"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 31 May 2015

☀ ಸಾಮಾನ್ಯ ಜ್ಞಾನ (ಭಾಗ - 14) ☀ General Knowledge (Part-14): ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 14) ☀ General Knowledge (Part-14):
☆.. 2015 ರ ಪ್ರಚಲಿತ ಘಟನೆಗಳೊಂದಿಗೆ ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು-2015.
(Current Affairs-2015)


601) 'ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ' ದಲ್ಲಿ 70 ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದ ರಾಷ್ಟ್ರ ಯಾವುದು?
●.ಲಿಥುವಿನಿಯಾ.


602) 'ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ' ದಲ್ಲಿ 70 ರಾಷ್ಟ್ರಗಳ ಪೈಕಿ ಭಾರತ ಎಷ್ಟನೇ ಸ್ಥಾನ ಪಡೆದಿದೆ?
●.24ನೇ ಸ್ಥಾನ.


603) ಕರ್ನಾಟಕ ಜಾನಪದ ಪರಿಷತ್ತಿನ ಪ್ರಸ್ತುತ ಅಧ್ಯಕ್ಷರು ಯಾರು?
●.ಟಿ.ತಿಮ್ಮೇಗೌಡ.


604) 'ನಿತ್ಯೋತ್ಸವ'ದ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ರವರ ಆತ್ಮಕತೆಯ ಹೆಸರೇನು?
●.ನೆನಪುಗಳ ಹೊತ್ತಿಗೆ.


605) ಇತ್ತೀಚೆಗೆ ಜಾಂಬಿಯಾ ದೇಶದ ನೂತನ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುನರ್ಆಯ್ಕೆಯಾದವರು ಯಾರು?
●.ಪ್ಯಾಟ್ರಿಯಾಟಿಕ್‌ ಫ್ರಂಟ್‌ನ ಎಡ್ಗರ್‌ ಲುಂಗು.


606) ಪ್ರಸ್ತುತ ಅಮೆರಿಕ ಮೂಲದ ಹೆಸರಾಂತ ಒರಾಕಲ್‌ ಸಾಫ್ಟ್‌ವೇರ್‌ ಕಂಪೆನಿಯ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
●.ಥಾಮಸ್‌ ಕುರಿಯನ್‌ (48) .


607) ಪ್ರಸ್ತುತ ಕೇಂದ್ರ ಸರ್ಕಾರದ ನೂತನ ಕಂದಾಯ ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?
●.ರಾಜೀವ್‌ ಟಕ್ರು.


608)(ಕ್ರೆಡಲ್) ಎಂದರೆ ‘ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ’ ಎಂದರ್ಥ.


609) ಹಾಲಿನಲ್ಲಿರುವ ಪ್ರೋಟೀನ್ ಯಾವುದು?
●.ಕೇಸಿನ್.


610) ಪ್ರಸ್ತುತ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಯಾರು?
●.ಅರ್‌. ಗಾಂಧಿ.


611) ಇತ್ತೀಚೆಗೆ ಟಾಟಾ ಸಮೂಹ ಮತ್ತು ಸಿಂಗಪುರ ಏರ್‌ಲೈನ್ಸ್‌ ಜಂಟಿ ಸಹಭಾಗಿತ್ವದೊಂದಿಗೆ ಪ್ರಾರಂಭಿಸಲಾದ ವಿಮಾನಯಾನ ಸಂಸ್ಥೆ ಯಾವುದು?
●.‘ವಿಸ್ತಾರ’.


612) ಇತ್ತೀಚೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಒಟ್ಟು ಐದು ಸಾವಿರ (5,000) ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ‘ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ’ (ಕ್ರೆಡಲ್)ವು ಅಮೆರಿಕ ಮೂಲದ ಯಾವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿವೆ?
●.ಸನ್ ಎಡಿಸನ್ ಕಂಪೆನಿ.


613) ಗ್ರಹಗಳ ಚಲನೆಯನ್ನು ವಿವರಿಸುವ ಸಿದ್ಧಾಂತ ಯಾವುದು?
●.ಕೆಪ್ಲರ್ ಸಿದ್ದಾಂತ.


614) ‘ರಾಷ್ಟ್ರೀಯ ಓಟದ ದಿನ’ವನ್ನು ಯಾವಾಗ ಆಚರಿಸಲಾಗುತ್ತದೆ?
●.ಜೂನ್ 3.


615) ಇತ್ತೀಚೆಗೆ ನೋಟುಗಳ ಮುದ್ರಣಕ್ಕೆ ಬಳಸುವ ಕಾಗದ ತಯಾರಿಸುವ ಘಟಕವನ್ನು ಕೇಂದ್ರ ಹಣಕಾಸು ಸಚಿವರು ಯಾವ ಸ್ಥಳದಲ್ಲಿ ಉದ್ಘಾಟಿಸಿದರು.
●.ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ.


616) ಇತ್ತೀಚೆಗೆ ಯಾವ ದೇಶವು 'ವಿಶ್ವ ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ-2015' ದಲ್ಲಿ ಅಗ್ರಸ್ಥಾನ ಪಡೆಯಿತು ?
●.ಲಿಥುವೇನಿಯಾ .


617) ಪಾರ್ಲಿಮೆಂಟಿಗೆ ಸಂವಿಧಾನ ತಿದ್ದುಪಡಿ ಮಾಡಲು ಅಧಿಕಾರವಿದೆ. ಇದನ್ನು ಸಂವಿಧಾನದ ಯಾವ ವಿಧಿಯಲ್ಲಿ ಹೇಳಿದೆ?
●.360 ನೇ ವಿಧಿ.


618) ಸದ್ಯ ವಿಶ್ವದಲ್ಲಿ ಸುಲಭದಲ್ಲಿ ವಾಣಿಜ್ಯ ಉದ್ಯಮ ಚಟುವಟಿಕೆ ನಡೆಸಲು ಅವಕಾಶಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದಿದೆ?
●.142 ಸ್ಥಾನ.


619) ಫ್ರಾನ್ಸ್‌ನ ಕಾನ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ‘ತೀರ್ಪುಗಾರರ ಮೆಚ್ಚುಗೆ’ ಮತ್ತು ‘ಭರವಸೆಯ ಭವಿಷ್ಯ’ ಪ್ರಶಸ್ತಿಗಳನ್ನು ಪಡೆದುಕೊಂಡ ಭಾರತೀಯ ಚಲನಚಿತ್ರ ಯಾವುದು?
●.ನೀರಜ್‌ ಘವಾನ್‌ ನಿರ್ದೇಶನದ ಹಿಂದಿ ಚಲನಚಿತ್ರ ‘ಮಸಾನ್‌’.


620) ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿರುವ ಸಂಸ್ಥೆ ಯಾವುದು?
●.ಮಹಾಬೋಧಿ ಸೊಸೈಟಿ, ಬೆಂಗಳೂರು.


621) ಇತ್ತೀಚಿನ ವಿಶ್ವಸಂಸ್ಥೆಯ ಹಸಿವಿಗೆ ಸಂಬಂಧಿಸಿದ ಆಹಾರ ಅಭದ್ರತೆಯ ಸ್ಥಿತಿಯ ವಾರ್ಷಿಕ ವರದಿಯ ಪ್ರಕಾರ, ಯಾವ ದೇಶವು ಅತಿ ಹೆಚ್ಚು ಹಸಿವಿನಿಂದ ಬಳಲುವ ಜನರನ್ನು ಹೊಂದಿದೆ?
●.ಭಾರತ (11.64 ಕೋಟಿ ಜನರು), ನಂತರದ ಸ್ಥಾನದಲ್ಲಿ ಚೀನಾ ಇದೆ.


622) ಇತ್ತೀಚೆಗೆ ದ್ವಿತೀಯ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಸ್ಫೋಟಗೊಳ್ಳದೆ ಉಳಿದಿದ್ದ 50 ಕಿಲೋ ತೂಕದ ಸಜೀವ ಬಾಂಬ್‌ ನ್ನು ಎಲ್ಲಿ ಪತ್ತೆಮಾಡಲಾಗಿದೆ?
●.ಲಂಡನ್‌ನ ರಾಷ್ಟ್ರೀಯ ಫುಟ್ಬಾಲ್‌ ಕ್ರೀಡಾಂಗಣದಲ್ಲಿ .


623) ಇತ್ತೀಚೆಗೆ ಸೇನಾ ಗೌರವದೊಂದಿಗೆ ನೈಜೀರಿಯಾದ ನೂತನ ಅಧ್ಯಕ್ಷರಾಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?
●.ಮುಹಮ್ಮದ್ ‌ಬುಹಾರಿ.


624) ಇತ್ತೀಚೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಯಿತು. ಅವರು ಯಾರು?
●.ಭಯೋತ್ಪಾದನೆ ನಿಗ್ರಹ ಕ್ಷೇತ್ರದಲ್ಲಿ ತಜ್ಞರಾಗಿರುವ ಪ್ರೊ. ಲೂಸಿ ರಿಚರ್ಡ್ಸ್‌ಸನ್.


625) ಇತ್ತೀಚೆಗೆ ತಥಾಗತ ರಾಯ್ ರವರು ಯಾವ ರಾಜ್ಯದ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದರು?
●.ತ್ರಿಪುರಾ.


626) ಪ್ರಸ್ತುತ ಕಾನೂನು ಆಯೋಗದ ಅಧ್ಯಕ್ಷ ಯಾರು?
●.ನ್ಯಾಯಮೂರ್ತಿ ಎ.ಪಿ. ಶಾ.


627) ಜಗತ್ತಿನ ಅತೀ ಎತ್ತರದ ರಣಾಂಗಣ ಯಾವುದು?
●.ಸಿಯಾಚಿನ್ ನೀರ್ಗಲ್ಲ ಪ್ರದೇಶ.


628) ರಾಜ್ಯದಲ್ಲಿ ಸದ್ಯ ಪ್ರತಿದಿನ ಏಷ್ಟು ಮೆಗಾವಾಟ್ ವಿದ್ಯುತ್‌ ಕೊರತೆ ಇದೆ?
●.1,400 ಮೆಗಾವಾಟ್.


629) ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ ?
●.ಸೋಮವಾರಪೇಟೆ ತಾಲೂಕು ಹುದುಗೂರಿನ ಬಳಿ.


630) ಗಾಂಧಿ 1893ರ ಏಪ್ರಿಲ್ ತಿಂಗಳಲ್ಲಿ ಯಾರ ಆಹ್ವಾನಕ್ಕೆ ಓಗೊಟ್ಟು ದಕ್ಷಿಣ ಆಫ್ರಿಕಾಕ್ಕೆ ಹೊರಟುಹೋದರು?
●.ದಾದಾ ಅಬ್ದುಲ್ಲಾ ಅಂಡ್ ಕಂಪೆನಿ.

Monday, 11 May 2015

☀ಅಗ್ನಿ-5 ಕ್ಷಿಪಣಿ: (ಖಂಡಾಂತರ ಕ್ಷಿಪಣಿ)  (AGNI -5: Inter-Continental Ballistic Missile (ICBM))

☀ಅಗ್ನಿ-5 ಕ್ಷಿಪಣಿ: (ಖಂಡಾಂತರ ಕ್ಷಿಪಣಿ)
(AGNI -5: Inter-Continental Ballistic Missile (ICBM))
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತದ ಕ್ಷಿಪಣಿಗಳು
(Indian Ballistic Missiles)

♦. ಅಗ್ನಿ ಕ್ಷಿಪಣಿಗಳು
(AGNI Ballistic Missiles)


●.ಇದು ಖಂಡಾಂತರ ಕ್ಷಿಪಣಿ ಯಾಗಿದ್ದು, ಡಿ ಆರ್ ಡಿ ಓ ಇದನ್ನು ಅಭಿವೃದ್ಧಿಗೊಳಿಸಿದೆ.

●.ಅಗ್ನಿ-5 ಕ್ಷಿಪಣಿ ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಐದನೆಯದು .

●.2012ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು. ಬಳಿಕ 2013ರಲ್ಲಿ ಎರಡನೇ ಬಾರಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿತ್ತು. ಎರಡೂ ಬಾರಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿತ್ತು. ಇನ್ನೂ ಎರಡು ಬಾರಿ ಅಗ್ನಿ-5ರ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದ್ದು, ಬಳಿಕ ಸೇನೆಗೆ ಸೇರ್ಪಡೆಯಾಗಲಿದೆ.

●.ಅನಿಲ ಒತ್ತಡದಿಂದ ಕ್ಷಿಪಣಿಯನ್ನು ಆಕಾಶಕ್ಕೆ ಚುಮ್ಮುವ ನಳಿಕೆಯಾಧರಿತ ಸಂಚಾರಿ ಉಡಾವಣೆ ವ್ಯವಸ್ಥೆ ಈ ಕ್ಷಿಪಣಿಯ ಇನ್ನೊಂದು ವಿಶೇಷ.

●.ಕ್ಷಿಪಣಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರಹಸ್ಯವಾಗಿ ಸಾಗಿಸಲು ಮತ್ತು ವೈರಿ ದೇಶಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಳಿಕೆಯಾದರಿತ ಉಡ್ಡಯನ ವೇದಿಕೆ ಸಹಾಯಕವಾಗಿದೆ.

●.ಸಂಚಾರಿ ಉಡ್ಡಯನ ವೇದಿಕೆಯಿಂದ ಕ್ಷಿಪಣಿಯ ದಾಳಿ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿದೆ.

●.ರಸ್ತೆ ಅಥವಾ ರೈಲು ಮಾರ್ಗಗಳಲ್ಲಿ ಕ್ಷಿಪಣಿಯನ್ನು ಗಡಿಗೆ ಸಾಗಿಸಿ ಅಲ್ಲಿಂದ ಉಡಾವಣೆ ಮಾಡುವ ಮೂಲಕ ದಾಳಿ ವ್ಯಾಪ್ತಿಯನ್ನು ಹಿಗ್ಗಿಸಬಹುದು.

●.ಇದರ ಸರಿಯಾದ ವ್ಯಾಪ್ತಿ ವರ್ಗೀಕರಿಸಲಾಗಿದೆ.ಅದರೆ ಭಾರತ ಸರ್ಕಾರ ಇದರ ವ್ಯಾಪ್ತಿ 5000-5800 ಕಿ.ಮೀ ಯೆಂದು ಘೋಷಿಸಲಾಗಿದೆ.

●.ಈ ಕ್ಷಿಪಣಿ 10 ಅಣ್ವಸ್ತ್ರ ಸಿಡಿತೆಲೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು ಐದೂವರೆ ಸಾವಿರ ಕಿಲೋ ಮೀಟರ್ ವ್ಯಾಪ್ತಿಯ ಗುರಿಯನ್ನು ತಲುಪುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

●.ಅಗ್ನಿ-5 ಅಗ್ನಿ-3ರ ಮತ್ತೊಂದು ಮಾದರಿಯಾಗಿದೆ.


☀ಅಗ್ನಿ–5 ವಿಶೇಷತೆಗಳು :
━━━━━━━━━━━━━━━━

●.ದೂರಗಾಮಿ ಖಂಡಾಂತರ ಕ್ಷಿಪಣಿ

●.ದೇಶಿಯವಾಗಿ ನಿರ್ಮಿಸಿದ 50 ಟನ್ ಭಾರದ ಅಗ್ನಿ-5 ಕ್ಷಿಪಣಿ

●.8000 ಕಿ.ಮೀ. ಸಾಮಥ್ರ್ಯ ಹೊಂದಿರುವ ಕ್ಷಿಪಣಿ

●.56 ಅಡಿ 17 ಮೀಟರ್ ಎತ್ತರ

●.2 ಮೀಟರ್ ಅಗಲವಿರುವ ಕ್ಷಿಪಣಿ

●.5000 ಕಿ.ಮೀ. ಗಿಂತಲೂ ಅಧಿಕ ದೂರ ಕ್ರಮಿಸಬಲ್ಲದು

●.ಪರಮಾಣು ಸಿಡಿತಲೆಗಳನ್ನ ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ

●.1,000 ಕೆ.ಜಿ.ಗೂ ಅಧಿಕ ತೂಕದ ಅಣು ಶಸ್ತ್ರಾಸ್ತ್ರಗಳನ್ನ ಹೊತ್ತೊಯ್ಯುವ ಸಾಮರ್ಥ್ಯ

●.ರಕ್ಷಣಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ ಹಲವು ಅವಕಾಶಗಳ ಸೃಷ್ಟಿ ಮಾಡಿದ ಕ್ಷಿಪಣಿ.

●.ಶತ್ರು ರಾಷ್ಟ್ರ ಭಾರತಕ್ಕೆ ಉಪಗ್ರಹ ಸಂಕೇತ ನೀಡಲು ನಿರಾಕರಿಸಿದರೆ ತುರ್ತು ಸನ್ನಿವೇಶದಲ್ಲಿ ಇದನ್ನು  ಕೆಳಸ್ತರದ ಕಕ್ಷೆಗೆ ಉಡಾಯಿಸಬಹುದು.

●.ಬಲಿಷ್ಠ ಸಿಡಿತಲೆ ಹೊಂದಿದ ಕ್ಷಿಪಣಿಗಳನ್ನ ಹೊಂದಿರುವ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಭಾರತ ಸೇರ್ಪಡೆ.

●.ಈ ಕ್ಷಿಪಣಿ ಚೀನಾ ಹಾಗೂ ಐರೋಪ್ಯ ರಾಷ್ಟ್ರಗಳ ಮೂಲೆಮೂಲೆಯನ್ನು ತಲುಪಬಲ್ಲದು.

●.ಈಕ್ಷಿಪಣಿಯ ವಿಶೇಷವೆಂದರೆ ಎಲ್ಲಾ ಸುಧಾರಿತ ಕ್ಷಿಪಣಿ ತಂತ್ರಜ್ಞಾನವನ್ನೂ ಇದರಲ್ಲಿ ಅಡಕಗೊಳಿಸಲಾಗಿದೆ.

●.ಅಗ್ನಿ ಸರಣಿಯ ನಾಲ್ಕು ಮಾದರಿ ಕ್ಷಿಪಣಿಗಳನ್ನು ಭಾರತೀಯ ಸಶಸ್ತ್ರಪಡೆಗಳು ಈಗಾಗಲೇ ಹೊಂದಿವೆ. ಖಂಡಾಂತರ ಮಾದರಿಯ ಈ ಕ್ಷಿಪಣಿಯನ್ನು ಇನ್ನಷ್ಟು ಪರೀಕ್ಷೆಗಳ ಬಳಿಕ ಸೇನೆಗೆ ನಿಯೋಜಿಸಲಾಗುವುದು.

☀ ಅಗ್ನಿ-4 ಕ್ಷಿಪಣಿ (ಖಂಡಾಂತರ ಕ್ಷಿಪಣಿ)  (AGNI-4 Inter-Continental Ballistic Missile)

☀ ಅಗ್ನಿ-4 ಕ್ಷಿಪಣಿ (ಖಂಡಾಂತರ ಕ್ಷಿಪಣಿ)
(AGNI-4 Inter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತದ ಕ್ಷಿಪಣಿಗಳು
(Indian Ballistic Missiles)

♦. ಅಗ್ನಿ ಕ್ಷಿಪಣಿಗಳು
(AGNI Ballistic Missiles)


●.ಅಗ್ನಿ-4 ಕ್ಷಿಪಣಿ ಹೆಚ್ಚಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಣುಶಕ್ತಿ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ಇದು ಹೊಸ ತಲೆಮಾರಿನ ಕ್ಷಿಪಣಿಯಾಗಿದೆ.

●.ಇದು ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ನಾಲ್ಕನೇಯದು.

●.ಅಗ್ನಿ-4 ಕ್ಷಿಪಣಿ, ಮಿಲಿಟರಿ ಪ್ರದೇಶದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.

●.4000 ಕಿ.ಮೀ. ವ್ಯಾಪ್ತಿಯ ಶತೃ ನೆಲೆಗಳ ಮೇಲೆ ದಾಳಿ ನಡೆಸಬಲ್ಲ ಕ್ಷಿಪಣಿ ಇದಾಗಿದೆ.

●.ಉಡಾವಣೆಯ ನಂತರ ಡಿಜಿಟಲ್ ನಿಯಂತ್ರಣ ವ್ಯವಸ್ಥೆ ಮೂಲಕ ಅಗ್ನಿ-4ಕ್ಷಿಪಣಿಯನ್ನು ನಿಯಂತ್ರಣಗೊಳಿಸಲಾಗುತ್ತದೆ.

●.ಅಗ್ನಿ-4, ಡಿ.ಆರ್.ಡಿ.ಒ ದಿಂದ ನಿರ್ಮಿತವಾಗಿದೆ.

●.ಇದಕ್ಕೆ 'ಅಗ್ನಿ-2 ಪ್ರೈಂ' ಯೆಂದು ಕರೆಯಲಾಗಿತ್ತು.

●.ಇದನ್ನು 19 ಸೆಪ್ಟೆಂಬರ್ 2012 ರಂದು ವೀಲರ್ ದ್ವೀಪದಲ್ಲಿ ಟೆಸ್ಟ್ ಮಾಡಲಾಯಿತು.


☀ ಅಗ್ನಿ-4 ಕ್ಷಿಪಣಿಯ ವೈಶಿಷ್ಟ್ಯಗಳು:
━━━━━━━━━━━━━━━━━━━━

●.ಉದ್ದ :20 ಮೀಟರ್

●.ಭಾರ : 17 ಟನ್

●.ಇದರ ಒಟ್ಟು ವ್ಯಾಪ್ತಿ : 4,000 ಕಿಮೀ

●.ಘನ ಇಂಧನ ಬಳಕೆ

●.1500 ಕೆ.ಜಿ ತೂಕದ ಅಣ್ವಸ್ತ್ರ ಕೊಂಡೊಯ್ಯಬಲ್ಲ ಸಾಮರ್ಥ್ಯ

●.ಅತ್ಯಾಧುನಿಕ ಸಮರ ತಂತ್ರಜ್ಞಾನ ಹಾಗೂ ಐದನೇ ತಲೆಮಾರಿನ ಕಂಪ್ಯೂಟರನ್ನು ಈ ಕ್ಷಿಪಣಿಗೆ ಅಳವಡಿಸಲಾಗಿದೆ.

●.ಇದು ಪಾಕಿಸ್ತಾನದ ಯಾವುದೇ ಭಾಗವನ್ನಾದರೂ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.

●.ಅಗ್ನಿ-4 ಗೆ 3000° ಸೆಲ್ಸಿಯಸ್ ರಷ್ಟು ತಾಪಮಾನ ತಡೆದುಕೊಳ್ಳುವ ಸಾಮರ್ಥ್ಯವಿದೆ.

●.ಇದಕ್ಕೆ ಭಾರತದಲ್ಲಿ ತಯಾರಿಸಿದ ಲೆಸರ್ ಗೈರೊ ಮತ್ತು ಕ್ಷಿಪಣಿ ಮೊಟಾರ್ ಇದೆ.

☀ಅಗ್ನಿ-3 ಕ್ಷಿಪಣಿ (ಖಂಡಾಂತರ ಬ್ಯಾಲ್ಲಿಸ್ಟಿಕ್ ಕ್ಷಿಪಣಿ) : (AGNI-3 Inter-Continental Ballistic Missile)

☀ಅಗ್ನಿ-3 ಕ್ಷಿಪಣಿ (ಖಂಡಾಂತರ ಬ್ಯಾಲ್ಲಿಸ್ಟಿಕ್ ಕ್ಷಿಪಣಿ) :
(AGNI-3 Inter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತದ ಕ್ಷಿಪಣಿಗಳು
(Indian Ballistic Missiles)

♦. ಅಗ್ನಿ ಕ್ಷಿಪಣಿಗಳು
(AGNI Ballistic Missiles)


●.ನೆಲದಿಂದ ನೆಲಕ್ಕೆಚಿಮ್ಮುವ ಮೂರು ಸಾವಿರದಿಂದ ಐದು ಸಾವಿರ ಕಿ.ಮೀ ವ್ಯಾಪ್ತಿಗೆ ಅಪ್ಪಳಿಸುವ ಪರಮಾಣು ಸಾಮರ್ಥ್ಯದ ಅಗ್ನಿ-3 ಖಂಡಾಂತರ ಕ್ಷಿಪಣಿಯು ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಮೂರನೆಯದು.

 ●.ಅಗ್ನಿ-3 ಎರಡು ಹಂತಗಳಲ್ಲಿ ಹಾರುತ್ತದೆ.

●.ಇದಕ್ಕೆ ಘನ ಇಂಧನವನ್ನು ಬಳಸಲಾಗುತ್ತದೆ.

●.ಅಗ್ನಿ-3ನ್ನು ಮೊದಲ ಬಾರಿಗೆ 2006ರ ಜು.9ರಂದು ಪರೀಕ್ಷೆ ನಡೆಸಲಾಗಿತ್ತು. ಆಗ ಅದು ನಿರೀಕ್ಷಿತ ಫಲ ನೀಡಿರಲಿಲ್ಲ. 3,000 ಕಿಮೀ ವ್ಯಾಪ್ತಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದ್ದರೂ ಕಡಿಮೆ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು.

●.ಅಗ್ನಿ-3 ಕ್ಷಿಪಣಿಯನ್ನು ಒರಿಸ್ಸಾದ ಭುವನೇಶ್ವರದಲ್ಲಿ ಉಡಾವಣೆ ಮಾಡಲಾಯಿತು. ಅದರೆ 12 ಏಪ್ರಿಲ್ 2007 ರಲ್ಲಿ ವೀಲರ್ ದ್ವಿಪದಲ್ಲಿ ಪುನಃ ಟೆಸ್ಟ್ ಮಾಡಿದಾಗ ಯಶಸ್ವಿಯಯಿತು.

●.ಅಗ್ನಿ-3 ರ ವೃತ್ತಾಕಾರದ ದೋಷ ಸಂಭಾವ್ಯ ಬರಿ 40 ಮೀಟರ್. ಈ ಕಾರಣದಿಂದಾಗಿ ಅಗ್ನಿ-3ರನ್ನು ಅತ್ಯಂತ ನಿಖರವಾದ ಕ್ಷಿಪಣಿ ಎನ್ನಬಹುದು.


☀ಅಗ್ನಿ-3 ವಿಶೇಷತೆಗಳು:
━━━━━━━━━━━━━━━

●.ಉದ್ದ : 17 ಮೀಟರ್,

●.ವ್ಯಾಸ : 2 ಮೀಟರ್

●.ಒಟ್ಟು ತೂಕ : 50 ಟನ್

●.ದೂರಗಾಮಿ ಖಂಡಾಂತರ ಕ್ಷಿಪಣಿ

●.ಅಗ್ನಿ-3 ಎರಡು ಹಂತದ ಘನ ಇಂಧನ ಆಧಾರಿತ ವ್ಯವಸ್ಥೆಹೊಂದಿದೆ.

●.ಭಾರತ ಸ್ವದೇಶಿ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿರುವ ಈ ಕ್ಷಿಪಣಿಯು 1.5 ಟನ್ ತೂಕದವರೆಗೂ ಯುದ್ಧ ಅಣು ಅಸ್ತ್ರಗಳನ್ನು ಒಯ್ಯುವ ಸಾಮರ್ಥ್ಯ ಪಡೆದಿದ್ದು, ಭಾರತದಲ್ಲಿ ಯಾವುದೇ ಪ್ರದೇಶದಿಂದ ಉಡಾಯಿಸಲಬಲ್ಲ ಮೊಬೈಲ್ ತಂತ್ರಜ್ನಾನವನ್ನು ಹೊಂದಿರುವುದು ಈಕ್ಷಿಪಣಿಯ ಮತ್ತೊಂದು ವೈಶಿಷ್ಟ್ಯವಾಗಿದೆ.

☀ಅಗ್ನಿ 2 ಕ್ಷಿಪಣಿ : (AGNI-2 Inter-Continental Ballistic Missile)

☀ಅಗ್ನಿ 2 ಕ್ಷಿಪಣಿ :
(AGNI-2 Inter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತದ ಕ್ಷಿಪಣಿಗಳು
(Indian Ballistic Missiles)

♦. ಅಗ್ನಿ ಕ್ಷಿಪಣಿಗಳು
(AGNI Ballistic Missiles)


●.ಭಾರತದ ಸೈನಿಕ ಶಕ್ತಿ ಹೆಚ್ಚಳಕ್ಕೆ ಪ್ರಮುಖ ಕೊಡುಗೆ ನೀಡುವಲ್ಲಿ ಹಾಗೂ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲುವಲ್ಲಿ ಇಂಥ ಅಗ್ನಿ ಕ್ಷಿಪಣಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

●.ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಎರಡನೆಯದು.

●.ಖಂಡಾಂತರಕ್ಕಿಂತ ಕಡಿಮೆ ದೂರದ ಮಧ್ಯಮ ಶ್ರೇಣಿಯ ಸಿಡಿತಲೆಗಳನ್ನು ಹೊತ್ತೊಯ್ಯುವ ಅಗ್ನಿ-2 ಕ್ಷಿಪಣಿ ಈಗಾಗಲೇ ಸೇವೆಗೆ ನಿಯೋಜನೆಗೊಂಡಿದೆ.

●.ಇದು 2000-2500 ಕಿ.ಮೀ ಹಾರುತ್ತದೆ.

●.ಇದು ಘನ ಇಂಧನವನ್ನು ಬಳಸುತ್ತದೆ.

●.ಎರಡು ಹಂತದ ಈ ಸುಸಜ್ಜಿತ ಕ್ಷಿಪಣಿ ರಾಕೆಟ್ ನೋದಕ ವ್ಯವಸ್ಥೆಯನ್ನು ಒಳಗೊಂಡಿದೆ.

●.ಅಡ್ವಾನ್ಸಡ್ ಸಿಸ್ಟಮ್ ಲ್ಯಾಬೋರೇಟರಿ ಕ್ಷಿಪಣಿ ಅಭಿವೃದ್ಧಿ ಪಡಿಸಿದ್ದು, ಹೈದರಾಬಾದ್ ನ ಭಾರತ್ ಡೈನಮಿಕ್ಸ್ ಲಿ. ಸಂಯೋಜನೆ ಮಾಡಿದೆ.

●.ನೆಲದಿಂದ ನೆಲಕ್ಕೆ ಚಿಮ್ಮುವ ಅಗ್ನಿ-2 ಕ್ಷಿಪಣಿಯನ್ನು 9 ಆಗಸ್ಟ್ 2012 ರಲ್ಲಿ ಒಡಿಶಾ ಪರೀಕ್ಷಾ ನೆಲದ ವ್ಯಾಪ್ತಿಯಲ್ಲಿ ಟೆಸ್ಟ್ ಮಾಡಲಾಯಿತು.


☀ಅಗ್ನಿ-2 ರ ವಿಶೇಷತೆಗಳು :
━━━━━━━━━━━━━━

●.ಉದ್ದ: 20 ಮೀಟರ್

●.ತೂಕ: 18 ಟನ್

●.ಇದರ ವ್ಯಾಸ : 1 ಮೀಟರ್

●.ಹಾರಾಟ ಸಾಮರ್ಥ್ಯ : 2000-2500 ಕಿ.ಮೀ ದೂರದ ಗುರಿ ತಲುಪಬಲ್ಲದು.

●.1000 ಕೆ.ಜಿಯ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

●.ಸುಮಾರು 2 ಸಾವಿರ ಕಿ.ಮೀ. ದೂರದ ಗುರಿ ತಲುಪಬಲ್ಲ ಪರಮಾಣು ಸಾಮರ್ಥ್ಯದ, ಖಂಡಾಂತರ ಕ್ಷಿಪಣಿಯಾಗಿರುವ ಅಗ್ನಿ-2 ಕ್ಷಿಪಣಿಗೆ ಅತ್ಯಾಧುನಿಕ advanced high-accuracy navigation system ಅನ್ನು ಅಳವಡಿಸಲಾಗಿದ್ದು, ಕ್ಷಿಪಣಿಯ ನಿಖರ ಹಾದಿಯನ್ನು ಈ ವ್ಯವಸ್ಥೆಯ ಮೂಲಕವಾಗಿ ನಿಯಂತ್ರಿಸಬಹುದಾಗಿದೆ.

☀ಅಗ್ನಿ -1 ಕ್ಷಿಪಣಿ  (AGNI-ⅠInter-Continental Ballistic Missile)

☀ಅಗ್ನಿ -1 ಕ್ಷಿಪಣಿ
(AGNI-ⅠInter-Continental Ballistic Missile)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತದ ಕ್ಷಿಪಣಿಗಳು
(Indian Ballistic Missiles)


●.ಅಗ್ನಿ-1ಖಂಡಾಂತರ ಕ್ಷಿಪಣಿಯಾಗಿದ್ದು, ಅಗ್ನಿಕ್ಷಿಪಣಿಗಳ ಸರಣಿಯಲ್ಲಿ ಮೊದಲನೆಯದು.

●.ಅಗ್ನಿ-1 ಎರಡು ಹಂತಗಳಲ್ಲಿ ಹಾರುತ್ತದೆ.

●.ಇದು ಘನ ಇಂಧನವನ್ನು ಬಳಸುತ್ತದೆ.

●.ಇದು 700 ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

●.ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ್ದು ಈಗಾಗಲೇ ಸೇನೆಯಲ್ಲಿ ಬಳಕೆಯಲ್ಲಿದೆ.

●.ನಿಶ್ಚಿತ ಗುರಿಯನ್ನು ನಿಗದಿತ ಸಮಯದಲ್ಲಿ ತಲುಪುವ ಅಗ್ನಿ-1 ಕ್ಷಿಪಣಿ ಕ್ಷಣಮಾತ್ರದಲ್ಲಿ ಶತ್ರು ಸೈನಿಕರನ್ನು ಧ್ವಂಸಗೊಳಿಸುವ ಶಕ್ತಿ ಹೊಂದಿದೆ.

●.ಅಗ್ನಿ ಸರಣಿಯ ಅಲ್ಪಾಂತರ ಗಾಮಿ ಕ್ಷಿಪಣಿಗಳ ಸಾಲಿಗೆ ಸೇರಿರುವ ಅಗ್ನಿ-1 ಕ್ಷಿಪಣಿ 700 ಕಿಮೀ ದೂರದ ನಿಖರ ಗುರಿಯನ್ನು ಕ್ರಮಿಸಬಲ್ಲದು.


☀ಅಗ್ನಿ -1 ಕ್ಷಿಪಣಿಯ ವೈಶಿಷ್ಟ್ಯಗಳು:
━━━━━━━━━━━━━━━━━━━━

●.ಉದ್ದ: 15 ಮೀಟರ್

●.ತೂಕ: 12ಟನ್

●.ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 700 ಕಿ.ಮೀ ದೂರದ ಗುರಿಯನ್ನು ಕರಾರುವಕ್ಕಾಗಿ ಹೊಡೆದುರುಳಿಸಬಲ್ಲ ಖಂಡಾಂತರ ಸ್ವದೇಶಿ ನಿರ್ಮಿತ ಅಗ್ನಿ -1 ಕ್ಷಿಪಣಿಯನ್ನು 2002 ಜನವರಿ ನಲ್ಲಿ ಒರಿಸ್ಸಾ ಕರಾವಳಿಯ ಭದ್ರಕ್ ಜಿಲ್ಲೆಯ ಧಮ್ರಾದ ಬಂಗಾಳ ಕೊಲ್ಲಿಯಲ್ಲಿನ ವೀಲರ್ಸ್‌ ದ್ವೀಪದಲ್ಲಿರುವ ಸಮಗ್ರ ಪರೀಕ್ಷಾ ವಲಯದ (ಐಟಿಆರ್) ಉಡಾವಣೆ ಸಂಕಿರ್ಣ 4 ರಲ್ಲಿ ಸಂಚಾರಿ ಉಡಾವಣಾ ವಾಹಕದಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು.

●.ಇದು ಒಂದು 1,000 ಅಥವಾ ಪರಮಾಣು ಶಸ್ತ್ರವನ್ನು ಸಾಗಿಸುವಾ ಸಾಮರ್ಥ್ಯವಿದ.


Sunday, 10 May 2015

☀ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮರಿನ್‌) ನೌಕೆ ಸ್ಕಾರ್ಪಿಯನ್:  (Indigenously built 'Scorpion Submarine')

☀ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮರಿನ್‌) ನೌಕೆ ಸ್ಕಾರ್ಪಿಯನ್:
(Indigenously built 'Scorpion Submarine')
━━━━━━━━━━━━━━━━━━━━━━━━━━━━━━━━━━━━━━━━━━━━━

♦. ಭಾರತೀಯ ನೌಕಾಪಡೆ
(Indian Navy)


●.ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದ ದೇಶದ ನೌಕಾಪಡೆಗೆ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮೆರಿನ್‌) ನೌಕೆ ಸ್ಕಾರ್ಪಿಯನ್‌ April , 2015 ರಂದು ಸೇರ್ಪಡೆಯಾಯಿತು.

●.ಫ್ರಾನ್ಸ್‌ ನ ಸಹಕಾರದಲ್ಲಿ ನಿರ್ಮಿತವಾದ ಈ ನೌಕೆಯು ಭಾರತೀಯ ನೌಕಪಡೆಯ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿದೆ.

●.ಈಗ ಭಾರತೀಯ ನೌಕಾಪಡೆಯಲ್ಲಿ ಸದ್ಯ 14 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆ, 10 ರಷ್ಯನ್‌ ಕಿಲೋ ಕ್ಲಾಸ್‌ ಮತ್ತು 4 ಜರ್ಮನ್‌ ಎಚ್‌ಡಿಡಬ್ಲ್ಯು ಕ್ಲಾಸ್ ಹಡಗುಗಳಿದ್ದವು ಅದಕ್ಕೆ ಸ್ಕಾರ್ಪಿಯನ್‌ ಹೊಸ ಸೇರ್ಪಡೆಯಾಗಿದೆ.

●.ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ ‘ಜಲಾಂತರ್ಗಾಮಿ 75 ಯೋಜನೆ’ಯ ಭಾಗವಾಗಿ ಫ್ರಾನ್ಸ್‌ ಸಹಯೋಗದಲ್ಲಿ ₹ 23,000ಕೋಟಿ ವೆಚ್ಚದಲ್ಲಿ ಒಟ್ಟು ಆರು ‘ಸ್ಕಾರ್ಪಿಯನ್‌’ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.

●.ಡೀಸೆಲ್‌– ವಿದ್ಯುತ್‌ ಚಾಲಿತ ‘ಸ್ಕಾರ್ಪಿಯನ್‌’ ಸರಣಿ ಜಲಾಂತರ್ಗಾಮಿಗಳಲ್ಲಿ ಇದು ಮೊದಲನೆಯದಾಗಿದ್ದು, 2018ರ ವೇಳೆಗೆ ಇನ್ನೂ ಐದು ಸ್ಕಾರ್ಪಿಯನ್‌ ಜಲಾಂತರ್ಗಾಮಿಗಳು ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗಲಿವೆ.

●.ಫ್ರಾನ್ಸ್‌ನ ಡಿಸಿಎನ್‌ಎಸ್‌ ಕಂಪೆನಿ ವಿನ್ಯಾಸಗೊಳಿಸಿರುವ ಸ್ಕಾರ್ಪಿಯನ್‌ ಜಲಾಂತರ್ಗಾಮಿಗಳು ಮುಂಬೈನ ಮಜಗಾಂವ್‌ ಬಂದರಿನಲ್ಲಿ ನಿರ್ಮಾಣವಾಗುತ್ತಿವೆ.


☀ಜಲಾಂತರ್ಗಾಮಿಯ ವೈಶಿಷ್ಟ್ಯಗಳು:
━━━━━━━━━━━━━━━━━━━━

●.ಪ್ರಾಯೋಗಿಕ ಪರೀಕ್ಷೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಸ್ಕಾರ್ಪಿಯನ್‌ ಸೆಪ್ಟೆಂಬರ್ 2016ರಲ್ಲಿ ಅಧಿಕೃತ ಕಾರ್ಯಾರಂಭ.

●. ₹ 5 ಸಾವಿರ ಕೋಟಿ ಬಜೆಟ್‌ ಕೊರತೆಯಿಂದ ಜಲಾಂತರ್ಗಾಮಿಗಳ ನಿರ್ಮಾಣ ವಿಳಂಬ.

●. ಸ್ಕಾರ್ಪಿಯನ್‌ ಸರಣಿಯ ಹೊರತಾಗಿ ಇನ್ನೂ ಆರು ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ₹ 50 ಸಾವಿರ ಕೋಟಿ ಟೆಂಡರ್‌ ಕರೆದ ಕೇಂದ್ರ.

●.ಸಾಗರದಲ್ಲಿ ಪರೀಕ್ಷೆ ನಡೆಸುತ್ತಿರುವ ಸ್ವದೇಶಿ ನಿರ್ಮಿತ ಅಣ್ವಸ್ತ್ರಸಜ್ಜಿತ ಐಎನ್‌ಎಸ್‌–ಅರಿಹಂತ ಅಧಿಕೃತವಾಗಿ 2016ಕ್ಕೆ ನೌಕಾಪಡೆಗೆ ಸೇರ್ಪಡೆ.

●.ಲಾರ್ಸೆನ್ ಆ್ಯಂಡ್ ಟರ್ಬೊ ಕಂಪೆನಿಗೆ ಇನ್ನೆರಡು ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಿಸುವ ಗುತ್ತಿಗೆ ನೀಡಲಾಗಿದೆ.

●.ನೌಕಾದಳದಲ್ಲಿ ಸದ್ಯ 30 ವರ್ಷದಷ್ಟು ಹಳೆಯ ರಷ್ಯಾ ನಿರ್ಮಿತ 10 ಮತ್ತು ಜರ್ಮನ್ ನಿರ್ಮಿತ 4 ಸಾಂಪ್ರ­ದಾಯಿಕ ಡೀಸೆಲ್ – ವಿದ್ಯುತ್‌ ಚಾಲಿತ ಜಲಾಂತರ್ಗಾಮಿಗಳಿವೆ. ಈ ಪೈಕಿ ಅರ್ಧಮಾತ್ರ ಕಾರ್ಯನಿರ್ವಹಿಸುತ್ತಿವೆ.

●.ಪ್ರತಿ 9 ತಿಂಗಳಿಗೆ ಒಂದರಂತೆ ಒಟ್ಟು ಇನ್ನೂ ಐದು ಸ್ಕಾರ್ಪಿಯನ್‌ ಸರಣಿ ಜಲಾಂತರ್ಗಾಮಿಗಳು 2018ರವೇಳೆಗೆ ನೌಕಾಪಡೆಗೆ ಸೇರ್ಪಡೆಯಾಗಲಿವೆ.

 ●.ನೀರಿನ ಮೇಲೆ ಮತ್ತು ಒಳಗೆ ಹೇಗೆ ಬೇಕಾದರೂ ಸಂಚರಿಸಬಲ್ಲದು.

●.ಸರ್ವೇ ಮಾಡಲು, ಯುದ್ಧ ಉಪಕರಣಗಳನ್ನು ಹೊತ್ತೊಯ್ಯಲು ಬಳಸಿಕೊಳ್ಳಬಹುದು.

●.ಎಂಥ ವಾತಾವರಣದಲ್ಲಾದರೂ ಈ ನೌಕೆ ಸುಲಭವಾಗಿ ಸಂಚರಿಸಬಲ್ಲದು.

●.ನೀರಿನ ತಳಭಾಗದ ಸ್ಷಷ್ಟ ಚಿತ್ರಣವನ್ನು ಕ್ಷಣಮಾತ್ರದಲ್ಲಿ ರವಾನಿಸುವ ಸಾಮರ್ಥ್ಯ ಹೊಂದಿದೆ.

●.ಅತ್ಯಾಧುನಿಕ ಉಕ್ಕಿನಿಂದ ತಯಾರು ಮಾಡಲಾಗಿದ್ದು, ಎಂಥ ಆಘಾತವನ್ನಾದರೂ ಸುಲಭವಾಗಿ ತಡೆದುಕೊಳ್ಳಬಲ್ಲದು.

☀ಸೂಪರ್‌ಸಾನಿಕ್ 'ಆಕಾಶ್‌' ಕ್ಷಿಪಣಿ: Akash ( Surface-to-Air Missile(SAM)) missile System

☀ಸೂಪರ್‌ಸಾನಿಕ್ 'ಆಕಾಶ್‌' ಕ್ಷಿಪಣಿ:
Akash ( Surface-to-Air Missile(SAM)) missile System
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತೀಯ ಬಾಹ್ಯಾಕಾಶ ಯೋಜನೆ
Indian space programme


●.ಶತ್ರು ಪಕ್ಷದವರು ನಡೆಸುವ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್ ಗಳು ಮತ್ತುಮಾನವ ರಹಿತ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಿ ಅವುಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯದ ನೆಲದಿಂದ ಆಗಸದೆಡೆಗೆ ಚಿಮ್ಮುವ ಭಾರತದ ಮಹತ್ವಾಕಾಂಕ್ಷೆಯ ಆಕಾಶ್ ಕ್ಷಿಪಣಿಯನ್ನು May 2015 ರಂದು ಭಾರತೀಯ ಸೇನಾಪಡೆಗೆ ಸೇರ್ಪಡೆ ಮಾಡಲಾಯಿತು.

●.ಆಕಾಶ್ ಕ್ಷಿಪಣಿಯನ್ನು ಬೆಂಗಳೂರಿನಲ್ಲಿರುವ ಭಾರತೀಯ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ಅಭಿವೃದ್ಧಿಪಡಿಸಿದ್ದು, ಹಲವು ಬಾರಿ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು.

●.ಈ ಸ್ವದೇಶಿ ನಿರ್ಮಿತ ಕ್ಷಿಪಣಿ ನಿರ್ಮಾಣಕ್ಕೆ 1983ರಲ್ಲಿ ಚಾಲನೆ ನೀಡಲಾಗಿತ್ತು. 32 ವರ್ಷಗಳ ನಂತರ ದೊಡ್ಡ ಯೋಜನೆಯೊಂದು ಸಾಕಾರಗೊಂಡಿದೆ. ಹಲವು ಪ್ರಯೋಗಗಳ ನಂತರ ಸ್ವದೇಶಿ ನಿರ್ಮಿತ ಆಕಾಶ್ ವಾಯು ರಕ್ಷಣಾ ಕ್ಷಿಪಣಿವ್ಯವಸ್ಥೆಯನ್ನು ಸೇನೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ದೇಶಕ್ಕೆ ಪ್ರಾಥಮಿಕ ಹಂತದ ವಾಯುರಕ್ಷಣೆಯ ಖಾತ್ರಿ ದೊರೆತಿದೆ.

●.ನೆಲದಿಂದ ಆಕಾಶಕ್ಕೆ ಪ್ರಯೋಗಿಸುವ 25 ಕಿ.ಮೀ.ವ್ಯಾಪ್ತಿಯ ಆಕಾಶ್ ಕ್ಷಿಪಣಿಯಿಂದ ಸಜ್ಜುಗೊಂಡಿರುವ ಈ ವಾಯು ರಕ್ಷಣಾ ವ್ಯವಸ್ಥೆ, ತಾನು ನೆಲೆಗೊಂಡಲ್ಲಿಂದ 25 ಕಿ.ಮೀ. ವ್ಯಾಪ್ತಿಯೊಳಗೆ ಪ್ರವೇಶಿಸುವ ವೈರಿ ದೇಶದ ಸಮರ ವಿಮಾನ, ಹೆಲಿಕಾಪ್ಟರ್, ಡ್ರೋನ್ ಮತ್ತು ಸಬ್‌ಸಾನಿಕ್ ಕ್ಷಿಪಣಿಗಳನ್ನು ಕ್ಷಣ ಮಾತ್ರದಲ್ಲಿ ನಾಶಪಡಿಸಬಲ್ಲದು.

●.ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಬಳಸಿರುವ ಶೇ.90ರಷ್ಟು ಭಾಗಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಎಂದು ಡಿಆರ್‌ಡಿಒ ಹೇಳಿದೆ.

●.1983ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಸುದೀರ್ಘ ಪ್ರಯತ್ನದ ಫಲವಾಗಿ ಇದು ಕೈಗೂಡಿದೆ.ದಶದಿಕ್ಕುಗಳಿಂದ ನಡೆಯುವ ದಾಳಿಗಳನ್ನು ಏಕಕಾಲಕ್ಕೆ ಹೊಡೆದುರುಳಿಸುವ ಸಾಮರ್ಥ್ಯ ಆಕಾಶ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಿದೆ.

●.ಆಕಾಶ್‌ಗೆ ಪಥ ನಿರ್ದೇಶಿಸುವ ರಾಡಾರ್‌ಗಳು 120 ಕಿ.ಮೀ.ನಷ್ಟು ವ್ಯಾಪ್ತಿಯಲ್ಲಿ ನಿಗಾವಹಿಸಿ, ವೈರಿ ದಾಳಿಯ ಮುನ್ನೆಚ್ಚರಿಕೆ ನೀಡಲಿವೆ. ವೈರಿ ವಿಮಾನಗಳು ತನ್ನ ವ್ಯಾಪ್ತಿಗೆ ನಿಲುಕಿದ ತಕ್ಷಣ ಗಗನಕ್ಕೆ ನಗೆಯುವ ಕ್ಷಿಪಣಿ ಕ್ಷಣಾರ್ಧದಲ್ಲಿ ಧ್ವಂಸಗೊಳಿಸುತ್ತದೆ.


☀ಆಕಾಶ್ ಕ್ಷಿಪಣಿ ವ್ಯವಸ್ಥೆ ವಿಶೇಷಗಳು:
━━━━━━━━━━━━━━━━━━━━━

●.ಆಕಾಶ್ ಕ್ಷಿಪಣಿಯ ಶೇ.90ರಷ್ಟು ಉಪಕರಣಗಳು ದೇಶಿಯವಾಗಿವೆ.

●.ವಿವಿಧ ರೀತಿಯ ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಮಾನವ ರಹಿತ ಯುದ್ಧ ವಿಮಾನಗಳನ್ನು (ಡ್ರೋಣ್)ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ.

●.ಇದು ಎಂತಹ ಹವಾಮಾನದಲ್ಲೂ ಕೆಲಸ ಮಾಡಬಲ್ಲ ಶಕ್ತಿ ಹೊಂದಿದೆ.

●.ಭಾರತದ ವಿವಿಧ ಗಡಿ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ರಾಡಾರ್ ವ್ಯವಸ್ಥೆಗಳ ಮಾಹಿತಿಯನ್ನು ಆಧರಿಸಿ ಈ ಆಕಾಶ್ ಕ್ಷಿಪಣಿ ಕಾರ್ಯನಿರ್ವಹಿಸಲಿದೆ.

●.25ಕಿ.ಮೀ. ವ್ಯಾಪ್ತಿಯಲ್ಲಿ 20 ಕಿ.ಮೀ. ಎತ್ತರಕ್ಕೆ ಹಾರಿ ವೈರಿ ವಿಮಾನಗಳನ್ನು ನೆಲಕ್ಕುರುಳಿಸುವ ಸಾಮರ್ಥ್ಯ ಹೊಂದಿದೆ.

●.ಸುಮಾರು 32 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸೇನೆಗೆ ಸೇರ್ಪಡೆ ಮಾಡಲಾಗಿದೆ.

●.ಎರಡು ಮೂರು ಟಾರ್ಗೆಟ್ ಗಳನ್ನು ಏಕ ಕಾಲಕ್ಕೆ ನಿಭಾಯಿಸಬಲ್ಲ ವ್ಯವಸ್ಥೆ ಹೊಂದಿದೆ.

●.ಸುಸಜ್ಜಿತ ರೆಡಾರ್ ವ್ಯವಸ್ಥೆ ಜೊತೆಗೆ ಆಕಾಶ್ ಕ್ಷಿಪಣಿ ನಿರ್ವಹಿಸುವುದರಿಂದ ನಿಖರ ಗುರಿ ತಲುಪುತ್ತದೆ.

●.ಡಿಆರ್ ಡಿಒ ನಿಂದ ವಿನ್ಯಾಸ ಹಾಗೂ ಅಭಿವೃದ್ಧಿ ಹೊಂದಿದ ವ್ಯವಸ್ಥೆ ಇದಾಗಿದೆ.

●.ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸೇನೆಯ ಅಗತ್ಯಕ್ಕೆ ತಕ್ಕಂತೆ ಆಕಾಶ್ ಕ್ಷಿಪಣಿ ರೂಪಿಸಿದೆ.

●.ಬಿಇಎಲ್, ಇಸಿಐಎಲ್, ಎಚ್ಎಎಲ್, ಟಾಟಾ ಪವರ್ ಎಸ್ ಇಡಿ ಹಾಗೂ ಎಲ್ ಅಂಡ್ ಟಿ ಕೂಡಾ ಕ್ಷಿಪಣಿ ನಿರ್ಮಾಣದಲ್ಲಿ ಕೈ ಜೋಡಿಸಿವೆ.

●.ಒಟ್ಟಾರೆ ಭಾರತದ 61 ಪಬ್ಲಿಕ್ ಹಾಗೂ ಪ್ರೈವೇಟ್ ವಲಯದ ಸಂಸ್ಥೆಗಳು ಆಕಾಶ್ ಕ್ಷಿಪಣಿ ವ್ಯವಸ್ಥೆ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ..

Saturday, 9 May 2015

☀ಜಿಸ್ಯಾಟ್-16 ಸಂವಹನ ಉಪಗ್ರಹ : (India's communications satellite GSAT-16)

☀ಜಿಸ್ಯಾಟ್-16 ಸಂವಹನ ಉಪಗ್ರಹ :
(India's communications satellite GSAT-16)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತೀಯ ಬಾಹ್ಯಾಕಾಶ ಯೋಜನೆ
(Indian space programme)


●.ಭಾರತದ ಬಾಹ್ಯಾಕಾಶ ಕೇಂದ್ರ ಇಸ್ರೋ ಭಾರತದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಮತ್ತೊಂದು ಸಾಧನೆಯತ್ತ ಹೆಜ್ಜೆಯಿಟ್ಟಿದೆ. ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-16 ಅನ್ನು ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಉಡಾವಣ ಕೇಂದ್ರದಿಂದ December, 2014 ರಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿತು. ಯಶಸ್ವಿ ಉಡಾವಣೆಯ ಬಳಿಕ, ಹಾಸನದಲ್ಲಿರುವ ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಲಿಟಿಯು, ಜಿ-ಸ್ಯಾಟ್ 16 ಉಪಗ್ರಹ ಕಾರ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.


☀ಉಪಗ್ರಹದ ಕೆಲಸ ಏನು?
━━━━━━━━━━━━━━━

●.ಪ್ರಸ್ತುತ ಈಗ ದೂರದರ್ಶನ, ದೂರವಾಣಿ, ಇಂಟರ್ನೆಟ್ ಸೇವೆಗಳಿಗಾಗಿ ಇನ್ಸಾಟ್- 3ಇ ಉಪಗ್ರವನ್ನು ಬಳಸಲಾಗುತ್ತದೆ. ಈ ಉಪಗ್ರಹದ ಅವಧಿ 2014ರ ಏಪ್ರಿಲ್ನಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ ಈ ಸೇವೆಗಳನ್ನು ನೀಡಲು ಇಸ್ರೋ ಜಿಸ್ಯಾಟ್ 16ಜಿ ಉಪಗ್ರಹವನ್ನು ತಯಾರಿಸಿದೆ.

●.ಜಿಸ್ಯಾಟ್ 16ಜಿ ಉಪಗ್ರಹ 12 ವರ್ಷದವರೆಗೆ ಬಾಳಿಕೆ ಬರುತ್ತದೆ.


☀ಫ್ರೆಂಚ್ ಗಯಾನಾದಿಂದ ಉಡಾವಣೆ ಮಾಡಿದ್ದು ಯಾಕೆ?
━━━━━━━━━━━━━━━━━━━━━━━━━━━━━━

●.ಇಸ್ರೋದ ಜಿಎಸ್ಎಲ್ ವಿ ಮತ್ತು ಪಿಎಸ್ಎಲ್ ವಿ ರಾಕೆಟ್ ಗಳು 2 ಟನ್ ಗಿಂತಲೂ ಹೆಚ್ಚಿನ ತೂಕದ ಉಪಗ್ರಹವನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ 3 ಟನ್ ತೂಕದ ಈ ಉಪಗ್ರಹವನ್ನು ಫ್ರೆಂಚ್ ಗಯಾನಾ ಕೌರೊ ಬ್ಯಾಹ್ಯಾಕಾಶ ಕೇಂದ್ರದಿಂದ ಏರಿಯನ್ ರಾಕೆಟ್ ನಿಂದ ಉಡಾವಣೆ ಮಾಡಲಾಗಿದೆ.

●.ಪ್ರಸ್ತುತ ಇಸ್ರೋ ಜಿಎಸ್ಎಲ್ ವ ಎಂ3 ರಾಕೆಟ್ ನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈ ರಾಕೆಟ್ 4 ಟನ್ ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯ ಪಡೆದಿದೆ.


☀ಜಿಸ್ಯಾಟ್-16 ಸಂವಹನ ಉಪಗ್ರಹದ ವಿಶೇಷತೆಗಳು:
━━━━━━━━━━━━━━━━━━━━━━━━━━━━━

●.ಇದರ ತೂಕ:3,181ಕೆಜಿ.

●.48 ಸಂವಹನ ಟ್ರಾನ್ಸ್‌ಪಾಂಡರ್‌ಗಳನ್ನು ಹೊತ್ತು ಸಾಗಿದೆ.

●.ಪ್ರತಿಕೂಲ ಹವಾಮಾನ ಕಾರಣ ಜಿಸ್ಯಾಟ್-16 ಉಪಗ್ರಹ ಉಡಾವಣೆ ದಿನಾಂಕ ಮತ್ತು ಸಮಯವನ್ನು ಎರಡು ಬಾರಿ ಮುಂದೂಡಲ್ಪಟ್ಟಿತ್ತು.

●.ಇಸ್ರೋಸಾಧನೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಸಂವಹನ ಸಾಧನೆಯಾಗಿದೆ.

●.ಭಾರತೀಯ ಬಾಹ್ಯಕಾಶ ಕಾರ್ಯದಲ್ಲಿ ಸಂವಹನ ಉಪಗ್ರಹ ಭಾರತದ ಕೊಡುಗೆಯಾಗಿ ಪರಿಣಮಸಿದೆ.

●.ಉಪಗ್ರಹ ತಯಾರಿಕಾ ವೆಚ್ಚ ಮತ್ತು ಉಡಾವಣಾ ವೆಚ್ಚಕ್ಕಾಗಿ ಇಸ್ರೋ ಒಟ್ಟು 880 ಕೋಟಿ ರೂ. ಇಸ್ರೋ ಖರ್ಚು ಮಾಡಿದೆ.

☀ಸ್ವದೇಶಿ ನಿರ್ಮಿತ ರಾಕೆಟ್ ಜಿಎಸ್‌ಎಲ್‌ವಿ-ಡಿ 5  (Geosynchronous Satellite Launch Vehicle -D 5— GSLV-D 5)

☀ಸ್ವದೇಶಿ ನಿರ್ಮಿತ ರಾಕೆಟ್ ಜಿ ಎಸ್‌ ಎಲ್‌ ವಿ-ಡಿ 5
(Geosynchronous Satellite Launch Vehicle -D 5— GSLV-D 5)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತೀಯ ಬಾಹ್ಯಾಕಾಶ ಯೋಜನೆ
Indian space programme


●.ಭಾರತ ಈಗಾಗಲೇ ಪಿ ಎಸ್ ಎಲ್ ವಿ ಶ್ರೇಣಿಯ ರಾಕೆಟ್ ಗಳ ಉಡಾವಣೆಯಲ್ಲಿ ಪರಿಣತಿ ಪಡೆದಿದ್ದು, ಸತತ 25 ಯಶಸ್ವಿ ಹಾರಾಟಗಳೊಂದಿಗೆ ಮಹತ್ವದ ರಾಕೆಟ್ ಉಡಾವಣೆಗಳಲ್ಲೊಂದಾದ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಚಾಲಿತ ಜಿಎಸ್‌ಎಲ್‌ವಿ-ಡಿ 5 ರಾಕೆಟ್ January 5, 2014 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿ ಸ್ಯಾಟ್ 14 ಸಂವಹನ ಉಪಗ್ರಹ ಹೊತ್ತು ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು.


☀ಜಿಎಸ್‌ಎಲ್‌ವಿ-ಡಿ 5 ರಾಕೆಟ್ ನ ವಿಶೇಷತೆಗಳು :
━━━━━━━━━━━━━━━━━━━━━━━━

●.ಉದ್ದ: 49.13 ಮೀಟರ್.

●.ಭಾರ: 414.75 ಟನ್.

●.1,982 ಕೆಜಿ ತೂಕದ ಜಿಸ್ಯಾಟ್-14 ಸಂಪರ್ಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಸೇರಿಸುವಲ್ಲಿ ಯಶಸ್ವಿಯಾಯಿತು.

●.ದೂರ ಶಿಕ್ಷಣ ಮತ್ತು ದೂರ ವೈದ್ಯಕೀಯದಲ್ಲಿ ಈ ಉಪಗ್ರಹ ಉಪಯುಕ್ತವಾಗಿದೆ.

●.ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಭಾರೀ ತೂಕದ ರಾಕೆಟ್ ನ ಹಾರಾಟ ವಿಫಲವಾಗಿತ್ತು ಹಾಗೂ ಒಂದು ಬಾರಿ ಹಾರಾಟವನ್ನು ಕೈಬಿಡಲಾಗಿತ್ತು. ಬೇರೆ ದೇಶಗಳಿಂದ ಇಂಜಿನ್ ಪೂರೈಕೆ ಸಹಾಯ ಸಿಗದ ಕಾರಣ 2010ರ ಎಪ್ರಿಲ್ ನಲ್ಲಿ ಇಸ್ರೋ ತನ್ನ ಮೊದಲ ಕ್ರಯೋಜೆನಿಕ್ ಇಂಜಿನ್ ನನ್ನು ಪರೀಕ್ಷೆಗೊಳಪಡಿಸಿತ್ತು. ಆದರೆ, ಕ್ರಯೋಜೆನಿಕ್ ಹಂತ ಉರಿದ ಬಳಿಕ ಒಂದು ಸೆಕೆಂಡ್ ನ ಮೊದಲೇ ಅದು ವಿಫಲವಾಯಿತು.

●.ಪರಿಷ್ಕೃತ ಜಿಎಸ್ ಎಲ್ ವಿ-ಡಿ5 ರಾಕೆಟನ್ನು 2013 ಆಗಸ್ಟ್‌ನಲ್ಲಿ ಉಡಾಯಿಸಬೇಕಾಗಿತ್ತು. ಆದರೆ ದ್ರವ ಇಂಧನ ಪಾತ್ರೆಯಲ್ಲಿ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನಿಗದಿತ ಹಾರಾಟಕ್ಕೆ ಎರಡು ಗಂಟೆಗಳ ಮೊದಲೇ ಯೋಜನೆಯನ್ನು ಕೈಬಿಡಲಾಗಿತ್ತು.

●.ಭಾರತ ರಶ್ಯದಿಂದ ಏಳು ಕ್ರಯೋಜೆನಿಕ್ ಇಂಜಿನ್ ಗಳನ್ನು ಪಡೆದುಕೊಂಡಿತ್ತು. ಅವುಗಳ ಪೈಕಿ ಇಸ್ರೋ ಆರನ್ನು ಬಳಸಿಕೊಂಡಿದೆ.ಬಳಿಕ ವಿದೇಶದಿಂದ ಆಮದು ಮಾಡಿಕೊಳ್ಳುವ ಇಂಜಿನ್ ಗಳು ಕೈಗೆಟುಕದೆ ಹೋದ ಹಿನ್ನೆಲೆಯಲ್ಲಿ ತನ್ನದೇ ಆದ ಕ್ರಯೋಜೆನಿಕ್ ಇಂಜಿನ್ ಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವನ್ನು ಭಾರತ ಮನಗಂಡಿತು.

●.ಅನ್ಯ ಗ್ರಹಗಳ ಅನ್ವೇಷಣೆ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಸೇರಿದಂತೆ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳು ಜಿಎಸ್ ಎಲ್ ವಿ ಯೋಜನೆಯ ಯಶಸ್ಸನ್ನು ನೆಚ್ಚಿಕೊಂಡಿತ್ತು.

●.ಈ ರಾಕೆಟ್ ಯಶಸ್ಸಿನ ಉಡಾವಣೆಯಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮತ್ತೊಂದು ಮೈಲಿಗಲ್ಲನ್ನು ದಾಟಿತು.

☀ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್  (Geosynchronous Satellite Launch Vehicle Mk III— GSLV Mark III)

☀ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್
(Geosynchronous Satellite Launch Vehicle Mk III— GSLV Mark III)
━━━━━━━━━━━━━━━━━━━━━━━━━━━━━━━━━━━━━━━━━━━━━

♦.ಭಾರತೀಯ ಬಾಹ್ಯಾಕಾಶ ಯೋಜನೆ
Indian space programme


☀ಜಿಯೋ-ಸಿಂಕ್ರೊನಾಸ್ ಸೆಟಲೈಟ್‌ ಉಡಾವಣೆ ವಾಹನ ಮಾರ್ಕ್ 3:
(Geosynchronous Satellite Launch Vehicle Mk III)

●.ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಜಿಎಸ್‌ಎಲ್‌ವಿ ಮಾರ್ಕ್ -3 ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾ ದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ December 18, 2014 ರಂದು ‌ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

●.ಭಾರತ ಇದುವರೆಗೆ ಹಾರಿಬಿಟ್ಟಿರುವ ರಾಕೆಟ್‌ಗಳಲ್ಲಿ ಅತ್ಯಂತ ಭಾರವಾದದ್ದು. ಮೂರು ಹಂತಗಳಲ್ಲಿ ಜಿಯೋ-ಸಿಂಕ್ರೊನಾಸ್ ಸೆಟಲೈಟ್‌ ಉಡಾವಣೆ ವಾಹನ ಮಾರ್ಕ್ 3 ರಾಕೆಟ್‌ ಅನ್ನು ಯಶಸ್ವಿಯಾಗಿ ಗುರಿ ತಲುಪಿಸಿದೆ.

●.ಬಾಹ್ಯಾಕಾಶಕ್ಕೆ ತೆರಳಿ ನಾನಾ ರೀತಿಯ ಪ್ರಯೋಗ ನಡೆಸುವ ದಿಸೆಯಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದ ಮೊದಲ ಹೆಜ್ಜೆ ಯಶಸ್ವಿಯಾಗಿದೆ.

●.ಅಂತರಿಕ್ಷಕ್ಕೆ ಸರಕ್ಷಿತವಾಗಿ ಮನುಷ್ಯರನ್ನು ಕಳುಹಿಸಿ ವಾಪಸ್ ಕರೆತರುವ ನಿಟ್ಟಿನಲ್ಲಿ ಇಸ್ರೋ ಕೈಗೊಂಡಿದ್ದ ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಮತ್ತು ವ್ಯೋಮಕೋಶದ ಪರೀಕ್ಷಾರ್ಥ ಉಡ್ಡಯನ ಯಶಸ್ವಿಯಾಯಿತು.

●.ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನವನ್ನು ಕೈಗೂಡಿಸಿಕೊಂಡಿದ್ದು ಮೊದಲನೆಯದಾದರೆ, ಮರು ಪ್ರವೇಶ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದ್ದು ಎರಡನೆಯದು.

●.ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನದಲ್ಲಿ ಭಾರತ ಈಗಾಗಲೇ ಪರಿಣತಿ ಸಾಧಿಸಿದೆ. ಆದರೆ, ಭಾರೀ ತೂಕದ ಜಿಸ್ಯಾಟ್ ಶ್ರೇಣಿಯ ಉಪಗ್ರಹಗಳ ಉಡಾವಣೆಗೆ ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನ ಅಗತ್ಯ. ಇದಕ್ಕಾಗಿ ಭಾರತ ಇದುವರೆಗೂ ಫ್ರಾನ್ಸ್ ದೇಶವನ್ನು ನೆಚ್ಚಿಕೊಂಡಿತ್ತು. ಅಷ್ಟೇ ಅಲ್ಲ ಕನಸಿನ ಯೋಜನೆಗಳಾದ ಮಂಗಳ ಹಾಗೂ ಚಂದ್ರನ ಅಂಗಳದಲ್ಲಿ ಯಂತ್ರಮಾನವರು ಮತ್ತು ಜೀವಂತ ಮನುಷ್ಯರನ್ನು ಇಳಿಸುವುದಕ್ಕೂ ಜಿಎಸ್‌ಎಲ್‌ವಿ ರಾಕೆಟ್ ತಂತ್ರಜ್ಞಾನ ಅಗತ್ಯವಿತ್ತು. ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಯಶಸ್ವಿಯಾಗಿರುವುದು ಈ ದಿಸೆಯಲ್ಲಿ ಭಾರತದ ಕನಸನ್ನು ಚಿಗುರುವಂತೆ ಮಾಡಿದೆ.


☀ಮರು ಪ್ರವೇಶ ತಂತ್ರಜ್ಞಾನ
━━━━━━━━━━━━━━━━━

●.ಬಾಹ್ಯಾಕಾಶಕ್ಕೆ ಮನುಷ್ಯರು ಹಾಗೂ ಸರಕನ್ನು ಕಳಿಸುವುದಕ್ಕಿಂತಲೂ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವುದು ಹೆಚ್ಚಿನ ಸವಾಲಾಗಿದೆ.

●.ಯಾವುದೇ ವಸ್ತು ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಉಂಟಾಗುವ ಘರ್ಷಣೆಯಿಂದ ಸಾವಿರಾರು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸೃಷ್ಟಿಯಾಗುವುದರಿಂದ ಆ ವಸ್ತು ಉರಿದು ಭಸ್ಮವಾಗುತ್ತದೆ.

●.ಭೂ ವಾತಾವರಣ ಪ್ರವೇಶಿಸುವ ಉಲ್ಕೆಗಳು ಉರಿದು ಭಸ್ಮಗೊಳ್ಳುವುದು ಇದೇ ಕಾರಣಕ್ಕೆ. ವಾತಾವರಣ ಪ್ರವೇಶಿಸುವಾಗ ಉದ್ಭವಿಸುವ ಉಷ್ಣಾಂಶವನ್ನು ತಡೆದುಕೊಳ್ಳುವಂತಹ ತಂತ್ರಜ್ಞಾನ ಈಗ ಭಾರತದ ಕೈವಶವಾಗಿದೆ.


☀ಹೇಗಿದೆ ಸಿಬ್ಬಂದಿ ಕೋಶ ( 'ಸ್ಪೇಸ್‌ ಕ್ಯಾಪ್ಸೂಲ್‌') ?
━━━━━━━━━━━━━━━━━━━━━━━━━━━━

●.ಇಬ್ಬರು ಅಥವಾ ಮೂವರು ಗಗನಯಾತ್ರಿಗಳನ್ನು ಹೊತ್ತಯ್ಯಬಲ್ಲ ಸಿಬ್ಬಂದಿ ಕೋಶ ('ಸ್ಪೇಸ್‌ ಕ್ಯಾಪ್ಸೂಲ್‌') ಪುಟ್ಟ ಕೋಣೆಯಂತಿದ್ದು, 1,600 ಡಿಗ್ರಿ ಸೆಲ್ಸಿಯಸ್ ತಾಪವನ್ನು ಸಹಿಸಿಕೊಳ್ಳಬಲ್ಲದು.

●.ಭೂ ಮೇಲ್ಮೈ ಕಡೆಗೆ ಪ್ರಯಾಣ ಆರಂಭಿಸಿದಾಗ ಗುರತ್ವಾಕರ್ಷಣೆಗೆ ಒಳಪಡುವುದು. ಕರಾವಳಿ ರಕ್ಷಣಾ ಪಡೆಯ ಹಡಗುಗಳು ಈ ಕೋಶದ ಜಾಡು ಹಿಡಿಯಬಲ್ಲವು.

●.ಸದ್ಯ ಕೋಶವನ್ನು ಚೆನ್ನೈ ಸಮೀಪದ ಕಾಮರಾಜ್ ಬಂದರಿಗೆ ಕೊಂಡೊಯ್ಯಲಾಗಿದೆ. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಕೇರಳದ ತಿರುವನಂತಪುರದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗುವುದು.


☀ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ ನ ವಿಶೇಷತೆಗಳು :
━━━━━━━━━━━━━━━━━━━━━━━━━━━━━━━

●.630 ಟನ್ ತೂಕ ಮತ್ತು 43.43 ಮೀಟರ್‌ ಎತ್ತರ ಇರುವ ಈ ರಾಕೆಟ್‌ಗೆ ದ್ರವ ಹಾಗೂ ಘನ ಇಂಧನದ ಮೂಲಕ ಬಲ ತುಂಬಲಾಗುತ್ತದೆ.

●.3 ಹಂತಗಳ ರಾಕೆಟ್ :
1.ಮೊದಲ ಹಂತದ ನೋದಕ 200 ಟನ್
2.ಎರಡನೇ ಹಂತದಲ್ಲಿ ಎಲ್ 110 ಪುನರ್ಚಾಲಿತ ದ್ರವ ಇಂಧನದ ಹಂತ
3.ಮೂರನೆಯದು ಕ್ರಯೋಜಿನಿಕ್ ಎಂಜಿನ್ .

●.ಇದೇ ಮೊದಲ ಬಾರಿಗೆ ಇಸ್ರೋ 3 ಟನ್ಗೂ ಹೆಚ್ಚು ಬಾರದ ಪೇಲೋಡ್ (ಗಗನ ನೌಕೆ ಒಯ್ಯುವ ಉಪಕರಣ) ಹೊತ್ತೊಯ್ದಿದೆ.

●.ಇಂಥ ಎರಡು ರಾಕೆಟ್ಗಳು 2010ರಲ್ಲಿ ವಿಫಲಗೊಂಡ ನಂತರ, ನಾಲ್ಕು ವರ್ಷಗಳಲ್ಲಿ ಜಿಎಸ್ಎಲ್ವಿ ರಾಕೆಟ್ನ ಎರಡನೇ ಯೋಜನೆ ಇದು.

●.ದೇಶಿಯವಾಗಿ ನಿರ್ಮಿಸಿರುವ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನ, ಸಂವಹನ ಉಪಗ್ರಹಗಳನ್ನು ಉಡಾಯಿಸುವ ಮೂಲಕ ವಿದೇಶಿ ವಿನಿಮಯ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.


☀ಜಿಎಸ್ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆಯ ಮಹತ್ವದ ಅಂಶಗಳು :
━━━━━━━━━━━━━━━━━━━━━━━━━━━━━━━━━━━━━━━━

●.ಈ ರಾಕೆಟ್ 4 ಟನ್‌ಗಳಷ್ಟು ಸಾಮರ್ಥ್ಯದ ಸಂಪರ್ಕ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲದು. ಈಗ ಅತ್ಯಂತ ಭಾರದ ಸಂಪರ್ಕ ಉಪಗ್ರಹಗಳನ್ನು ಸಾಗಿಸಲು ಭಾರತಕ್ಕೆ ವಿದೇಶಿ ವಿನಿಮಯದ ಅಗತ್ಯ ಇಲ್ಲ.

●.ಈ ರಾಕೆಟ್ ವಾತಾವರಣದಲ್ಲಿ ಪ್ರಯಾಣಿಸುವಾಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಸಾಧ್ಯ. ಇದರಲ್ಲಿ ಮೊದಲ ಎರಡು ಹಂತಗಳು ರಾಕೆಟ್‌ನ ಎಂಜಿನ್‌ಗಳೇ ಇವೆ. ಮೂರನೇ ಹಂತದಲ್ಲಿರುವ ಕ್ರಯೋಜೆನಿಕ್ ಇಂಜಿನ್ ನಿಷ್ಕ್ರಿಯವಾಗಿದೆ. ಇದನ್ನು ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಲಾಗುತ್ತದೆ.

●.ಜಿಎಸ್ಎಲ್‌ವಿ ಎಂಕೆ 3 ಒಂದು ನೂತನ ರಾಕೆಟ್ ತಂತ್ರಜ್ಞಾನ. ಮಾನವ ಸಹಿತ ಬಾಹ್ಯಾಕಾಶ ಪ್ರಯಾಣಕ್ಕೆ ಉತ್ತಮ ಮೈಲಿಗಲ್ಲಾಗಲಿದೆ.

●.ಪ್ರಸ್ತುತ ಈ ರಾಕೆಟ್‌ನಲ್ಲಿ ಅಳವಡಿಸಿರುವ ಸಿಬ್ಬಂದಿ ಘಟಕವೇ ಮುಖ್ಯ ಪ್ರಯಾಣಿಕ. ಕಪ್ ಕೇಕ್ ಆಕೃತಿಯ ಈ ಸಿಬ್ಬಂದಿ ಘಟಕದಲ್ಲಿ 2-3 ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು.

●.ಈ ಸಿಬ್ಬಂದಿ ಘಟಕವು ಪ್ರತ್ಯೇಕ ಇಂಜಿನ್ ಹೊಂದಿದ್ದು, ಭೂಮಿಯಿಂದ 127 ಕಿ.ಮೀ. ಎತ್ತರದಲ್ಲಿ ರಾಕೆಟ್‌ನಿಂದ ಪ್ರತ್ಯೇಕಗೊಂಡು ಹಾರಾಟ ನಡೆಸಲಿದೆ. ನಂತರ ಭೂಮಿಗೆ ವಾಪಸ್ ಬರುವಾಗ ಬೃಹತ್ ವೇಗದೊಂದಿಗೆ ವಾತಾವರಣವನ್ನು ಪ್ರವೇಶಿಸಲಿದೆ. ಇದರ ವೇಗ ಕಡಿಮೆ ಮಾಡಲು ಭಾರತದಲ್ಲಿರುವ ಅತ್ಯಂತ ದೊಡ್ಡ ಪ್ಯಾರಾಚೂಟ್ ಅಳವಡಿಸಲಾಗಿದೆ. ಈ ಸಿಬ್ಬಂದಿ ಘಟಕವನ್ನು ಅಂಡಮಾನ್ ದ್ವೀಪಗಳ ಸಮೀಪ ಇಳಿಸಲಾಗುವುದು.

●.ಭಾರತದಲ್ಲಿಯೇ ನಿರ್ಮಿಸಿದ ರಾಕೆಟ್ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿ ಇಸ್ರೋ ಪ್ರಸ್ತಾವನೆ ಇಟ್ಟಿದೆ. ಸರ್ಕಾರದಿಂದ ಒಪ್ಪಿಗೆ ಸಿಕ್ಕ 7ರಿಂದ8 ವರ್ಷಗಳಲ್ಲಿ ಗಗನಯಾತ್ರಿಗಳನ್ನು ಕಳುಹಿಸುವ ಕಾರ್ಯಕ್ರಮ ಆಯೋಜಿಸುವುದಾಗಿ ಇಸ್ರೋ ಹೇಳಿಕೊಂಡಿದೆ.

●.ಮಾನವ ಸಹಿತ ಗಗನಯಾತ್ರೆಗಾಗಿ ಇಸ್ರೋ 12,500 ಕೋಟಿ ರೂ.ಗಳಿಗಾಗಿ ಸರ್ಕಾರದ ಎದುರು ಬೇಡಿಕೆ ಇಟ್ಟಿದೆ. ಈ ಯೋಜನೆ ಯಶಸ್ವಿಯಾದರೆ ಬಾಹ್ಯಾಕಾಶದಲ್ಲಿ ಮಾನವ ಸಹಿತ ಪ್ರಯಾಣ ನಡೆಸಿದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.

●.ಪ್ರಸ್ತುತ ಅಮೆರಿಕ, ರಷ್ಯಾ ಹಾಗೂ ಚೀನಾ ಮಾತ್ರ ಮಾನವ ಸಹಿತ ಗಗನಯಾತ್ರೆ ನಡೆಸಬಲ್ಲ ಸಾಮರ್ಥ್ಯ ಹೊಂದಿವೆ.


☀ಯೋಜನೆ ವೆಚ್ಚ :
━━━━━━━━━━

●.ಸಿಬ್ಬಂದಿ ಕೋಶದ ( 'ಕೇರ್‌' ಸ್ಪೇಸ್‌ ಕ್ಯಾಪ್ಸೂಲ್‌) ಮಾದರಿ ವೆಚ್ಚ : 15 ಕೋಟಿ ರೂ.

●.ಯೋಜನೆಯ ಒಟ್ಟು ವೆಚ್ಚ : 155 ಕೋಟಿ ರೂ.

Saturday, 2 May 2015

☀ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಒಂದಾದ "ರಿಸ್ಯಾಟ್ 1 ಉಪಗ್ರಹ" ಉಡಾವಣೆಯು ಇಸ್ರೊದ ರೋಮಾಂಚಕವೂ ಹೊಸ ಸಾಧನೆಗಳ ಮೈಲಿಗಲ್ಲೂ ಆಗಿರುವುದು.ಈ ಹಿನ್ನಲೆಯಲ್ಲಿ "ರಿಸ್ಯಾಟ್ 1 ಉಪಗ್ರಹ"ದ ಮಹತ್ವವನ್ನು ವಿಶ್ಲೇಷಿಸಿ. (Analyze the importance of 'RISAT-I' Satellite)

☀ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಒಂದಾದ "ರಿಸ್ಯಾಟ್ 1 ಉಪಗ್ರಹ" ಉಡಾವಣೆಯು ಇಸ್ರೊದ ರೋಮಾಂಚಕವೂ ಹೊಸ ಸಾಧನೆಗಳ ಮೈಲಿಗಲ್ಲೂ ಆಗಿರುವುದು.ಈ ಹಿನ್ನಲೆಯಲ್ಲಿ "ರಿಸ್ಯಾಟ್ 1 ಉಪಗ್ರಹ"ದ ಮಹತ್ವವನ್ನು ವಿಶ್ಲೇಷಿಸಿ.
(Analyze the importance of 'RISAT-I' Satellite)

━━━━━━━━━━━━━━━━━━━━━━━━━━━━━━━━━━━━━━━━━━━━━
♦.ಕೆಎಎಸ್ ವಿಶೇಷಾಂಕ
(KAS Special Notes)

●. Indian Space Programs)
(ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳು)


 ✧.ಏಪ್ರಿಲ್‍ 2012 ರಲ್ಲಿ ನಾಲ್ಕು ಹಂತಗಳ ವಿಶ್ವಾಸಾರ್ಹ ಸೇವಕ, ಪೋಲಾರ್ ಉಪಗ್ರಹ ಉಡ್ಡಯನ ಯಂತ್ರವಾಹಕ ಪಿಎಸ್‍ಎಲ್‍ ವಿ ದ ಮೂಲಕ ಸಾಧಿಸಲಾದ ಭಾರತದ ಮೊತ್ತ ಮೊದಲ ಸೂಕ್ಷ್ಮಾತಿಸೂಕ್ಷ್ಮ ತರಂಗಾಂತರಿತ ಭೂಪರಿವೀಕ್ಷಣಾ ಉಪಗ್ರಹ ರಿಸ್ಯಾಟ್ 1 ರ ಉಡ್ಡಯನ ಇಸ್ರೊ ದಾಖಲಿಸಿದ ಮಹತ್ತರವಾದ ತಾಂತ್ರಿಕ ಸೀಮೋಲ್ಲಂಘನವಾಗಿದೆ. ಏಕೆಂದರೆ, ಕೇವಲ ಕೆಲವೇ ಬೆರಳೆಣಿಕೆಯ ದೇಶಗಳಷ್ಟೇ ಇಂಥ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬಾಹ್ಯಾಕಾಶ ಉಪಗ್ರಹ ನಿರ್ಮಿತಿಯಲ್ಲಿ ಪರಿಣತಿಯನ್ನು ಸಾಧಿಸಿದೆ. ಈ ಮೂಲಕ ಭಾರತವು ಸ್ವದೇಶಿ ರೇಡಾರ್ ಇಮೇಜಿಂಗ್ ತಂತ್ರಜ್ಞಾನ ಹೊಂದಿದ ಆಯ್ದ ರಾಷ್ಟ್ರಗಳಾದ ಅಮೆರಿಕ, ಕೆನಡಾ, ಜಪಾನ್ ಮತ್ತು ಯೂರೋಪ್ ಒಕ್ಕೂಟಗಳ ಗುಂಪಿಗೆ ಸೇರ್ಪಡೆ ಗೊಂಡಿದೆ.

✧.ಈ ವ್ಯವಸ್ಥೆಯು ನಿರಂತರವಾಗಿ ಕತ್ತಲು, ಧೂಳು, ಮಂಜು ಮಾತ್ರವಲ್ಲ ಮೋಡ ಮುಸುಕಿದ ವಾತಾವರಣ ದಲ್ಲಿಯೂ ಕೂಡಾ ಮಾಹಿತಿಯನ್ನು ರವಾನಿಸಬಲ್ಲ ಸಾಮಥ್ರ್ಯವನ್ನು ಹೊಂದಿದೆ.ಇದುವರೆಗೆ ಇಸ್ರೊ ನಿರ್ಮಿಸಿದ ದೂರಸಂವೇದಿ ಉಪಗ್ರಹಗಳ ಸಾಕಷ್ಟು ಪ್ರಕಾಶಪೂರ್ಣ ವಾತಾವರಣದಲ್ಲಷ್ಟೇ ಕಾರ್ಯನಿರ್ವಹಿಸುವ ಸೀಮಿತ ಸಾಮಥ್ರ್ಯವನ್ನು ಹೊಂದಿದ್ದವು.

 ✧.ಈವರೆಗಿನ ಉಪಗ್ರಹಗಳಲ್ಲೇ ಅತ್ಯಂತ ಭಾರದ ರಿಸ್ಯಾಟ್ 1ರ ಉಡ್ಡಯನದೊಂದಿಗೆ ಪಿಎಸ್‍ಎಲ್‍ ವಿ ಭಾರತದ ನೆಲದಿಂದ ಒಟ್ಟು ಇಪ್ಪತ್ತು ಉಪಗ್ರಹಗಳನ್ನು ಯಶಸ್ವಿಯಾಗಿ ಬಾನಂಗಳಕ್ಕೆ ಏರಿಸಿದಂತಾಗಿದೆ.

 ✧.ತೀವ್ರತರವಾದ ಸಂಶೋಧನೆ ಮತ್ತು ಅಭಿವೃದ್ಧಿ ಪಡಿಸುವ ಕೌಶಲದಿಂದ ವಿದೇಶೀಯ ಸೂಕ್ಷ್ಮಾಂತರ ದೂರಸಂವೇದಿ ಉಪಗ್ರಹಗಳಿಂದ ರವಾನೆ ಯಾಗುತ್ತಿದ್ದ ಚಿತ್ರ ಮಾಹಿತಿಗಳ ಮೇಲಿದ್ದ ದೇಶದ ಪರಾವಲಂಬನೆಯನ್ನು ಸ್ಪಷ್ಟವಾಗಿ ನಿವಾರಿಸಿರುವುದೇ ರಿಸ್ಯಾಟ್ 1ರ ಮಹತ್ವವಾಗಿದೆ.

 ✧.ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ವ್ಯವಸ್ಥೆಯುಳ್ಳ ರಿಸ್ಯಾಟ್ 1ರ ಮಾಹಿತಿಯು ಕೃಷಿ ಮತ್ತು ವಿಕೋಪ ನಿರ್ವಹಣೆಯಲ್ಲಿ ಉಪಯುಕ್ತ ವಾಗಿದೆ.

 ✧.ನಿರ್ದಿಷ್ಟ ವಾಗಿ ಮೋಡಗಳು ಆಗಸ ವನ್ನು ಬಹುತೇಕ ಸಂಪೂರ್ಣವಾಗಿ ಕವಿದಿರುವ ಮುಂಗಾರು ಋತುವಿನಲ್ಲಿ ರಿಸ್ಯಾಟ್ 1ರ ಮಾಹಿತಿ ಯು ಅತ್ಯಂತ ಉಪಯುಕ್ತವಾಗಿದೆ.

 ✧.ವಾಸ್ತವವಾಗಿ ಮುಂಗಾರು ಋತುವಿನಲ್ಲಿ ರಿಸ್ಯಾಟ್ 1ರ ಮೂಲಕ ಲಭ್ಯ ವಾಗುವ ಬೆಳೆದು ನಿಂತ ಪೈರಿನ ಕುರಿತ ಮಾಹಿತಿಯು ಕೃಷಿ ಇಳುವರಿಯನ್ನು ಸಾಕಷ್ಟು ನಿಖರವಾಗಿ ಅಂದಾಜಿಸುವಲ್ಲಿ ಯೋಜನಾ ತಜ್ಞರಿಗೆ ಮಹತ್ವದ್ದಾಗಿರುತ್ತದೆ.

(ಕೃಪೆ: yojana)

Friday, 1 May 2015

☀ಕರ್ನಾಟಕದಲ್ಲಿರುವ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳು : (National parks and wildlife sanctuaries in Karnataka)

☀ಕರ್ನಾಟಕದಲ್ಲಿರುವ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳು :
(National parks and wildlife sanctuaries in Karnataka)

━━━━━━━━━━━━━━━━━━━━━━━━━━━━━━━━━━━━━━━━━━━━━

♦.Karnataka Geography.
♦.ಕರ್ನಾಟಕದ ಭೂಗೋಳ, ಭೂಗೋಳಶಾಸ್ತ್ರ.


●. ಕರ್ನಾಟಕವು 5 ರಾಷ್ಟ್ರೀಯ ಉದ್ಯಾನವನಗಳು ಹಾಗೂ 27 ಅಭಯಾರಣ್ಯಗಳನ್ನು ಹಾಗೂ 7 ಸಂರಕ್ಷಣಾ ಮೀಸಲು ಅರಣ್ಯ, 1 ಸಮುದಾಯ ಮೀಸಲುಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ 9,329.187 ಚದರ ಕಿಲೋ ಮೀಟರ್ಗಳ ವಿಸ್ತೀರ್ಣದ 5 ರಾಷ್ಟ್ರೀಯ ಉದ್ಯಾನವನಗಳು ಹಾಗೂ 27 ಅಭಯಾರಣ್ಯಗಳನ್ನು ಒಳಗೊಂಡಿದೆ .


●.ರಾಷ್ಟ್ರೀಯ ಉದ್ಯಾನ/ವನ್ಯಜೀವಿ ಅಭಯಾರಣ್ಯ               ವಿಸ್ತೀರ್ಣ(ಚ.ಕಿಮೀ)

━━━━━━━━━━━━━━━━━━━━━━━━━━━━━━━━━━━━━━━━━━━━━


1. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ•—————•260.51 ಚ.ಕಿಮೀ

2.ರಾಮದೇವರ ಬೆಟ್ಟ ರಣಹದ್ದು ಪಕ್ಷಿಧಾಮ•—————•3.46 ಚ.ಕಿಮೀ

3. ಆದಿಚುಂಚನಗಿರಿ ನವಿಲು ವನ್ಯಜೀವಿ ಅಭಯಾರಣ್ಯ•—————•0.84 ಚ.ಕಿಮೀ

4. ರಂಗನತಿಟ್ಟು ಪಕ್ಷಿಧಾಮ•—————•0.67 ಚ.ಕಿಮೀ

5. ರಂಗನತಿಟ್ಟು ಪಕ್ಷಿಧಾಮ•—————•13.50 ಚ.ಕಿಮೀ

6. ಮೇಲುಕೋಟೆ ವನ್ಯಜೀವಿ ಅಭಯಾರಣ್ಯ•—————•49.82 ಚ.ಕಿಮೀ

7. ಬಿಆರ್ಟಿ ಹುಲಿ ಮೀಸಲು ಅರಣ್ಯ •—————•539.52 ಚ.ಕಿಮೀ

8. ಕಾವೇರಿ ವನ್ಯಜೀವಿ ಅಭಯಾರಣ್ಯ•—————•1027.53 ಚ.ಕಿಮೀ

9. ಮಲೈ ಮಹದೇಶ್ವರ ವನ್ಯಜೀವಿ ಅಭಯಾರಣ್ಯ•—————•906.187 ಚ.ಕಿಮೀ

10. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ•—————•102.92 ಚ.ಕಿಮೀ

11. ತಲಕಾವೇರಿ ವನ್ಯಜೀವಿ ಅಭಯಾರಣ್ಯ•—————•105.59 ಚ.ಕಿಮೀ

12. ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ•—————•181.29 ಚ.ಕಿಮೀ

13. ಕುದುರೆಮುಖ ರಾಷ್ಟ್ರೀಯ ಉದ್ಯಾನವನ•—————•600.57 ಚ.ಕಿಮೀ

14. ಸೋಮೇಶ್ವರ ವನ್ಯಜೀವಿ ಅಭಯಾರಣ್ಯ•—————•314.25 ಚ.ಕಿಮೀ

15. ಮೂಕಾಂಬಿಕ ವನ್ಯಜೀವಿ ಅಭಯಾರಣ್ಯ•—————•370.37 ಚ.ಕಿಮೀ

16. ದಾಂಡೇಲಿ ಹುಲಿ ಮೀಸಲು ಅರಣ್ಯ•—————•886.41 ಚ.ಕಿಮೀ

17. ಅಂಶಿ ಹುಲಿ ಮೀಸಲು ಅರಣ್ಯ •—————•417.34 ಚ.ಕಿಮೀ

18. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ•—————•395.60 ಚ.ಕಿಮೀ

19. ಶರಾವತಿ ವನ್ಯಜೀವಿ ಅಭಯಾರಣ್ಯ•—————•431.23 ಚ.ಕಿಮೀ

20. ಗುಡವಿ ಪಕ್ಷಿಧಾಮ•—————•0.93 ಚ.ಕಿಮೀ

21. ಭದ್ರಾ ವನ್ಯಜೀವಿ ಅಭಯಾರಣ್ಯ•—————•500.16 ಚ.ಕಿಮೀ

22. ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ •—————•119.00 ಚ.ಕಿಮೀ

23. ಅತ್ತಿವೇರಿ ಪಕ್ಷಿಧಾಮ•—————•2.23 ಚ.ಕಿಮೀ

24. ದಾರೋಜಿ ಕರಡಿ ಅಭಯಾರಣ್ಯ•—————•82.72 ಚ.ಕಿಮೀ

25. ರಂಗಯ್ಯನದುರ್ಗ ನಾಲ್ಕು ಕೊಂಬುಗಳ ಜಿಂಕೆ ವನ್ಯಜೀವಿ ಅಭಯಾರಣ್ಯ•—————•77.23 ಚ.ಕಿಮೀ

26. ಗುಡೆಕೋಟೆ ಮದಡು ಕರಡಿ ಅಭಯಾರಣ್ಯ•—————•38.48 ಚ.ಕಿಮೀ

27. ಬಂಡೀಪುರ ಹುಲಿ ಮೀಸಲು ಅಭಯಾರಣ್ಯ•—————•872.24 ಚ.ಕಿಮೀ

28. ನುಗು ವನ್ಯಜೀವಿ ಅಭಯಾರಣ್ಯ•—————•30.32 ಚ.ಕಿಮೀ

29. ಭೀಮಗಡ ವನ್ಯಜೀವಿ ಅಭಯಾರಣ್ಯ•—————•190.42 ಚ.ಕಿಮೀ

30. ಘಟಪ್ರಭಾ ಪಕ್ಷಿಧಾಮ•—————•29.78 ಚ.ಕಿಮೀ

31. ಚಿಂಚೋಳಿ ವನ್ಯಜೀವಿ ಅಭಯಾರಣ್ಯ•—————•134.88 ಚ.ಕಿಮೀ

ಒಟ್ಟು ಪ್ರದೇಶ•—————• 9,329.187 ಚ.ಕಿಮೀ