"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 10 May 2015

☀ಸೂಪರ್‌ಸಾನಿಕ್ 'ಆಕಾಶ್‌' ಕ್ಷಿಪಣಿ: Akash ( Surface-to-Air Missile(SAM)) missile System

☀ಸೂಪರ್‌ಸಾನಿಕ್ 'ಆಕಾಶ್‌' ಕ್ಷಿಪಣಿ:
Akash ( Surface-to-Air Missile(SAM)) missile System
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತೀಯ ಬಾಹ್ಯಾಕಾಶ ಯೋಜನೆ
Indian space programme


●.ಶತ್ರು ಪಕ್ಷದವರು ನಡೆಸುವ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್ ಗಳು ಮತ್ತುಮಾನವ ರಹಿತ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಿ ಅವುಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯದ ನೆಲದಿಂದ ಆಗಸದೆಡೆಗೆ ಚಿಮ್ಮುವ ಭಾರತದ ಮಹತ್ವಾಕಾಂಕ್ಷೆಯ ಆಕಾಶ್ ಕ್ಷಿಪಣಿಯನ್ನು May 2015 ರಂದು ಭಾರತೀಯ ಸೇನಾಪಡೆಗೆ ಸೇರ್ಪಡೆ ಮಾಡಲಾಯಿತು.

●.ಆಕಾಶ್ ಕ್ಷಿಪಣಿಯನ್ನು ಬೆಂಗಳೂರಿನಲ್ಲಿರುವ ಭಾರತೀಯ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ಅಭಿವೃದ್ಧಿಪಡಿಸಿದ್ದು, ಹಲವು ಬಾರಿ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು.

●.ಈ ಸ್ವದೇಶಿ ನಿರ್ಮಿತ ಕ್ಷಿಪಣಿ ನಿರ್ಮಾಣಕ್ಕೆ 1983ರಲ್ಲಿ ಚಾಲನೆ ನೀಡಲಾಗಿತ್ತು. 32 ವರ್ಷಗಳ ನಂತರ ದೊಡ್ಡ ಯೋಜನೆಯೊಂದು ಸಾಕಾರಗೊಂಡಿದೆ. ಹಲವು ಪ್ರಯೋಗಗಳ ನಂತರ ಸ್ವದೇಶಿ ನಿರ್ಮಿತ ಆಕಾಶ್ ವಾಯು ರಕ್ಷಣಾ ಕ್ಷಿಪಣಿವ್ಯವಸ್ಥೆಯನ್ನು ಸೇನೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ದೇಶಕ್ಕೆ ಪ್ರಾಥಮಿಕ ಹಂತದ ವಾಯುರಕ್ಷಣೆಯ ಖಾತ್ರಿ ದೊರೆತಿದೆ.

●.ನೆಲದಿಂದ ಆಕಾಶಕ್ಕೆ ಪ್ರಯೋಗಿಸುವ 25 ಕಿ.ಮೀ.ವ್ಯಾಪ್ತಿಯ ಆಕಾಶ್ ಕ್ಷಿಪಣಿಯಿಂದ ಸಜ್ಜುಗೊಂಡಿರುವ ಈ ವಾಯು ರಕ್ಷಣಾ ವ್ಯವಸ್ಥೆ, ತಾನು ನೆಲೆಗೊಂಡಲ್ಲಿಂದ 25 ಕಿ.ಮೀ. ವ್ಯಾಪ್ತಿಯೊಳಗೆ ಪ್ರವೇಶಿಸುವ ವೈರಿ ದೇಶದ ಸಮರ ವಿಮಾನ, ಹೆಲಿಕಾಪ್ಟರ್, ಡ್ರೋನ್ ಮತ್ತು ಸಬ್‌ಸಾನಿಕ್ ಕ್ಷಿಪಣಿಗಳನ್ನು ಕ್ಷಣ ಮಾತ್ರದಲ್ಲಿ ನಾಶಪಡಿಸಬಲ್ಲದು.

●.ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಬಳಸಿರುವ ಶೇ.90ರಷ್ಟು ಭಾಗಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಎಂದು ಡಿಆರ್‌ಡಿಒ ಹೇಳಿದೆ.

●.1983ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಸುದೀರ್ಘ ಪ್ರಯತ್ನದ ಫಲವಾಗಿ ಇದು ಕೈಗೂಡಿದೆ.ದಶದಿಕ್ಕುಗಳಿಂದ ನಡೆಯುವ ದಾಳಿಗಳನ್ನು ಏಕಕಾಲಕ್ಕೆ ಹೊಡೆದುರುಳಿಸುವ ಸಾಮರ್ಥ್ಯ ಆಕಾಶ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಿದೆ.

●.ಆಕಾಶ್‌ಗೆ ಪಥ ನಿರ್ದೇಶಿಸುವ ರಾಡಾರ್‌ಗಳು 120 ಕಿ.ಮೀ.ನಷ್ಟು ವ್ಯಾಪ್ತಿಯಲ್ಲಿ ನಿಗಾವಹಿಸಿ, ವೈರಿ ದಾಳಿಯ ಮುನ್ನೆಚ್ಚರಿಕೆ ನೀಡಲಿವೆ. ವೈರಿ ವಿಮಾನಗಳು ತನ್ನ ವ್ಯಾಪ್ತಿಗೆ ನಿಲುಕಿದ ತಕ್ಷಣ ಗಗನಕ್ಕೆ ನಗೆಯುವ ಕ್ಷಿಪಣಿ ಕ್ಷಣಾರ್ಧದಲ್ಲಿ ಧ್ವಂಸಗೊಳಿಸುತ್ತದೆ.


☀ಆಕಾಶ್ ಕ್ಷಿಪಣಿ ವ್ಯವಸ್ಥೆ ವಿಶೇಷಗಳು:
━━━━━━━━━━━━━━━━━━━━━

●.ಆಕಾಶ್ ಕ್ಷಿಪಣಿಯ ಶೇ.90ರಷ್ಟು ಉಪಕರಣಗಳು ದೇಶಿಯವಾಗಿವೆ.

●.ವಿವಿಧ ರೀತಿಯ ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಮಾನವ ರಹಿತ ಯುದ್ಧ ವಿಮಾನಗಳನ್ನು (ಡ್ರೋಣ್)ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ.

●.ಇದು ಎಂತಹ ಹವಾಮಾನದಲ್ಲೂ ಕೆಲಸ ಮಾಡಬಲ್ಲ ಶಕ್ತಿ ಹೊಂದಿದೆ.

●.ಭಾರತದ ವಿವಿಧ ಗಡಿ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ರಾಡಾರ್ ವ್ಯವಸ್ಥೆಗಳ ಮಾಹಿತಿಯನ್ನು ಆಧರಿಸಿ ಈ ಆಕಾಶ್ ಕ್ಷಿಪಣಿ ಕಾರ್ಯನಿರ್ವಹಿಸಲಿದೆ.

●.25ಕಿ.ಮೀ. ವ್ಯಾಪ್ತಿಯಲ್ಲಿ 20 ಕಿ.ಮೀ. ಎತ್ತರಕ್ಕೆ ಹಾರಿ ವೈರಿ ವಿಮಾನಗಳನ್ನು ನೆಲಕ್ಕುರುಳಿಸುವ ಸಾಮರ್ಥ್ಯ ಹೊಂದಿದೆ.

●.ಸುಮಾರು 32 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸೇನೆಗೆ ಸೇರ್ಪಡೆ ಮಾಡಲಾಗಿದೆ.

●.ಎರಡು ಮೂರು ಟಾರ್ಗೆಟ್ ಗಳನ್ನು ಏಕ ಕಾಲಕ್ಕೆ ನಿಭಾಯಿಸಬಲ್ಲ ವ್ಯವಸ್ಥೆ ಹೊಂದಿದೆ.

●.ಸುಸಜ್ಜಿತ ರೆಡಾರ್ ವ್ಯವಸ್ಥೆ ಜೊತೆಗೆ ಆಕಾಶ್ ಕ್ಷಿಪಣಿ ನಿರ್ವಹಿಸುವುದರಿಂದ ನಿಖರ ಗುರಿ ತಲುಪುತ್ತದೆ.

●.ಡಿಆರ್ ಡಿಒ ನಿಂದ ವಿನ್ಯಾಸ ಹಾಗೂ ಅಭಿವೃದ್ಧಿ ಹೊಂದಿದ ವ್ಯವಸ್ಥೆ ಇದಾಗಿದೆ.

●.ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸೇನೆಯ ಅಗತ್ಯಕ್ಕೆ ತಕ್ಕಂತೆ ಆಕಾಶ್ ಕ್ಷಿಪಣಿ ರೂಪಿಸಿದೆ.

●.ಬಿಇಎಲ್, ಇಸಿಐಎಲ್, ಎಚ್ಎಎಲ್, ಟಾಟಾ ಪವರ್ ಎಸ್ ಇಡಿ ಹಾಗೂ ಎಲ್ ಅಂಡ್ ಟಿ ಕೂಡಾ ಕ್ಷಿಪಣಿ ನಿರ್ಮಾಣದಲ್ಲಿ ಕೈ ಜೋಡಿಸಿವೆ.

●.ಒಟ್ಟಾರೆ ಭಾರತದ 61 ಪಬ್ಲಿಕ್ ಹಾಗೂ ಪ್ರೈವೇಟ್ ವಲಯದ ಸಂಸ್ಥೆಗಳು ಆಕಾಶ್ ಕ್ಷಿಪಣಿ ವ್ಯವಸ್ಥೆ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ..

No comments:

Post a Comment