☀ ಮೋಟಾರು ವಾಹನ (ತಿದ್ದುಪಡಿ) ಮಸೂದೆ–2016
(Motor Vehicle (Amendment) Act - 2016)
•─━━━━━═══════════━━━━━─••─━━━━━═══════════━━━━━─•
★ ಸಾಮಾನ್ಯ ಅಧ್ಯಯನ
(General Studies)
★ ಪ್ರಚಲಿತ ಘಟನೆಗಳು
(Current Affairs)
●.ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವ ಮತ್ತು ರಸ್ತೆ ಅಪಘಾತಗಳು ಹಾಗೂ ಅವುಗಳಲ್ಲಿ ಮೃತಪಡುವವರ ಪ್ರಮಾಣವನ್ನು ಶೇ 50ರಷ್ಟು ತಗ್ಗಿಸುವ ಉದ್ದೇಶದ ಮೋಟಾರು ವಾಹನ (ತಿದ್ದುಪಡಿ) ಮಸೂದೆ–2016 ಅನ್ನು ಲೋಕಸಭೆಯು ಅಂಗೀಕರಿಸಿದೆ.
●.ಕಳೆದ ವರ್ಷದಲ್ಲಿ ಈ ಮಸೂದೆಯನ್ನು ಲೋಕ ಸಭೆಯಲ್ಲಿ ಮಂಡಿಸಲಾಗಿತ್ತು. ನಂತರ ಅದನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು.
●.ಮಸೂದೆಯಲ್ಲಿ ಕೆಲವು ಬದಲಾವಣೆ ತರಲು ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಕೇಂದ್ರ ಸಚಿವ ಸಂಪುಟ ಇದಕ್ಕೆ ಒಪ್ಪಿಗೆ ನೀಡಿತ್ತು. ಮಸೂದೆಗೆ ರಾಜ್ಯಸಭೆ ಇನ್ನಷ್ಟೇ ಸಮ್ಮತಿಸಬೇಕಿದೆ.
☀ ಪ್ರಮುಖ ಅಂಶಗಳು :
•─━━━━━═══════════━━━━━─•
●.ಸಂಚಾರ ನಿಯಮ ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ವಿಧಿಸಲು ಅವಕಾಶ
●.ವಾಹನಗಳ ವಿನ್ಯಾಸದಲ್ಲಿನ ನ್ಯೂನತೆಗಳಿಂದ ಸಂಭವಿಸುವ ಅಪಘಾತಗಳಿಗೆ ತಯಾರಕರೇ ಹೊಣೆ
●.ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹ 10 ಲಕ್ಷದವರೆಗೂ ಪರಿಹಾರ
●.ಆನ್‌ಲೈನ್ ಮೂಲಕ ಮಾತ್ರ ಕಲಿಕಾ ಪರವಾನಗಿ.(ಲರ್ನರ್ ಲೈಸನ್ಸ್– ಎಲ್ಎಲ್) ಲಭ್ಯ
●.ಮೂರು ದಿನಗಳ ಒಳಗೆ ಚಾಲನಾ ಪರವಾನಗಿ. (ಡ್ರೈವಿಂಗ್ ಲೈಸನ್ಸ್–ಡಿಎಲ್) ನೀಡಬೇಕು
●.ಡಿಎಲ್ ಪಡೆಯಲು ಮತ್ತು ವಾಹನ ನೋಂದಣಿ ಮಾಡಿಸಲು ಆಧಾರ್ ಸಲ್ಲಿಕೆ ಕಡ್ಡಾಯ
●.ಮಾರಾಟಗಾರರ ಬಳಿಯೇ ವಾಹನ ನೋಂದಣಿಗೆ ಅವಕಾಶ. ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಹೋಗುವ ಅವಶ್ಯಕತೆ ಇಲ್ಲ
●.ವಾಹನ ಮತ್ತು ಚಾಲನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಡಿಜಿಟಲೀಕರಣ. ಎಲ್ಲವೂ ಆನ್‌ಲೈನ್‌ನಲ್ಲಿ ದೊರೆಯಲಿವೆ
●.ಥರ್ಡ್ ಪಾರ್ಟಿ ವಿಮೆ ಅಡಿ ಚಾಲಕನಿಗೂ ಪರಿಹಾರ
***
●.ಗುತ್ತಿಗೆದಾರ ಹೊಣೆ
- ರಸ್ತೆ ವಿನ್ಯಾಸ ಅವೈಜ್ಞಾನಿಕ ರೀತಿಯಲ್ಲಿದ್ದರೆ, ಅದನ್ನು ನಿರ್ಮಿಸಿದ ಗುತ್ತಿಗೆದಾರ ಅಥವಾ ಗುತ್ತಿಗೆದಾರ ಕಂಪೆನಿಗೆ ದಂಡ
- ತಯಾರಕರಿಗೆ ದಂಡ
- ಕಂಪೆನಿಗಳು ಉದ್ದೇಶಪೂರ್ವಕವಾಗಿ ವಾಯುಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಈ ವಿಚಾರದಲ್ಲಿ ವಂಚನೆ ನಡೆಸಿದರೆ, ಭಾರಿ ದಂಡ ತೆರಬೇಕಾಗುತ್ತದೆ.
(ಕೃಪೆ :ಪ್ರಜಾವಾಣಿ)

No comments:
Post a Comment