☀.ಪಿಡಿಓ ಪರೀಕ್ಷೆ ವಿಶೇಷಾಂಕ - 14ನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ:
(Grant Allotment for Local Governance in 14th Financial Commission)
•─━━━━━═══════════━━━━━─••─━━━━━═══════════━━━━━─•
★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)
★ 14ನೇ ಹಣಕಾಸು ಆಯೋಗ
(14th Financial Commission)
ಕೇಂದ್ರ ಸರ್ಕಾರ ನೇಮಿಸಿದ್ದ ವೈ. ವಿ. ರೆಡ್ಡಿ ಅಧ್ಯಕ್ಷತೆಯ 14 ನೇ ಹಣಕಾಸು ಆಯೋಗದ ಶಿಫಾರಸುಗಳನ್ವಯ 2015-16 ರಿಂದ 2019-20 ರವರೆಗೆ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತದೆ.
ಅನುದಾನವನ್ನು ನಿಗದಿಪಡಿಸುವಾಗ ಶೇ 90 ರಷ್ಟನ್ನು 2011ರ ಜನಸಂಖ್ಯೆ ಆಧರಿಸಿ ಮತ್ತು ಶೇ 10 ರಷ್ಟನ್ನು ಪ್ರದೇಶವನ್ನು ಆಧರಿಸಿ ನಿಗದಿಪಡಿಸಲಾಗುತ್ತದೆ.
ಈ ಅನುದಾನವನ್ನು " ಮೂಲ ಅನುದಾನ " ಮತ್ತು ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಆಧರಿಸಿ " ಕಾರ್ಯ ನಿರ್ವಹಣಾ ಅನುದಾನ " ಎಂಬ ಎರಡು ವಿಧಗಳಲ್ಲಿ ನೀಡಲಾಗುತ್ತದೆ.
13 ನೇ ಹಣಕಾಸು ಆಯೋಗದ ಅವಧಿಯಲ್ಲಿ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತಿತ್ತು.
ಪ್ರಸ್ತುತ 14 ನೇ ಹಣಕಾಸು ಆಯೋಗವು ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯತಿಗಳಿಗೆ ಮಾತ್ರ 14 ನೇ ಹಣಕಾಸು ಆಯೋಗದ ಅನುದಾನವನ್ನು ನೀಡಲಾಗುತ್ತಿದೆ.
ಗ್ರಾಮ ಪಂಚಾಯತಿಗಳಿಗೆ ನೀಡಲಾಗುವ ಅನುದಾನದಲ್ಲಿ ಶೇ 90 ರಷ್ಟು ಮೂಲ ಅನುದಾನವಾಗಿದ್ದರೆ, ಉಳಿದ ಶೇ 10ರಷ್ಟು ಕಾರ್ಯನಿರ್ವಹಣಾ ಅನುದಾನವಾಗಿರುತ್ತದೆ.
14 ಹಣಕಾಸು ಆಯೋಗದ ಅನುದಾನವನ್ನು ಗ್ರಾಮ ಪಂಚಾಯತಿಗಳು ಕಡ್ಡಾಯವಾಗಿ ಶೇ 90 ರಷ್ಟು ಅನುದಾನವನ್ನು ಆಸ್ತಿಗಳನ್ನು ಸೃಜಿಸುವ ಕಾಮಗಾರಿಗಳಿಗೆ ಬಳಸಬೇಕು ಮತ್ತು ಉಳಿದ ಶೇ 10 ರಷ್ಟು ಅನುದಾನವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬಳಸಬಹುದು. ಒಟ್ಟು ಅನುದಾನದಲ್ಲಿ ಶೇ 25 ರಷ್ಟನ್ನು ಕಡ್ಡಾಯವಾಗಿ SC/ST ವರ್ಗಗಳಿಗೆ ಖರ್ಚು ಮಾಡಲೇಬೇಕು.
●.ಅನುದಾನವನ್ನು ಈ ಕೆಳಕಂಡ ಕಾಮಗಾರಿಗಳಿಗೆ ಬಳಸಬಹುದು.
೧. ಕುಡಿಯುವ ನೀರು ಸರಬರಾಜು - ಕನಿಷ್ಠ ಶೇ 20
೨. ನೈರ್ಮಲ್ಯ ಕಾಮಗಾರಿಗಳು, ಘನ/ದ್ರವ ತ್ಯಾಜ್ಯ ನಿರ್ವಹಣೆ - ಕನಿಷ್ಠ ಶೇ 10
೩. ಸಮುದಾಯ ಆಸ್ತಿಗಳ ನಿರ್ವಹಣೆ - ಗರಿಷ್ಠ ಶೇ 15
೪. ಗ್ರಾಪಂ ರಸ್ತೆಗಳ, ಪಾದಚಾರಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ - ಗರಿಷ್ಠ ಶೇ 15
೫. ಚರಂಡಿಗಳ ನಿರ್ಮಾಣ - ಗರಿಷ್ಠ ಶೇ 15
೬. ಬೀದಿ ದೀಪಗಳು - ಗರಿಷ್ಠ ಶೇ 10
೭. ಸ್ಮಶಾನಗಳು ಮತ್ತು ಜೀವ ವೈವಿಧ್ಯತೆ ರಕ್ಷಣೆ - ಗರಿಷ್ಠ ಶೇ 5
೮. ಕಾರ್ಯಾಚರಣೆ ಮತ್ತು ನಿರ್ವಹಣೆ - ಗರಿಷ್ಠ ಶೇ 10
ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ವೆಚ್ಚವನ್ನು ಈ ಚಟುವಟಿಕೆಗಳಿಗೆ ಬಳಸಬಹುದು.
- ಕಂಪ್ಯೂಟರ್ ಖರೀದಿ, ಇಂಟರ್ ನೆಟ್ ವೆಚ್ಚ, ಹೊಸ ಗ್ರಾಪಂಗಳಿಗೆ ಪೀಠೋಪಕರಣಗಳ ಖರೀದಿ, ಡೇಟಾ ಎಂಟ್ರಿ ವೆಚ್ಚಗಳು, ಸನ್ನದು ಲೆಕ್ಕಿಗರ ಶುಲ್ಕ ಪಾವತಿ, ಜಮಾಬಂದಿ ನಿರ್ವಹಣೆ ವೆಚ್ಚ, ಸೌರಶಕ್ತಿ ಸೇರಿದಂತೆ ಗ್ರಾಪಂಗಳ ವಿದ್ಯುದೀಕರಣ, ಮಾಹಿತಿ ಶಿಕ್ಷಣ ಮತ್ತು ಸಂವಹನ ವೆಚ್ಚಗಳು, ತ್ಯಾಜ್ಯ ವಿಲೇವಾರಿ ಮತ್ತು ನೀರು ಸರಬರಾಜು ಯೋಜನೆಗಳ ತಯಾರಿಕೆ ವೆಚ್ಚ.
14 ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ 25 ರಷ್ಟನ್ನು ರಾಜ್ಯ ಸರ್ಕಾರವು ಪ್ರತಿಯೊಂದು ಗ್ರಾಮ ಪಂಚಾಯತಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಗ್ರಾಮ ಪಂಚಾಯತಿಗಳ ಬೀದಿ ದೀಪ ಮತ್ತು ನೀರು ಸರಬರಾಜು ವಿದ್ಯುತ್ ಶುಲ್ಕಗಳ ಪಾವತಿಗೆ ನೇರವಾಗಿ ಎಸ್ಕಾಂಗಳಿಗೆ ಪಾವತಿಸುವ ವ್ಯವಸ್ಥೆ ಮಾಡಿದೆ.

No comments:
Post a Comment