ವಿದ್ಯುತ್‌ ಮಿತವ್ಯಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಭವಿಷ್ಯದಲ್ಲಿ ವಿದ್ಯುತ್‌ ಬಳಕೆ ಹೆಚ್ಚಿದಂತೆಲ್ಲಾ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗುತ್ತದೆ. ಹೀಗಾಗಿ ಶಾಖ ಸೂಸುವ ಬಲ್ಬ್ಗಳನ್ನು ಆರಿಸುವ ಮೂಲಕ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಸಣ್ಣ ಪ್ರಯತ್ನವೇ ಅರ್ಥ ಅವರ್‌ ಆಚರಣೆ.

2.ಸಣ್ಣ ಪ್ರಯತ್ನ ದೊಡ್ಡ ಬದಲಾವಣೆ ಮನೆಯಲ್ಲಿ ಕೋಣೆಯನ್ನು ಉಪಯೋಗಿಸದೇ ಇದ್ದಾಗ ಲೈಟ್‌ ಆಫ್ ಮಾಡುವುದು, ಅನಗತ್ಯ ವಿದ್ಯುತ್‌ ಬಳಸದೇ ಇರುವುದು, ಕಡಿಮೆ ಶಾಖದ ಬಲ್ಬ್ಗಳನ್ನು ಬಳಸುವು ದಿಂದ ಕೋಣೆಯ ತಾಪಮಾನ ನಿಯಂತ್ರಣ ದಲ್ಲಿರುತ್ತದೆ. ಹೀಗೆ ವಿದ್ಯುತ್‌ ಉಳಿತಾಯದಲ್ಲಿ ಸಣ್ಣ ಪುಟ್ಟ ಕ್ರಮಗಳು ಕೂಡ ತಾಪಮಾನ ನಿಯಂತ್ರಣದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ.

3.ವಿಶ್ವ ಸಮುದಾಯಕ್ಕೆ ಸಂದೇಶ ಇಂದು ಜಾಗತಿಕ ತಾಪಮಾನ ಏರಿಕೆಯಿಂದ ವಿಶ್ವವೇ ತತ್ತರಿಸಿದೆ. ಅನೇಕ ಪ್ರಾಣಿಸಂಕುಲಗಳು ಅಳಿವಿನ ಅಂಚನ್ನು ತಲುಪಿವೆ. ಈ ನಿಟ್ಟಿನಲ್ಲಿ ಅರ್ಥ್ ಅವರ್‌ ಆಚರಣೆ ವಿಶ್ವದಾದ್ಯಂತ ಒಂದು ಪ್ರಬಲ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ. 162 ದೇಶಗಳ 7000ಕ್ಕೂ ಹೆಚ್ಚು ನಗರಗಳು ಈ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಈ ಆಂದೋಲನಕ್ಕೆ ಕೈಜೋಡಿಸಿವೆ.

4.ಮುಂದಿನ ಪೀಳಿಗೆಗಾಗಿ ಯೋಚಿಸಿನಮ್ಮ ಇಂದಿನ ತಲೆಮಾರು ವೇಗವಾಗಿ ಬೆಳೆಯುತ್ತಿದೆ. ತಾಪಮಾನ ಏರಿಕೆಯ ಪರಿಣಾಮದ ಬಿಸಿಯನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸುದು ಬೇಡ. ಹೀಗಾಗಿ ಈಗಿನಿಂದಲೇ ಒಂದಷ್ಟು ಕ್ರಮಗಳನ್ನು ಕೈಗೊಂಡರೆ ಮುಂದಿನ ಪೀಳಿಗೆಗೆ ಕೆಲವನ್ನಾದರೂ ನಾವು ಉಳಿಸಬಹುದು.

5.ಕರೆಂಟ್‌ ಆರಿಸಿ ಕ್ಯಾಂಡಲ್‌ ಲೈಟ್‌ ಡಿನ್ನರ್‌!ಒಂದು ತಾಸು ವಿದ್ಯುತ್‌ ಬಲ್ಬ್ ಗಳನ್ನು ಆಫ್ ಮಾಡುವುದು ತುಂಬಾ ಸುಲಭ. ಅಷ್ಟೇ ಅಲ್ಲ ಆನಂದವನ್ನು ಪಡೆಯ ಬಹುದು. ವಿದ್ಯುತ್‌ ದೀಪಗಳನ್ನು ಆರಿಸಿ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಅನ್ನು ಆನಂದಿಸಬಹುದು. ಆಕಾಶದ ತಾರೆಗಳನ್ನು ಎಣಿಸುತ್ತಾ ಗೌಜು ಗದ್ದಲಗಳಿಲ್ಲದೇ ಪ್ರಶಾಂತ ವಾತಾವರಣದ ಅನುಭೂತಿ ಪಡೆಯಬಹದು. ಸಂಗೀತ ಕೇಳುತ್ತಾ ಮೈ ಮರೆಯಬಹುದು.


●.ಯಾವ ದೇಶದಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?
━━━━━━━━━━━━━━━━━━━━━━━━
●.ಸಿಡ್ನಿ:
— ಅರ್ಥ್ ಅವರ್‌ ಆಚರಣೆಯ ವೇಳೆ ಸಿಡ್ನಿಯಲ್ಲಿ ಒಂದು ಗಂಟೆ ಕತ್ತಲು ಆವರಿಸುತ್ತದೆ. ಒಪೆರಾ ಹೌಸ್‌ ಮತ್ತು ಹಾರ್ಬರ್‌ ಬ್ರಿಡ್ಜ್ಗಳಲ್ಲಿ ವಿದ್ಯುತ್‌ ದೀಪಗಳನ್ನು ಆರಿಸಲಾಗುತ್ತದೆ. ಅಲ್ಲದೆ, ಈ ಸಮುದಲ್ಲಿ ಖ್ಯಾತ ವಾದ್ಯವೃಂದಗಳನ್ನು ಕರೆಸಿ ಸಂಗೀತ ಕಾರ್ಯ ಕ್ರಮವನ್ನು ಆಯೋಜಿಸಲಾಗುತ್ತದೆ.

●.ಫ್ರಾನ್:  (ಐಫೆಲ್‌ ಟವರ್‌)
— ಫ್ರಾನ್ಸ್‌ನ ಪ್ರಸಿದ್ಧ ಪ್ರವಾಸಿ ತಾಣ ಐಫೆಲ್‌ ಟವರ್‌ನ ವಿದ್ಯುತ್‌ ದೀಪಗಳನ್ನು ಅರ್ಥ್ ಅವರ್‌ ಸಮಯದಲ್ಲಿ ಆರಿಸಲಾಗುತ್ತದೆ. ಅದರ ಬದಲು ಮೊಂಬತ್ತಿಗಳನ್ನು ಬೆಳಗುವ ಮೂಲಕ ವಿದ್ಯುತ್‌ ಅನ್ನು ಉಳಿಸಿ ಎಂಬ ಸಂದೇಶವನ್ನು ನೀಡಲಾಗುತ್ತದೆ. ದೀಪದ ಬೆಳಕಿನಲ್ಲಿ ಸಾಂಪ್ರದಾಯಿಕ ನೃತ್ಯ ಆಯೊಜಿಸಲಾಗುತ್ತದೆ.

●.ಅಮೇರಿಕ: ( ಗೊಲ್ಡನ್‌ ಗೇಟ್‌ ಬ್ರಿಡ್ಜ್)
ಅರ್ಥ್ ಅವರ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ ಕೂಡ ಸಂಭ್ರಮದಿಂದ ಭಾಗವಹಿಸುತ್ತದೆ. ಅಲ್ಲಿನ ಗಗನ ಚುಂಬಿ ಕಟ್ಟಡಗಳಲ್ಲಿ ದೀಪಗಳನ್ನು ಆರಿಸಲಾಗುತ್ತದೆ. ಜಗತ್‌ಪ್ರಸಿದ್ಧ ಗೊಲ್ಡನ್‌ ಗೇಟ್‌ ಬ್ರಿಡ್ಜ್ನಲ್ಲಿ ಒಂದು ತಾಸು ಕತ್ತಲು ಆವರಿಸುತ್ತದೆ.

●.ನ್ಯೂಜಿಲೆಂಡ್:  ( ಸ್ಕೈ ಟವರ್‌)
ಸದಾ ಪ್ರಕಾಶಮಾನವಾದ ಬೆಳಿಕಿನಿಂದ ಮಿಂಚುವ ನ್ಯೂಜಿಲೆಂಡ್‌ನ‌ ಆಕ್ಲೆಂಡ್‌ನ‌ಲ್ಲಿರುವ ಪ್ರಸಿದ್ಧ ಸ್ಕೈ ಟವರ್‌ ಅರ್ಥ್ ಅವರ್‌ ಸಮಯದಲ್ಲಿ ಮಂಕಾಗುತ್ತದೆ. ಆಗ ಕಟ್ಟಡದ ಎಲ್ಲಾ ಫ್ಲಡ್‌ ಲೈಟ್‌ಗಳನ್ನು ಆಫ್ ಮಾಡಲಾಗುತ್ತದೆ.

●.ದುಬೈ: ( ಬುರ್ಜ್‌ ಅಲ್‌ಖಲೀಫಾ)
ಅರ್ಥ್ ಅವರ್‌ ಸಮಯದಲ್ಲಿ ದುಬೈನ ಬುರ್ಜ್‌ ಅಲ್‌ ಕಲಿಫಾದ ಎಲ್ಲಾ ಸ್ವೀಚ್‌ ಗಳನ್ನು ಆಫ್ ಮಾಡ ಲಾಗುತ್ತದೆ. ಅದೇ ರೀತಿ ಬೇಅವೆನ್ಯು ಪಾರ್ಕ್‌ನಲ್ಲಿ ಕೂಡ ಕರೆಂಟ್‌ ತೆಗೆಯಲಾಗುತ್ತದೆ.

●.ಭಾರತ:  (ರಾಷ್ಟ್ರಪತಿ ಭವನ)
ಅರ್ಥ್ ಅವರ್‌ ಅನ್ನು ದೆಹಲಿಯ ರಾಷ್ಟಪತಿ ಭವನದಲ್ಲೂ ಆಚರಿಸಲಾಗುತ್ತದೆ. ರಾತ್ರಿ 8.30ರಿಂದ 9.30ರವರೆಗೆ ಎಲ್ಲಾ ಕೋಣೆಗಳ ವಿದ್ಯುತ್‌ ದೀಪಗಳನ್ನು ಆರಿಸುತ್ತಾರೆ. ರಾಷ್ಟಪತಿ ಭವನ 340 ಕೋಣೆಗಳನ್ನು ಹೊಂದಿದ್ದು, 320 ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿದೆ.

(ಕೃಪೆ: ಉದಯವಾಣಿ)

Friday, 12 June 2015

☀ದೇಶದಲ್ಲಿನ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಅವಲೋಕನ : (Overview of the elimination of child labor in the country)

☀ದೇಶದಲ್ಲಿನ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಅವಲೋಕನ :
(Overview of the elimination of child labor in the country)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ (ರಾಷ್ಟ್ರೀಯ)
(General Studies, National)  


★ಬಾಲ ಕಾರ್ಮಿಕ ಪದ್ಧತಿ:
— ದೇಶದಲ್ಲಿ ಹತ್ತಾರು ಕಾನೂನುಗಳಿದ್ದರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗಿಲ್ಲ. ಬಾಲಕಾರ್ಮಿಕರ ವಯೋಮಿತಿಯನ್ನು 14 ರಿಂದ 18ವರ್ಷಕ್ಕೆ ಏರಿಸಬೇಕು ಎಂದು ಕೆಲವರು ಒತ್ತಾಯಿಸಿದರೆ, ಮಕ್ಕಳು ಶಿಕ್ಷಣದ ಜೊತೆಗೇ ಒಂದಷ್ಟು ಹೊತ್ತು ದುಡಿಯುವುದು ಕೌಶಲ ವೃದ್ಧಿಗೆ ಮತ್ತು ಬಡ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಪೂರಕ ಎಂಬುದು ಇನ್ನೊಂದು ವಲಯದ ಅಭಿಮತ.


●.ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಯಾವ್ಯಾವ ಕಾನೂನುಗಳಿವೆ ?

★ ಬಾಲ ಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯ್ದೆ 1986:
— ಇದರ ಪ್ರಕಾರ 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ. ಈ ಕಾಯ್ದೆಯ ಮೂರನೇ ಪರಿಚ್ಛೇದ, ಮಕ್ಕಳು ದುಡಿಯಬಾರದ 18 ಅಪಾಯಕಾರಿ ವೃತ್ತಿಗಳು ಮತ್ತು 65 ಸಂಸ್ಕರಣಾ ಘಟಕಗಳನ್ನು ಗುರುತಿಸಿದೆ. ಕಾಯ್ದೆ ಉಲ್ಲಂಘಿಸಿ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ವ್ಯಕ್ತಿಗಳಿಗೆ 3 ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.


●.ಮಕ್ಕಳ ದುಡಿಮೆಗೆ ತಡೆ ಒಡ್ಡುವ ಇತರ ಕಾಯ್ದೆಗಳು:—

★ ಗಣಿ ಕಾಯ್ದೆ 1952: 18 ವರ್ಷಕ್ಕಿಂತ ಕೆಳಗಿನವರಿಗೆ ಗಣಿಯ ಯಾವುದೇ ಭಾಗಕ್ಕೂ ಪ್ರವೇಶವಿಲ್ಲ.

★ ಕಾರ್ಖಾನೆಗಳ ಕಾಯ್ದೆ 1948, ವ್ಯಾಪಾರಿ ಹಡಗು ಕಾಯ್ದೆ

★ 1958, ಮೋಟಾರು ವಾಹನಗಳ ಕಾಯ್ದೆ 1961, ಬೀಡಿ ಮತ್ತು ಸಿಗಾರು

★ ಕಾರ್ಮಿಕರ(ಉದ್ಯೋಗದ ಸ್ಥಿತಿಗತಿ) ಕಾಯ್ದೆ 1966:
— ಈ ಎಲ್ಲ ಕಾಯ್ದೆಗಳ ವ್ಯಾಪ್ತಿಯಡಿಯೂ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುವಂತಿಲ್ಲ.

★ ಜೀತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆ 1976:
—  ಮಕ್ಕಳು ಸೇರಿದಂತೆ ಯಾವ ವ್ಯಕ್ತಿಯನ್ನೂ ಜೀತಕ್ಕೆ ಇಟ್ಟುಕೊಳ್ಳುವಂತಿಲ್ಲ.

★ ಸ್ಫೋಟಕ ಕಾಯ್ದೆ 1984:
— 18 ವರ್ಷದ ಒಳಗಿನವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತಿಲ್ಲ.

★ ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಣೆ ತಡೆ ಕಾಯ್ದೆ 1956, ಬಾಲಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕರ್ನಾಟಕ ನಿಯಮಗಳು 1997:
— ಇವು ಸಹ ಬಾಲಕಾರ್ಮಿಕ ವಿರೋಧಿಯಾಗಿವೆ.

★ ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ 2013:
— ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಒತ್ತಾಯವಾಗಿ ದುಡಿಸಿಕೊಳ್ಳುವುದರಿಂದ ರಕ್ಷಿಸುತ್ತದೆ.


●.ಬಾಲಕಾರ್ಮಿಕ ಪದ್ಧತಿಗೆ ನಿಷೇಧ ಇರುವ ವೃತ್ತಿಗಳು:—

★ ರೈಲ್ವೆ ಕಟ್ಟಡ, ನಿಲ್ದಾಣ ಅಥವಾ ರೈಲ್ವೆ ಲೈನುಗಳ ಕಾಮಗಾರಿ, ರೈಲ್ವೆ ಆವರಣದಲ್ಲಿ ಕೆಂಡ ಆಯುವುದು, ಬೂದಿಗುಂಡಿ ತೆರವು, ಪ್ಲಾಟ್‌ಫಾರ್ಮ್‌ ಅಥವಾ ಚಲಿಸುವ ರೈಲುಗಳಲ್ಲಿ ಆಹಾರ ಪೂರೈಕೆ, ಬಂದರು ವ್ಯಾಪ್ತಿಯ ಕಾಮಗಾರಿ, ಕಸಾಯಿಖಾನೆ, ಆಟೊಮೊಬೈಲ್‌ ವರ್ಕ್‌ಶಾಪ್‌ಗಳು, ಗ್ಯಾರೇಜುಗಳು, ಎರಕದ ಮನೆ, ವಿಷಕಾರಿ ವಸ್ತು ಅಥವಾ ಸ್ಫೋಟಕಗಳ ನಿರ್ವಹಣೆ, ಕೈಮಗ್ಗ, ವಿದ್ಯುತ್‌ ಮಗ್ಗ, ಗಣಿಗಳು, ಪ್ಲಾಸ್ಟಿಕ್‌ ಘಟಕಗಳು, ಮನೆಕೆಲಸ, ಹೋಟೆಲುಗಳು, ಸ್ಪಾ, ಮನರಂಜನಾ ಸ್ಥಳ, ಮುಳುಗು ಶೋಧನೆ, ಸರ್ಕಸ್‌, ಬೀಡಿ, ಕಾರ್ಪೆಟ್‌, ಸಿಮೆಂಟ್‌ ತಯಾರಿಕೆ, ಬಟ್ಟೆ ಮುದ್ರಣ, ಬಣ್ಣ, ಬೆಂಕಿಪೊಟ್ಟಣ, ಸ್ಫೋಟಕ, ಪಟಾಕಿ, ಅರಗು, ಸೋಪು ತಯಾರಿಕೆ, ಕಟ್ಟಡ ನಿರ್ಮಾಣ, ಗ್ರಾನೈಟ್‌ ಕಲ್ಲುಗಳ ಸಂಸ್ಕರಣೆ ಮತ್ತು ಪಾಲಿಷ್‌, ಬಳಪ, ಅಗರಬತ್ತಿ, ಪಾತ್ರೆಗಳು, ಟೈರ್‌, ಗಾಜಿನ ವಸ್ತು ತಯಾರಿಕೆ, ಸೀಸ, ಪಾದರಸದಂಥ ವಿಷಕಾರಿ ಖನಿಜಗಳು ಮತ್ತು ಕೀಟನಾಶಕ ಬಳಸುವ ಸಂಸ್ಕರಣಾ ಘಟಕಗಳು, ಚಿಂದಿ ಆಯುವುದು ಇತ್ಯಾದಿ.

(Courtesy: Prajawani)

Monday, 8 June 2015

☀ ಸಾಮಾನ್ಯ ಜ್ಞಾನ (ಭಾಗ - 15) ☀ General Knowledge (Part-15): ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 15) ☀ General Knowledge (Part-15):
☆.. ಪ್ರಚಲಿತ ಘಟನೆಗಳೊಂದಿಗೆ ...

━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು-2015.
(Current Affairs-2015)


631) ‘ಜಾಗತಿಕ ನಗರಗಳು 2015’ ಸಮೀಕ್ಷೆಯ ಪ್ರಕಾರ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಗೆ ಸೇರಿದ ಭಾರತದ ನಗರಗಳು ಯಾವವು?

A] ಬೆಂಗಳೂರು, ದೆಹಲಿ, ಮುಂಬಯಿ ಮತ್ತು ಚೆನ್ನೈ.
B] ಚೆನ್ನೈ, ಕೊಲ್ಕತ್ತಾ ಮತ್ತು ದೆಹಲಿ.
C] ದೆಹಲಿ, ಮುಂಬಯಿ ಮತ್ತು ಹೈದರಾಬಾದ್.
D] ಕೋಲ್ಕತ್ತ, ಮುಂಬೈ ಮತ್ತು ಬೆಂಗಳೂರು .√


632) (ಐಐಪಿ) ಎಂದರೆ:

A] "ಭಾರತದ ವಿದೇಶಿ ಹೂಡಿಕೆ ಸೂಚ್ಯಂಕ" ಎಂದರ್ಥ.
B] "ಕೈಗಾರಿಕಾ ಪ್ರಗತಿ ಸೂಚ್ಯಂಕ" ಎಂದರ್ಥ.√
C] "ಭಾರತೀಯ ಷೇರುಪೇಟೆಯ ಸೂಚ್ಯಂಕ" ಎಂದರ್ಥ.
D] ""ಕೈಗಾರಿಕಾ ಉತ್ಪನ್ನ ಸೂಚ್ಯಂಕ" ಎಂದರ್ಥ.


633) ಇತ್ತೀಚೆಗೆ ಐ.ಎಸ್‌ ಉಗ್ರರು ವಶಕ್ಕೆ ಪಡೆದ ಸಿರಿಯಾದ ಪ್ರಾಚೀನ ಪಾರಂಪರಿಕ ನಗರ ಯಾವುದು?

A] ಡೈರ್ ಅಲ್ ಝವುರ್
B] ಡಮಾಸ್ಕಸ್
C] ಪಲ್‌ಮೈರಾ.√
D] ಹಮಾ


634) ಎರಡು ರಾಜ್ಯಗಳ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ಯಾರು?.(ಇವರು ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು ).

A] ಎನ್ ಡಿ ತಿವಾರಿ.√
B] ಡಾ. ರಮಣ ಸಿಂಗ್
C] ದೇವೇಂದ್ರ ಫಡ್ನವೀಸ್
D] ಪನ್ನೀರ್ ಸೆಲ್ವಂ.


635) "ಸಮಾಜವಾದ ಏಕೆ?" (Why Socialism) ಪುಸ್ತಕದ ಲೇಖಕ ಯಾರು?.
●. ಜಯಪ್ರಕಾಶ್ ನಾರಾಯಣನ್


636) ಇತ್ತೀಚೆಗೆ ಸಂಶೋಧಕರು ಭೂಮಿಯ ಮೇಲಿರುವ ಅತ್ಯ೦ತ ಶುಷ್ಕವಾದ ಸ್ಥಳವೊಂದನ್ನು ಅಟಕಾಮಾ ಮರುಭೂಮಿಯಲ್ಲಿ ಪತ್ತೆಹಚ್ಚಿದ್ದಾರೆ. ಅದನ್ನು 'ಮರಿಯಾ ಎಲೆನಾ ಸೌತ್' ಎಂದು ಹೆಸರಿಸಿದ್ದಾರೆ (JOG).ಅದು ಯಾವ ದೇಶದಲ್ಲಿದೆ?
●. ಚಿಲಿ.


637) ಇತ್ತೀಚೆಗೆ ಜೂನ್ 1ರಿಂದ ಸಾರ್ವಜನಿಕ ವಲಯದ ಬಹು ಬೇಡಿಕೆ ಕ್ಷೇತ್ರಗಳಲ್ಲಿ ಹೆಚ್ಚಿನ ತೆರಿಗೆ ಆಕರ್ಷಿಸಲು ಪ್ರಸ್ತುತ ವಿಧಿಸಲಾಗುತ್ತಿರುವ 3.7ರಷ್ಟು ಸೇವಾ ತೆರಿಗೆಯಲ್ಲಿ ಏಷ್ಟು ಪ್ರತಿಶತ ಹೆಚ್ಚಳ ಮಾಡಲಾಗಿದೆ?
●. ಶೇ 4.2ಕ್ಕೆ ಏರಿಕೆಯಾಗಲಿದೆ. ಶೇ 14ರ ವರೆಗೆ ಸೇವಾ ತೆರಿಗೆ ಹೆಚ್ಚಳ ಮಾಡಲಾಗಿದೆ.


638) ಏಷ್ಯಾದಲ್ಲೇ ಪ್ರಥಮಬಾರಿಗೆ 2 ಸಾವಿರ ಮೆಗಾವಾಟ್ ಸಾಮರ್ಥ್ಯದ ಸೌರವಿದ್ಯುತ್‌ ಪಾರ್ಕ್ ನ್ನು ಏಲ್ಲಿ ನಿರ್ಮಾಣ ಮಾಡಲಾಗುತ್ತಿದೆ?
●. ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ.


639) ಇತ್ತೀಚೆಗೆ ಕನ್ನಡದ ರಾಷ್ಟ್ರಕವಿ ಪುರಸ್ಕಾರಕ್ಕೆ ನಾಡಿನ ಹಿರಿಯ ಕವಿಯೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ'' 28-11- 2014 ರಂದು ಆದೇಶವೊಂದನ್ನು ಹೊರಡಿಸಿ ಸಮಿತಿಯನ್ನು ರಚಿಸಿತು. ಹಾಗಾದರೆ ಆ ‘ರಾಷ್ಟ್ರಕವಿ’ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಯಿತು?  
●. ಕೋ.ಚೆನ್ನಬಸಪ್ಪ


640) ಮಹಾತ್ಮ ಗಾಂಧಿ ಬಂಧನದ ನಂತರ ದಂಡಿ ಸತ್ಯಾಗ್ರಹದ ನಾಯಕತ್ವವನ್ನು ವಹಿಸಿಕೊಂಡವರು ಯಾರು?
●. ಅಬ್ಬಾಸ್ ಟ್ಯಾಬ್ ಜಿ.


641) ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೂತನ ಅಧ್ಯಕ್ಷರಾಗಿ ಯಾರನ್ನು ಆಯ್ಕೆಮಾಡಲಾಗಿದೆ?
●. ಡಾ.ಎ.ಎಸ್.ಕಿರಣ್‌ ಕುಮಾರ್


642) ಇತ್ತೀಚೆಗೆ ಸೆನ್ಸಾರ್‌ ಮಂಡಳಿಗೆ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ.
●. ಚಿತ್ರ ನಿರ್ಮಾಪಕ ಪಹಲಾಜ್‌ ನಿಹಲಾನಿ.


643) ಸೌರ ಮಂಡಲದ ಅತಿ ದೊಡ್ಡ ಕ್ಷುದ್ರಗ್ರಹ ಯಾವುದು?
●. ‘ವೆಸ್ಟಾ’.


644) ಇತ್ತೀಚೆಗೆ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ’ತೆಹಲ್ಕಾ’ ಪತ್ರಿಕೆಯ ಮಾಜಿ ಸಂಪಾದಕ ಯಾರು?
●. ತರುಣ್ ತೇಜ್‌ಪಾಲ್.


645) ಇತ್ತೀಚೆಗೆ ತನ್ನ ಮೊದಲ ರಹಸ್ಯ ಡ್ರೋನ್ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮಾನವರಹಿತ ಯುದ್ಧವಿಮಾನವನ್ನು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾದ ದೇಶ ಯಾವುದು?
●. ಚೀನಾ.


646) ಇತ್ತೀಚೆಗೆ 18ನೇ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಏಲ್ಲಿ ನಡೆಯಿತು?
 ●. ಹೈದರಾಬಾದ್‌ನ ’ಲಲಿತಕಲಾ ತೋರಣಂ’ನಲ್ಲಿ.


647) ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಪ್ರಾರಂಭಗೊಂಡಿದ್ದು ಯಾವಾಗ?
●.1995ರಲ್ಲಿ. (ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದೆ)


648) ’ಚೀನಾ ಅಕಾಡೆಮಿ ಆಫ್ ಸೈನ್ಸ್’ಗೆ ನೇಮಕಗೊಂಡ ಭಾರತದ ಮೊದಲ ವಿಜ್ಞಾನಿ  ಎಂಬ ಹಿರಿಮೆಗೆ ಪಾತ್ರರಾದವರು
●. ’ಭಾರತ ರತ್ನ’ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್.ರಾವ್


649) ಇತ್ತೀಚೆಗೆ ಕೇಂದ್ರ ಮುಖ್ಯ ಮಾಹಿತಿ ಆಯುಕ್ತರನ್ನಾಗಿ (ಸಿಐಸಿ) ಯಾರನ್ನು ನೇಮಕ ಮಾಡಲಾಯಿತು?

A] ವಿಜಯ್‌ ಶರ್ಮಾ.√
B] ಕೆ.ವಿ.ಚೌಧರಿ
C] ಪಿ.ಎನ್‌. ಶ್ರೀನಿವಾಸಾಚಾರಿ
D] ಕಿರಣ ಕುಮಾರ್


650) ಭಾರತವು ತನ್ನ ಮೊದಲ ರಾಕೆಟ್‌ನ್ನು ಯಾವಾಗ ಮತ್ತು ಏಲ್ಲಿ ಉಡಾಯಿಸಿತು?
●. ನವೆಂಬರ್ 21, 1963 ರಂದು ‘TUMBA’ ಉಡಾವಣಾ ಸಂಸ್ಥೆಯಿಂದ ಅಮೇರಿಕಾ ತಂತ್ರಜ್ಞಾನದ ಸಹಾಯದಿಂದ ಉಡಾಯಿಸಲ್ಪಟ್ಟಿತ್ತು.


651) ಇತ್ತೀಚೆಗೆ KSQAAC ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಯ ಗುಣಮಟ್ಟದಲ್ಲಿ ಕೊನೆ ಸ್ಥಾನದಲ್ಲಿರುವ ಜಿಲ್ಲೆ ಯಾವುದು?
●. ಬೀದರ್ (ಮೊದಲ ಸ್ಥಾನದಲ್ಲಿರುವ ಜಿಲ್ಲೆ - ಚಿಕ್ಕೋಡಿ)


652) ಇತ್ತೀಚೆಗೆ ’ಜರ್ಮನ್ ಯೂನಿವರ್ಸಿಟಿ ಆಫ್ ಮನ್ನಹೈರ್’ ಎರಡು ವರ್ಷಗಳಿಗೊಮ್ಮೆ ಬಿಡುಗಡೆಗೊಳಿಸುವ ವಿಶ್ವದ ಟಾಪ್ - 500 ಸೂಪರ್ ಕಂಪ್ಯೂಟರ್‌ಗಳ ಪೈಕಿ ಈ ಬಾರಿ ’ಅತ್ಯಂತ ವೇಗದ ಕಂಪ್ಯೂಟರ್’ ಎಂಬ ಖ್ಯಾತಿಗೆ ಪಾತ್ರವಾದ ಕಂಪ್ಯೂಟರ್ ಯಾವುದು,?
●. ಚೀನಾದ ‘Tianhe-2 ಕಂಪ್ಯೂಟರ್


653) ’ಪೈತಾನ್- 500’ ಯಾವುದಕ್ಕೆ ಸಂಬಂಧಿಸಿದೆ?
●. ಬೆಂಗಳೂರು ರಸ್ತಗಳಲ್ಲಿನ ಗುಂಡಿಗಳನ್ನು ಮುಚ್ಚಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕೆನಡಾದಿಂದ ತರಿಸಿದ ಯಂತ್ರ.


654) ಇತ್ತೀಚೆಗೆ (25/5/15) 1994ರಲ್ಲಿ ನೊಬೆಲ್ ಪುರಸ್ಕೃತ ಗಣಿತಜ್ಞ ಹಾಗೂ ಆಸ್ಕರ್ ಪ್ರಶಸ್ತಿ ಗೆದ್ದ 'ಬ್ಯೂಟಿಫುಲ್ ಮೈಂಡ್' ಚಿತ್ರದ ಸ್ಫೂರ್ತಿಯಾಗಿದ್ದ ವ್ಯಕ್ತಿಯೋರ್ವರು ಕಾರು ಅಪಘಾತದಲ್ಲಿ ತಮ್ಮ ಪತ್ನಿಯೊಂದಿಗೆ ಸಾವಿಗೀಡಾದರು. ಅವರ ಹೆಸರೇನು?
●.ಜಾನ್ ಫೋರ್ಬ್ಸ್ ನ್ಯಾಶ್ (86)


655) ಇತ್ತೀಚೆಗೆ ಯೆಮೆನ್ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ ಸಲುವಾಗಿ ಭಾರತ ಸರ್ಕಾರವು ನಡೆಸಿದ ಸೈನಿಕ ಕಾರ್ಯಾಚರಣೆಯ ಹೆಸರೇನು?
●.`ಆಪರೇಷನ್ ರಾಹತ್'!


656) ಯೆಮೆನ್ ದೇಶದ ರಾಜಧಾನಿ ಯಾವುದು?
●.ಸನಾ.


657) ಪ್ರಸ್ತುತ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್‌ಆರ್) ಅಧ್ಯಕ್ಷ ಯಾರು?
●.ವೈ.ಸುದರ್ಶನ್ ರಾವ್


658) ಮುಖದಲ್ಲಿ ಮೂಡುವ ಮೊಡವೆಯು ಯಾವ ಪ್ರೋಟಿನ್ ಕೊರತೆಯಿಂದ ಉಂಟಾಗುವಂಥದ್ದು.?
●.ಕೊಲಜನ್ ಪ್ರೋಟಿನ್.


659) ಪರಿಸರ ವಿಜ್ಞಾನ, ಪರಿಸರ ಸಂರಕ್ಷಣೆ ಹಾಗೂ ಇಂಧನ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ದೊಡ್ಡ ಸಾಧನೆ ಮಾಡಿದ ಸಾಧಕರನ್ನು ನೀಡಲಾಗುವ, ಪ್ರತಿಷ್ಠಿತ 2015ನೇ ಸಾಲಿನ ಅಂತಾರಾಷ್ಟ್ರೀಯ 'ದಿ ಟೇಲರ್ ಅವಾರ್ಡ್' ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?
●.ಖ್ಯಾತ ಪರಿಸರವಾದಿ ಮಾಧವ್ ಗಾಡ್ಗೀಳ್.


660) ಇತ್ತೀಚೆಗೆ (30 Mar 2015) ನಿಧನರಾದ "ಆಧುನಿಕ ಸಿಂಗಾಪುರದ ನಿರ್ಮಾತೃ ಎಂದೇ ಖ್ಯಾತರಾದ ಸಿಂಗಾಪುರದ ಮೊದಲ ಪ್ರಧಾನಿಯಾಗಿದ್ದ ವ್ಯಕ್ತಿ ಯಾರು?
●." ಲೀ ಕುವಾನ್ ಯು (91)

To be continued...