"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 18 August 2015

☀ ಸಾಮಾನ್ಯ ಜ್ಞಾನ (ಭಾಗ - 19) (ಎಸ್ ಡಿ ಎ ಮತ್ತು ಎಫ್ ಡಿ ಎ ನೋಟ್ಸ್)  (General knowledge on Constitution of India (Part-19))  ☆.. ಭಾರತ ಸಂವಿಧಾನದ ವಿಶೇಷಾಂಕ. ...

☀ ಸಾಮಾನ್ಯ ಜ್ಞಾನ (ಭಾಗ - 19) (ಎಸ್ ಡಿ ಎ ಮತ್ತು ಎಫ್ ಡಿ ಎ ನೋಟ್ಸ್)
(General knowledge on Constitution of India (Part-19))
☆.. ಭಾರತ ಸಂವಿಧಾನದ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತ ಸಂವಿಧಾನ.
(Constitution of India)

★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ)
(SDA and FDA special)


751. ಸಂವಿಧಾನದ ಯಾವ ವಿಧಿಯು 'ಚುನಾವಣಾ ಆಯೋಗ ' (Election commission) ದ ಸ್ಥಾಪನೆಗೆ ಸಂಬಂಧಿಸಿದೆ ?

● ಉತ್ತರ: 324ನೇ ವಿಧಿ.


752. ಲೋಕಸಭೆಯ ಸಭಾಪತಿ ಯಾರಿಂದ ಆಯ್ಕೆ ಗೋಳ್ಳುತ್ತಾನೆ?

● ಉತ್ತರ: ಲೋಕಸಭಾ ಸದಸ್ಯರಿಂದ.


753. ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪರಶಿಷ್ಠ (ST) ಜನಾಂಗಕ್ಕೆ ಮಿಸಲಿಟ್ಟ ರಾಜ್ಯ ಯಾವುದು?

● ಉತ್ತರ: ಮಧ್ಯಪ್ರದೇಶ


754. ಸಂಸತ್ತಿನ ಜಂಟಿ ಅಧಿವೇಶನದ ಅಧ್ಯಕ್ಷತೆ ಯಾರು ವಹಿಸುತ್ತಾರೆ?

● ಉತ್ತರ: ಲೋಕಸಭಾ ಸ್ಪೀಕರ್


755.ಲೋಕಸಭೆಯ ಸದಸ್ಯರ ಅಧಿಕಾರ ಅವಧಿ 5 ವರ್ಷ ದಿಂದ 6 ವರ್ಷ ಕ್ಕೆ ಹೆಚ್ಚಳ ಮಾಡಿದ ತಿದ್ದುಪಡಿ ಯಾವುದು?

● ಉತ್ತರ: 1976 ರಲ್ಲಿ 42 ನೇ ತಿದ್ದುಪಡಿ (ಇಂದಿರಾಗಾಂಧಿಯವರು ಪ್ರಧಾನಿ ಅಗಿದ್ದರು)


756.ತೀರ್ಪು ಗಳ ಪುನರಾವಲೋಕನ ಕುರಿತು ತಿಳಿಸುವ ಕಲಂ ಯಾವುದು?

● ಉತ್ತರ: 137 ಕಲಂ.


757.ಲೋಕಸಭೆಯ ಸದಸ್ಯರ ಅಧಿಕಾರ ಅವಧಿ 6 ವರ್ಷ ದಿಂದ 5ವರ್ಷ ಕ್ಕೆ ಕಡಿಮೆ ಮಾಡಿದ್ದು ಎಷ್ಟನೆ ತಿದ್ದುಪಡಿ ಯಾವುದು ?

● ಉತ್ತರ: 44ನೇ ತಿದ್ದುಪಡಿ


758. ಯಾರು ಪ್ರಧಾನಮಂತ್ರಿಯಾಗಿದ್ದಾಗ ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಲಾಯಿತು?

● ಉತ್ತರ: ರಾಜೀವ್ ಗಾಂಧಿ


759. ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಕಾಂಗ್ರೆಸೆತರ ಸರ್ಕಾರ ಯಾವಾಗ ಅಸ್ತಿತ್ವಕ್ಕೆ ಬಂತು?

● ಉತ್ತರ: 1983 (ಜನರ ಪಕ್ಷಾ, ರಾಮಕೃಷ್ಣ ಹೆಗಡೆ)


760. 1979 ರ ಕ್ಕೆಂತ ಮಂಚೆ ಯಾವ ರಾಜ್ಯದಲ್ಲಿ ಪಕ್ಷಾಂತರ ಕಾಯ್ದೆಯು ಅಸ್ತಿತ್ವದಲ್ಲಿ ಇತ್ತು?

● ಉತ್ತರ: ಜಮ್ಮು ಮತ್ತು ಕಾಶ್ಮೀರ


761.ಭಾರತದಲ್ಲಿ ಜನಗಣತಿಯನ್ನು ಯಾವ ವಿಧಿಯ ಅನುಸಾರವಾಗಿ ನಡೆಸುತ್ತಾರೆ ?

● ಉತ್ತರ: 246 ನೇ ವಿಧಿ.


762. ಯಾವ ಸದನದಲ್ಲಿ ಸದಸ್ಯರಲ್ಲದ ವ್ಯಕ್ತಿ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ ?

● ಉತ್ತರ: ರಾಜ್ಯಸಭೆ


763. ಯಾವ ವರ್ಷ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಸ್ಥಾನಗಳು ಏಕಕಾಲದಲ್ಲಿ ತೆರವಾಗಿದ್ದವು?

● ಉತ್ತರ: 1969 ರಲ್ಲಿ


764.ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಝ್ನೆ ಹೊರಡಿಸುವ ಬಗ್ಗೆ ತಿಳಿಸುವ ವಿಧಿ ಯಾವುದು?

● ಉತ್ತರ: 123ನೇ ವಿಧಿ.


765.1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನರಾಷ್ಟ್ರಪತಿ ಯಾರಾಗಿದ್ದರು?

● ಉತ್ತರ: ಫಕ್ರುದ್ದೀನ್ ಅಲಿ ಅಹ್ಮದ್.


766.ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು ಯಾರು?

● ಉತ್ತರ: ಜಿ.ವಿ. ಮಾಳವಂಕರ್


767.ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನೇಮಿಸುವವರು ಯಾರು?

● ಉತ್ತರ: ರಾಷ್ಟ್ರಪತಿ


768.ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ ಯಾವುದು?

● ಉತ್ತರ: 111ನೇ ವಿಧಿ


769. ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?

● ಉತ್ತರ: ರಾಷ್ಟಾಧ್ಯಕ್ಷರು


770.ಕರ್ನಾಟಕದ ವಿಧಾನ ಪರಿಷತ್ತಿನ ಇರುವ ಸದಸ್ಯರ ಸಂಖ್ಯೆ ಎಷ್ಟು?

● ಉತ್ತರ: 75 ಸದಸ್ಯರು.


771.ಭಾರತೀಯ ಸಂವಿಧಾನದಲ್ಲಿ, ಪರಿಚ್ಛೇದ 352 ರ ನಿಬಂಧನೆಗಳೇನು?

● ಉತ್ತರ: ತುರ್ತುಸ್ಥಿತಿಯ ಘೋಷಣೆ


772. ಕೇಂದ್ರದ ಆಜ್ಞೆ ಗಳನ್ನು ಪಾಲಿಸಲು ರಾಜ್ಯ ಸರ್ಕಾರಗಳು ವಿಫಲವಾದರೆ ಯಾವ ಕಲಂ ಪ್ರಕಾರ ತುರ್ತು ಪರಿಸ್ಥಿತಿ ಹೇರುತ್ತಾರೆ?

● ಉತ್ತರ: 365ನೇ ವಿಧಿ.


773. ಯಾವ ರಾಜ್ಯದ ವಿಧಾನಸಭಾ ಸದಸ್ಯರು 6 ವರ್ಷ ಅಧಿಕಾರವಧಿಯನ್ನು ಹೊಂದಿದ್ದಾರೆ?

● ಉತ್ತರ: ಜಮ್ಮು& ಕಾಶ್ಮೀರ.


774. ವಿತ್ತ ಆಯೋಗದ ರಚನೆಯನ್ನು ಸಂವಿಧಾನದ ಕೆಳಕಂಡ ಯಾವ ಪರಿಚ್ಛೇದದಲ್ಲಿ ತಿಳಿಸಲಾಗಿದೆ?

● ಉತ್ತರ: ಪರಿಚ್ಛೇದ 180.


775. ಸಂವಿಧಾನದ ಎಷ್ಟನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಕಾಣಬಹುದಾಗಿದೆ?

● ಉತ್ತರ: 3 ನೇ ಭಾಗದಲ್ಲಿ.


776. ಯಾರು ಕರ್ನಾಟಕ ವಿಧಾನಸಭೆಯ ಮೊದಲ ಸ್ಪೀಕರ್ ಆಗಿದ್ದರು?

● ಉತ್ತರ: ಎ. ವೆಂಕಟಪ್ಪ


777. ರಾಜ್ಯಪಾಲರಿಗೆ ಆಂಗ್ಲೋ ಇಂಡಿಯನ್ನ್ ಸಮೂದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವ ಅಧಿಕಾರ ನೀಡುವ ಪರಿಚ್ಛೇದ ಯಾವುದು?

● ಉತ್ತರ: 333ನೇ ಪರಿಚ್ಛೇದ.


778. ‘ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನಿಸಿದ ಸ್ಥಳದ ಆಧಾರದಲ್ಲಿ ತಾರತಮ್ಯ ಎಸಗುವುದು ನಿಷಿದ್ಧ. ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನಿಸಿದ ಸ್ಥಳದ ಆಧಾರದಲ್ಲಿ ಸರ್ಕಾರಗಳು ಯಾವುದೇ ತಾರತಮ್ಯ ಮಾಡುವಂತಿಲ್ಲ’ ಎಂದು ಹೇಳುವ ದೇಶದ ಸಂವಿಧಾನದ ವಿಧಿಗಳು?

● ಉತ್ತರ: 14 ಮತ್ತು 15ನೇ ವಿಧಿಗಳು.


779.ಯಾವ ದೇಶದ ಸಂವಿಧಾನದಿಂದ 'ರಾಷ್ಟ್ರಪತಿ ದೋಷಾರೋಪಣ ಪದ್ದತಿ'ಯನ್ನು ಭಾರತದ ಸಂವಿಧಾನವು ಎರವಲು ಪಡೆದುಕೊಂಡಿದೆ ?

● ಉತ್ತರ: ಐರ್ಲೆಂಡ್ ಸಂವಿಧಾನ


780. ಯಾವ ಅನುಚ್ಚೇದದ ಪ್ರಕಾರ ಸಂಸತ್ತು ವಿದಾನ ಪರಿಷತ್ ನ್ನು ರಚಿಸಬಹುದು ಅಥವಾ ರದ್ದುಪಡಿಸಬಹುದು?

● ಉತ್ತರ: 169ನೇ ಪರಿಚ್ಛೇದ.

To be continued ...

Sunday, 9 August 2015

☀ ಸಾಮಾನ್ಯ ಜ್ಞಾನ (ಭಾಗ - 18) ★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ) (SDA and FDA special) (General knowledge on Constitution of India (Part-18))  ☆.. ಭಾರತ ಸಂವಿಧಾನದ ವಿಶೇಷಾಂಕ. ...

★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ)
(SDA and FDA special)☀ ಸಾಮಾನ್ಯ ಜ್ಞಾನ (ಭಾಗ - 18)(ಎಸ್ ಡಿ ಎ ಮತ್ತು ಎಫ್ ಡಿ ಎ ನೋಟ್ಸ್)
(General knowledge on Constitution of India (Part-18))
☆.. ಭಾರತ ಸಂವಿಧಾನದ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತ ಸಂವಿಧಾನ.
(Constitution of India)

★ (ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ)
(SDA and FDA special)

721.ಭಾರತೀಯ ಸಂವಿಧಾನವು ಜಗತ್ತಿನಲ್ಲಿಯೇ ಅತಿ ದೊಡ್ಡ ಸಂವಿಧಾನವಾಗಿದೆ. ಕ್ಯಾಬಿನೆಟ್ ಮಿಷನ್ ಪ್ಲಾನ್ 1946 ರ ಅನ್ವಯ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು. ಇದಕ್ಕೆ ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷರಾಗಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ‘ಕರಡು ಸಮಿತಿ’ ಯನ್ನು ರಚಿಸಲಾಯಿತು. ಅಂತಿಮವಾಗಿ ಸಿದ್ಧಪಡಿಸಿದ ಸಂವಿಧಾನವನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು. ಜನವರಿ 26, 1950 ರಂದು ಭಾರತ ಸಂವಿಧಾನವು ಜಾರಿಗೆ ಬಂದಿತು.


722.ಮೂಲತಃ 395 ವಿಧಿಗಳು, 22 ಭಾಗಗಳು, ಮತ್ತು 8 ಅನುಸೂಚಿಗಳನ್ನು ಹೊಂದಿದೆ. ಪ್ರಸ್ತುತ ಇದು 448 ವಿಧಿಗಳು, 22 ಭಾಗಗಳು, ಮತ್ತು 12 ಶೆಡ್ಯೂಲ್( ಅನುಸೂಚಿಗಳು) ಹೊಂದಿದೆ.


723.ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಅಮೆರಿಕಾ (USA).


724. ದೇಶದಲ್ಲಿ ಸುಪ್ರೀಂಕೋರ್ಟ್ ಹೊಂದುವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಅಮೆರಿಕಾ (USA).


725. ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

● ಉತ್ತರ: ಅಮೆರಿಕಾ (USA).


726. ಭಾರತವು 'ಪಂಚವಾರ್ಷಿಕ ಯೋಜನೆ' ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ ?

● ಉತ್ತರ: ರಷ್ಯಾ(ಯುಎಸ್ಎಸ್ಆರ್).


727. ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ:ಬ್ರಿಟನ್ (ಯುಕೆ).


728. ಭಾರತ ಸಂವಿಧಾನವು ಯಾವ ದೇಶದಿಂದ "ಸಂಸತ್ ಚುನಾವಣೆ"(Parliamentary Election) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಬ್ರಿಟನ್ (ಯುಕೆ).


729. ಭಾರತ ಸಂವಿಧಾನವು ಯಾವ ದೇಶದಿಂದ "ಚುನಾವಣಾ ಆಯೋಗ" (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಬ್ರಿಟನ್ (ಯುಕೆ).


730.ಭಾರತ ಸಂವಿಧಾನವು ಯಾವ ದೇಶದಿಂದ "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು' (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ?

● ಉತ್ತರ: ಜರ್ಮನಿ.


731. ಭಾರತ ಸಂವಿಧಾನವು ಯಾವ ದೇಶದಿಂದ " ಸಮವರ್ತಿ ಪಟ್ಟಿ" (Concurrent list) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಆಸ್ಟ್ರೇಲಿಯಾ.


732. ಭಾರತದ ಸಂವಿಧಾನದಲ್ಲಿ ಅಳವಡಿಸಲಾದ "ಫೆಡರಲ್ ವ್ಯವಸ್ಥೆ" (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

● ಉತ್ತರ: ಕೆನಡಾ.


733. ಭಾರತ ಸಂವಿಧಾನವು ಯಾವ ದೇಶದಿಂದ "ಕೇಂದ್ರ-ರಾಜ್ಯ ಪಟ್ಟಿ" (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

● ಉತ್ತರ: ಕೆನಡಾ.


734. ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?

● ಉತ್ತರ: ದಕ್ಷಿಣ ಆಫ್ರಿಕಾ.


735. ಯಾವ ಸಂವಿಧಾನದ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?

● ಉತ್ತರ: 42 ನೇ ತಿದ್ದುಪಡಿ (1976).


736. ಸಂವಿಧಾನದಲ್ಲಿರುವ 'ಪ್ರಸ್ತಾವನೆ'ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು?

● ಉತ್ತರ: 42 ನೇ ತಿದ್ದುಪಡಿ.


737. ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?

● ಉತ್ತರ: 44 ನೇ ತಿದ್ದುಪಡಿ (1978).


738. ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ?

● ಉತ್ತರ: 61 ನೇ ತಿದ್ದುಪಡಿ (1989).


739. ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನಾಗಿಸಿದ ಸಂವಿಧಾನದ ತಿದ್ದುಪಡಿ ಯಾವುದು ?

● ಉತ್ತರ: 69 ನೇ ತಿದ್ದುಪಡಿ (1991).


740. ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು?

● ಉತ್ತರ: 73ನೇ ತಿದ್ದುಪಡಿ (1992).


741. ಭಾರತ ಸಂವಿಧಾನದ 'ಆತ್ಮ ಮತ್ತು ಹೃದಯ' ಎಂದು ಕರೆಯಲ್ಪಡುವ ವಿಧಿ (Article) ಯಾವುದು ?

●ಉತ್ತರ: 32ನೇ ವಿಧಿ .


742. ಸಂವಿಧಾನದ ಯಾವ ವಿಧಿಯು 'ಅಸ್ಪೃಶ್ಯತೆ ನಿರ್ಮೂಲನೆ'ಯ ಕುರಿತು ತಿಳಿಸುತ್ತದೆ?

● ಉತ್ತರ: 17ನೇ ವಿಧಿ.


743. ಭಾರತ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗುತ್ತದೆ ?

● ಉತ್ತರ: 12 ರಿಂದ 35 ವಿಧಿಗಳು.


744. ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ 'ಸಮಾನತೆಯ ಹಕ್ಕು'ನ್ನು ಒದಗಿಸಲಾಗಿದೆ ?

● ಉತ್ತರ: 14ನೇ ವಿಧಿ.


745. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ?

ಉತ್ತರ: 370 ನೇ ವಿಧಿ.


746. ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?

● ಉತ್ತರ: 24ನೇ ವಿಧಿ.


747. ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ 'ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?

ಉತ್ತರ: 45 ನೇ ವಿಧಿ.


748. 'ಪ್ರಾಥಮಿಕ ಶಿಕ್ಷಣದ ಹಕ್ಕು' ಕುರಿತು ಸಂವಿಧಾನದ ಯಾವ ವಿಧಿಯು ತಿಳಿಸುತ್ತದೆ ?

● ಉತ್ತರ: 21 A ವಿಧಿ.


749. ಸಂವಿಧಾನದ ಯಾವ ವಿಧಿಯು 'ಹಣಕಾಸು ಆಯೋಗ' (Finance commission) ದ ಸ್ಥಾಪನೆಗೆ ಸಂಬಂಧಿಸಿದೆ ?

● ಉತ್ತರ: 280ನೇ ವಿಧಿ.


750. 'ಮೂಲಭೂತ ಕರ್ತವ್ಯಗಳ' ಕುರಿತು ಸಂವಿಧಾನದ ಯಾವ ವಿಧಿಯು ತಿಳಿಸುತ್ತದೆ ?

● ಉತ್ತರ: 51 A ವಿಧಿ.

.... ಮುಂದುವರಿಯುತ್ತದೆ.

Thursday, 6 August 2015

☀ಜಗತ್ತಿನ ಪ್ರಮುಖ ದೇಶಗಳ ಕರೆನ್ಸಿಗಳು : (Countries and their Currencies) / (List of countries and associate currencies)

☀ಜಗತ್ತಿನ ಪ್ರಮುಖ ದೇಶಗಳ ಕರೆನ್ಸಿಗಳು :
(Countries and their Currencies) /
(List of countries and associate currencies)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ದೇಶ •┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ●.ಕರೆನ್ಸಿ
━━━━━━━━━━━━━━━━━━━━━━━━━━━━━━━━━━━━━━

• ಅಫ್ಘಾನಿಸ್ಥಾನ •┈┈┈┈┈┈┈┈┈┈┈┈┈┈┈┈┈┈┈┈┈• ಅಫ್ಘಾನಿ.

• ಆಲ್ಜೀರಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ದಿನಾರ್.

• ಅರ್ಜೆಂಟೀನಾ •┈┈┈┈┈┈┈┈┈┈┈┈┈┈┈┈┈┈┈┈┈• ಆಸ್ಟ್ರಲ್ .

• ಆಸ್ಟ್ರೇಲಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಆಸ್ಟ್ರಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಬೆಲ್ಜಿಯಂ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಬೊಲಿವಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಬೊಲಿವಿಯಾನೋ.

• ಬ್ರೆಜಿಲ್ •┈┈┈┈┈┈┈┈┈┈┈┈┈┈┈┈┈┈┈┈┈• ರಿಯಲ್.

• ಕೆನಡಾ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಚಾಡ್ •┈┈┈┈┈┈┈┈┈┈┈┈┈┈┈┈┈┈┈┈┈• ಫ್ರಾಂಕ್.

• ಚಿಲ •┈┈┈┈┈┈┈┈┈┈┈┈┈┈┈┈┈┈┈┈┈• ಪೆಸೊ.

• ಚೀನಾ •┈┈┈┈┈┈┈┈┈┈┈┈┈┈┈┈┈┈┈┈┈• ಯುವಾನ್.

• ಕೊಲಂಬಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಪೆಸೊ.

• ಕಾಂಗೋ •┈┈┈┈┈┈┈┈┈┈┈┈┈┈┈┈┈┈┈┈┈• ಫ್ರಾಂಕ್.

• ಕೋಸ್ಟಾ ರಿಕಾ •┈┈┈┈┈┈┈┈┈┈┈┈┈┈┈┈┈┈┈┈┈• ಕೊಲೊನ್ .

• ಕ್ಯೂಬಾ •┈┈┈┈┈┈┈┈┈┈┈┈┈┈┈┈┈┈┈┈┈• ಪೆಸೊ.

• ಚೆಕೊಸ್ಲೊವೇಕಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಕೊರುನಾ.

• ಡೆನ್ಮಾರ್ಕ್ •┈┈┈┈┈┈┈┈┈┈┈┈┈┈┈┈┈┈┈┈┈• ಕ್ರೋನ್.

• ಜಿಬೌಟಿ •┈┈┈┈┈┈┈┈┈┈┈┈┈┈┈┈┈┈┈┈┈• ಫ್ರಾಂಕ್.

• ಡೊಮಿನಿಕನ್ ರಿಪಬ್ಲಿಕ್ •┈┈┈┈┈┈┈┈┈┈┈┈┈┈┈┈┈┈┈┈┈• ಪೆಸೊ.

• ಈಕ್ವೆಡಾರ್ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಈಜಿಪ್ಟ್ •┈┈┈┈┈┈┈┈┈┈┈┈┈┈┈┈┈┈┈┈┈• ಪೌಂಡ್.

• ಫಿಜಿ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಫಿನ್ಲ್ಯಾಂಡ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಫ್ರಾನ್ಸ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಜರ್ಮನಿ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಘಾನಾ •┈┈┈┈┈┈┈┈┈┈┈┈┈┈┈┈┈┈┈┈┈• ಸೆಡಿ.

• ಗ್ರೀಸ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಗಿನಿ •┈┈┈┈┈┈┈┈┈┈┈┈┈┈┈┈┈┈┈┈┈• ಫ್ರಾಂಕ್.

• ಗಯಾನ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಹೈಟಿ •┈┈┈┈┈┈┈┈┈┈┈┈┈┈┈┈┈┈┈┈┈• ಗೋರ್ದೆ.

• ಹಾಂಗ್ ಕಾಂಗ್ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಹಂಗೇರಿ •┈┈┈┈┈┈┈┈┈┈┈┈┈┈┈┈┈┈┈┈┈• ಫಾರಿಂಟ್.

• ಐಸ್ ಲ್ಯಾಂಡ್ •┈┈┈┈┈┈┈┈┈┈┈┈┈┈┈┈┈┈┈┈┈• ಕ್ರೋನಾ.

• ಭಾರತ •┈┈┈┈┈┈┈┈┈┈┈┈┈┈┈┈┈┈┈┈┈• ರೂಪಾಯಿ.

• ಇಂಡೋನೇಷ್ಯಾ •┈┈┈┈┈┈┈┈┈┈┈┈┈┈┈┈┈┈┈┈┈• ರುಪೈ.

• ಇರಾಕ್ •┈┈┈┈┈┈┈┈┈┈┈┈┈┈┈┈┈┈┈┈┈• ದಿನಾರ್.

• ಐರ್ಲೆಂಡ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಇಸ್ರೇಲ್ •┈┈┈┈┈┈┈┈┈┈┈┈┈┈┈┈┈┈┈┈┈• ಶೆಕೆಲ್.

• ಇಟಲಿ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಐವರಿಕೋಸ್ಟ್ •┈┈┈┈┈┈┈┈┈┈┈┈┈┈┈┈┈┈┈┈┈• ಫ್ರಾಂಕ್.

• ಜಮೈಕಾ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಜಪಾನ್ •┈┈┈┈┈┈┈┈┈┈┈┈┈┈┈┈┈┈┈┈┈• ಯೆನ್.

• ಜೋರ್ಡಾನ್ •┈┈┈┈┈┈┈┈┈┈┈┈┈┈┈┈┈┈┈┈┈• ದಿನಾರ್.

• ಲೆಬನಾನ್ •┈┈┈┈┈┈┈┈┈┈┈┈┈┈┈┈┈┈┈┈┈• ಪೌಂಡ್.

• ಲಕ್ಸೆಂಬರ್ಗ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಮಲಾವಿ •┈┈┈┈┈┈┈┈┈┈┈┈┈┈┈┈┈┈┈┈┈• ಕ್ವಾಚಾ (kwacha).

• ಮಲೇಷ್ಯಾ •┈┈┈┈┈┈┈┈┈┈┈┈┈┈┈┈┈┈┈┈┈• ರಿಂಗಿಟ್ಟ್.

• ಮಾಲ್ಡೀವ್ಸ್ •┈┈┈┈┈┈┈┈┈┈┈┈┈┈┈┈┈┈┈┈┈• ರುಫಿಯಾ.

• ಮಾಲ್ಟಾ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಮಾರಿಟಾನಿಯ •┈┈┈┈┈┈┈┈┈┈┈┈┈┈┈┈┈┈┈┈┈• ಓಗಿಯ.

• ಮಾರಿಷಸ್ •┈┈┈┈┈┈┈┈┈┈┈┈┈┈┈┈┈┈┈┈┈• ರೂಪಾಯಿ.

• ಮೆಕ್ಸಿಕೋ •┈┈┈┈┈┈┈┈┈┈┈┈┈┈┈┈┈┈┈┈┈• ಪೆಸೊ.

• ಮೊರಾಕೊ •┈┈┈┈┈┈┈┈┈┈┈┈┈┈┈┈┈┈┈┈┈• ದಿರಾಮ್.

• ನೇಪಾಳ •┈┈┈┈┈┈┈┈┈┈┈┈┈┈┈┈┈┈┈┈┈• ರೂಪಾಯಿ.

• ನೆದರ್ ಲ್ಯಾಂಡ್ಸ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ನ್ಯೂಜಿಲ್ಯಾಂಡ್ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ನಾರ್ವೆ •┈┈┈┈┈┈┈┈┈┈┈┈┈┈┈┈┈┈┈┈┈• ಕ್ರೋನ್.

• ಪಾಕಿಸ್ತಾನ •┈┈┈┈┈┈┈┈┈┈┈┈┈┈┈┈┈┈┈┈┈• ರೂಪಾಯಿ.

• ಫಿಲಿಫೈನ್ಸ್ •┈┈┈┈┈┈┈┈┈┈┈┈┈┈┈┈┈┈┈┈┈• ಪೆಸೊ.

• ಪೋಲೆಂಡ್ •┈┈┈┈┈┈┈┈┈┈┈┈┈┈┈┈┈┈┈┈┈• ಝ್ಲೋಟಿ (zloty).

• ಪೋರ್ಚುಗಲ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಕತಾರ್ •┈┈┈┈┈┈┈┈┈┈┈┈┈┈┈┈┈┈┈┈┈• ರಿಯಾಲ್.

• ರೊಮೇನಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಲೆವೂ.

• ಸೌದಿ ಅರೇಬಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ರಿಯಾಲ್.

• ಸಿಂಗಪುರ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ದಕ್ಷಿಣ ಆಫ್ರಿಕಾ •┈┈┈┈┈┈┈┈┈┈┈┈┈┈┈┈┈┈┈┈┈• ರಾಂಡ್.

• ದಕ್ಷಿಣ ಕೊರಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ವೊನ್

• ಸ್ಪೇನ್ •┈┈┈┈┈┈┈┈┈┈┈┈┈┈┈┈┈┈┈┈┈• ಯೂರೋ.

• ಶ್ರೀಲಂಕಾ •┈┈┈┈┈┈┈┈┈┈┈┈┈┈┈┈┈┈┈┈┈• ರೂಪಾಯಿ.

• ಸುಡಾನ್ •┈┈┈┈┈┈┈┈┈┈┈┈┈┈┈┈┈┈┈┈┈• ಸೂಡಾನೀಸ್ ಪೌಂಡ್.

• ಸ್ವಿಜರ್ಲ್ಯಾಂಡ್ •┈┈┈┈┈┈┈┈┈┈┈┈┈┈┈┈┈┈┈┈┈• ಫ್ರಾಂಕ್.

• ಸಿರಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಪೌಂಡ್.

• ತೈವಾನ್ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಥೈಲ್ಯಾಂಡ್ •┈┈┈┈┈┈┈┈┈┈┈┈┈┈┈┈┈┈┈┈┈• ಬಹ್ತ್.

• ಟರ್ಕಿ •┈┈┈┈┈┈┈┈┈┈┈┈┈┈┈┈┈┈┈┈┈• ಲಿರಾ.

• ಯುನೈಟೆಡ್ ಅರಬ್ ಎಮಿರೇಟ್ಸ್ •┈┈┈┈┈┈┈┈┈┈┈┈┈┈┈┈┈┈┈┈┈• ದಿರಾಮ್.

• ಯುನೈಟೆಡ್ ಕಿಂಗ್ಡಮ್ •┈┈┈┈┈┈┈┈┈┈┈┈┈┈┈┈┈┈┈┈┈• ಪೌಂಡ್.

• ಯುನೈಟೆಡ್ ಸ್ಟೇಟ್ಸ್ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

• ಉರುಗ್ •┈┈┈┈┈┈┈┈┈┈┈┈┈┈┈┈┈┈┈┈┈• ಪೆಸೊ.

• ವೆನಿಜುವೆಲಾ •┈┈┈┈┈┈┈┈┈┈┈┈┈┈┈┈┈┈┈┈┈• ಬೊಲಿವಾರ್.

• ವಿಯೆಟ್ನಾಂ •┈┈┈┈┈┈┈┈┈┈┈┈┈┈┈┈┈┈┈┈┈• ಡಾಂಗ್.

• ಪಶ್ಚಿಮ ಸಮೋವಾ •┈┈┈┈┈┈┈┈┈┈┈┈┈┈┈┈┈┈┈┈┈• ತಾಲಾ.

• ಝಾಂಬಿಯಾ •┈┈┈┈┈┈┈┈┈┈┈┈┈┈┈┈┈┈┈┈┈• ಕ್ವಾಚಾ (kwacha).

• ಜಿಂಬಾಬ್ವೆ •┈┈┈┈┈┈┈┈┈┈┈┈┈┈┈┈┈┈┈┈┈• ಡಾಲರ್.

Sunday, 2 August 2015

☀ಜಗತ್ತಿನ ಪ್ರಮುಖ ಭೌಗೋಳಿಕ ಅನ್ವೇಷಣೆಗಳು : (World Famous geographical discoveries / Inventions)

☀ಜಗತ್ತಿನ ಪ್ರಮುಖ ಭೌಗೋಳಿಕ ಅನ್ವೇಷಣೆಗಳು :
(World Famous geographical discoveries / Inventions)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


1). ಅಮೇರಿಕಾ •┈┈┈┈┈┈┈┈┈┈• ಕ್ರಿಸ್ಟೋಫರ್ ಕೊಲಂಬಸ್ (ಇಟಾಲಿಯನ್)

2). ಭಾರತಕ್ಕೆ ಸಮುದ್ರ ಮಾರ್ಗ •┈┈┈┈┈┈┈┈┈┈• ವಾಸ್ಕೊ ಡಾ ಗಾಮಾ (ಪೋರ್ಚುಗೀಸ್)

3). ಚೀನಾ •┈┈┈┈┈┈┈┈┈┈• ಮಾರ್ಕೋ ಪೋಲೋ

4). ಮೌಂಟ್ ಎವರೆಸ್ಟ್ •┈┈┈┈┈┈┈┈┈┈• ಎಡ್ಮಂಡ್ ಹಿಲರಿ

5). ಬ್ರೆಜಿಲ್ •┈┈┈┈┈┈┈┈┈┈• ಪೆಡ್ರೊ ಅಲ್ವಾರೆಜ್ ಕ್ಯಬ್ರಾಲ್ (ಪೋರ್ಚುಗೀಸ್)

6). ಟ್ಯಾಸ್ಮೆನಿಯಾ ದ್ವೀಪ ಮತ್ತು ನ್ಯೂಜಿಲ್ಯಾಂಡ್ •┈┈┈┈┈┈┈┈┈┈• ಟ್ಯಾಸ್ ಮನ್ (ಡಚ್)

7). ಹವಾಯಿಯನ್ ದ್ವೀಪಗಳು •┈┈┈┈┈┈┈┈┈┈• ಕ್ಯಾಪ್ಟನ್ ಕುಕ್ (ಬ್ರಿಟನ್)

8). ಉತ್ತರ ಧ್ರುವ •┈┈┈┈┈┈┈┈┈┈• ರಾಬರ್ಟ್ ಪೀರಿ (ಯುಎಸ್ಎ)

9). ದಕ್ಷಿಣ ಧ್ರುವ •┈┈┈┈┈┈┈┈┈┈• ಆಮುಂಡ್ ಸನ್ (ನಾರ್ವೆ)

10). ಸೂಯೆಜ್ ಕಾಲುವೆ •┈┈┈┈┈┈┈┈┈┈• ಫರ್ಡಿನೆಂಡ್ ಡಿ ಲೆಸ್ಸೆಪ್ಸ್

11). ವಿಕ್ಟೋರಿಯಾ ಜಲಪಾತ •┈┈┈┈┈┈┈┈┈┈• ಡೇವಿಡ್ ಲಿವಿಂಗ್ ಸ್ಟನ್ (ಬ್ರಿಟಿಷ್)

12). ಕೆಪ್ ಆಪ್ ಗುಡ್ ಹೋಪ್ •┈┈┈┈┈┈┈┈┈┈• ಬಾರ್ಥೊಲೊಮೆವ್ ಡಯಾಜ್ (ಪೋರ್ಚುಗೀಸ್)

13). ಗ್ರೀನ್ ಲ್ಯಾಂಡ್ •┈┈┈┈┈┈┈┈┈┈• ನಾರ್ವೆದೇಶದ ಎರಿಕ್

14). ಉತ್ತರ ಅಮೇರಿಕಾ •┈┈┈┈┈┈┈┈┈┈• ಲೇಫ್ ಎರ್ರಿಕ್ ಸನ್

15). ನೈಜರ್ ನದಿ •┈┈┈┈┈┈┈┈┈┈• ಮುಂಗೋ ಪಾರ್ಕ್

16). ತಂಗಾನ್ಯಿಕಾ ಸರೋವರ •┈┈┈┈┈┈┈┈┈┈• ರಿಚರ್ಡ್ ಫ್ರಾನ್ಸಿಸ್ ಬರ್ಟನ್

17). ಹಡ್ಸನ್ ಕೊಲ್ಲಿ •┈┈┈┈┈┈┈┈┈┈• ಹೆನ್ರಿ ಹಡ್ಸನ್

●.ಈ ದಿನದ (KAS/IAS) ಪ್ರಶ್ನೆ: (Short Notes) ☀.ಬಗರ್‌ ಹುಕುಂ :  (Bager Hukum) 

●.ಈ ದಿನದ (KAS/IAS) ಪ್ರಶ್ನೆ: (Short Notes)

☀.ಬಗರ್‌ ಹುಕುಂ :
(Bager Hukum)
━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನ.
(GENERAL STUDIES)

★ಪ್ರಚಲಿತ ಘಟನೆಗಳ ಮೇಲೆ ನೋಟ್ಸ್
(Notes on current affairs)


✧.ಬಗರ್‌ಹುಕುಂ ಎಂಬುದು ಉರ್ದು ಭಾಷೆ ಪದ. ಬಗರ್‌ಹುಕುಂ ಎಂದರೆ ಅನಧಿಕೃತ ಸಾಗುವಳಿ ಎಂದರ್ಥ. ಸರ್ಕಾರಿ ಗೋಮಾಳ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುವ ರೈತರು ಬಗರ್‌ಹುಕುಂ ಸಾಗುವಳಿದಾರರು. ಕಂದಾಯ ಇಲಾಖೆಯಲ್ಲಿ ಬಳಸುವ ಅನೇಕ ಪರಿಭಾಷೆಗಳಲ್ಲಿ ಇದೂ ಒಂದಾಗಿದೆ.

✧.ಊಳುವವನೇ ಭೂ ಒಡೆಯ ಕಾಯ್ದೆ ಜಾರಿಯೊಂದಿಗೆ ಬಗರ್‌ಹುಕುಂ ಸಾಗುವಳಿದಾರರು ಹುಟ್ಟಿಕೊಂಡರು. ಆಯಾಯ ಗ್ರಾಮಗಳಲ್ಲಿ ಖಾಲಿ ಇದ್ದ, ಫಲವತ್ತಾದ ಭೂಮಿಯನ್ನು ರೈತರು ಉಳುಮೆ ಮಾಡ ತೊಡಗಿದರು. ಈ ರೀತಿ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಮಂಜೂರು ಮಾಡುವಂತೆ ಹುಟ್ಟಿಕೊಂಡ ಹೋರಾಟವೇ ಬಗರ್‌ಹುಕುಂ ಸಾಗುವಳಿದಾರರ ಹೋರಾಟ.

✧.ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಬಗರ್‌ಹುಕುಂ ಸಾಗುವಳಿದಾರ ರೈತರ ಸಮಸ್ಯೆಗಳು ತೀವ್ರತರವಾಗಿವೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ಹತ್ತು ಜಿಲ್ಲೆಗಳನ್ನು ಹೊರತುಪಡಿಸಿ ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ ಸೇರಿ ಉಳಿದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾಗುವಳಿದಾರರಿದ್ದಾರೆ. ಎರಡೂ ದಶಕಗಳಿಂದಲೂ ಭೂ ಮಂಜೂರಾತಿಗೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರಿ ಭೂಮಿ ಮರು ವಶಕ್ಕೆ ಪಡೆಯುವ ಸರ್ಕಾರದ ಈಚೆಗಿನ ಯತ್ನಗಳು ಸಾಗುವಳಿದಾರ ರೈತರ ಬದುಕನ್ನೇ ಆತಂಕಕ್ಕೆ ನೂಕಿದೆ.

✧.ರಾಜ್ಯದಲ್ಲಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ 1986ರಲ್ಲೇ ಬಗರ್‌ಹುಕುಂ ಸಾಗುವಳಿದಾರರ ಚಳವಳಿ ಆರಂಭಗೊಂಡಿತ್ತು. ಚಳವಳಿಯ ತೀವ್ರತೆ ಗಮನಿದ ಸರ್ಕಾರ ಭೂ ಸಕ್ರಮಕ್ಕೆ 1991 ಹಾಗೂ 1997ರಲ್ಲಿ ಅರ್ಜಿ ಕರೆದಿತ್ತು.

✧.ಈ ಎರಡು ಅವಧಿಯಲ್ಲಿ 30 ಲಕ್ಷ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ಬಳಿಕ 16 ಲಕ್ಷ ಬಗರ್‌ಹುಕುಂ ಸಾಗುವಳಿದಾರನ್ನು ಸರ್ಕಾರವೇ ಗುರುತಿಸಿತ್ತು.

✧.ಇಲ್ಲಿಯವರೆಗೂ 12 ಲಕ್ಷ ಸಾಗುವಳಿದಾರರಿಗೆ ಭೂಮಿ ಹಂಚಲಾಗಿದೆ. ಬಗರ್‌ಹುಕುಂ ಅಡಿ ಒಬ್ಬರಿಗೆ ಐದು ಎಕರೆಯವರೆಗೂ ಭೂಮಿ ಮಂಜೂರು ಮಾಡಬಹುದು.

✧.ಆದರೆ ಒಂದೂವರೆಯಿಂದ ಎರಡು ಎಕರೆ ಸಾಗುವಳಿ ಮಾಡಿಕೊಂಡಿರುವ ರೈತರ ಸಂಖ್ಯೆಯೇ ಹೆಚ್ಚಿದೆ. ರಾಜ್ಯದಲ್ಲೆಗ 4 ಲಕ್ಷ ಬಗರ್‌ಹುಕುಂ ಸಾಗುವಳಿದಾರರು ಭೂ ಮಂಜೂರಾತಿಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಅಲೆಯುತ್ತಿದ್ದಾರೆ.


●.ಬಗರ್‌ಹುಕುಂ v/s ಸರ್ಕಾರ :
━━━━━━━━━━━━━━━━━━
✧.1964ರಲ್ಲಿ ಜಾರಿಗೆ ಬಂದ ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಲ್ಲಿ ಬಗರ್‌ಹುಕುಂ ಭೂ ಮಂಜೂರಾತಿ ಕುರಿತು ಹೇಳಲಾಗಿದೆ. ಭೂ ಮಂಜೂರಾತಿ ಅಧಿಕಾರ ಈ ಹಿಂದೆ ತಹಶೀಲ್ದಾರ್ ಬಳಿ ಇತ್ತು. ಈಗ ಈ ಅಧಿಕಾರ ಶಾಸಕರ ಅಧ್ಯಕ್ಷತೆಯ ಬಗರ್‌ಹುಕುಂ ಸಮಿತಿಗೆ ನೀಡಲಾಗಿದೆ.

✧.ಬಗರ್‌ಹುಕುಂ ಸಮಿತಿಗೆ ಆಯಾಯ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿ. ಉಳಿದ ಸದಸ್ಯರನ್ನು ಸರ್ಕಾರ ನೇಮಕ ಮಾಡುತ್ತದೆ. ಸರ್ಕಾರ ಬದಲಾದಾಗ ಸದಸ್ಯರು ಬದಲಾಗುತ್ತಾರೆ. ಆಯಾಯ ಪಕ್ಷದ ಕಾರ್ಯಕರ್ತರನ್ನೇ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುವ ಸಂಪ್ರದಾಯ ಬೆಳೆದುಬಂದಿದೆ. ಹೀಗಾಗಿಯೇ ಭೂ ಮಂಜೂರಾತಿ ನೀಡುವಲ್ಲಿ ಅಕ್ರಮ, ಸ್ವಜನ ಪಕ್ಷಪಾತಕ್ಕೆ ಕಾರಣವಾಗಿದೆ


●.ಬಗರ್‌ಹುಕುಂ ಸಾಗುವಳಿ ಕುರಿತು ರಾಜ್ಯದಲ್ಲಿನ ಇತ್ತೀಚಿನ ಕೆಲವು ಆರೋಪ - ಪ್ರತ್ಯಾರೋಪಗಳು :
━━━━━━━━━━━━━━━━━━━━━━━━━━━━━━━━━━━━━━━━━━━━
✧.ಸರ್ಕಾರಿ ಭೂಮಿ ಅತಿಕ್ರಮಣ ಸಂಬಂಧ ಎ.ಟಿ.ರಾಮಸ್ವಾಮಿ ಸಮಿತಿ ನೀಡಿದ ವರದಿ ಬಳಿಕ 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಜಾರಿಗೆ ತಂದ ಭೂ ಅತಿಕ್ರಮಣ ನಿಯಂತ್ರಣ ಕಾಯ್ದೆಯು ಬಗರ್ ಹುಕುಂ ಸಾಗುವಳಿದಾರರ ಕನಸನ್ನೇ ನುಚ್ಚು ನೂರಾಗಿಸಿದೆ ಎಂಬುದು ರೈತ ಸಂಘಟನೆಗಳ ಆರೋಪ.

✧.ಬಗರ್‌ಹುಕುಂ ಸಾಗುವಳಿದಾರರ ಭೂ ಸಕ್ರಮಕ್ಕೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧ ಪಕ್ಷದಲ್ಲಿದಾಗ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು.

✧.ಆದರೆ ಅವರ ಪಕ್ಷ ಅಧಿಕಾರಕ್ಕೆ ಬಂದಾಗ ಸಾಗುವಳಿದಾರರ ಹಿತ ಕಡೆಗಣಿಸಲಾಯಿತು ಎಂದೂ ಮಾನ್ಪಡೆ ದೂರುತ್ತಾರೆ.ಶಾಸಕರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಮಿತಿ ಇದ್ದರೂ ಅದರಿಂದ ಪ್ರಯೋಜವಿಲ್ಲ. ಭೂ ಹಂಚಿಕೆ ಮಾಡದಂತೆ ಕಾನೂನು ಕೈಕಟ್ಟಿ ಹಾಕಿದೆ. ಬಗರ್‌ಹುಕುಂ ಸಾಗುವಳಿದಾರರು ಬಹುತೇಕರು ಪರಿಶಿಷ್ಟ ಪಂಗಡ, ಜಾತಿ ಹಾಗೂ ಅಲ್ಪಸಂಖ್ಯಾತರು.

✧.ಅವರು ಸತ್ತರೂ ಹೂಳಲು ಅವರ ಬಳಿ ಆರಡಿ ಜಮೀನು ಇಲ್ಲ. ಹತ್ತಿಪ್ಪತ್ತು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲೇ ಇದ್ದುಕೊಂಡು ತೋಟ ಮಾಡಿಕೊಂಡಿದ್ದಾರೆ. ಈಗ ಅವರನ್ನೆಲ್ಲ ಒಕ್ಕಲೆಬ್ಬಿಸಬೇಕಾಗಿದೆ. ಬೇರೆ ದಾರಿ ಕಾಣದೆ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಮಾನವೀಯತೆ ಆಧಾರದಲ್ಲಿ ಈಗಿರುವ ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಕಾನೂನು ತಿದ್ದುಪಡಿ ಮಾಡುವುದಷ್ಟೇ ಪರಿಹಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯಪಡುತ್ತಾರೆ.

✧.ಭೂ ಕಾಯ್ದೆಗೆ ತಿದ್ದುಪಡಿ ಅಗತ್ಯ
ಶ್ರೀಮಂತ ರೈತರು, ಭೂಗಳ್ಳರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ನಡುವಿನ ವ್ಯತ್ಯಾಸ ಗುರುತಿಸದ ಈ ಕಾಯ್ದೆ ಸರ್ಕಾರಿ ಭೂಮಿಯಲ್ಲಿ ಇರುವವರೆಲ್ಲರೂ ಭೂಗಳ್ಳರೆಂದೇ ಹೇಳಿದೆ. ಹೀಗಾಗಿ ಬಗರ್‌ಹುಕುಂ ರೈತರು ಕೂಡ ಭೂಗಳ್ಳರ ಸಾಲಿನಲ್ಲಿ ಸೇರುವಂತಾಗಿದೆ.

✧.ಸರ್ಕಾರಿ ಭೂಮಿ ವಶಕ್ಕೆ ಪಡೆಯುವ ಎ.ಟಿ.ರಾಮಸ್ವಾಮಿ, ಬಾಲಸುಬ್ರಹ್ಮಣ್ಯಂ ವರದಿ ಜಾರಿಯ ಯತ್ನಗಳೇ ಈಗ ಬಗರ್‌ಹುಕುಂ ಸಾಗುವಳಿದಾರರು ವಿಷ ಸೇವಿಸುವ ಹಂತಕ್ಕೆ ತೆಗೆದುಕೊಂಡು ಹೋಗಿದೆ. ಸರ್ಕಾರ ಭೂ ಕಾಯ್ದೆಗೆ ತಿದ್ದುಪಡಿ ತಂದು ಕೂಡಲೇ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು.
ಮಾರುತಿ ಮಾನ್ಪಡೆ, (ಪ್ರಾಂತ ರೈತ ಸಂಘದ ಅಧ್ಯಕ್ಷ)

(Courtesy : Kannada News Papers)

Saturday, 1 August 2015

☀ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಹೇಗೆ? (How to get success in the competitive examinations?)

☀ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಹೇಗೆ?
(How to get success in the competitive examinations?)
━━━━━━━━━━━━━━━━━━━━━━━━━━━━━━━━━━━━━━━━━━━━━

★.ವ್ಯಕ್ತಿತ್ವ ವಿಕಸನ
(Personality Development Skills)


✧.ಇದು ಸ್ಪರ್ಧಾತ್ಮಕ ಯುಗ. ಇಂದು ಬಹುಪಾಲು ಕೋರ್ಸಗಳಿಗೆ ಹಾಗೂ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ. ನಮ್ಮ ವೃತ್ತಿಬದುಕಿಗೆ ಸ್ಪರ್ಧಾತ್ಮಕ ಪರೀಕ್ಷೆಗಳೇ ಸೋಪಾನ. ಹಾಗಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಅನೇಕ ಕರಿಯರ್ ಅಕಾಡೆಮಿಗಳು, ಕೋಚಿಂಗ್ ಕ್ಲಾಸ್​ಗಳು ತಕ್ಕಮಟ್ಟಿಗೆ ನೆರವಾದರೂ ಪರೀಕ್ಷೆಯನ್ನು ಎದುರಿಸಲು ನಮ್ಮಲ್ಲಿ ಪೂರ್ವತಯಾರಿ ಕೂಡ ಅಷ್ಟೇ ಮುಖ್ಯ. ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡರಷ್ಟೇ ಎಲ್ಲವನ್ನೂ ಗೆದ್ದಂತಾಗುವುದಿಲ್ಲ. ತರಬೇತಿ ಇಲ್ಲದೆಯೂ ಹಾಗೂ ತರಬೇತಿಯ ಜೊತೆಯೂ ನಮ್ಮ ತಯಾರಿ ಇರಬೇಕಾಗುತ್ತದೆ. ಮಾನಸಿಕ ಸಿದ್ಧತೆ, ಕಠಿಣ ಪರಿಶ್ರಮ ಹಾಗೂ ತಿಳಿದುಕೊಂಡಿದ್ದನ್ನು ಅಭಿವ್ಯಕ್ತಿಸುವ ರೀತಿ - ಇವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಮುಖ್ಯ ಕಾರಣಗಳಾಗುತ್ತವೆ.

●.ಗುರಿ ನಿರ್ಧರಿಸಿ :
━━━━━━━━━━━
✧.ಬದುಕಿನಲ್ಲಿ ನಮಗೆ ಸಾಕಷ್ಟು ಅವಕಾಶಗಳಿವೆ. ಹಾಗಂತ ಎಲ್ಲದಕ್ಕೂ ಕೈಹಾಕುವುದು ಮೂರ್ಖತನವಾಗುತ್ತದೆ. ಹೀಗಾಗಿ ನೀವು ಆಯ್ದುಕೊಳ್ಳುವ ಪರೀಕ್ಷೆ ಅಥವಾ ಹುದ್ದೆ ನಿಖರವಾಗಿರಲಿ. ಬೇರೆ ಬೇರೆ ಹುದ್ದೆಗಳಲ್ಲಿ ನಿಮಗೆ ಆಸಕ್ತಿಯಿದ್ದರೆ, ನೀವು ಮೊದಲ ಪ್ರಾಶಸ್ಱವನ್ನು ಯಾವುದಕ್ಕೆ ಕೊಡುತ್ತೀರಿ ಎಂಬುದನ್ನು ನಿರ್ಧರಿಸಿಕೊಳ್ಳಿ. ಅಂದರೆ ನಿಮ್ಮೆದುರು ಗುರಿ ಸ್ಪಷ್ಟವಾಗಿದ್ದರೆ ಮುಂದುನ ದಾರಿ ಸರಳವಾಗುತ್ತದೆ.


●.ಅಧ್ಯಯನ ಸಾಮಗ್ರಿ ಕಲೆ ಹಾಕಿ :
━━━━━━━━━━━━━━━━━━━
✧.ಎಲ್ಲಕ್ಕಿಂತ ಮೊದಲು ನೀವು ಮಾಡಬೇಕಾದ್ದು ಏನೆಂದರೆ ನೀವು ಆಯ್ದುಕೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮವನ್ನೊಮ್ಮೆ ಗಮನಿಸಿ. ಅದಕ್ಕೆ ತಕ್ಕಂತೆ ಎರಡು ಮೂರು ವಿಧದ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಲು ಶುರುಮಾಡಿ. ಇದಕ್ಕಾಗಿ ಹೆಚ್ಚಿನ ದುಂದು ವೆಚ್ಚ ಮಾಡದಿರಿ. ಸ್ನೇಹಿತರು ಹಾಗೂ ಗ್ರಂಥಾಲಯದ ಸಹಾಯದಿಂದ ನೀವು ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಬಹುದು. ಆರ್ಥಿಕವಾಗಿ ಸಬಲರಿದ್ದಲ್ಲಿ ಆಕರ ಗ್ರಂಥಗಳನ್ನು ಹಾಗೂ ಅಧ್ಯಯನ ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದು.


●.ಟಿಪ್ಪಣಿ ಮಾಡಿಕೊಳ್ಳಿ :
━━━━━━━━━━━━━━━
✧.ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡಾದ ಮೇಲೆ ಸುಖಾಸುಮ್ಮನೆ ಓದಿದರೆ, ಅದು ಹೆಚ್ಚು ಹೊತ್ತು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಪ್ರತಿ ಅರ್ಧ ಗಂಟೆಗೊಮ್ಮೆ ಅದನ್ನು ಮನನ ಮಾಡಿಕೊಳ್ಳುವುದು ಸೂಕ್ತ. ಅದಕ್ಕಾಗಿ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಿ. ಇದನ್ನೇ RRR (Read, Recall, Rewrite) ಟೆಕ್ನಿಕ್ ಎಂದು ಕರೆಯುತ್ತಾರೆ. ಓದುವುದು, ಮನನ ಮಾಡಿಕೊಳ್ಳುವುದು ಹಾಗೂ ಟಿಪ್ಪಣಿ ಮಾಡಿಕೊಳ್ಳುವುದರಿಂದ ಕ್ಲಿಷ್ಟವೆನಿಸುವ ವಿಷಯಗಳೂ ಸಹ ಸುಲಭವಾಗಿ ನೆನಪಿನಲ್ಲಿ ಉಳಿಯುತ್ತವೆ.


●.CUT ಮಾಡಿಕೊಳ್ಳಿ :
━━━━━━━━━━━━━━
✧.CUT ಎಂದರೆ C- Check, U-Understand, T-Test ಎಂದರ್ಥ. ಪಠ್ಯಕ್ಕನುಸಾರವಾಗಿ ಅಧ್ಯಯನ ಸಾಮಗ್ರಿಗಳನ್ನು ಓದುವುದರ ಜೊತೆಗೆ ಹಿಂದಿನ ಪರೀಕ್ಷೆಗಳಲ್ಲಿ ಎಂತಹ ಪ್ರಶ್ನೆಗಳನ್ನು ಕೇಳಿದ್ದರು, ಯಾವ ಯಾವ ವಿಷಯದ ಮೇಲೆ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಪರೀಕ್ಷಿಸಬೇಕು. ಅವುಗಳನ್ನು ಚೆನ್ನಾಗಿ ಅರಿತುಕೊಂಡು ನಾವು ಎದುರಿಸಲಿರುವ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಊಹಿಸಬೇಕು. ಅದರಂತೆ ಹಿಂದಿನ ಪ್ರಶ್ನೆಪತ್ರಿಕೆ ಅಥವಾ ಮಾದರಿ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯಾವಕಾಶದಲ್ಲಿ ಬಿಡಿಸಬೇಕು. ನಂತರ ನಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.


●.ಗುಂಪು ಚರ್ಚೆ ನಡೆಸಿ :
━━━━━━━━━━━━━━━
✧.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಗುಂಪು ಚರ್ಚೆ ನಡೆಸುವುದು ಯಾವಾಗಲೂ ಉತ್ತಮ. ಪ್ರತಿದಿನ ಒಬ್ಬೊಬ್ಬರು ಒಂದೊಂದು ವಿಷಯವನ್ನು ರ್ಚಚಿಸಬೇಕು. ಇದರಿಂದ ನಿಮಗೆ ಯಾವ ವಿಷಯ ಎಷ್ಟು ನೆನಪಿನಲ್ಲಿದೆ ಎಂಬುದರ ಅರಿವಾಗುತ್ತದೆ. ಗುಂಪು ಚರ್ಚೆ ತುಸು ಗಂಭಿರತೆಯಿಂದ ಕೂಡಿರಲಿ. ಇಲ್ಲವಾದರೆ ಅದು ಹಾಳುಹರಟೆಯಾಗುತ್ತದೆ. ಒಂದುವೇಳೆ ನೀವೊಬ್ಬರೇ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಿದ್ದರೆ ಆಗಾಗ ಗೆಳೆಯರೊಂದಿಗೆ ರ್ಚಚಿಸಲೂಬಹುದು.


●.ವಿವಿಧ ಪತ್ರಿಕೆಗಳನ್ನೋದಿ :
━━━━━━━━━━━━━━━━━
✧.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವಂತಹ ಹಲವಾರು ಪತ್ರಿಕೆಗಳು, ನಿಯತಕಾಲಿಕೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ಅಭ್ಯಸಿಸಿ. ಪ್ರತಿನಿತ್ಯ ಕನಿಷ್ಠ ಎರಡು ಕನ್ನಡ ಹಾಗೂ ಒಂದು ಆಂಗ್ಲಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನದ ಜೊತೆಗೆ ಇಂಗ್ಲಿಷ್​ಜ್ಞಾನವೂ ವೃದ್ಧಿಯಗುತ್ತದೆ. ಇದಲ್ಲದೆ ವಾರ್ತಾ ಇಲಾಖೆ ಪ್ರಕಟಿಸುವ ಕೆಲವು ಪತ್ರಿಕೆಗಳ ಮೇಲೂ ಕಣ್ಣಾಡಿಸಿ. ಜೊತೆಗೆ ಪ್ರಚಲಿತ ವಿದ್ಯಮಾನಗಳನ್ನು ಟಿಪ್ಪಣಿ ಮಾಡಿಕೊಳ್ಳಿ.


●.ಟಿವಿ, ಫೋನ್ ದೂರ ಇರಲಿ :
━━━━━━━━━━━━━━━━━
✧.ಒಂದೇ ಸಮನೆ ಓದುತ್ತ ಕುಳಿತರೆ ಏಕಾಗ್ರತೆ ಸಾಧಿಸುವುದು ಸಾಧ್ಯವಿಲ್ಲ. ತುಸು ಮನರಂಜನೆ ಹಾಗೂ ವಿಶ್ರಾಂತಿ ಅವಶ್ಯಕ. ಹಾಗಂತ ಅದೇ ನೆಪದಲ್ಲಿ ಟಿವಿ ಹಾಗೂ ಮೊಬೈಲಿನಲ್ಲಿ ಕಣ್ಣಾಡಿಸುತ್ತ ಕುಳಿತರೆ ನಿಮ್ಮ ಓದು ಮುಂದೆ ಸಾಗುವುದಿಲ್ಲ. ಟಿವಿ, ಫೋನ್, ಮುಂದಾದ ಗ್ಯಾಜೆಟ್​ಗಳನ್ನು ಮಿತವಾಗಿ ಬಳಸಿ. ಸಾಧ್ಯವಾದರೆ ಇವುಗಳಿಂದ ದೂರವಿರುವುದೇ ಉತ್ತಮ.


●.ಮತ್ತೇನು ಮಾಡಬಹುದು? :
━━━━━━━━━━━━━━━━━
✧.ನಿಮ್ಮ ಓದನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಹಾಗೂ ಓದಿದ್ದು ನೆನಪಿನಲ್ಲಿರಲು ಕೆಲವು ತಂತ್ರಗಳನ್ನು ಬಳಸಬಹುದು. ನಿಮೊನಿಕ್ಸ್ ತಂತ್ರದ ಮೂಲಕ ಕೆಲವು ಸಂಗತಿಗಳನ್ನು ಬೇಗನೆ ನೆನಪಿನಲ್ಲಿಟ್ಟುಕೊಳ್ಳಬಹುದು.

✧.ಉದಾಹರಣೆಗೆ ಎಂಟು ಗ್ರಹಗಳ ಹೆಸರುಗಳನ್ನು My Very Educated Mother Just Showed Us Nest ಎಂಬ ವಾಕ್ಯದಡಿ ನೆನಪಿನಲ್ಲಿಡಬಹುದು; ಕಾಮನಬಿಲ್ಲಿನಲ್ಲಿರುವ ಬಣ್ಣಗಳನ್ನು ಹೆಸರಿಸಲು VIBGYOR ನೆನಪಿನಲ್ಲಿಟ್ಟುಕೊಂಡರೆ ಸಾಕು. ಇಂತಹ ತಂತ್ರಗಳನ್ನು ನೀವೇ ಕಂಡುಹಿಡಿದುಕೊಳ್ಳಿ. ಅಲ್ಲದೆ, ನಿಯಮಿತವಾದ ಧ್ಯಾನ, ವ್ಯಾಯಾಮ, ಯೋಗಾಸನ, ಉತ್ತಮ ಆಹಾರ ಸೇವನೆ, ಸೊಂಪಾದ ನಿದ್ದೆ ಇವೆಲ್ಲವೂ ನಮಗೆ ಪರೋಕ್ಷವಾಗಿ ನೆರವಾಗಬಲ್ಲವು.

✧.ಒಟ್ಟಿನಲ್ಲಿ ಎರಡು-ಮೂರು ತಾಸುಗಳ ಪರೀಕ್ಷೆಗೆ ನಮ್ಮ ಬದುಕಿನ ಗತಿಯನ್ನು ಬದಲಿಸುವ ಶಕ್ತಿಯಿರುವುದರಿಂದ ಇದರ ಕುರಿತು ಅಲಕ್ಷ್ಯಬೇಡ. ಮೊದಲೇ ಹೇಳಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿದ್ಧತೆ, ಪರಿಶ್ರಮ ಹಾಗೂ ಅಭಿವ್ಯಕ್ತಿ ಈ ಮೂರು ಅಂಶಗಳು ಬಹುಮುಖ್ಯವಾಗಿದ್ದು ಇವುಗಳಲ್ಲಿ ಒಂದು ದುರ್ಬಲವಾದರೆ ಉಳಿದದ್ದೆಲ್ಲವೂ ವ್ಯರ್ಥ. ಆದ್ದರಿಂದ ಇಂದಿನಿಂದಲೇ ಸರಿಯಾದ ಸಿದ್ಧತೆಯೊಂದಿಗೆ ಆರಂಭಿಸಿ, ಅಭ್ಯಸಿಸಿ. ಆಲ್ ದಿ ಬೆಸ್ಟ್!


●.ಪರೀಕ್ಷಾ ಕೇಂದ್ರದಲ್ಲಿ :
━━━━━━━━━━━━━━
✧. ಪರೀಕ್ಷೆ ಪ್ರಾರಂಭಕ್ಕೂ ಮುನ್ನ ನಿಮ್ಮ ಸೀಟಿನಲ್ಲಿ ಕುಳಿತಾಗ ದೀರ್ಘವಾದ ಉಸಿರಾಟ ನಡೆಸಿ, ಪ್ರಶ್ನೆಪತ್ರಿಕೆ ಸಿಕ್ಕ ಕೂಡಲೇ ಉತ್ತರಿಸುವ ಮೊದಲು ಸೂಚನೆಗಳನ್ನು ಸರಿಯಾಗಿ ಓದಿ.

✧. ಪ್ರಶ್ನೆಗೆ ಉತ್ತರ ನಿಖರವಾಗಿ ಗೊತ್ತಿಲ್ಲದಿದ್ದಾಗ ಹೆಚ್ಚು ಯೋಚಿಸದೇ ಮುಂದಿನ ಪ್ರಶ್ನೆಗೆ ಉತ್ತರಿಸಿ. ನೀವು ಉತ್ತರಿಸಿರುವ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆಯಲ್ಲಿ ತಪ್ಪದೇ ಗುರುತಿಸಿ. ಇದರಿಂದ ಕೊನೆಯಲ್ಲಿ ನೀವು ಯಾವ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂಬುದನ್ನು ತಿಳಿದುಕೊಂಡು ಬೇಗ ಉತ್ತರಿಸಲು ಸಾಧ್ಯವಾಗುತ್ತದೆ.

✧. ಪ್ರಶ್ನೆಪತ್ರಿಕೆಗಳಲ್ಲಿ ಭಾಗಗಳಿದ್ದರೆ ಮೊದಲು ನಿಮಗೆ ಸರಳವೆನಿಸುವ ಭಾಗದ ಪ್ರಶ್ನೆಗಳಿಗೆ ಉತ್ತರಿಸಿ, ಆಯ್ಕೆಗಳಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವ ಸಂಭವವಿರುತ್ತದೆ. ಅದನ್ನೂ ಪ್ರಯತ್ನಿಸಿ.

✧. ಪ್ರತಿ ಪ್ರಶ್ನೆಗೆ 60 ಸೆಕೆಂಡುಗಳಿಗಿಂತ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ, ಋಣಾತ್ಮಕ ಅಂಕಗಳಿರುವ ಸಂದರ್ಭದಲ್ಲಿ ನಿಮಗೆ ಗೊತ್ತಿರದ ಪ್ರಶ್ನೆಗಳಿಗೆ ಉತ್ತರಿಸಲೇಬೇಡಿ.

(Courtesy :Vijayavani Newspaper)