"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 30 April 2014

★ ಸಾಮಾನ್ಯ ಜ್ಞಾನ — ಭಾಗ 4 : (General Knowledge - PART 4)

★ ಸಾಮಾನ್ಯ ಜ್ಞಾನ — ಭಾಗ 4 : (General Knowledge - PART 4)

━━━━━━━━━━━━━━━━━━━━━━━━━━━━━━━━━━━━━━━━━━━━━


 ★ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವೃಂದಗಳನ್ನು ಬೇರ್ಪಡಿಸುವ ಕಾಲುವೆಯ ಹೆಸರೇನು ?
— ಟೆನ್ ಡಿಗ್ರಿ ಕಾಲುವೆ.


 ★ ವಿಕಿ ಲೀಕ್ಸ್ (wiki leaks) ನ ಪ್ರಧಾನ ಸಂಪಾದಕರ ಹೆಸರೇನು ?
— ಜೂಲಿಯನ್ ಅಸಾಂಜೆ.


 ★ ಮಾಳ್ವ ಪ್ರಸ್ಥಭೂಮಿಯಲ್ಲಿ ಉಗಮಗೊಳ್ಳುವ ಗಂಗಾನದಿಯ ಎರಡು ಉಪನದಿಗಳು ಯಾವುವು ?
— ಚಂಪಲ್ ಮತ್ತು ಚೆತ್ವಾ.


 ★ ಕರ್ನಾಟಕದಲ್ಲಿ ಅಣು ವಿದ್ಯುತ್ ಸ್ಥಾವರಗಳು ಎಷ್ಟಿವೆ ?
— ಒಂದು.


 ★ ವಿಶ್ವದ ಶೇಕಡಾವಾರು ಎಷ್ಟರ ಪ್ರಮಾಣದ ನೀರು ಹಿಂದೂ ಮಹಾಸಾಗರದಲ್ಲಿದೆ ?
— ಶೇ.20 ರಷ್ಟು.


 ★ 'ಏಳು ಕಣಿವೆಗಳು' ಎಂಬ ಗ್ರಂಥವು ಯಾವ ಧರ್ಮದ ಗ್ರಂಥ ?
 — ಬಹಾಯಿಯವರು.


 ★ ಹವಾಮಾನ ಒತ್ತಡವು ಭೂಮಿಯ ಮೇಲಿನ ಗಾಳಿಯ ಒತ್ತಡವನ್ನು ಅವಲಂಬಿಸಿರುತ್ತದೆ. ಹಾಗಾದರೆ ನಿರ್ದಿಷ್ಟ ಸಮುದ್ರ ಮಟ್ಟದ ಒತ್ತಡವೆಷ್ಟು ?
— 1 ಎಟಿಯಂ.


 ★ ಮಹಾತ್ಮಾ ಗಾಂಧಿಯವರ ಬರವಣಿಗೆಗಳ ಮುದ್ರಣ ಹಕ್ಕು ಇವರಲ್ಲಿದೆ.
 — ನವಜೀವನ ನಿಕ್ಷೇಪ.


 ★ ಒಂದು ಚದರ ಕಿ.ಮೀ ಗೆ ಎಷ್ಟು ಹೆಕ್ಟೇರ್ ಆಗುತ್ತದೆ ?
 —100 ಹೆಕ್ಟೇರ್.


 ★ 'ಕದಳಿಗರ್ಭಶಾಮಂ' ಎಂದು ತನ್ನ ಬಗ್ಗೆ ಹೇಳಿಕೊಂಡ ಕವಿ ಯಾರು ?
— ಪಂಪ.

 ★ ಯಾವುದರ ಉತ್ತತ್ತಿಯಿಂದ ಎಲೆಗಳ ಬಣ್ಣ ಹಸಿರು ಆಗುವುದಕ್ಕೆ ಕಾರಣ ?
— ಕ್ಲೋರೋಫಿಲ್.


 ★ ನೀಲಗಿರಿ ಮರವನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಿದವರು ಯಾರು ?
— ಟಿಪ್ಪು ಸುಲ್ತಾನ.


 ★ ಸ್ಟಾಕ್ ಮಾರುಕಟ್ಟೆಯ ಸಂಧರ್ಭದಲ್ಲಿ IPO ಏನನ್ನು ಸೂಚಿಸುತ್ತದೆ ?
— Initial Public Offering.


 ★ ಯಾವ ಏಷ್ಯಾದ ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿವೆ?
— ಚೈನೀಸ್ ಮತ್ತು ಅರೆಬಿಕ್.


 ★ 'ಐ, ಔ' ಗಳಿಗೆ ವ್ಯಾಕರಣದಲ್ಲಿ ಏನೆಂದು ಕರೆಯುತ್ತಾರೆ ?
— ಸಂಧ್ಯಕ್ಷರಗಳು.


 ★ ಅಂತರ್ರಾಷ್ಟ್ರೀಯ ಡೆಡ್ ಲೈನ್ (Deadline) ಯಾವ ಸ್ಥಳದಲ್ಲಿದೆ ?
— ಪೆಸಿಫಿಕ್ ಸಾಗರ.


 ★ ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು ?
— ಭೂಮಿ.


 ★ "RDX"( ಆರ್ ಡಿ ಎಕ್ಸ್) ನ ರಾಸಾಯನಿಕ ನಾಮವೇನು ?
— ಸೈಕ್ಲೋಟ್ರೈಮೆತಿಲೀನ್ ಟ್ರೈನೈಟ್ರಮೀನ್.


★ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ (NREGA) ವನ್ನು ಮೊತ್ತ ಮೊದಲಿಗೆ ಜಾರಿಗೆ ತಂದ ಸಮ್ಮಿಶ್ರ ಸರ್ಕಾರ ಯಾವುದು ?
— ಯುನೈಟೆಡ್ ಪ್ರೊಗ್ರೆಸೀವ್ ಮೈತ್ರಿಕೂಟ (UPA) - 2004 -2009.


 ★ ಅಪಾಯದ ಅಂಚಿನಲ್ಲಿರುವ ಏಷ್ಯಾದ ಸಿಂಹಗಳನ್ನು ಹೊಂದಿರುವ ಭಾರತದ ಏಕೈಕ ಅಭಯಾರಣ್ಯ ಎಲ್ಲಿದೆ ?
— ಗುಜರಾತ್.


 ★ ಮೊಸರಿಗೆ ಹುಳಿ ರುಚಿಯನ್ನು ತಂದುಕೊಡುವುದಕ್ಕೆ ಕಾರಣವಾದ ಜೀವಾಣು ಯಾವುದು ?
— Lactobacillus bulagaricus.


 ★ 2011ರ ಹುಲಿಗಳ ಸಂಖ್ಯಾಗಣತಿಯ ಪ್ರಕಾರ ಹುಲಿಗಳ ಸಂಖ್ಯೆ ಅತ್ಯಂತ ಹೆಚ್ಚಾಗಿರುವ ರಾಜ್ಯ ಯಾವುದು ?
— ಕರ್ನಾಟಕ.


 ★ ಇತ್ತೀಚೆಗೆ ಕೇಂದ್ರ ಮಾಹಿತಿ ಆಯುಕ್ತರಾಗಿ ನೇಮಕಗೊಂಡರವರು :
— ಸುಷ್ಮಾ ಸಿಂಗ್.


 ★ C.N ರಾಮಚಂದ್ರನ್ ಅವರ ಯಾವ ಕೃತಿಗೆ 2013 ನೇ ಸಾಲಿನ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
— ಆಖ್ಯಾನ - ವ್ಯಾಖ್ಯಾನ.


 ★ ನೈಸರ್ಗಿಕವಾಗಿ ತಯಾರಾಗುವ ಅತಿಗಟ್ಟಿಯಾದ ವಸ್ತು ಯಾವುದು ?
— ಸಿಲಿಕಾನ್ ಕಾರ್ಬೈಡ್.


 ★ ಇತ್ತೀಚೆಗೆ ವಿವಾದಕ್ಕೊಳಪಟ್ಟ 'The Hindus An Alternative History' ಪುಸ್ತಕದ ಲೇಖಕಿ :
— ವೆಂಡಿ ಡೋನ್ ಗಿರ್.


 ★ ನ್ಯಾನೊ (NANO) ವಿಜ್ಞಾನದಲ್ಲಿ ಎಂಟೆಕ್ (M TECH) ಆರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು ?
— ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.


★ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?
— ಒರಿಯಾ (ಓರಿಸ್ಸಾ)


 ★ ಒಂದು ಮೆಗಾಬೈಟ್ (Megabyte) ಕೆಳಗಿನ ಯಾವುದಕ್ಕೆ ಸಮ ?
— 1024 ಬೈಟ್ ಗಳು (Bytes).


 ★ ಕರ್ನಾಟಕದಲ್ಲಿ ವಾರ್ಡ್ ಸಭೆಯು ಕನಿಷ್ಠ ಎಷ್ಟು ತಿಂಗಳಿಗೊಮ್ಮೆ ಕರೆಯಲಾಗುತ್ತದೆ ?
— 6 ತಿಂಗಳು.


 ★ ಇತ್ತೀಚೆಗೆ 9ನೇ WTO ಶೃಂಗಸಭೆ ನಡೆದದ್ದು ಎಲ್ಲಿ ?
 — ಇಂಡೋನೇಷ್ಯಾ.


 ★ 'ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡು' ಎಂಬ ನುಡಿಗಟ್ಟಿನ ಅರ್ಥ ?
— ಸ್ಪಷ್ಟವಾಗಿ ನೋಡು.


 ★ ವಿಶ್ವದಲ್ಲೇ ಮೊದಲ ಬಾರಿಗೆ ಅಂಧರ ಸ್ಮಾರ್ಟ್ ಫೋನ್ ತಯಾರಿಸಿದ ದೇಶ ಯಾವುದು ?
— ಭಾರತ.


 ★ Email Address ಗಳು ಮತ್ತು ದೂರವಾಣಿ ಸಂಖ್ಯೆಗಳನ್ನು Microsoft Outlook ಎಲ್ಲಿ ಸಂಗ್ರಹಿಸುತ್ತದೆ ?
— ಕಾಂಟ್ರ್ಯಾಕ್ಟ್ ಫೋಲ್ಡರ್.


 ★ ಇತ್ತೀಚೆಗೆ 3ನೇ ಬಾರಿ ಜರ್ಮನಿಯ ಚಾನ್ಸಲರ್ ಅಗಿ ಆಯ್ಕೆಗೊಂಡವರು :
— ಏಂಜೆಲಾ ಮಾರ್ಕೆಲ್.


 ★ ಯಾವುದನ್ನು 'ಪ್ರಾಚೀನ ಭಾರತದಹೆಟೆರೋಡಾಕ್ಸ್ (Heterodox) ಚಿಂತನೆ' ಎಂದು ಉದಾಹರಿಸಬಹುದು ?
— ಲೋಕಾಯುತ.


 ★ ಮಾನವ ಸಂತತಿಗಳ ಅನುವಂಶಿಕ ಗುಣಗಳನ್ನು ಉತ್ತಮಪಡಿಸುವ ವಿಜ್ಞಾನವನ್ನು ಹೀಗೆ ಕರೆಯುತ್ತಾರೆ..
— ಯೂಜೆನಿಕ್ಸ್.


 ★ ಸಲೀಂ ಅಲಿ ಪಕ್ಷಿಧಾಮವು ಯಾವ ರಾಜ್ಯದಲ್ಲಿದೆ ?
— ಕೇರಳ.


 ★ 'ಅರ್ಕೈವ್'(ಪತ್ರಗಾರ)(Archive) ಅಂದರೆ ?
 — ಕಂಪ್ಯೂಟರಿನ ಹಳೆಯ ಕಡತಗಳ ಉಗ್ರಾಣ.


 ★ ಪೊಲೀಸರು ಬಳಸುವ ಆಲ್ಕೋಮೀಟರ್ ನ ಕಾರ್ಯವೇನು ?
— ಉಸಿರಾಟ ವಿಶ್ಲೇಷಣಕ್ಕೆ.


 ★ ಸತತ 3ನೇ ಬಾರಿ ಮಹಿಳಾ ವಿಶ್ವಕಪ್ ಕಬಡ್ಡಿ ಪಂದ್ಯವನ್ನು ಗೆದ್ದ ದೇಶ :
— ಭಾರತ. (ನ್ಯೂಜಿಲೆಂಡ್ ದೇಶದ ವಿರುದ್ದ)


★ ದೇಶದ ಮೊದಲ ISI (Indian Statistical Institute) ಮೆಡಿಕಲ್ ಹಬ್ ಲೋಕಾರ್ಪಣೆ ಮಾಡಿದವರು :
— ಸೊನಿಯಾ ಗಾಂಧಿ.


 ★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-ಚೀನಾ ಸಮರದ ಕುರಿತ ರಹಸ್ಯ ಮಾಹಿತಿ ಹೊಂದಿದ ವರದಿ :
— ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ.


★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-ಚೀನಾ ಸಮರದ ಕುರಿತ ರಹಸ್ಯ ಮಾಹಿತಿಯ ವರದಿಯಾದ 'ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ' ಯನ್ನು ಬಹಿರಂಗ ಪಡಿಸಿದವರು :
— ಆಸ್ಟ್ರೇಲಿಯಾ ಮೂಲದ ಪತ್ರಕರ್ತ ನೆವಿಲ್ ಮ್ಯಾಕ್ಸ್ ವೆಲ್.


 ★ 'ಸೇವಾಗ್ರಾಮ' ಎಂಬುದು ಯಾರೊಂದಿಗೆ ಸಂಭಂದಿಸಿದೆ?
 — ಮಹಾತ್ಮಾ ಗಾಂಧಿ.


 ★ ಕೇಂದ್ರ ಸರ್ಕಾರದ 'ರೋಶನಿ ಯೋಜನೆ' ಸಂಬಂಧಿಸಿದ್ದುದು ?
— ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವುದು.


 ★ ಎತ್ತರದ ತೆಂಗಿನ ಮರದ ತುದಿಯನ್ನು ನೀರು ತಲುಪುವುದು- ಇದಕ್ಕೆ ಕಾರಣ.
— ನೀರಿನ ಮೇಲೆ ತುಯ್ತ (Surface tension)


 ★ ಅಧ್ಯಾತ್ಮಿಕ ನಾಯಕ 'ಸತ್ಯ ಸಾಯಿಬಾಬಾ' ರವರ ಮೂಲ ಹೆಸರೇನು ? — ಸತ್ಯ ನಾರಾಯಣ ರಾಜು.


 ★ ಆಧಾರ್ (Unique Identification (UID)ಯೋಜನೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಮಹಾರಾಷ್ಟ್ರದ ತೆಂಬ್ಲಿ ಎಂಬಲ್ಲಿ ಸೆಪ್ಟಂಬರ್ 29, 2010 ರಲ್ಲಿ ಉದ್ಘಾಟನೆಗೊಂಡಿತ್ತು.

 * ತಂಬ್ಲಿ ಗ್ರಾಮದ ರಂಜನ್ ಸೊನಾವನೆ ಆಧಾರ್ ಕಾರ್ಡ್ ಪಡೆದೆ ಪ್ರಥಮ ಪ್ರಜೆಯಾಗಿದ್ದಾರೆ.

Sunday, 27 April 2014

★ ಐಎಎಸ್ ಪ್ರಭಂದ ಪ್ರಶ್ನೆ ಪತ್ರಿಕೆ 2013: (IAS ESSAY QUESTION PAPER 2013)

☀ಐಎಎಸ್ ಪ್ರಭಂದ ಪ್ರಶ್ನೆ ಪತ್ರಿಕೆ 2013:
 (IAS ESSAY QUESTION PAPER 2013)

ಗರಿಷ್ಠ ಅಂಕಗಳು : 250.
ಗರಿಷ್ಠ ಸಮಯ : 3 ಗಂಟೆಗಳು.

━━━━━━━━━━━━━━━━━━━━━━━━━━━━━━━━━━━━━━━━━━━━━

★ (IAS QUESTION PAPERS 2013)
ಐಎಎಸ್ ಮುಖ್ಯ ಪರೀಕ್ಷೆ 2013



 * ಕೆಳಗಿನ ಯಾವುದಾದರೊಂದು ವಿಷಯದ ಮೇಲೆ 2500 ಶಬ್ದಗಳಿಗೆ ಕಡಿಮೆಯಿಲ್ಲದಂತೆ ಒಂದು ಪ್ರಭಂದ ಬರೆಯಿರಿ.

 Q.1 Be the change you want to see in others - Gandhiji.
ಪ್ರ.1 ಇತರರಲ್ಲಿ ನೀವು ಕಾಣಬೇಕೆಂಬ ಬದಲಾವಣೆಯನ್ನು ನಿಮ್ಮಲ್ಲೇ ಕಂಡುಕೊಳ್ಳಿ - ಗಾಂಧೀಜಿ.

 Q.2 In the Colonial mentality hindering India's Success.
ಪ್ರ.2 ಭಾರತದ ಯಶಸ್ಸಿಗೆ ವಸಾಹತುಶಾಹಿ ಮನೋಧರ್ಮ ಅಡ್ಡಗಾಲಾಗಿದೆಯೇ ?

 Q.3 GDP (Gross Domestic Product) along with GDH (Gross Domestic Happiness) would be the right indices for judging the well being of a country.
ಪ್ರ.3 ಒಂದು ದೇಶದ ಕಲ್ಯಾಣ ಸ್ಥಿತಿಯನ್ನು ನಿರ್ಧರಿಸಲು ಜೆ.ಡಿ.ಪಿ (ಸಗಟು ದೇಶೀಯ ಉತ್ಪನ್ನ) ಯೊಂದಿಗೆ ಜೆ.ಡಿ.ಎಚ್ (ಸಗಟು ದೇಶೀಯ ಸಂತಸ) ಸೂಕ್ತ ಸೂಚಿಗಳಾಗುತ್ತವೆ.

 Q.4 Science and Technology is the panacea for the growth and security of the Nation.
ಪ್ರ.4 ದೇಶದ ಅಭಿವೃದ್ದಿ ಮತ್ತು ಸುರಕ್ಷತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವು ರಾಮಬಾಣ.

★ UPSC : ಐಎಎಸ್ ಮುಖ್ಯ ಪರೀಕ್ಷೆ - ಪ್ರಶ್ನೆಪತ್ರಿಕೆಗಳ ಕುರಿತು ಅವಲೋಕನ. UPSC : IAS Main Examination - An overview of the Question papers.

★ UPSC : ಐಎಎಸ್ ಮುಖ್ಯ ಪರೀಕ್ಷೆ - ಪ್ರಶ್ನೆಪತ್ರಿಕೆಗಳ ಕುರಿತು ಅವಲೋಕನ. UPSC : IAS Main Examination - An overview of the Question papers.

 * ಯಾವ ಮಾಧ್ಯಮದಲ್ಲಿ ನಿಮಗೆ ವಿಷಯದ ಮೇಲೆ ಹಿಡಿತ ಸಾಧಿಸಲು ಸಾಧ್ಯ ಇದೆಯೋ ಆ ಮಾಧ್ಯಮದಲ್ಲಿಯೇ ಮುಖ್ಯ ಪರೀಕ್ಷೆ ಬರೆಯಬೇಕು.

 * ಈ ಪ್ರಶ್ನೆಪತ್ರಿಕೆಗಳು ಇಂಗ್ಲೀಷ್ ಹಾಗೂ ಹಿಂದಿಗಳಲ್ಲಿರುತ್ತವೆ.

 * ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳ ಪ್ರಶ್ನೆಪತ್ರಿಕೆಗಳ ಸ್ವರೂಪದಲ್ಲಿ ಬದಲಾವಣೆಗಳು ಆಗಿಲ್ಲ. ಮೊದಲಿನಂತೆಯೇ ಇವು 300 ಅಂಕಗಳ ಪ್ರಶ್ನೆಪತ್ರಿಕೆಗಳು ಹಾಗೂ ಇಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳನ್ನು ಅಂತಿಮ ಶ್ರೇಣಿಗೆ (Ranking) ಪರಿಗಣಿಸುವುದಿಲ್ಲ. ಆದರೆ ಈ ಭಾಷಾ ವಿಷಯಗಳಲ್ಲಿ ಅರ್ಹ ಅಂಕಗಳನ್ನು ಪಡೆದರೆ ಮಾತ್ರ ಅಭ್ಯರ್ಥಿಗಳ ಉಳಿದ ಉತ್ತರಪತ್ರಿಕೆಗಳ ಮೌಲ್ಯ ಮಾಪನ ಮಾಡಲಾಗುತ್ತದೆ.

* ಪ್ರಭಂದ ಪ್ರಶ್ನೆಪತ್ರಿಕೆಯಲ್ಲಿ ಕೆಲವು ಬದಲಾವಣೆಗಳಾಗಿವೆ. ಈ ವರ್ಷದ (2013) ಪ್ರಬಂಧಗಳು ಹೆಚ್ಚು ಕಠಿಣವಾಗಿವೆ. ಅಲ್ಲದೇ 2500 ಪದಗಳ ಮಿತಿಯನ್ನು ಹೊಂದಿವೆ.

 * ಎರಡು ಪತ್ರಿಕೆಗಳ ಬದಲಾಗಿ ಈಗ ಸಾಮಾನ್ಯ ಅಧ್ಯಯನದ 4 ಪತ್ರಿಕೆಗಳು ಇವೆ.

* ಅಭ್ಯರ್ಥಿಗಳು ಈ ಮೊದಲು ಎರಡು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಹಾಗೂ ಪ್ರತಿ ಐಚ್ಛಿಕ ವಿಷಯದಲ್ಲೂ 2 ಪ್ರಶ್ನೆಪತ್ರಿಕೆಗಳಿರುತ್ತಿದ್ದವು ಆದರೆ ಈ ಬಾರಿಯಿಂದ ಒಂದೇ ಐಚ್ಛಿಕ ವಿಷಯವನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಇದರಲ್ಲಿ 2 ಪ್ರಶ್ನೆಪತ್ರಿಕೆಗಳಿರುತ್ತವೆ. ಎಲ್ಲಾ ಪತ್ರಿಕೆಗಳಿಗೂ ತಲಾ 250 ಅಂಕಗಳಿದ್ದು, ಪ್ರಶ್ನೆಯ ಸ್ವರೂಪಗಳೂ ಬಹಳಷ್ಟು ಬದಲಾವಣೆಗಳಾಗಿವೆ.

 ★ ಮುಖ್ಯ ಪರೀಕ್ಷೆ - ಪ್ರಶ್ನೆಪತ್ರಿಕೆಗಳ ವಿವರ :  ಪ್ರತಿಯೊಂದು ಪತ್ರಿಕೆಗೂ 3 ಗಂಟೆಗಳ ಸಮಯ ನಿಗದಿಯಾಗಿದ್ದು, ಅಂಧ ವಿದ್ಯಾರ್ಥಿಗಳಿಗೆ 3 ಗಂಟೆಗೂ ಹೆಚ್ಚು ಸಮಯ ನೀಡುವ ಅವಕಾಶವಿದೆ

. * ಪತ್ರಿಕೆ— 1 : ಪ್ರಭಂದ. (250 ಅಂಕಗಳು)

 * ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1. (250 ಅಂಕಗಳು)
(ಭಾರತೀಯ ಪರಂಪರೆ ಮತ್ತು ಸಂಸ್ಕೃತಿ, ವಿಶ್ವದ ಇತಿಹಾಸ ಮತ್ತು ಭೂಗೋಳ ಮತ್ತು ಸಮಾಜ)

 * ಪತ್ರಿಕೆ—3 : ಸಾಮಾನ್ಯ ಅಧ್ಯಯನ— 2. (250 ಅಂಕಗಳು)
(ಭಾರತದಲ್ಲಿ ಆಡಳಿತ, ಸಂವಿಧಾನ, ರಾಜಕೀಯ ವ್ಯವಸ್ಥೆ, ಸಾಮಾಜಿಕ ನ್ಯಾಯ ಮತ್ತು ಅಂತರ್ರಾಷ್ಟ್ರೀಯ ಸಂಬಂಧಗಳು)

 * ಪತ್ರಿಕೆ—4 : ಸಾಮಾನ್ಯ ಅಧ್ಯಯನ— 3. (250 ಅಂಕಗಳು)
( ತಂತ್ರಜ್ಞಾನ, ಆರ್ಥಿಕ ಬೆಳವಣಿಗೆ, ಜೀವ ವೈವಿಧ್ಯ, ಪರಿಸರ, ಭದ್ರತೆ ಮತ್ತು ವಿಕೋಪಗಳ ನಿರ್ವಹಣೆ)

 * ಪತ್ರಿಕೆ—5 : ಸಾಮಾನ್ಯ ಅಧ್ಯಯನ— 5. (250 ಅಂಕಗಳು)
(ನೈತಿಕ ಪ್ರಜ್ಞೆ - ಎಥಿಕ್ಸ್, ವಿಶ್ವಾಸಾರ್ಹತೆ ಮತ್ತು ಅಪ್ಟಿಟ್ಯೂಡ್)

 * ಪತ್ರಿಕೆ— 6 : ಐಚ್ಛಿಕ ವಿಷಯ— ಪತ್ರಿಕೆ-1 (250 ಅಂಕಗಳು)

 * ಪತ್ರಿಕೆ— 7 : ಐಚ್ಛಿಕ ವಿಷಯ— ಪತ್ರಿಕೆ-2 (250 ಅಂಕಗಳು)

★ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) (275 ಅಂಕಗಳು)

 ★ ಒಟ್ಟು ಅಂಕಗಳು : 2025 ಅಂಕಗಳು.

Monday, 14 April 2014

★ "ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ" ಕುರಿತು ಬರೆಯಿರಿ. ಪ್ರಸ್ತುತ ಮುಂದುವರಿದ ಯೋಜನೆಯ ಪ್ರಮುಖ ಗುರಿಗಳು ಯಾವವು? (150 ಶಬ್ದಗಳಲ್ಲಿ)

★ "ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ" ಕುರಿತು ಬರೆಯಿರಿ. ಪ್ರಸ್ತುತ ಮುಂದುವರಿದ ಯೋಜನೆಯ ಪ್ರಮುಖ ಗುರಿಗಳು ಯಾವವು?
(150 ಶಬ್ದಗಳಲ್ಲಿ ).

ಕೇಂದ್ರ ಸರ್ಕಾರವು ದೇಶದ ಎಲ್ಲಾ ಗ್ರಾಮಗಳಿಗೂ ವಿದ್ಯುತ್  ವ್ಯವಸ್ಥೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ  ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು
(RGGVY— Rajeev Gandhi Grameen Vidhyudikaran Yojana)  ಪ್ರಸ್ತುತವಿದ್ದ ಎಲ್ಲಾ ವಿದ್ಯುತ್ ಯೋಜನೆಗಳನ್ನು ಒಗ್ಗೂಡಿಸಿ ಏಪ್ರಿಲ್ 2005 ರಲ್ಲಿ 10 ಮತ್ತು 11 ನೇ ಪಂಚವಾರ್ಷಿಕ ಯೋಜನೆಗಳಲ್ಲಿ  ಆರಂಭಿಸಲಾಯಿತು

*.ಈ ಯೋಜನೆಗೆ ಅಗತ್ಯವಾದ ಶೇ.90 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೂ, ಶೇ.10 ರಷ್ಟು ಅನುದಾನವನ್ನು ಈ ಕಾರ್ಯಕ್ರಮದ ನೋಡಲ್ ಸಂಸ್ಥೆಯಾದ ಆರ್.ಇ.ಸಿ. ಸಂಸ್ಥೆಯು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಿದೆ.

*.ಗ್ರಾಮೀಣ ಭಾಗದ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ.

★ ಮುಂದುವರಿದ ಯೋಜನೆಯ ಗುರಿಗಳು :
ಕೇಂದ್ರ ಸರ್ಕಾರದ  “ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು” (RGGVY) 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಮುಂದುವರೆಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ , ಕೇಂದ್ರ ಇಂಧನ ಇಲಾಖೆಗೆ ಅನುಮೋದನೆ ನೀಡಿದೆ.

*.10 ಮತ್ತು 11 ನೇ ಪಂಚವಾರ್ಷಿಕ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಮುಂದುವರಿಸಿ ಮುಕ್ತಾಯಗೊಳಿಸಲು ಕ್ರಮಕೈಗೊಳ್ಳುವುದು

*.100 ಜನರಿಗೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೆ ಈ ಯೋಜನೆಯನ್ನು ಮುಂದುವರಿಸಲಾಗುವುದು

*.100 ಜನರಿಗೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಪ್ರತಿ ವಿದ್ಯುತ್ ಸಂಪರ್ಕಕ್ಕೆ ರೂ.3000/- ರಂತೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದು

*.ಗ್ರಾಮೀಣ ಕುಟುಂಬಗಳಿಗೆ ನೇರವಾಗಿವಿದ್ಯುತ್ ಗ್ರಿಡ್ ಗಳ ಮೂಲಕವೇ  ಸಂಪರ್ಕ ಸಲ್ಪಿಸುವುದರಿಂದ ದಿನಂಪ್ರತಿ 6 ಗಂಟೆಗಳಿಗೂ ಹೆಚ್ಚು ವಿದ್ಯುತ್ ಲಭಿಸುತ್ತದೆ.

★ ದೇಶದ ಪ್ರಥಮ ಅಣು ಚಾಲಿತ ಜಲಾಂತರ್ಗಾಮಿ “ಐಎನ್ಎಸ್ ಅರಿಹಂತ್ (INS ARIHANTH) " : (ಟಿಪ್ಪಣಿ ಬರಹ)


☀ದೇಶದ ಪ್ರಥಮ ಅಣು ಚಾಲಿತ ಜಲಾಂತರ್ಗಾಮಿ “ಐಎನ್ಎಸ್ ಅರಿಹಂತ್ (INS ARIHANTH) "  :
(ಟಿಪ್ಪಣಿ ಬರಹ)

━━━━━━━━━━━━━━━━━━━━━━━━━━━━━━━━━━━━━━━━━━━━━


●.ಅಣು ಚಾಲಿತ ಸಬ್‌ಮೆರಿನ್‌ಗಳ ನಿರ್ಮಾಣ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ.
-ಐಎನ್‌ಎಸ್ ಅರಿಹಂತ್ ಸಬ್‌ಮೆರಿನ್ ದೇಶದ ಮೊದಲ ಸ್ವದೇಶಿ ನಿರ್ಮಿತ ಅಣು ಚಾಲಿತ ಸಬ್‌ಮೆರಿನ್ .

★ ಐಎನ್ಎಸ್ ಅರಿಹಂತ್ ಬಗ್ಗೆ:

*.ಈ ನೌಕೆಗಾಗಿಯೇ ಡಿಆರ್‌ಡಿಒ ಮಧ್ಯಮ ವ್ಯಾಪ್ತಿಯ ಬಿಒ-05 ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ. ಅರಿಹಂತ್ ಸೇರ್ಪಡೆಯಿಂದ ದೇಶದ ನೌಕಾಬಲ ಇನ್ನಷ್ಟು ಹೆಚ್ಚಲಿದೆ.

*.ಅರಿಹಂತ್ ಮೂಲಕ ನೆಲ, ಜಲ ಮತ್ತು ಆಕಾಶದಲ್ಲಿ ಅಣ್ವಸ್ತ್ರಗಳ ಉಡಾವಣೆ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಲಿದೆ. ಈವರೆಗೆ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್ಮತ್ತು ಬ್ರಿಟನ್‌ಗಳಷ್ಟೇ ಸಬ್‌ಮೆರಿನ್ ಮೂಲಕ ಪ್ರಕ್ಷೇಪಣ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದ್ದವು.


★ ವಿಶೇಷ ಏನು?

*.ಭಾರತವು ಒಟ್ಟು 14 ಸಬ್‌ಮೆರಿನ್‌ಗಳನ್ನು ಹೊಂದಿದೆ.
*.ಇವುಗಳು ಡೀಸೆಲ್ ಮತ್ತು ಬ್ಯಾಟರಿ ಚಾಲಿತ ಎಂಜಿನ್‌ಗಳನ್ನು ಹೊಂದಿವೆ. ಈ ರೀತಿಯ ಸಬ್‌ಮೆರಿನ್‌ಗಳು ಸಬ್‌ಮೆರಿನ್‌ಗಳು ದೀರ್ಘಾವಧಿ ವರೆಗೆ ಸಾಗರದಡಿ ಉಳಿಯುವ ಸಾಮರ್ಥ್ಯ ಹೊಂದಿಲ್ಲ. ನಿಯಮಿತವಾಗಿ ದಡಕ್ಕೆ ಬಂದು ಚಾರ್ಜ್ ಮಾಡಿಸಿಕೊಂಡು ಹೋಗಬೇಕಿತ್ತು. ಆದರೆ, ಅಣು ಚಾಲಿತ ಸಬ್‌ಮೆರಿನ್‌ಗಳಿಂದಾಗಿ ಈ ಸಮಸ್ಯೆ ನಿವಾರಣೆಯಾಗಲಿದೆ.
*.ಈ ರೀತಿಯ ಸಬ್‌ಮೆರಿನ್‌ಗಳು ದೀರ್ಘಾವಧಿ ವರೆಗೆ ಆಳಸಾಗರದಲ್ಲಿಉಳಿಯುವ ಸಾಮರ್ಥ್ಯ ಹೊಂದಿವೆ.

★ ಪರಾದೀಪ್ ಬಂದರು: (Paradeep Port) ( ಟಿಪ್ಪಣಿ ಬರಹ)


★ ಪರಾದೀಪ್ ಬಂದರು:
(ಟಿಪ್ಪಣಿ ಬರಹ)

ಪರಾದೀಪ್ ಬಂದರು ದೇಶದ ಪ್ರಮುಖ ಬಂದರುಗಳಲ್ಲಿ ಒಂದಾಗಿದ್ದು, ದೇಶದ ಪೂರ್ವ ಮತ್ತು ಮಧ್ಯ ಭಾಗದ ಅಗತ್ಯಗಳನ್ನು ಪೂರೈಸುತ್ತಿದೆ

*.ಈ ಬಂದರು ಒಡಿಸ್ಸಾ, ಜಾರ್ಖಂಡ್, ಛತ್ತೀಸ್ ಗಡ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಬಿಹಾರ್ ರಾಜ್ಯಗಳಲ್ಲಿ ತನ್ನ ವ್ಯಾಪ್ತಿ ಹೊಂದಿದೆ.

*.ಕಳೆದ 10 ವರ್ಷಗಳಲ್ಲಿ ತನ್ನ ಸರಕುನಿರ್ವಹಣೆಯಲ್ಲಿ ಅತ್ಯುತ್ತಮ ನಿರ್ವಹಣೆ ಸಾಧಿಸಿದೆ

*.ಈ ಬಂದರು ವರ್ಷದ 365 ದಿನಗಳೂ 24/7ಕೆಲಸ ನಿರ್ವಹಿಸುತ್ತಿದೆ, ಅಲ್ಲದೆ ಪರಾದೀಪ್ ಬಂದರು ಅತ್ಯಾಧುನಿಕ ತಾಂತ್ರಿಕತೆ ಮತ್ತುಸಲಕರಣೆಗಳನ್ನು ಹೊಂದಿದೆ.

* ಈ ಬಂದರಿಗೆ 2012-13 ನೇ ಸಾಲಿನ ತನ್ನ ಅತ್ಯುನ್ನತ ಕಾರ್ಯ ನಿರ್ವಹಣೆಗಾಗಿ “ಮೇಜರ್ ಪೋರ್ಟ್ ಆಫ್ ದಿ ಇಯರ್-2013” ಪ್ರಶಸ್ತಿ ಸಿಕ್ಕಿದೆ.
2009-10 ನೇ ಸಾಲಿನಲ್ಲಿಯೂ ಸಹ ಈ ಪ್ರಶಸ್ತಿ ಪಡೆದಿತ್ತು ಎನ್ನುವುದು ವಿಶೇಷ.

* ಈ ಬಂದರಿನ ಪ್ರಸ್ತುತ ಅಧ್ಯಕ್ಷರು :  ಎಸ್.ಎಸ್.ಮಿಶ್ರ.

★ “ಟೀಕಾ ಎಕ್ಸ್ ಪ್ರೆಸ್ ಯೋಜನೆ (Teeka Express programme)” : ( ಟಿಪ್ಪಣಿ ಬರಹ)


★ “ಟೀಕಾ ಎಕ್ಸ್ ಪ್ರೆಸ್ ಯೋಜನೆ (Teeka Express programme)” :
(ಟಿಪ್ಪಣಿ ಬರಹ)

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡಿ  ಈ  “ಟೀಕಾ ಎಕ್ಸ್ ಪ್ರೆಸ್” ಯೋಜನೆಯನ್ನು ಜಾರಿಗೆ ತಂದಿದ್ದು, ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಕಾಡುವ ಕಾಯಿಲೆಗಳಿಂದ ರಕ್ಷಿಸುವುದು ಈ ಯೋಜನೆಯ  ಉದ್ದೇಶವಾಗಿದೆ.

* ಏನಿದು ಟೀಕಾ ಎಕ್ಸ್ ಪ್ರೆಸ್ ಯೋಜನೆ:

ಅಗತ್ಯವಿರುವ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯೇ ಟೀಕಾ ಎಕ್ಸ್ ಪ್ರೆಸ್ ಯೋಜನೆ.

ಈ ಯೋಜನೆಯಡಿ ಲಸಿಕೆ ಹಾಕಿಸುವ ಸ್ಥಳಕ್ಕೆ ಔಷಧಿ ಸಂರಕ್ಷಣಾ ಕೇಂದ್ರದಿಂದ ಇದಕ್ಕಾಗಿಯೇ ಮೀಸಲಿಡಲಾದ ಟೀಕಾ ಎಕ್ಸ್ ಪ್ರೆಸ್ ವಾಹನದಲ್ಲಿ ಸಾಗಿಸಲಾಗುವುದು.

*.ಔಷಧಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಸಮರ್ಪಕ ಬಳಕೆ ಮತ್ತು ಬಳಕೆಯಾಗದೇ ಇರುವ ಔಷಧಗಳನ್ನು ಪುನಃ ಹಿಂದಕ್ಕೆ ಕೊಂಡ್ಯೊಯ್ಯುವ ಮೂಲಕ ಔಷಧಿಗಳು ವಿನಾಃ ಕಾರಣ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ.

*.ಸೂಕ್ತ ಆರೋಗ್ಯ ಚಿಕಿತ್ಸೆ ಇಲ್ಲದ ಸ್ಥಳಗಳಲ್ಲಿ ಇದು ಮೊಬೈಲ್ ಕ್ಲಿನಿಕ್ ಆಗಿ ಸೇವೆ ನಿರ್ವಹಸಲಿದೆ. ಅಲ್ಲದೇ ಬಳಕೆಯಾದ ಔಷಧಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಇದು ಅನುಕೂವಾಗಲಿದೆ.

*.ಮೊದಲ ಹಂತದಲ್ಲಿ ಈ ಯೋಜನೆಯನ್ನು ಅತಿ ಅಗತ್ಯವಿರುವ 69 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಇದಕ್ಕಾಗಿ 1,850 ವಾಹನಗಳನ್ನು ಖರೀದಿಸಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.

*.ಈ ಯೋಜನೆಯ ಅನುಷ್ಠಾನಕ್ಕೆ ತಗುಲುವ ವೆಚ್ಚವನ್ನು “ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್” ಅಡಿ ಭರಿಸಲಾಗುವುದು.

★ SIBN ಎಂದರೇನು ? ಭಾರತ ಮತ್ತು ಸೌದಿ ಅರೇಬಿಯಾ ದೇಶಗಳ ನಡುವಣ ವಾಣಿಜ್ಯ ಸಂಬಂಧ ಕುರಿತು ಸಂಕ್ಷಿಪ್ತವಾಗಿ ವಿವರಿಸಿರಿ. (150 ಶಬ್ದಗಳಲ್ಲಿ ).

★ SIBN ಎಂದರೇನು ? ಭಾರತ ಮತ್ತು ಸೌದಿ ಅರೇಬಿಯಾ ದೇಶಗಳ ನಡುವಣ ವಾಣಿಜ್ಯ ಸಂಬಂಧ ಕುರಿತು ಸಂಕ್ಷಿಪ್ತವಾಗಿ ವಿವರಿಸಿರಿ.
 (150 ಶಬ್ದಗಳಲ್ಲಿ ).

 * SIBN- ಅಂದರೆ “ಸೌದಿ-ಇಂಡಿಯಾ ಬಿಸಿನೆಸ್ ನೆಟ್ ವರ್ಕ್ ವ್ಯವಸ್ಥೆ ” (SIBN—Saudi-India Business Network) ಎಂಬುದಾಗಿದೆ. SIBN ಭಾರತ ಮತ್ತು ಸೌದಿ ರಾಷ್ಟ್ರಗಳ ನಡುವಣ ಪರಸ್ಪರ ವಾಣಿಜ್ಯ,ವ್ಯಾಪಾರ, ಬಂಡವಾಳ ಹೂಡಿಕೆ ಸಂಬಂಧಗಳನ್ನು ಪ್ರೋತ್ಸಾಹ ನೀಡುವ ಒಂದು ತಟಸ್ಥ ವ್ಯವಸ್ಥೆಯಾಗಿದೆ.

 * ಈ SIBN ಉದ್ದೇಶಿತ ವ್ಯವಸ್ಥೆಯಲ್ಲಿ ಸದಸ್ಯತ್ವ ಪಡೆಯಲು ಭಾರತ ಮತ್ತು ಸೌದಿ ರಾಷ್ಟ್ರಗಳ ಎಲ್ಲಾ ಉದ್ಯಮಿಗಳಿಗೂ ಸಮಾನ ಅವಕಾಶವಿದ್ದು, ಉಭಯ ದೇಶಗಳ ಉದ್ಯಮಿಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯ ಮಂಡಳಿ ಸದಸ್ಯರು ಭಾಗಿಯಾಗಿ ಪರಸ್ಪರ ವಿಚಾರ ವಿನಿಮಯ, ನಿರ್ಣಯಗಳನ್ನು ಕೈಗೊಳ್ಳುವರು.


★ ಭಾರತ-ಸೌದಿ ಅರೇಬಿಯಾ ನಡುವಣ ವಾಣಿಜ್ಯ ಸಂಬಂಧ:

 *.ಸೌದಿ ಅರೇಬಿಯಾ ಭಾರತದೊಂದಿಗೆ ವಾಣಿಜ್ಯ ಸಂಬಂಧ ಹೊಂದಿರುವ ರಾಷ್ಟ್ರಗಳ ಪೈಕಿ 4ನೇ ಅತಿ ದೊಡ್ಡ ದೇಶವಾಗಿದೆ.

 *.ಸೌದಿ ಅರೇಬಿಯಾ ಭಾರತಕ್ಕೆ ಪೆಟ್ರೋಲಿಯಂ ಕಚ್ಚಾ ತೈಲವನ್ನು ಒದಗಿಸುವ ಅತೀ ದೊಡ್ಡ ದೇಶವಾಗಿದೆ.ಇದು ಭಾರತದ ತೈಲ ಬೇಡಿಕೆಯ ಶೇ. 17 ರಷ್ಟನ್ನು ನೀಗಿಸುತ್ತಿದೆ.

 *.ಸೌದಿ ಅರೇಬಿಯಾ ಭಾರತದ ಉತ್ಪನ್ನಗಳ ಬಹುದೊಡ್ಡ ಮಾರುಕಟ್ಟೆಯಾಗಿದೆ, ಅಲ್ಲದೆ ಭಾರತದ ರಫ್ತು ಉದ್ಯಮದ ಶೇ.1.86 ರಷ್ಟು ಪಾಲನ್ನು ಹೊಂದಿದೆ

 *.ಭಾರತ ಸೌದಿ ಅರೇಬಿಯಾ ಉತ್ಪನ್ನಗಳ 5 ನೇ ಬಹುದೊಡ್ಡ ಮಾರುಕಟ್ಟೆಯಾಗಿದೆ

 * ಭಾರತ ಮತ್ತು ಸೌದಿ ಅರೇಬಿಯಾ ವಾಣಿಜ್ಯ ಸಂಬಂಧ ವೃ ದ್ಧಿಗೆ “ಸೌದಿ-ಇಂಡಿಯಾ ಬಿಸಿನೆಸ್ ನೆಟ್ ವರ್ಕ್” ಭಾರತ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳು “ಸೌದಿ-ಇಂಡಿಯಾ ಬಿಸಿನೆಸ್ ನೆಟ್ ವರ್ಕ್” (SIBN—Saudi-India Business Network) ವ್ಯವಸ್ಥೆಯನ್ನು ಪ್ರತ್ಯೇಕವಾಗಿ ರಿಯಧ್ ಮತ್ತು ದಮಾಮ್ ನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

★ “ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (National Urban Livelihoods Mission)” : (ಟಿಪ್ಪಣಿ ಬರಹ)

★ “ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್
 (National Urban Livelihoods Mission)” :
(ಟಿಪ್ಪಣಿ ಬರಹ)

*  ನಗರದಲ್ಲಿ ವಾಸಿಸುವ ಬಡ ಜನರ ಜೀವನಮಟ್ಟವನ್ನು ಸುಧಾರಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನ ಸಚಿವಾಲಯ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅನ್ನು 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲು ಪ್ರಸ್ತಾಪಿಸಿದೆ.


★ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ನ ಕೆಲವು ಪ್ರಮುಖ ಅಂಶಗಳು :

 *.ಈ ಉದ್ದೇಶಿತ ಯೋಜನೆಯು ಪ್ರಸ್ತುತ ಜಾರಿಯಲ್ಲಿರುವ “ಸ್ವರ್ಣ ಜಯತಿ ರೋಜಗಾರ್ ಯೋಜನೆ” ಯ ಬದಲಿಗೆ ಜಾರಿಗೊಳ್ಳಲಿದೆ.

 *.ನಗರ ಬಡತನವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಕೌಶಲ್ಯ ಅಭಿವೃದ್ದಿ,ಮಾರುಕಟ್ಟೆ ಆಧಾರಿತ ಉದ್ಯೋಗಗಳು ಮತ್ತು ಸ್ವ ಉದ್ಯೋಗಗಳನ್ನು ಸೃಷ್ಟಿಸಲು ಸುಲಭ ಸಾಲ ವಿತರಣೆಯತ್ತ ಗಮನ ಹರಿಸಲು ಈ ಯೋಜನೆ ನೆರವಾಗಲಿದೆ.

 *.ಅಗತ್ಯ ಮೂಲ ಸೌಕರ್ಯಗಳೊಂದಿಗೆ ನಗರ ಬಡವರಿಗೆ ಹಂತ ಹಂತವಾಗಿ ವಸತಿಯೋಜನೆಯನ್ನು ಈ ಯೋಜನೆಯಡಿ ಕಲ್ಪಿಸಲಾಗುವುದು. ಇದಲ್ಲದೇ ನಗರದಲ್ಲಿ ಬೀದಿ ವ್ಯಾಪಾರಿಗಳ ಜೀವನೋಪಾಯ ಆಧಾರಗಳಿಗೆ ಸ್ಪಂದಿಸುವ ಗುರಿಯನ್ನು ಸಹ ಈ ಯೋಜನೆ ಹೊಂದಿದೆ.

 *.ಒಟ್ಟಾರೆಯಾಗಿ ನಗರದಲ್ಲಿ ವಾಸಿಸುತ್ತಿರುವ ಬಡವರು, ಕೊಳೆಗೇರಿ ವಾಸಿಗಳು ಮತ್ತು ಬೀದಿ ವ್ಯಾಪಾರಿಗಳ ಹಿತದೃಷ್ಟಿ ಕಾಯುವ ದೂರದೃಷ್ಟಿಯನ್ನು ಈ ಯೋಜನೆ ಹೊಂದಿದೆ.

★ “ಮೆಗಾ ಪುಡ್ ಪಾರ್ಕ್ ” (Mega Food Park) : (ಟಿಪ್ಪಣಿ ಬರಹ)

★ “ಮೆಗಾ ಪುಡ್ ಪಾರ್ಕ್ ”
 (Mega Food Park) :
(ಟಿಪ್ಪಣಿ ಬರಹ)

 ಆಹಾರ ಭದ್ರತೆ ಕಾಯ್ದುಕೊಳ್ಳುವುದಕ್ಕಾಗಿ ಮತ್ತು ಆಹಾರ ಪದಾರ್ಥಗಳ ಸಂಸ್ಕರಣ ಸಾಮರ್ಥ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ, ದೇಶದಲ್ಲಿ 12 ಮೆಗಾ ಪುಡ್ ಪಾರ್ಕ್ ಗಳ ನಿರ್ಮಾಣಕ್ಕೆ ಕೇಂದ್ರ ಆರ್ಥಿಕ ವ್ಯವಹಾರಗಳ ಮೇಲಿನ ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, 11 ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೊಳಿಸಲಾದ ಸಹಾಯ ನೀತಿ ಮಾದರಿಯಲ್ಲಿ ಈ ಮೆಗಾ ಪುಡ್ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು.

 *.12 ನೇ ಪಂಚವಾರ್ಷಿಕ ಯೋಜನೆಯಡಿ ಮೆಗಾ ಪುಡ್ ಪಾರ್ಕ್ ಗಳನ್ನು ರೂ 1714 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.

 *.ಅನುಮೋದನೆ ಪಡೆದು ಅಂತಿಮ ಅಧಿಸೂಚನೆ ಹೊರಡಿಸಿದ 30 ತಿಂಗಳ ಕಾಲವಕಾಶದೊಳಗೆ ಈ ಪಾರ್ಕ್ ಗಳನ್ನು ಸ್ಥಾಪಿಸಬೇಕು.


 ★ ಅನುಕೂಲಗಳು:

*.ಕೃಷಿ ಉತ್ಪನ್ನ ಸಂಸ್ಕರಣೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದರಿಂದ ಸೂಕ್ತ ಸಂಸ್ಕರಣೆ ಸೌಲಭ್ಯವಿಲ್ಲದೇ ಕೃಷಿಉತ್ಪನ್ನಗಳನ್ನು ಹಾಳಾಗುವುದನ್ನು ತಡೆಯಬಹುದಾಗಿದೆ.

 *.ಈ ಯೋಜನೆಯಿಂದ ಸುಮಾರು 6,000 ರೈತರಿಗೆ ನೇರವಾಗಿ ಹಾಗೂ 25000-30000 ರೈತರಿಗೆ ಪರೋಕ್ಷವಾಗಿ ನೆರವಾಗಲಿದೆ.

 *.ಪ್ರತಿ ಒಂದು ಮೆಗಾ ಪುಡ್ ಪಾರ್ಕ್ ಗಳಿಂದ ನೇರ ಮತ್ತು ಪರೋಕ್ಷವಾಗಿ 40,000 ಉದ್ಯೋಗಗಳು ಸೃಷ್ಟಿಯಾಗಲಿವೆ.

★ ಮಾಗ್ನಕಾರ್ಟ್ ಎಂದರೇನು ? ಅದರ ಇತಿಹಾಸವನ್ನುವಿವರಿಸಿ.

★ ಮಾಗ್ನಕಾರ್ಟ್ ಎಂದರೇನು ? ಅದರ ಇತಿಹಾಸವನ್ನುವಿವರಿಸಿ.

 ನಿರಂಕುಶ ಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬರಲು ಇಂಗ್ಲೆಂಡ್ ಇಟ್ಟ ಮೊದಲ ಹೆಜ್ಜೆ ಮಾಗ್ನಕಾರ್ಟ್. ಮಾಗ್ನಕಾರ್ಟ್ ಎಂದರೆ "ಮಹಾನ್ ಘೋಷಣೆಯ ಸನದು" ಎಂದರ್ಥ. ಪ್ರಜಾಪ್ರಭುತ್ವದ ಆಡಳಿತಕ್ಕೆ ಅಡಿಪಾಯವಾದ ಈ ಮಾಗ್ನಕಾರ್ಟ್ ರೂಢಿಗೆ ಬಂದದ್ದು 13ನೇಯ ಶತಮಾನದಲ್ಲಿ ಇಂಗ್ಲೆಂಡನಲ್ಲಿ ರಾಜ್ಯಭಾರ ಮಾಡುತ್ತಿದ್ದ ಜಾನ್ ಎಂಬ ದೊರೆಯ ಮೂಲಕ.


 * ಇತಿಹಾಸ :

ಇಂಗ್ಲೆಂಡನಲ್ಲಿ ನಿರಂಕುಶ ಆಡಳಿತ ಅಸ್ತಿತ್ವದಲ್ಲಿತ್ತು. ಈ ಜಾನ್ ನಿರಂಕುಶಾಧಿಕಾರಿಯಾಗಿದ್ದು ಒಮ್ಮೆ ಫ್ರಾನ್ಸ್ ಮೇಲೆ ಯುದ್ಧ ಸಾರಿದ. ಅನೇಕರನ್ನು ಕಡ್ಡಾಯವಾಗಿ ಸೈನ್ಯಕ್ಕೆ ಸೇರಿಸಿದ. ಇದರಿ೦ದ ಅನೇಕ ಜನರು ತೊಂದರೆಗೊಳಗಾದರು. ಒಂದು ದಿನ ಇಂಗ್ಲೆಂಡನ ಸರದಾರರೆಲ್ಲಾ ಸೇರಿ ತಮ್ಮ ಹಕ್ಕುಗಳನ್ನು ಗೌರವಿಸುವಂತೆಜಾನ್ ಮುಂದೆ ಬೇಡಿಕೆಯಿಟ್ಟರು. ಇದರ ಫಲವಾಗಿ 1215ರ ಜೂನ್ 5ರಂದು ಜಾನ್ದೊರೆಯಿಂದ ಲಿಖಿತ ಕರಾರನ್ನು ಬರೆಯಿಸಿಕೊಂಡರು. ಈ ಸನ್ನದು ಇತಿಹಾಸದಲ್ಲಿ ಮಾಗ್ನಕಾರ್ಟ್ ಎಂದೇ ಪ್ರಸಿದ್ಧವಾಗಿದೆ.

 * ಮಾಗ್ನಕಾರ್ಟ್ ನಲ್ಲಿದ್ದ ಅಂಶಗಳು :
 ರಾಜನು ಶಾಸನಗಳಿಗೆ ಪ್ರಜೆಗಳನ್ನು ಬಂಧಿಸಕೂಡದು ಹಾಗೂ ವಿಚಾರಣೆಯಿಲ್ಲದೇ ಯಾರನ್ನು ಶಿಕ್ಷಿಸಕೂಡದು, ಪ್ರಜೆಗಳ ಪ್ರತಿನಿಧಿಗಳ ಅನುಮತಿಯಿಲ್ಲದೆ ತೆರಿಗೆಯನ್ನು ವಿಧಿಸಬಾರದು ಹಾಗೂ ಯಾರ ಆಸ್ತಿಯನ್ನೂ ಒತ್ತಾಯಪೂರ್ವಕವಾಗಿ ವಶಪಡಿಸಿಕೊಳ್ಳಬಾರದು ಎಂಬ ಅಂಶಗಳನ್ನು ಆ ಕರಾರಿನಲ್ಲಿ ನಮೂದಿಸಲಾಗಿತ್ತು. ದೊರೆ ಜಾನ್ ಆ ಕರಾರುಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಜಾನ್ ನ ನಂತರ ಬಂದ ಅರಸರು ಮಾಗ್ನಕಾರ್ಟ್ ದಿಂದ ಪ್ರಜೆಗಳಿಗೆ ಪ್ರಯೋಜನವಾಯಿತು. ಇಂದಿಗೂ ಇಂಗ್ಲೆಂಡನಲ್ಲಿ ರೂಢಿಯಲ್ಲಿರುವ ಪ್ರಜಾಪ್ರಭುತ್ವದ ಆಡಳಿತಕ್ಕೆ ಇದೇ ಅಡಿಪಾಯವಾಗಿದೆ.

★ ಭಾರತದ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾದ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಗುರುತಿಸಿರಿ. (in 250 words) (IAS-2000 / GS-I)

★ ಭಾರತದ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾದ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಗುರುತಿಸಿರಿ.
(in 250 words) (IAS-2000 / GS-I)

 * ಭಾರತದಲ್ಲಿನ ಇಂದಿನ ಜನಪ್ರತಿನಿಧಿಗಳು 30 ಅಥವಾ 40 ವರ್ಷಗಳ ಹಿಂದೆ ಇದ್ದ ಜನಪ್ರತಿನಿಧಿಗಳಿಗಿಂತ ಭಿನ್ನವಾಗಿದ್ದಾರೆ. ರಾಜ್ಯ ಶಾಸನ ಸಭೆಗಳಲ್ಲಿ ಬಡಿದಾಟಗಳು ಸಾಮಾನ್ಯ ದೃಶ್ಯವಾಗಿವೆ. ಸಂಸತ್ತಿನಲ್ಲಿ ಅಸಂಸದೀಯ ನಡುವಳಿಕೆಗಳು ಅಧಿಕವಾಗಿವೆ. ಸಂಶಯಿತ ಹಿನ್ನೆಲೆಯ ವ್ಯಕ್ತಿಗಳು ಶಾಸನ ಸಭೆಗಳಲ್ಲಿ ಅಧಿಕವಾಗುತ್ತಿದ್ದಾರೆ. ಜನಪ್ರತಿನಿಧಿಗಳು ಚಲಾವಣೆಯಾದ ಮತದ ಅಲ್ಪಸಂಖ್ಯಾತ ಮತಗಳನ್ನು ಮಾತ್ರ ಪಡೆದರೂ ಆಯ್ಕೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಗೋಸ್ವಾಮಿ ಸಮಿತಿ ಚುನಾವಣಾ ಆಯೋಗವು ಸೇರಿದಂತೆ ಅನೇಕ ಮೂಲೆಗಳಿಂದ ಅನೇಕ ಸಲಹೆಗಳು ಬಂದಿವೆ, ಬರುತ್ತಲೂ ಇವೆ. ಈ ನಿಟ್ಟಿನಲ್ಲಿ ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆಗೆ ನಾವು ಎಲ್ಲಾ ಮೂಲೆಗಳಿಂದ ಬರುವ ಸಲಹೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಪಂಚಾಯತ್ ರಾಜ್ ಸಂಸ್ಥೆಗಳನ್ನುಳಿದು ಉಳಿದ ಸದನಗಳಿಗೆ ಪರೋಕ್ಷ ಚುನಾವಣೆಯನ್ನು ರದ್ದು ಮಾಡಬೇಕು. ವಿಜೇತ ಅಭ್ಯರ್ಥಿಯು ಶೇ.50 ಕ್ಕಿಂತ ಅಧಿಕ ಮತಗಳನ್ನು ಪಡೆಯುವುದನ್ನು ಕಡ್ಡಾಯ ಮಾಡಬೇಕು. ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಪ್ರಭಾವ ಕುಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರಾಜಕೀಯ ರಂಗ ಅಪರಾಧೀಕರಣ ಆಗುವುದನ್ನು ಇದರಿಂದ ತಡೆಯಬಹುದು. ಯಾವುದೇ ಅಪರಾಧಿ ಹಿನ್ನೆಲೆಯಿರುವ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು. ಚುನಾವಣೆಯಲ್ಲಿ ಹಣದ ಪ್ರಭಾವ ತಪ್ಪಿಸಲು ರಾಜ್ಯವೇ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಭರಿಸಬೇಕು. ಚುನಾವಣಾ ಆಕ್ರಮಗಳನ್ನು ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಕಡ್ಡಾಯವಾಗಿ ಬಳಸಿ, ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಬೇಕು. ರಾಜ್ಯಗಳಲ್ಲಿ ಚುನಾವಣಾ ಸಮಯದಲ್ಲಿ ಆಡಳಿತ ಪಕ್ಷದಿಂದ ಆಡಳಿತ ಯಂತ್ರ ದುರುಪಯೋಗವಾಗದಂತೆ ತಡೆಯಲು, ಚುನಾವಣಾ ಸಮಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಹಾಗೂ ಚುನಾವಣಾ ಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಕೈಗೊಂಡಿರುವ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಸರ್ಕಾರಿ ಯಂತ್ರವನ್ನು ದುರುಪಯೋಗವಾಗದಂತೆ ತಡೆಹಿಡಿಯುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿ ತರಬೇಕು.

Thursday, 10 April 2014

★ ಇಂಟರ್ ನೆಟ್.ಆರ್ಗ್ (internet.org) (ಟಿಪ್ಪಣಿ)

★ ಇಂಟರ್ ನೆಟ್.ಆರ್ಗ್ (internet.org) :

ಜಗತ್ತಿನ ಜಗತ್ತಿನ ಪ್ರತಿಯೊಬ್ಬರು ಇಂಟರ್ ನೆಟ್ ಅನ್ನು ಬಳಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಈ ಕಾರ್ಯಕ್ರಮವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ತಂತ್ರಜ್ಞಾನ ದಿಗ್ಗಜರಾದ ನೋಕಿಯಾ, ಎರಿಕ್ ಸನ್, ಒಪೆರಾ, ಕ್ವಲಕಂ, ಸ್ಯಾಮಸಂಗ್ ಮತ್ತು ಮೀಡಿಯಾ ಟೆಕ್ ಸಂಸ್ಥೆಗಳು ಈ ಕಾರ್ಯಕ್ರಮದ ರೂವಾರಿಗಳು. ಈ ತಂಡಕ್ಕೆ ಹೊಸ ಸೇರ್ಪಡೆ ಫೇಸ್ ಬುಕ್.

 *.ಈ ವಿನೂತನ ಕಾರ್ಯಕ್ರಮದಡಿ ಅಗ್ಗ ದರದ ಆದರೆ ಉತ್ಕೃಷ್ಟ ದರ್ಜೆಯ ಸ್ಮಾರ್ಟ್ ಫೋನ್ ಗಳನ್ನು ಅಭಿವೃದ್ದಿಪಡಿಸಿ, ವಿಶ್ವದ 5 ಬಿಲಿಯನ್ ಜನ ಸಮುದಾಯಕ್ಕೆಅಂತರ್ಜಾಲ ಸೌಲಭ್ಯ ಒದಗಿಸುವುದು ಗುರಿಯಾಗಿದೆ.

*.ಇದಲ್ಲದೇ, ಕಡಿಮೆ ಡಾಟ ಬಳಸುವ ಅಪ್ಲಿಕೇಷನ್ ಅಭಿವೃದ್ದಿಪಡಿಸಿ ಇಂಟರ್ ನೆಟ್ ಬಳಕೆಗೆ ತಗಲುವ ವೆಚ್ಚವನ್ನು ಕಡಿಮೆಗೊಳಿಸುವತ್ತಲು ತಂತ್ರಜ್ಞಾನ ರೂಪಿಸಲಿದೆ.

★ “ಭಾರತ್ ಗ್ರಾಮೀಣ ಜೀವನೋಪಾಯ ಫೌಂಡೇಶನ್ (Bharat Rural Livelihood Foundation)” (ಟಿಪ್ಪಣಿ)

★ “ಭಾರತ್ ಗ್ರಾಮೀಣ ಜೀವನೋಪಾಯ ಫೌಂಡೇಶನ್
(Bharat Rural Livelihood Foundation)” :

ಭಾರತ ಗ್ರಾಮೀಣ ಜೀವನೋಪಾಯ ಫೌಂಡೇಶನ್ ಸ್ಥಾಪನೆಯ ಪ್ರಸ್ತಾವನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಮೇಲಿನ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಈ ಮಹತ್ವದ ನಿರ್ಣಯದಿಂದ ಭಾರತ್ ಗ್ರಾಮೀಣ ಜೀವನೋಪಾಯ ಫೌಂಡೇಶನ್ -1860 ಅಡಿ ಕಾರ್ಯನಿರ್ವಹಿಸಲಿದೆ.

★ ಕಾರ್ಯವೇನು?
*.ಸರ್ಕಾರದ ಜತೆಗೂಡಿ ನಾಗರಿಕ ಸಾಮಾಜಿಕ ಕಾರ್ಯಗಳ ಸರಳವಾಗಿ ಜಾರಿಗೆ ತರಲು ಸಹಕರಿಸುವುದು. ಸರ್ಕಾರ ತರುವ ಜೀವನೋಪಾಯ ಯೋಜನೆಗಳನ್ನು ಅಗತ್ಯ ವರ್ಗಕ್ಕೆ ಅದರಲ್ಲೂ ಮಹಿಳೆಯರಿಗೆ ತಲುಪುವಂತೆ ಮಾಡುವುದು.

 *.ಭಾರತ್ ಗ್ರಾಮೀಣ ಜೀವನೋಪಾಯ ಫೌಂಡೇಶನ್ ನಾಗರಿಕ ಸಾಮಾಜಿಕ ಸಂಸ್ಥೆಗಳಿಗೆ ಬೇಕಾಗುವ ಆರ್ಥಿಕ ಸಹಾಯವನ್ನು ಒದಗಿಸಲಿದೆ.

*.ಈ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಸುಮಾರು 10 ಲಕ್ಷ ಬಡ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿದೆ.

 *.ಈ ಸಂಸ್ಥೆಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 500 ಕೋಟಿ ಹಣವನ್ನು ನೀಡಲಿದೆ.

*.ಸರ್ಕಾರದ ಭಾಗಿತ್ವದಿಂದ ಒಂದೆಡೆಯಾದರೆ ಖಾಸಗಿ ಮತ್ತು ಸರ್ಕಾರೇತರ ಸಂಸ್ಥೆಗಳ ಭಾಗಿತ್ವದಲ್ಲಿಯೂ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ.

 *.ಈ ಸಂಸ್ಥೆಯ ಸ್ಥಾಪನೆಗೆ ಏಪ್ರಿಲ್ 18, 2013 ರಂದು ಮೊದಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆ ಬಳಿಕ ಉನ್ನತಸಚಿವರ ಸಮಿತಿಗೆ ಈ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಲಾಗಿತ್ತು.

★ "ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ" (National Urban Livelihoods Mission) ( ಟಿಪ್ಪಣಿ)

★ "ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ"
(National Urban Livelihoods Mission) :

ಕೇಂದ್ರ ಸರ್ಕಾರವು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯನ್ನು ಪುನರ್ ರಚಿಸಿ ಅದನ್ನು "ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ" (National Urban LivelihoodsMission) ಎಂದು ಪುನರ್ ನಾಮಕರಣ ಮಾಡಿ ಚಾಲನೆಯಲ್ಲಿ ತಂದಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ರೂ 6405 ಕೋಟಿಯನ್ನು ವ್ಯಯಿಸಲಿದೆ.

 ★ ಯೋಜನೆಯ ಬಗ್ಗೆ:
*.ನಗರದಲ್ಲಿ ಬಡತನ ನಿರ್ಮೂಲನೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಶೋಷಿತ ವರ್ಗದ ಜನರಿಗೆ ಸ್ವ-ಉದ್ಯೋಗ ಜತೆಗೆ ಕೌಶಲ್ಯ ವೃದ್ದಿಯನ್ನು ಹೆಚ್ಚಿಸಿ ಸ್ವ-ಉದ್ಯೋಗಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರವನ್ನುವಹಿಸಲಿದೆ.

*.ನಗರ ಬಡಜನತಗೆ ವಸತಿ ಸೌಕರ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ಒದಗಿಸಲಿದೆ.

 *.ಇದರ ಜೊತೆಗೆ ನಗರ ಬೀದಿ ವ್ಯಾಪಾರಿಗಳಿಗೂ ಈ ಯೋಜನೆಯಡಿ ಸಾಮಾಜಿಕ ಭದ್ರತೆ, ಸಾಲ ಸೌಕರ್ಯ ಮತ್ತು ಕೌಶಲ್ಯ ಅಭಿವೃದ್ದಿ ಉತ್ತೇಜಿಸಲು ಗುರಿಹೊಂದಲಾಗಿದೆ.

★ ಅನುಷ್ಠಾನ:
*.ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.ಮೊದಲನೇ ಹಂತ (2013-17) ಹಾಗೂ ಎರಡನೇ ಹಂತ (2017-22).

 *.ಮೊದಲ ಹಂತದಲ್ಲಿ ಈ ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿರುವ ನಗರಗಳಲ್ಲಿ ಮತ್ತು ಒಂದು ಲಕ್ಷಕ್ಕಿಂತ ಕಡಿಮೆ ಇರುವ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಹಾಗೂ ಯೋಜನೆಯ ಅನುಷ್ಠಾನಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ 75: 25 ಅನುಪಾತದಲ್ಲಿ ಭರಿಸಲಿವೆ

 *.ಈಶಾನ್ಯ ರಾಜ್ಯ ಮತ್ತು ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳಲ್ಲಿ ಈ ಯೋಜನೆಯ ಅನುಷ್ಠಾನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ 90:10 ಅನುಪಾತದಲ್ಲಿ ಭರಿಸಲಿವೆ.

Friday, 4 April 2014

★ ಸಾಮಾನ್ಯ ಜ್ಞಾನ - 3. (General Knowledge -3)

★ ಸಾಮಾನ್ಯ ಜ್ಞಾನ - 3.
(General Knowledge -3)

 * L.P.G ಸೋರುವಿಕೆಯನ್ನು ಪತ್ತೆಹಚ್ಚಲು ಉಪಯೋಗಿಸುವ ರಸಾಯನಿಕ: — ಈಥೈಲ್ ಆಲ್ಕೊಹಾಲ್.

 * ಖೈಬರ್ ಕಣಿವೆ (ಖೈಬರ್ ಪಾಸ್) ಎಲ್ಲಿದೆ? — ಪಾಕಿಸ್ತಾನ.

 * ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ :— ಆಪತ್.

 * ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:— 38ನೇ ಪ್ಯಾರಲಲ್.

 * ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:— ಅ.ನ.ಕೃ.

 * ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು? —
ಚಂದ್ರಹಾಸ ಕಥೆ.

 * ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:— 6.
ಅವುಗಳೆಂದರೆ (English, French, Russian, Spanish, Chine, Arabic)

* ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:— ಬೆಳಗಾವಿ.

 * ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:— ದೈನಿಕ್ ಜಾಗರಣ್.

 * ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು? — ಕಂಪ್ಯೂಟರ್ ಸಾಫ್ಟವೇರ್.

 * ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ :—
 30 ಮತ್ತು 5627.

 * ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು? —
ಕ್ಯಾಬಿನೆಟ್ ಮಿಷನ್ ಯೋಜನೆ.

 * ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು? — ALMA.(ಅಟಕಾಮಾ ಮರುಭೂಮಿಯಲ್ಲಿದ್ದು - 66 ರೇಡಿಯೋ ಡಿಶ್ ಗಳನ್ನು ಜೋಡಿಸಲಾಗಿದೆ)

 * ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?— ನಂದನ್ ಕಣ್ಣನ್.

 * ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ ?— ಕೋಲಾರ -ಹೊರಮಾವು.

 * ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?—
ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ - ಚಂಬೂರ್ ಪ್ರದೇಶಗಳ ಮಧ್ಯೆ)

 * 'ಕಿಸಾನ್ ದಿವಸ್' ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ? —
 ಮಾಜಿ ಪ್ರಧಾನಿ ಚರನ್ ಸಿಂಗ್. (ಡಿಸೆಂಬರ್ 23)

 * ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?— ಚೀನಾ.

 * 'ರಾಮನಾಥ್ ಗೋಯೆಂಕಾ ಪ್ರಶಸ್ತಿ' ಯನ್ನು ಕೊಡಲಾಗುವ ಕ್ಷೇತ್ರ:—
 ಪತ್ರಿಕೋದ್ಯಮ.

 * ನವೆಂಬರ್ 2010ರಲ್ಲಿ ಭಾರತ ಸರ್ಕಾರ SABALA ( ‘Sabla’ or the ‘Rajiv Gandhi Scheme for Adolescent Girls’ ) ಎಂಬ ಯೋಜನೆ ಜಾರಿಗೆ ತಂದಿರುವ ಮುಖ್ಯ ಉದ್ದೇಶ -

(ಇದರ ಪ್ರಕಾರ Integrated Child Development Services ವತಿಯಿಂದ 11ರಿಂದ 18 ವಯಸ್ಸಿನ ಒಳಗಿನ ಹೆಣ್ಣು ಹುಡುಗಿಯರಿಗೆ ಪೌಷ್ಠಿಕ ಆಹಾರ ಮತ್ತು ವಿಶೇಷ ತರಬೇತಿ ನೀಡಲಾಗುವುದು.)

 * ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ ?—
ಯುನೈಟೆಡ್ ಸ್ಟೇಟ್ಸ್.

 * ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ? — ಪೆರಿಸ್ಕೋಪ್.

 * ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು ?
 or
* ಕಲ್ಕತ್ತಾದಿಂದ ದೆಹಲಿಗೆ ಬ್ರಿಟನ್ ಅಧಿಪತ್ಯದ ಕೇಂದ್ರ ಸ್ಥಾನ ಬದಲಾವಣೆ ಪ್ರಸ್ತಾವನೆಯನ್ನು ಮುಂದಿಟ್ಟ ಗವರ್ನರ್ ಜನರಲ್ ಯಾರು ? — ಲಾರ್ಡ್ ಹಾರ್ಡಿಂಜ್.

 * ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ ? — E.L. ಥಾರ್ನ್ ಡೈಕ್.

 * ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ? —
ಅನ್ನಾ ಬೆಲ್ಲಿಲ್ಯಾಂಡ್.

 * ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ : —
 ಪಿ.ವಿ. ನರಸಿಂಹರಾವ್.

 * ವಿಶ್ವದಲ್ಲೇ ಅತಿದೊಡ್ಡದಾದ 'ತ್ರಿ ಗೊಜರ್ಸ್ ಜಲಾಶಯ' ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ ? —
 ಯಾಂಗ್ಜಿ ನದಿ.

 * ಪರಿಸರ ಸಂರಕ್ಷಣೆಗೊಸ್ಕರ 'ಗ್ರೀನ್ ಟ್ರ್ಯಾಕ್' ನ್ನು ವಿಧಿಸಿದ ಮೊದಲ ರಾಷ್ಟ್ರ ? —
 ನ್ಯೂಜಿಲೆಂಡ್.

 * ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ, ಉದ್ದವಾದ ಪರ್ವತ ಶ್ರೇಣಿ ಯಾವುದು ?—
ಆಂಡೀಸ್ ಪರ್ವತಗಳು (ದ.ಅಮೇರಿಕ)

 * ಪವಿತ್ರ ಪರ್ವತ (Holy Mountain) ಎಂದು ಯಾವುದನ್ನು ಕರೆಯುತ್ತಾರೆ ? — ಫ್ಯೂಜಿಯಾಮಾ (ಜಪಾನ್)

 * ವಿಶ್ವ ಬ್ಯಾಂಕ್ ನ 'ಆಣೆಕಟ್ಟು ಪುನಶ್ಚೇತನ ಯೋಜನೆ'ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ -
( ಕೇರಳ )

 * ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ -
 (ಥೋರಿಯಂ)

 * ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ? —
32ನೇ ವಿಧಿ.

 * 'ಸಂವಿಧಾನದ ಪೀಠಿಕೆ' ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು? —
 ಬೇರುಬೆರಿ ಪ್ರಕರಣದಲ್ಲಿ.

 * ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?—
 ಫಜಲ್ ಅಲಿ.

 * ನೂತನ ಶತಮಾನದ ಮೊದಲ ಸೂರ್ಯಕಿರಣಗಳು ಸ್ಪರ್ಶಿಸಿದ "ಕಚಲ್ " ದ್ವೀಪ ಎಲ್ಲಿ ಕಂಡುಬರುತ್ತದೆ ?—
 ನಿಕೋಬಾರ್ ಸಮುದಾಯ.

 * ಭಾರತದಲ್ಲಿ ಸೂರ್ಯ ಉದಯಿಸುವ ಅರುಣಾಚಲ ಪ್ರದೇಶ, ಗುಜರಾತ್ ರಾಷ್ಟ್ರಗಳ ನಡುವೆ ಇರುವ ವ್ಯತ್ಯಾಸ ಎಷ್ಟು ? —
 2 ಗಂಟೆಗಳು.

 *,'ಅಂತರ್ರಾಷ್ಟ್ರೀಯ ಓಝೊನ್ ' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ? —
 ಸೆಪ್ಟೆಂಬರ್ 16.

 * ನ್ಯಾಟೋ (NATO) ದ ಪ್ರಧಾನ ಕಾರ್ಯಾಲಯ ಎಲ್ಲಿದೆ ? —
 ಬ್ರಸ್ಸೆಲ್ಸ್ (ಬೆಲ್ಜಿಯಂ)

 * ಅಂತರ್ರಾಷ್ಟ್ರೀಯ ಒಲಂಪಿಕ್ ಸಮಿತಿ ಯ ಪ್ರಧಾನ ಕಾರ್ಯಾಲಯ ಎಲ್ಲಿದೆ ? —
 ಲುಸ್ಸಾನೆ (ಸ್ವಿಟ್ಜರ್ಲೆಂಡ್)

 * ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407 ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ -
(ವಿಶ್ವಬ್ಯಾಂಕ್)

 * RTE ಇದರ ವಿಸ್ತೃತ ರೂಪ :—
 (Right to Education)

 * ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಸೇರುವ ನಗರಗಳಾವವು ? —
ಕೊಲ್ಕತ್ತಾ -ಅಮೃತಸರ.

 * ಭಾರತದ ಅಶಾಂತಿ ಪಿತಾಮಹ (Father of Indian unrest) ಎಂದು ಖ್ಯಾತಿ ಪಡೆದವರು ?—
ಬಾಲ ಗಂಗಾಧರ ತಿಲಕ.

 * ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಭಾರತದ 40% ಜನತೆ ಅಂತರರಾಷ್ಟ್ರೀಯ ಬಡತನ ರೇಖೆ(IPL) (ದಿನವೊಂದಕ್ಗಿಂಕೆ 1.25 ಅಮೆರಿಕನ್ತ ಡಾಲರ್ ಗಿಂತ ಕಡಿಮೆ ಸಂಪಾದನೆ ) ಕೆಳಗೆ ವಾಸಿಸುತ್ತಿದ್ದಾರೆ.

 * ಒಂದು ಟನ್ ಕಾಗದವನ್ನು ಉತ್ಪಾದಿಸಲು ಬಳಸಲಾಗುವ ನೀರಿನ ಪ್ರಮಾಣ ? —
 55,000 ಲೀಟರ್.

 * ಪ್ರಾಥಮಿಕ ಬಣ್ಣಗಳು ಯಾವುವು ? —
ನೀಲಿ, ಹಸಿರು ಮತ್ತು ಕೆಂಪು.

 * ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ ಕಲ್ಪಿಸಿದೆ ? —
 7ನೇ ವಿಧಿ.

 * ಭಾರತದ ಯಾವ ರಾಜ್ಯದಲ್ಲಿ ಸೂರ್ಯ ಕೊನೆಯದಾಗಿ ಉದಯಿಸುತ್ತಾನೆ ? —
ಗುಜರಾತ್.

 * ಯಾವ ವಿಟಮಿನ್ ಲೋಪದಿಂದ ಬಂಜೆತನ ಬರುತ್ತದೆ? —
ವಿಟಮಿನ್ E.

 * ರಕ್ತ ಹೆಪ್ಪುಗಟ್ಟಲು ಸಹಾಯವಾಗುವ ವಿಟಮಿನ್ ಯಾವುದು ? —
 ವಿಟಮಿನ್ K.

 * ಸಿರಿಯಾದ ರಾಜಧಾನಿ :
( ಡಮಾಸ್ಕಸ್)

 * ಭಾರತದ ಪ್ರಪ್ರಥಮ ಸಮರ್ಪಿತ ಮಿಲಿಟರಿ ಉಪಗ್ರಹ GSAT -7 ರ ಹೆಸರು:
( ರುಕ್ಮಿಣಿ)

 * ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು ನೀಡುತ್ತಿರುವ ಯೋಜನೆ -
( ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.)

 * SAFTA ಎಂದರೆ -
(South Asian Free Trade Agreement)

 * ಭಾರತದ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮೀಣ ಬ್ಯಾಂಕುಗಳಿಗೆ ಬಡ್ಡಿಯ ದರವನ್ನು ನಿಗದಿ ಮಾಡುವ ಸಂಸ್ಥೆ -
(NABARD)

 * ಭಾರತದ ಮೊದಲ ಯೋಜನಾ ಆಯೋಗದ ಅವಧಿ -
( 1951-1956 )

 * Development As Freedom ಕೃತಿಯ ಕರ್ತೃ -
 (ಅಮರ್ತ್ಯ ಸೇನ್)

 * 2010ರ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ -
(119)

 * ಚಾಲ್ತಿ ಕಾನೂನಿನ ಪ್ರಕಾರ ಭಾರತದಲ್ಲಿ ದಿನದ ಕನಿಷ್ಟ ಕೂಲಿ -
(ರೂ.125/-)

 * United Nations Conference on Trade and Development (UNCTAD) ಸಂಸ್ಥೆಯ ಪ್ರಕಾರ 2010 ರಿಂದ 2012ರ ಅವಧಿಯಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ವಿದೇಶೀ ಬಂಡವಾಳ ಹೂಡಿಕೆ ಪಡೆಯುವ ದೇಶ -
 (ಭಾರತ)

 * ಜಾಗತಿಕ ಮಟ್ಟದಲ್ಲಿ RIC ಗುಂಪು ಎಂದರೆ - ( Russia - India - China )

★ “ರಾಮ್ಸರ್ ಕನ್ ವೆನ್ ಶನ್” (Ramsar Convention)” :

★ “ರಾಮ್ಸರ್ ಕನ್ ವೆನ್ ಶನ್”
 (Ramsar Convention)” :

*“ತೇವಭೂಮಿಗಳ (Wetland)” ಸಂರಕ್ಷಣೆಗಾಗಿ 1971 ರಲ್ಲಿ ಇರಾನ್ ನ ರಾಮ್ಸರ್ ನಲ್ಲಿ ಅಸ್ಥಿತ್ವಕ್ಕೆ ಬಂದ ಅಂತರರಾಷ್ಟ್ರೀಯ ಒಪ್ಪಂದವೇ “ರಾಮ್ಸರ್ ಕನ್ ವೇನ್ ಶನ್”.

* ಇದೊಂದು ಇದೊಂದು ಅಂತರರಾಷ್ಟ್ರೀಯ ಒಪ್ಪಂದವಾಗಿದ್ದು, ವಿಶ್ವ ತೇವಭೂಮಿಗಳ ಸಂರಕ್ಷಣಾ ವೇದಿಕೆಯಾಗಿದೆ. ಸದಸ್ಯ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಈ ಒಪ್ಪಂದದ ಮೂಲಕ ಗುರುತಿಸಲಾದ ತೇವಭೂಮಿ ಮತ್ತು ಅಲ್ಲಿನ ಜೀವ ವೈವಿಧ್ಯಮಗಳ ರಕ್ಷಣೆಗೆ ಬದ್ದವಾಗಿರಬೇಕು.

 * ಸದ್ಯ 167 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸದಸ್ಯತ್ವ ಪಡೆದಕೊಂಡಿವೆ. ಏಪ್ರಿಲ್ 17, 2013 “ಒಮೆನ್” ದೇಶ ಈ ಒಪ್ಪಂದಕ್ಕೆಸಹಿ ಹಾಕಿದ 167 ನೇ ರಾಷ್ಟವೆನಿಸಿತು.

 *.ಸ್ಥಳೀಯ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಹಕಾರ ಮೂಲಕ “ತೇವ ಭೂಮಿಗಳ” ನ್ನು ವಿವೇಕಯುತವಾಗಿ ಬಳಸಿಕೊಂಡು ಸುಸ್ಥಿರ ಅಭಿವೃದ್ದಿಯನ್ನು ಹೊಂದುವುದು ಇದರ ಮುಖ್ಯ ಉದ್ದೇಶ.

 * ಇತ್ತೀಚೆಗೆ (2013) ರಾಮ್ಸರ್ ಕನ್ ವೇನಶನ್” ಕುರಿತಾದ ಸಭೆ ನಡೆದದ್ದು : ಸ್ವಿಟ್ಜರ್ಲ್ಯಾಂಡ್ ಲ್ಯಾಂಡ್ ನ ಗ್ಲಾಂಡ್ ನಲ್ಲಿ 46 ನೇ ಸಭೆ.

 *.ಫೆಬ್ರವರಿ 2 ರಂದು: “ವಿಶ್ವ ತೇವಭೂಮಿ ದಿನ(World Wetland Day)” ವನ್ನಾಗಿ ಆಚರಿಸಲಾಗುತ್ತದೆ.

 *.ಭಾರತದಲ್ಲಿ ಸದ್ಯ “ರಾಮ್ಸರ್ ಕನ್ ವೆನ್ ಶನ್” ಗುರುತಿಸಲ್ಪಟ್ಟ 26 ತೇವಭೂಮಿಗಳಿವೆ.

* ರಾಮ್ಸರ್ ಕನ್ ವೆನ್ ಶನ್ (Ramsar Convention)” ನ ನೂತನ ಜನರಲ್ ಸೆಕ್ರಟರಿಯಾಗಿ “ಡಾ.ಕ್ರಿಸ್ಟೋಫರ್ ಬ್ರಗ್ಸ್” ರವರು ನೇಮಕಗೊಂಡಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನ ಗ್ಲಾಂಡ್ ನಲ್ಲಿ ನಡೆದ 46 ನೇ “ರಾಮ್ಸರ್ ಕನ್ ವೇನಶನ್” ಕುರಿತಾದ ಸಭೆಯಲ್ಲಿ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. “ಟೈಗಾ ಅನದ (Taiga Anada)” ರವರ ಉತ್ತರಾಧಿಕಾರಿಯಾಗಿ ಕ್ರಿಸ್ಟೋಫರ್ರವರು ಅಧಿಕಾರವಹಿಸಿಕೊಳ್ಳಲಿದ್ದಾರೆ.

* ಡಾ.ಕ್ರಿಸ್ಟೋಫರ್ ಬಗ್ಗೆ:
ಡಾ.ಕ್ರಿಸ್ಟೋಫರ್ ರವರು “ಯುನೈಟೆಡ್ ನೇಷನ್ ಡೆವೆಲಪ್ ಮೆಂಟ್ ಪ್ರೋಗ್ರಾಂ (UNDP)”,
“ಯುನೈಟೆಡ್ ನೇಷನ್ ಎನಮಿರನ್ ಮೆಂಟ್ ಪ್ರೋಗ್ರಾಂ (UNEP)” ಮತ್ತು
“ಯುನೈಟೆಡ್ ನೇಷನ್ ಎನಮಿರನ್ ಮೆಂಟ್ ಪ್ರೋಗ್ರಾಂ (UNEP)- ಗ್ಲೋಬಲ್ ಎನವಿರನ್ ಮೆಂಟ್ ಫೆಸಿಲಿಟಿ” ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವರು.

★ ಕ್ರಯೋಜೆನಿಕ್ ತಂತ್ರಜ್ಞಾನ ಎಂದರೇನು? ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ? ಅದರ ಇತರ ಉಪಯೋಗಗಳ ಕುರಿತು ವಿಶ್ಲೇಷಿಸಿರಿ. ( What do you mean by Cryogenic Technology ? How the Cryogenic Fuel works in Rocket Launcher ? Analyse the significance of Cryogenic Technology)

★ ಕ್ರಯೋಜೆನಿಕ್ ತಂತ್ರಜ್ಞಾನ ಎಂದರೇನು? ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ?
 ಅದರ ಇತರ ಉಪಯೋಗಗಳ ಕುರಿತು ವಿಶ್ಲೇಷಿಸಿರಿ.
( What do you mean by Cryogenic Technology ? How the Cryogenic Fuel works in Rocket Launcher ? Analyse the significance of Cryogenic Technology)

 ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ತಂತ್ರಜ್ಞಾನದ ಮೂಲಕ ಅಭಿವೃದ್ದಿ ಪಡಿಸಿದ ಜಿಎಸ್ಎಲ್‌ವಿ’ ಡಿ5 ಉಪಗ್ರಹ ವಾಹಕ ಯಶಸ್ವಿ ಉಡಾವಣೆಯು ಭಾರತಕ್ಕೆ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನ ತಂದುಕೊಟ್ಟಿವೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಕ್ರಯೋಜೆನಿಕ್ ರಾಕೆಟ್ ಎಂಜಿನ್ ಕುರಿತ ಕೆಲವು ಮಾಹಿತಿಗಳು ಇಲ್ಲಿವೆ.

 * ಕ್ರಯೋಜೆನಿಕ್ ಇಂಧನ (Cryogenic Fuel) ಎಂದರೇನು?
 — ಕ್ರಯೋಜೆನಿಕ್ ಇಂಧನವು ಅತ್ಯಧಿಕ ಪ್ರಮಾಣದಲ್ಲಿ ತಂಪಾಗಿಸಿದ ಜಲಜನಕ ಮತ್ತು ಆಮ್ಲಜನಕದ ಸಂಯೋಜನೆಯಾಗಿದೆ. (ಅಂದರೆ –253 ಡಿಗ್ರಿ ಸೆಲ್ಸಿಯಸ್‌ನಷ್ಟು ಜಲಜನಕ ಮತ್ತು –183 ಡಿಗ್ರಿ ಸೆಲ್ಸಿಯಸ್‌ನಷ್ಟು ಆಮ್ಲಜನಕ).

 * ಕ್ರಯೋಜೆನ್ (Cryogen) ಹಾಗೆಂದರೇನು?
— ‘ಕ್ರಯೋಜೆನ್’ ಎಂದರೆ ಶೀತಲೀಕರಣದ ಉತ್ಪತ್ತಿ ಎಂದರ್ಥ. ಅಂದರೆ –150 (ಮೈನಸ್‌) ಡಿಗ್ರಿ ಸೆಲ್ಸಿಯಸ್‌, –238 ಡಿ.ಎಫ್ (ಡಿಗ್ರಿ ಫ್ಯಾರನ್‌ಹೀಟ್‌) ಅಥವಾ 123 ಕೆ. (ಕೆಲ್ವಿನ್) ಗಿಂತ ಕಡಿಮೆ ತಾಪಮಾನ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.ಇಂದು ಕ್ರಯೋಜೆನಿಕ್ ಪದವು ಅತ್ಯಂತ ‘ಕಡಿಮೆ ತಾಪಮಾನ’ ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ.

- ಭೌತವಿಜ್ಞಾನದ ಪ್ರಕಾರ ಕಡಿಮೆ ತಾಪಮಾನದಲ್ಲಿ ವಸ್ತುಗಳ ಭೌತಿಕ ರೂಪ ಬದಲಾವಣೆ ಮತ್ತು ಉತ್ಪಾದನೆಯ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಕ್ರಯೋಜೆನಿಕ್ ಎನ್ನುತ್ತಾರೆ. ಇದನ್ನು ಅಧ್ಯಯನ ನಡೆಸುವವರಿಗೆ ಕ್ರಯೋಜೆನಿಸ್ಟ್ ಎಂದು ಕರೆಯಲಾಗುತ್ತದೆ.

 ಇನ್ನೂ ಸರಳವಾಗಿ ಹೇಳುವುದಾದರೆ, ಆಹಾರ ಪದಾರ್ಥಗಳು, ಕೆಲವು ಔಷಧಿಗಳು ಮತ್ತು ಲಸಿಕೆಗಳನ್ನು ಕೆಡದಂತೆ ಇರಿಸಲು ಬಳಸುವ ಶೀತಲೀಕರಣ (ಫ್ರಿಡ್ಜ್) ವ್ಯವಸ್ಥೆಯ ಬಹಳಷ್ಟು ಸುಧಾರಿತ ತಂತ್ರಜ್ಞಾನದಂತೆ ಕ್ರಯೋಜೆನ್ ಸಹ ಕೆಲಸ ಮಾಡುತ್ತದೆ.

 ಹೀಗಿದ್ದೂ, ಎರಡರ ನಡುವೆಯೂ ಸಾಕಷ್ಟು ವ್ಯತ್ಯಾಸಗಳಿವೆ. ಫ್ರಿಡ್ಜ್‌ ಒಳಗೆ ತಂಪು ವಾತಾವರಣ ನಿರ್ಮಿಸಲು ಹೊರಗಿನಿಂದ ಶಾಖವನ್ನು(ವಿದ್ಯುತ್, ರಸಾಯನಿಕ ವ್ಯವಸ್ಥೆ ಮೂಲಕ) ನೀಡಲಾಗುತ್ತದೆ. ಆದರೆ ಕ್ರಯೋಜೆನಿಕ್‌ ತಂತ್ರಜ್ಞಾನ ಫ್ರಿಡ್ಜ್‌ಗಿಂತ ಬಹಳ ಭಿನ್ನವಾದ ರೀತಿಯಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುತ್ತದೆ. ಶೀತಲೀಕರಿಸಿದ ಆಹಾರವನ್ನು ಹೆಚ್ಚು ದಿನಗಳವರೆಗೆ ಸಂರಕ್ಷಿಸಲು ಸಾಧ್ಯವಾಗಿರುವುದೇ ಇದಕ್ಕೆ ಉತ್ತಮ ಉದಾಹರಣೆ.

 — ಕ್ರಯೋಜೆನಿಕ್ ತಂಪಾಗಿಸಿದ ದ್ರವ ಇಂಧನ, ಅಂದರೆ ಜಲಜನಕ ಮತ್ತು ಆಮ್ಲಜನಕವನ್ನು ಒಳಗೊಂಡಿದೆ. ಹೀಗಾಗಿ ಅತ್ಯಂತ ಕಡಿಮೆ ತಾಪಮಾನದಿಂದ ಕೂಡಿದೆ.ಕ್ರಯೋಜೆನಿಕ್ ವೈಶಿಷ್ಟ್ಯಶಾಖ ಪ್ರಕ್ರಿಯೆಯಲ್ಲಿ ಒಂದು ಲೋಹಕ್ಕೆ ಶಾಖ ನೀಡಿ ಅದನ್ನು ತಣಿಸಿದ ಮೇಲೂ ಶಾಖದ ಪ್ರಮಾಣ ಸ್ಪಲ್ಪ ಉಳಿದಿರುತ್ತದೆ. ಆದರೆ ಕ್ರಯೋಜೆನಿಕ್ ಪ್ರಕ್ರಿಯೆಯಲ್ಲಿ ಲೋಹವನ್ನು ತಣ್ಣಗಾಗಿಸಿದ ನಂತರ ಉಳಿಯುವ ಉಷ್ಣತೆಯನ್ನೂ ತಗ್ಗಿಸುವ ಸಾಮರ್ಥ್ಯವಿದೆ.

 * ಕ್ರಯೋಜೆನಿಕ್ ತಾಪಮಾನ ಮಾಪಕ :—  ಸಾಮಾನ್ಯವಾಗಿ ತಾಪಮಾನವನ್ನು ಅಳೆಯಲು ಸಾಪೇಕ್ಷ ತಾಪಮಾನ ಮಾಪಕಗಳಾದ ಸೆಲ್ಸಿಯಸ್ ಮತ್ತು ಫ್ಯಾರನ್‌ಹೀಟ್ ಬಳಸಲಾಗುತ್ತದೆ.ಆದರೆ ಕ್ರಯೋಜೆನಿಕ್ ತಾಪಮಾನದ ಅಧ್ಯಯನ ನಡೆಸಲು ವಿಜ್ಞಾನಿಗಳು ನಿರಪೇಕ್ಷ ತಾಪಮಾನ ಮಾಪಕಗಳಾದ ಕೆಲ್ವಿನ್ ಮತ್ತು ರಾಂಕಿನ ಮಾಪಕಗಳನ್ನು ಬಳಸಿದ್ದಾರೆ.

— ಈ ಕ್ರಯೋಜೆನಿಕ್ ಇಂಧನವನ್ನು ದ್ರವರೂಪದಲ್ಲಿ ಅತ್ಯಂತ ತಂಪಾದ ವಾತಾವರಣದಲ್ಲಿ ಇಡಲು ಜೇಮ್ಸ್ ಡೆವರ್‌ ಎಂಬ ವಿಜ್ಞಾನಿ ಅಭಿವೃದ್ಧಿಪಡಿಸಿರುವ ‘ಡೆವರ್‌ ಫ್ಲಾಸ್ಕ್’ ನಲ್ಲಿ (Dewar flasks) ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

 * ಕ್ರಯೋಜೆನಿಕ್ ತಂತ್ರಜ್ಞಾನದ ಇತಿಹಾಸ : —  ‘ಕ್ರಯೋಜೆನಿಕ್’ ಪದವನ್ನು ಗ್ರೀಕ್ ಪದವಾದ ‘kyros’ ಅಂದರೆ ‘ಶೀತ’ ಅಥವಾ ‘ಘನೀಕರಿಸು’ ಎಂದು, ಮತ್ತು ‘genes’ ಅಂದರೆ ‘ಹುಟ್ಟು’ ಅಥವಾ ‘ಉತ್ಪತ್ತಿ’ ಎಂಬ ಅರ್ಥದಿಂದ ಕೂಡಿದೆ. ವಿಶ್ವದ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಕ್ಷೇತ್ರ ಪ್ರಗತಿ ಕಂಡಿತು. ಸ್ವತಂತ್ರವಾಗಿ ಶಕ್ತಿಶಾಲಿ ರಾಕೆಟ್ ಎಂಜಿನ್ ನಿರ್ಮಾಣ ಮಾಡಬಲ್ಲ ಜರ್ಮನ್, ಅಮೆರಿಕ ಮತ್ತು ಸೋವಿಯತ್ ರಷ್ಯಾದ ಎಂಜಿನಿಯರ್‌ಗಳು ರಾಕೆಟ್ ಎಂಜಿನ್ನಿಗೆ ಹೆಚ್ಚಿನ ವೇಗ ನೀಡಲು ಉತ್ಕರ್ಷಣಕಾರಿ (oxidizer) ಪ್ರಕ್ರಿಯೆ ಮತ್ತು ಇಂಧನದ ಅವಶ್ಯಕತೆ ಇದೆ ಎಂಬುದನ್ನು ಕಂಡುಕೊಂಡರು.ಆಗ ಅವರು ಬಳಸಿದ ಜಲಜನಕ ಮತ್ತು ಹೈಡ್ರೋಕಾರ್ಬನ್‌ನ ಮಿಶ್ರ ಇಂಧನವು ರಾಕೆಟ್‌ನ ದಕ್ಷತೆಯನ್ನೇ ತೀವ್ರವಾಗಿ ಕಡಿಮೆ ಮಾಡಿತು. ಇದರಿಂದ ರಾಕೆಟನ್ನು ಮೇಲಕ್ಕೆ ಹೊತ್ತೊಯ್ಯಲು ಕ್ರಯೋಜೆನಿಕ್ ತಾಪಮಾನದಿಂದ (ಅಂದರೆ –150 ಡಿ. ಸೆ, –238 ಡಿ. ಎಫ್‌ಗಿಂತಲೂ ಕಡಿಮೆ) ಮಾತ್ರವೇ ಸಾಧ್ಯ ಎಂಬುದನ್ನು ಕಂಡುಕೊಂಡರು.

 * ರಾಕೆಟ್ ಉಡಾವಣೆ - ಒಂದಿಷ್ಟು ಮಾಹಿತಿ: —  ರಾಕೆಟ್ ಗಳಲ್ಲಿ ಘನ, ದ್ರವ, ಘನ-ದ್ರವದ ಮಿಶ್ರಣ, ಮತ್ತು ಪರಮಾಣು ಇಂಧನ ಹೊಂದಿರುವ ಎಂಜಿನ್ ಗಳಿವೆ.ಘನ ರಾಕೆಟ್ ಎಂಜಿನ್ ಕಡಿಮೆ ವೆಚ್ಚದ ಇಂಧನ ಮತ್ತು ಉತ್ಕರ್ಷಣಕಾರಿಯ ಸಮ್ಮಿಶ್ರಣವಾಗಿದೆ. ಘನ ಇಂಧನ ಎಂದ ಕೂಡಲೆ ಕಟ್ಟಿಗೆ, ಇದ್ದಿಲು ನೆನಪಾಗುತ್ತದೆ. ಆದರೆ ರಾಕೆಟ್ ಎಂಜಿನ್ ಗೆ ಅಲ್ಯೂಮಿನಿಯಂ ಪುಡಿಯನ್ನು ಇಂಧನವಾಗಿ ಅಮೋನಿಯಂ ಪರ್ಕ್ಲೋರೇಟ್ ಅನ್ನು ಉತ್ಕರ್ಷಣಕಾರಿಯಾಗಿ ಬಳಸಲಾಗುತ್ತದೆ. ಈ ಎಂಜಿನ್ ಗೆ ಒಮ್ಮೆ ಬೆಂಕಿ ತಾಕಿಸಿದರೆ ಇಂಧನ ಮುಗಿಯುವವರೆಗೂ ನಿಲ್ಲದೇ ಉರಿಯುತ್ತದೆ. ಹೀಗಾಗಿ ಅತ್ಯಾಧುನಿಕ ರಾಕೆಟ್ ಗಳು ಘನ ಮತ್ತು ದ್ರವ ಇಂಧನದ ಸಂಯೋಜನೆಯಿಂದ ಕೂಡಿರುತ್ತದೆ.ಆರಂಭದ ಉಡಾವಣೆ ಹಂತಕ್ಕೆ ಘನ ಇಂಧನ ಬಳಸಲಾಗುತ್ತದೆ. ಯಾವಾಗ ರಾಕೆಟ್ ನಿಗದಿತ ವೇಗ ಪಡೆದುಕೊಳ್ಳುತ್ತದೆಯೋ ಆ ಹಂತದಲ್ಲಿ ದ್ರವ ಇಂಧನವು ರಾಕೇಟಿನ ಭಾರಕ್ಕೆ ಅನುಗುಣವಾಗಿ ವೇಗೋತ್ಕರ್ಷವನ್ನು ಮತ್ತಷ್ಟು ಹೆಚ್ಚಿಸಿ, ಸರಿಯಾದ ಪಥವನ್ನು ತಲುಪಲು ಸಹಾಯ ಮಾಡುತ್ತದೆ.

ಹೀಗಿದ್ದೂ, ಈ ಮೊದಲು ಉಪಗ್ರಹ ಉಡಾವಣೆಗೆ ಬಳಸುತ್ತಿದ್ದ ‘ಪಿಎಸ್ಎಲ್‌ವಿ’(PSLV) ಗೆ (ಪೊಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಹೆಚ್ಚು ಭಾರವಾದ ಉಪಗ್ರಹ ಹೊರುವ ಸಾಮರ್ಥ್ಯ ಇರಲಿಲ್ಲ. ಈ ಕೊರತೆ ನೀಗಿಸಲು ‘ಜಿಎಸ್ಎಲ್‌ವಿ’(GSLV) (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ವ್ಯವಸ್ಥೆ ಬಳಸಲಾಯಿತು. ಮುಖ್ಯವಾಗಿ ಅತ್ಯಧಿಕ ಪ್ರಮಾಣದಲ್ಲಿ ತಂಪಾಗಿಸಿದ ದ್ರವ ಕ್ರಯೋಜೆನಿಕ್ ಇಂಧನ ಬಳಸಲಾಗಿದೆ.

 * ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ?
— ಕ್ರಯೋಜೆನಿಕ್ ರಾಕೆಟ್ ಎಂಜಿನ್ನಿನಲ್ಲಿ ಕ್ರಯೋಜೆನಿಕ್ ಇಂಧನ ಅಥವಾ ಉತ್ಕರ್ಷಣಕಾರಿ (oxidizer) ಇಲ್ಲವೇ ಎರಡೂ ಬಗೆಯ ಇಂಧನಗಳನ್ನೂ ದ್ರವೀಕೃತಗೊಳಿಸಿ ಅತ್ಯಂತ ಕಡಿಮೆ ತಾಪಮಾನದಲ್ಲಿ ಶೇಖರಿಸಲಾಗುತ್ತದೆ. ಈ ಇಂಧನವನ್ನು ಎಂಜಿನ್ ನ ಉರಿ ಕೊಳವೆಗೆ ಕಳುಹಿಸಿದಾಗ 2ರಿಂದ 2.5 ಟನ್ ಭಾರೀ ತೂಕದ ಉಪಕರಣವನ್ನು ಬಾಹ್ಯಾಕಾಶಕ್ಕೆ ತಳ್ಳಲು ಅಗತ್ಯವಾದ ಹೆಚ್ಚಿನ ಪ್ರಮಾಣದ (ಸೆಕೆಂಡಿಗೆ 4.4 ಕಿ.ಮೀ ವೇಗ) ಶಕ್ತಿ ಉತ್ಪಾದನೆ ಆಗುತ್ತದೆ.

 * ಕ್ರಯೋಜೆನಿಕ್ ರಾಕೆಟ್ ಎಂಜಿನ್:— ಕ್ರಯೋಜೆನಿಕ್ ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ದ್ರವರೂಪದ ಜಲಜನಕ ಇಂಧನ ಮತ್ತು ಆಮ್ಲಜನಕದ ಸಂಯೋಗ ಹೆಚ್ಚು ಬಳಕೆಯಲ್ಲಿದೆ.ಈ ಎರಡೂ ಪದಾರ್ಥಗಳು ಸುಲಭವಾಗಿ ಮತ್ತು ಅಗ್ಗವಾಗಿ ದೊರೆಯತ್ತವೆ. ಈ ಕ್ರಯೋಜೆನಿಕ್ ಇಂಧನ ವ್ಯವಸ್ಥೆಯನ್ನು ರಾಕೆಟ್ ಎಂಜಿನ್ನಿನಲ್ಲಿ ಬಳಸಲು 1940ರಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಎಂಜಿನಿಯರ್ ಯೂಜೆನ್ ಸ್ಯಾಂಗರ್ ಅವರು ಮೊದಲುಸಲಹೆ ನೀಡಿದರು.1996ರಲ್ಲಿ ‘cryogenic hardening’ ಸಿದ್ಧಾಂತದ (–185 ಡಿಗ್ರಿ ಸೆಲ್ಸಿಯಸ್‌ಗೆ ಲೋಹವನ್ನು ತಂಪಾಗಿಸುವುದು) ಆಧಾರದ ಮೇಲೆ ಎಡ್ವರ್ಡ್ ಬಾಷ್ ಅವರು ಕ್ರಯೋಜೆನಿಕ್ ಪ್ರಕ್ರಿಯೆ (cryogenic processing) ಕೈಗಾರಿಕೆ ಆರಂಭಿಸಿದರು.ಇಲ್ಲಿ ಲೋಹಗಳ ಬಾಳಿಕೆ ಹೆಚ್ಚಿಸಲು ಶಾಖದಿಂದ ಮೃಧುವಾಗಿಸುವ (heat treating) ವಿಧಾನಕ್ಕೆ ಬದಲಾಗಿ ಕ್ರಯೋಜೆನಿಕ್ ಪ್ರಕ್ರಿಯೆಯಡಿ ಹದಗೊಳಿಸುವಿಕೆ ವಿಧಾನ ಅಳವಡಿಸಿದರು.

 * ಕ್ರಯೋಜೆನಿಕ್ ಬಳಕೆ ಅಥವಾ ಉಪಯೋಗಗಳು :
—  ದ್ರವೀಕೃತ ಅನಿಲಗಳಾದ ದ್ರವ ಸಾರಜನಕ ಮತ್ತು ದ್ರವ ಹೀಲಿಯಂ ಅನ್ನು ಹಲವು ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಬಳಸಬಹುದು. ಅವುಗಳಲ್ಲಿ ಕೆಲವು ಇಲ್ಲಿವೆ.

 - ವಿದ್ಯುಚ್ಛಕ್ತಿ ಸರಬರಾಜಿಗೆ ಮಹಾನಗರಗಳಲ್ಲಿ ನೆಲದಡಿ ಕೇಬಲ್‌ಗಳು ಬಿಸಿಯಾಗಿ ವಿದ್ಯುತ್ ವ್ಯಯವಾಗುತ್ತದೆ. ಹೀಗಾಗಿ ನೆಲದಡಿಯಲ್ಲಿ ಮಿಶ್ರ ಲೋಹ ಹೊಂದಿರುವ ಕೇಬಲ್‌ಗಳನ್ನು ಹೆಚ್ಚು ತಂಪಾಗಿರಿಸಿ, ವಿದ್ಯುತ್ ಪ್ರವಹಿಸುವ ಸಾಮರ್ಥ್ಯ ಹೆಚ್ಚಿಸಲು ಸಾರಜನಕ ಅಥವಾ ಹೀಲಿಯಂನಂತಹ ಕ್ರಯೋಜೆನಿಕ್ ದ್ರವ್ಯಗಳನ್ನು ಬಳಸಲಾಗುತ್ತದೆ.

 - ಆಹಾರ ರಕ್ಷಣೆಗೆಮೀನು, ಮಾಂಸದಂತಹ ಶೀತಲೀಕರಿಸಿದ ಆಹಾರ ಪದಾರ್ಥಗಳನ್ನು ಸಾಗಿಸಲೂ ಸಹ ಕ್ರಯೋಜೆನಿಕ್ ಅನಿಲವನ್ನು ಬಳಸಲಾಗುತ್ತದೆ.

 - ಯುದ್ಧಭೂಮಿ, ಭೂಕಂಪ ಪೀಡಿತ ಪ್ರದೇಶಕ್ಕೆ ಶೀತಲೀಕರಿಸಿದ ಆಹಾರ ಪದಾರ್ಥಗಳನ್ನು ಸಾಗಿಸುವಾಗ ಕೆಡದಂತೆ ಇಡಲು ಕ್ರಯೋಜೆನಿಕ್ ಫುಡ್ ಫ್ರೀಜಿಂಗ್ ವಿಧಾನ ಅನುಸರಿಸಲಾಗುತ್ತದೆ. ಹಾಗಾಗಿಯೇ ಇದು ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೂ ಹೆಚ್ಚು ಉಪಯುಕ್ತವಾಗಿದೆ.

 - ಕೆಲವು ಅಪರೂಪದ ರಕ್ತದ ಗುಂಪುಗಳನ್ನು ಅತೀ ಕಡಿಮೆ –165 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇಂತಹ ಚಟುವಟಿಕೆಗೂ ಕ್ರಯೋಜೆನಿಕ್‌ ತಂತ್ರಜ್ಞಾನದ ಪ್ರಯೋಜನೆ ಪಡೆದುಕೊಳ್ಳಲಾಗುತ್ತದೆ.

- ಅಲ್ಲದೆ, ಇನ್‌ಫ್ರಾರೆಡ್‌ ಕ್ಯಾಮೆರಾದ ಡಿಟೆಕ್ಟರ್ ಅನ್ನು ಶಿಲೀಂಧ್ರದಿಂದ ರಕ್ಷಿಸಲು ಕ್ರಯೋಜೆನಿಕ್ ಬಳಸಲಾಗುತ್ತದೆ.
ಇದರ ಎಲ್ಲ ಕಾರ್ಯಸಾಧ್ಯತೆಗಳ ಕುರಿತು ಹಲವು ಅಧ್ಯಯನಗಳು ನಡೆದಿದ್ದು, ಅಂತರರಾಷ್ಟ್ರೀಯ ಶಕ್ತಿ ಸಂಸ್ಥೆಯ ಒಪ್ಪಂದ ದೊರೆಯಬೇಕಿದೆ.

 *- ಎಂಆರ್‌ಐ ಸ್ಕ್ಯಾನಿಂಗ್ (MRI Scanning) ಹಾಗೆಂದರೇನು?
 - ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಸ್ಕ್ಯಾನಿಂಗ್ ತಂತ್ರಜ್ಞಾನದಲ್ಲಿ (ರೋಗಿಯ ದೇಹದ ಸಮಗ್ರ ವೈದ್ಯಕೀಯ ತಪಾಸಣೆಗೆ ಬಳಸುವ ತಂತ್ರಜ್ಞಾನ) ಕ್ರಯೋಜೆನಿಕ್ ಬಳಕೆ ಮಾಡಲಾಗುತ್ತದೆ.