"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 2 May 2015

☀ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಒಂದಾದ "ರಿಸ್ಯಾಟ್ 1 ಉಪಗ್ರಹ" ಉಡಾವಣೆಯು ಇಸ್ರೊದ ರೋಮಾಂಚಕವೂ ಹೊಸ ಸಾಧನೆಗಳ ಮೈಲಿಗಲ್ಲೂ ಆಗಿರುವುದು.ಈ ಹಿನ್ನಲೆಯಲ್ಲಿ "ರಿಸ್ಯಾಟ್ 1 ಉಪಗ್ರಹ"ದ ಮಹತ್ವವನ್ನು ವಿಶ್ಲೇಷಿಸಿ. (Analyze the importance of 'RISAT-I' Satellite)

☀ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಒಂದಾದ "ರಿಸ್ಯಾಟ್ 1 ಉಪಗ್ರಹ" ಉಡಾವಣೆಯು ಇಸ್ರೊದ ರೋಮಾಂಚಕವೂ ಹೊಸ ಸಾಧನೆಗಳ ಮೈಲಿಗಲ್ಲೂ ಆಗಿರುವುದು.ಈ ಹಿನ್ನಲೆಯಲ್ಲಿ "ರಿಸ್ಯಾಟ್ 1 ಉಪಗ್ರಹ"ದ ಮಹತ್ವವನ್ನು ವಿಶ್ಲೇಷಿಸಿ.
(Analyze the importance of 'RISAT-I' Satellite)

━━━━━━━━━━━━━━━━━━━━━━━━━━━━━━━━━━━━━━━━━━━━━
♦.ಕೆಎಎಸ್ ವಿಶೇಷಾಂಕ
(KAS Special Notes)

●. Indian Space Programs)
(ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳು)


 ✧.ಏಪ್ರಿಲ್‍ 2012 ರಲ್ಲಿ ನಾಲ್ಕು ಹಂತಗಳ ವಿಶ್ವಾಸಾರ್ಹ ಸೇವಕ, ಪೋಲಾರ್ ಉಪಗ್ರಹ ಉಡ್ಡಯನ ಯಂತ್ರವಾಹಕ ಪಿಎಸ್‍ಎಲ್‍ ವಿ ದ ಮೂಲಕ ಸಾಧಿಸಲಾದ ಭಾರತದ ಮೊತ್ತ ಮೊದಲ ಸೂಕ್ಷ್ಮಾತಿಸೂಕ್ಷ್ಮ ತರಂಗಾಂತರಿತ ಭೂಪರಿವೀಕ್ಷಣಾ ಉಪಗ್ರಹ ರಿಸ್ಯಾಟ್ 1 ರ ಉಡ್ಡಯನ ಇಸ್ರೊ ದಾಖಲಿಸಿದ ಮಹತ್ತರವಾದ ತಾಂತ್ರಿಕ ಸೀಮೋಲ್ಲಂಘನವಾಗಿದೆ. ಏಕೆಂದರೆ, ಕೇವಲ ಕೆಲವೇ ಬೆರಳೆಣಿಕೆಯ ದೇಶಗಳಷ್ಟೇ ಇಂಥ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬಾಹ್ಯಾಕಾಶ ಉಪಗ್ರಹ ನಿರ್ಮಿತಿಯಲ್ಲಿ ಪರಿಣತಿಯನ್ನು ಸಾಧಿಸಿದೆ. ಈ ಮೂಲಕ ಭಾರತವು ಸ್ವದೇಶಿ ರೇಡಾರ್ ಇಮೇಜಿಂಗ್ ತಂತ್ರಜ್ಞಾನ ಹೊಂದಿದ ಆಯ್ದ ರಾಷ್ಟ್ರಗಳಾದ ಅಮೆರಿಕ, ಕೆನಡಾ, ಜಪಾನ್ ಮತ್ತು ಯೂರೋಪ್ ಒಕ್ಕೂಟಗಳ ಗುಂಪಿಗೆ ಸೇರ್ಪಡೆ ಗೊಂಡಿದೆ.

✧.ಈ ವ್ಯವಸ್ಥೆಯು ನಿರಂತರವಾಗಿ ಕತ್ತಲು, ಧೂಳು, ಮಂಜು ಮಾತ್ರವಲ್ಲ ಮೋಡ ಮುಸುಕಿದ ವಾತಾವರಣ ದಲ್ಲಿಯೂ ಕೂಡಾ ಮಾಹಿತಿಯನ್ನು ರವಾನಿಸಬಲ್ಲ ಸಾಮಥ್ರ್ಯವನ್ನು ಹೊಂದಿದೆ.ಇದುವರೆಗೆ ಇಸ್ರೊ ನಿರ್ಮಿಸಿದ ದೂರಸಂವೇದಿ ಉಪಗ್ರಹಗಳ ಸಾಕಷ್ಟು ಪ್ರಕಾಶಪೂರ್ಣ ವಾತಾವರಣದಲ್ಲಷ್ಟೇ ಕಾರ್ಯನಿರ್ವಹಿಸುವ ಸೀಮಿತ ಸಾಮಥ್ರ್ಯವನ್ನು ಹೊಂದಿದ್ದವು.

 ✧.ಈವರೆಗಿನ ಉಪಗ್ರಹಗಳಲ್ಲೇ ಅತ್ಯಂತ ಭಾರದ ರಿಸ್ಯಾಟ್ 1ರ ಉಡ್ಡಯನದೊಂದಿಗೆ ಪಿಎಸ್‍ಎಲ್‍ ವಿ ಭಾರತದ ನೆಲದಿಂದ ಒಟ್ಟು ಇಪ್ಪತ್ತು ಉಪಗ್ರಹಗಳನ್ನು ಯಶಸ್ವಿಯಾಗಿ ಬಾನಂಗಳಕ್ಕೆ ಏರಿಸಿದಂತಾಗಿದೆ.

 ✧.ತೀವ್ರತರವಾದ ಸಂಶೋಧನೆ ಮತ್ತು ಅಭಿವೃದ್ಧಿ ಪಡಿಸುವ ಕೌಶಲದಿಂದ ವಿದೇಶೀಯ ಸೂಕ್ಷ್ಮಾಂತರ ದೂರಸಂವೇದಿ ಉಪಗ್ರಹಗಳಿಂದ ರವಾನೆ ಯಾಗುತ್ತಿದ್ದ ಚಿತ್ರ ಮಾಹಿತಿಗಳ ಮೇಲಿದ್ದ ದೇಶದ ಪರಾವಲಂಬನೆಯನ್ನು ಸ್ಪಷ್ಟವಾಗಿ ನಿವಾರಿಸಿರುವುದೇ ರಿಸ್ಯಾಟ್ 1ರ ಮಹತ್ವವಾಗಿದೆ.

 ✧.ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ವ್ಯವಸ್ಥೆಯುಳ್ಳ ರಿಸ್ಯಾಟ್ 1ರ ಮಾಹಿತಿಯು ಕೃಷಿ ಮತ್ತು ವಿಕೋಪ ನಿರ್ವಹಣೆಯಲ್ಲಿ ಉಪಯುಕ್ತ ವಾಗಿದೆ.

 ✧.ನಿರ್ದಿಷ್ಟ ವಾಗಿ ಮೋಡಗಳು ಆಗಸ ವನ್ನು ಬಹುತೇಕ ಸಂಪೂರ್ಣವಾಗಿ ಕವಿದಿರುವ ಮುಂಗಾರು ಋತುವಿನಲ್ಲಿ ರಿಸ್ಯಾಟ್ 1ರ ಮಾಹಿತಿ ಯು ಅತ್ಯಂತ ಉಪಯುಕ್ತವಾಗಿದೆ.

 ✧.ವಾಸ್ತವವಾಗಿ ಮುಂಗಾರು ಋತುವಿನಲ್ಲಿ ರಿಸ್ಯಾಟ್ 1ರ ಮೂಲಕ ಲಭ್ಯ ವಾಗುವ ಬೆಳೆದು ನಿಂತ ಪೈರಿನ ಕುರಿತ ಮಾಹಿತಿಯು ಕೃಷಿ ಇಳುವರಿಯನ್ನು ಸಾಕಷ್ಟು ನಿಖರವಾಗಿ ಅಂದಾಜಿಸುವಲ್ಲಿ ಯೋಜನಾ ತಜ್ಞರಿಗೆ ಮಹತ್ವದ್ದಾಗಿರುತ್ತದೆ.

(ಕೃಪೆ: yojana)

No comments:

Post a Comment