"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 December 2013

★ ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ :

ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ :

 ★ ಭಾರತೀಯ ಕ್ರೈಂ ದಾಖಲೆ ಬ್ಯೂರೊ ನೀಡಿರುವ ವರದಿಯ ಪ್ರಕಾರ ೨೦೦೯ ರಿಂದ ೨೦೧೧ ರವರೆಗೆ ದೇಶದಲ್ಲಿ ಸುಮಾರು ೬೮,೦೦೦ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ! ಸರಾಸರಿ ಪ್ರತಿ ನಿಮಿಷಕ್ಕೊಂದು ಅತ್ಯಾಚಾರದ ಪ್ರಯತ್ನ ನಡೆಯುತ್ತಲೇ ಇರುತ್ತದೆಎಂದು ಸಹ ಹೇಳಲಾಗುತ್ತಿದೆ.( ಜನೆವರಿ 2013 )

★ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಕಾರ ಪ್ರಪಂಚದ ಪ್ರತಿ 4 ಮಂದಿಯಲ್ಲಿ ಒಬ್ಬರು ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡುತ್ತಿದ್ದಾರೆ ಹಾಗೂ ಜಾಗತಿಕವಾಗಿ ಶೇ. 28 ರಷ್ಟು ಪುರುಷರು ಮತ್ತೂ ಶೇ. 25 ರಷ್ಟು ಮಹಿಳೆಯರು ಲಂಚ ನೀಡುತ್ತಿದ್ದಾರೆ.

★ ಕರ್ನಾಟಕದಲ್ಲಿ 99014 ಹೆಕ್ಟೇರ್ ಅರಣ್ಯ ಪ್ರದೇಶ ಅಕ್ರಮವಾಗಿ ಒತ್ತುವರಿಗೆ ಒಳಗಾಗಿದೆ. .( ಜನೆವರಿ 2013 )

★ Global Financial Integrity ಸಂಸ್ಥೆಯ ವರದಿ ಪ್ರಕಾರ ಕಪ್ಪು ಹಣದ ಹಾವಳಿಯಿಂದ ಭಾರತವು ಕಳೆದ 10 ವರ್ಷಗಳಲ್ಲಿ 123 ಶತಕೋಟಿ ಡಾಲರ್ (676500 ಕೋಟಿ ರೂ.) ನಷ್ಟ ಅನುಭವಿಸಿದೆ..( ಜನೆವರಿ 2013 )

★ ಇಂದು ದೇಶದ 543 ಸದಸ್ಯರಲ್ಲಿ (MP) 162 MP ಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ರಾಜ್ಯಗಳ MLA, MLC ಗಳ ಪೈಕಿ 1258 ( 4032 ಸದಸ್ಯರು ) ಕ್ರಿಮಿನಲ್ ಕೇಸ್ ನಲ್ಲಿ ಸಿಕ್ಕಿಕೊಂಡಿದ್ದಾರೆ. ( ನವಂಬರ್ 2013 ).

★ ಸರ್ಕಾರಿ ದಾಖಲೆಗಳ ಪ್ರಕಾರ 2011-12 ರಲ್ಲಿ ಮನೆಗೆಲಸಕ್ಕಾಗಿ ನಿಯೋಜಿಸಲೆಂದು ಕಳ್ಳಸಾಗಣೆ ಮಾಡುವ 126,321 ಚಿಕ್ಕ ಹೆಣ್ಣುಮಕ್ಕಳನ್ನು ರಕ್ಷಿಸಲಾಗಿದೆ. ಈ ಕಳ್ಳಸಾಗಣೆ ಪ್ರಮಾಣ 2010 ನೇ ಸಾಲಿಗಿಂತ ಶೇ.27 ರಷ್ಟು ಹೆಚ್ಚು. (ಡಿಸಂಬರ್ 2013).

★ ಕಳೆದ 8 ವರ್ಷಗಳಿಂದ ಈಚೆಗೆ ದೇಶಾದ್ಯಂತ 1000 ಕ್ಕೂ ಹೆಚ್ಚು ಕೋಮು ಗಲಭೆಗಳು ಸಂಭವಿಸಿವೆ. ಇವಕ್ಕೆ ಸುಮಾರು 1000 ಮಂದಿ ಬಲಿಯಾಗಿದ್ದಾರೆ. 2005-13 ರ ಅವಧಿಯನ್ನ ಪರಿಗಣಿಸಿದರೆ ಪ್ರತಿ 10 ಲಕ್ಷ ಜನಸಂಖ್ಯೆಗೆ ಅತೀ ಹೆಚ್ಚು ಕೋಮು ಗಲಭೆಗೆ ಒಳಗಾಗಿರುವ ಮೊದಲ 5 ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ ಹಾಗೂ ಕೇರಳ ಸ್ಥಾನ ಪಡೆದಿವೆ. ಕೋಮು ಗಲಭೆಗಳ ವಿಚಾರದಲ್ಲಿ ಕರ್ನಾಟಕ 2 ನೇ ಸ್ಥಾನ ಪಡೆದಿದೆ. (ನವೆಂಬರ್ 2013).

 ★ ನ್ಯೂಯಾರ್ಕ್ ಮೂಲದ ' ವಿಶ್ವ ಸ್ಮಾರಕ ನಿಧಿ ' (WMF- Word Monuments Fund) ಸಂಸ್ಥೆ 2014 ನೇ ಸಾಲಿನ ಅಂತರ್ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಅದರಲ್ಲಿ 41 ದೇಶಗಳ 67 ಸ್ಮಾರಕಗಳು ಸ್ಥಾನ ಪಡೆದಿವೆ. ಈ ಸಂಸ್ಥೆಯಿಂದ ಆಯ್ಕೆಯಾಗಿರುವ ಕರ್ನಾಟಕದ ಸ್ಥಳ ' ಬೀದರ್ ಜಿಲ್ಲೆ '. ಇದರ ಜೊತೆಗೆ ' ಉತ್ತರ ಪ್ರದೇಶದ ಫತೇಪುರ ಸಿಕ್ರಿ, ರಾಜಸ್ಥಾನದ ಡುಂಗರ ಪುರದ ಜನಮಹಲ್ ಸಹ ಸ್ಥಾನ ಪಡೆದಿವೆ. (ನವೆಂಬರ್ 2013).

 ★ ಕ್ರಿ.ಶ. 2050 ರ ವೇಳೆಗೆ ಭಾರತದ ಜನಸಂಖ್ಯೆ 160 ಕೋಟಿ ಆಗಲಿದ್ದು, ಚೀನಾದ ಜನಸಂಖ್ಯೆ130 ಕೋಟಿ ಮತ್ತೂ ಒಟ್ಟಾರೆ ವಿಶ್ವದ ಜನಸಂಖ್ಯೆ970 ಕೋಟಿ ಇರುತ್ತದೆ ಎಂದು ಫ್ರೆಂಚ್ ಅಧ್ಯಯನದ ವರದಿ ತಿಳಿಸಿದೆ. (ನವೆಂಬರ್ 2013).

★ ತೈಲೋತ್ಪನ್ನಗಳ ಸದ್ಯದ ದರದ ಅನ್ವಯ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಪ್ರಸಕ್ತ ವರ್ಷ ಆಗಬಹುದಾದ ನಷ್ಟದ ಅಂದಾಜು ಮೊತ್ತ 156000 ಕೋಟಿ ರೂ. (ನವೆಂಬರ್ 2013).

★ ಹಣಕಾಸು ಸಚಿವಾಲಯ ಒಟ್ಟು 2000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಬಂಡವಾಳ ಹೂಡಿಕೆಯ 15 ಪ್ರಸ್ತಾವಗಳಿಗೆ ಅನುಮೋದನೆ ನೀಡಿತು. (ನವೆಂಬರ್ 2013).

 ★ ಪ್ರತಿ ದಿನಸಾಮಾಜಿಕ ಜಾಲತಾಣ, ಇ-ಮೇಲ್ ಮತ್ತು ಇ-ಶಾಪಿಂಗ್ ಬಳಕೆ ಮಾಡುವ ಭಾರತೀಯ ಮಹಿಳೆಯರ ಸರಾಸರಿ ಸಂಖ್ಯೆ: 24,00,000.

 ★ ಒಬ್ಬ ಮನುಷ್ಯನ 70 ವರ್ಷ ಆಯುಸ್ಸಿನಲ್ಲಿ ಸುಮಾರು 2391480000 ಸಾರಿ ಹೃದಯ ಬಡಿತವುಂಟಾಗುವುದು.

★ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಟಾನ ಸಚಿವಾಲಯದ 2011-12 ರ ಸಮೀಕ್ಷೆಯ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ತಿಂಗಳಿಗೆ ತಮ್ಮ ವ್ಯಸನಗಳಿಗಾಗಿ ( ಸಿಗರೇಟು, ಬೀಡಿ, ತಂಬಾಕು ಇತ್ಯಾದಿ ) ಸರಾಸರಿ 1430 ರೂ. ಖರ್ಚು ಮಾಡುತ್ತಾರೆ. ಇದು ನಗರವಾಸಿಗಳಿಗಿಂತ ಹೆಚ್ಚು.

 ★ ಒಂದು ಅಧಿಕೃತ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ 9000 ಕೋಟಿ ರೂ. 2012 ರ ಅಂತ್ಯದಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಮತ್ತು ಸಂಸ್ಥೆಗಳು 1.34 ಶತಕೋಟಿ ರೂ. ಮೊತ್ತವನ್ನು ನೇರವಾಗಿ ಮತ್ತೂ 77 ದಶಲಕ್ಷ ರೂ. ಮೊತ್ತವನ್ನು ಬೇನಾಮಿ ಹೆಸರಿನಲ್ಲಿ ಠೇವಣಿ ಇರಿಸಿದ್ದು ಈಗ ಠೇವಣಿಯ ಮೊತ್ತದಲ್ಲಿ ಶೇ. 35 ರಷ್ಟು ಇಳಿಕೆಯಾಗಿದೆ. 2007 ರ ಮಾಹಿತಿಯ ಪ್ರಕಾರ ವಿಶ್ವದ ಇತರ ರಾಷ್ಟ್ರಗಳ ನಾಗರಿಕರು ರಹಸ್ಯವಾಗಿ ಇರಿಸಿರುವ ಮೊತ್ತ 2.6 ಶತಕೋಟಿ ರೂ.

★ 2012 ರಲ್ಲಿ ಭಾರತದ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಶೇ. 22.2 ರಷ್ಟು ಹೆಚ್ಚಳವಾಗಿದೆ. ಸಿರಿವಂತರ ಏರಿಕೆಯ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಎರಡನೇಯ ಸ್ಥಾನದಲ್ಲಿದೆ. ಹಾಂಕಾಂಗ್ ಮೊದಲ ಸ್ಥಾನದಲ್ಲಿದೆ.

★ ಕರ್ನಾಟಕ ರಾಜ್ಯದಲ್ಲಿ 247 ಉಪ ನೊಂದಣಿ ಕಚೇರಿಗಳಿದ್ದು, ಅವುಗಳಲ್ಲಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 43 ಉಪ ನೊಂದಣಿ ಕಛೇರಿಗಳಿವೆ.

★ ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿದವರ ಪ್ರಮಾಣ 1991 ರಲ್ಲಿ. ಶೇ. 57.78 ರಷ್ಟಿತ್ತು. 2011 ರಲ್ಲಿ ಅದು ಶೇ. 49.28 (137.36 ಲಕ್ಷ ) ರಷ್ಟು. ಕೃಷಿಯನ್ನು ಅವಲಂಬಿಸಿದವರ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ಕೃಷಿ ನಿರ್ವಹಿಸಲಾಗದೆ ಬದುಕನ್ನು ನಡೆಸುವುದು ಕಷ್ಟವಾಗಿ ಬಡವರು ಕೃಷಿಯನ್ನು ಮತ್ತು ಗ್ರಾಮಗಳನ್ನು ತ್ಯಜಿಸಿ ಹೊಟ್ಟೆಪಾಡಿಗಾಗಿ ನಗರಗಳನ್ನು ಸೇರುತ್ತಿರುವುದಾಗಿದೆ. ಜೊತೆಗೆ ಸರ್ಕಾರದ ಬೇಜವಾಬ್ದಾರಿ ನಿರ್ಧಾರಗಳಿಂದ ಕೃಷಿ ಭೂಮಿಗೆ ಕೊಡಲಿ ಏಟು ಬೀಳುತ್ತಿರುವುದು. ರಾಜ್ಯದಲ್ಲಿ 71.56 ಲಕ್ಷ ಭೂರಹಿತ ದಿನಗೂಲಿ ದುಡಿಮೆಗಾರರು ಅತ್ಯಂತ ಅಭದ್ರತೆಯ ಬದುಕನ್ನು ದೂಡುತ್ತಿದ್ದಾರೆ.

1 comment: