"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 10 October 2016

☀.ಸಂವಿಧಾನದ ಪ್ರಮುಖ ತಿದ್ದುಪಡಿಗಳು : ಭಾಗ-1 (Constitutional Amendments : PART-1)

☀.ಸಂವಿಧಾನದ ಪ್ರಮುಖ ತಿದ್ದುಪಡಿಗಳು : ಭಾಗ-1
(Constitutional Amendments : PART-1)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಸಂವಿಧಾನ
(Indian Constitution)

★ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು
(Popular Indian Constitutional Amendments)



1. ಮೊದಲನೇ ತಿದ್ದುಪಡಿ, 1951 –

ಸಂವಿಧಾನದ ಮೊದಲನೇಯ ತಿದ್ದುಪಡಿಯು 1951ರಲ್ಲಿ ಜಾರಿಗೆ ಬಂದಿತು. ಈ ತಿದ್ದುಪಡಿಯ ಮೂಲಕ 15ನೇ ವಿಧಿಗೆ(4)ನೇ ಉಪವಿಧಿಯನ್ನು ಹಾಗೂ 19ನೇಯ ವಿಧಿಯ(2)ನೇ ಉಪವಿಧಿಗೆ ಸಾರ್ವಜನಿಕ ಶಾಂತಿ, ವಿದೇಶಗಳೊಂದಿಗೆ ಸ್ನೇಹಯುತ ಸಂಬಂಧ, ಅಪರಾಧ ಮಾಡಲು ಪ್ರಚೋಚನೆ ಹಾಗೂ ನ್ಯಾಯೋಚಿತ ಎಂಬ ಪದಗಳನ್ನು ಸೇರಿಸಲಾಯಿತು.



2. 2ನೇ ತಿದ್ದುಪಡಿ ಕಾಯ್ದೆ 1951:

ಈ ತಿದ್ದುಪಡಿ ಕಾಯ್ದೆ ಮೇ 1, 1953ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿಗಿಂತ ಮೊದಲು ಒಬ್ಬ ಲೋಕಸಭಾ ಸದಸ್ಯನು 7,50,000 ಜನರನ್ನು ಪ್ರತಿನಿಧಿಸಬೇಕಾಗಿತ್ತು ಮತ್ತು ಲೋಕಸಭೆಯು 500ಕ್ಕಿಂತ ಹೆಚ್ಚು ಚುನಾಯಿತ ಸದಸ್ಯರನ್ನು ಹೊಂದಿರುವಂತಿರಲಿಲ್ಲ. 81ನೇ ವಿಧಿಗೆ ತಿದ್ದುಪಡಿ ತಂದು ಈ ನಿಯಮವನ್ನು ರದ್ದುಪಡಿಸಲಾಯಿತು. ಇದರಿಂದಾಗಿ ಲೋಕಸಭೆಯ ಒಬ್ಬ ಸದಸ್ಯನು 7,50,000ಕ್ಕಿಂತ ಹೆಚ್ಚು ಜನರನ್ನು ಪ್ರತಿನಿಧಿಸಲು ಅವಕಾಶ ದೊರೆಯಿತು.



3. ಮೂರನೇ ತಿದ್ದುಪಡಿ ಕಾಯ್ದೆ 1954:

ಈ ತಿದ್ದುಪಡಿ ಸೆಪ್ಟಂಬರ್ 24, 1954ರಂದು ಸಂಸತ್ತಿನಲ್ಲಿ ಪಾಸಾಗಿ, ಫೆಬ್ರವರಿ 22, 1955ರಂದು ಜಾರಿಗೆ ಬಂದಿತು. ಈ ತಿದ್ದುಪಡಿಯು ಆಹಾರ ಧ್ಯಾನಗಳ ಉತ್ಪಾದನೆ ಮತ್ತು ವಿತರಣೆ, ಜಾನುವಾರಗಳ ಮೇವು, ಕಚ್ಚಾ ಹತ್ತಿ, ಹತ್ತಿ ಬೀಜ ಮತ್ತು ಕಚ್ಚಾ ಸೆಣಬನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನಿಯಂತ್ರಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಿತು.



4. ನಾಲ್ಕನೆ ತಿದ್ದುಪಡಿ ಕಾಯ್ದೆ 1955 –

ನಾಲಕ್ಕೆ ತಿದ್ದುಪಡಿ ಏಪ್ರಿಲ್ 27, 1955ರಂದು ಅನುಷ್ಟಾನಕ್ಕೆ ಬಂದಿತು. ಇದು ಆಸ್ತಿಯ ಹಕ್ಕಿಗೆ ಸಂಬಂಧಿಸಿದ್ದರಿಂದ 31 ಮತ್ತು 31ಎ ವಿಧಿಗಳನ್ನು ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯ ಮೂಲಕ ಯಾವುದೇ ವ್ಯಾಪಾರವನ್ನು ರಾಷ್ಟ್ರೀಕರಣಗೊಳಿಸುವ ಅಧಿಕಾರವನ್ನು ರಾಜ್ಯಕ್ಕೆ ನೀಡಿತು. 9ನೇ ಅನುಸೂಚಿಗೆ ಇನ್ನೂ ಕೆಲವು ಕಾಯ್ದೆಗಳನ್ನು ಸೇರ್ಪಡೆ ಮಾಡಲಾಯಿತು. 31ನೇ ವಿಧಿಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು.



5. ಐದನೇ ತಿದ್ದುಪಡಿ ಕಾಯ್ದೆ 1955 –

ಡಿಸೆಂಬರ್ 24, 1955ರಿಂದ ಜಾರಿಗೆ ಬಂದ 5ನೇ ತಿದ್ದುಪಡಿಯ ಸಂವಿಧಾನದ 3ನೇ ವಿಧಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು. ಈ ತಿದ್ದುಪಡಿಯು ರಾಝ್ಯಗಳ ಪುನರ್ರಚನೆತ ಬಗೆಗೆ ಸಂಬಂಧಪಟ್ಟ ರಾಜ್ಯಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರ ಮೇಲೆ ಕಾಲಮಿತಿ ವಿಧಿಸುವ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರಿಗೆ ನೀಡಿತು. ನಿಗದಿಪಡಿಸಿದ ಅವಧಿಯೊಳಗೆ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸದಿದ್ದರೆ, ಅವುಗಳ ಅಭಿಪ್ರಾಯಕ್ಕೆ ಕಾಯ್ದೆ ಸಂಸತ್ತು ರಾಜ್ಯಗಳ ಪುನರ್ರಚನೆಗೆ ಕಾನೂನು ಮಾಡುವ ಅಧಿಕಾರ ಹೊಂದಿದೆ.



6. ಆರನೇ ತಿದ್ದುಪಡಿ ಕಾಯ್ದೆ 1956 –

ಆರನೇ ತಿದ್ದುಪಡಿ ಸೆಪ್ಟಂಬರ್ 11, 1956ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿಯು ಕೇಂದ್ರಪಟ್ಟಿಗೆ ಹೊಸ ವಿಷಯವನ್ನು ಸೇರ್ಪಡೆ ಮಾಡಿತು. ಅಂತರ ರಾಜ್ಯ ಮಾರಾಟಗಳ ಮೇಲೆ ತೆರಿಗೆ ವಿಧಿಸುವ ಅಧಿಕಾವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಯಿತು. ಅಂತರ ರಾಜ್ಯ ಮಾರಾಟಗಳಿಂದ ಬಂದ ತೆರಿಗೆಯನ್ನು ರಾಜ್ಯಗಳಿಗೆ ಹಂಚಲು 296ನೇ ವಿಧಿಗೆ ತಿದ್ದುಪಡಿ ತರಲಾಯಿತು.



7. ಏಳನೇ ತಿದ್ದುಪಡಿ ಕಾಯ್ದೆ 1956-

ಈ ಕಾಯ್ದೆಯು ನವೆಂಬರ್ 1, 1956ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿಯ ಮೂಲಕ:
ಎ) ಭಾಗ ಎ, ಭಾಗ ಬಿ, ಭಾಗ ಸಿ, ಭಾಗ ಡಿ ರಾಜ್ಯಗಳು ಎಂದು ಮಾಡಲಾಗಿದ್ದ ರಾಜ್ಯಗಳ ವರ್ಗೀಕರಣವನ್ನು ರದ್ದು ಮಾಡಿ ಅವುಗಳನ್ನು 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ರಚಿಸಲಾಯಿತು.
ಬಿ) ಉಚ್ಚನ್ಯಾಯಲಯಗಳ ವ್ಯಾಪ್ತಿಯನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲಾಯಿತು.
ಸಿ) ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ ಉಚ್ಚ ನ್ಯಾಯಾಪಯವನ್ನು ಸ್ಥಾಪಿಸಲು ಅವಕಾಶ ನೀಡಲಾಯಿತು.
ಡಿ) ಉಚ್ಚ ನ್ಯಾಯಲಯಗಳಿಗೆ ಹೆಚ್ಚುವರಿ ಮತ್ತು ಹಂಗಾಮಿ ನ್ಯಾಯಾಧೀಶರನ್ನು ನೇಮಕ ಮಾಡಲು ಅವಕಾಶ ಮಾಡಿಕೊಡಲಾಯಿತು.



8. ಎಂಟನೇ ತಿದ್ದುಪಡಿ ಕಾಯ್ದೆ 1960-

ಎಂಟನೇ ತಿದ್ದುಪಡಿ ಜನವರಿ 5, 1956ರಂದು ಜಾರಿಗೆ ಬಂದಿತು. ಈ ತಿದ್ದುಪಡಿಯ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆಂಗ್ಲೋ-ಇಂಡಿಯನ್ ಜನಾಂಗದವರಿಗೆ ಸಂಸತ್ತು ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮತ್ತೆ 10 ವರ್ಷಗಳ ಕಾಲ (1970ರವರೆಗೆ) ಸ್ಥಾನ ಮೀಸಲಾಯಿ ಮುಂದುವರೆಸಲು ಅವಕಾಶ ನೀಡಲಾಯಿತು. ಅದಕ್ಕಾಗಿ 334ನೇ ವಿಧಿಯನ್ನು ತಿದ್ದುಪಡಿ ಮಾಡಲಾಯಿತು.



9. 9ನೇ ತಿದ್ದುಪಡಿ ಕಾಯ್ದೆ 1960 –

ಒಂಬತ್ತನೇ ತಿದ್ದುಪಡಿ ಜನವರಿ 17, 1961ರಿಂದ ಜಾರಿಗೆ ಬಂದಿತು. ಈ ತಿದ್ದುಪಡಿ ಮೂಲಕ ಪಶ್ಚಿಮ ಬಂಗಾಳದ ಬೆರುಬರಿಯನ್ನೊಳಗೊಂಡಂತೆ ಅಸ್ಸಾಂ, ಪಂಜಾಬ್ ಮತ್ತು ತ್ರಿಪುರಗಳಿಂದ ಕೆಲವು ಪ್ರದೇಶಗಳನ್ನು 1958ರ ಭಾರತ – ಪಾಕಿಸ್ತಾನ ಒಪ್ಪಂದದ ಪ್ರಕಾರವಾಗಿ ಪಾಕಿಸ್ತಾನಕ್ಕೆ ವರ್ಗಾಯಿಸಲಾಯಿತು.



10. 10ನೇ ತಿದ್ದುಪಡಿ ಕಾಯ್ದೆ 1961 –

ಹತ್ತನೇ ತಿದ್ದುಪಡಿ ಕಾಯ್ದೆಯ ಮೂಲಕ ದಾದ್ರ ಮತ್ತು ನಗರ ಹವೇಲಿಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಂಡು ಅವುಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಯಿತು. ಅದಕ್ಕಾಗಿ 240ನೇ ವಿಧಿ ಮತ್ತು ಮೊದಲನೇ ಅನುಸೂಚಿಯನ್ನು ತಿದ್ದುಪಡಿ ಮಾಡಲಾಯಿತು.

...ಮುಂದುವರೆಯುವುದು. 

No comments:

Post a Comment