☀ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್
(Geosynchronous Satellite Launch Vehicle Mk III— GSLV Mark III)
━━━━━━━━━━━━━━━━━━━━━━━━━━━━━━━━━━━━━━━━━━━━━
♦.ಭಾರತೀಯ ಬಾಹ್ಯಾಕಾಶ ಯೋಜನೆ
Indian space programme
☀ಜಿಯೋ-ಸಿಂಕ್ರೊನಾಸ್ ಸೆಟಲೈಟ್ ಉಡಾವಣೆ ವಾಹನ ಮಾರ್ಕ್ 3:
(Geosynchronous Satellite Launch Vehicle Mk III)
●.ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಜಿಎಸ್‌ಎಲ್‌ವಿ ಮಾರ್ಕ್ -3 ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾ ದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ December 18, 2014 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
●.ಭಾರತ ಇದುವರೆಗೆ ಹಾರಿಬಿಟ್ಟಿರುವ ರಾಕೆಟ್‌ಗಳಲ್ಲಿ ಅತ್ಯಂತ ಭಾರವಾದದ್ದು. ಮೂರು ಹಂತಗಳಲ್ಲಿ ಜಿಯೋ-ಸಿಂಕ್ರೊನಾಸ್ ಸೆಟಲೈಟ್ ಉಡಾವಣೆ ವಾಹನ ಮಾರ್ಕ್ 3 ರಾಕೆಟ್ ಅನ್ನು ಯಶಸ್ವಿಯಾಗಿ ಗುರಿ ತಲುಪಿಸಿದೆ.
●.ಬಾಹ್ಯಾಕಾಶಕ್ಕೆ ತೆರಳಿ ನಾನಾ ರೀತಿಯ ಪ್ರಯೋಗ ನಡೆಸುವ ದಿಸೆಯಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದ ಮೊದಲ ಹೆಜ್ಜೆ ಯಶಸ್ವಿಯಾಗಿದೆ.
●.ಅಂತರಿಕ್ಷಕ್ಕೆ ಸರಕ್ಷಿತವಾಗಿ ಮನುಷ್ಯರನ್ನು ಕಳುಹಿಸಿ ವಾಪಸ್ ಕರೆತರುವ ನಿಟ್ಟಿನಲ್ಲಿ ಇಸ್ರೋ ಕೈಗೊಂಡಿದ್ದ ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಮತ್ತು ವ್ಯೋಮಕೋಶದ ಪರೀಕ್ಷಾರ್ಥ ಉಡ್ಡಯನ ಯಶಸ್ವಿಯಾಯಿತು.
●.ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನವನ್ನು ಕೈಗೂಡಿಸಿಕೊಂಡಿದ್ದು ಮೊದಲನೆಯದಾದರೆ, ಮರು ಪ್ರವೇಶ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದ್ದು ಎರಡನೆಯದು.
●.ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನದಲ್ಲಿ ಭಾರತ ಈಗಾಗಲೇ ಪರಿಣತಿ ಸಾಧಿಸಿದೆ. ಆದರೆ, ಭಾರೀ ತೂಕದ ಜಿಸ್ಯಾಟ್ ಶ್ರೇಣಿಯ ಉಪಗ್ರಹಗಳ ಉಡಾವಣೆಗೆ ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನ ಅಗತ್ಯ. ಇದಕ್ಕಾಗಿ ಭಾರತ ಇದುವರೆಗೂ ಫ್ರಾನ್ಸ್ ದೇಶವನ್ನು ನೆಚ್ಚಿಕೊಂಡಿತ್ತು. ಅಷ್ಟೇ ಅಲ್ಲ ಕನಸಿನ ಯೋಜನೆಗಳಾದ ಮಂಗಳ ಹಾಗೂ ಚಂದ್ರನ ಅಂಗಳದಲ್ಲಿ ಯಂತ್ರಮಾನವರು ಮತ್ತು ಜೀವಂತ ಮನುಷ್ಯರನ್ನು ಇಳಿಸುವುದಕ್ಕೂ ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನ ಅಗತ್ಯವಿತ್ತು. ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಯಶಸ್ವಿಯಾಗಿರುವುದು ಈ ದಿಸೆಯಲ್ಲಿ ಭಾರತದ ಕನಸನ್ನು ಚಿಗುರುವಂತೆ ಮಾಡಿದೆ.
☀ಮರು ಪ್ರವೇಶ ತಂತ್ರಜ್ಞಾನ
━━━━━━━━━━━━━━━━━
●.ಬಾಹ್ಯಾಕಾಶಕ್ಕೆ ಮನುಷ್ಯರು ಹಾಗೂ ಸರಕನ್ನು ಕಳಿಸುವುದಕ್ಕಿಂತಲೂ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವುದು ಹೆಚ್ಚಿನ ಸವಾಲಾಗಿದೆ.
●.ಯಾವುದೇ ವಸ್ತು ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಉಂಟಾಗುವ ಘರ್ಷಣೆಯಿಂದ ಸಾವಿರಾರು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸೃಷ್ಟಿಯಾಗುವುದರಿಂದ ಆ ವಸ್ತು ಉರಿದು ಭಸ್ಮವಾಗುತ್ತದೆ.
●.ಭೂ ವಾತಾವರಣ ಪ್ರವೇಶಿಸುವ ಉಲ್ಕೆಗಳು ಉರಿದು ಭಸ್ಮಗೊಳ್ಳುವುದು ಇದೇ ಕಾರಣಕ್ಕೆ. ವಾತಾವರಣ ಪ್ರವೇಶಿಸುವಾಗ ಉದ್ಭವಿಸುವ ಉಷ್ಣಾಂಶವನ್ನು ತಡೆದುಕೊಳ್ಳುವಂತಹ ತಂತ್ರಜ್ಞಾನ ಈಗ ಭಾರತದ ಕೈವಶವಾಗಿದೆ.
☀ಹೇಗಿದೆ ಸಿಬ್ಬಂದಿ ಕೋಶ ( 'ಸ್ಪೇಸ್ ಕ್ಯಾಪ್ಸೂಲ್') ?
━━━━━━━━━━━━━━━━━━━━━━━━━━━━
●.ಇಬ್ಬರು ಅಥವಾ ಮೂವರು ಗಗನಯಾತ್ರಿಗಳನ್ನು ಹೊತ್ತಯ್ಯಬಲ್ಲ ಸಿಬ್ಬಂದಿ ಕೋಶ ('ಸ್ಪೇಸ್ ಕ್ಯಾಪ್ಸೂಲ್') ಪುಟ್ಟ ಕೋಣೆಯಂತಿದ್ದು, 1,600 ಡಿಗ್ರಿ ಸೆಲ್ಸಿಯಸ್ ತಾಪವನ್ನು ಸಹಿಸಿಕೊಳ್ಳಬಲ್ಲದು.
●.ಭೂ ಮೇಲ್ಮೈ ಕಡೆಗೆ ಪ್ರಯಾಣ ಆರಂಭಿಸಿದಾಗ ಗುರತ್ವಾಕರ್ಷಣೆಗೆ ಒಳಪಡುವುದು. ಕರಾವಳಿ ರಕ್ಷಣಾ ಪಡೆಯ ಹಡಗುಗಳು ಈ ಕೋಶದ ಜಾಡು ಹಿಡಿಯಬಲ್ಲವು.
●.ಸದ್ಯ ಕೋಶವನ್ನು ಚೆನ್ನೈ ಸಮೀಪದ ಕಾಮರಾಜ್ ಬಂದರಿಗೆ ಕೊಂಡೊಯ್ಯಲಾಗಿದೆ. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಕೇರಳದ ತಿರುವನಂತಪುರದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗುವುದು.
☀ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ ನ ವಿಶೇಷತೆಗಳು :
━━━━━━━━━━━━━━━━━━━━━━━━━━━━━━━
●.630 ಟನ್ ತೂಕ ಮತ್ತು 43.43 ಮೀಟರ್ ಎತ್ತರ ಇರುವ ಈ ರಾಕೆಟ್‌ಗೆ ದ್ರವ ಹಾಗೂ ಘನ ಇಂಧನದ ಮೂಲಕ ಬಲ ತುಂಬಲಾಗುತ್ತದೆ.
●.3 ಹಂತಗಳ ರಾಕೆಟ್ :
1.ಮೊದಲ ಹಂತದ ನೋದಕ 200 ಟನ್
2.ಎರಡನೇ ಹಂತದಲ್ಲಿ ಎಲ್ 110 ಪುನರ್ಚಾಲಿತ ದ್ರವ ಇಂಧನದ ಹಂತ
3.ಮೂರನೆಯದು ಕ್ರಯೋಜಿನಿಕ್ ಎಂಜಿನ್ .
●.ಇದೇ ಮೊದಲ ಬಾರಿಗೆ ಇಸ್ರೋ 3 ಟನ್ಗೂ ಹೆಚ್ಚು ಬಾರದ ಪೇಲೋಡ್ (ಗಗನ ನೌಕೆ ಒಯ್ಯುವ ಉಪಕರಣ) ಹೊತ್ತೊಯ್ದಿದೆ.
●.ಇಂಥ ಎರಡು ರಾಕೆಟ್ಗಳು 2010ರಲ್ಲಿ ವಿಫಲಗೊಂಡ ನಂತರ, ನಾಲ್ಕು ವರ್ಷಗಳಲ್ಲಿ ಜಿಎಸ್ಎಲ್ವಿ ರಾಕೆಟ್ನ ಎರಡನೇ ಯೋಜನೆ ಇದು.
●.ದೇಶಿಯವಾಗಿ ನಿರ್ಮಿಸಿರುವ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನ, ಸಂವಹನ ಉಪಗ್ರಹಗಳನ್ನು ಉಡಾಯಿಸುವ ಮೂಲಕ ವಿದೇಶಿ ವಿನಿಮಯ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
☀ಜಿಎಸ್ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆಯ ಮಹತ್ವದ ಅಂಶಗಳು :
━━━━━━━━━━━━━━━━━━━━━━━━━━━━━━━━━━━━━━━━
●.ಈ ರಾಕೆಟ್ 4 ಟನ್‌ಗಳಷ್ಟು ಸಾಮರ್ಥ್ಯದ ಸಂಪರ್ಕ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲದು. ಈಗ ಅತ್ಯಂತ ಭಾರದ ಸಂಪರ್ಕ ಉಪಗ್ರಹಗಳನ್ನು ಸಾಗಿಸಲು ಭಾರತಕ್ಕೆ ವಿದೇಶಿ ವಿನಿಮಯದ ಅಗತ್ಯ ಇಲ್ಲ.
●.ಈ ರಾಕೆಟ್ ವಾತಾವರಣದಲ್ಲಿ ಪ್ರಯಾಣಿಸುವಾಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಸಾಧ್ಯ. ಇದರಲ್ಲಿ ಮೊದಲ ಎರಡು ಹಂತಗಳು ರಾಕೆಟ್‌ನ ಎಂಜಿನ್‌ಗಳೇ ಇವೆ. ಮೂರನೇ ಹಂತದಲ್ಲಿರುವ ಕ್ರಯೋಜೆನಿಕ್ ಇಂಜಿನ್ ನಿಷ್ಕ್ರಿಯವಾಗಿದೆ. ಇದನ್ನು ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಲಾಗುತ್ತದೆ.
●.ಜಿಎಸ್ಎಲ್‌ವಿ ಎಂಕೆ 3 ಒಂದು ನೂತನ ರಾಕೆಟ್ ತಂತ್ರಜ್ಞಾನ. ಮಾನವ ಸಹಿತ ಬಾಹ್ಯಾಕಾಶ ಪ್ರಯಾಣಕ್ಕೆ ಉತ್ತಮ ಮೈಲಿಗಲ್ಲಾಗಲಿದೆ.
●.ಪ್ರಸ್ತುತ ಈ ರಾಕೆಟ್‌ನಲ್ಲಿ ಅಳವಡಿಸಿರುವ ಸಿಬ್ಬಂದಿ ಘಟಕವೇ ಮುಖ್ಯ ಪ್ರಯಾಣಿಕ. ಕಪ್ ಕೇಕ್ ಆಕೃತಿಯ ಈ ಸಿಬ್ಬಂದಿ ಘಟಕದಲ್ಲಿ 2-3 ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು.
●.ಈ ಸಿಬ್ಬಂದಿ ಘಟಕವು ಪ್ರತ್ಯೇಕ ಇಂಜಿನ್ ಹೊಂದಿದ್ದು, ಭೂಮಿಯಿಂದ 127 ಕಿ.ಮೀ. ಎತ್ತರದಲ್ಲಿ ರಾಕೆಟ್‌ನಿಂದ ಪ್ರತ್ಯೇಕಗೊಂಡು ಹಾರಾಟ ನಡೆಸಲಿದೆ. ನಂತರ ಭೂಮಿಗೆ ವಾಪಸ್ ಬರುವಾಗ ಬೃಹತ್ ವೇಗದೊಂದಿಗೆ ವಾತಾವರಣವನ್ನು ಪ್ರವೇಶಿಸಲಿದೆ. ಇದರ ವೇಗ ಕಡಿಮೆ ಮಾಡಲು ಭಾರತದಲ್ಲಿರುವ ಅತ್ಯಂತ ದೊಡ್ಡ ಪ್ಯಾರಾಚೂಟ್ ಅಳವಡಿಸಲಾಗಿದೆ. ಈ ಸಿಬ್ಬಂದಿ ಘಟಕವನ್ನು ಅಂಡಮಾನ್ ದ್ವೀಪಗಳ ಸಮೀಪ ಇಳಿಸಲಾಗುವುದು.
●.ಭಾರತದಲ್ಲಿಯೇ ನಿರ್ಮಿಸಿದ ರಾಕೆಟ್ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿ ಇಸ್ರೋ ಪ್ರಸ್ತಾವನೆ ಇಟ್ಟಿದೆ. ಸರ್ಕಾರದಿಂದ ಒಪ್ಪಿಗೆ ಸಿಕ್ಕ 7ರಿಂದ8 ವರ್ಷಗಳಲ್ಲಿ ಗಗನಯಾತ್ರಿಗಳನ್ನು ಕಳುಹಿಸುವ ಕಾರ್ಯಕ್ರಮ ಆಯೋಜಿಸುವುದಾಗಿ ಇಸ್ರೋ ಹೇಳಿಕೊಂಡಿದೆ.
●.ಮಾನವ ಸಹಿತ ಗಗನಯಾತ್ರೆಗಾಗಿ ಇಸ್ರೋ 12,500 ಕೋಟಿ ರೂ.ಗಳಿಗಾಗಿ ಸರ್ಕಾರದ ಎದುರು ಬೇಡಿಕೆ ಇಟ್ಟಿದೆ. ಈ ಯೋಜನೆ ಯಶಸ್ವಿಯಾದರೆ ಬಾಹ್ಯಾಕಾಶದಲ್ಲಿ ಮಾನವ ಸಹಿತ ಪ್ರಯಾಣ ನಡೆಸಿದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
●.ಪ್ರಸ್ತುತ ಅಮೆರಿಕ, ರಷ್ಯಾ ಹಾಗೂ ಚೀನಾ ಮಾತ್ರ ಮಾನವ ಸಹಿತ ಗಗನಯಾತ್ರೆ ನಡೆಸಬಲ್ಲ ಸಾಮರ್ಥ್ಯ ಹೊಂದಿವೆ.
☀ಯೋಜನೆ ವೆಚ್ಚ :
━━━━━━━━━━
●.ಸಿಬ್ಬಂದಿ ಕೋಶದ ( 'ಕೇರ್' ಸ್ಪೇಸ್ ಕ್ಯಾಪ್ಸೂಲ್) ಮಾದರಿ ವೆಚ್ಚ : 15 ಕೋಟಿ ರೂ.
●.ಯೋಜನೆಯ ಒಟ್ಟು ವೆಚ್ಚ : 155 ಕೋಟಿ ರೂ.

No comments:
Post a Comment