"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 12 October 2023

•► ಭಾರತೀಯ ರಾಜಕೀಯಕ್ಕೆ ಸಂಬಂಧಿಸಿದಂತೆ "ವಿಪ್" ಎಂದರೇನು? ಯಾವಾಗ ಪ್ರಯೋಗಿಸಲಾಗುತ್ತದೆ? (What is "Whip" in relation with Indian Polity?)

 •► ಭಾರತೀಯ ರಾಜಕೀಯಕ್ಕೆ ಸಂಬಂಧಿಸಿದಂತೆ "ವಿಪ್" ಎಂದರೇನು? ಯಾವಾಗ ಪ್ರಯೋಗಿಸಲಾಗುತ್ತದೆ?
(What is "Whip" in relation with Indian Polity?)

━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)


- ರಾಜಕೀಯ ಉಪಭಾಷೆಯಲ್ಲಿ, ವಿಪ್ ಎನ್ನುವುದು ಪಕ್ಷವೊಂದರ ಲಿಖಿತ ಸುಗ್ರೀವಾಜ್ಞೆಯಾಗಿದ್ದು, ಪ್ರಮುಖವಾದ ಮತವನ್ನು ಚಲಾಯಿಸಬೇಕಾದರೆ ಪಕ್ಷದ ಸದಸ್ಯರು ರಾಜ್ಯ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಹಾಜರಿರಬೇಕು ಮತ್ತು ಈ ಮೂಲಕ ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸುವಂತೆ ಒತ್ತಾಯಿಸುತ್ತದೆ. ಅಡ್ಡ ಮತದಾನದ ಉದ್ದೇಶಕ್ಕಾಗಿ ಅಥವಾ ಬೆಂಬಲಕ್ಕಾಗಿ ಅವರ ಧ್ವನಿಗೆ ಶಕ್ತಿ ನೀಡಲು ವಿಪ್ ಜಾರಿ ಮಾಡಬಹುದು.

- ವಿಪ್' ಎಂಬ ಪದವು ಸಾಂಪ್ರದಾಯಿಕ ಬ್ರಿಟಿಷ್ ಸಂಸದೀಯ ವಿಧಾನದ ವ್ಯುತ್ಪನ್ನವಾಗಿದೆ,

- ವಿಪ್ ಪರಿಕಲ್ಪನೆಯು ಯಾವುದೇ ಅಧಿಕೃತ ಅನುಮೋದನೆಯನ್ನು ಹೊಂದಿಲ್ಲ ಮತ್ತು ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲವಾದರೂ , ಇದು ಭಾರತೀಯ ಸಂಸತ್ತಿನಲ್ಲಿ ಅನುಸರಿಸುವ ಒಂದು ಸಂಪ್ರದಾಯವಾಗಿದೆ.

- ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್‌ ಅನ್ನು ಅಸ್ತ್ರದಂತೆ ಬಳಸುತ್ತದೆ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್‌ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ. ಪಕ್ಷದ ಮುಖ್ಯ ಸಚೇತಕರು ವಿಪ್‌ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ.

- ವಿಪ್‌ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.
ಪಕ್ಷದ 'ಬಿ' ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.

▪️ವಿಪ್‌ನಲ್ಲಿ ಮೂರು ವಿಧಗಳು :
━━━━━━━━━━━━━
▪️ಒನ್‌ಲೈನ್‌ ವಿಪ್  ‌:
(One Line Whip)

━━━━━━━━━
ವಿಶ್ವಾಸ ಮತ ಸಂದರ್ಭದಲ್ಲಿ ಸರಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್‌ ಅನ್ನು ಒನ್‌ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.

▪️ಟೂ ಲೈನ್‌ ವಿಪ್‌:
(Two Line Whip)

━━━━━━━━━
ಬಜೆಟ್‌ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ಜಾರಿ ಮಾಡಲಾಗುವ ವಿಪ್‌ ಅನ್ನು ಟೂ ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.

▪️ತ್ರೀ ಲೈನ್‌ ವಿಪ್‌:
(Three Line Whip)

━━━━━━━━━
ಅಧಿವೇಶನದಲ್ಲಿ ಹಾಜರಾತಿ, ವಿತ್ತೀಯ ಕಾರ‍್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್‌, ಅನುಮೋದನೆ  ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್‌. ಕಾಯಿದೆ ಪ್ರಕಾರ ಯಾವುದೇ ಶಾಸಕ, ಸಂಸದ ತನ್ನ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದ ಬಳಿಕವಷ್ಟೇ ಸ್ಪೀಕರ್‌ ಕ್ರಮ ಕೈಗೊಳ್ಳಬಹುದು.

▪️ಯಾವಾಗ ಪ್ರಯೋಗಿಸಬಹುದು?
━━━━━━━━━━━━━━━━
ಇದು ಯಾವ ಸದಸ್ಯರು, ಶಾಸಕರ ಮೇಲೆ ವಿಶ್ವಾಸ ಇರೋದಿಲ್ವೋ, ಪಕ್ಷದ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಕಂಡುಬರುತ್ತೋ, ಅಂತಹ ಟೈಮ್‌ನಲ್ಲಿ ವಿಪ್‌ ಜಾರಿ ಮಾಡಲಾಗುತ್ತದೆ. ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದಾದರೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.

No comments:

Post a Comment