"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 19 October 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ -VII : ಕನ್ನಡ ಸಾಹಿತ್ಯ ಚರಿತ್ರೆ ಸಂಬಂಧಿತ ಪ್ರಮುಖ ಅಂಶಗಳು : (Kannada Literature Notes for PDO)

☀.ಪಿಡಿಓ ಪರೀಕ್ಷೆ ವಿಶೇಷಾಂಕ -VII : ಕನ್ನಡ ಸಾಹಿತ್ಯ ಚರಿತ್ರೆ ಸಂಬಂಧಿತ ಪ್ರಮುಖ ಅಂಶಗಳು :
(Kannada Literature Notes for PDO)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಕನ್ನಡ ಸಾಹಿತ್ಯ ಚರಿತ್ರೆ
(Kannada Literature)


*.ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

*.ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

*.ಛಂದೋನುಶಾಸನದ ಕರ್ತೃ -ಜಯಕಿರ್ತ

*.ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

*.ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

*.ಬೃಹತ್ಕಥೆಯ ಕರ್ತೃ -ಗುಣಾಢ್ಯ

*.ಬೃಹತ್ಕಥೆಯ ಭಾಷೆ -ಪೈಶಾಚಿ

*. ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

*.ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

*. ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

*.ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

*.ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

*.ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

* ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

*.ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

*.ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

*.ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

*.ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

*.ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

*.ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

*.ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

*. ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

*.ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

*.ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

*.ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

*. ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

*.ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

*.ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

*.ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

*.ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

*.ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )

*. ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು  ಅರುಪಿದವನು -ರನ್ನ

*.ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ

*.ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ

*.ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)

*. ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ

*. ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ

*.ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ

*. ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ

*.ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )

*.ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ

*.ಮೊದಲನೆಯ ಗೋವೈದ್ಯ ಗ್ರಂಥವನ್ನು ಬರೆದವರು -ಕೀರ್ತಿವರ್ಮ

*. ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ

*.ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ

*.ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ

*. ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ

*.ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ

*.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ

*. ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)

 *.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ

*.ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ

*.ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ

*.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ:  -ಶಬ್ದಮಣಿದರ್ಪಣ (ಕೇಶಿರಾಜ

(Courtesy : VISION group)
... ಮುಂದುವರೆಯುವುದು. 

☀.ಪಿಡಿಓ ಪರೀಕ್ಷೆ ವಿಶೇಷಾಂಕ -VI : ಜಿಲ್ಲಾ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು : (Constitution of Zilla Panchayat)

☀.ಪಿಡಿಓ ಪರೀಕ್ಷೆ ವಿಶೇಷಾಂಕ -VI : ಜಿಲ್ಲಾ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು :
(Constitution of Zilla Panchayat)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)



●.ಜಿಲ್ಲಾ ಪಂಚಾಯಿತಿ


1. ರಚನೆ: ಪ್ರತಿ ಜಿಲ್ಲೆಗೊಂದು ಜಿಲ್ಲಾ ಪಂಚಾಯಿತಿ.


2. ಸದಸ್ಯರು: 35,000-45,000ದ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು.

# ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ =30,000;

# ಬೆಂಗಳೂರು ನಗರ ಜಿಲ್ಲೆ =20,000;

# ಕೊಡಗು ಜಿಲ್ಲೆ =18,000ಕ್ಕೆ ಒಬ್ಬ ಸದಸ್ಯನಿರಬೇಕು.

# ಪ್ರತಿ ಜಿಲ್ಲಾ ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ಜಿಲ್ಲೆಯ ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿರುತ್ತಾರೆ.

# ಜಿಲ್ಲೆಯ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು ಸಹ ಸದಸ್ಯರಾಗಿರುತ್ತಾರೆ.


 3. ಸದಸ್ಯರ ಮೀಸಲಾತಿ ಸ್ಥಾನಗಳು:

# ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).

# ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)

# ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.

# ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಕ್ಕಿಂತ ಕಡಿಮೆ ಇರಬಾರದು.

# ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.


4. ಮತದಾರರ ಪಟ್ಟಿಯನ್ನು ತಯಾರಿಸುವವರು: 

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಸಿಸ್ಟೆಂಟ್ ಕಮೀಷನರ್. ಮತ್ತು ರಾಜ್ಯ ವಿಧಾನ ಸಭೆಯ ಚುನಾವಣೆಗಾಗಿ ತಯಾರಿಸಲಾದ ಮತದಾರರ ಪಟ್ಟಿಯನ್ನೇ ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾರರ ಪಟ್ಟಿ ಎಂದು ಭಾವಿಸತಕ್ಕದ್ದು.

5. ಸದಸ್ಯನಾಗಲು ಅವಶ್ಯಕ ವಯಸ್ಸು: 21 ವರ್ಷ

...ಮುಂದುವರೆಯುವುದು. 

☀.ಪಿಡಿಓ ಪರೀಕ್ಷೆ ವಿಶೇಷಾಂಕ -V : ತಾಲ್ಲೂಕು ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು : (Constitution of Talluq Panchayat)

☀.ಪಿಡಿಓ ಪರೀಕ್ಷೆ ವಿಶೇಷಾಂಕ -V : ತಾಲ್ಲೂಕು ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು :
(Constitution of Talluq Panchayat)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)


●.ತಾಲ್ಲೂಕು ಪಂಚಾಯಿತಿ


1. ರಚನೆ: ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯಿತಿ.


2. ಸದಸ್ಯರು: 12,500-15,000ರ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು. (1,00,000ಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ 11ಜನ ಸದಸ್ಯರಿರಬೇಕು.)

# ಪ್ರತಿ ತಾಲ್ಲೂಕು ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ತಾಲ್ಲೂಕನ್ನು ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿರುತ್ತಾರೆ.

# ಒಂದು ವರ್ಷದ ಅವಧಿಗೆ, ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ. ( ಈ ಪೈಕಿ ಒಬ್ಬರು ಮಹಿಳೆ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಂದ ಒಬ್ಬೊಬ್ಬರಂತೆ)


 3. ಸದಸ್ಯರ ಮೀಸಲಾತಿ ಸ್ಥಾನಗಳು:

# ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).

# ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)

# ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.

# ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಗಿಂತ ಕಡಿಮೆ ಇರಬಾರದು.

# ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.

4. ಮತದಾರರ ಪಟ್ಟಿಯನ್ನು ತಯಾರಿಸುವವರು: ಸಂಬಂಧಪಟ್ಟ ತಹಶೀಲ್ದಾರನು ಮತ್ತು ಮತದಾರರ ಪಟ್ಟಿಯ ಒಂದು ಪ್ರತಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯದರ್ಶಿ ಇಟ್ಟುಕೊಳ್ಳತಕ್ಕದ್ದು.


5. ಸದಸ್ಯನಾಗಲು ಅವಶ್ಯಕ ವಯಸ್ಸು : 21 ವರ್ಷ

...ಮುಂದುವರೆಯುವುದು. 

☀.ಪಿಡಿಓ ಪರೀಕ್ಷೆ ವಿಶೇಷಾಂಕ -IV : ಗ್ರಾಮ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು : (Constitution of Grama Panchayat)

☀.ಪಿಡಿಓ ಪರೀಕ್ಷೆ ವಿಶೇಷಾಂಕ -IV : ಗ್ರಾಮ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು :
(Constitution of Grama Panchayat)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)



●. ಗ್ರಾಮ ಪಂಚಾಯಿತಿ :


1. ರಚನೆ: 5000-7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.

(ಮಲೆನಾಡು ಹಾಗೂ ಗುಡ್ಡಾಗಾಡು ಪ್ರದೇಶಗಳಲ್ಲಿ, ಅಂದರೆ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಹಾವೇರಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 2500 ಜನಸಂಖ್ಯೆಗೆ ಕಡಿಮೆಯಿಲ್ಲದಂತೆ ಒಂದು ಗ್ರಾಮ ಪಂಚಾಯಿತಿಯ ರಚಿಸಬಹುದು.)


2. ಸದಸ್ಯರು: ಪ್ರತಿ 400 ಜನಸಂಖ್ಯೆಗೆ ಒಬ್ಬ ಸದಸ್ಯನು.


3. ಸದಸ್ಯರ ಮೀಸಲಾತಿ ಸ್ಥಾನಗಳು:

# ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).

# ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)

# ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.

# ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಗಿಂತ ಕಡಿಮೆ ಇರಬಾರದು.

# ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೆ ಒಳಪಟ್ಟು ಡೆಪ್ಯಟಿ ಕಮೀಷನರ್‌ರವರು ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.


4. ಮತದಾರರ ಪಟ್ಟಿಯನ್ನು ತಯಾರಿಸುವವರು: ಸಂಬಂಧಪಟ್ಟ ತಹಶೀಲ್ದಾರನು ತಯಾರಿಸುತ್ತಾರೆ ಮತ್ತು ಮತದಾರ ಪಟ್ಟಿಯ ಒಂದು ಪ್ರತಿಯನ್ನು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಇಟ್ಟುಕೊಳ್ಳತಕ್ಕದ್ದು.


5. ಸದಸ್ಯನಾಗಲು ಅವಶ್ಯಕ ವಯಸ್ಸು : 21 ವರ್ಷ

... ಮುಂದುವರೆಯುವುದು.

Monday, 10 October 2016

☀.ಸಂವಿಧಾನದ ಪ್ರಮುಖ ತಿದ್ದುಪಡಿಗಳು : ಭಾಗ-1 (Constitutional Amendments : PART-1)

☀.ಸಂವಿಧಾನದ ಪ್ರಮುಖ ತಿದ್ದುಪಡಿಗಳು : ಭಾಗ-1
(Constitutional Amendments : PART-1)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಸಂವಿಧಾನ
(Indian Constitution)

★ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು
(Popular Indian Constitutional Amendments)



1. ಮೊದಲನೇ ತಿದ್ದುಪಡಿ, 1951 –

ಸಂವಿಧಾನದ ಮೊದಲನೇಯ ತಿದ್ದುಪಡಿಯು 1951ರಲ್ಲಿ ಜಾರಿಗೆ ಬಂದಿತು. ಈ ತಿದ್ದುಪಡಿಯ ಮೂಲಕ 15ನೇ ವಿಧಿಗೆ(4)ನೇ ಉಪವಿಧಿಯನ್ನು ಹಾಗೂ 19ನೇಯ ವಿಧಿಯ(2)ನೇ ಉಪವಿಧಿಗೆ ಸಾರ್ವಜನಿಕ ಶಾಂತಿ, ವಿದೇಶಗಳೊಂದಿಗೆ ಸ್ನೇಹಯುತ ಸಂಬಂಧ, ಅಪರಾಧ ಮಾಡಲು ಪ್ರಚೋಚನೆ ಹಾಗೂ ನ್ಯಾಯೋಚಿತ ಎಂಬ ಪದಗಳನ್ನು ಸೇರಿಸಲಾಯಿತು.



2. 2ನೇ ತಿದ್ದುಪಡಿ ಕಾಯ್ದೆ 1951:

ಈ ತಿದ್ದುಪಡಿ ಕಾಯ್ದೆ ಮೇ 1, 1953ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿಗಿಂತ ಮೊದಲು ಒಬ್ಬ ಲೋಕಸಭಾ ಸದಸ್ಯನು 7,50,000 ಜನರನ್ನು ಪ್ರತಿನಿಧಿಸಬೇಕಾಗಿತ್ತು ಮತ್ತು ಲೋಕಸಭೆಯು 500ಕ್ಕಿಂತ ಹೆಚ್ಚು ಚುನಾಯಿತ ಸದಸ್ಯರನ್ನು ಹೊಂದಿರುವಂತಿರಲಿಲ್ಲ. 81ನೇ ವಿಧಿಗೆ ತಿದ್ದುಪಡಿ ತಂದು ಈ ನಿಯಮವನ್ನು ರದ್ದುಪಡಿಸಲಾಯಿತು. ಇದರಿಂದಾಗಿ ಲೋಕಸಭೆಯ ಒಬ್ಬ ಸದಸ್ಯನು 7,50,000ಕ್ಕಿಂತ ಹೆಚ್ಚು ಜನರನ್ನು ಪ್ರತಿನಿಧಿಸಲು ಅವಕಾಶ ದೊರೆಯಿತು.



3. ಮೂರನೇ ತಿದ್ದುಪಡಿ ಕಾಯ್ದೆ 1954:

ಈ ತಿದ್ದುಪಡಿ ಸೆಪ್ಟಂಬರ್ 24, 1954ರಂದು ಸಂಸತ್ತಿನಲ್ಲಿ ಪಾಸಾಗಿ, ಫೆಬ್ರವರಿ 22, 1955ರಂದು ಜಾರಿಗೆ ಬಂದಿತು. ಈ ತಿದ್ದುಪಡಿಯು ಆಹಾರ ಧ್ಯಾನಗಳ ಉತ್ಪಾದನೆ ಮತ್ತು ವಿತರಣೆ, ಜಾನುವಾರಗಳ ಮೇವು, ಕಚ್ಚಾ ಹತ್ತಿ, ಹತ್ತಿ ಬೀಜ ಮತ್ತು ಕಚ್ಚಾ ಸೆಣಬನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನಿಯಂತ್ರಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಿತು.



4. ನಾಲ್ಕನೆ ತಿದ್ದುಪಡಿ ಕಾಯ್ದೆ 1955 –

ನಾಲಕ್ಕೆ ತಿದ್ದುಪಡಿ ಏಪ್ರಿಲ್ 27, 1955ರಂದು ಅನುಷ್ಟಾನಕ್ಕೆ ಬಂದಿತು. ಇದು ಆಸ್ತಿಯ ಹಕ್ಕಿಗೆ ಸಂಬಂಧಿಸಿದ್ದರಿಂದ 31 ಮತ್ತು 31ಎ ವಿಧಿಗಳನ್ನು ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯ ಮೂಲಕ ಯಾವುದೇ ವ್ಯಾಪಾರವನ್ನು ರಾಷ್ಟ್ರೀಕರಣಗೊಳಿಸುವ ಅಧಿಕಾರವನ್ನು ರಾಜ್ಯಕ್ಕೆ ನೀಡಿತು. 9ನೇ ಅನುಸೂಚಿಗೆ ಇನ್ನೂ ಕೆಲವು ಕಾಯ್ದೆಗಳನ್ನು ಸೇರ್ಪಡೆ ಮಾಡಲಾಯಿತು. 31ನೇ ವಿಧಿಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು.



5. ಐದನೇ ತಿದ್ದುಪಡಿ ಕಾಯ್ದೆ 1955 –

ಡಿಸೆಂಬರ್ 24, 1955ರಿಂದ ಜಾರಿಗೆ ಬಂದ 5ನೇ ತಿದ್ದುಪಡಿಯ ಸಂವಿಧಾನದ 3ನೇ ವಿಧಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು. ಈ ತಿದ್ದುಪಡಿಯು ರಾಝ್ಯಗಳ ಪುನರ್ರಚನೆತ ಬಗೆಗೆ ಸಂಬಂಧಪಟ್ಟ ರಾಜ್ಯಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರ ಮೇಲೆ ಕಾಲಮಿತಿ ವಿಧಿಸುವ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರಿಗೆ ನೀಡಿತು. ನಿಗದಿಪಡಿಸಿದ ಅವಧಿಯೊಳಗೆ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸದಿದ್ದರೆ, ಅವುಗಳ ಅಭಿಪ್ರಾಯಕ್ಕೆ ಕಾಯ್ದೆ ಸಂಸತ್ತು ರಾಜ್ಯಗಳ ಪುನರ್ರಚನೆಗೆ ಕಾನೂನು ಮಾಡುವ ಅಧಿಕಾರ ಹೊಂದಿದೆ.



6. ಆರನೇ ತಿದ್ದುಪಡಿ ಕಾಯ್ದೆ 1956 –

ಆರನೇ ತಿದ್ದುಪಡಿ ಸೆಪ್ಟಂಬರ್ 11, 1956ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿಯು ಕೇಂದ್ರಪಟ್ಟಿಗೆ ಹೊಸ ವಿಷಯವನ್ನು ಸೇರ್ಪಡೆ ಮಾಡಿತು. ಅಂತರ ರಾಜ್ಯ ಮಾರಾಟಗಳ ಮೇಲೆ ತೆರಿಗೆ ವಿಧಿಸುವ ಅಧಿಕಾವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಯಿತು. ಅಂತರ ರಾಜ್ಯ ಮಾರಾಟಗಳಿಂದ ಬಂದ ತೆರಿಗೆಯನ್ನು ರಾಜ್ಯಗಳಿಗೆ ಹಂಚಲು 296ನೇ ವಿಧಿಗೆ ತಿದ್ದುಪಡಿ ತರಲಾಯಿತು.



7. ಏಳನೇ ತಿದ್ದುಪಡಿ ಕಾಯ್ದೆ 1956-

ಈ ಕಾಯ್ದೆಯು ನವೆಂಬರ್ 1, 1956ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿಯ ಮೂಲಕ:
ಎ) ಭಾಗ ಎ, ಭಾಗ ಬಿ, ಭಾಗ ಸಿ, ಭಾಗ ಡಿ ರಾಜ್ಯಗಳು ಎಂದು ಮಾಡಲಾಗಿದ್ದ ರಾಜ್ಯಗಳ ವರ್ಗೀಕರಣವನ್ನು ರದ್ದು ಮಾಡಿ ಅವುಗಳನ್ನು 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ರಚಿಸಲಾಯಿತು.
ಬಿ) ಉಚ್ಚನ್ಯಾಯಲಯಗಳ ವ್ಯಾಪ್ತಿಯನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲಾಯಿತು.
ಸಿ) ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ ಉಚ್ಚ ನ್ಯಾಯಾಪಯವನ್ನು ಸ್ಥಾಪಿಸಲು ಅವಕಾಶ ನೀಡಲಾಯಿತು.
ಡಿ) ಉಚ್ಚ ನ್ಯಾಯಲಯಗಳಿಗೆ ಹೆಚ್ಚುವರಿ ಮತ್ತು ಹಂಗಾಮಿ ನ್ಯಾಯಾಧೀಶರನ್ನು ನೇಮಕ ಮಾಡಲು ಅವಕಾಶ ಮಾಡಿಕೊಡಲಾಯಿತು.



8. ಎಂಟನೇ ತಿದ್ದುಪಡಿ ಕಾಯ್ದೆ 1960-

ಎಂಟನೇ ತಿದ್ದುಪಡಿ ಜನವರಿ 5, 1956ರಂದು ಜಾರಿಗೆ ಬಂದಿತು. ಈ ತಿದ್ದುಪಡಿಯ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆಂಗ್ಲೋ-ಇಂಡಿಯನ್ ಜನಾಂಗದವರಿಗೆ ಸಂಸತ್ತು ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮತ್ತೆ 10 ವರ್ಷಗಳ ಕಾಲ (1970ರವರೆಗೆ) ಸ್ಥಾನ ಮೀಸಲಾಯಿ ಮುಂದುವರೆಸಲು ಅವಕಾಶ ನೀಡಲಾಯಿತು. ಅದಕ್ಕಾಗಿ 334ನೇ ವಿಧಿಯನ್ನು ತಿದ್ದುಪಡಿ ಮಾಡಲಾಯಿತು.



9. 9ನೇ ತಿದ್ದುಪಡಿ ಕಾಯ್ದೆ 1960 –

ಒಂಬತ್ತನೇ ತಿದ್ದುಪಡಿ ಜನವರಿ 17, 1961ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿ ಮೂಲಕ ಪಶ್ಚಿಮ ಬಂಗಾಳದ ಬೆರುಬರಿಯನ್ನೊಳಗೊಂಡಂತೆ ಅಸ್ಸಾಂ, ಪಂಜಾಬ್ ಮತ್ತು ತ್ರಿಪುರಗಳಿಂದ ಕೆಲವು ಪ್ರದೇಶಗಳನ್ನು 1958ರ ಭಾರತ – ಪಾಕಿಸ್ತಾನ ಒಪ್ಪಂದದ ಪ್ರಕಾರವಾಗಿ ಪಾಕಿಸ್ತಾನಕ್ಕೆ ವರ್ಗಾಯಿಸಲಾಯಿತು.



10. 10ನೇ ತಿದ್ದುಪಡಿ ಕಾಯ್ದೆ 1961 –

ಹತ್ತನೇ ತಿದ್ದುಪಡಿ ಕಾಯ್ದೆಯ ಮೂಲಕ ದಾದ್ರ ಮತ್ತು ನಗರ ಹವೇಲಿಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಂಡು ಅವುಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಯಿತು. ಅದಕ್ಕಾಗಿ 240ನೇ ವಿಧಿ ಮತ್ತು ಮೊದಲನೇ ಅನುಸೂಚಿಯನ್ನು ತಿದ್ದುಪಡಿ ಮಾಡಲಾಯಿತು.

...ಮುಂದುವರೆಯುವುದು. 

☀.ಪಿಡಿಓ ಪರೀಕ್ಷೆ ವಿಶೇಷಾಂಕ - 14ನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ: (Grant Allotment for Local Governance in 14th Financial Commission)

☀.ಪಿಡಿಓ ಪರೀಕ್ಷೆ ವಿಶೇಷಾಂಕ - 14ನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ:
(Grant Allotment for Local Governance in 14th Financial Commission)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ 14ನೇ ಹಣಕಾಸು ಆಯೋಗ
(14th Financial Commission)



ಕೇಂದ್ರ ಸರ್ಕಾರ ನೇಮಿಸಿದ್ದ ವೈ. ವಿ. ರೆಡ್ಡಿ ಅಧ್ಯಕ್ಷತೆಯ 14 ನೇ ಹಣಕಾಸು ಆಯೋಗದ ಶಿಫಾರಸುಗಳನ್ವಯ 2015-16 ರಿಂದ 2019-20 ರವರೆಗೆ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತದೆ.

ಅನುದಾನವನ್ನು ನಿಗದಿಪಡಿಸುವಾಗ ಶೇ 90 ರಷ್ಟನ್ನು 2011ರ ಜನಸಂಖ್ಯೆ ಆಧರಿಸಿ ಮತ್ತು ಶೇ 10 ರಷ್ಟನ್ನು ಪ್ರದೇಶವನ್ನು ಆಧರಿಸಿ ನಿಗದಿಪಡಿಸಲಾಗುತ್ತದೆ.

ಈ ಅನುದಾನವನ್ನು " ಮೂಲ ಅನುದಾನ " ಮತ್ತು ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಆಧರಿಸಿ " ಕಾರ್ಯ ನಿರ್ವಹಣಾ ಅನುದಾನ " ಎಂಬ ಎರಡು ವಿಧಗಳಲ್ಲಿ ನೀಡಲಾಗುತ್ತದೆ.

13 ನೇ ಹಣಕಾಸು ಆಯೋಗದ ಅವಧಿಯಲ್ಲಿ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತಿತ್ತು.

ಪ್ರಸ್ತುತ 14 ನೇ ಹಣಕಾಸು ಆಯೋಗವು ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯತಿಗಳಿಗೆ ಮಾತ್ರ 14 ನೇ ಹಣಕಾಸು ಆಯೋಗದ ಅನುದಾನವನ್ನು ನೀಡಲಾಗುತ್ತಿದೆ.

 ಗ್ರಾಮ ಪಂಚಾಯತಿಗಳಿಗೆ ನೀಡಲಾಗುವ ಅನುದಾನದಲ್ಲಿ ಶೇ 90 ರಷ್ಟು ಮೂಲ ಅನುದಾನವಾಗಿದ್ದರೆ, ಉಳಿದ ಶೇ 10ರಷ್ಟು ಕಾರ್ಯನಿರ್ವಹಣಾ ಅನುದಾನವಾಗಿರುತ್ತದೆ.

14 ಹಣಕಾಸು ಆಯೋಗದ ಅನುದಾನವನ್ನು ಗ್ರಾಮ ಪಂಚಾಯತಿಗಳು ಕಡ್ಡಾಯವಾಗಿ ಶೇ 90 ರಷ್ಟು ಅನುದಾನವನ್ನು ಆಸ್ತಿಗಳನ್ನು ಸೃಜಿಸುವ ಕಾಮಗಾರಿಗಳಿಗೆ ಬಳಸಬೇಕು ಮತ್ತು ಉಳಿದ ಶೇ 10 ರಷ್ಟು ಅನುದಾನವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬಳಸಬಹುದು. ಒಟ್ಟು ಅನುದಾನದಲ್ಲಿ ಶೇ 25 ರಷ್ಟನ್ನು ಕಡ್ಡಾಯವಾಗಿ SC/ST ವರ್ಗಗಳಿಗೆ ಖರ್ಚು ಮಾಡಲೇಬೇಕು.


●.ಅನುದಾನವನ್ನು ಈ ಕೆಳಕಂಡ ಕಾಮಗಾರಿಗಳಿಗೆ ಬಳಸಬಹುದು.

೧. ಕುಡಿಯುವ ನೀರು ಸರಬರಾಜು - ಕನಿಷ್ಠ ಶೇ 20

೨. ನೈರ್ಮಲ್ಯ ಕಾಮಗಾರಿಗಳು, ಘನ/ದ್ರವ ತ್ಯಾಜ್ಯ ನಿರ್ವಹಣೆ - ಕನಿಷ್ಠ ಶೇ 10

೩. ಸಮುದಾಯ ಆಸ್ತಿಗಳ ನಿರ್ವಹಣೆ - ಗರಿಷ್ಠ ಶೇ 15

೪. ಗ್ರಾಪಂ ರಸ್ತೆಗಳ, ಪಾದಚಾರಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ - ಗರಿಷ್ಠ ಶೇ 15

೫. ಚರಂಡಿಗಳ ನಿರ್ಮಾಣ - ಗರಿಷ್ಠ ಶೇ 15

೬. ಬೀದಿ ದೀಪಗಳು - ಗರಿಷ್ಠ ಶೇ 10

೭. ಸ್ಮಶಾನಗಳು ಮತ್ತು ಜೀವ ವೈವಿಧ್ಯತೆ ರಕ್ಷಣೆ - ಗರಿಷ್ಠ ಶೇ 5

೮. ಕಾರ್ಯಾಚರಣೆ ಮತ್ತು ನಿರ್ವಹಣೆ - ಗರಿಷ್ಠ ಶೇ 10


ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ವೆಚ್ಚವನ್ನು ಈ ಚಟುವಟಿಕೆಗಳಿಗೆ ಬಳಸಬಹುದು.
 - ಕಂಪ್ಯೂಟರ್ ಖರೀದಿ, ಇಂಟರ್ ನೆಟ್ ವೆಚ್ಚ, ಹೊಸ ಗ್ರಾಪಂಗಳಿಗೆ ಪೀಠೋಪಕರಣಗಳ ಖರೀದಿ, ಡೇಟಾ ಎಂಟ್ರಿ ವೆಚ್ಚಗಳು, ಸನ್ನದು ಲೆಕ್ಕಿಗರ ಶುಲ್ಕ ಪಾವತಿ, ಜಮಾಬಂದಿ ನಿರ್ವಹಣೆ ವೆಚ್ಚ, ಸೌರಶಕ್ತಿ ಸೇರಿದಂತೆ ಗ್ರಾಪಂಗಳ ವಿದ್ಯುದೀಕರಣ, ಮಾಹಿತಿ ಶಿಕ್ಷಣ ಮತ್ತು ಸಂವಹನ ವೆಚ್ಚಗಳು, ತ್ಯಾಜ್ಯ ವಿಲೇವಾರಿ ಮತ್ತು ನೀರು ಸರಬರಾಜು ಯೋಜನೆಗಳ ತಯಾರಿಕೆ ವೆಚ್ಚ.

14 ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ 25 ರಷ್ಟನ್ನು ರಾಜ್ಯ ಸರ್ಕಾರವು ಪ್ರತಿಯೊಂದು ಗ್ರಾಮ ಪಂಚಾಯತಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಗ್ರಾಮ ಪಂಚಾಯತಿಗಳ ಬೀದಿ ದೀಪ ಮತ್ತು ನೀರು ಸರಬರಾಜು ವಿದ್ಯುತ್ ಶುಲ್ಕಗಳ ಪಾವತಿಗೆ ನೇರವಾಗಿ ಎಸ್ಕಾಂಗಳಿಗೆ ಪಾವತಿಸುವ ವ್ಯವಸ್ಥೆ ಮಾಡಿದೆ.

Tuesday, 4 October 2016

☀.(PART-IX) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು : (PDO Examination Multiple Choice Model Question and Answers)

☀.(PART-IX) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)



1) 74ನೇ ತಿದ್ದುಪಡಿಯಲ್ಲಿ 243U ಇದು ಇದರ ಕುರಿತು ಹೇಳುತ್ತದೆ

ಎ. ಗ್ರಾಮ ಪಂಚಾಯತ ಅವಧಿ
ಬಿ. ನಗರ ಸಭೆಗಳ ಅವಧಿ  
ಸಿ. ತಾಲೂಕ ಪಂಚಾಯತ ಅವಧಿ        
ಡಿ ಜಿಲ್ಲಾ ಪಂಚಾಯತ ಅವಧಿ

ಉ: ಬಿ



2) ಜಿಲ್ಲಾ  ಸ್ಥಾಯಿ ಸಮಿತಿಯು ಚುನಾಯಿತ ಅಧ್ಯಕ್ಷರನ್ನೊಳಗೊಂಡು ಎಷ್ಟು ಜನ ಸದಸ್ಯರನ್ನೊಳಗೊಂಡಿರುತ್ತದೆ?

ಉ: 5 ಜನ
ಬಿ. 8ಜನ
ಸಿ 7ಜನ
ಡಿ. 15 ಜನ

ಉ: ಸಿ



3) ಭಾಗ್ಯ ಲಕ್ಷ್ಮೀ ಯೋಜನೆಯಡಿ ದಿನಾಂಕ:01-08-2008ರ ನಂತರ ಜನಿಸಿದ ಮಗುವಿಗೆ ಎಷ್ಟು ರೂಪಾಯಿಗಳ ಠೇವಣಿ ಮೊತ್ತ ಇಡಲಾಗುತ್ತದೆ?

ಎ. 19300 ರೂ
ಬಿ. 10000ರೂ
ಸಿ. 100000ರೂ
ಡಿ. 50000ರೂ

ಉ: ಎ



4) ಸಕಾಲದಡಿ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳ್ಳದಿದ್ದರೆ ಸರಕಾರಿ ದಿನ ನಿತ್ಯ ಎಷ್ಟು ರೂ ಗಳ ದಂಡ ವಿಧಿಸಲಾಗುತ್ತದೆ?

ಎ. 10ರೂ
ಬಿ. 50ರೂ
ಸಿ. 20ರೂ
ಡಿ. 100ರೂ

ಉ: ಸಿ



5) ಸಕಾಲದಡಿ ನೈರ್ಮಲಿಕರಣ ಅರ್ಜಿ ಸಲ್ಲಿಸಿದ್ದನ್ನು ಎಷ್ಟು ದಿನಗಳೊಳಗಾಗಿ ವಿಲೆ ಮಾಡಬೇಕು?

ಎ. 3 ದಿನ
ಬಿ. 7 ದಿನ
ಸಿ. 15 ದಿನ
ಡಿ. 8 ದಿನ

ಉ: ಬಿ


6) ಲಾಗ್ ಬುಕ್ ಇದು ಯಾವುದಕ್ಕೆ ಸಂಬಂದಿಸಿದೆ?

ಎ. ಮೀಟರ ಅಳತೆ
ಬಿ.ರಸ್ತೆಗಳ ಅಳತೆ          
ಸಿ. ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್ ಮಿಟರಗಳ ಮಾಪನ  
ಡಿ. ಯಾವುದು ಅಲ್ಲ

ಉ: ಸಿ


7) ಗ್ರಾಮೀಣ ವಿಕಾಸ ವಿಜ್ಞಾನ ಸಮಿತಿ ಕೇಂದ್ರ ಕಚೇರಿ ಎಲ್ಲಿದೆ?

ಎ. ಮೈಸೂರ
ಬಿ. ಜೋಧಪುರ
ಸಿ. ದೆಹಲಿ
ಡಿ. ಹೈದರಾಬಾದ್

ಉ: ಬಿ



8) NRLM ಪ್ರಾರಂಭದಲ್ಲಿ ಶೇ ಎಷ್ಟರಷ್ಟು ಬ್ಲಾಕಗಳಲ್ಲಿ ಅರಂಬಿಸಿತು?

ಎ. ಶೇ 10%
ಬಿ. ಶೇ 35%
ಸಿ. ಶೇ 50%
ಡಿ. ಶೇ 15%

ಉ: ಡಿ



9) Rural Institute For Development ಇದು ಇವರಿಗಾಗಿ ಶ್ರಮಿಸುತ್ತಿದೆ

ಎ. ಬಾಲಕಾರ್ಮಿಕರು
ಬಿ. ಅಂಗವಿಕಲರು
ಸಿ. ವೃದ್ಧರು
ಡಿ. ವಿಧವೆಯರು

ಉ: ಎ



10) ರೈತ ಮಿತ್ರ ಯೋಜನೆಯನ್ನು ಯಾವ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತದೆ?

ಎ. 2005-06
ಬಿ. 2000-01
ಸಿ. 1993-94
ಡಿ. 2015-16

ಉ: ಬಿ

... ಮುಂದುವರೆಯುವುದು.