"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 9 August 2015

☀ ಸಾಮಾನ್ಯ ಜ್ಞಾನ (ಭಾಗ - 18) ★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ) (SDA and FDA special) (General knowledge on Constitution of India (Part-18))  ☆.. ಭಾರತ ಸಂವಿಧಾನದ ವಿಶೇಷಾಂಕ. ...

★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ)
(SDA and FDA special)☀ ಸಾಮಾನ್ಯ ಜ್ಞಾನ (ಭಾಗ - 18)(ಎಸ್ ಡಿ ಎ ಮತ್ತು ಎಫ್ ಡಿ ಎ ನೋಟ್ಸ್)
(General knowledge on Constitution of India (Part-18))
☆.. ಭಾರತ ಸಂವಿಧಾನದ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತ ಸಂವಿಧಾನ.
(Constitution of India)

★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ)
(SDA and FDA special)

721.ಭಾರತೀಯ ಸಂವಿಧಾನವು ಜಗತ್ತಿನಲ್ಲಿಯೇ ಅತಿ ದೊಡ್ಡ ಸಂವಿಧಾನವಾಗಿದೆ. ಕ್ಯಾಬಿನೆಟ್ ಮಿಷನ್ ಪ್ಲಾನ್ 1946 ರ ಅನ್ವಯ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು. ಇದಕ್ಕೆ ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷರಾಗಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ‘ಕರಡು ಸಮಿತಿ’ ಯನ್ನು ರಚಿಸಲಾಯಿತು. ಅಂತಿಮವಾಗಿ ಸಿದ್ಧಪಡಿಸಿದ ಸಂವಿಧಾನವನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು. ಜನವರಿ 26, 1950 ರಂದು ಭಾರತ ಸಂವಿಧಾನವು ಜಾರಿಗೆ ಬಂದಿತು.


722.ಮೂಲತಃ 395 ವಿಧಿಗಳು, 22 ಭಾಗಗಳು, ಮತ್ತು 8 ಅನುಸೂಚಿಗಳನ್ನು ಹೊಂದಿದೆ. ಪ್ರಸ್ತುತ ಇದು 448 ವಿಧಿಗಳು, 22 ಭಾಗಗಳು, ಮತ್ತು 12 ಶೆಡ್ಯೂಲ್( ಅನುಸೂಚಿಗಳು) ಹೊಂದಿದೆ.


723.ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಅಮೆರಿಕಾ (USA).


724. ದೇಶದಲ್ಲಿ ಸುಪ್ರೀಂಕೋರ್ಟ್ ಹೊಂದುವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಅಮೆರಿಕಾ (USA).


725. ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

● ಉತ್ತರ: ಅಮೆರಿಕಾ (USA).


726. ಭಾರತವು 'ಪಂಚವಾರ್ಷಿಕ ಯೋಜನೆ' ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ ?

● ಉತ್ತರ: ರಷ್ಯಾ(ಯುಎಸ್ಎಸ್ಆರ್).


727. ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ:ಬ್ರಿಟನ್ (ಯುಕೆ).


728. ಭಾರತ ಸಂವಿಧಾನವು ಯಾವ ದೇಶದಿಂದ "ಸಂಸತ್ ಚುನಾವಣೆ"(Parliamentary Election) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಬ್ರಿಟನ್ (ಯುಕೆ).


729. ಭಾರತ ಸಂವಿಧಾನವು ಯಾವ ದೇಶದಿಂದ "ಚುನಾವಣಾ ಆಯೋಗ" (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಬ್ರಿಟನ್ (ಯುಕೆ).


730.ಭಾರತ ಸಂವಿಧಾನವು ಯಾವ ದೇಶದಿಂದ "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು' (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ?

● ಉತ್ತರ: ಜರ್ಮನಿ.


731. ಭಾರತ ಸಂವಿಧಾನವು ಯಾವ ದೇಶದಿಂದ " ಸಮವರ್ತಿ ಪಟ್ಟಿ" (Concurrent list) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಆಸ್ಟ್ರೇಲಿಯಾ.


732. ಭಾರತದ ಸಂವಿಧಾನದಲ್ಲಿ ಅಳವಡಿಸಲಾದ "ಫೆಡರಲ್ ವ್ಯವಸ್ಥೆ" (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಕೆನಡಾ.


733. ಭಾರತ ಸಂವಿಧಾನವು ಯಾವ ದೇಶದಿಂದ "ಕೇಂದ್ರ-ರಾಜ್ಯ ಪಟ್ಟಿ" (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಕೆನಡಾ.


734. ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?

● ಉತ್ತರ: ದಕ್ಷಿಣ ಆಫ್ರಿಕಾ.


735. ಯಾವ ಸಂವಿಧಾನದ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?

● ಉತ್ತರ: 42 ನೇ ತಿದ್ದುಪಡಿ (1976).


736. ಸಂವಿಧಾನದಲ್ಲಿರುವ 'ಪ್ರಸ್ತಾವನೆ'ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು?

● ಉತ್ತರ: 42 ನೇ ತಿದ್ದುಪಡಿ.


737. ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?

● ಉತ್ತರ: 44 ನೇ ತಿದ್ದುಪಡಿ (1978).


738. ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ?

● ಉತ್ತರ: 61 ನೇ ತಿದ್ದುಪಡಿ (1989).


739. ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನಾಗಿಸಿದ ಸಂವಿಧಾನದ ತಿದ್ದುಪಡಿ ಯಾವುದು ?

● ಉತ್ತರ: 69 ನೇ ತಿದ್ದುಪಡಿ (1991).


740. ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು?

● ಉತ್ತರ: 73ನೇ ತಿದ್ದುಪಡಿ (1992).


741. ಭಾರತ ಸಂವಿಧಾನದ 'ಆತ್ಮ ಮತ್ತು ಹೃದಯ' ಎಂದು ಕರೆಯಲ್ಪಡುವ ವಿಧಿ (Article) ಯಾವುದು ?

●ಉತ್ತರ: 32ನೇ ವಿಧಿ .


742. ಸಂವಿಧಾನದ ಯಾವ ವಿಧಿಯು 'ಅಸ್ಪೃಶ್ಯತೆ ನಿರ್ಮೂಲನೆ'ಯ ಕುರಿತು ತಿಳಿಸುತ್ತದೆ?

● ಉತ್ತರ: 17ನೇ ವಿಧಿ.


743. ಭಾರತ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗುತ್ತದೆ ?

● ಉತ್ತರ: 12 ರಿಂದ 35 ವಿಧಿಗಳು.


744. ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ 'ಸಮಾನತೆಯ ಹಕ್ಕು'ನ್ನು ಒದಗಿಸಲಾಗಿದೆ ?

● ಉತ್ತರ: 14ನೇ ವಿಧಿ.


745. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ?

ಉತ್ತರ: 370 ನೇ ವಿಧಿ.


746. ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?

● ಉತ್ತರ: 24ನೇ ವಿಧಿ.


747. ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ 'ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?

ಉತ್ತರ: 45 ನೇ ವಿಧಿ.


748. 'ಪ್ರಾಥಮಿಕ ಶಿಕ್ಷಣದ ಹಕ್ಕು' ಕುರಿತು ಸಂವಿಧಾನದ ಯಾವ ವಿಧಿಯು ತಿಳಿಸುತ್ತದೆ ?

● ಉತ್ತರ: 21 A ವಿಧಿ.


749. ಸಂವಿಧಾನದ ಯಾವ ವಿಧಿಯು 'ಹಣಕಾಸು ಆಯೋಗ' (Finance commission) ದ ಸ್ಥಾಪನೆಗೆ ಸಂಬಂಧಿಸಿದೆ ?

● ಉತ್ತರ: 280ನೇ ವಿಧಿ.


750. 'ಮೂಲಭೂತ ಕರ್ತವ್ಯಗಳ' ಕುರಿತು ಸಂವಿಧಾನದ ಯಾವ ವಿಧಿಯು ತಿಳಿಸುತ್ತದೆ ?

● ಉತ್ತರ: 51 A ವಿಧಿ.

.... ಮುಂದುವರಿಯುತ್ತದೆ.

No comments:

Post a Comment