"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 29 July 2016

●.PART : II— ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು : (PDO Examination Question and Answers)

●.PART : II— ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು :
(PDO Examination Question and Answers)
•─━━━━━═══════════━━━━━─••─━━━━━═══════════━━━━━─•



1) ಗ್ರಾಮ ಪಂಚಾಯತಿಗೆ ಅಧ್ಯಕ್ಷನ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಎಷ್ಟು ಬಹುಮತ ಅಗತ್ಯವಿರುತ್ತದೆ...???

A. ಒಟ್ಟು ಸದಸ್ಯರ ಸಂಖ್ಯೆಯ 1/3 ರಷ್ಟು.
B. ಒಟ್ಟು ಸದಸ್ಯರು ಸಂಖ್ಯೆಯ 2/3ರಷ್ಟು. ●
C. ಒಟ್ಟು ಸದಸ್ಯರ ಶೇ. 50%
D. ಹಾಜರಿದ್ದ ಮತ್ತು ಮತ ಚಲಾಯಿಸಿದ ಸದಸ್ಯರ ಸಂಖ್ಯೆ 2/3 ರಷ್ಟು.


2)ಗ್ರಾಮ ಸಭೆಯನ್ನು ಕರೆಯುವವರು ಯಾರು...???

A. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ●
B. ಗ್ರಾಮ ಪಂಚಾಯತ ಅಧ್ಯಕ್ಷ
C. ಮಂಡಲ ಪಂಚಾಯತ್
D. ಎ ಮತ್ತು ಬಿ


3) ಗ್ರಾಮ ಪಂಚಾಯತಿಯಲ್ಲಿ ಎಷ್ಟು ಬಗೆಯ ಸ್ಥಾಯಿ ಸಮಿತಿಗಳಿವೆ...???

A. ಐದು
B. ನಾಲ್ಕು
C. ಮೂರು●
D. ಎರಡು


4)ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿಯಲ್ಲಿ ಎಷ್ಟು ಜನ ಸದಸ್ಯರಿರುತ್ತಾರೆ...???

A. 2 ರಿಂದ 3 ಜನ
B. 4 ರಿಂದ 5ಜನ
C. 5ಜನಕ್ಕಿಂತ ಕಡಿಮೆ
D. 3 ರಿಂದ 5 ಜನ●


5)ಗ್ರಾಮ ಪಂಚಾಯತಿಯ ಚುನಾವಣಾ ತಕರಾರುಗಳ ಅರ್ಜಿಯನ್ನು ಯಾರು ವಜಾ ಮಾಡಬಹುದು...???

A. ಸಿವಿಲ್ ನ್ಯಾಯಾಧಿಶರು●
B. ಕಮೀಷನರ್
C. ಚುನಾವಣಾ ಆಯೋಗ
D. ಯಾವುದು ಅಲ್ಲ


6)ಗ್ರಾಮ ಸಭೆಯನ್ನು 1 ವರ್ಷದಲ್ಲಿ ಕನಿಷ್ಠ ಎಷ್ಟು ಬಾರಿ ಸಭೆ ಸೇರುತ್ತದೆ....???

A. 1●
B. 2
C. 3
D. 4


7)ಗ್ರಾಮ ಪಂಚಾಯತಿಯ ವಾರ್ಷಿಕ ಆಡಳಿತ ವರದಿಯನ್ನು ಗ್ರಾಮ ಪಂಚಾಯತಿ ನಿರ್ಣಯದೊಂದಿಗೆ ಯಾರಿಗೆ ಕಳುಹಿಸಬೇಕೆ...???

A. ಜಿಲ್ಲಾ ಪಂಚಾಯಿತಿಗೆ
B. ತಾಲ್ಲೂಕ್ ಪಂಚಾಯತಿಗೆ●
C. ಜಿಲ್ಲಾದಿಕಾರಿಗೆ
D. ರಾಜ್ಯ ಸರ್ಕಾರಕ್ಕೆ


8)ಗ್ರಾಮ ಪಂಚಾಯತಿ ಸಭೆ ನಡೆಸಲು ಇರುವ ಕೋರಂ ಎಷ್ಟು...???

A. ಗ್ರಾಮ ಪಂಚಾಯತಿಯ ಅರ್ಧದಷ್ಟು.●
B. ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಮೂರನೇ ಒಂದು ಭಾga
C. ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಶೇ.10%ಭಾಗ
D. ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ನಾಲ್ಕನೇ ಒಂದು ಭಾಗ


9)ಗ್ರಾಮ ಪಂಚಾಯತಿಗಳಲ್ಲಿ ಪ್ರಶ್ನೆ ಕೇಳಲು ಬಯಸುವ ವ್ಯಕ್ತಿ ಅಥಾವ ಕನಿಷ್ಠ ಎಷ್ಟು ದಿನಗಳಿಗೆ ಮುಂಚಿತವಾಗಿ ನೋಟಿಸ್ ನೀಡಬೇಕು....???

A. 4●
B. 5
C. 6
D. 7


10) ಗ್ರಾಮ ಪಂಚಾಯತಿಯು ಯಾವುದೇ ಆದೇಶದ ಜಾರಿಯನ್ನು ನಿಷೇಧಿಸಬಹುದು...???

A. ಗ್ರಾಮ ಪಂಚಾಯತಿಯ ಅಧ್ಯಕ್ಷರುi
B. ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು
C. ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು●
D. ಯಾವುದು ಅಲ್ಲಾ

... ಮುಂದುವರೆಯುವುದು.

Thursday, 28 July 2016

●.ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು: I : (PDO Examination Question and Answers)

●.ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು: I :
(PDO Examination Question and Answers)
•─━━━━━═══════════━━━━━─••─━━━━━═══════════━━━━━─•


1. ಗ್ರಾಮ, ತಾಲ್ಲೂಕು, ಮತ್ತು ಜಿಲ್ಲಾ
ಪಂಚಾಯಿತಿ ಗಳ ಸುಂಕ, ಶುಲ್ಕಗಳು, ಫೀಜು
ಗಳನ್ನು ನಿರ್ಧಾರ ಮಾಡುವವರು ಯಾರು??
1. ರಾಜ್ಯ ಸರ್ಕಾರ
2. ಹಣಕಾಸು ಆಯೋಗ ★
3. ರಾಜ್ಯ ಪಂಚಾಯಿತ್ ಇಲಾಖೆ
4. ಅಯಾ ಪಂಚಾಯಿತಿಗಳು.


2. ಜಿಲ್ಲಾ ಪಂಚಾಯಿತಿಗಳು ಯೋಜನೆ ಮತ್ತು
ಯೋಜನೇತರ ಅಡಿಯಲ್ಲಿ ಅನುದಾನಿತ ಸಂಸ್ಥೆಗಳಿಗೆ
ಗರಿಷ್ಠ ಎಷ್ಟು ಹಣವನ್ನು ನೀಡಬಹುದು ..
1. 5 ಲಕ್ಷಗಳು★
2. 10 ಲಕ್ಷಗಳು
3. 1 ಲಕ್ಷ
4. 50,000 ರೂ.ಗಳು


3. ಭಾರತದಲ್ಲಿ ಕೇಂದ್ರ ಸರ್ಕಾರದ ಯಾವ
ಇಲಾಖೆಯು ಕೌಶಲ್ಯ ಅಭಿವೃದ್ಧಿಯ ರಾಷ್ಟ್ರೀಯ
ಮಂಡಳಿಯನ್ನು ಸ್ತಾಪಿಸುತ್ತಿದೆ??
1. ಉದ್ಯೋಗ ಇಲಾಖೆ
2. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ
3. ಸಮಾಜ ಕಲ್ಯಾಣ ಇಲಾಖೆ
4. ಹಣಕಾಸು ಇಲಾಖೆ ★


4.ಈ ಕೆಳಗಿನವುಗಳಲ್ಲಿ ಯಾವುದರ ಕುರಿತು
ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ?
a. ರಾಷ್ಟ್ರೀಯ ಅಭಿವೃದ್ಧಿ ಮಂಡಲಿ
b. ಯೋಜನಾ ಆಯೋಗ
c. ಜೋನಲ್ ಕೌನ್ಸಿಲ್ ಗಳು
ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಗುರುತಿಸಿ
1. a ಮತ್ತು b ಮಾತ್ರ
2. b ಮಾತ್ರ
3. a ಮತ್ತು c ಮಾತ್ರ
4. ,a,b, ಮತ್ತು c★


5. 11 ನೇ ಪಂಚವಾರ್ಷಿಕ ಯೋಜನೆಯ ಕರಡು
ನಿರೂಪಣಾ ಪತ್ರವು ಯಾವ ಅವಧಿಯನ್ನು
ಒಳಗೊಳ್ಳುತ್ತದೆ? ?
1. ,2005- 10
2. 2006-11
3. 2007-12★
4. 2002-07


6. ಪಂಚಾಯತ್ ರಾಜ್ ಕಾಯಿದೆ ೨೦೦೦ ದ ಎಷ್ಟನೇ
ತಿದ್ದುಪಡಿಯ ಅನ್ವಯ ಪ್ರತಿಯೊಬ್ಬ ಗ್ರಾಮ
ಪಂಚಾಯತ್ ಸದಸ್ಯರುತಮ್ಮ ಮನೆಯಲ್ಲಿ
ಶೌಚಾಲಯವನ್ನು ಹೊಂದಿರಬೇಕು
ಎಂಬುವುದಾಗಿ ಸೂಚಿಸುತ್ತದೆ
1. ಒಂದನೇ
2. ಎರಡನೇ ★
3. ಮೂರನೇ
4. ನಾಲ್ಕನೇ


7. ಪ್ರದಾನ ಮಂತ್ರಿ ರೋಜ್ ಗಾರ್ ಯೋಜನ
ಯಾವಾಗ ಜಾರಿಗೆ ಬಂದಿತು
A. 1999
B. 1993 ★
C. 1990
D. 1996


8. ಅಂಬೇಡ್ಕರ್ ವಸತಿ ಯೋಜನೆಗೆ ಸಂಬಂದಿಸಿದಂತೆ
ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
A. ಪರಿಶಿಷ್ಟ ಜಾತಿ ಮತ್ತು ಪಂಗಡದವರ
ಪ್ರೋತ್ಸಾಹಕವಾಗಿ ಈ ಯೋಜನೆ ಜಾರಿಗೆ
ತರಲಾಗಿದೆ
B. ೨೦,೦೦ ರೂಪಾಯಿಗಳನ್ನು ಸಮಾಜ ಕಲ್ಯಾಣ
ಇಲಾಖೆ ಭರಿಸುತ್ತದೆ
C. ಆಶ್ರಯ ಕಮಿಟಿಯು ಇದರ
ಫಲಾನುಭವಿಗಳನ್ನುಆಯ್ಕೆ ಮಾಡುತ್ತದೆ
D. ಎಲ್ಲ ಪಲಾನುಭವಿಗಳು ಮಹಿಳೆಯೆ ಅಗಿರಬೇಕು ★


9. ಈ ಕೆಳಕಂಡ ಯಾವ ಯೋಜನೆಗಳನ್ನು
ಸಂಪೂರ್ಣ ಗ್ರಾಮೀಣ ರೋಜ್ ಗಾರ್
ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ
A. ಜವಹಾರ್ ಗ್ರಾಮೀಣ ಸಮ್ರದ್ದಿ ಯೋಜನೆ
ಮತ್ತು ಉದ್ಯೋಗ ಖಾತರಿ ಯೋಜನೆ★
B. ವಾಲ್ಮಿಕಿ ಮತ್ತು ಜಯಪ್ರಕಾಶ್ ರೋಜಗಾರ್
ಯೋಜನೆ
C, ಸಮಗ್ರ ಆವಾಸ್ ಯೋಜನೇ ಮತ್ತು
ಅನ್ನಪೂರ್ಣ ಯೋಜನೆ
D. ಆಶ್ರಯ ವಿಮಾ ಯೋಜನೆ


10. ಪ್ರದಾನ ಮಂತ್ರಿ ಗ್ರಾಮೋದಯ ಯೋಜನೆ
ಪ್ರಾರಂಭವಾದ ವರ್ಷ
A. 2002
B. 2000 ★
C. 2003
D. 1998
(Courtney : Journey to IAS- Mr.Nazeer sir)
... ಮುಂದುವರೆಯುವುದು. 

Tuesday, 26 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ VI: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ VI: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



76. ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳ ಕರ್ತವ್ಯಗಳು :

· ಗ್ರಾಮ ಪಂಚಾಯಿತಿಯ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯ ಸಮಗ್ರ ಜವಾಬ್ದಾರಿ
· ಗ್ರಾಮ ಪಂಚಾಯಿತಿ ನಿಧಿಯ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ
· ರಾಜ್ಯ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳ ಸಮರ್ಪಕ ಮತ್ತು ಸಕಾಲಿಕ ಅನುಷ್ಟಾನದ ಜವಾಬ್ದಾರಿ.
· ಗ್ರಾಮ ಪಂಚಾಯಿತಿ ಸಭೆಯ ನಿರ್ಣಯಗಳ ಜಾರಿಯ ಜವಾಬ್ದಾರಿ .
· ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ವಹಿಗಳ ನಿರ್ವಹಣಾ ಜವಾಬ್ದಾರಿ .
· ಸರ್ಕಾರ , ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮಾಸಿಕ ವರದಿ ಮತ್ತು ಎಂ.ಐ.ಎಸ್. ಸಲ್ಲಿಸುವ ಜವಾಬ್ದಾರಿ.
· ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕರ ಪರಿಷ್ಕರಣೆ ಮತ್ತು ಕರ ವಸೂಲಾತಿಯ ಸಮಗ್ರ ಜವಾಬ್ದಾರಿ.
· ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಟಾನದ ಎಂ.ಐ.ಎಸ್ ಮತ್ತು ಪಂಚತಂತ್ರ ತಂತ್ರಾಶದ ನಿರ್ವಹಣೆ .
· ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು.
· ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ಮೇಲ್ವಿಚಾರಣೆ.


77. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕರ್ತವ್ಯಗಳು :

· ಗ್ರಾಮ ಪಂಚಾಯಿತಿ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೆರವು ನೀಡುವುದು.
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವುದು
· ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ , ಸ್ಥಾಯಿ ಸಮಿತಿಗಳ ಸಭೆ , ಇನ್ನಿತರ ಸಭೆಗಳಿಗೆ ತಿಳುವಳಿಕೆ ಪತ್ರ ಹೊರಡಿಸುವುದು.
· ಮೇಲಿನ ಸಭೆಗಳ ಸುಗಮ ನಿರ್ವಹಣೆ ಮತ್ತು ನಿರ್ಣಯಗಳ ದಾಖಲೀಕರಣ ಮಾಡುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಸಕಾಲದಲ್ಲಿ ಕರೆಯಲು ತಿಳುವಳಿಕೆ ಪತ್ರ ಹೊರಡಿಸುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳ ಸಭಾ ನಡವಳಿಗಳನ್ನು ದಾಖಲಿಸುವುದು.
· ಗ್ರಾಮ ಪಂಚಾಯಿತಿ ಜಮಾಬಂದಿ ಕಾರ್ಯಕ್ರಮ ಸಂಪೂರ್ಣ ಜವಾಬ್ದಾರಿ.
· ಗ್ರಾಮ ಪಂಚಾಯಿತಿಗಳ ಆಡಿಟ್ ವರದಿಗಳಿಗೆ ಅನುಪಾಲನಾ ವರದಿ ಸಿದ್ಧಪಡಿಸುವುದು.
· ಬೀದಿ ದೀಪ , ಕುಡಿಯುವ ನೀರಿನ ನಿರ್ವಹಣೆ
· ಸಾರ್ವಜನಿಕ ದೂರಗಳ ಪರಿಶೀಲನೆ , ಜನಸ್ಪಂದನ ಅರ್ಜಿಗಳ ವಿಲೇವಾರಿ
· ಗ್ರಾಮ ಪಂಚಾಯಿತಿಗಳ ಬಜೆಟ್ ತಯಾರಿಸಿ ಅನುಮೋದನೆಗೆ ಮಂಡಿಸುವುದು.
· ಗ್ರಾಮ ಪಂಚಾಯಿತಿಗಳ ವಿವಿಧ ವಹಿಗಳ ನಿರ್ವಹಣೆ
· ಗ್ರಾಮ ಪಂಚಾಯಿತಿಗ ಸದಸ್ಯರ ತರಬೇತಿ ನಿರ್ವಹಣೆ
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸುವ ಇತರ ಜವಾಬ್ದಾರಿಗಳ ನಿರ್ವಹಣೆ

78. ಪ್ರಸಕ್ತ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರರು , ವಾಟರ್ ಮೆನ್ , ಸ್ವಚ್ಛತಾ ಕಾರ್ಮಿಕರ ಸ್ಥಳೀಯ ನೇಮಕಾತಿಗೆ ಅವಕಾಶ ಕಲ್ಪಿಸಿದೆ. ಇವರು ಗ್ರಾಮ ಪಂಚಾಯಿತಿ ನೌಕರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮೋದನೆಯೊಂದಿಗೆ ನೌಕರರನ್ನು ನೇಮಕ ಮಾಡಿ , ಅವರ ವೇತನವನ್ನು ಗ್ರಾಮ ಪಂಚಾಯಿತಿ ನಿಧಿಯಿಂದ ಭರಿಸಬಹುದು.

79. ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಂಡ ಯಾವುದೇ ನೌಕರರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿ ದಂಡ ವಿಧಿಸಬಹುದು , ವಾರ್ಷಿಕ ಬಡ್ತಿಯನ್ನು ತಡೆಹಿಡಿಯಬಹುದು.

80. ಪ್ರತಿ ವರ್ಷ ಶೇ.10 ರಷ್ಟು ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಾಲಯಗಳನ್ನು ಒದಗಿಸುವುದು ಅಲ್ಲದೇ ಪುರುಷರು ಮತ್ತು ಮಹಿಳೆಯರಿಗೆ ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು.

81. ಪ್ರಸಕ್ತ ಕುಡಿಯುವ ನೀರಿನ ಯೋಜನೆಗಳ ಅನುಷ್ಟಾನವನ್ನು ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿಗೆ ವಹಿಸಿದೆ.ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ.

82. ರಾಜ್ಯ ಪಂಚಾಯಿತಿ ಪರಿಷತ್ತಿನ ಅಧ್ಯಕ್ಷರು – ಮುಖ್ಯಮಂತ್ರಿಗಳು


83. ರಾಜ್ಯ ಪಂಚಾಯಿತಿ ಪರಿಷತ್ತಿನ ಉಪಾಧ್ಯಕ್ಷರು – ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರು

84. ರಾಜ್ಯ ಪಂಚಾಯಿತಿ ಪರಿಷತ್ತಿಗೆ ಸರ್ಕಾರದಿದಂ ನಾಮ ನಿರ್ದೇಶಿಸಲ್ಪಟ್ಟ ಐವರು ಸಚಿವರು ಮತ್ತು 10 ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳು ಇದರ ಸದಸ್ಯರಾಗಿದ್ದಾರೆ.

85. ರಾಜ್ಯ ಪಂಚಾಯಿತಿ ಪರಿಷತ್ತು ಸಮಿಯಿ ವರ್ಷಕ್ಕೆ ಎರಡು ಬಾರಿಯಾದರೂ ಸಭೆ ಸೇರಬೇಕು.

86. ಮುಂದಿನ ಆರ್ಥಿಕ ವರ್ಷದ , ಅಂದರೆ ಏಪ್ರಿಲ್ 1ನೇ ತಾರಿಖೀನಿಂದ ಮಾರ್ಚಿ 31ನೇ ತಾರೀಖಿನವರೆಗೆ ಅಯವ್ಯವನ್ನು ಗ್ರಾಮ ಪಂಚಾಯಿತಿ ಸಿದ್ಧಪಡಿಸಬೇಕು .ಆಯವ್ಯ ಮತ್ತು ಲೆಕ್ಕಪತ್ರ ನಿಯಮಗಳು 2006 ನಿಯಮ 11 ಮತ್ತು 12 ರನ್ವಯ ಫೇಬ್ರವರಿ 1 ರಿಂದ ಮಾರ್ಚ್ 10 ರೊಳಗೆ ನಡೆಯುವ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆಯಬೇಕು.

87. 2005 ರಲ್ಲಿ ಕರ್ನಾಟಕ ಸರ್ಕಾರವು ಪಂಚಾಯಿತಿ ಜಮಾಬಂದಿ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು.

88. ಪಂಚಾಯತ್ ಜಮಾಬಂದಿ ಎಂದರೆ – ಯೋಜನೆಗಳನ್ನು ಜಾರಿಗೊಳಿಸಬೇಕು, ಅವುಗಳಿಗೆ ಹಣಬೇಕು , ಬಳಸಿದ ಹಣವನ್ನು ಪುಸ್ತಕಗಳಲ್ಲಿ ದಾಖಲೀಕರಿಸಬೇಕು. ನಡೆಸಲಾದ ಕಾಮಗಾರಿಗಳ ಗುಣಮಟ್ಟಕ್ಕೂ ಖರ್ಚು ಮಾಡಿದ ಹಣಕ್ಕೂ ಹೊಂದಾಣಿಕೆಯಾಗಬೇಕು . ಈ ಪ್ರಕ್ರಿಯೆಗಳನ್ನು ವರ್ಷಕ್ಕೊಮ್ಮೆ ಸಾರ್ವಜನಿಕರ ಸಮ್ಮುಖದಲ್ಲಿ ತನಿಖೆ ನಡೆಸಿ ತಪ್ಪು ಒಪ್ಪುಗಳನ್ನು ತಿಳಿಯುವುದೇ ಪಂಚಾಯತ್ ಜಮಾಬಂದಿ.

89. ಗ್ರಾಮ ಪಂಚಾಯಿತಿ ಜಮಾಬಂದಿ ತಂಡವನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ( ಇಓ ) ಮಾಡಬೇಕು.

90. ಗ್ರಾಮ ಪಂಚಾಯಿತಿ ಜಮಾಬಂದಿಯು ಪ್ರತಿ ವರ್ಷ ಆಗಸ್ಟ್ 16 ರಿಂದ ಸೆಪ್ಟೇಂಬರ್ 15 ರೊಳಗೆ ನಡೆಯಬೇಕು.

91. ಕಾರ್ಯನಿರ್ವಾಹಕ ಅಧಿಕಾರಿ ಜಮಾಬಂದಿ ನಡೆಯುವ ದಿನವನ್ನು ಗ್ರಾಮ ಪಂಚಾಯಿತಿಗಳಿಗೆ 30 ದಿನ ಮೊದಲು ತಿಳಿಸಿರಬೇಕು.

92. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ನೌಕರರು ಜಮಾಬಂದಿ ನಡೆಯುವಾಗ ಇರಬೇಕು . ಗ್ರಾಮ ಪಂಚಾಯಿತಿಯ ಕಿರಿಯ ಇಂಜಿನಿಯರ್ ಇರುವುದು ಕಡ್ಡಾಯ.

93. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮುಂತಾದ ಅಧಿಕಾರಿಗಳು ಜಮಾಬಂದಿ ಮಾಡಬೇಕು . ಎಲ್ಲಾ ಗ್ರಾಮಗಳಲ್ಲೂ ಅಲ್ಲ . ಕಡೆಯ ಪಕ್ಷ ತಾಲ್ಲೂಕಿನ 2 ಗ್ರಾಮಗಳಲ್ಲಿ ಮಾಡಬೇಕು.

94. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ದಿನಾಂಕ/07/09/2005 ರಲ್ಲಿ ಜಾರಿಗೆ ಬಂದಿತು.

95. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ ಬೀದರ್ , ಗುಲ್ಬರ್ಗ , ರಾಯಚೂರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ದಿನಾಂಕ/01/04/2006 ರಿಂದ ಜಾರಿಯಲ್ಲಿ ತರಲಾಯಿತು.

96. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಎರಡನೇ ಹಂತದಲ್ಲಿ ರಾಜ್ಯದ ಬೆಳಗಾವಿ, ಬಳ್ಳಾರಿ , ಚಿಕ್ಕಮಗಳೂರು , ಶಿವಮೊಗ್ಗ , ಹಾಸನ , ಮತ್ತು ಕೊಡಗು ಜಿಲ್ಲೆಗಳಲ್ಲಿ ದಿನಾಂಕ/01/04/2007 ರಿಂದ ವಿಸ್ತರಿಸಲಾಯಿತು.

97. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸದ್ಯ ರಾಜ್ಯದ ಉಳಿದ ಜಿಲ್ಲೆಗಳಿಗೂ ದಿನಾಂಕ/01/04/2008 ರಿಂದ ಜಾರಿಗೊಳಿಸಲಾಯಿತು.

98. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಅಧಿಕಾರ ಪಡೆಯುತ್ತದೆ.

99. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕುಶಲ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ಗಿನಗಳಿಗೆ ಕೂಲಿಯ ಶೇ.25 ರಷ್ಟು ಮತ್ತು ಉಳಿದ ಅವಧಿಗೆ ಶೇ.50 ರಷ್ಟು ನಿರುದ್ಯೋಗ ಭತ್ಯೆಯನ್ನು ಪಡೆಯಲು ಹಕ್ಕು ಹೊದಿರುತ್ತಾರೆ.

100. ಸಾಧ್ಯವಾದಷ್ಟು ಮಟ್ಟಿಗೆ ಕೆಲಸಗಳನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಕೂಲಿ ಕಾರ್ಮಿಕರು ವಾಸವಿರುವ ಗ್ರಾಮದಿಂದ 5 ಕಿ.ಮೀ. ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದಾಗ ನಿಗದಿತ ದರದ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಪಡೆಯಲು ಈ ಕೂಲಿ ಕಾರ್ಮಿಕರಿಗೆ ಹಕ್ಕಿದೆ.

●.ಪಿಡಿಓ (PDO) ಅಧ್ಯಯನ ಸಾಮಗ್ರಿ V: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ V: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



61. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಬೇಕು.

62. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು 10 ದಿನಗಳೊಳಗೆ ರಾಜೀನಾಮೆ ಪತ್ರವನ್ನು ಹಿಂದೆ ಪಡೆಯದಿದ್ದರೆ , ಅದು ಸ್ವೀಕೃತವಾಗಿದೆಯೆಂದು ಪರಿಗಣಿಸಬೇಕು.

63. ಗ್ರಾಮ ಪಂಚಾಯಿತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಒಂದು ವರ್ಷದವರೆಗೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು.

64. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ 1/3 ನೇ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.

65. ಅವಿಶ್ವಾಸ ಗೊತ್ತುವಳಿ ಇದನ್ನು ಸ್ವೀಕರಿಸಿದ 30 ದಿನದೊಳಗೆ ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಮಂಡಿಸಬೇಕು.

66. ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಸಭೆಯ ನೋಟೀಸನ್ನು ಕನಿಷ್ಠ 10 ದಿನಗಳಿಗೆ ಮುಂಚಿತವಾಗಿ ಸದಸ್ಯರಿಗೆ ನೀಡಬೇಕು.

67. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ 2/3 ರಷ್ಟು ಸದಸ್ಯರು ಪರವಾಗಿ ತೀರ್ಮಾನಿಸಿದ್ದಲ್ಲಿ ಅವಿಶ್ವಾಸ ಗೊತ್ತುವಳಿ ಸ್ವೀಕಾರವಾಗುತ್ತದೆ.

68. ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ ದಿನಾಂಕದಿಂದ ಒಂದು ವರ್ಶದ ಅವಧಿಯವರೆಗೆ ಮರು ಅವಿಶ್ವಾಸ ಗೊತ್ತುವಳಿಯ ಮಂಡಿಸುವ ಹಾಗಿಲ್ಲ.

69. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಸಾಬೀತಾದಲ್ಲಿ ಅವರನ್ನು ಹುದ್ಧೆಯಿಂದ ತೆಗೆದು ಹೊಕಬಹುದು.

70. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ದುರ್ವರ್ತನೆ , ಅದಿಕಾರ ದುರುಪಯೋಗ ಮತ್ತು ಭ್ರಷ್ಟಚಾರ ಪ್ರಕರಣಗಳು ಸಾಬೀತಾದಲ್ಲಿ ಹುದ್ದೆಯಿಂದ ತೆಗೆದು ಹಾಕಬಹುದು.

71. ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ಪಂಚಾಯಿತಿ ಅನುಮತಿಯಿಲ್ಲದೆ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಗೈರುಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ .

72. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.

73. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಂಚಾಯಿತಿ ಕಾಮಗಾರಿಗಳಿಗೆ ತಾವಾಗಲೀ ತಮ್ಮ ಏಜೆಂಟರ ಮೂಲಕವಾಗಿ ಕರಾರು ಮಾಡಿಕೊಳ್ಳುವುದು ಅಥವಾ ಸಾಮಾಗ್ರಿ ಸರಬರಾಜು ಮಾಡುವುದು ಸಾಬೀತಾದರೆ ಸದಸ್ಯತ್ವ ರದ್ದಾಗುತ್ತದೆ.

74. ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಯಾವುದಾದರೂ ಬಾಕಿ ಉಳಿಸಿಕೊಂಡಿದ್ದಲ್ಲಿ ಅಂತಹವರ ಸದಸ್ಯತ್ವ ರದ್ದಾಗುತ್ತದೆ.

75. ಕರ್ನಾಟಕ ಸರ್ಕಾರವು ದಿನಾಂಕ/31/03/2008 ರ ಆದೇಶದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಸೃಷ್ಠಿಸಿದೆ.

...ಮುಂದುವರೆಯುವುದು. 

Sunday, 24 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ IV: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ IV: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)


46. ಸಭಾ ನಡವಳಿಯ ಒಂದು ಪ್ರತಿಯನ್ನು ಸಭೆ ನಡೆದ 10 ದಿನಗಳೊಳಗೆ ಕಾರ್ಯ ನಿರ್ವಾಹಕ ಅಧಿಕಾರಿಗೆ ಕಳುಹಿಸಬೇಕು.

47. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಸಭಾ ನಡವಳಿ ಪ್ರತಿಗಳನ್ನು ಒದಗಿಸಬೇಕು.

48. ನಡವಳಿ ಪುಸ್ತಕವು ಸದಸ್ಯರಿಗೆ ಮತ್ತು ಮತದಾರರಿಗೆ ( ಸಾರ್ವಜನಿಕರಿಗೆ ) ಪರಿಶೀಲನೆಗೆ ಮುಕ್ತವಾಗಿರಬೇಕು.

49. ಯಾವುದೇ ಸದಸ್ಯ ತನ್ನ ಅಭಿಪ್ರಾಯವನ್ನು ನಡವಳಿ ಪುಸ್ತಕದಲ್ಲಿ ನಮೂದಿಸಬೇಕೆಂದು ಒತ್ತಾಪಡಿಸಿದಲ್ಲಿ ನಮೂದಿಸಬೇಕು.

50. ಸ್ಥಲಿಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರು ಕಾರ್ಯ ನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ.

51. ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಅವರ ಚುನಾವಣೆಯ ದಿನಾಂಕದಿಂದ 30 ತಿಂಗಳು ಆಗಿರುತ್ತದೆ. ಅಥವಾ ಸದಸ್ಯತ್ವ ಅವಧಿ ನಿಂತು ಹೋಗುವವರೆಗೆ ಯಾವುದೋ ಮೊದಲು ಆ ಅವಧಿಯಾಗಿರುತ್ತದೆ.

52. ಗ್ರಾಮ ಪಂಚಾಯಿತಿ ಸಭೆಗಳನ್ನು ಕರೆಯುದು ಮತ್ತು ಆ ಸಭೆಗಳ ಅಧ್ಯಕ್ಷತೆಯನ್ನು ವಹಿಸುವುದು ಅಧ್ಯಕ್ಷರ ಅಧಿಕಾರ .

53. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರ, ಕಾರ್ಯದರ್ಶಿ ಮತ್ತು ಇತರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡುವುದು ಅಧ್ಯಕ್ಷರ ಅಧಿಕಾರಿ

54. ಗ್ರಾಮ ಪಂಚಾಯಿತಿ ಅಧಿಕಾರಿ ಅಥವಾ ನೌಕರನ ವಿರುದ್ಧ ಶಿಸ್ತು ಕ್ರಮ ಹೂಡಲು ಉದ್ದೇಶಿಸಿದ್ದರೆ ಅಥವಾ ಕ್ರಿಮಿಲನ್ ಅಪರಾಧದ ಕುರಿತು ತನಿಖೆ ನಡೆಯುತ್ತಿದ್ದರೆ ಅವರನ್ನು ಅಮಾನತ್ತಿನಲ್ಲಿಡುವ ಅಧಿಕಾರ ಅಧ್ಯಕ್ಷರಿಗಿದೆ.

55. ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಮಂಜೂರಾತಿ ಅಗತ್ಯವಿರುವಂತಹ ಯಾವುದೇ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವುದು ಅಗತ್ಯವೆಂದು ಅಭಿಪ್ರಾಯಪಟ್ಟರೆ 24 ಗಂಟೆಗಳ ನೋಟೀಸನ್ನು ಕೊಟ್ಟು ಸಭೆಯನ್ನು ಕರೆಯಬಹುದು.

56. ಅಧ್ಯಕ್ಷರು ರಜೆ ಹೋದಾಗ ಅಥವಾ ಕೆಲಸ ನಿರ್ವಹಿಸಲು ಅಸಮರ್ಥರಾದಾಗ ಅಥವಾ ಅಧ್ಯಕ್ಷರ ಹುದ್ದೆಯು ಖಾಲಿ ಇದ್ದಾಗ ಉಪಾಧ್ಯಕ್ಷರು ಮೇಲಿನ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಬೇಕು.

57. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. . ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.

58. ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ಅಧ್ಯಕ್ಷರ ಜವಾಬ್ದಾರಿ
· ಗ್ರಾಮ ಪಂಚಾಯಿತಿಯ ಎಲ್ಲಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
· ವಾರ್ಡ್ ಸಮತ್ತು ಗ್ರಾಮ ಸಭೆಗಳ ಸಂಘಟನೆಯ ಜವಾಬ್ದಾರಿ ನಿರ್ವಹಿಸುವುದು.
· ತಮ್ಮ ವಾರ್ಡ್ ನ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಲಭ್ಯ ಅನುದಾನದ ಇತಿಮಿತಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವುದು.
· ಸವಲತ್ತುಗಳನ್ನು, ವೈಯಕ್ತಿಕ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವುದು.
· ಸಂಪನ್ಮೂಲ ಕ್ರೋಢೀಕರಣಕ್ಕೆ ಮಹತ್ವ ನೀಡುವುದು.
· ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾರ್ವಜನಿಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಂತೆ ನೋಡಿಕೊಳ್ಳುವುದು.
· ನಿಯಾಮವಳಿಗಳು ಮತ್ತು ಕಾಯಿದೆಯ ಅಂಶಗಳನ್ನು ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸುವುದು.
59. ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಗೌರವಧನ ಅಧ್ಯಕ್ಷರು – 500 , ಉಪಾಧ್ಯಕ್ಷರು – 300 , ಸದಸ್ಯರು – 300
60. ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆ ಪತ್ರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು .
...ಮುಂದುವರೆಯುವುದು 

Saturday, 23 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ III: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ III: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



31. ಕೋರಂ ಇಲ್ಲದೇ ಯಾವುದೇ ಸಭೆಯನ್ನು ನಡೆಸಲು ಸಾಧ್ಯವಿಲ್ಲ.

32. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಬೇಕು.

33. ಅಧ್ಯಕ್ಷರು ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಬೇಕು. ಇವರಿಬ್ಬರ ಗೈರುಹಾಜರಿಯಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು ತಮ್ಮಲ್ಲೇ ಒಬ್ಬರನ್ನು ಆ ಸಭೆಗೆ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡಿಕೊಳ್ಳಬಹುದು.

34. ಸಭೆಯ ನಿರ್ಣಯಗಳನ್ನು ಸಭೆಯಲ್ಲಿ ಹಾಜರಿರುವ ಚಿನಾಯಿತ ಸದಸ್ಯರ ಬಹುಮತದ ಮೂಲಕ ತೀರ್ಮಾನಿಸಬೇಕು.

35. ಸಮಾನ ಮತಗಳು ಬಂದಲ್ಲಿ ಅಧ್ಯಕ್ಷರು ತಮ್ಮ ನಿರ್ಣಯಕ ಮತವನ್ನು ಹೆಚ್ಚುವರಿಯಾಗಿ ಕೊಡಲು ಅವಕಾಶವಿದೆ.

36. ಗ್ರಾಮ ಪಂಚಾಯಿತಿಯ ಯಾವುದೇ ಸದಸ್ಯರು ಹಣಕಾಸಿನ ಹಿತಾಸಕ್ತಿ ಇರುವ ವಿಷಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಬಾರದು ಹಾಗೂ ಮತ ನೀಡಬಾರದು . ಹಾಗೇಯೇ ಅಧ್ಯಕ್ಷತೆ ವಹಿಸುವ ವ್ಯಕ್ತಿಯೂ ಕೂಡ ಹಣಕಾಸಿನ ಹಿತಾಸಕ್ತಿ ಹೊಂದಿದ್ದರೆ. ಅಂತಹ ವಿಷಯದ ಚರ್ಚೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ವಹಿಸಬಾರದು.

37. ಗ್ರಾಮ ಪಂಚಾಯಿತಿ ಸಭೆಗಳು ಅಥವಾ ಸ್ಥಾಯಿ ಸಮಿತಿಗಳ ಸಭೆಗಳಿಗೆ ಹಾಜರಾಗುವ ಸದಸ್ಯರಿಗೆ ಭಾಗವಹಿಸುವಿಕೆ ಭತ್ಯೆಯನ್ನು ಸಂದಾಯ ಮಾಡಬೇಕು. ಪ್ರಸ್ತುತ ಸರ್ಕಾರದ ಆದೇಶದಂತೆ ಸದಸ್ಯರು ಹಾಜರಾದ ಪ್ರತಿ ಸಭೆಗೆ ರೂ.100/- ರಂತೆ ಸಂದಾಯ ಮಾಡಬೇಕು.

38. ಅವಶ್ಯವೆಂದು ಭಾವಿಸಿದಾಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ವಿಶೇಷ ಸಭೆ ಕರೆಯಬಹುದು.

39. ಗ್ರಾಮ ಪಂಚಾಯಿತಿಯ ಸದಸ್ಯರ ಮೂರನೇ ಒಂದು ಭಾಗ (1/3) ದಷ್ಟು ಸದಸ್ಯರು ಲಿಖಿತ ಕೋರಿಕೆ ಸಲ್ಲಿಸಿದರೂ ವಿಶೇಷ ಸಭೆ ಕರೆಯಲು ಅವಕಾಶವಿದೆ. ಲಿಖಿತ ಕೋರಿಕೆಯು ತಲುಪಿದ 15 ದಿವಸಗಳೊಳಗೆ ವಿಶೇಷ ಸಭೆಯನ್ನು ಕರೆಯಬೇಕು.

40. ವಿಶೇಷ ಸಭೆಯನ್ನು ಕರೆಯಲು ಅಧ್ಯಕ್ಷರು ಒಪ್ಪದಿದ್ದಲ್ಲಿ ಉಪಾಧ್ಯಕ್ಷರು ಕರೆಯಬೇಕು. ಉಪಾಧ್ಯಕ್ಷರು ಸಹ ಒಪ್ಪದಿದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಸಭೆಯ ನೋಟೀಸು ಜಾರಿ ಮಾಡುವರು.

41. ವಿಶೇಷ ಸಭೆಗೆ ಮೂರು ಪೂರ್ಣ ದಿವಸಗಳ ನೋಟೀಸನ್ನು ಕಾರ್ಯದರ್ಶಿ ನೀಡಬೇಕಾಗುತ್ತದೆ.

42. ವಿಶೇಷ ಸಭೆಗೆ ಸಾಮಾನ್ಯ ಸಭೆಯಂತೆಯೇ ಶೇ. 50 ರಷ್ಟು ಕೋರಂ ಅವಶ್ಯವಿರುತ್ತದೆ.

43. ತುರ್ತು ಸಭೆಯನ್ನು ಅಧ್ಯಕ್ಷರು 24 ಗಂಟೆಯೊಳಗಾಗಿ ಕರೆಯಬಹುದು.

44. ತುರ್ತು ಸಭೆಯನ್ನು ನೈಸರ್ಗಿಕ ವಿಪತ್ತುಗಳಾದ ಮಳೆ ಹಾನಿ , ಬೆಂಕಿ ಅನಾಹುತ ಮತ್ತಿತರ ಪ್ರಕೃತಿ ವಿಕೋಪಗಳ ತುರ್ತು ನಿರ್ವಹಣೆಗೆ ಸಂಬಂಧಿಸಿದ ತುರ್ತು ಕ್ರಮ ತೆಗೆದುಕೊಳ್ಳಲು ಇಂತಹ ತುರ್ತು ಸಭೆಗಳನ್ನು ಕರೆಯಬಹುದು.

45. ನಡವಳಿ ಪುಸ್ತಕವು ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ / ಕಾರ್ಯದರ್ಶಿಗಳ ಸುಪರ್ದಿಯಲ್ಲಿರಬೇಕು.
...ಮುಂದುವರೆಯುವುದು. 

●.ಪಿಡಿಓ (PDO) ಅಧ್ಯಯನ ಸಾಮಗ್ರಿ II: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

●.ಪಿಡಿಓ (PDO) ಅಧ್ಯಯನ ಸಾಮಗ್ರಿ II: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



16. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.

17. ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.

18. ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.

19. ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.

20. ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು

21. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.

22. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.

23. ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.

24. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.

25. ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು .

26. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಯು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿ / ಕ್ಷೇತ್ರ ಸಿಬ್ಬಂದಿಗಳಿಗೆ ಸಭೆಯ ನೋಟಿಸನ್ನು ನೀಡಬೇಕು .

27. ಗ್ರಾಮ ಪಂಚಾಯಿತಿಗೆ ಸಾಮಾನ್. ಸಭೆಗೆ ಏಳು ಪೂರ್ಣ ದಿನಗಳ ನೋಟೀಸನ್ನು ನೀಡಬೇಕು . ಸಭೆಯ ಸೂಚನಾ ಪತ್ರದ ಪ್ರತಿಯನ್ನು ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಹಚ್ಚಿರಬೇಕು.

28. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಅರ್ಧ ಭಾಗ ( ಶೇ.50 ) ಸಭೆಯ ಕೋರಂ ಆಗಿರುತ್ತದೆ.

29. ಗ್ರಾಮ ಪಂಚಾಯಿತಿ ಸಭೆಗೆ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯಬೇಕು.

30. ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದಿನ ದಿನಕ್ಕೆ ಅಥವಾ ತರುವಾಯದ ದಿನಕ್ಕೆ ಮುಂದೂಡಬಹುದು , ಹಾಗೆ ನಿಗದಿಪಡಿಸಿದ ಸಭೆಯ ನೋಟೀಸನ್ನು ಗ್ರಾಮ ಪಂಚಾಯಿತಿ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕು.
...ಮುಂದುವರೆಯುವುದು. 

●.ಪಿಡಿಓ (PDO) ಅಧ್ಯಯನ ಸಾಮಗ್ರಿ I: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

 ●.ಪಿಡಿಓ (PDO) ಅಧ್ಯಯನ ಸಾಮಗ್ರಿ I: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



1. ಪ್ರತಿ 5000 – 7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.

2. ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ( ಉದಾ. ಬೇಳಗಾಂ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾಡ , ಹಾಸನ , ಕೊಡಗು , ಶಿವಮೊಗ್ಗ , ಉಡುಪಿ , ಹಾವೇರಿ , ಹಾಗೂ ಉತ್ತರ ಕನ್ನಡ ಜಿಲ್ಲೆಗಳು ) 2500 ಜನಸಂಖ್ಯೆಗೆ ಕಡಿಮೆ ಇಲ್ಲದ ಪ್ರದೇಶವನ್ನು ಒಳಗೊಂಡಂತೆ ಪಂಚಾಯಿತಿ ರಚಿಸಬಹುದಾಗಿದೆ.

3. ಅವಶ್ಯಕವೆಂದು ಕಂಡುಬಂದಲ್ಲಿ , ಗ್ರಾಮದ ಕೇಂದ್ರದಿಂದ ಐದು ಕಿ.ಮೀ. ಸುತ್ತಳತೆಯಲ್ಲಿರುವ ಪ್ರದೇಶವನ್ನು ಸಹ ಪಂಚಾಯಿತಿ ವ್ಯಾಪ್ತಿಯೆಂದು ಪರಿಗಣಿಸಬಹುದು.

4. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿಗೆ ಸದಸ್ಯರ ಆಯ್ಕೆ ನಡೆಯುತ್ತದೆ.

5. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿದೆ.

6. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000 ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.

7. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 11 ಮಂದಿ ಚುನಾಯಿತ ಸದಸ್ಯರಿರಬೇಕು.

8. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆಯ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ. ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಸಭಾ , ರಾಜ್ಯಸಭಾ , ವಿಧಾನ ಪರಿಷತ್ ಸದಸ್ಯರು ಜೊತೆಗೆ ಒಂದು ವರ್ಷದ ಅವಧಿಗೆ , ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.

9. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ.

10. 40,000 ಜನಸಂಖ್ಯೆಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.

11. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಗೆ 18,000 ಜನಸಂಖ್ಯೆಗೆ ಒಬ್ಬರಂತೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.

12. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೇ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಾಸಭಾ , ರಾಜ್ಯಸಭಾ , ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.

13. ಮೀಸಲಿಟ್ಟ ಹಾಗೂ ಮೀಸಲಿರಿಸದ ( ಸಮಾನ್ಯ ) ಒಟ್ಟು ಸ್ಥಾನಗಳಲ್ಲಿ 1/3 ಕ್ಕಿಂತ ಕಡಿಮೆಯಿಲ್ಲದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.

14. ಚುನಾಯಿತರಾದ ಸದಸ್ಯರ ಅವಧಿಯು ಗ್ರಾಮ ಪಂಚಾಯಿತಿಯ ಪ್ರಥಮ ಸಭೆ ಅಂದರೆ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆಗಾಗಿ ಗೊತ್ತುಪಡಿಸಿದ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷಗಳವೆರೆಗೆ ಇರುತ್ತದೆ.

15. ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ. ಗ್ರಾಮ ಪಂಚಾಯಿತಿಯ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಅನುಕ್ರಮವಾಗಿ ಗೈರುಹಾಜರಾದರೆ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
..ಮುಂದುವರೆಯುವುದು.