☀ ಕೆ.ಎ.ಎಸ್, ಐ.ಎ.ಎಸ್ ನಾಗರಿಕ ಸೇವಾ ಪರೀಕ್ಷೆಗಳ ಪೂರ್ವ ಸಿದ್ಧತೆ ಕುರಿತ ಸಂಕ್ಷಿಪ್ತ ಮಾಹಿತಿ :
(Brief Information of IAS & KAS Civil Services Exams in Kannada)
━━━━━━━━━━━━━━━━━━━━━━━━━━━━━━━━━━━━━━━━━━━━━
★ ನಾಗರಿಕ ಸೇವಾ ಪರೀಕ್ಷೆಗಳ ಮಾಹಿತಿ
(Information of Civil Service Exams)
★ ಕೆ.ಎ.ಎಸ್ ಪರೀಕ್ಷೆ
(KAS Examination)
— ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆ.ಎ.ಎಸ್, ಐ.ಎ.ಎಸ್‌ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವುದು ಕಠಿಣ ಸವಾಲು.ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳು ಕಬ್ಬಿಣದ ಕಡಲೆ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತಿರುತ್ತದೆ.ಸ್ವಲ್ಪ ಮಟ್ಟಿಗೆ ಇದು ನಿಜವೂ ಹೌದು. ಹಾಗಂತ ಸುಮ್ಮನೆ ಕೂರದೆ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆ ಬರೆದರೆ ಖಂಡಿತಾ ಯಶಸ್ವಿಯಾಗಬಹುದು.
— ಬಹಳಷ್ಟು ಮಂದಿ ಯುವಕರು ಕೆ.ಎ.ಎಸ್, ಐ.ಎ.ಎಸ್ ಅಧಿಕಾರಿಗಳಾಗಬೇಕು ಎಂದು ಕನಸು ಕಾಣುತ್ತಾರೆ. ಆದರೆ ಆ ಕನಸನ್ನು ನನಸು ಮಾಡಿಕೊಳ್ಳುವುದು ಹೇಗೆ ಎಂದು ಬಹಳಷ್ಟು ಮಂದಿಗೆ ಗೊತ್ತಿರುವುದಿಲ್ಲ.ಕೆಲವರು ಸುಮ್ಮನೆ ಕನಸು ಕಾಣುವುದರಲ್ಲಿಯೇ ವಯೋಮಿತಿ ಕಳೆದುಕೊಳ್ಳುತ್ತಾರೆ. ಆದರೆ ಯಶಸ್ವಿಯಾಗಿರುವುದಿಲ್ಲ.ಇದಕ್ಕೆ ಮುಖ್ಯ ಕಾರಣ ಕಠಿಣ ಪರಿಶ್ರಮ, ಸಾಕಷ್ಟು ಪೂರ್ವ ಸಿದ್ಧತೆಯೊಂದಿಗೆ ಪರೀಕ್ಷೆ ಬರೆಯದೆ ಇರುವುದು.
1998ರಿಂದ ಈಚೆಗೆ ಐ.ಎ.ಎಸ್ ಮಾದರಿಯಲ್ಲಿಯೇ ಮೂರು ಹಂತಗಳಲ್ಲಿ ಕೆ.ಎ.ಎಸ್ ಪರೀಕ್ಷೆ ನಡೆಯುತ್ತಿದ್ದು, ಅದರಲ್ಲೂ ಈ ಬಾರಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಐ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳಲು ಇರುವ ಮಾನದಂಡಗಳನ್ನೇ ಕೆ.ಎ.ಎಸ್ ಪರೀಕ್ಷೆಗೂ ನಿಗದಿಪಡಿಸಲಾಗಿದೆ.
•► ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ :
ಯಾವುದೇ ವಿಷಯದಲ್ಲಿ ಈಗಾಗಲೇ ಪದವಿ ಪಡೆದಿರುವವರು, ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 5 ಬಾರಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರು ಎಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು.
•► ವಯೋಮಿತಿ:
ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 40 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
•► ಕೆ.ಎ.ಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಅವುಗಳೆಂದರೆ
1. ಪೂರ್ವಭಾವಿ ಪರೀಕ್ಷೆ,
2. ಮುಖ್ಯ ಪರೀಕ್ಷೆ
3. ಸಂದರ್ಶನ.
ಇದು ಎರಡು ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
ಮೊದಲನೆಯದು 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ.
ಪ್ರತಿಯೊಂದು ಪತ್ರಿಕೆಗೂ ತಲಾ ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ.
ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ಇರುತ್ತದೆ.
ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ/ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ.
ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ನಾಲ್ಕು ಉತ್ತರಗಳ ಪೈಕಿ ಸರಿಯಾದ ಉತ್ತರವನ್ನು ಗುರುತಿಸಬೇಕಾಗುತ್ತದೆ.
2014 ರಿಂದ ಪೂರ್ವಭಾವಿ ಪರೀಕ್ಷೆ ಯಲ್ಲಿ ನಕಾರಾತ್ಮಕ ಅಂಕಗಳನ್ನು ನಿಗದಿ ಪಡಿಸಲಾಗಿದೆ.
•► ಪತ್ರಿಕೆ 1: ಸಾಮಾನ್ಯ ಅಧ್ಯಯನ
ಇದು ಸಾಮಾನ್ಯ ವಿಜ್ಞಾನ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಪ್ರಚಲಿತ ವಿದ್ಯಮಾನಗಳು, ಭಾರತದ ಚರಿತ್ರೆ,
ಭೂಗೋಳ, ಸಂವಿಧಾನ, ಆರ್ಥಿಕತೆ, ಭಾರತದ ರಾಷ್ಟ್ರೀಯ ಚಳವಳಿ, ಮನೋಸಾಮರ್ಥ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ. ಅಭ್ಯರ್ಥಿಗಳು ಯಾವುದಾದರೂ ಒಂದು ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ.
•► ಪತ್ರಿಕೆ 2: ಸಾಮಾನ್ಯ ಅಧ್ಯಯನ (CSAT)
ಸಾಮಾನ್ಯ ವಿಜ್ಞಾನ & ತಂತ್ರ ಜ್ಞಾನ, ಮಾನಸಿಕ ಮಾನಸಿಕ ಸಾಮರ್ಥ್ಯ ಪರೀಕ್ಷೆ ( S S L C Level )
— ಈ ಪೂರ್ವಭಾವಿ ಪರೀಕ್ಷೆಯ ನಂತರ 1:20ರ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಆಗ ಮತ್ತೊಮ್ಮೆಅರ್ಜಿ ಸಲ್ಲಿಸಬೇಕು.
ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಪದವಿಯ ಅಂಕಪಟ್ಟಿಗಳನ್ನು ಹೊಂದಿರಬೇಕಾಗಿರುತ್ತದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಒಂದು ವೇಳೆ ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ಉತ್ತೀರ್ಣರಾಗಲು ವಿಫಲರಾದರೆ ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು ಅನರ್ಹರಾಗುತ್ತಾರೆ.
•► ಮುಖ್ಯ ಪರೀಕ್ಷೆ :
ಇದರಲ್ಲಿ ಒಟ್ಟು ಎಂಟು ಪ್ರಶ್ನೆ ಪತ್ರಿಕೆಗಳು ಇರುತ್ತವೆ.
ಪತ್ರಿಕೆ 1- ಕನ್ನಡ & ಪ್ರಬಂಧ (100 ಅಂಕ)
ಪತ್ರಿಕೆ 2- ಇಂಗ್ಲಿಷ್ (100 ಅಂಕ)
ಪತ್ರಿಕೆ 3, 4, 5, & 6: ಸಾಮಾನ್ಯ ಅಧ್ಯಯನ, ತಲಾ 250 ಅಂಕಗಳು
ಪತ್ರಿಕೆ 7,8: ಒಂದು ಐಚ್ಛಿಕ ವಿಷಯದಲ್ಲಿ ಎರಡು ಪತ್ರಿಕೆಗಳು (ತಲಾ 250 ಅಂಕಗಳು)
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೇ 35ರಷ್ಟು ಅಂಕಗಳನ್ನು ಗಳಿಸಲೇಬೇಕು. ಒಂದು ವೇಳೆ ನಿಗದಿತ ಅಂಕಗಳನ್ನು ಗಳಿಸದಿದ್ದರೆ ಉಳಿದ ಪತ್ರಿಕೆಗಳ ಮೌಲ್ಯಮಾಪನ ಮಾಡುವುದಿಲ್ಲ. ಆದರೆ ಈ ಅಂಕಗಳನ್ನು ಅಭ್ಯರ್ಥಿಗಳ ಶ್ರೇಯಾಂಕ ನಿಗದಿಗೆ ಪರಿಗಣಿಸುವುದಿಲ್ಲ.
ಇಲ್ಲಿಯೂ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಇರುತ್ತದೆ.ವಿವರಣಾತ್ಮಕ ರೂಪದ ಪ್ರಶ್ನೆಗಳು ಇರುತ್ತವೆ.
ಕನ್ನಡ, ಇಂಗ್ಲಿಷ್ ಎಸ್ಸೆಸ್ಸೆಲ್ಸಿ ಮಟ್ಟದ್ದಾಗಿರುತ್ತದೆ.
ಮುಖ್ಯ ಪರೀಕ್ಷೆಯ ಪಠ್ಯಕ್ರಮ ಪದವಿ ಮಟ್ಟದ್ದಾಗಿರುತ್ತದೆ.
•► ಸಂದರ್ಶನ:
ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಒಟ್ಟು ಹುದ್ದೆಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ 1:3ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಇಲ್ಲಿ ಅಭ್ಯರ್ಥಿಯ ನಾಯಕತ್ವ ಗುಣ, ಮಾನಸಿಕ ಸಮತೋಲನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇತ್ಯಾದಿಗಳನ್ನು ಅಳೆಯಲಾಗುತ್ತದೆ.
— ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆಯ ವ್ಯಾಪ್ತಿ ತುಂಬಾ ವಿಶಾಲವಾಗಿರುತ್ತದೆ.
ಯಾವುದೇ ಒಂದು ಪಠ್ಯಪುಸ್ತಕವನ್ನು ಓದಿ ಪರೀಕ್ಷೆ ಬರೆಯುವುದು ಸಾಧ್ಯವಿಲ್ಲ.
ನಿಯಮಿತವಾಗಿ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುವುದರ ಜೊತೆಗೆ ಮುಖ್ಯ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಬೇಕಾಗುತ್ತದೆ.
— ಕನ್ನಡ ಪತ್ರಿಕೆಗಳ ಜೊತೆಗೆ ಒಂದೆರಡು ಇಂಗ್ಲಿಷ್ ಪತ್ರಿಕೆಗಳನ್ನು ಓದುವುದು ಉತ್ತಮ.ಪರೀಕ್ಷೆ ವೇಳೆಗೆ ಮಾರುಕಟ್ಟೆಗೆ ಬರುವ ಪುಸ್ತಕಗಳ ಮೇಲೆ ಅವಲಂಬನೆಯಾಗುವುದು ಬಿಟ್ಟು ಈಗಿನಿಂದಲೇ ಪಠ್ಯಕ್ರಮಕ್ಕೆ ಅನುಗುಣವಾಗಿ 3-4 ಪುಸ್ತಕಗಳನ್ನು ಓದಲು ಶುರು ಮಾಡಿದರೆ ಖಂಡಿತಾ ಯಶಸ್ಸು ಗಳಿಸಬಹುದು.ಕಳೆದ ಒಂದು ವರ್ಷದಿಂದ ಈಚೆಗೆ ನಡೆದಿರುವ ಪ್ರಮುಖ ಬೆಳವಣಿಗೆಗಳು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ, ಪ್ರಮುಖ ನೇಮಕಾತಿಗಳು, ಪುಸ್ತಕಗಳು, ಗಣ್ಯರ ನಿಧನ, ಅವರ ಕೊಡುಗೆ, ಪ್ರಶಸ್ತಿಗಳು, ಕ್ರೀಡಾ ಕ್ಷೇತ್ರದಲ್ಲಿನ ಬೆಳವಣಿಗೆಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ.

No comments:
Post a Comment