★ ವರ್ಲ್ಡ್ ಹೆರಿಟೇಜ್ ಸೈಟ್ - ಕಾಜೀರಂಗದ ವನ್ಯಜೀವಿ ರಾಷ್ಟ್ರೀಯ ಉದ್ಯಾನವನ :
( World Heritage Site - Kajiranga National Park and Wildlife Sanctuary)
ಒಂಟಿ ಕೊಂಬಿನ ಘೇಂಡಾಮೃಗ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಈ ರಾಷ್ಟ್ರೀಯ ಉದ್ಯಾನದಲ್ಲಿರುವುದರಿಂದ ಇದನ್ನು ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಪರಿಗಣಿಸಲಾಗಿದೆ. ಈ ಉದ್ಯಾನ ಪಕ್ಷಿಗಳಸ್ವರ್ಗ ಎನಿಸಿದೆ. ಎತ್ತರದ ಹುಲ್ಲುಗಾವಲುಗಳು, ಇಲ್ಲಿನ ಭೂಪ್ರದೇಶದ ಸುಂದರ ವೈಶಿಷ್ಟ್ಯದಿಂದಾಗಿ ಕಾಝಿರಂಗ ಪ್ರವಾಸ ಅವಿಸ್ಮರಣೀಯವನ್ನಾಗಿಸಿದೆ.
ಇದನ್ನು 1940ರಲ್ಲಿ ವನ್ಯಜೀವಿಧಾಮ ಹಾಗೂ 1974ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿದೆ.ಈ ಉದ್ಯಾನ ಅಸ್ಸಾಂನ ಗೋಲಾಘಾಟ್ ಜಿಲ್ಲ್ಲೆಯಲ್ಲಿದೆ. ಭಾಗಶಃ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿದೆ. ಇದು ಅಸ್ಸಾಂನ ಹಳೆಯ ಪಾರ್ಕ್ ಆಗಿದ್ದು, 430 ಚದರ ಕಿಮೀ ವಿಸ್ತೀರ್ಣವನ್ನೊಳಗೊಂಡಿದೆ. ಉತ್ತರಕ್ಕೆ ಬ್ರಹ್ಮಪುತ್ರ ನದಿ ಹಾಗೂ ದಕ್ಷಿಣಕ್ಕೆ ಕಾರ್ಬಿ ಆಂಗ್‌ಲಾಂಗ್ ಬೆಟ್ಟದಿಂದ ಸುತ್ತುವರಿದಿದೆ.
* ಈ ಪಾರ್ಕ್ ನವೆಂಬರ್‌ನಿಂದ ಏಪ್ರಿಲ್‌ವರೆಗೆ ಮಾತ್ರ ತೆರೆದಿರುತ್ತದೆ. ಡಿಸೆಂಬರ್‌ನಲ್ಲಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಪಾರ್ಕ್ ಮೂಲಕ ರಾಷ್ಟ್ರೀಯ ಹೆದ್ದಾರಿ-37 ಹಾದು ಹೋಗುತ್ತದೆ. ಟೀ ಎಸ್ಟೇಟ್ ಇದ್ದು ಹಸಿರಿನಿಂದ ಕೂಡಿದ ಭೂದೃಶ್ಯ ಮನಸ್ಸೆಳೆಯುತ್ತದೆ. ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಘೇಂಡಾಮೃಗ ಹಾಗೂ ಆನೆಗಳು ಕೆಲವೊಮ್ಮೆ ಕಾಣಸಿಗುತ್ತವೆ. ಒಂದು ಕೊಂಬಿನ ಖಡ್ಗಮೃಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹುಲಿ, ಆನೆ, ಕರಡಿ, ಚಿರತೆ, ಕರಡಿ, ಸಾವಿರಾರು ಪಕ್ಷಿಗಳ ಆವಾಸಸ್ಥಾನವಾಗಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ಕಾಝಿರಂಗದ ಆನೆಗಳ ಉತ್ಸವ ನಡೆಯುತ್ತದೆ. ಪಾರ್ಕ್ ಸುತ್ತ ಆನೆ ಸವಾರಿ ಕೈಗೊಳ್ಳಬಹುದು ಜತೆಗೆ ಬ್ರಹ್ಮಪುತ್ರ ನದಿಯಲ್ಲಿ ದೋಣಿ ವಿಹಾರ ನಡೆಸಬಹುದು.
* ವನ್ಯಜೀವಿ ಧಾಮದ ಆಕರ್ಷಣೆಗಳು : ಒಂದು ಕೊಂಬಿನ ಘೇಂಡಾಮೃಗದ ಬದಲಾಗಿ ಇಲ್ಲಿ ಭಾರತದ ಆನೆ, ಕಾಡುಕೋಣ, ಜಿಂಕೆ, ಕರಡಿ, ಕಾಡುಬೆಕ್ಕು, ಚಿರತೆ ಬಣ್ಣದ ಬೆಕ್ಕು, ಲಂಗೂರ್, ಕಾಡುಹಂದಿ,ತೋಳ, ಉಡ ಜಾತಿಗೆ ಸೇರಿದ ಪ್ರಾಣಿಗಳನ್ನು ನೋಡಬಹುದು. ಸಫಾರಿ ರೋಮಾಂಚನಕಾರಿ ಅನುಭವ ನೀಡುತ್ತದೆ. ಅಲ್ಲದೆ ಪಕ್ಷಿ ವೀಕ್ಷಣೆಯ ಸ್ವರ್ಗ. ಗಿಡುಗ, ಹದ್ದು, ಗರುಡ, ಬಿಳಿ ಬಾಲವಿರುವ ಹದ್ದು, ಉದ್ಯಾನದ ಸರೋವರಗಳಲ್ಲಿ ಬಾತುಕೋಳಿ, ಇವೇ ಮೊದಲಾದ ಪಕ್ಷಿಗಳನ್ನು ನೋಡಬಹುದು. (ಮೂಲ: ವಿಜಯ ಕರ್ನಾಟಕ ಪತ್ರಿಕೆ)

No comments:
Post a Comment