"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 3 October 2023

•► ಸಂಸತ್ತಿನ ಸ್ಥಾಯಿ ಸಮಿತಿ. (Parliamentary Standing committee)

 •► ಸಂಸತ್ತಿನ ಸ್ಥಾಯಿ ಸಮಿತಿ.
(Parliamentary Standing committee)

━━━━━━━━━━━━━━━━━━━━━━━━

- ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ಸಂಸದೀಯ ಸಮಿತಿ ಎನ್ನಲಾಗುತ್ತದೆ.

- ಸಂಸದೀಯ ಸಮಿತಿಯು ಸದನದಿಂದ ನೇಮಕಗೊಂಡ/ ಚುನಾಯಿತರಾದ ಅಥವಾ ಸ್ಪೀಕರ್/ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ ಸಂಸದರ(MP's) ಸಮಿತಿಯಾಗಿದೆ.

- ಸಮಿತಿಯು ಸ್ಪೀಕರ್/ಅಧ್ಯಕ್ಷರ ನಿರ್ದೇಶನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ತನ್ನ ವರದಿಯನ್ನು ಸದನಕ್ಕೆ ಅಥವಾ ಸ್ಪೀಕರ್/ಅಧ್ಯಕ್ಷರಿಗೆ ಸಲ್ಲಿಸುತ್ತದೆ.

- ಇದರಲ್ಲಿ 2 ವಿಧ.
-1.ತಾತ್ಕಾಲಿಕ ಸಮಿತಿ (Ad Hoc Committee)
ಇದು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಆ ಬಳಿಕ ಸಮಿತಿ ತಂತಾನೆ ವಿಸರ್ಜನೆಗೊಳ್ಳುತ್ತದೆ.

- 2.ಸ್ಥಾಯಿ ಸಮಿತಿ (Standing Committee).
ಪ್ರತಿ ಸ್ಥಾಯಿ ಸಮಿತಿ ತಲಾ 31 ಸದಸ್ಯರನ್ನು ಹೊಂದಿರುತ್ತದೆ. ಸದನದಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಸಮಿತಿಯಲ್ಲಿ ಆಯಾ ಪಕ್ಷಗಳಿಗೆ ಸ್ಥಾನ ನಿಗದಿ ಮಾಡಲಾಗಿರುತ್ತದೆ. ಇದರ ಸದಸ್ಯರನ್ನು ಕಾಲಾನುಕಾಲಕ್ಕೆ ನೇಮಿಸಲಾಗುತ್ತದೆ.

- ಸ್ಥಾಯಿ ಸಮಿತಿಗಳು ಶಾಶ್ವತವಾಗಿರುತ್ತವೆ (ಪ್ರತಿ ವರ್ಷ ಅಥವಾ ನಿಯತಕಾಲಿಕವಾಗಿ ರಚನೆಯಾಗುತ್ತವೆ) ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ.
- ಸಂಸತ್ತಿನ ಪ್ರಸ್ತುತ ಸ್ಥಾಯಿ ಸಮಿತಿಯು ಲೋಕಸಭೆ ಮತ್ತು ರಾಜ್ಯಸಭೆಯಿಂದ 31 ಸದಸ್ಯರನ್ನು ಒಳಗೊಂಡಿದ್ದು ಇದರಲ್ಲಿ 21 ಲೋಕಸಭೆಯ ಮತ್ತು 10 ರಾಜ್ಯಸಭೆಯ ಸದಸ್ಯರನ್ನು ಒಳಗೊಂಡಿದೆ.

- ಸಂಸತ್ತಿನಲ್ಲಿ ಒಟ್ಟು 24 ಸ್ಥಾಯಿ ಸಮಿತಿಗಳಿವೆ.

- ಈ ಪೈಕಿ 8 ರಾಜ್ಯಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಮತ್ತು 16 ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಇರುತ್ತವೆ.
ಗೃಹ, ಹಣಕಾಸು, ವಿದೇಶಾಂಗ ವ್ಯವಹಾರಗಳ ಕುರಿತಾದ ಸಮಿತಿಯ ಅಧ್ಯಕ್ಷತೆಯನ್ನು ಸಾಮಾನ್ಯವಾಗಿ ವಿರೋಧ ಪಕ್ಷದ ಹಿರಿಯ ನಾಯಕರಿಗೆ ನೀಡಲಾಗುತ್ತದೆ.

No comments:

Post a Comment