"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 25 March 2016

■.ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳಿಗೆ ಸಂಬಂಧಿಸಿದಂತೆ ಬಹು ಆಯ್ಕೆಯ ಪ್ರಶ್ನೋತ್ತರಗಳು. ( Objective Questions on Governor Generals and Viceroys of British India)

■.ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳಿಗೆ ಸಂಬಂಧಿಸಿದಂತೆ ಬಹು ಆಯ್ಕೆಯ ಪ್ರಶ್ನೋತ್ತರಗಳು.
( Objective Questions on Governor Generals and Viceroys of British India)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಆಧುನಿಕ ಭಾರತದ ಇತಿಹಾಸ.
(Modern Indian History)

★ ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳ ಪಟ್ಟಿ
(List of Governor General and Viceroy of British India)


ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳಿಗೆ ಸಂಬಂಧಿಸಿದಂತೆ ಈ ಮೊದಲು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳನ್ನು ಆಯ್ದುಕೊಂಡು  ಇಲ್ಲಿ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನ ಮಾಡಿದ್ದೇನೆ. ಮುಂಬರುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವು ಉಪಯುಕ್ತವಾಗಬಲ್ಲವು ಅಂತ ನನ್ನ ಅನಿಸಿಕೆ.

---» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.


1. ಬ್ರಿಟಿಷ್ ಭಾರತದ (ಬಂಗಾಳ) ಮೊದಲ ಗವರ್ನರ್ ಜನರಲ್ ಯಾರು?
(ಎ) ಲಾರ್ಡ್ ವಾವೆಲ್
(ಬಿ) ಲಾರ್ಡ್ ಡಫೆರಿನ್ನ
(ಸಿ) ಲಾರ್ಡ್ ವೆಲ್ಲೆಸ್ಲಿ
(ಡಿ) ವಾರೆನ್ ಹೆಸ್ಟಿಂಗ್√


2. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
(ಎ) ಲಾರ್ಡ್ ವಿಲಿಯಂ ಬೆಂಟಿಂಕ್√
(ಬಿ) ಲಾರ್ಡ್ ಚೆಲ್ಮ್ಸ್ ಫೋರ್ಡ್
(ಸಿ) ಸರ್ ಚಾರ್ಲ್ಸ್ ಮೆಟಾಕೆಫ್
(ಡಿ) ಲಾರ್ಡ್ ವೆಲ್ಲೆಸ್ಲಿ


3. ಕುಖ್ಯಾತ 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ಪದ್ಧತಿಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
(ಎ) ಲಾರ್ಡ್ ಲಾನ್ಸ್
(ಬಿ) ಲಾರ್ಡ್ ರಿಪ್ಪನ್
(ಸಿ) ಲಾರ್ಡ್ ಕಾರ್ನ್ ವಾಲಿಸ್
(ಡಿ) ಲಾರ್ಡ್ ಡಾಲ್ ಹೌಸಿ √


4. ಬ್ರಿಟಿಷ್ ಭಾರತದ ಮೊದಲ ವೈಸರಾಯ್ ಯಾರು ?
(ಎ) ಲಾರ್ಡ್ ಡಾಲ್ ಹೌಸಿ
(ಬಿ) ಲಾರ್ಡ್ ವಾವೆಲ್
(ಸಿ) ಲಾರ್ಡ್ ಕ್ಯಾನಿಂಗ್√
(ಡಿ) ಲಾರ್ಡ್ ಕಾರ್ನ್ ವಾಲಿಸ್


5. ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ನಾಗರಿಕ ಅಸಹಕಾರ ಚಳುವಳಿಯು ಪ್ರಾರಂಭವಾಯಿತು ?
(ಎ) ಲಾರ್ಡ್ ಇರ್ವಿನ್√
(ಬಿ) ಲಾರ್ಡ್ ವಾವೆಲ್
(ಸಿ) ಸರ್ ಚಾರ್ಲ್ಸ್ ಮೆಟಾಕೆಫ್
(ಡಿ) ಲಾರ್ಡ್ ಲಾನ್ಸ್


6. ಭಾರತದಲ್ಲಿ ಟೆಲಿಗ್ರಾಫ್ ಮತ್ತು ಅಂಚೆ ವ್ಯವಸ್ಥೆಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
(ಎ) ಲಾರ್ಡ್ ಹಾರ್ಡಿಂಗ್
(ಬಿ) ಲಾರ್ಡ್ ಡಾಲ್ ಹೌಸಿ √
(ಸಿ) ಲಾರ್ಡ್ ಚೆಲ್ಮ್ಸ್ ಫೋರ್ಡ್
(ಡಿ) ಲಾರ್ಡ್ ವೆಲ್ಲೆಸ್ಲಿ


7.1905ರ ಬಂಗಾಳದ ವಿಭಜನೆ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
(ಎ) ಲಾರ್ಡ್ ಕ್ಯಾನಿಂಗ್
(ಬಿ)ಲಾರ್ಡ್ ರೆಡಿಂಗ್
(ಸಿ) ಲಾರ್ಡ್ ಕರ್ಜನ್√
(ಡಿ) ಲಾರ್ಡ್ ಚೆಲ್ಮ್ಸ್ ಫೋರ್ಡ್


8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚನೆಯಾದ ಸಂದರ್ಭದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು ?
(ಎ) ಲಾರ್ಡ್ ಲಾನ್ಸ್
(ಬಿ) ಲಾರ್ಡ್ ಡಫರಿನ್√
(ಸಿ) ಲಾರ್ಡ್ ಕರ್ಜನ್
(ಡಿ) ಲಾರ್ಡ್ ಇರ್ವಿನ್


9. ಸತಿ ಪದ್ಧತಿಯನ್ನು ರದ್ದುಪಡಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು? (ಎ) ಲಾರ್ಡ್ ವಿಲಿಯಂ ಬೆಂಟಿಂಕ್√
(ಬಿ) ಲಾರ್ಡ್ ಡಾಲ್ ಹೌಸಿ
(ಸಿ) ಲಾರ್ಡ್ ಕ್ಯಾನಿಂಗ್
(ಡಿ) ಲಾರ್ಡ್ ಹಾರ್ಡಿಂಗ್


10. ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
(ಎ) ಲಾರ್ಡ್ ವೆಲ್ಲೆಸ್ಲಿ√
(ಬಿ) ಲಾರ್ಡ್ ಕ್ಯಾನಿಂಗ್
(ಸಿ) ಲಾರ್ಡ್ ಚೆಲ್ಮ್ಸ್ ಫೋರ್ಡ್
(ಡಿ) ಲಾರ್ಡ್ ಡಾಲ್ ಹೌಸಿ


11. ಬ್ರಿಟಿಷ್ ಭಾರತದ ಕೊನೆಯ ವೈಸ್ರಾಯ್ ಯಾರು?
(ಎ) ಲಾರ್ಡ್ ವಿಲ್ಲಿಂಗ್ಡನ್
(ಬಿ) ಲಾರ್ಡ್ ಲಿನ್ ಲಿಥ್ ಗೊ
(ಸಿ) ಲಾರ್ಡ್ ವಾವೆಲ್
(ಡಿ) ಲಾರ್ಡ್ ಮೌಂಟ್ ಬ್ಯಾಟನ್√


12. ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತ ಸರ್ಕಾರ ಕಾಯಿದೆ-1935' ಜಾರಿಗೆ ತರಲಾಯಿತು ?
(ಎ) ಲಾರ್ಡ್ ಲಿನ್ ಲಿಥ್ ಗೊ√
(ಬಿ) ಲಾರ್ಡ್ ವಿಲ್ಲಿಂಗ್ಡನ್
(ಸಿ) ಲಾರ್ಡ್ ವಾವೆಲ್
(ಡಿ) ಲಾರ್ಡ್ ಇರ್ವಿನ್


13. ಮೂರನೇ ಆಂಗ್ಲೋ - ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ನನ್ನು ಸೋಲಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
(ಎ) ಲಾರ್ಡ್ ವೆಲ್ಲೆಸ್ಲಿ
(ಬಿ) ಲಾರ್ಡ್ ಮಿಂಟೋ I
(ಸಿ) ಲಾರ್ಡ್ ಕಾರ್ನ್ ವಾಲಿಸ್ √
(ಡಿ) ಲಾರ್ಡ್ ವಿಲಿಯಂ ಬೆಂಟಿಂಕ್


14. 1793ರಲ್ಲಿ ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
(ಎ) ಲಾರ್ಡ್ ಡಾಲ್ ಹೌಸಿ
(ಬಿ) ಲಾರ್ಡ್ ವಿಲಿಯಂ ಬೆಂಟಿಂಕ್
(ಸಿ) ಲಾರ್ಡ್ ವೆಲ್ಲೆಸ್ಲಿ
(ಡಿ) ಲಾರ್ಡ್ ಕಾರ್ನ್ ವಾಲಿಸ್ √


15. ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನನ್ನು 'ಆಧುನಿಕ ಭಾರತದ ನಿರ್ಮಾಪಕ'ನೆಂದು ಕರೆಯಲಾಗುತ್ತದೆ?
(ಎ) ಲಾರ್ಡ್ ಡಾಲ್ ಹೌಸಿ  √
(ಬಿ) ಲಾರ್ಡ್ ವಿಲಿಯಂ ಬೆಂಟಿಂಕ್
(ಸಿ) ಲಾರ್ಡ್ ಚೆಲ್ಮ್ಸ್ ಫೋರ್ಡ್
(ಡಿ) ಲಾರ್ಡ್ ಲಿನ್ ಲಿಥ್ ಗೊ


16. ದೇಶೀಯ ಪತ್ರಿಕೆಗಳ ಮೇಲಿನ ಎಲ್ಲಾ ನಿರ್ಬಂಧಗಳನ್ನು ರದ್ದು ಮಾಡಿದ್ದಲ್ಲದೇ ದೇಶಿ ಮುದ್ರಣಾಲಯದ ವಿಮೋಚಕ ಎಂದೇ ಪ್ರಖ್ಯಾತನಾಗಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
(ಎ) ಲಾರ್ಡ್ ವೆಲ್ಲೆಸ್ಲಿ
(ಬಿ) ಲಾರ್ಡ್ ಡಫೆರಿನ್ನ
(ಸಿ) ಸರ್ ಚಾರ್ಲ್ಸ್ ಮೆಟಾಕೆಫ್√
(ಡಿ) ಲಾರ್ಡ್ ಲಿನ್ ಲಿಥ್ ಗೊ


17. 1857 ರ ದಂಗೆ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
(ಎ) ಲಾರ್ಡ್ ವಿಲಿಯಂ ಬೆಂಟಿಂಕ್
(ಬಿ) ಲಾರ್ಡ್ ಕ್ಯಾನಿಂಗ್√
(ಸಿ) ಲಾರ್ಡ್ ಇರ್ವಿನ್
(ಡಿ) ಲಾರ್ಡ್ ವಾವೆಲ್


18. ಭಾರತದಲ್ಲಿನ ಸ್ಥಳೀಯ ಸ್ವಾಯತ್ತ ಸರ್ಕಾರದ ಪಿತಾಮಹನೆಂದು ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನನ್ನು ಕರೆಯಲಾಗುತ್ತದೆ?
(ಎ) ಲಾರ್ಡ್ ರಿಪ್ಪನ್√
(ಬಿ) ಲಾರ್ಡ್ ಡಾಲ್ ಹೌಸಿ
(ಸಿ) ಲಾರ್ಡ್ ವಿಲ್ಲಿಂಗ್ಡನ್
(ಡಿ) ಲಾರ್ಡ್ ವಿಲಿಯಂ ಬೆಂಟಿಂಕ್


19. 1919 ರ ರೌಲಟ್ ಕಾಯಿದೆ ಜಾರಿಗೆ ಬಂದ ಸಮಯದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು ?
(ಎ) ಲಾರ್ಡ್ ಲಿನ್ ಲಿಥ್ ಗೊ
(ಬಿ) ಲಾರ್ಡ್ ರೆಡಿಂಗ್
(ಸಿ) ಲಾರ್ಡ್ ಕ್ಯಾನಿಂಗ್
(ಡಿ) ಲಾರ್ಡ್ ಚೆಲ್ಮ್ಸ್ ಫೋರ್ಡ್√


20. 1928 ರಲ್ಲಿ ಭಾರತಕ್ಕೆ ಭೇಟಿ ಮಾಡಿದ ಸೈಮನ್ ಆಯೋಗದ ಸಂದರ್ಭದಲ್ಲಿ  ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು?
(ಎ) ಲಾರ್ಡ್ ರೆಡಿಂಗ್
(ಬಿ) ಲಾರ್ಡ್ ಲಿನ್ ಲಿಥ್ ಗೊ
(ಸಿ) ಲಾರ್ಡ್ ಇರ್ವಿನ್√
 (ಡಿ) ಲಾರ್ಡ್ ಮೌಂಟ್ ಬ್ಯಾಟನ್


21) ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಯಾರು?
 (ಎ) ಲಾರ್ಡ್ ರೆಡಿಂಗ್
(ಬಿ) ಲಾರ್ಡ್ ಲಿನ್ ಲಿಥ್ ಗೊ
(ಸಿ) ಲಾರ್ಡ್ ಇರ್ವಿನ್
(ಡಿ) ಲಾರ್ಡ್ ಮೌಂಟ್ ಬ್ಯಾಟನ್√


22) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತ ಬಿಟ್ಟು ತೊಲಗಿ ಚಳುವಳಿ ನಡೆಯಿತು?
(ಎ) ಲಾರ್ಡ್ ಲಿನ್ ಲಿತ್ ಗೋ√
(ಬಿ) ಲಾರ್ಡ್ ವಾವೆಲ್
(ಸಿ) ಲಾರ್ಡ್ ವೆಲ್ಲಿಂಗಡನ್
(ಡಿ) ಲಾರ್ಡ್ ಇರ್ವಿನ್


23) ಪ್ರಥಮವಾಗಿ ಮಹಾತ್ಮ ಗಾಂಧಿಯವರು ಭಾರತೀಯ ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
(ಎ) ಲಾರ್ಡ್ ವೆಲ್ಲಿಂಗಡನ್
(ಬಿ) ಲಾರ್ಡ್ ರಿಪ್ಪನ್
(ಸಿ) ಲಾರ್ಡ್ ಲಿನ್ ಲಿತ್ ಗೋ
(ಡಿ) ಲಾರ್ಡ್ ಹಾರ್ಡಿಂಗ್√


24) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು?
(ಎ) ಲಾರ್ಡ್ ವೆಲ್ಲಿಂಗಡನ್
(ಬಿ) ಲಾರ್ಡ್ ಡಾಲ್ ಹೌಸಿ
(ಸಿ) ಲಾರ್ಡ್ ಲಿನ್ ಲಿತ್ ಗೋ
(ಡಿ) ಲಾರ್ಡ್ ಹಾರ್ಡಿಂಗ್√


25) ಜಲಿಯನ್ ವಾಲಾ ಬಾಗ್ ದುರಂತದ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
(ಎ) ಲಾರ್ಡ್ ಲಿನ್ ಲಿತ್ ಗೋ
(ಬಿ) ಲಾರ್ಡ್ ಚೆಲ್ಮ್ಸ್ ಫೋರ್ಡ್√
(ಸಿ) ಸರ್ ಚಾರ್ಲ್ಸ್ ಮೆಟಾಕೆಫ್
(ಡಿ) ಲಾರ್ಡ್ ಹಾರ್ಡಿಂಗ್


26) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ  ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಆಯೋಗದ ನೇಮಕ ಮಾಡಲಾಯಿತು?
(ಎ) ಲಾರ್ಡ್ ಲಾನ್ಸ್ ಡೌನ್ √
(ಬಿ) ಲಾರ್ಡ್ ಡಫರಿನ್
(ಸಿ) ಲಾರ್ಡ್ ಕರ್ಜನ್
(ಡಿ) ಲಾರ್ಡ್ ಮಿಂಟೊ.


27) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ ಭಾರತದಲ್ಲಿ ಪ್ರಥಮ ಜನಗಣತಿ ಮಾಡಲಾಯಿತು?
(ಎ) ಲಾರ್ಡ್ ಲಾನ್ಸ್ ಡೌನ್
(ಬಿ) ಲಾರ್ಡ್ ಡಫರಿನ್
(ಸಿ) ಲಾರ್ಡ್ ಮಿಂಟೊ.
(ಡಿ) ಲಾರ್ಡ್ ಮಾಯೋ √


28) ಭಾರತದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ಬ್ರಿಟಿಷ್ ಭಾರತದ ವೈಸರಾಯ್ ಯಾರು?
(ಎ) ಲಾರ್ಡ್ ಲಾನ್ಸ್ ಡೌನ್
(ಬಿ) ಲಾರ್ಡ್ ಡಫರಿನ್
(ಸಿ) ಲಾರ್ಡ್ ಮಾಯೋ √
(ಡಿ) ಲಾರ್ಡ್ ಮಿಂಟೊ.


29) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ ಭಾರತೀಯ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ಪ್ರಾರಂಭಿಸಲಾಯಿತು?
(ಎ) ಲಾರ್ಡ್ ಲಾರೆನ್ಸ್
(ಬಿ) ಲಾರ್ಡ್ ಕ್ಯಾನಿಂಗ್
(ಸಿ) ಲಾರ್ಡ್ ಮಿಂಟೊ.
(ಡಿ) ಲಾರ್ಡ್ ಡಾಲ್ ಹೌಸಿ  √


30) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ ಟೆನೆನ್ಸಿ ಕಾಯಿದೆಯನ್ನು ಜಾರಿಗೊಳಿಸಲಾಯಿತು.?
(ಎ) ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ √
(ಬಿ) ಲಾರ್ಡ್ ಕ್ಯಾನಿಂಗ್
(ಸಿ) ಲಾರ್ಡ್ ಮಾಯೋ
(ಡಿ) ಲಾರ್ಡ್ ಡಾಲ್ ಹೌಸಿ.

Wednesday, 23 March 2016

●.ಬ್ರಿಟಿಷ್ ಭಾರತದಲ್ಲಿದ್ದ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಅವಧಿಯ ಪ್ರಮುಖ ಸಾಧನೆಗಳು / ಕೊಡುಗೆಗಳು / ಘಟನೆಗಳು. (Important Achievements/Contributions/Events of Governor Generals and Viceroys of British India)

 ●.ಬ್ರಿಟಿಷ್ ಭಾರತದಲ್ಲಿದ್ದ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಅವಧಿಯ ಪ್ರಮುಖ  ಸಾಧನೆಗಳು / ಕೊಡುಗೆಗಳು / ಘಟನೆಗಳು.
(Important Achievements/Contributions/Events of Governor Generals and Viceroys of British India)
━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಆಧುನಿಕ ಭಾರತದ ಇತಿಹಾಸ.
(Modern Indian History)

★ ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳ ಪಟ್ಟಿ
(List of Governor General and Viceroy of British India)


— ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಇತಿಹಾಸದ ಬಗ್ಗೆ ಅದರಲ್ಲೂ ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪಯುಕ್ತವಾಗಬಲ್ಲದೆಂಬ ಆಶಯದೊಂದಿಗೆ 'ಸ್ಪರ್ಧಾಲೋಕ'ದಲ್ಲಿ ಬ್ರಿಟಿಷ್ ಭಾರತದಲ್ಲಿದ್ದ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಗಳ  ಅವಧಿಯ ಪ್ರಮುಖ ಸಾಧನೆಗಳನ್ನು, ಅವರ ಕೊಡುಗೆಗಳನ್ನು ಹಾಗೂ ಕೆಲವು ಮಹತ್ವದ  ಘಟನೆಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ.

---» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.  


■.ಬ್ರಿಟಿಷ್ ಭಾರತದಲ್ಲಿದ್ದ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಗಳು :
━━━━━━━━━━━━━━━━━━━━━━━━━━━━━━━━━━━━━━━━


■.ವಾರನ್ ಹೇಸ್ಟಿಂಗ್ಸ್  (1774 - 1785)
━━━━━━━━━━━━━━━━━━━━━━━━
(1) ಮೊದಲ ಬಂಗಾಳದ ಗವರ್ನರ್ ಜನರಲ್ ,
(2) ಇತನ ಅಧಿಕಾರಾವಧಿಯಲ್ಲಿ ರೆಗ್ಯುಲೇಟಿಂಗ್ 1773 ಕಾಯಿದೆಯನ್ನು ಪರಿಚಯಿಸಲಾಯಿತು. ಇದು ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರದ ಅಂತ್ಯಗೊಳಿಸಿತು.
(3) ಇತನನ್ನು ಆಡಳಿತದ ಕೆಟ್ಟ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರದ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು.
(4) ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ.
(5) ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ.


 ■.ಲಾರ್ಡ್ ಕಾರ್ನ್ ವಾಲಿಸ್ (1786 - 1793)
━━━━━━━━━━━━━━━━━━━━━━━━━━━
(1) ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿ ಜಾರಿಗೆ (1793)
(2) ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿಯಾದವು.
(3) ಮೈಸೂರು ರಾಜ ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ಭಾಗಿ.


■.ಲಾರ್ಡ್ ವೆಲ್ಲೆಸ್ಲಿ (1798 - 1805)
━━━━━━━━━━━━━━━━━━━━━━
 (1) ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (policy of Subsidiary Alliance) ಯನ್ನು ಪರಿಚಯಿಸಿದ.
(2) ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶೀಯ ಸಂಸ್ಥಾನ.


■.ಲಾರ್ಡ್ ಮಿಂಟೋ I (1807 - 1813)
━━━━━━━━━━━━━━━━━━━━━━━━
(1) ಮಹಾರಾಜ ರಂಜಿತ್ ಸಿಂಗ್ ನೊಂದಿಗೆ ಅಮೃತಸರ ಒಡಂಬಡಿಕೆ.


■.ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823)
━━━━━━━━━━━━━━━━━━━━━━━━━━━
(1) ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಮೊದಲಿಗ.
(2) ಟೆನೆನ್ಸಿ ಕಾಯಿದೆ (1828)


■.ಲಾರ್ಡ್ ವಿಲಿಯಂ ಬೆಂಟಿಂಕ್ (1828 - 1835)
━━━━━━━━━━━━━━━━━━━━━━━━━━━━
(1) ಭಾರತದ ಮೊದಲ ಗವರ್ನರ್ ಜನರಲ್ ನಾಗಿ ನೇಮಕ. (ಈ ಮೊದಲು ಬಂಗಾಳದ ಗವರ್ನರ್ ಜನರಲ್ ಎಂಬ ಹುದ್ದೆ ಇತ್ತು).
(2) ಸತಿ ಪದ್ಧತಿಯ ನಿಷೇಧ.
(3) ಭಾರತೀಯರನ್ನು ಮತ್ತೆ ಅಧೀನ ನ್ಯಾಯಾಧೀಶರಾಗಿ ನೇಮಕ ಜಾರಿ,
(4) ಇಂಗ್ಲೀಷ್ ಉನ್ನತ ಶಿಕ್ಷಣದ ಭಾಷೆಯಾಯಿತು.
(5) ಮಧ್ಯ ಭಾರತದಲ್ಲಿ ಥಗ್ಗರನ್ನು ನಿಗ್ರಹಿಸಲಾಯಿತು.
(6) 1835ರಲ್ಲಿ ಕಲ್ಕತ್ತಾದಲ್ಲಿ ವೈದ್ಯಕೀಯ ಕಾಲೇಜು ಆರಂಭ.


■.ಸರ್ ಚಾರ್ಲ್ಸ್ ಮೆಟಾಕೆಫ್ (1835 - 1836)
━━━━━━━━━━━━━━━━━━━━━━━━━━━
(1) ಮೊದಲ ಬಾರಿಗೆ ದೇಶೀಯ ಪತ್ರಿಕೆಗಳಿಗೆ ಸ್ವಾತಂತ್ರ್ಯ. ಎಲ್ಲಾ ನಿರ್ಬಂಧಗಳನ್ನು ರದ್ದು. (ಭಾರತದ ವೃತ್ತ ಪತ್ರಗಳ ನಿರ್ಬಂಧ ವಿಮೋಚಕ)


 ■.ಲಾರ್ಡ್ ಆಕ್ಲೆಂಡ್ (1836 - 1842)
━━━━━━━━━━━━━━━━━━━━━━
(1) ಮೊದಲ ಅಫಘಾನ್ ಯುದ್ಧ.


■.ಲಾರ್ಡ್ ಡಾಲ್ ಹೌಸಿ (1848 - 1856)
 ━━━━━━━━━━━━━━━━━━━━━━━━
(1) ಬಾಂಬೆಯಿಂದ ಥಾಣೆಯವರೆಗೆ ಮೊದಲ ಭಾರತೀಯ ರೈಲ್ವೆ ಮಾರ್ಗ ನಿರ್ಮಾಣ. (1853) (2) ಕೋಲ್ಕತ್ತಾದಿಂದ ಆಗ್ರಾದವರೆಗೆ ಟೆಲಿಗ್ರಾಫ್ ತಂತಿಯ ನಿರ್ಮಾಣ. (1853)  
(3) 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಪದ್ಧತಿ ಜಾರಿಗೆ. ಆ ಮೂಲಕ ಸತಾರ (1848), ಜೈಪುರ ಮತ್ತು ಸಂಬಲ್ ಪುರ್ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗ್ಪುರ (1854) ರಾಜ್ಯಗಳನ್ನು ವಶಪಡಿಸಿಕೊಳ್ಳಲಾಯಿತು.
(4) ಶಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಮಾಡಿದ.
(5) ಲೋಕೋಪಯೋಗಿ ಇಲಾಖೆ ರಚನೆ
(6) ವಿಧವಾ ಮರುವಿವಾಹ ಕಾಯಿದೆ, (1856)ಯ ಅನುಷ್ಠಾನದೊಂದಿಗೆ ವಿಧವೆಯರ  ಮರುಮದುವೆ ಕಾನೂನುಬದ್ಧಗೊಳಿಸಲಾಯಿತು.
(7) ಭಾರತೀಯ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ಪ್ರಾರಂಭ (1853)


■.ಲಾರ್ಡ್ ಕ್ಯಾನಿಂಗ್ (1856 - 1862)
━━━━━━━━━━━━━━━━━━━━━━━
(1)1857ರ (ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ) ಸಿಪಾಯಿ ದಂಗೆಯ ಸಮಯದಲ್ಲಿದ್ದ ಗವರ್ನರ್ ಜನರಲ್. ದಂಗೆಯ ನಂತರ ಭಾರತದ ಮೊದಲ ವೈಸ್ರಾಯ್ ನಾಗಿ ನೇಮಕ.
(2) 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಪದ್ಧತಿ ರದ್ದು.
(3) 1861ರಲ್ಲಿ ಭಾರತೀಯ ಕೌನ್ಸಿಲ್ ಕಾಯಿದೆ ಜಾರಿಗೆ.
(4) 1854 ರ 'ವುಡ್ಸ್ ಡಿಸ್ ಪ್ಯಾಚ್' ನ ಪ್ರಕಾರ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಗಳ ಆರಂಭ.
(5) 1858ರ ವಿಕ್ಟೋರಿಯಾ ಮಹಾರಾಣಿಯ ಮಹಾಸನ್ನದು "ಭಾರತದ ಮ್ಯಾಗ್ನಾಕಾರ್ಟಾ" ಪ್ರಕಟ.
(6) 1837ರಲ್ಲಿ ಮೆಕಾಲೆಯು ತಯಾರಿಸಿದ್ದ 'ಭಾರತೀಯ ದಂಡ ಸಂಹಿತೆಯ ಜಾರಿ.(1860)
(7) ಸಿವಿಲ್ ಪ್ರೊಸೀಜರ್ ಕೋಡ್ಸ್ ಜಾರಿ.(1861)


■.ಲಾರ್ಡ್ ಲಾರೆನ್ಸ್ (1864 - 1869)
━━━━━━━━━━━━━━━━━━━━━━
(1) ಎರಡನೇ ಸಿಖ್ ಯುದ್ಧದ ನಂತರ ಇತನು ಪಂಜಾಬ್ ಆಡಳಿತ ಇಲಾಖೆಯ ಸದಸ್ಯನಾದನು. ಮತ್ತು ಪಂಜಾಬಿನಲ್ಲಿ ಹಲವಾರು ಜವಾಬ್ದಾರಿಯುತ ಸುಧಾರಣೆಗಳನ್ನು ಜಾರಿಯಲ್ಲಿ ತಂದು "ಪಂಜಾಬ್ ದ ಸಂರಕ್ಷಕ" ನೆಂದು ಖ್ಯಾತನಾದನು.
(2) 1865 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹೈಕೋರ್ಟ್ ಗಳನ್ನು ಸ್ಥಾಪಿಸಲಾಯಿತು.


■.ಲಾರ್ಡ್ ಮಾಯೋ (1869  - 1872)
━━━━━━━━━━━━━━━━━━━━━━━━
(1) ಭಾರತದಲ್ಲಿ ಪ್ರಥಮ ಜನಗಣತಿ (1871)
(2) 1872 ರಲ್ಲಿ ಅಂಡಮಾನ್ ದ್ವೀಪಗಳ ಭೇಟಿ ಸಂದರ್ಭದಲ್ಲಿ (ಕೈದಿ ಶೇರ್ ಅಲಿಯಿಂದ) ಭಾರತದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ವೈಸರಾಯ್ .
(3) ಕೃಷಿ ಇಲಾಖೆಯ ಸ್ಥಾಪನೆ.


■.ಲಾರ್ಡ್ ಲಿಟ್ಟನ್ (1876- 1880)
━━━━━━━━━━━━━━━━━━━━━━
(1) 1877 ರಲ್ಲಿ ದೆಹಲಿ ದರ್ಬಾರ್ ಆಯೋಜಿಸಿ, ರಾಣಿ ವಿಕ್ಟೋರಿಯಾಗೆ 'ಕೈಸರ್-ಇ-ಹಿಂದ್' ಬಿರುದು ಪ್ರಧಾನ.
(2) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ 'ದೇಶೀಯ ಪತ್ರಿಕಾ ಕಾಯಿದೆ' ಜಾರಿಗೆ (1878)
(3) ಶಸ್ತ್ರಾಸ್ತ್ರ ಕಾಯಿದೆ - (1878).
(4) ಸರ್.ಸಯ್ಯದ್ ಅಹ್ಮದ್ ಖಾನರಿಂದ ಅಲಿಘಡದಲ್ಲಿ ಮಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜು ಸ್ಥಾಪನೆ. (1877)
(5) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು 21 ರಿಂದ 19ಕ್ಕೆ ಇಳಿಸಲಾಯಿತು.  
     

■.ಲಾರ್ಡ್ ರಿಪ್ಪನ್ (1880 - 1884)
━━━━━━━━━━━━━━━━━━━━━━
(1) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ 'ದೇಶೀಯ ಪತ್ರಿಕಾ ಕಾಯಿದೆ' ರದ್ದು. (1882)
(2) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು ಪುನಃ 19 ರಿಂದ 21ಕ್ಕೆ ಏರಿಸಲಾಯಿತು. (3) ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಮೊದಲ ಫ್ಯಾಕ್ಟರಿ ಕಾಯಿದೆ ಅಂಗೀಕಾರ (1881)
(4) 'ಭಾರತೀಯ ಸ್ಥಳೀಯ ಸರ್ಕಾರಗಳ ಪಿತಾಮಹ' - ದೇಶದಲ್ಲಿ ನಗರ ಸಭೆಗಳು, ಜಿಲ್ಲಾ ಮತ್ತು ಸ್ಥಳೀಯ ಮಂಡಳಿಗಳ ಸ್ಥಾಪನೆ. (1882)
(5) ಇಲ್ಬರ್ಟ್ ಬಿಲ್ ಕಾಯಿದೆ ಜಾರಿಗೆ (1883)


■.ಲಾರ್ಡ್ ಡಫೆರಿನ್ನ (1884 - 1894)
━━━━━━━━━━━━━━━━━━━━━━
(1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸಲಾಯಿತು. (1885)


■.ಲಾರ್ಡ್ ಲಾನ್ಸ್ ಡೌನ್  (1888 - 1894)
━━━━━━━━━━━━━━━━━━━━━━━━━
(1) ಭಾರತೀಯ ಕೌನ್ಸಿಲ್ ಕಾಯಿದೆ (1892)
(2) ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಆಯೋಗದ ನೇಮಕ.


■.ಲಾರ್ಡ್ ಕರ್ಜನ್ (1899 - 1905)
━━━━━━━━━━━━━━━━━━━━━━
(1) ಬಂಗಾಳದ ವಿಭಜನೆ (1905)
(2) ಸ್ವದೇಶಿ ಚಳವಳಿಯ ಆರಂಭ.
(3) ಕೃಷಿ ಬ್ಯಾಂಕುಗಳ ಸ್ಥಾಪನೆ. ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ (1904)
(4) ಪುರಾತನ ಸ್ಮಾರಕಗಳ ಸಂರಕ್ಷಣಾ ಕಾಯಿದೆ ಜಾರಿ, ಪುರಾತತ್ವ ಇಲಾಖೆ ರಚನೆ (1901)
(5) ಸರ್. ಥಾಮಸ್ ರಾಲೆ. ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಆಯೋಗ ನೇಮಕ, 'ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ. (1904)
(6) ಪೊಲೀಸ್ ಆಯೋಗ ರಚನೆ.
(7) ಕ್ರಿಮಿನಲ್ ತನಿಖಾ ಇಲಾಖೆ ರಚನೆ.    


■.ಲಾರ್ಡ್ ಮಿಂಟೋ (1905 - 1910)
━━━━━━━━━━━━━━━━━━━━━━━
(1) ಭಾರತೀಯ ಮಂಡಳಿ ಕಾಯಿದೆ -1909 ಅಥವಾ ಮಾರ್ಲೆ-ಮಿಂಟೊ ಸುಧಾರಣೆಗಳನ್ನು ಅಂಗೀಕರಿಸಿತು.
(2) ಮುಸ್ಲಿಂರಿಗೆ ಪ್ರತ್ಯೇಕ ಮತಕ್ಷೇತ್ರ ಪ್ರಾತಿನಿಧ್ಯ.


■.ಲಾರ್ಡ್ ಹಾರ್ಡಿಂಗ್ (1910 - 1916)
━━━━━━━━━━━━━━━━━━━━━━━
(1) ಇಂಗ್ಲೆಂಡ್ ನ ದೊರೆ Vನೇ ಜಾರ್ಜ್ ನ ಪಟ್ಟಾಭಿಷೇಕ - ದೆಹಲಿ ದರ್ಬಾರ್ (1911)
(2) ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು (1911)
(3) ಅನ್ನಿ ಬೆಸೆಂಟ್ ರಿಂದ ಹೋಮ್ ರೂಲ್ ಚಳುವಳಿ ಆರಂಭಿಸಲಾಯಿತು. (1921)
(4) ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ (1915)


■.ಲಾರ್ಡ್ ಚೆಲ್ಮ್ಸ್ ಫೋರ್ಡ್  (1916 - 1921)
━━━━━━━━━━━━━━━━━━━━━━━━━━
(1) ಭಾರತ ಸರ್ಕಾರದ ಕಾಯಿದೆ -1919 (ಮೊಂಟಾಗು ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು)
(2) ರೌಲಟ್ ಕಾಯಿದೆ -1919 ಜಾರಿಗೆ.
(3) ಜಲಿಯನ್ ವಾಲಾ ಬಾಗ್ ದುರಂತ. (ಏಪ್ರೀಲ್ 13, 1919)
(4) ಖಿಲಾಪತ್ ಚಳುವಳಿ.
(5) ಅಸಹಕಾರ ಚಳುವಳಿ.


■.ಲಾರ್ಡ್ ರೆಡಿಂಗ್ (1921 - 1926)
━━━━━━━━━━━━━━━━━━━━━━
(1) ರೌಲಟ್ ಆಕ್ಟ್ಅನ್ನು ರದ್ದುಗೊಳಿಸಲಾಯಿತು.
(2) ಸ್ವರಾಜ್ ಪಕ್ಷ ರಚಿಸಲಾಯಿತು.
(3) ಚೌರಿ ಚೌರ ಘಟನೆ.


■.ಲಾರ್ಡ್ ಇರ್ವಿನ್ (1926 - 1931)
━━━━━━━━━━━━━━━━━━━━━━
(1) ಸೈಮನ್ ಆಯೋಗ ಭಾರತಕ್ಕೆ ಭೇಟಿ - (1928)
(2) ದಂಡಿ ಸತ್ಯಾಗ್ರಹ ಪ್ರಾರಂಭಿಸಲಾಯಿತು ಭಾರತಕ್ಕೆ ಭೇಟಿ ನೀಡಿದರು.
(3) ನಾಗರಿಕ ಅಸಹಕಾರ ಚಳುವಳಿಯನ್ನು 1930 ರಲ್ಲಿ ಆರಂಭಿಸಲಾಯಿತು.
(4) ಗಾಂಧಿ - ಇರ್ವಿನ್ ಒಪ್ಪಂದಕ್ಕೆ ಸಹಿ
(5) ಮೊದಲ ದುಂಡು ಮೇಜಿನ ಸಭೆ.


■.ಲಾರ್ಡ್ ವಿಲ್ಲಿಂಗ್ಡನ್ (1931 - 1936)
━━━━━━━━━━━━━━━━━━━━━━━━
(1) 1931ರಲ್ಲಿ ಎರಡನೇ ಮತ್ತು ಮೂರನೆಯ ದುಂಡು ಮೇಜಿನ ಸಭೆ
(2) ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರಿಂದ ಕಮ್ಯುನಲ್ ಅವಾರ್ಡ್   ಪ್ರಾರಂಭ.
(3) ಪೂನಾ ಒಪ್ಪಂದದ ಸಹಿ.
(4) 1935ರ ಭಾರತ ಸರಕಾರದ ಆಕ್ಟ್ ನ್ನು ಪ್ರಾಂತ್ಯಗಳಲ್ಲಿ ಜಾರಿಗೆ.


■.ಲಾರ್ಡ್ ಲಿನ್ಲಿತ್ಗೋ (1936 - 1944)
━━━━━━━━━━━━━━━━━━━━━━
(1) 2ನೇ ಮಹಾಯುದ್ಧದ ಆರಂಭ.
(2) ಕ್ರಿಪ್ಸ್ ಸಮಿತಿ 1942ರಲ್ಲಿ ಭಾರತಕ್ಕೆ ಭೇಟಿ.
(3) ಭಾರತ ಬಿಟ್ಟು ತೊಲಗಿ ಚಳುವಳಿ.


■.ಲಾರ್ಡ್ ವಾವೆಲ್ (1944 - 1947)
━━━━━━━━━━━━━━━━━━━━━━
(1) ಕ್ಯಾಬಿನೆಟ್ ನಿಯೋಗದ ಯೋಜನೆ.
(2) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಶಿಮ್ಲಾ ಸಮ್ಮೇಳನ.
(3) ಮುಸ್ಲಿಂ ಲೀಗ್ ನಿಂದ ಡೈರೆಕ್ಟ್ ಆ್ಯಕ್ಷನ್ ಡೇ.
(4) ನೆಹರೂ ನೇತೃತ್ವದ ಮಧ್ಯಂತರ ಸರ್ಕಾರದ ರಚನೆ.


■.ಲಾರ್ಡ್ ಮೌಂಟ್ ಬ್ಯಾಟನ್ (ಮಾರ್ಚ್ 1947 - ಆಗಸ್ಟ್ 1947)
━━━━━━━━━━━━━━━━━━━━━━━━━━━━━━━━━━━━
(1) ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್.
(2) ಭಾರತದ ವಿಭಜನೆ.
(3) ಸಿ ರಾಜಗೋಪಾಲಾಚಾರಿ, ಸ್ವಾತಂತ್ರ್ಯ ಭಾರತದ ಭಾರತದ ಮೊದಲ ಮತ್ತು ಕಡೆಯ ಗವರ್ನರ್ ಜನರಲ್ ಉತ್ತರಾಧಿಕಾರಿ.

Tuesday, 15 March 2016

■. ಸಾಮಾನ್ಯ ವಿಜ್ಞಾನ :— ನೈಸರ್ಗಿಕ ಮೂಲವಸ್ತುಗಳ ಪಟ್ಟಿಯಲ್ಲಿರುವ , ಅತ್ಯಂತ ವಿಶಿಷ್ಟ ಎನಿಸಿರುವ ಕೆಲವು ಆಯ್ದ ಧಾತುಗಳ ಸಂಕ್ಷಿಪ್ತ ಪರಿಚಯ: (Important Natural Elements)

■. ಸಾಮಾನ್ಯ ವಿಜ್ಞಾನ :— ನೈಸರ್ಗಿಕ ಮೂಲವಸ್ತುಗಳ ಪಟ್ಟಿಯಲ್ಲಿರುವ , ಅತ್ಯಂತ ವಿಶಿಷ್ಟ ಎನಿಸಿರುವ ಕೆಲವು ಆಯ್ದ ಧಾತುಗಳ ಸಂಕ್ಷಿಪ್ತ ಪರಿಚಯ:
(Important Natural Elements)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


1 . ಜಲಜನಕ :—
ಇದರಷ್ಟು ಸರಳ ಮೂಲವಸ್ತು ಇನ್ನಾವುದೂ ಇಲ್ಲ. ವಿಶ್ವದಲ್ಲಿರುವ ಒಟ್ಟೂ ದ್ರವ್ಯರಾಶಿಯ ಮೂರರ ಎರಡಂಶ ಈ ಧಾತುವಿನದೇ . ತಾರೆಗಳಲ್ಲಿನ ಪ್ರಧಾನ ದ್ರವ್ಯವೂ ಆಗಿರುವ  ಅನಿಲ ರೂಪದ ಈ ಅಲೋಹ ಧಾತುವೇ ಉಳಿದೆಲ್ಲ ಮೂಲವಸ್ತುಗಳ ಹುಟ್ಟಿನ ಆಧಾರ- ಆಕರ.

2 . ಆಮ್ಲಜನಕ :—
ಜಲಜನಕದೊಡನೆ ಬೆರೆತು ` ಜೀವಜಲ ' ವಾದ ನೀರನ್ನು ರೂಪಿಸಿರುವ, ಭೂ ವಾಯುಮಂಡಲದಲ್ಲಿ ಭಾರೀ ಪ್ರಮಾಣದಲ್ಲಿ ಬೆರೆತು (21 % ) ` ಪ್ರಾಣವಾಯು' ಆಗಿರುವ ಮೂಲದ್ರವ್ಯ. ಧರೆಯಲ್ಲಿ ಸಸ್ಯಗಳಿಂದ ತಯಾರಾಗಿ ವಾತಾವರಣಕ್ಕೆ ಬೆರೆವ ಅಲೋಹ ಧಾತು . ಒಟ್ಟಾರೆ ಜೀವಿಗಳ ಬದುಕಿಗೆ ಅತ್ಯಗತ್ಯವಾದ ಮೂಲದ್ರವ್ಯ.

3 . ಚಿನ್ನ:—
ಅತ್ಯಂತ ಜನಪ್ರಿಯ ಅಷ್ಟೇ ಅಮೂಲ್ಯ ಲೋಹೀಯ ಮೂಲವಸ್ತು. ನೇರವಾಗಿ ಪರಿಶುದ್ಧವಾಗಿಯೇ ದೊರಕುವ ಮೋಹಕ ವರ್ಣದ , ಮೃದು ಸ್ವಭಾವದ , ಸಂಪೂರ್ಣ ತಟಸ್ಥ ರಾಸಾಯನಿಕ ಗುಣದ ಈ ಧಾತು ಆಭರಣಗಳಿಗೆ ಅತ್ಯಂತ ಪ್ರಶಸ್ತ .
` ರಾಜಲೋಹ - ಲೋಹರಾಜ ' ಎಂದೇ ಜಗತ್ಪ್ರಸಿದ್ಧ .

4 . ಇಂಗಾಲ :—
ಈ ಅಲೋಹ ಮೂಲವಸ್ತು ಸಕಲ ಜೀವಕೋಶಗಳ ಅವಿಭಾಜ್ಯ ಅಂಗ. ವಿಶ್ವದ ಅತ್ಯಂತ ಗಟ್ಟಿವಸ್ತುವಾದ ವಜ್ರ ಮತ್ತು ಅತೀವ ಮಾಲಿನ್ಯದ ಕಲ್ಲಿದ್ದಿಲು ಇಂಗಾಲದ್ದೇ ಬಹುರೂಪಗಳು .

5 . ಬೆಳ್ಳಿ:—
ಬಹುಬೆಲೆಯ ಬಹೂಪಯೋಗೀ ಮೂಲವಸ್ತು. ಅತಿ ಸಮರ್ಥ ಶುದ್ಧಿಕಾರಕ ; ಶಾಖ ಮತ್ತು ವಿದ್ಯುತ್ ಶಕ್ತಿಯ ಸರ್ವೋತ್ತಮ ವಾಹಕ .

6 . ಕಬ್ಬಿಣ :—
ಭೂಗರ್ಭದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ, ಧಾರಾಳ ಲಭ್ಯ ಲೋಹೀಯ ಧಾತು. ಕೈಗಾರಿಕೆಗಳ, ಕಟ್ಟಡಗಳ ಬೆನ್ನೆಲುಬು . ಯಂತ್ರ- ಉಪಕರಣಗಳ ಜೀವಾಳ. ಕಬ್ಬಿಣದಷ್ಟು ಜನೋಪಯೋಗೀ ಧಾತು ಬೇರೊಂದಿಲ್ಲ .

7 . ಸಿಲಿಕಾನ್:—
ಧರೆಯಲ್ಲಿ ಧಾರಾಳ ಲಭ್ಯತೆಯಲ್ಲಿ ಆಮ್ಲಜನಕದ ನಂತರ ದ್ವಿತೀಯ ಸ್ಥಾನದಲ್ಲಿರುವ ಅಲೋಹ ಧಾತು. ಎಲ್ಲ ಶಿಲೆಗಳಲ್ಲಿ ಮರಳಲ್ಲಿ ಜೇಡಿಮಣ್ಣಲ್ಲಿ ಈ ಧಾತುವೇ ಪ್ರಧಾನ ಘಟಕ . ಗಾಜು , ಕಂಪ್ಯೂಟರ್ ಚಿಪ್ , ಸೌರಕೋಶ , ಗಡಿಯಾರ ಇತ್ಯಾದಿಗಳಲ್ಲೆಲ್ಲ ಈ ಮೂಲವಸ್ತುವಿನದೇ ಮೂಲಸತ್ವ .

8 . ಕಾಲ್ಷಿಯಂ :—
ಆಮ್ಲಜನಕ , ನೀರು ಮತ್ತು ಇಂಗಾಲಗಳೊಡನೆ ತೀವ್ರವಾಗಿ ವರ್ತಿಸುವ ಲೋಹೀಯ ಮೂಲವಸ್ತು . ಪ್ರಾಣಿಗಳು ಮೂಳೆ ಹಲ್ಲು ಮತ್ತು ಮೃದ್ವಂಗಿ ಚಿಪ್ಪುಗಳ ಪ್ರಧಾನ ಅಂಶವೆಲ್ಲ ಈ ಧಾತುವೇ .

9 . ಸಾರಜನಕ:—
ಭೂ ವಾಯುಮಂಡಲದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ (ಶೇ 78 ಭಾಗ ) ಅಲೋಹ ಧಾತು . ಸಸ್ಯ ಸಾಮ್ರಾಜ್ಯದ ಒಂದು ಪ್ರಧಾನ ಪೋಷಕ ವಸ್ತು ಕೂಡ. ಮಿಂಚುಗಳಿಂದ ಪ್ರತ್ಯೇಕಗೊಂಡು , ಮಳೆ ನೀರಲ್ಲಿ ಬೆರೆತು ಸುರಿದು ಸಸ್ಯಗಳಿಗೆ ಒದಗುವ ಅತ್ಯವಶ್ಯ ಮೂಲದ್ರವ್ಯ.

10 . ಪಾದರಸ:—
ಸಾಮಾನ್ಯ ತಾಪಮಾನಗಳಲ್ಲಿ ದ್ರವರೂಪದಲ್ಲಿರುವ ಏಕೈಕ ಲೋಹ (ಅಲೋಹ ಧಾತು ಬ್ರೋಮೀನ್ ಕೂಡ ಇದೇ ಗುಣ ಹೊಂದಿದೆ). ಕರಗಿದ ಬೆಳ್ಳಿಯಂಥದೇ ರೂಪ ಹಾಗಾಗಿ ` ಬೆಳ್ಳಿನೀರು ' ಎಂದೂ ಪ್ರಸಿದ್ಧ. ಜೀವಿಗಳಿಗೆ ವಿಷಕರ, ಅಪಾಯಕರ ಧಾತು.

11 . ಯುರೇನಿಯಂ :—
ಸುಪ್ರಸಿದ್ಧ ವಿಕಿರಣಪಟು ಧಾತು . ಅಣು ವಿದ್ಯುತ್ ಸ್ಥಾವರಗಳ ಪ್ರಧಾನ ಇಂಧನ . ಪ್ರಸ್ತುತ ಜಗದ ಶೇಕಡ ಹದಿನೇಳರಷ್ಟು ವಿದ್ಯುದುತ್ಪಾದನೆಗೆ ಈ ಲೋಹೀಯ ಧಾತುವಿನ ಬಳಕೆ . ` ಆಧುನಿಕ ಜಗದ ಸ್ವಚ್ಛ ಇಂಧನ ' ಎಂದೇ ಖ್ಯಾತ. ನಿಯಂತ್ರಣ ತಪ್ಪಿದರೆ ಸರ್ವನಾಶ ತರಬಲ್ಲ ಮೂಲದ್ರವ್ಯ .

12 . ` ಲೀಥಿಯಂ ':—
 ಅತ್ಯಂತ ಹಗುರ ಲೋಹೀಯ ಧಾತುವಾಗಿ , ` ಆಸ್ಮಿಯಂ ' ಅತ್ಯಂತ ಭಾರವಾದ ಲೋಹವಾಗಿ, ` ಅಸ್ಟಟೈನ್ ' ಅತ್ಯಂತ ವಿರಳ ಮೂಲವಸ್ತುವಾಗಿ (ಇಡೀ ಧರೆಯಲ್ಲಿ ಈ ಧಾತುವಿನ ಪ್ರಮಾಣ ಮುವ್ವತ್ತು ಗ್ರಾಂ ಮೀರುವುದಿಲ್ಲ ) ವಿಶಿಷ್ಟ ದಾಖಲೆಗಳನ್ನು ಸೃಷ್ಟಿಸಿವೆ! ಗರಿಷ್ಠ ವಿಷಕರ ಧಾತುವಾಗಿ ` ಪ್ಲುಟೋನಿಯಂ ' ವಿಶಿಷ್ಟ ಸ್ಥಾನ ಗಳಿಸಿದೆ .

●. ಕರ್ನಾಟಕ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಪ್ರಬಂಧ : (KSP PSI Essay writing Notes) / ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :— ಪಶ್ಷಿಮಘಟ್ಟ ಮತ್ತು ಜೀವವೈವಿಧ್ಯ ರಕ್ಷಣೆ (Western Ghats and Biodiversity Conservation)

 ■. ಪಶ್ಷಿಮಘಟ್ಟ ಮತ್ತು ಜೀವವೈವಿಧ್ಯ ರಕ್ಷಣೆ :
(Western Ghats and Biodiversity Conservation)
━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಕರ್ನಾಟಕ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಪ್ರಬಂಧ :
(KSP PSI Essay writing Notes)


●.ಪಶ್ಚಿಮಘಟ್ಟ ಏಷ್ಯಾದಲ್ಲೇ ಅತ್ಯಂತ ಪ್ರಶಸ್ತ ಜೀವವೈವಿಧ್ಯ ತಾಣ. ಇದಕ್ಕೆ ಸಹ್ಯಾದ್ರಿ ಪರ್ವತ ಎಂಬ ಹೆಸರೂ ಇದೆ. ಮಹಾರಾಷ್ಟ್ರ- ಗುಜರಾತ್‍ಗಳ ಗಡಿಪ್ರದೇಶದಲ್ಲಿ ತಪತಿ ನದಿಯಿಂದ ಆರಂಭವಾಗಿ ದಕ್ಷಿಣದಲ್ಲಿ ಕನ್ಯಾಕುಮಾರಿ ವರೆಗೂ ಹಬ್ಬಿದೆ. ಒಟ್ಟು 1600 ಕಿಲೋಮೀಟರ್ ಉದ್ದದ ಪರ್ವತಶ್ರೇಣಿ ಐದು ರಾಜ್ಯಗಳಲ್ಲಿ ಹಬ್ಬಿದೆ. ಆದರೆ ಒಟ್ಟುಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲೇ ಇದ್ದು, 60 ಸಾವಿರ ಚದರ ಕಿಲೋಮೀಟರ್ ವ್ಯಾಪಿಸಿದೆ. ಇಲ್ಲಿಂದ ಹುಟ್ಟುವ ನದಿಗಳು ದೇಶದ ಶೇಕಡ 40ರಷ್ಟು ಜಲಾನಯನ ಪ್ರದೇಶವನ್ನು ಆವರಿಸಿದೆ. ವಿಶ್ವದ ಅತ್ಯುನ್ನತ ಜೀವವೈವಿಧ್ಯ ನೆಲೆಯಾಗಿರುವ ಪಶ್ಚಿಮಘಟ್ಟದಲ್ಲಿ 5 ಸಾವಿರ ತಳಿಯ ಗಿಡಮರಗಳಿವೆ. 139 ಬಗೆಯ ಸಸ್ತನಿಗಳು, 508 ವಿಧದ ಪಕ್ಷಿಸಂಕುಲ, 179 ಪ್ರಕಾರದ ದ್ವಿಚರಿಗಳು, 6000ಕ್ಕೂ ವಿವಿಧ ಜಾತಿಯ ಚಿಟ್ಟೆಗಳು, 290ಕ್ಕೂ ಅಧಿಕ ಸಿಹಿ ನೀರಿನ ಮೀನಿನ ತಳಿಗಳು, ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ 325 ತಳಿಗಳು ಈ ಪ್ರದೇಶದಲ್ಲಿವೆ. ಬಂಗಾಳಕೊಲ್ಲಿ ಸೇರುವ ತಾಮ್ರಪರ್ಣಿ, ಗೋದಾವರಿ, ಕೃಷ್ಣಾ, ಕಾವೇರಿ, ಪಶ್ಚಿಮಾಭಿಮುಖವಾಗಿ ಹರಿಯುವ ಮಾಂಡವಿ, ಜವಾರಿ, ಶರಾವತಿ, ನೇತ್ರಾವತಿದಂಥ ನದಿಗಳ ಉಗಮಸ್ಥಾನ. ಹಲವು ಜಲವಿದ್ಯುತ್ ಯೋಜನೆಗಳ ನೆಲೆ. ಆಕರ್ಷಕ ಜಲಪಾತಗಳ ಖಣಿ.

     

●.ದಟ್ಟ ಕಾಡುಗಳಿಂದ ಕೂಡಿದ ದುರ್ಗಮ ಪ್ರದೇಶದಲ್ಲಿ ಮೊದಲು ಕೃಷಿ ಚಟುವಟಿಕೆ ಇರಲಿಲ್ಲ. ಆದರೆ ಬ್ರಿಟಿಷರ ಆಗಮನದ ನಂತರ ವಾಣಿಜ್ಯ ಬೆಳೆಗಳಿಗಾಗಿ ಕಾಡು ಕಡಿದು ಇಡೀ ಪ್ರದೇಶ ಬದಲಾಯಿತು. ಇಂಥ ಭವ್ಯ, ರಮ್ಯ ಸುಂದರ ತಾಣವನ್ನು ಕಾಪಾಡಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಜನ ಚಳವಳಿಯನ್ನೂ ಕಂಡಿದ್ದೇವೆ. ನಿಸಾರ್ ಅಹ್ಮದ್ ಅವರ ಪಶ್ಚಿಮಘಟ್ಟದ ದಟ್ಟದ ಬೆಟ್ಟದ ಮರಗಳನುಳಿಸಲು ನಡೆನಡೆವಾ…ಎಂಬ ಸಾಲುಗಳು ಹೋರಾಟಕ್ಕೆ ಸ್ಫೂರ್ತಿ ತುಂಬಿದೆ. ಕೇಂದ್ರ ಸರ್ಕಾರವೂ ಇದರ ಸಂರಕ್ಷಣೆಗಾಗಿ 13 ರಾಷ್ಟ್ರೀಯ ಉದ್ಯಾನವನ, 2 ಕಾಯ್ದಿಟ್ಟ ಜೀವಗೋಲ, ರಕ್ಷಿತಾರಣ್ಯ, ವನ್ಯಜೀವಿ ಧಾಮಗಳನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ 2012ರ ಜುಲೈ ಒಂದರಂದು ಯುನೆಸ್ಕೊ, ಪಶ್ಚಿಮಘಟ್ಟವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಇಂಥ ಮಹತ್ವದ ಪಶ್ಚಿಮಘಟ್ಟ ಇಂದು ಅಪಾಯದ ಅಂಚಿನಲ್ಲಿದೆ. ಇದರ ರಕ್ಷಣೆ ದೇಶದ ಆದ್ಯತೆಯಾಗಬೇಕು. ಪಶ್ಚಿಮಘಟ್ಟವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡನ್ನು ಒಳಗೊಂಡಿದೆ.


●.ಅಪಾಯ ಏಕೆ?

—ರಾಜ್ಯದ 258 ಕಿರು ಜಲವಿದ್ಯುತ್ ಯೋಜನೆಗಳ ಪೈಕಿ 61 ಪಶ್ಚಿಮಘಟ್ಟದ ಒಡಲಲ್ಲಿವೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಪಶ್ಚಿಮಘಟ್ಟದ ನದಿಗಳಿಗೆ ಅಣೆಕಟ್ಟು ನಿರ್ಮಾಣವಾಗಲಿದೆ. ಇದು ಪಶ್ಚಿಮಘಟ್ಟದ ನಾಶ ಹಾಗೂ ಮನುಕುಲದ ನಾಶಕ್ಕೆ ನಾಂದಿಯಾಗಲಿದೆ. ಅಪರೂಪದ ಪ್ರಾಣಿಪ್ರಬೇಧ, ಪಕ್ಷಿಸಂಕುಲ, ಜಲಚರ, ಸಸ್ಯರಾಶಿ ಪುಸ್ತಕಗಳಿಗಷ್ಟೇ ಸೀಮಿತವಾಗಲಿದೆ ಎನ್ನುವುದು ಹಿರಿಯ ಸಂಶೋಧಕ ಡಾ.ಎನ್.ಎ.ಮಧ್ಯಸ್ಥ ಅವರ ಅಭಿಪ್ರಾಯ. ಪರಿಸರಕ್ಕೂ ಸಾಕಷ್ಟು ಹಾನಿಯಾಗಲಿದ್ದು, ವಿದ್ಯುತ್ ಉತ್ಪಾದನೆ ಯಂತ್ರಗಳ ಸದ್ದು, ನೂರಾರು ಪ್ರಬೇಧಗಳನ್ನು ಬಲಿ ಪಡೆಯಲಿದೆ.

●.ಪಶ್ಚಿಮಘಟ್ಟ ಭಾರತಕ್ಕೆ ನಿಸರ್ಗದತ್ತವಾಗಿ ಬಂದಿರುವ ವರದಾನ. ಅದು ವಿಶ್ವದ ಆಸ್ತಿ. ಈ ಪರಿಸರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದರ ಉಳಿವಿಗಾಗಿ ಕೇಂದ್ರ ಸರ್ಕಾರ ಮುಂದಾಗಿದ್ದು, ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಕುರಿತ ಎರಡು ತಜ್ಞ ವರದಿಗಳು ಸರ್ಕಾರದ ಮುಂದಿವೆ. ಒಂದು ಕೆಲ ವರ್ಷದ ಹಿಂದೆ ಪರಿಸರ ತಜ್ಞ ಗಾಡ್ಗೀಳ್ ಸಲ್ಲಿಸಿದ ವರದಿ; ಇನ್ನೊಂದು ಕಸ್ತೂರಿರಂಗನ್ ವರದಿ. ಈ ವರದಿಗಳ ಸುತ್ತವೇ ಪಶ್ಚಿಮಘಟ್ಟ ರಕ್ಷಣೆ ಕುರಿತ ಯೋಜನೆಗಳ ಚರ್ಚೆ ಸುತ್ತುತ್ತಿದೆ. ಗಾಡ್ಗೀಳ್ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ, ಸೂಕ್ತ ಆದೇಶ ನೀಡಬೇಕು ಎಂಬ ಮನವಿ ಕೇಂದ್ರ ಹಸಿರು ಪಂಚಾಯ್ತಿಯ ಮುಂದಿದೆ. ಆದರೆ ಇದುವರೆಗೂ ವರದಿ ಪರಿಶೀಲನೆ ನಡೆದಿಲ್ಲ.

●.ಎರಡನೇಯದು ಸರ್ಕಾರವೇ ಪ್ರಕಟಿಸಿರುವ ನಿಯಮಗಳಿಗೆ ಆಧಾರವಾದ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ವರದಿ. (15, ಏಪ್ರಿಲ್ 2013) ಸರ್ಕಾರದ ಪ್ರಕಟಣೆಯನ್ನು ಹಲವಾರು ಪರಿಸರವಾದಿ ಸಂಘಟನೆಗಳು ವಿರೋಧಿಸಿದ್ದು, ಇದರ ಜತೆಗೇ ಗಾಡ್ಗೀಳ್  (ಆಗಸ್ಟ್ 13, 2011ರಲ್ಲಿ ಸಲ್ಲಿಕೆ) ವರದಿಯಲ್ಲಿ ಅಡಕವಾಗಿರುವ ಅಂಶಗಳನ್ನೊಳಗೊಂಡ ನಿಯಮಗಳನ್ನೂ ಪ್ರಕಟಿಸಬೇಕು ಎನ್ನುವುದು ಪರಿಸರವಾದಿಗಳ ವಾದ.

●.ಕೇರಳದ ವಯನಾಡ್ ಸೀಮೆಯಲ್ಲಿ ಸರ್ಕಾರದ ನಿಯಮಾವಳಿ ವಿರುದ್ಧ ಆಂದೋಲನ ಆರಂಭವಾಗಿದೆ. ಗಾಡ್ಗೀಳ್ ವರದಿಯನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ ಎಂಬ ಗುಮಾನಿಯೇ ವಿವಾದದ ಮೂಲ. ಪಶ್ಚಿಮಘಟ್ಟದ ಸೀಮೆಯಲ್ಲಿ ಬಾಳಿ ಬದುಕಬೇಕಾದ ಸಣ್ಣ ಸಮುದಾಯಗಳಿಗೆ ನೀಡಬೇಕಾದ ರಕ್ಷಣೆ ಹಾಗೂ ಪರಿಸರ ರಕ್ಷಣೆ ವಿಚಾರದಲ್ಲಿ ಸಮತೋಲನ ಸಾಧಿಸುವುದು ಹಾಗೂ ವಿವಾದ ದೊಡ್ಡ ಸ್ವರೂಪಕ್ಕೆ ತಿರುಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ್ದು ತುರ್ತು ಅಗತ್ಯ.

●.ಕೇಂದ್ರ ಪರಿಸರ ಸಚಿವರಾದ ಪ್ರಕಾಶ್ ಜಾವದ್‍ಕರ್ ಪ್ರಕಾರ ಈ ನಿಯಮಗಳು ಅಂತಿಮವಲ್ಲ; ಅದಕ್ಕೆ ಆಕ್ಷೇಪ, ತಿದ್ದುಪಡಿ ಸಲಹೆಗಳನ್ನು ನೀಡಲು ಅವಕಾಶವಿದೆ. ಆಸಕ್ತ ಎಲ್ಲರೂ ತಮ್ಮ ನಿಲುವುಗಳನ್ನು ವಿವರವಾಗಿ ಸಚಿವಾಲಯಕ್ಕೆ ಕಳುಹಿಸಿದರೆ ಮಾತ್ರ ವಿವಾದ ಬಗೆಹರಿಸಲು ಸಾಧ್ಯ.

●.ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಕಸ್ತೂರಿರಂಗನ್ ವರದಿ ಪ್ರಕಾರ, ಈ ಪ್ರದೇಶದ ಶೇಕಡ 37ರಷ್ಟು ಭಾಗದಲ್ಲಿ ಯಾವುದೇ ಗಣಿಗಾರಿಕೆ, ವಿದ್ಯುತ್ ಉತ್ಪಾದನೆ, ಬೃಹತ್ ಕಟ್ಟಡಗಳ ನಿರ್ಮಾಣ ಮಾಡುವಂತಿಲ್ಲ. ಪರಿಸರವಾದಿಗಳು ಈ ವರದಿಯ ಹಲವು ಅಂಶಗಳನ್ನು ವಿರೋಧಿಸುತ್ತಾರೆ. ಆದರೆ ಜನಜೀವನದ ಸ್ಥಿತಿಗತಿ, ನಿಸರ್ಗದತ್ತವಾದ ಸಂಪತ್ತನ್ನು ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವನ್ನು ಕಡೆಗಣಿಸುವಂತಿಲ್ಲ. 99 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣದ ಪ್ರದೇಶದಲ್ಲಿ ಪರಿಸರ ತಕ್ಷಣಾ ಕ್ರಮಗಳ ಕುರಿತು ವರದಿ ಏನನ್ನೂ ಹೇಳಿಲ್ಲ. ತುಂಬಾ ಸೂಕ್ಷ್ಮ ಸ್ಥಿತಿಯನ್ನು ಎದುರಿಸುತ್ತಿರುವ ಪ್ರದೇಶಗಳ ಕಡೆಯೇ ಸಮಿತಿ ಗಮನ ಕೇಂದ್ರೀಕರಿಸಿತ್ತು. ಇಲ್ಲೂ ಜನ ವಾಸಿಸುತ್ತಿದ್ದು, ಅವರನ್ನು ಬೇರೆ ಕಡೆಗೆ ಕಳುಹಿಸುವಂತಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

●.ಇಡೀ ಪಶ್ಷಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮಪ್ರದೇಶ ಎಂದು ಹೇಳಿದ್ದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಇದರ ಪರಿಸರ ವಿಭಾಗದ ಮುಖ್ಯಸ್ಥರಾಗಿದ್ದ ಪರಿಸರವಾದಿ ಮಾಧವ ಗಾಡ್ಗೀಳ್ ಸಮಿತಿಯ ವರದಿ ಅನುಷ್ಠಾನ ಯೋಗ್ಯವಲ್ಲ ಎಂಬ ಟೀಕೆ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ಸಮಿತಿ ರಚಿಸಲಾಗಿದ್ದು, ಇದು ಒಟ್ಟು ಪ್ರದೇಶದ ಶೇ. 37 ಭಾಗ ಮಾತ್ರ ಸೂಕ್ಷ್ಮ ಪ್ರದೇಶ ಎಂದು ಅಭಿಪ್ರಾಯಪಟ್ಟಿದೆ.

●.ಕೈಗಾರಿಕೆಗಳಿಗೆ ಮಾರಕ, ಅರಣ್ಯವಾಸಿ ಬುಡಕಟ್ಟು ಜನರ ಹಕ್ಕುಗಳ ದಮನ ಹಾಗೂ ಸಂರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ದಮನಿಸಿ ಪ್ರಾಧಿಕಾರದ ರಚನೆಗೆ ಶಿಫಾರಸು ಮಾಡಿದೆ. ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಕೇಂದ್ರ- ರಾಜ್ಯಗಳ ಅಧಿಕಾರವನ್ನು ಘರ್ಷಣೆಗೆ ಹೆಚ್ಚಿದೆ ಎಂಬ ವ್ಯವಸ್ಥಿತ ಅಪಪ್ರಚಾರ ಗಾಡ್ಗೀಳ್ ವರದಿ ವಿರುದ್ಧ ನಡೆಯಿತು. ಇಂಥ ವಿವಾದಾತ್ಮಕ ಅಂಶಗಳನ್ನಷ್ಟೇ ಸ್ಥಳೀಯ ಭಾಷೆಗಳಿಗೆ ತರ್ಜುಮೆಗೊಳಿಸಿ, ಹಂಚಿರುವುದೇ ವಿವಾದಕ್ಕೆ ಮೂಲಕಾರಣ.
ಅರಣ್ಯವಾಸಿ ಬುಡಕಟ್ಟು ಜನ ಮತ್ತು ರೈತರನ್ನು ಗಾಡ್ಗೀಳ್ ವರದಿ ವಿರುದ್ಧ ಎತ್ತಿಕಟ್ಟಿದವರು ಯಾರು, ಕೈಗಾರಿಕೆ, ಗಣಿಗಾರಿಕೆ, ರಾಜಕಾರಣಿಗಳ ಅನೈತಿಕ ಸಂಬಂಧದ ಲಾಬಿಗೆ ಕೇಂದ್ರ ಸರ್ಕಾರ ಮಣಿಯಿತೇ ಎಂಬ ಸಂಶಯ ಸಾರ್ವಜನಿಕರಲ್ಲಿದೆ.

●.ಹಿಮಾಲಯಕ್ಕಿಂತಲೂ ಪುರಾತನ ಎನಿಸಿಕೊಂಡಿರುವ ಈ ಪರ್ವತ ಶ್ರೇಣಿ ಜೀವವೈವಿಧ್ಯ ಸಂಪತ್ತಿನ ಖಜಾನೆ. ಇದನ್ನು ಪ್ರತ್ಯೇಕವಾಗಿ ಮುಚ್ಚಿಟ್ಟು ಕಾಪಾಡಿಕೊಳ್ಳಬೇಕು. 15 ಕೋಟಿ ವರ್ಷ ಹಿಂದೆ ಅಸ್ತಿತ್ವಕ್ಕೆ ಬಂದಿತೆನ್ನಲಾದ ಈ ಪ್ರಾಕೃತಿಕ ಸಿರಿ ಸಂಪತ್ತಿನ ರಕ್ಷಣೆ ಎಲ್ಲರ ಹೊಣೆ.

●.ಹೊಸ ರೈಲ್ವೆ ಮಾರ್ಗ, ಹೆದ್ದಾರಿ, ಜಲವಿದ್ಯುತ್ ಯೋಜನೆಗಳಿಗೂ ಇಲ್ಲಿ ಆಸ್ಪದ ನೀಡಬಾರದು ಎಂದು ಗಾಡ್ಗೀಳ್ ಸಮಿತಿ ಪ್ರತಿಪಾದಿಸಿದೆ. ಆದರೆ ಕಸ್ತೂರಿರಂಗನ್ ವರದಿ ಗಣಿನಿಷೇಧವನ್ನು ಶೇಕಡ 50ಕ್ಕೆ ಸೀಮಿತಗೊಳಿಸಿದೆ. ಗುಂಡ್ಯ ಹಾಗೂ ಕೇರಳದ ಅತ್ತಿರಹಳ್ಳಿ ಜಲವಿದ್ಯುತ್ ಯೋಜನೆಗಳಿಗೆ ಹಸಿರು ನಿಶಾನೆ ತೋರಿದೆ. ಗಾಡ್ಗೀಳ್ ಸಮಿತಿಯ ಜನತಾಂತ್ರಿಕ ಸಂವಾದವನ್ನು ದಮನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿವೆ ಎನ್ನುವುದು ಮಾಧವ ಗಾಡ್ಗೀಳ್ ಅವರ ಆರೋಪ. ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ಪಡೆದೇ ವರದಿ ಸಿದ್ಧಪಡಿಸಲಾಗಿತ್ತು ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಅತ್ಯಾಧುನಿಕ ಉಪಗ್ರಹ ಬಿಂಬ ತಂತ್ರಜ್ಞಾನ ಬಳಸಿ ಪಶ್ಚಿಮಘಟ್ಟದ ಅಧ್ಯಯನ ನಡೆಸಲಾಗಿದೆ. ಜನವಸತಿ, ಕೃಷಿ ಪ್ರದೇಶ ಹಾಗೂ ಪ್ಲಾಂಟೇಷನ್‍ಗಳು ಶೇ. 58.44 ಭಾಗದಲ್ಲಿವೆ. ಉಳಿದ 41.56 ಭಾಗದ ಶೇಕಡ 90 ಭಾಗ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿರಂಗನ್ ವಾದಿಸುತ್ತಾರೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಿಷಿದ್ಧ; ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪಿಸುವಂತಿಲ್ಲ. ರಸಗೊಬ್ಬರ, ತೈಲಾಗಾರ, ಚರ್ಮೋದ್ಯಮ, ತಾಮ್ರದ ಕುಲುಮೆ ಆರಂಭಿಸುವಂತಿಲ್ಲ. ಆದರೆ ಆಹಾರ ಮತ್ತು ಹಣ್ಣು ಸಂರಕ್ಷಣೆ ಘಟಕ ಆರಂಭಿಸಬಹುದು ಎಂದು ವರದಿ ಹೇಳಿದೆ.


     —ಪಶ್ಷಿಮಘಟ್ಟದಲ್ಲಿ ಮಾನವ ನಿರ್ಮಿತ ಬಂಡವಾಳ ಬೆಳೆಯುತ್ತಿದೆ. ಪ್ರಕೃತಿ ನಿರ್ಮಿತ ಖಜಾನೆ ಬರಿದಾಗುತ್ತಿದೆ ಎಂಬ ಗಾಡ್ಗೀಳ್ ವರದಿಯ ಕಾಳಜಿಯನ್ನು ಅಭಿವೃದ್ಧಿಗೆ ಮಾರಕ ಎಂದು ಹೇಳಿ ಮೂಲೆಗುಂಪು ಮಾಡಲಾಗಿದೆ. ಇಂಥ ಚರ್ಚೆಯನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲ ಹಿತಾಸಕ್ತಿಗಳ ಹುನ್ನಾರವೂ ಪಶ್ಚಿಮಘಟ್ಟದ ರಕ್ಷಣೆಗೆ ಮಾರಕವಾಗಿದೆ. ಇಂಥ ಅಪೂರ್ವ ತಾಣ ರಕ್ಷಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಹಾಗೂ ಸಮುದಾಯಿಕ ಚಳವಳಿ ಅನಿವಾರ್ಯ. ಇತ್ತೀಚೆಗೆ ಕೇಂದ್ರ ಸರ್ಕಾರ 04-09-2015ರಂದು ಹೊಸ ಅಧಿಸೂಚನೆಯೊಂದನ್ನು ಹೊರತರುತ್ತಾ ಕೇಂದ್ರ ಪರಿಸರ ಮಂತ್ರಿ ಪ್ರಕಾಶ್ ಜಾದವ್‍ಕರ್ ಪಶ್ಚಿಮಘಟ್ಟದ ಎಲ್ಲಾ ಜೀವವೈವಿಧ್ಯಗಳನ್ನು ಉಳಿಸಿಕೊಳ್ಳುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಧರ್ಮೋರಕ್ಷತಿ ರಕ್ಷಿತಾಃ ಎಂಬಂತೆ ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ. ಮನುಷ್ಯನಿಗೆ ಶುದ್ಧ ಗಾಳಿ, ಶುದ್ಧ ನೀರು, ಶಾಂತ ಜೀವನವನ್ನು ನೀಡುವುದಕ್ಕೆ ಪರಿಸರವು ಸದಾ ತನ್ನ ಕೊಡುಗೆಯನ್ನು ನೀಡುತ್ತಲೇ ಬಂದಿದೆ.

(Courtesy : Universal Coaching Centre. Bangalore) 

Thursday, 3 March 2016

Updated**■."ಸ್ಪರ್ಧಾಲೋಕ" — ಈಗ WhatsApp, Telegram ಮತ್ತು Facebook ಗಳಲ್ಲಿ.

■."ಸ್ಪರ್ಧಾಲೋಕ" — ಈಗ WhatsApp, Telegram ಮತ್ತು Facebook ಗಳಲ್ಲಿ.
━━━━━━━━━━━━━━━━━━━━━━━━━━━━━━━━━━━━━━━━━━

ಹಲೋ ಗೆಳೆಯರೆ...

●. ಸ್ಪರ್ಧಾಲೋಕವನ್ನು ಸಾಧ್ಯವಾದಷ್ಟು ಮಟ್ಟಿಗೆ ಇನ್ನೂ ಪರಿಣಾಮಕಾರಿಯಾಗಿ ಜ್ಞಾನ ಹಂಚಿಕೊಳ್ಳುವಂತಾಗಲು... ಜ್ಞಾನದಾಹಿಗಳಿಗೆ, ಪ್ರತಿಭೆಗಳಿಗೆ ನಮ್ಮ ಮಾತೃಭಾಷೆಯಾದ  ಕನ್ನಡದಲ್ಲಿ  ತ್ವರಿತವಾಗಿ ಜ್ಞಾನ ಮಾಹಿತಿಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಉಪಯುಕ್ತ ನೋಟ್ಸ್ ನ್ನು ಪಡೆಯಲು ಸಹಕಾರಿಯಾಗಲೆಂದು ನಾನು ಸಾಮಾಜಿಕ ಜಾಲತಾಣಗಳಾದ WhatsApp, Telegram ಮತ್ತು Facebook ಗಳನ್ನು  ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಒಂದು ಚಿಕ್ಕ ಪ್ರಯತ್ನ ಕೈಗೊಂಡಿದ್ದೇನೆ.

●. ಇದು ನಿರ್ದಿಷ್ಟ ಗುರಿಗಳನ್ನು ಹೊಂದಿದ ಸ್ಪರ್ಧಾರ್ಥಿಗಳನ್ನು ಒಂದೆಡೆಗೆ ಸಂಘಟಿಸಿ ಆ ಮೂಲಕ ಜ್ಞಾನದ ಸರ್ವ ಎಲ್ಲೆಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಲು ಸಹಕಾರಿಯಾಗುವುದೆಂದು ನನ್ನ ಅಭಿಪ್ರಾಯ.

●. ಈ ಗ್ರುಪ್ ಕೇವಲ ಜ್ಞಾನ ಹಂಚಿಕೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ರೀತಿಯ (Chatting) ಸಂಭಾಷಣೆಗೆ, ಯಾವುದೇ ವ್ಯಕ್ತಿಯ ಬಗ್ಗೆ, ರಾಜಕಾರಣಿಗಳ ಬಗ್ಗೆ, ರಾಜಕೀಯ ಪಕ್ಷಗಳ ಬಗ್ಗೆ, ಧರ್ಮಗುರುಗಳ ಬಗ್ಗೆ, ಧರ್ಮದ ಬಗ್ಗೆ, ಸಂಸ್ಥೆಗಳ ಬಗ್ಗೆ ಟೀಕೆ ಟಿಪ್ಪಣಿಗಳಿಗೆ ಇಲ್ಲಿ ಆಸ್ಪದವಿಲ್ಲ.

●.ವಿಶೇಷವಾಗಿ ಐಎಎಸ್ (IAS) ಮತ್ತು ಕೆಎಎಸ್ (KAS) ನಂಥ  ಮುಖ್ಯ ಪರೀಕ್ಷೆಗಳಿಗೆ (MAIN EXAMS) ಮುಖ್ಯವಾಗಿ ಕನ್ನಡ ಮಾತೃಭಾಷೆಯಲ್ಲಿ  ಸಿದ್ಧತೆ ನಡೆಯುತ್ತಿರುವ ಅಭ್ಯರ್ಥಿಗಳಿಗಾಗಿ  ವಿವರಣಾತ್ಮಕ ಟಿಪ್ಪಣಿ / ಬರಹಗಳನ್ನು ಪೂರೈಸುವ ನಿಟ್ಟಿನಲ್ಲಿ ಒಂದು ಚಿಕ್ಕ ಪ್ರಯತ್ನ ಇದಾಗಿದೆ.

●. ಗ್ರುಪ್ ನಲ್ಲಿ ಪ್ರತಿದಿನವೂ ಕ್ವಿಝ್ ಕಾರ್ಯಕ್ರಮ (PC, PSI, PDO, RDO, RRB, TET ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು) ಹಾಗೂ ಚರ್ಚಾಕೂಟ ಹಮ್ಮಿಕೊಳ್ಳಲಾಗುವುದು.

●. ಪ್ರತಿದಿನ ಒಂದು ವಿಷಯದ ಬಗ್ಗೆ ಚರ್ಚೆಯನ್ನು ನಡೆಸಲಾಗುವುದು. ಪ್ರತಿಯೊಬ್ಬರಿಗೂ ಅವರ ಸಲಹೆ comment ಕೊಡಲು ಅವಕಾಶವಿದ್ದು, ಇಲ್ಲಿ ಇನ್ನೊಬ್ಬರಿಗೆ ಮಾನಹಾನಿ,  ಮಾನಸಿಕ ಕಿರಿಕಿರಿ, ಗೊಂದಲವುಂಟಾಗದ ಹಾಗೆ ಸರ್ವರಿಗೂ ಅನ್ವಯವಾಗುವ, ಪರೀಕ್ಷೆಗಳಿಗೆ ಸಹಾಯವಾಗುವ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಎಲ್ಲರೂ ಹಂಚಿಕೊಳ್ಳಬಹುದು.

■. incase ತಮ್ಮಲ್ಲಿ ಏನಾದರೂ ಸಂದೇಹಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ. ಗ್ರುಪ್ ನಲ್ಲಿ ಯಾವುದೇ ವೈಯುಕ್ತಿಕ Chatting ಗೆ ಆಸ್ಪದವಿರುದಿಲ್ಲ.

●. Seriously. ಜೀವನದಲ್ಲಿ ಏನಾದರೊಂದು ಸಾಧಿಸಿ ತೋರಿಸಬೇಕೆಂದುಕೊಂಡವರಿಗೆ ಈ ಗ್ರುಪ್ ಗೆ ಸ್ವಾಗತ.

••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

1) Telegram :
☀'ಸ್ಪರ್ಧಾಲೋಕ'-'IAS/KAS..in ಕನ್ನಡದಲ್ಲಿ'. Telegram Channel :—
Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ.(Link to Join)...
"ಐಎಎಸ್ /ಕೆಎಎಸ್ ಪರೀಕ್ಷಾ ಸಂಬಂಧಪಟ್ಟಂತೆ ಕನ್ನಡದಲ್ಲಿ ವಿಸ್ತೃತ ನೋಟ್ಸ್ ಒದಗಿಸುವ ಒಂದು ಚಿಕ್ಕ ಪ್ರಯತ್ನ "(IAS/KAS Notes in Kannada)

👉Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ...👇
(Link to Join...https://telegram.me/spardhaloka)

👉 ಸ್ಪರ್ಧಾಲೋಕ ಚರ್ಚಾಕೂಟ (Discussion) SUPERGROUP ಗೆ Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ...👇
https://telegram.me/joinchat/BOzO2Dy1N_VCmZf7DMM38A


🌍"ಸ್ಪರ್ಧಾಲೋಕ ಬ್ಲಾಗ್ ಲಿಂಕ್ "🌎
Blog link..👉 https://www.spardhaloka.blogspot.com


2) Facebook :
ಫೇಸಬುಕ್ ಪೇಜಿಗೆ Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ...
https://m.facebook.com/spardhaloka.blogspot.in/


3) WhatsApp :
ಇಲ್ಲಿ ವೈಯುಕ್ತಿಕ ಮೋಬೈಲ್ ನಂ ಗಳು Misuse ಆಗಬಾರದೆಂಬ ಕಾರಣದಿಂದ Confidential ಕಾಪಾಡಿಕೊಳ್ಳಲು ಮೊದಲು Telegram ನಲ್ಲಿ join ಆಗಿ, ಚರ್ಚಿಸಿಯೇ ನಂತರ ಅಲ್ಲಿಂದ whatsApp ಗ್ರುಪ್ ಗೆ ಸೇರಿಸಿಕೊಳ್ಳಲಾಗುವುದು.

Wednesday, 2 March 2016

■. ಐತಿಹಾಸಿಕ ಪ್ರಸಿದ್ಧ ದೇಶ, ನಗರ, ಪ್ರಾಂತ್ಯಗಳ ಪ್ರಾಚೀನ ಹೆಸರುಗಳು : (Ancient Names of famous historical Places)

■. ಐತಿಹಾಸಿಕ ಪ್ರಸಿದ್ಧ ದೇಶ, ನಗರ, ಪ್ರಾಂತ್ಯಗಳ ಪ್ರಾಚೀನ ಹೆಸರುಗಳು :
(Ancient Names of famous historical Places)
━━━━━━━━━━━━━━━━━━━━━━━━━━━━━━━━━━━━━━━━━━━━━

— ಐತಿಹಾಸಿಕ ಪ್ರಸಿದ್ಧವಾದ ದೇಶ, ನಗರ, ಪ್ರಾಂತ್ಯಗಳಲ್ಲಿ ಪ್ರಮುಖವಾಗಿರುವ ಕೆಲವೊಂದನ್ನು ಆಯ್ದು 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಇವುಗಳು ಮಹತ್ವದ್ದಾಗಿವೆ.ಮತ್ತಿನ್ನೇನಾದರೂ ಇವುಗಳಲ್ಲಿ ಸೇರ್ಪಡೆಗೆ ತಾವುಗಳು ಇಚ್ಛಿಸಿದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂಬ ವಿನಂತಿ.


●.ಮೆಸಪೋಟೋಮಿಯ ಇಂದಿನ ಹೆಸರು ━━━━━━━► ️ಇರಾಕ್

●.ಪ್ರಾಚೀನ ಪರ್ಷಿಯದ ಈಗಿನ ಹೆಸರು ━━━━━━━► ️ಇರಾನ್

●.ಬಾದಾಮಿಯ ಪ್ರಾಚೀನ ಹೆಸರು ━━━━━━━► ️ವಾತಾಪಿ

●.ಶ್ರವಣಬೆಳಗೋಳದ ಪ್ರಾಚೀನ ಹೆಸರು ━━━━━━━► ️ಕಾಥವಪುರಿ

●.ತಾಳಗುಂದದ ಪ್ರಾಚೀನ ಹೆಸರು ━━━━━━━► ️ಸ್ಥಣ ಕುಂದೂರು

●.ಬನವಾಸಿಯ ಪ್ರಾಚೀನ ಹೆಸರು ━━━━━━━► ️ವೈಜಯಂತಿಪುರ ( ವಿಜಯ ಪಕಾಕೆಪುರ )

●.ದೆಹಲಿಯ ಪ್ರಾಚೀನ ಹೆಸರು ━━━━━━━► ️ಇಂದ್ರಪ್ರಸ್ಥ

●.ಬಂಗಾಳದ ಪ್ರಾಚೀನ ಹೆಸರು ━━━━━━━► ️ಗೌಡ ದೇಶ

●.ಅಸ್ಸಾಂ ನ ಪ್ರಾಚೀನ ಹೆಸರು ━━━━━━━► ️ಕಾಮರೂಪ

●.ಪಾಟ್ನಾದ ಪ್ರಾಚೀನ ಹೆಸರು ━━━━━━━► ️ಪಾಟಲೀಪುತ್ರ

●.ಹೈದರಬಾದಿನ ಪ್ರಾಚೀನ ಹೆಸರು ━━━━━━━► ️ಭಾಗ್ಯನಗರ

●.ಅಹಮದಾಬಾದಿನ ಪ್ರಾಚೀನ ಹೆಸರು ━━━━━━━► ️ಕರ್ಣಾವತಿ ನಗರ

●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ️ಪ್ರಯಾಗ

●.ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು ━━━━━━━► ️ಬರ್ಮಾ

●.ಬರ್ಮಾದ ಪ್ರಾಚೀನ ಹೆಸರು ━━━━━━━► ️ಸುವರ್ಣಭೂಮಿ

●.ರಾಜಸ್ಥಾನದ ಪ್ರಾಚೀನ ಹೆಸರು ━━━━━━━► ️ರಾಜ್ ಪುತಾನ್

●.ಗುಜರಾತ್ ನ ಹಿಂದಿನ ಹೆಸರು ━━━━━━━► ️ಕಾಥಿಯವಾಡ

●.ಕರ್ಣಾವತಿಯ ಪ್ರಸ್ತುತ ಹೆಸರು ━━━━━━━► ️ಅಹಮದಾಬಾದ್

●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ️ಪ್ರಯಾಗ್

●.ಕಾಶಿಯ ಪ್ರಾಚೀನ ಹೆಸರು ━━━━━━━► ️ಬನಾರಸ್

●.ಒರಿಸ್ಸಾದ ಪ್ರಾಚೀನ ಹೆಸರು ━━━━━━━► ️ಕಳಿಂಗ

●.ಮೈಸೂರಿನ ಪ್ರಾಚೀನ ಹೆಸರು -━━━━━━━► ️ಮಹಿಷಮಂಡಳ

●.ಸುವರ್ಣಗಿರಿಯ ಇಂದಿನ ಹೆಸರು ━━━━━━━► ️ಕನಕಗಿರಿ ( ರಾಯಚೂರು ಜಿಲ್ಲೆ )

●.ಇಸಿಲದ ಇಂದಿನ ಹೆಸರು ━━━━━━━► ️ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )

●.ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ ━━━━━━━► ️ಗಾಂಧಾರ

●.ಮಗಧದ ಇಂದಿನ ಹೆಸರು ━━━━━━━► ️ಬಿಹಾರ

●.ವೈಶಾಲಿ ನಗರದ ಇಂದಿನ ಹೆಸರು ━━━━━━━► ️ವೇಸಾಡ್

●.ಗುಲ್ಬರ್ಗದ ಪ್ರಾಚೀನ ಹೆಸರು ━━━━━━━► ️ಅಹ್ ಸಾನಾಬಾದ್

●.ವಿಜಯ ನಗರದ ಪ್ರಾಚೀನ ರಾಜಧಾನಿ ━━━━━━━► ️ಆನೆಗೊಂಡಿ

●.ಹಳೇಬಿಡಿನ ಪ್ರಾಚೀನ ಹೆಸರು ━━━━━━━► ️ದ್ವಾರಸಮುದ್ರ

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-III (UPSC, KPSC Interview Preparation :— PART-III)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-III
(UPSC, KPSC Interview Preparation :— PART-III)
━━━━━━━━━━━━━━━━━━━━━━━━━━━━━━━━━━━━━━━

ಈಗಾಗಲೇ ಭಾಗ-IIರಲ್ಲಿ ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಅವಶ್ಯವೆನಿಸಿದ ಪ್ರಮುಖ ಅಂಶಗಳನ್ನು ನಿಮ್ಮ ಮುಂದಿರಿಸಿದ್ದೇನೆ. ಅದರಂತೆ ಮತ್ತಷ್ಟು ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಸಂದರ್ಶನಕ್ಕೆ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-III.■
━━━━━━━━

31) ಸಮುದ್ರಮಟ್ಟದಲ್ಲಿ ಕಳೆದ 27 ಶತಮಾನಗಳಲ್ಲಿಯೇ ಅತಿ ವೇಗವಾದ ಏರಿಕೆ ಕಂಡುಬಂದಿದೆ. ಇದಕ್ಕೆ ಕಾರಣಗಳೇನು?

32) ಹವಾಮಾನ ಬದಲಾವಣೆಯಲ್ಲಿ ಮುಂದುವರಿದ ದೇಶಗಳ ಪಾತ್ರ.
•► ಹವಾಮಾನ ಬದಲಾವಣೆಯಲ್ಲಿ ಮುಂದುವರೆಯುತ್ತಿರುವ ದೇಶಗಳ ಪಾತ್ರ.
•► ಹವಾಮಾನ ಬದಲಾವಣೆಯ ಗಂಭೀರತೆಯ ಜವಾಬ್ದಾರಿಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ನೀವು ಕೈಗೊಳ್ಳಬಹುದಾದ ಕ್ರಮಗಳು ಯಾವವು?
.
-----------------------------

33) ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು. ಕಾರಣಗಳು,  ಪರಿಹಾರ.
•► ಇತರೇ ರಾಜ್ಯಗಳಿಗಿಂತ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಉತ್ತರ ಪ್ರದೇಶದಲ್ಲಿಯೇ ಯಾಕೆ ಕಂಡುಬರುತ್ತಿವೆ?
•► ಅತ್ಯಾಚಾರ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ- ತಡೆಗೆ ಸರ್ಕಾರ ಕೈಗೊಂಡ ಕ್ರಮಗಳು. ನಿಮ್ಮ ದಿಟ್ಟ ಕ್ರಮಗಳು.

34) 'ಮರ್ಯಾದಾ ಹತ್ಯೆ'. ಇದರ ನಿರ್ಮೂಲನೆಗೆ ಸರ್ಕಾರ ಕೈಗೊಂಡ ಕ್ರಮಗಳು. ನಿಮ್ಮ ಅನಿಸಿಕೆ.
.
-----------------------------  

35) AFSPA ಕಾಯಿದೆ.

•► ಈಶಾನ್ಯ ರಾಜ್ಯಗಳು ಹಾಗು ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ದಂಗೆಕೋರರನ್ನು ಹತ್ತಿಕ್ಕಲು, ಸೇನೆಗೆ ನೀಡಿರುವ ವಿಶೇಷ ಅಧಿಕಾರ AFSPA ಕಾಯಿದೆಯನ್ನು ಪ್ರಸ್ತುತ ದಿನಗಳಲ್ಲಿ ಈಗಲೂ ಮುಂದುವರೆಸುವುದು ಔಚಿತ್ಯವೇ?

•► ಮಣಿಪುರದ ಕವಯಿತ್ರಿ ಇರೋಮ್ ಶರ್ಮಿಳಾ ಚಾನು “AFSPA ಕೊನೆಗೊಳಿಸಿ” ಎಂಬ ಬೇಡಿಕೆ ಮುಂದಿಟ್ಟು ಆರಂಭಿಸಿದ ಸುಧೀರ್ಘ ಅಖಂಡ ಉಪವಾಸ ಸತ್ಯಾಗ್ರಹ ಸಮಂಜಸವೇ?

•► AFSPA ಒಂದು ಧೀರ್ಘಕಾಲದಿಂದ ಜಾರಿಯಲ್ಲಿರುವ ಅಮಾನುಷ ಕಾಯಿದೆಯಾಗಿದ್ದು, ಇದರಿಂದಾಗಿ ಮಣಿಪುರ, ಈಶಾನ್ಯ ರಾಜ್ಯಗಳ ಮತ್ತು ಕಾಶ್ಮೀರದ ಅಮಾಯಕ ಜನತೆ ನಾವ್ಯಾರು ಕೇಳರಿಯದ ದೌರ್ಜನ್ಯ ಹಾಗು ಕ್ರೌರ್ಯಗಳಿಗೆ ಶಿಕಾರಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜವೇ?

36) ಸಾಮಾಜಿಕ ಭದ್ರತೆ ಮತ್ತು ಸ್ತ್ರೀಯರ ಸಬಲೀಕರಣ.

37) ದೇಶದ ಭದ್ರತೆಯಲ್ಲಿ ಸ್ತ್ರೀಯರ ಪಾತ್ರ (ಇತ್ತೀಚೆಗೆ Militaryಯಲ್ಲಿ ನೇಮಕಾತಿ ಚಾಲನೆ ಕೊಟ್ಡಿದ್ದಾರಲ್ಲ ಅದಕ್ಕೆ).
•► ಮಿಲಿಟರಿಯಲ್ಲಿ (especially in BSF,SSB, ITBP, ವಾಯುದಳ) ಸ್ತ್ರೀಯರಿಗೆ ಪ್ರಾಶಸ್ತ್ಯ ಕೊಡುವುದು ಎಷ್ಟರಮಟ್ಟಿಗೆ ಪರಿಣಾಮಕಾರಿ?
.
-----------------------------

38) ಭಾರತದಲ್ಲಿ ಅಸಹಿಷ್ಣುತೆ ಈ ಕುರಿತು ಇದರ ಉಗಮ- ಇತ್ತೀಚಿನ ಬೆಳವಣಿಗೆ.

•► ನಿಮ್ಮ ಪ್ರಕಾರ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೇ?

•► ಅಸಹಿಷ್ಣುತೆಯ ವಿರುದ್ಧ ಜನತೆಯ ಹಾಗೂ ಬೌದ್ಧಿಕ ಪ್ರತಿಭಟನೆ.

•► ಭಾರತದಲ್ಲಿ ಅಸಹಿಷ್ಣುತೆ ಹೆಸರಿನಲ್ಲಿ ಪ್ರಶಸ್ತಿ ಹಿಂದಿರುಗಿಸುವಿಕೆ ಎಷ್ಟರಮಟ್ಟಿಗೆ ಸರಿ?
.
-----------------------------

39) ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ಆಹಾರ ಅಭದ್ರತೆ ಹಾಗು ಹಸಿವು, ಅಪೌಷ್ಟಿಕತೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಪರಿಷ್ಕೃತ ಪಡಿತರ ವಿತರಣಾ ವ್ಯವಸ್ಥೆ (ಅನ್ನಭಾಗ್ಯ)' ಅವಲೋಕನ. ಗುರಿ ಸಾಧಿಸುವಲ್ಲಿ ಇರುವ ಸವಾಲುಗಳು, ಅದಕ್ಕೆ ಪರಿಹಾರ ಕ್ರಮಗಳು.

•► ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಅನ್ನಭಾಗ್ಯ ಯೋಜನೆ'ಯ ಸಮರ್ಪಕ ಅನುಷ್ಠಾನಕ್ಕೆ ಎದುರಾಗುವ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ತಾವು ಈ ನಿಟ್ಟಿನಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ?

•► ಆಹಾರ ಭದ್ರತೆಗೆ ಅಗತ್ಯ ಸಾಮಥ್ರ್ಯವನ್ನು ವೃದ್ಧಿಸುವಲ್ಲಿ ಬೆಳೆವಿಜ್ಞಾನ ಕ್ಷೇತ್ರದ ಪಾತ್ರ.
.
-----------------------------

40) ನರೇಗಾ (MGNREGA) ದ ಅವಲೋಕನ. ಸಾಗಿ ಬಂದ ದಾರಿಯ ವಿಮರ್ಶೆ.

•► MGNREGA ದ ಪರಿಣಾಮಕಾರಿ ಅನುಷ್ಠಾನಕ್ಕೆ ನಿಮ್ಮ ಸಲಹೆಗಳು.

41) ರಾಜ್ಯಗಳು ಹಾಗೂ ಜಿಲ್ಲೆಗಳ ನಡುವೆ ನಿಕಟ ಸಂಬಂಧ ಏರ್ಪಡಲು ಮತ್ತು ನಿಕಟವಾಗಿ ಕೆಲಸ ಮಾಡಲು ಅಗತ್ಯವಾದ ಸೌಕರ್ಯವನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರದ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆ ಎಷ್ಟರಮಟ್ಟಿಗೆ ಮಹತ್ವವಾಗಿರುವುದು.?

42) ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆ ಯೋಜನೆಯ ಅನುಷ್ಠಾನ.

43) ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ.

44) ಜೆಂಡರ್ ಪಾರ್ಕ್‍ನ ವಿಶೇಷತೆ.

45) ರಾಷ್ಟ್ರೀಯ ಇ-ಕೃಷಿ ಮಾರುಕಟ್ಟೆ
.
-----------------------------

46) ಭಾರತದ ಕರಕುಶಲ ಕಲೆಗಳ ರಫ್ತು ಉತ್ತೇಜನಕ್ಕೆ ನೀವು ಕೈಗೊಳ್ಳಬಹುದಾದ ಕ್ರಮಗಳು ಯಾವವು?

47) ಅಂತಾರಾಷ್ಟ್ರೀಯ ಹಣಕಾಸು ನಿಧಿ , ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ)  ಮತ್ತು ವಿಶ್ವಬ್ಯಾಂಕ್‌ಗಳಿಗೆ ಪರ್ಯಾಯವಾಗಿ ಬ್ರಿಕ್ಸ್ ಹೊಸ ಅಭಿವೃದ್ಧಿ ಬ್ಯಾಂಕ್.

•► ಬ್ರಿಕ್ಸ್ ಬ್ಯಾಂಕಿನಿಂದ ಭಾರತಕ್ಕೆ ಲಾಭ ಹೇಗೆ?

48) ವಿಶ್ವ ಅಪರಾಧ ನ್ಯಾಯಾಲಯ (ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಕೋರ್ಟ್‌) ಅಪ್ರಸ್ತುತವೇ?

49) ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಏರ್ಪಡಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಬಲಗೊಳಿಸುವ ಸಲುವಾಗಿ ಭಾರತ ಕೈಗೊಂಡ ಇತ್ತೀಚಿನ ಕ್ರಮಗಳು.

50) ವಿಶ್ವದಲ್ಲೇ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿ ಭಾರತ ಪ್ರಸಕ್ತ ವರ್ಷವೂ ಮುಂದುವರಿದಿದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕವೇ?


.....ಮುಂದುವರಿಯುವುದು.