☀ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮರಿನ್) ನೌಕೆ ಸ್ಕಾರ್ಪಿಯನ್:
(Indigenously built 'Scorpion Submarine')
━━━━━━━━━━━━━━━━━━━━━━━━━━━━━━━━━━━━━━━━━━━━━
♦. ಭಾರತೀಯ ನೌಕಾಪಡೆ
(Indian Navy)
●.ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದ ದೇಶದ ನೌಕಾಪಡೆಗೆ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮೆರಿನ್) ನೌಕೆ ಸ್ಕಾರ್ಪಿಯನ್ April , 2015 ರಂದು ಸೇರ್ಪಡೆಯಾಯಿತು.
●.ಫ್ರಾನ್ಸ್ ನ ಸಹಕಾರದಲ್ಲಿ ನಿರ್ಮಿತವಾದ ಈ ನೌಕೆಯು ಭಾರತೀಯ ನೌಕಪಡೆಯ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿದೆ.
●.ಈಗ ಭಾರತೀಯ ನೌಕಾಪಡೆಯಲ್ಲಿ ಸದ್ಯ 14 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆ, 10 ರಷ್ಯನ್ ಕಿಲೋ ಕ್ಲಾಸ್ ಮತ್ತು 4 ಜರ್ಮನ್ ಎಚ್‌ಡಿಡಬ್ಲ್ಯು ಕ್ಲಾಸ್ ಹಡಗುಗಳಿದ್ದವು ಅದಕ್ಕೆ ಸ್ಕಾರ್ಪಿಯನ್ ಹೊಸ ಸೇರ್ಪಡೆಯಾಗಿದೆ.
●.ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ ‘ಜಲಾಂತರ್ಗಾಮಿ 75 ಯೋಜನೆ’ಯ ಭಾಗವಾಗಿ ಫ್ರಾನ್ಸ್ ಸಹಯೋಗದಲ್ಲಿ ₹ 23,000ಕೋಟಿ ವೆಚ್ಚದಲ್ಲಿ ಒಟ್ಟು ಆರು ‘ಸ್ಕಾರ್ಪಿಯನ್’ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.
●.ಡೀಸೆಲ್– ವಿದ್ಯುತ್ ಚಾಲಿತ ‘ಸ್ಕಾರ್ಪಿಯನ್’ ಸರಣಿ ಜಲಾಂತರ್ಗಾಮಿಗಳಲ್ಲಿ ಇದು ಮೊದಲನೆಯದಾಗಿದ್ದು, 2018ರ ವೇಳೆಗೆ ಇನ್ನೂ ಐದು ಸ್ಕಾರ್ಪಿಯನ್ ಜಲಾಂತರ್ಗಾಮಿಗಳು ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗಲಿವೆ.
●.ಫ್ರಾನ್ಸ್‌ನ ಡಿಸಿಎನ್‌ಎಸ್ ಕಂಪೆನಿ ವಿನ್ಯಾಸಗೊಳಿಸಿರುವ ಸ್ಕಾರ್ಪಿಯನ್ ಜಲಾಂತರ್ಗಾಮಿಗಳು ಮುಂಬೈನ ಮಜಗಾಂವ್ ಬಂದರಿನಲ್ಲಿ ನಿರ್ಮಾಣವಾಗುತ್ತಿವೆ.
☀ಜಲಾಂತರ್ಗಾಮಿಯ ವೈಶಿಷ್ಟ್ಯಗಳು:
━━━━━━━━━━━━━━━━━━━━
●.ಪ್ರಾಯೋಗಿಕ ಪರೀಕ್ಷೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಸ್ಕಾರ್ಪಿಯನ್ ಸೆಪ್ಟೆಂಬರ್ 2016ರಲ್ಲಿ ಅಧಿಕೃತ ಕಾರ್ಯಾರಂಭ.
●. ₹ 5 ಸಾವಿರ ಕೋಟಿ ಬಜೆಟ್ ಕೊರತೆಯಿಂದ ಜಲಾಂತರ್ಗಾಮಿಗಳ ನಿರ್ಮಾಣ ವಿಳಂಬ.
●. ಸ್ಕಾರ್ಪಿಯನ್ ಸರಣಿಯ ಹೊರತಾಗಿ ಇನ್ನೂ ಆರು ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ₹ 50 ಸಾವಿರ ಕೋಟಿ ಟೆಂಡರ್ ಕರೆದ ಕೇಂದ್ರ.
●.ಸಾಗರದಲ್ಲಿ ಪರೀಕ್ಷೆ ನಡೆಸುತ್ತಿರುವ ಸ್ವದೇಶಿ ನಿರ್ಮಿತ ಅಣ್ವಸ್ತ್ರಸಜ್ಜಿತ ಐಎನ್‌ಎಸ್–ಅರಿಹಂತ ಅಧಿಕೃತವಾಗಿ 2016ಕ್ಕೆ ನೌಕಾಪಡೆಗೆ ಸೇರ್ಪಡೆ.
●.ಲಾರ್ಸೆನ್ ಆ್ಯಂಡ್ ಟರ್ಬೊ ಕಂಪೆನಿಗೆ ಇನ್ನೆರಡು ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಿಸುವ ಗುತ್ತಿಗೆ ನೀಡಲಾಗಿದೆ.
●.ನೌಕಾದಳದಲ್ಲಿ ಸದ್ಯ 30 ವರ್ಷದಷ್ಟು ಹಳೆಯ ರಷ್ಯಾ ನಿರ್ಮಿತ 10 ಮತ್ತು ಜರ್ಮನ್ ನಿರ್ಮಿತ 4 ಸಾಂಪ್ರದಾಯಿಕ ಡೀಸೆಲ್ – ವಿದ್ಯುತ್ ಚಾಲಿತ ಜಲಾಂತರ್ಗಾಮಿಗಳಿವೆ. ಈ ಪೈಕಿ ಅರ್ಧಮಾತ್ರ ಕಾರ್ಯನಿರ್ವಹಿಸುತ್ತಿವೆ.
●.ಪ್ರತಿ 9 ತಿಂಗಳಿಗೆ ಒಂದರಂತೆ ಒಟ್ಟು ಇನ್ನೂ ಐದು ಸ್ಕಾರ್ಪಿಯನ್ ಸರಣಿ ಜಲಾಂತರ್ಗಾಮಿಗಳು 2018ರವೇಳೆಗೆ ನೌಕಾಪಡೆಗೆ ಸೇರ್ಪಡೆಯಾಗಲಿವೆ.
●.ನೀರಿನ ಮೇಲೆ ಮತ್ತು ಒಳಗೆ ಹೇಗೆ ಬೇಕಾದರೂ ಸಂಚರಿಸಬಲ್ಲದು.
●.ಸರ್ವೇ ಮಾಡಲು, ಯುದ್ಧ ಉಪಕರಣಗಳನ್ನು ಹೊತ್ತೊಯ್ಯಲು ಬಳಸಿಕೊಳ್ಳಬಹುದು.
●.ಎಂಥ ವಾತಾವರಣದಲ್ಲಾದರೂ ಈ ನೌಕೆ ಸುಲಭವಾಗಿ ಸಂಚರಿಸಬಲ್ಲದು.
●.ನೀರಿನ ತಳಭಾಗದ ಸ್ಷಷ್ಟ ಚಿತ್ರಣವನ್ನು ಕ್ಷಣಮಾತ್ರದಲ್ಲಿ ರವಾನಿಸುವ ಸಾಮರ್ಥ್ಯ ಹೊಂದಿದೆ.
●.ಅತ್ಯಾಧುನಿಕ ಉಕ್ಕಿನಿಂದ ತಯಾರು ಮಾಡಲಾಗಿದ್ದು, ಎಂಥ ಆಘಾತವನ್ನಾದರೂ ಸುಲಭವಾಗಿ ತಡೆದುಕೊಳ್ಳಬಲ್ಲದು.

No comments:
Post a Comment