"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 December 2013

ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad):

ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad): -

1915ರಲ್ಲಿ ಮೈಸೂರಿನ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಏರ್ಪಡಿಸಿದ ಸಮ್ಮೇಳನದ ಫಲವಾಗಿ ಸ್ಥಾಪನೆಯಾಯಿತು. ಇದರ ಮೊದಲ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. H.V.ನಂಜುಂಡಯ್ಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಏಳಿಗೆಗೆ ನಿರಂತರವಾಗಿ ಶ್ರಮಿಸುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ, ಕನ್ನಡ ಸ್ಥಾನಮಾನ ಹಾಗೂ ಏಕೀಕರಣ, ಕನ್ನಡ ಜನಜಾಗೃತಿ ಮೊದಲಾದ ಮಹತ್ಕಾರ್ಯಗಳನ್ನು ಕೈಗೊಂಡಿರುವ ಪ್ರಮುಖ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್.

 -- ಉದ್ದೇಶಗಳು:
ಕನ್ನಡ ವ್ಯಾಕರಣ, ಭಾಷಾಚರೀತ್ರೆ, ನಿಘಂಟುಗಳು ಇವುಗಳ ರಚನೆ, ಕನ್ನಡಶಾಸ್ತ್ರ ಗ್ರಂಥಗಳ ವಿಷಯವಾಗಿ ಚರ್ಚೆ, ನಿರ್ಣಯಗಳ ಅಂಗೀಕಾರ ಉತ್ಕೃಷ್ಟ ಪ್ರಾಚೀನ ಗ್ರಂಥಗಳ ಪ್ರಕಟಣೆ, ಕನ್ನಡ ಸಂಸ್ಥಾನಗಳ ಚರಿತ್ರೆಗಳ ಸಂಗ್ರಹ ಇತ್ಯಾದಿ.

No comments:

Post a Comment