"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 9 May 2015

☀ಸ್ವದೇಶಿ ನಿರ್ಮಿತ ರಾಕೆಟ್ ಜಿಎಸ್‌ಎಲ್‌ವಿ-ಡಿ 5  (Geosynchronous Satellite Launch Vehicle -D 5— GSLV-D 5)

☀ಸ್ವದೇಶಿ ನಿರ್ಮಿತ ರಾಕೆಟ್ ಜಿ ಎಸ್‌ ಎಲ್‌ ವಿ-ಡಿ 5
(Geosynchronous Satellite Launch Vehicle -D 5— GSLV-D 5)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತೀಯ ಬಾಹ್ಯಾಕಾಶ ಯೋಜನೆ
Indian space programme


●.ಭಾರತ ಈಗಾಗಲೇ ಪಿ ಎಸ್ ಎಲ್ ವಿ ಶ್ರೇಣಿಯ ರಾಕೆಟ್ ಗಳ ಉಡಾವಣೆಯಲ್ಲಿ ಪರಿಣತಿ ಪಡೆದಿದ್ದು, ಸತತ 25 ಯಶಸ್ವಿ ಹಾರಾಟಗಳೊಂದಿಗೆ ಮಹತ್ವದ ರಾಕೆಟ್ ಉಡಾವಣೆಗಳಲ್ಲೊಂದಾದ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಚಾಲಿತ ಜಿಎಸ್‌ಎಲ್‌ವಿ-ಡಿ 5 ರಾಕೆಟ್ January 5, 2014 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿ ಸ್ಯಾಟ್ 14 ಸಂವಹನ ಉಪಗ್ರಹ ಹೊತ್ತು ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು.


☀ಜಿಎಸ್‌ಎಲ್‌ವಿ-ಡಿ 5 ರಾಕೆಟ್ ನ ವಿಶೇಷತೆಗಳು :
━━━━━━━━━━━━━━━━━━━━━━━━

●.ಉದ್ದ: 49.13 ಮೀಟರ್.

●.ಭಾರ: 414.75 ಟನ್.

●.1,982 ಕೆಜಿ ತೂಕದ ಜಿಸ್ಯಾಟ್-14 ಸಂಪರ್ಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಸೇರಿಸುವಲ್ಲಿ ಯಶಸ್ವಿಯಾಯಿತು.

●.ದೂರ ಶಿಕ್ಷಣ ಮತ್ತು ದೂರ ವೈದ್ಯಕೀಯದಲ್ಲಿ ಈ ಉಪಗ್ರಹ ಉಪಯುಕ್ತವಾಗಿದೆ.

●.ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಭಾರೀ ತೂಕದ ರಾಕೆಟ್ ನ ಹಾರಾಟ ವಿಫಲವಾಗಿತ್ತು ಹಾಗೂ ಒಂದು ಬಾರಿ ಹಾರಾಟವನ್ನು ಕೈಬಿಡಲಾಗಿತ್ತು. ಬೇರೆ ದೇಶಗಳಿಂದ ಇಂಜಿನ್ ಪೂರೈಕೆ ಸಹಾಯ ಸಿಗದ ಕಾರಣ 2010ರ ಎಪ್ರಿಲ್ ನಲ್ಲಿ ಇಸ್ರೋ ತನ್ನ ಮೊದಲ ಕ್ರಯೋಜೆನಿಕ್ ಇಂಜಿನ್ ನನ್ನು ಪರೀಕ್ಷೆಗೊಳಪಡಿಸಿತ್ತು. ಆದರೆ, ಕ್ರಯೋಜೆನಿಕ್ ಹಂತ ಉರಿದ ಬಳಿಕ ಒಂದು ಸೆಕೆಂಡ್ ನ ಮೊದಲೇ ಅದು ವಿಫಲವಾಯಿತು.

●.ಪರಿಷ್ಕೃತ ಜಿಎಸ್ ಎಲ್ ವಿ-ಡಿ5 ರಾಕೆಟನ್ನು 2013 ಆಗಸ್ಟ್‌ನಲ್ಲಿ ಉಡಾಯಿಸಬೇಕಾಗಿತ್ತು. ಆದರೆ ದ್ರವ ಇಂಧನ ಪಾತ್ರೆಯಲ್ಲಿ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನಿಗದಿತ ಹಾರಾಟಕ್ಕೆ ಎರಡು ಗಂಟೆಗಳ ಮೊದಲೇ ಯೋಜನೆಯನ್ನು ಕೈಬಿಡಲಾಗಿತ್ತು.

●.ಭಾರತ ರಶ್ಯದಿಂದ ಏಳು ಕ್ರಯೋಜೆನಿಕ್ ಇಂಜಿನ್ ಗಳನ್ನು ಪಡೆದುಕೊಂಡಿತ್ತು. ಅವುಗಳ ಪೈಕಿ ಇಸ್ರೋ ಆರನ್ನು ಬಳಸಿಕೊಂಡಿದೆ.ಬಳಿಕ ವಿದೇಶದಿಂದ ಆಮದು ಮಾಡಿಕೊಳ್ಳುವ ಇಂಜಿನ್ ಗಳು ಕೈಗೆಟುಕದೆ ಹೋದ ಹಿನ್ನೆಲೆಯಲ್ಲಿ ತನ್ನದೇ ಆದ ಕ್ರಯೋಜೆನಿಕ್ ಇಂಜಿನ್ ಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವನ್ನು ಭಾರತ ಮನಗಂಡಿತು.

●.ಅನ್ಯ ಗ್ರಹಗಳ ಅನ್ವೇಷಣೆ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಸೇರಿದಂತೆ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳು ಜಿಎಸ್ ಎಲ್ ವಿ ಯೋಜನೆಯ ಯಶಸ್ಸನ್ನು ನೆಚ್ಚಿಕೊಂಡಿತ್ತು.

●.ಈ ರಾಕೆಟ್ ಯಶಸ್ಸಿನ ಉಡಾವಣೆಯಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮತ್ತೊಂದು ಮೈಲಿಗಲ್ಲನ್ನು ದಾಟಿತು.

No comments:

Post a Comment