"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 December 2013

ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad):

ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad): -

1915ರಲ್ಲಿ ಮೈಸೂರಿನ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಏರ್ಪಡಿಸಿದ ಸಮ್ಮೇಳನದ ಫಲವಾಗಿ ಸ್ಥಾಪನೆಯಾಯಿತು. ಇದರ ಮೊದಲ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. H.V.ನಂಜುಂಡಯ್ಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಏಳಿಗೆಗೆ ನಿರಂತರವಾಗಿ ಶ್ರಮಿಸುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ, ಕನ್ನಡ ಸ್ಥಾನಮಾನ ಹಾಗೂ ಏಕೀಕರಣ, ಕನ್ನಡ ಜನಜಾಗೃತಿ ಮೊದಲಾದ ಮಹತ್ಕಾರ್ಯಗಳನ್ನು ಕೈಗೊಂಡಿರುವ ಪ್ರಮುಖ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್.

 -- ಉದ್ದೇಶಗಳು:
ಕನ್ನಡ ವ್ಯಾಕರಣ, ಭಾಷಾಚರೀತ್ರೆ, ನಿಘಂಟುಗಳು ಇವುಗಳ ರಚನೆ, ಕನ್ನಡಶಾಸ್ತ್ರ ಗ್ರಂಥಗಳ ವಿಷಯವಾಗಿ ಚರ್ಚೆ, ನಿರ್ಣಯಗಳ ಅಂಗೀಕಾರ ಉತ್ಕೃಷ್ಟ ಪ್ರಾಚೀನ ಗ್ರಂಥಗಳ ಪ್ರಕಟಣೆ, ಕನ್ನಡ ಸಂಸ್ಥಾನಗಳ ಚರಿತ್ರೆಗಳ ಸಂಗ್ರಹ ಇತ್ಯಾದಿ.

★ ಸಾಮಾನ್ಯ ಜ್ಞಾನ Continued....

★ ಸಾಮಾನ್ಯ ಜ್ಞಾನ Continued ... 

41) ಮಾಲ್ಡೀವ್ಸ್ ದೇಶದ 6ನೇ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸಿದವರು?
 ★ ಅಬ್ದುಲ್ಲಾ ಯಮೀನ್.

 42) 2013 ನೇ ಸಾಲಿನ ಅಂತರಾಷ್ಟ್ರೀಯ ' ಇಂದಿರಾಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ, ಅಭಿವೃದ್ಧಿ ' ಪ್ರಶಸ್ತಿ ಪಡೆದವರು?
★ ಏಂಜೆಲಿನಾ ಮಾರ್ಕೆಲ್.

 43) ಮೂಲತಃ ಭಾರತೀಯ ಉಪಖಂಡವು ಯಾವ ಅತೀ ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?
★ ಗೊಂಡವಾನಾ ಖಂಡ.

44) ' ವಿಶ್ವದ ಕಾಫಿ ಬಂದರು ' ?
★ ಸ್ಯಾಂಟೋಸ್.

45) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ ವಸ್ತುಗಳನ್ನು ನೋಡಲು ಬಳಸುವ ಉಪಕರಣ?
★ ಪೆರಿಸ್ಕೋಪ್.

46) ಮೋಟಾರ್ ಕಾರ್ ಚಾಲಕನ ಸುರಕ್ಷತೆಗಾಗಿ ಉಪಯೋಗಿಸುವ ವಾಯುಚೀಲದಲ್ಲಿ ತುಂಬಿರುವ ಅನೀಲ?
★ ಸೋಡಿಯಂ ಅಝೈಡ್.

47) ಭಾರತರತ್ನ ಪುರಸ್ಕೃತ ಪ್ರೊ. ರಾವ್ ರವರು ಯಾವ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ?
★ ಘನಸ್ಥಿತಿ ಮತ್ತು Material Chemistry

48) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
★ ಸಚಿನ್ ತೆಂಡೂಲ್ಕರ್.

49) ಜಗತ್ತಿನ ಮೊಟ್ಟ ಮೊದಲ ಮುದ್ರಿತ ಪುಸ್ತಕ?
★ ವಜ್ರ ಸೂತ್ರ.

 50) ಬಿಳಿ ಮತ್ತೂ ನೀಲಿ ನೈಲ್ ನದಿಗಳ ಸಂಗಮವಾಗುವ ಸ್ಥಳ?
★ ಸುಡಾನಿನ ಬಾರ್ಮೋಮ್.

51) ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ ಯಾವುದು?
★ ಸ್ವಯಂ ಸೇವಕ.

52) ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?
★ ಮಹಾ ಪ್ರಮಾಣ್ ಘಾಟ್.

 53) ಪ್ರತೀದಿನ ಒಂದು ಮಗುವನ್ನು ರಕ್ಷಿಸುವ ಕುರಿತು SACH(Save A Child's Heart) ಯೋಜನೆ ಮೊದಲಿಗೆ ಆರಂಭಗೊಂಡಿದ್ದು ಯಾವ ರಾಜ್ಯದಲ್ಲಿ?
★ ತಮಿಳುನಾಡು.

 54) ವಿಶ್ವದ ಅತೀ ದೊಡ್ಡ ಕಡಲು ದಂಡೆ ಹೊಂದಿರುವ ದೇಶ?
★ ಜಪಾನ್.

55) ಶ್ರೀಲಂಕಾದ ಅತೀ ಎತ್ತರದ ಶಿಖರ?
★ ಪಿದುರು ತುಲಗಲ (2,499 ಮೀ)

 56) ಯಾವ ವ್ಯಕ್ತಿಯ ವರದಿಯನ್ನು ' ಸಂವಿಧಾನದ ನೀಲಿ ನಕಾಶೆ ' ಎನ್ನುವರು?
★ ಮೊತಿಲಾಲ್ ನೆಹರು (1922)

57) ವಿಶ್ವದ ಅತ್ಯಂತ ಎತ್ತರದ ಕ್ರಿಕೇಟ್ ಮೈದಾನ ಎಲ್ಲಿದೆ?
 ★ ಬೇಲ್.

 58) ವಿಶ್ವದಲ್ಲೇ ಮೊದಲಬಾರಿಗೆ ಸಾಹಿತ್ಯಕ್ಕೆ ನೋಬೆಲ್ ಪ್ರಶಸ್ತಿ ಪಡೆದ ಮಹಿಳೆ?
★ ಪರ್ಲ್ ಬಕ್.

 59) ಮಹಾಭಾರತವನ್ನು ಬಂಗಾಳಿಗೆ ಅನುವಾದಿಸಿದ ಮುಸಲ್ಮಾನ ದೊರೆ?
★ ಮೀರ್ ಜಾಫರ್.

 60) ' ವಿಶ್ವದ ವಾಹನಗಳ ತಯಾರಿಕಾ ರಾಜಧಾನಿ '(Automobile Capital of the World) ಯಾವುದು?
 ★ ಡೆಟ್ರಾಯಿಡ್.

61) ' ನ್ಯೂ ಮೂರ್ ಐಲೆಂಡ್ ' ಇದು ಈ ಎರಡು ದೇಶಗಳ ನಡುವಿನ ವಿವಾದಾತ್ಮಕ ವಿಷಯ:
★ ಭಾರತ - ಬಾಂಗ್ಲಾ ದೇಶ.

62) ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ?
★ ನ್ಯೂಜಿಲೆಂಡ್.

63) ಅತ್ಯಂತ ಹಗುರವಾದ ಲೋಹ?
★ ಲೀ.

64) ಏಷ್ಯಾದಲ್ಲೇ ಅತ್ಯಂತ ಹಳೆಯ ಷೇರು ಮಾರುಕಟ್ಟೆ?
★ ಮುಂಬೈ MSE (Mumbai Stock Exchange)

65) ಭಾರತದ ಅತೀ ದೊಡ್ಡ (SEZ-special Economic Zone) ವಿಶೇಷ ವಿತ್ತ ವಲಯ ?
★ ಉತ್ತರ ಪ್ರದೇಶದ ನೊಯಿಡಾ.

66) ಕನ್ನಡದ ಮೂರು ಪ್ರಮುಖ ಗದ್ಯ ಕೃತಿಗಳು:
★ ೧) ಮುದ್ರಾಮಂಜೂಷ (ರಚಿಸಿದವರು - ಕೆಂಪು ನಾರಾಯಣ) .
೨) ಚಾವುಂಡರಾಯ ಪುರಾಣ (ರಚಿಸಿದವರು -ಚಾವುಂಡರಾಯ) .
೩) ವಡ್ಡಾರಾಧನೆ (ರಚಿಸಿದವರು -ಶಿವಕೋಟಾಚಾರ್ಯ).

67) ಕೃತಕ ಮಳೆ ಉಂಟಾಗುವಂತೆ ಮಾಡಲು ಬಳಸುವ ರಾಸಾಯನಿಕ ವಸ್ತು?
★ ಸಿಲ್ವರ್ ಅಯೋಡೈಡ್.

 68) ಗೌತಮ ಬುದ್ಧ ನ ಬಗ್ಗೆ ಭವಿಷ್ಯ ನುಡಿದ ಗುರುವಿನ ಹೆಸರು?
 ★ ಅಸ್ಸಿಮಾ.

 69) ಗೌತಮ ಬುದ್ಧನ ಹಿಂದಿನ ಜೀವನ ಚರಿತ್ರೆಗಳನ್ನು ತಿಳಿಸುವ ಕೃತಿ?
★ ಜಾತಕಗಳು.

70) ಗೊಹ್ಲಾ ರಾಷ್ಟ್ರೀಯ ಉದ್ಯಾನ ಎಲ್ಲಿದೆ?
★ ಹಿಮಾಚಲ ಪ್ರದೇಶದ ಕುಲು ದಲ್ಲಿದೆ.

 72) ಭೂಗೋಳದ ಮೇಲೆ ಕಾಲ್ಪನಿಕವಾಗಿ ಎಳೆಯಲಾಗಿರುವ ರೇಖಾಂಶಗಳ ಸಂಖ್ಯೆ ಎಷ್ಟು?
★ 360.

 73) ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುವ ಗ್ರಂಥಿ?
★ ಹೈಪೊಥಲಾಮಸ್.

 74) ಬೀಜಗಳ ಬಂಜೆತನವನ್ನು ನಿವಾರಿಸಲು ಬಳಸುವ ರಾಸಾಯನಿಕ?
★ ಜಿಬ್ಬರಲಿಕ್ ಆಮ್ಲ.

75) UIDAI ಇದರ ವಿಸ್ತೃತ ರೂಪ:

★ The Unique Identification Authority of India. (ಭಾರತದ ಗುರುತು ಪತ್ರ ನೀಡಿಕೆಯ ಪ್ರಾಧಿಕಾರ)

77) ಬೆಂಕಿ ಆರಿಸುವ ಯಂತ್ರಗಳಲ್ಲಿ ಉಪಯೋಗಿಸುವ ಅನಿಲ:

★ ಕಾರ್ಬನ್ ಡೈ ಆಕ್ಸೈಡ್.

 78) ಆಸ್ಪತ್ರೆಗಳಲ್ಲಿ ಬಳಸುವ ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಇರುವ ಅನಿಲಗಳೆಂದರೆ ' ಆಕ್ಸಿಜನ್ ಮತ್ತು: 
★ ಹೀಲಿಯಂ.

79) ಆರ್ಕಿಟಿಕ್ ಪ್ರಾಂತ್ಯಕ್ಕೆ ಹೋದ ಪ್ರಥಮ ಭಾರತ ತಂಡದ ನೇತೃತ್ವ ವಹಿಸಿದ್ದ ವಿಜ್ಞಾನಿ ?
★ ರಸಿಕ್ ರವೀಂದ್ರ.

80) ' ಹೈಡ್ ಕಾಯಿದೆ ' ಯಾವುದಕ್ಕೆ ಸಂಬಂಧಿಸಿದ್ದು?
★ ಭಾರತ- ಅಮೇರಿಕ ಪೌರ ಅಣು ಸಹಕಾರಕ್ಕೆ ಸಂಬಂಧಿಸಿದ್ದು.

81) ' ಅಥ್ಲಿಟ್ ಫೂಟ್ ' ಎಂಬ ರೋಗ ಯಾವುದರಿಂದ ಹರಡುತ್ತದೆ?
★ ಫಂಗಸ್.

82) ಯಾವ ನದಿ 3 ಮಾರ್ಗಗಳಲ್ಲಿ ಬೇರ್ಪಟ್ಟು ಮತ್ತೇ ಸ್ವಲ್ಪ ದೂರ ಕ್ರಮಿಸಿದ ನಂತರ ಬೆರೆಯುವುದರೊಂದಿಗೆ ಶ್ರೀರಂಗಪಟ್ಟಣ, ಶಿವನ ಸಮುದ್ರ ದ್ವೀಪಗಳೇರ್ಪಟ್ಟವು?
 ★ ಕಾವೇರಿ ನದಿ.

 83) ದೆಹಲಿಯನ್ನಾಳಿದ 8 ಮಂದಿ ಸುಲ್ತಾನರ ಆಳ್ವಿಕೆಯನ್ನು ನೋಡಿದನು ಯಾರು?
★ ಅಮೀರ್ ಖುಸ್ರೋ.

 84) ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದವರು ಯಾರು?
★ ಜೆ.ಬಿ. ಕೃಪಲಾನಿ.

85) ಭಗವದ್ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಆಂಗ್ಲ ಭಾಷೆಗೆ ಅನುವಾದ ಮಾಡಿದವರು?
 ★ ಚಾರ್ಲ್ಸ್ ವಿಲ್ಕಿನ್.

 86) ದೇಶದೊಳಗಿನ ಅತಿ ಕಡಿಮೆ ಯೆರೈನ್ ಪಾರ್ಕ್ ಗಳ ಪೈಕಿ ಒಂದಾದ ' ಭಿತರ್ ಕನಿಕಾ ರಾಷ್ಟೀಯ ಉದ್ಯಾನವನ ' ಯಾವ ರಾಜ್ಯದಲ್ಲಿದೆ?
★ ಓರಿಸ್ಸಾ.

87) ' ಅರಕನ್ ಯೋಮ ' ಎಂಬುದು ಹಿಮಾಲಯಗಳ ಮುಂದುವರಿದ ಭಾಗ, ಇದು ಎಲ್ಲಿದೆ?
★ ಮಯನ್ಮಾರ್.

★ ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ :

ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ :

 ★ ಭಾರತೀಯ ಕ್ರೈಂ ದಾಖಲೆ ಬ್ಯೂರೊ ನೀಡಿರುವ ವರದಿಯ ಪ್ರಕಾರ ೨೦೦೯ ರಿಂದ ೨೦೧೧ ರವರೆಗೆ ದೇಶದಲ್ಲಿ ಸುಮಾರು ೬೮,೦೦೦ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ! ಸರಾಸರಿ ಪ್ರತಿ ನಿಮಿಷಕ್ಕೊಂದು ಅತ್ಯಾಚಾರದ ಪ್ರಯತ್ನ ನಡೆಯುತ್ತಲೇ ಇರುತ್ತದೆಎಂದು ಸಹ ಹೇಳಲಾಗುತ್ತಿದೆ.( ಜನೆವರಿ 2013 )

★ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಕಾರ ಪ್ರಪಂಚದ ಪ್ರತಿ 4 ಮಂದಿಯಲ್ಲಿ ಒಬ್ಬರು ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡುತ್ತಿದ್ದಾರೆ ಹಾಗೂ ಜಾಗತಿಕವಾಗಿ ಶೇ. 28 ರಷ್ಟು ಪುರುಷರು ಮತ್ತೂ ಶೇ. 25 ರಷ್ಟು ಮಹಿಳೆಯರು ಲಂಚ ನೀಡುತ್ತಿದ್ದಾರೆ.

★ ಕರ್ನಾಟಕದಲ್ಲಿ 99014 ಹೆಕ್ಟೇರ್ ಅರಣ್ಯ ಪ್ರದೇಶ ಅಕ್ರಮವಾಗಿ ಒತ್ತುವರಿಗೆ ಒಳಗಾಗಿದೆ. .( ಜನೆವರಿ 2013 )

★ Global Financial Integrity ಸಂಸ್ಥೆಯ ವರದಿ ಪ್ರಕಾರ ಕಪ್ಪು ಹಣದ ಹಾವಳಿಯಿಂದ ಭಾರತವು ಕಳೆದ 10 ವರ್ಷಗಳಲ್ಲಿ 123 ಶತಕೋಟಿ ಡಾಲರ್ (676500 ಕೋಟಿ ರೂ.) ನಷ್ಟ ಅನುಭವಿಸಿದೆ..( ಜನೆವರಿ 2013 )

★ ಇಂದು ದೇಶದ 543 ಸದಸ್ಯರಲ್ಲಿ (MP) 162 MP ಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ರಾಜ್ಯಗಳ MLA, MLC ಗಳ ಪೈಕಿ 1258 ( 4032 ಸದಸ್ಯರು ) ಕ್ರಿಮಿನಲ್ ಕೇಸ್ ನಲ್ಲಿ ಸಿಕ್ಕಿಕೊಂಡಿದ್ದಾರೆ. ( ನವಂಬರ್ 2013 ).

★ ಸರ್ಕಾರಿ ದಾಖಲೆಗಳ ಪ್ರಕಾರ 2011-12 ರಲ್ಲಿ ಮನೆಗೆಲಸಕ್ಕಾಗಿ ನಿಯೋಜಿಸಲೆಂದು ಕಳ್ಳಸಾಗಣೆ ಮಾಡುವ 126,321 ಚಿಕ್ಕ ಹೆಣ್ಣುಮಕ್ಕಳನ್ನು ರಕ್ಷಿಸಲಾಗಿದೆ. ಈ ಕಳ್ಳಸಾಗಣೆ ಪ್ರಮಾಣ 2010 ನೇ ಸಾಲಿಗಿಂತ ಶೇ.27 ರಷ್ಟು ಹೆಚ್ಚು. (ಡಿಸಂಬರ್ 2013).

★ ಕಳೆದ 8 ವರ್ಷಗಳಿಂದ ಈಚೆಗೆ ದೇಶಾದ್ಯಂತ 1000 ಕ್ಕೂ ಹೆಚ್ಚು ಕೋಮು ಗಲಭೆಗಳು ಸಂಭವಿಸಿವೆ. ಇವಕ್ಕೆ ಸುಮಾರು 1000 ಮಂದಿ ಬಲಿಯಾಗಿದ್ದಾರೆ. 2005-13 ರ ಅವಧಿಯನ್ನ ಪರಿಗಣಿಸಿದರೆ ಪ್ರತಿ 10 ಲಕ್ಷ ಜನಸಂಖ್ಯೆಗೆ ಅತೀ ಹೆಚ್ಚು ಕೋಮು ಗಲಭೆಗೆ ಒಳಗಾಗಿರುವ ಮೊದಲ 5 ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ ಹಾಗೂ ಕೇರಳ ಸ್ಥಾನ ಪಡೆದಿವೆ. ಕೋಮು ಗಲಭೆಗಳ ವಿಚಾರದಲ್ಲಿ ಕರ್ನಾಟಕ 2 ನೇ ಸ್ಥಾನ ಪಡೆದಿದೆ. (ನವೆಂಬರ್ 2013).

 ★ ನ್ಯೂಯಾರ್ಕ್ ಮೂಲದ ' ವಿಶ್ವ ಸ್ಮಾರಕ ನಿಧಿ ' (WMF- Word Monuments Fund) ಸಂಸ್ಥೆ 2014 ನೇ ಸಾಲಿನ ಅಂತರ್ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಅದರಲ್ಲಿ 41 ದೇಶಗಳ 67 ಸ್ಮಾರಕಗಳು ಸ್ಥಾನ ಪಡೆದಿವೆ. ಈ ಸಂಸ್ಥೆಯಿಂದ ಆಯ್ಕೆಯಾಗಿರುವ ಕರ್ನಾಟಕದ ಸ್ಥಳ ' ಬೀದರ್ ಜಿಲ್ಲೆ '. ಇದರ ಜೊತೆಗೆ ' ಉತ್ತರ ಪ್ರದೇಶದ ಫತೇಪುರ ಸಿಕ್ರಿ, ರಾಜಸ್ಥಾನದ ಡುಂಗರ ಪುರದ ಜನಮಹಲ್ ಸಹ ಸ್ಥಾನ ಪಡೆದಿವೆ. (ನವೆಂಬರ್ 2013).

 ★ ಕ್ರಿ.ಶ. 2050 ರ ವೇಳೆಗೆ ಭಾರತದ ಜನಸಂಖ್ಯೆ 160 ಕೋಟಿ ಆಗಲಿದ್ದು, ಚೀನಾದ ಜನಸಂಖ್ಯೆ130 ಕೋಟಿ ಮತ್ತೂ ಒಟ್ಟಾರೆ ವಿಶ್ವದ ಜನಸಂಖ್ಯೆ970 ಕೋಟಿ ಇರುತ್ತದೆ ಎಂದು ಫ್ರೆಂಚ್ ಅಧ್ಯಯನದ ವರದಿ ತಿಳಿಸಿದೆ. (ನವೆಂಬರ್ 2013).

★ ತೈಲೋತ್ಪನ್ನಗಳ ಸದ್ಯದ ದರದ ಅನ್ವಯ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಪ್ರಸಕ್ತ ವರ್ಷ ಆಗಬಹುದಾದ ನಷ್ಟದ ಅಂದಾಜು ಮೊತ್ತ 156000 ಕೋಟಿ ರೂ. (ನವೆಂಬರ್ 2013).

★ ಹಣಕಾಸು ಸಚಿವಾಲಯ ಒಟ್ಟು 2000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಬಂಡವಾಳ ಹೂಡಿಕೆಯ 15 ಪ್ರಸ್ತಾವಗಳಿಗೆ ಅನುಮೋದನೆ ನೀಡಿತು. (ನವೆಂಬರ್ 2013).

 ★ ಪ್ರತಿ ದಿನಸಾಮಾಜಿಕ ಜಾಲತಾಣ, ಇ-ಮೇಲ್ ಮತ್ತು ಇ-ಶಾಪಿಂಗ್ ಬಳಕೆ ಮಾಡುವ ಭಾರತೀಯ ಮಹಿಳೆಯರ ಸರಾಸರಿ ಸಂಖ್ಯೆ: 24,00,000.

 ★ ಒಬ್ಬ ಮನುಷ್ಯನ 70 ವರ್ಷ ಆಯುಸ್ಸಿನಲ್ಲಿ ಸುಮಾರು 2391480000 ಸಾರಿ ಹೃದಯ ಬಡಿತವುಂಟಾಗುವುದು.

★ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಟಾನ ಸಚಿವಾಲಯದ 2011-12 ರ ಸಮೀಕ್ಷೆಯ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ತಿಂಗಳಿಗೆ ತಮ್ಮ ವ್ಯಸನಗಳಿಗಾಗಿ ( ಸಿಗರೇಟು, ಬೀಡಿ, ತಂಬಾಕು ಇತ್ಯಾದಿ ) ಸರಾಸರಿ 1430 ರೂ. ಖರ್ಚು ಮಾಡುತ್ತಾರೆ. ಇದು ನಗರವಾಸಿಗಳಿಗಿಂತ ಹೆಚ್ಚು.

 ★ ಒಂದು ಅಧಿಕೃತ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ 9000 ಕೋಟಿ ರೂ. 2012 ರ ಅಂತ್ಯದಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಮತ್ತು ಸಂಸ್ಥೆಗಳು 1.34 ಶತಕೋಟಿ ರೂ. ಮೊತ್ತವನ್ನು ನೇರವಾಗಿ ಮತ್ತೂ 77 ದಶಲಕ್ಷ ರೂ. ಮೊತ್ತವನ್ನು ಬೇನಾಮಿ ಹೆಸರಿನಲ್ಲಿ ಠೇವಣಿ ಇರಿಸಿದ್ದು ಈಗ ಠೇವಣಿಯ ಮೊತ್ತದಲ್ಲಿ ಶೇ. 35 ರಷ್ಟು ಇಳಿಕೆಯಾಗಿದೆ. 2007 ರ ಮಾಹಿತಿಯ ಪ್ರಕಾರ ವಿಶ್ವದ ಇತರ ರಾಷ್ಟ್ರಗಳ ನಾಗರಿಕರು ರಹಸ್ಯವಾಗಿ ಇರಿಸಿರುವ ಮೊತ್ತ 2.6 ಶತಕೋಟಿ ರೂ.

★ 2012 ರಲ್ಲಿ ಭಾರತದ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಶೇ. 22.2 ರಷ್ಟು ಹೆಚ್ಚಳವಾಗಿದೆ. ಸಿರಿವಂತರ ಏರಿಕೆಯ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಎರಡನೇಯ ಸ್ಥಾನದಲ್ಲಿದೆ. ಹಾಂಕಾಂಗ್ ಮೊದಲ ಸ್ಥಾನದಲ್ಲಿದೆ.

★ ಕರ್ನಾಟಕ ರಾಜ್ಯದಲ್ಲಿ 247 ಉಪ ನೊಂದಣಿ ಕಚೇರಿಗಳಿದ್ದು, ಅವುಗಳಲ್ಲಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 43 ಉಪ ನೊಂದಣಿ ಕಛೇರಿಗಳಿವೆ.

★ ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿದವರ ಪ್ರಮಾಣ 1991 ರಲ್ಲಿ. ಶೇ. 57.78 ರಷ್ಟಿತ್ತು. 2011 ರಲ್ಲಿ ಅದು ಶೇ. 49.28 (137.36 ಲಕ್ಷ ) ರಷ್ಟು. ಕೃಷಿಯನ್ನು ಅವಲಂಬಿಸಿದವರ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ಕೃಷಿ ನಿರ್ವಹಿಸಲಾಗದೆ ಬದುಕನ್ನು ನಡೆಸುವುದು ಕಷ್ಟವಾಗಿ ಬಡವರು ಕೃಷಿಯನ್ನು ಮತ್ತು ಗ್ರಾಮಗಳನ್ನು ತ್ಯಜಿಸಿ ಹೊಟ್ಟೆಪಾಡಿಗಾಗಿ ನಗರಗಳನ್ನು ಸೇರುತ್ತಿರುವುದಾಗಿದೆ. ಜೊತೆಗೆ ಸರ್ಕಾರದ ಬೇಜವಾಬ್ದಾರಿ ನಿರ್ಧಾರಗಳಿಂದ ಕೃಷಿ ಭೂಮಿಗೆ ಕೊಡಲಿ ಏಟು ಬೀಳುತ್ತಿರುವುದು. ರಾಜ್ಯದಲ್ಲಿ 71.56 ಲಕ್ಷ ಭೂರಹಿತ ದಿನಗೂಲಿ ದುಡಿಮೆಗಾರರು ಅತ್ಯಂತ ಅಭದ್ರತೆಯ ಬದುಕನ್ನು ದೂಡುತ್ತಿದ್ದಾರೆ.

★ ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ :

★ ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ : ★ ಭಾರತೀಯ ಕ್ರೈಂ ದಾಖಲೆ ಬ್ಯೂರೊ ನೀಡಿರುವ ವರದಿಯ ಪ್ರಕಾರ ೨೦೦೯ ರಿಂದ ೨೦೧೧ ರವರೆಗೆ ದೇಶದಲ್ಲಿ ಸುಮಾರು ೬೮,೦೦೦ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ! ಸರಾಸರಿ ಪ್ರತಿ ನಿಮಿಷಕ್ಕೊಂದು ಅತ್ಯಾಚಾರದ ಪ್ರಯತ್ನ ನಡೆಯುತ್ತಲೇ ಇರುತ್ತದೆಎಂದು ಸಹ ಹೇಳಲಾಗುತ್ತಿದೆ.( ಜನೆವರಿ 2013 ) ★ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಕಾರ ಪ್ರಪಂಚದ ಪ್ರತಿ 4 ಮಂದಿಯಲ್ಲಿ ಒಬ್ಬರು ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡುತ್ತಿದ್ದಾರೆ ಹಾಗೂ ಜಾಗತಿಕವಾಗಿ ಶೇ. 28 ರಷ್ಟು ಪುರುಷರು ಮತ್ತೂ ಶೇ. 25 ರಷ್ಟು ಮಹಿಳೆಯರು ಲಂಚ ನೀಡುತ್ತಿದ್ದಾರೆ. ★ ಕರ್ನಾಟಕದಲ್ಲಿ 99014 ಹೆಕ್ಟೇರ್ ಅರಣ್ಯ ಪ್ರದೇಶ ಅಕ್ರಮವಾಗಿ ಒತ್ತುವರಿಗೆ ಒಳಗಾಗಿದೆ. .( ಜನೆವರಿ 2013 ) ★ Global Financial Integrity ಸಂಸ್ಥೆಯ ವರದಿ ಪ್ರಕಾರ ಕಪ್ಪು ಹಣದ ಹಾವಳಿಯಿಂದ ಭಾರತವು ಕಳೆದ 10 ವರ್ಷಗಳಲ್ಲಿ 123 ಶತಕೋಟಿ ಡಾಲರ್ (676500 ಕೋಟಿ ರೂ.) ನಷ್ಟ ಅನುಭವಿಸಿದೆ..( ಜನೆವರಿ 2013 ) ★ ಇಂದು ದೇಶದ 543 ಸದಸ್ಯರಲ್ಲಿ (MP) 162 MP ಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ರಾಜ್ಯಗಳ MLA, MLC ಗಳ ಪೈಕಿ 1258 ( 4032 ಸದಸ್ಯರು ) ಕ್ರಿಮಿನಲ್ ಕೇಸ್ ನಲ್ಲಿ ಸಿಕ್ಕಿಕೊಂಡಿದ್ದಾರೆ. ( ನವಂಬರ್ 2013 ). ★ ಸರ್ಕಾರಿ ದಾಖಲೆಗಳ ಪ್ರಕಾರ 2011-12 ರಲ್ಲಿ ಮನೆಗೆಲಸಕ್ಕಾಗಿ ನಿಯೋಜಿಸಲೆಂದು ಕಳ್ಳಸಾಗಣೆ ಮಾಡುವ 126,321 ಚಿಕ್ಕ ಹೆಣ್ಣುಮಕ್ಕಳನ್ನು ರಕ್ಷಿಸಲಾಗಿದೆ. ಈ ಕಳ್ಳಸಾಗಣೆ ಪ್ರಮಾಣ 2010 ನೇ ಸಾಲಿಗಿಂತ ಶೇ.27 ರಷ್ಟು ಹೆಚ್ಚು. (ಡಿಸಂಬರ್ 2013). ★ ಕಳೆದ 8 ವರ್ಷಗಳಿಂದ ಈಚೆಗೆ ದೇಶಾದ್ಯಂತ 1000 ಕ್ಕೂ ಹೆಚ್ಚು ಕೋಮು ಗಲಭೆಗಳು ಸಂಭವಿಸಿವೆ. ಇವಕ್ಕೆ ಸುಮಾರು 1000 ಮಂದಿ ಬಲಿಯಾಗಿದ್ದಾರೆ. 2005-13 ರ ಅವಧಿಯನ್ನ ಪರಿಗಣಿಸಿದರೆ ಪ್ರತಿ 10 ಲಕ್ಷ ಜನಸಂಖ್ಯೆಗೆ ಅತೀ ಹೆಚ್ಚು ಕೋಮು ಗಲಭೆಗೆ ಒಳಗಾಗಿರುವ ಮೊದಲ 5 ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ ಹಾಗೂ ಕೇರಳ ಸ್ಥಾನ ಪಡೆದಿವೆ. ಕೋಮು ಗಲಭೆಗಳ ವಿಚಾರದಲ್ಲಿ ಕರ್ನಾಟಕ 2 ನೇ ಸ್ಥಾನ ಪಡೆದಿದೆ. (ನವೆಂಬರ್ 2013). ★ ನ್ಯೂಯಾರ್ಕ್ ಮೂಲದ ' ವಿಶ್ವ ಸ್ಮಾರಕ ನಿಧಿ ' (WMF- Word Monuments Fund) ಸಂಸ್ಥೆ 2014 ನೇ ಸಾಲಿನ ಅಂತರ್ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಅದರಲ್ಲಿ 41 ದೇಶಗಳ 67 ಸ್ಮಾರಕಗಳು ಸ್ಥಾನ ಪಡೆದಿವೆ. ಈ ಸಂಸ್ಥೆಯಿಂದ ಆಯ್ಕೆಯಾಗಿರುವ ಕರ್ನಾಟಕದ ಸ್ಥಳ ' ಬೀದರ್ ಜಿಲ್ಲೆ '. ಇದರ ಜೊತೆಗೆ ' ಉತ್ತರ ಪ್ರದೇಶದ ಫತೇಪುರ ಸಿಕ್ರಿ, ರಾಜಸ್ಥಾನದ ಡುಂಗರ ಪುರದ ಜನಮಹಲ್ ಸಹ ಸ್ಥಾನ ಪಡೆದಿವೆ. (ನವೆಂಬರ್ 2013). ★ ಕ್ರಿ.ಶ. 2050 ರ ವೇಳೆಗೆ ಭಾರತದ ಜನಸಂಖ್ಯೆ 160 ಕೋಟಿ ಆಗಲಿದ್ದು, ಚೀನಾದ ಜನಸಂಖ್ಯೆ130 ಕೋಟಿ ಮತ್ತೂ ಒಟ್ಟಾರೆ ವಿಶ್ವದ ಜನಸಂಖ್ಯೆ970 ಕೋಟಿ ಇರುತ್ತದೆ ಎಂದು ಫ್ರೆಂಚ್ ಅಧ್ಯಯನದ ವರದಿ ತಿಳಿಸಿದೆ. (ನವೆಂಬರ್ 2013). ★ ತೈಲೋತ್ಪನ್ನಗಳ ಸದ್ಯದ ದರದ ಅನ್ವಯ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಪ್ರಸಕ್ತ ವರ್ಷ ಆಗಬಹುದಾದ ನಷ್ಟದ ಅಂದಾಜು ಮೊತ್ತ 156000 ಕೋಟಿ ರೂ. (ನವೆಂಬರ್ 2013). ★ ಹಣಕಾಸು ಸಚಿವಾಲಯ ಒಟ್ಟು 2000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಬಂಡವಾಳ ಹೂಡಿಕೆಯ 15 ಪ್ರಸ್ತಾವಗಳಿಗೆ ಅನುಮೋದನೆ ನೀಡಿತು. (ನವೆಂಬರ್ 2013). ★ ಪ್ರತಿ ದಿನಸಾಮಾಜಿಕ ಜಾಲತಾಣ, ಇ-ಮೇಲ್ ಮತ್ತು ಇ-ಶಾಪಿಂಗ್ ಬಳಕೆ ಮಾಡುವ ಭಾರತೀಯ ಮಹಿಳೆಯರ ಸರಾಸರಿ ಸಂಖ್ಯೆ: 24,00,000. ★ ಒಬ್ಬ ಮನುಷ್ಯನ 70 ವರ್ಷ ಆಯುಸ್ಸಿನಲ್ಲಿ ಸುಮಾರು 2391480000 ಸಾರಿ ಹೃದಯ ಬಡಿತವುಂಟಾಗುವುದು. ★ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಟಾನ ಸಚಿವಾಲಯದ 2011-12 ರ ಸಮೀಕ್ಷೆಯ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ತಿಂಗಳಿಗೆ ತಮ್ಮ ವ್ಯಸನಗಳಿಗಾಗಿ ( ಸಿಗರೇಟು, ಬೀಡಿ, ತಂಬಾಕು ಇತ್ಯಾದಿ ) ಸರಾಸರಿ 1430 ರೂ. ಖರ್ಚು ಮಾಡುತ್ತಾರೆ. ಇದು ನಗರವಾಸಿಗಳಿಗಿಂತ ಹೆಚ್ಚು. ★ ಒಂದು ಅಧಿಕೃತ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ 9000 ಕೋಟಿ ರೂ. 2012 ರ ಅಂತ್ಯದಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಮತ್ತು ಸಂಸ್ಥೆಗಳು 1.34 ಶತಕೋಟಿ ರೂ. ಮೊತ್ತವನ್ನು ನೇರವಾಗಿ ಮತ್ತೂ 77 ದಶಲಕ್ಷ ರೂ. ಮೊತ್ತವನ್ನು ಬೇನಾಮಿ ಹೆಸರಿನಲ್ಲಿ ಠೇವಣಿ ಇರಿಸಿದ್ದು ಈಗ ಠೇವಣಿಯ ಮೊತ್ತದಲ್ಲಿ ಶೇ. 35 ರಷ್ಟು ಇಳಿಕೆಯಾಗಿದೆ. 2007 ರ ಮಾಹಿತಿಯ ಪ್ರಕಾರ ವಿಶ್ವದ ಇತರ ರಾಷ್ಟ್ರಗಳ ನಾಗರಿಕರು ರಹಸ್ಯವಾಗಿ ಇರಿಸಿರುವ ಮೊತ್ತ 2.6 ಶತಕೋಟಿ ರೂ. ★ 2012 ರಲ್ಲಿ ಭಾರತದ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಶೇ. 22.2 ರಷ್ಟು ಹೆಚ್ಚಳವಾಗಿದೆ. ಸಿರಿವಂತರ ಏರಿಕೆಯ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಎರಡನೇಯ ಸ್ಥಾನದಲ್ಲಿದೆ. ಹಾಂಕಾಂಗ್ ಮೊದಲ ಸ್ಥಾನದಲ್ಲಿದೆ. ★ ಕರ್ನಾಟಕ ರಾಜ್ಯದಲ್ಲಿ 247 ಉಪ ನೊಂದಣಿ ಕಚೇರಿಗಳಿದ್ದು, ಅವುಗಳಲ್ಲಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 43 ಉಪ ನೊಂದಣಿ ಕಛೇರಿಗಳಿವೆ. ★ ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿದವರ ಪ್ರಮಾಣ 1991 ರಲ್ಲಿ. ಶೇ. 57.78 ರಷ್ಟಿತ್ತು. 2011 ರಲ್ಲಿ ಅದು ಶೇ. 49.28 (137.36 ಲಕ್ಷ ) ರಷ್ಟು. ಕೃಷಿಯನ್ನು ಅವಲಂಬಿಸಿದವರ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ಕೃಷಿ ನಿರ್ವಹಿಸಲಾಗದೆ ಬದುಕನ್ನು ನಡೆಸುವುದು ಕಷ್ಟವಾಗಿ ಬಡವರು ಕೃಷಿಯನ್ನು ಮತ್ತು ಗ್ರಾಮಗಳನ್ನು ತ್ಯಜಿಸಿ ಹೊಟ್ಟೆಪಾಡಿಗಾಗಿ ನಗರಗಳನ್ನು ಸೇರುತ್ತಿರುವುದಾಗಿದೆ. ಜೊತೆಗೆ ಸರ್ಕಾರದ ಬೇಜವಾಬ್ದಾರಿ ನಿರ್ಧಾರಗಳಿಂದ ಕೃಷಿ ಭೂಮಿಗೆ ಕೊಡಲಿ ಏಟು ಬೀಳುತ್ತಿರುವುದು. ರಾಜ್ಯದಲ್ಲಿ 71.56 ಲಕ್ಷ ಭೂರಹಿತ ದಿನಗೂಲಿ ದುಡಿಮೆಗಾರರು ಅತ್ಯಂತ ಅಭದ್ರತೆಯ ಬದುಕನ್ನು ದೂಡುತ್ತಿದ್ದಾರೆ.

Monday, 2 December 2013

ಸಾಮಾನ್ಯ ಜ್ಞಾನ(General Knowledge):

ಸಾಮಾನ್ಯ ಜ್ಞಾನ(General Knowledge): 

1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.

2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್

3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.

 4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.

5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.

6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.

7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.

8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.

 9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.

10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.

11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.

12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.

13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.

14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.

15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.

16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.

17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.

18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.

19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.

20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
 ★ ದ್ವಿ-ಪೀನ.

21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.

22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).

23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.

24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.

 25) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.

26) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.

 27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.

28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.

29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.

30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.

31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.

32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.

33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.

34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .

 35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.

36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.

37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.

38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.

39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ?
★ 1.

 40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.

Sunday, 1 December 2013

ಭಾರತದ 14ನೇ ಹಣಕಾಸು ಆಯೋಗ:

ಭಾರತದ 14ನೇ ಹಣಕಾಸು ಆಯೋಗ: -
2014 ಅ.31ರ ನಿಗದಿತ ಅವಧಿಯವರೆಗೆ ರಚನೆಗೊಂಡಿರುವ 14ನೇ ಹಣಕಾಸು ಆಯೋಗವನ್ನು ರಿಸರ್ವ್ ಬ್ಯಾಂಕಿನ ನಿವೃತ್ತ ಗವರ್ನರ್ ಡಾ. Y.V.ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 2013 ಜ.2 ರಂದು ರಚಿಸಲಾಯಿತು. ಅಜಯ್ ನಾರಾಯಣ್ ಝಾ ರವರು ಈ ಆಯೋಗದ ಕಾರ್ಯದರ್ಶಿ ಗಳಾಗಿರುವರು.

--ಆಯೋಗದ ಕಾರ್ಯಗಳು:
* ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಗತಿಗಳ ಅಧ್ಯಯನ.
* ವಿತ್ತೀಯ ಸಂಗ್ರಹಣೆ, ನಿರ್ವಹಣೆ ಮತ್ತು ವಿತರಣೆ.
* ಸಹಾಯ ಧನ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನದ ಜವಾಬ್ದಾರಿ.
* 13ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸುಗಳ ಅನುಷ್ಟಾನದಲ್ಲಿ ಉಂಟಾಗಿರಬಹುದಾದ ಸುಧಾರಣೆ ಅಥವಾ ನ್ಯೂನತೆಗಳನ್ನು ಸರಿದೂಗಿಸಿ, 2015ರ ಏಪ್ರೀಲ್ನಿಂದ 2020ರವರೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಶಿಫಾರಸುಗಳನ್ನು ಸಿದ್ಧ ಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಈ ಆಯೋಗದ ಪ್ರಮುಖ ಕಾರ್ಯ.

ಸುಗ್ರೀವಾಜ್ಞೆ (Ordinance) :

ಸುಗ್ರೀವಾಜ್ಞೆ (Ordinance) : --

ಇದೊಂದು ಕಾನೂನು ಆದೇಶ. ರಾಜ್ಯಪಾಲರು, ರಾಷ್ಟ್ರಪತಿಗಳು ಈ ರೀತಿಯ ಆದೇಶ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. ಭಾರತದ ಸಂವಿಧಾನದ ಪ್ರಕಾರ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನ ಸಭೆಗೆ. ಅದು ಬಿಟ್ಟರೆ ತುರ್ತು ಸಂಧರ್ಭಗಳಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಈ ರೀತಿಯ ಆದೇಶಗಳನ್ನು ನೀಡುವ ವಿಶೇಷ ಅಧಿಕಾರ ನೀಡಲಾಗಿದೆ. ಆದರೆ ಈ ರೀತಿಯ ಸುಗ್ರೀವಾಜ್ಞೆಗಳನ್ನು ತುರ್ತು ಸಂಧರ್ಭದಲ್ಲಿ ಮಾತ್ರ ಹೊರಡಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಶಾಸನಸಭೆ ನಡೆಯುತ್ತಿದ್ದ ವೇಳೆ ಸುಗ್ರೀವಾಜ್ಞೆ ಹೊರಡಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಅಧಿಕಾರವಿಲ್ಲ.

ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad):

★ ಕನ್ನಡ ಸಾಹಿತ್ಯ ಪರಿಷತ್:(Kannada Sahitya Parishad): --1915ರಲ್ಲಿ ಮೈಸೂರಿನ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಏರ್ಪಡಿಸಿದ ಸಮ್ಮೇಳನದ ಫಲವಾಗಿ ಸ್ಥಾಪನೆಯಾಯಿತು. ಇದರ ಮೊದಲ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. H.V.ನಂಜುಂಡಯ್ಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಏಳಿಗೆಗೆ ನಿರಂತರವಾಗಿ ಶ್ರಮಿಸುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ, ಕನ್ನಡ ಸ್ಥಾನಮಾನ ಹಾಗೂ ಏಕೀಕರಣ, ಕನ್ನಡ ಜನಜಾಗೃತಿ ಮೊದಲಾದ ಮಹತ್ಕಾರ್ಯಗಳನ್ನು ಕೈಗೊಂಡಿರುವ ಪ್ರಮುಖ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್. -- ಉದ್ದೇಶಗಳು: ಕನ್ನಡ ವ್ಯಾಕರಣ, ಭಾಷಾಚರೀತ್ರೆ, ನಿಘಂಟುಗಳು ಇವುಗಳ ರಚನೆ, ಕನ್ನಡಶಾಸ್ತ್ರ ಗ್ರಂಥಗಳ ವಿಷಯವಾಗಿ ಚರ್ಚೆ, ನಿರ್ಣಯಗಳ ಅಂಗೀಕಾರ ಉತ್ಕೃಷ್ಟ ಪ್ರಾಚೀನ ಗ್ರಂಥಗಳ ಪ್ರಕಟಣೆ, ಕನ್ನಡ ಸಂಸ್ಥಾನಗಳ ಚರಿತ್ರೆಗಳ ಸಂಗ್ರಹ ಇತ್ಯಾದಿ.

ನ್ಯೂಕ್ಲಿಯರ್ ವಿಂಟರ್ (Nuclear Winter) :

★ ನ್ಯೂಕ್ಲಿಯರ್ ವಿಂಟರ್ (Nuclear Winter) : --ಈ ಭೂಮಿಯ ಮೇಲೆ ಅಣುಯುದ್ಧವು ಸಂಭವಿಸಿದರೆ ವಾತಾವರಣದಲ್ಲಿ ಆಗುವ ಪರಿವರ್ತನೆಗಳನ್ನು ವಿವರಿಸಲು ಉಪಯೋಗಿಸುವ ಪದ.ಅಣುಯುದ್ಧದ ನಂತರ ಧೂಳು, ಹೊಗೆ, ರಸಾಯನಿಕ ಆಮ್ಲಗಳಿಂದ ದಟ್ಟವಾಗಿ ಆವೃತ್ತವಾಗಿ ನಭೋಮಂಡಲವನ್ನು ಸುತ್ತುಗಟ್ಟುತ್ತವೆ. ಅಣುಯುದ್ಧ ಮುಗಿದ ಸಾವಿರ ವರ್ಷಗಳ ನಂತರವೂ ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತೆ, ಈ ಧೂಳು ಹೊಗೆ, ಕಾರ್ಮೋಡವಾಗಿ ಭೂಮಿಯನ್ನು ಆವರಿಸುತ್ತದೆ. ಇದರಿಂದ ಭೂಮಿಯ ಮೇಲಿನ ಉಷ್ಣಾಂಶ ಕ್ರಮೇಣ ಕಡಿಮೆಯಾಗಿ 60 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಭೂಮಂಡಲದ ಮೇಲಿನ ಜೀವ ಸಂಕುಲಗಳು ಬದುಕಿ ಉಳಿದು ಜೀವನ ಸಾಗಿಸುವುದು ಅಸಾಧ್ಯ. ಅದನ್ನೇ 'ನ್ಯೂಕ್ಲಿಯರ್ ವಿಂಟರ್ (Nuclear Winter)' ಎಂದು ಕರೆಯುವರು.

ಸಂಪೂರ್ಣ ಕ್ರಾಂತಿ(Total Revolution):

ಸಂಪೂರ್ಣ ಕ್ರಾಂತಿ(Total Revolution): --

ಇಂದಿರಾಗಾಂಧಿರವರ ವಿರುದ್ದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕೆಂದು ಲೋಕನಾಯಕ ಜಯಪ್ರಕಾಶ ನಾರಾಯಣ ರವರು ಒತ್ತಾಯಿಸುವುದರೊಂದಿಗೆ ಈ ಕ್ರಾಂತಿಗೆ ಮುನ್ನುಡಿ ಹಾಕಿದರು. ಜಯಪ್ರಕಾಶ ನಾರಾಯಣ ರವರೊಂದಿಗೆ ವಿ.ಎಂ. ತಾರಕುಂಡೆರವರೂ ಕೂಡಾ ಕ್ರಾಂತಿಗೆ ಕರೆ ನೀಡಿದರು. ಈ ಕ್ರಾಂತಿಯ ಮುಖ್ಯ ಉದ್ದೇಶ ಸಾಮಾಜಿಕ ಪರಿವರ್ತನೆಗಾಗಿ ಕಾರ್ಯಕ್ರಮ ಕೈಗೊಳ್ಳುವುದಾಗಿತ್ತು, ಆ ಮೂಲಕ ಸಂಪೂರ್ಣ ಕ್ರಾಂತಿಯನ್ನು ಮಾಡಬೇಕೇಂದು ಜಯಪ್ರಕಾಶ ನಾರಾಯಣ ರವರು ಒತ್ತಾಯಿಸಿ ಸಂಪೂರ್ಣ ಕ್ರಾಂತಿಗೆ(Total Revolution) ಕರೆ ನೀಡಿದರು.

ಸಂಪೂರ್ಣ ಕ್ರಾಂತಿ(Total Revolution):

★ ಸಂಪೂರ್ಣ ಕ್ರಾಂತಿ(Total Revolution): --ಇಂದಿರಾಗಾಂಧಿರವರ ವಿರುದ್ದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕೆಂದು ಲೋಕನಾಯಕ ಜಯಪ್ರಕಾಶ ನಾರಾಯಣ ರವರು ಒತ್ತಾಯಿಸುವುದರೊಂದಿಗೆ ಈ ಕ್ರಾಂತಿಗೆ ಮುನ್ನುಡಿ ಹಾಕಿದರು. ಜಯಪ್ರಕಾಶ ನಾರಾಯಣ ರವರೊಂದಿಗೆ ವಿ.ಎಂ. ತಾರಕುಂಡೆರವರೂ ಕೂಡಾ ಕ್ರಾಂತಿಗೆ ಕರೆ ನೀಡಿದರು. ಈ ಕ್ರಾಂತಿಯ ಮುಖ್ಯ ಉದ್ದೇಶ ಸಾಮಾಜಿಕ ಪರಿವರ್ತನೆಗಾಗಿ ಕಾರ್ಯಕ್ರಮ ಕೈಗೊಳ್ಳುವುದಾಗಿತ್ತು, ಆ ಮೂಲಕ ಸಂಪೂರ್ಣ ಕ್ರಾಂತಿಯನ್ನು ಮಾಡಬೇಕೇಂದು ಜಯಪ್ರಕಾಶ ನಾರಾಯಣ ರವರು ಒತ್ತಾಯಿಸಿ ಸಂಪೂರ್ಣ ಕ್ರಾಂತಿಗೆ(Total Revolution) ಕರೆ ನೀಡಿದರು.

ಮೇಘ ಸ್ಫೋಟ (Cloud Burst) :

ಮೇಘ ಸ್ಫೋಟ (Cloud Burst) : -

 ನೈಸರ್ಗಿಕ ವಿಕೋಪದ ಒಂದು ರೂಪ ಇದಾಗಿದ್ದು, ವಾತಾವರಣದಲ್ಲಿ ಮೋಡಕ್ಕೆ ಮೋಡವೇ ಸ್ಫೋಟಗೊಂಡು ಭೂಮಿಗೆ ಎರಗುವ ಜಲಧಾರೆ. ಚಂಡಮಾರುತ ಉಂಟಾದಾಗ ಸಾಕಷ್ಟು ಪ್ರಮಾಣದ ನೀರಿನ ಅಂಶವನ್ನು ಇರಿಸಿಕೊಂಡ ಗಾಳಿಯ ಅಲೆಗಳು ಬೆಟ್ಟ ಕಣಿವೆಯ ನಡುವೆ ಸಿಲುಕಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ಹಾಗೆ ಗಾಳಿ ಸ್ಥಗಿತಗೊಂಡಾಗ ಮೋಡಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಮೋಡ ಸ್ಫೋಟವಾಗುತ್ತದೆ.
ಮಳೆಯ ರಭಸ ಪ್ರತಿ ಗಂಟೆಗೆ 10 cm ಗಿಂತ ಹೆಚ್ಚಾಗಿರುತ್ತದೆ. ಇದರ ಪ್ರಭಾವ ಸುಮಾರು 20-80 km ವ್ಯಾಪ್ತಿ ತನಕ ಇರುತ್ತದೆ.

Friday, 22 November 2013

ಸುಜಲ-3 ಯೋಜನೆ (SUJAL-3):

★ ಸುಜಲ-3 ಯೋಜನೆ (SUJAL-3): ಜಲಾನಯನ ಪ್ರದೇಶಗಳಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕ ರಾಜ್ಯದ 7 ಜಿಲ್ಲೆಗಳಲ್ಲಿ (ದಾವಣಗೆರೆ, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ಗದಗ, ಬೀದರ್, ಚಾಮರಾಜನಗರ) ಜಾರಿ ಮಾಡಲಾಗಿದೆ. ತಂತ್ರಜ್ಞಾನಗಳಪರಿಣಾಮಕಾರಿ ಬಳಕೆಯತ್ತ ಬೆಳೆಗಾರರನ್ನು ಪ್ರೋತ್ಸಾಹಿಸುವ , ಮಾರ್ಗದರ್ಶನ ನೀಡುವ ಉದ್ದೇಶ ಈ ಯೋಜನೆ ಹೊಂದಿದೆ. ಈ ಯೋಜನೆಯ ಅನುಷ್ಠಾನಕ್ಕೆ 2013ನೇ ಸಾಲಿನಿಂದ 6 ವರ್ಷಗಳ ಕಾಲವನ್ನು ನಿಗದಿ ಪಡಿಸಲಾಗಿದೆ.

ಟಿಪ್ಪಣಿ: ಮೇಘ ಸ್ಫೋಟ (Cloud Burst) :

ಮೇಘ ಸ್ಫೋಟ (Cloud Burst) : ನೈಸರ್ಗಿಕ ವಿಕೋಪದ ಒಂದು ರೂಪ ಇದಾಗಿದ್ದು, ವಾತಾವರಣದಲ್ಲಿ ಮೋಡಕ್ಕೆ ಮೋಡವೇ ಸ್ಫೋಟಗೊಂಡು ಭೂಮಿಗೆ ಎರಗುವ ಜಲಧಾರೆ. ಚಂಡಮಾರುತ ಉಂಟಾದಾಗ ಸಾಕಷ್ಟು ಪ್ರಮಾಣದ ನೀರಿನ ಅಂಶವನ್ನು ಇರಿಸಿಕೊಂಡ ಗಾಳಿಯ ಅಲೆಗಳು ಬೆಟ್ಟ ಕಣಿವೆಯ ನಡುವೆ ಸಿಲುಕಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ಹಾಗೆ ಗಾಳಿ ಸ್ಥಗಿತಗೊಂಡಾಗ ಮೋಡಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಮೋಡ ಸ್ಫೋಟವಾಗುತ್ತದೆ. ಮಳೆಯ ರಭಸ ಪ್ರತಿ ಗಂಟೆಗೆ 10 cm ಗಿಂತ ಹೆಚ್ಚಾಗಿರುತ್ತದೆ. ಇದರ ಪ್ರಭಾವ ಸುಮಾರು 20-80 km ವ್ಯಾಪ್ತಿ ತನಕ ಇರುತ್ತದೆ.

ಭಾರತದಲ್ಲಿ ಹೆಚ್ಚಿದ ತೈಲ ಬಿಕ್ಕಟ್ಟು - ಪ್ರಗತಿಯ ಗತಿಯ ಮೇಲೆ ಅದರ ಪರಿಣಾಮ .

* ಭಾರತದಲ್ಲಿ ಹೆಚ್ಚಿದ ತೈಲ ಬಿಕ್ಕಟ್ಟು -

ಪ್ರಗತಿಯ ಗತಿಯ ಮೇಲೆ ಅದರ ಪರಿಣಾಮ . ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ಭಾರತವು ಇಂದು ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ.ಇದು ದೇಶದ ಪ್ರಗತಿಪರ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

 ಇದಕ್ಕೆ ಹಲವಾರು ಕಾರಣಗಳನ್ನು ನಾವು ಗಮನಿಸಬಹುದು.

* ಯುರೋಪ್ ನ ಆರ್ಥಿಕ ಬಿಕ್ಕಟ್ಟು
*ಕುಸಿಯುತ್ತಿರುವ ರೂಪಾಯಿ ಮೌಲ್ಯ
,* ಹೆಚ್ಚುತ್ತಿರುವ ವಿತ್ತೀಯ ಕೊರತೆ ಮತ್ತು
* ಆಮದಿಗೆ ಬೇಕಾಗಿರುವ ಡಾಲರ್‌ನ ಅಭಾವ ದೇಶದಲ್ಲಿ ತೈಲ ಬಿಕ್ಕಟ್ಟನ್ನುಸೃಷ್ಟಿಸುತ್ತಿದೆ.

* ಯುರೋಪ್ ನ ಆರ್ಥಿಕ ಬಿಕ್ಕಟ್ಟಿನಿಂದ ಡಾಲರ್ ಹೆಚ್ಚು ಸದೃಢವಾಗಿದೆ. ಇದರಿಂದ ಭಾರತದ ಷೇರುಪೇಟೆ ಋಣಾತ್ಮಕ ಪ್ರಭಾವ ಬೀರಿದೆ.

* ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಕಚ್ಚಾ ತೈಲದ ಆಮದಿಗೆ ನೀಡಬೇಕಿರುವ ಡಾಲರ್‌ನಪ್ರಮಾಣವೂ ಹೆಚ್ಚಾಗುತ್ತಿದ್ದು, ಕೇಂದ್ರ ಸರಕಾರ ಅನಿವಾರ್ಯವಾಗಿ ತೈಲ ವೆಚ್ಚದ ಮೇಲೆ ನಿರ್ಬಂಧ ಹೇರಲು ಯೋಚಿಸುತ್ತಿದೆ. ಸಮಸ್ಯೆ ಮಾತ್ರ ಹಾಗೇ ಉಳಿದಿದೆ.ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ತೈಲ ಬಹುಮುಖ್ಯ ಚಾಲಕ ಶಕ್ತಿ. ಅದರ ಮೇಲಿನ ನಿರ್ಬಂಧ ಹೇರುವುದೆಂದರೆ, ಅಭಿವೃದ್ಧಿಗೆ ಹಾಕಿದ ಕಡಿವಾಣವೆಂದೇ ಅರ್ಥ.

* ಬೇಡಿಕೆ ಇದ್ದಷ್ಟು ಪ್ರಮಾಣದಲ್ಲಿ ದೇಶೀಯವಾಗಿ ತೈಲ ಉತ್ಪಾದನೆಯಾಗುತ್ತಿಲ್ಲ. ಬಹುಪಾಲು ತೈಲ ವಿದೇಶಗಳಿಂದ ಡಾಲರ್ ಕೊಟ್ಟು ಆಮದು ಮಾಡಿಕೊಳ್ಳಬೇಕು. ಬೇಕಾದಷ್ಟು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳಲು ದೇಶದ ಬಳಿ ಅಗತ್ಯವಾದಷ್ಟು ಡಾಲರ್ ಸಂಗ್ರಹ ಇಲ್ಲ. ಹೀಗಾಗಿಯೇ ಬಿಕ್ಕಟ್ಟು.

* ತೈಲ ಬಳಕೆ ಕಡಿಮೆ ಮಾಡಿದರೆ ಸ್ವಲ್ಪವಾದರೂ ಒತ್ತಡ ಕಡಿಮೆ ಕಡಿಮೆಯಾಗುತ್ತದೆ ನಿಜ. ಆದರೆ, ಹಾಗೆ ಮಾಡಲು ಸಾಧ್ಯವಿಲ್ಲದಂಥ ಸ್ಥಿತಿ ದೇಶದಲ್ಲಿ ಇದೆ .

* ರಫ್ತು ಹೆಚ್ಚಿಸುವ ಮತ್ತು ವಿದೇಶಿ ಬಂಡವಾಳ ಆಕರ್ಷಿಸುವ ಮೂಲಕ ಅಧಿಕ ಡಾಲರ್ ಸಂಗ್ರಹ ಮಾಡುವಮೂಲಕ ಸಮಸ್ಯೆ ನಿಭಾಯಿಸಬಹುದು. ಆದರೆ, ಅದು ಶೀಘ್ರ ಆಗುವಂಥದ್ದಲ್ಲ. ಹೀಗಾಗಿ, ಸರಕಾರ ದಿಢೀರ್ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿ ಬಂದಿದೆ.

* ತೈಲ ಆಮದಿನ ವಿಚಾರದಲ್ಲಿ ಭಾರತ ಕಳೆದ ಎರಡು ದಶಕಗಳಿಂದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಅಮೆರಿಕ ಮತ್ತು ತೈಲ ಉತ್ಪಾದನಾ ದೇಶಗಳ ನಡುವಣ ಸಂಬಂಧಗಳು ಭಾರತಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಿವೆ.ಪರಮಾಣು ಅಸ್ತ್ರ ವಿವಾದದಿಂದಾಗಿ ಇರಾನ್ ಮತ್ತು ಅಮೆರಿಕ ನಡುವಣ ಸಂಬಂಧ ಕೆಟ್ಟಿದೆ. ಈ ಬೆಳವಣಿಗೆ ಭಾರತಕ್ಕೆ ಪೂರೈಸಲಾಗುತ್ತಿದ್ದ ತೈಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ

ಪರಿಹಾರ ಕ್ರಮಗಳು: .

* ಇದೀಗ, ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸಿದರೆ ಭಾರತ ಮತ್ತಷ್ಟು ತೈಲ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಭಾರತವು ಅಮೆರಿಕದ ಒತ್ತಡವನ್ನು ಕಡೆಗಣಿಸಿ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಇದರಿಂದಾಗುವ ಅನುಕೂಲವೆಂದರೆ, ರೂಪಾಯಿ ನೀಡಿ ಇರಾನ್‌ನಿಂದ ತೈಲ ಕೊಳ್ಳಲು ಸಾಧ್ಯವಿರುವುದು. ಆದರೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಕಡೆಗಣಿಸಿ ಇರಾನ್‌ನಿಂದ ತೈಲ ಕೊಳ್ಳುವುದು ಸುಲಭವಲ್ಲ. ಆದರೆ, ಅಂಥ ಒಂದು ಧೈರ್ಯದ ಹೆಜ್ಜೆ ಇಡುವುದು ಈಗ ಅನಿವಾರ್ಯವಾಗಿದೆ. ಇದು ತೈಲ ಬಿಕ್ಕಟ್ಟನ್ನು ಎದುರಿಸಲು ಅನುಸರಿಸಬಹುದಾದ ಒಂದು ಕ್ರಮ ಅಷ್ಟೆ.

* ಭಾರತೀಯ ರಿಜರ್ವ್ ಬ್ಯಾಂಕ್ ದೇಶದ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಸಟ್ಟಾ ವ್ಯವಹಾರದ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

* ಕಚ್ಚಾತೈಲ ಆಮದು ಪಾವತಿಗೆ ಅಗತ್ಯವಾದ ಡಾಲರ್ ಗಳನ್ನು ತೈಲ ಕಂಪನಿಗಳು ಸರ್ಕಾರಿ ಸ್ವಾಮ್ಯದ ಒಂದೇ ಬ್ಯಾಂಕಿನಿಂದ ಪಡೆದುಕೊಳ್ಳಬೇಕು. ಇದೇ ರೀತಿ ಇನ್ನೂ ಹಲವು ಕ್ರಮಗಳನ್ನು ಸರಕಾರ ತೆಗೆದುಕೊಂಡರೆ ಮಾತ್ರ ತೈಲ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯ.

Thursday, 21 November 2013

★ ಸಂಪೂರ್ಣ ಕ್ರಾಂತಿ(Total Revolution):

★ ಸಂಪೂರ್ಣ ಕ್ರಾಂತಿ(Total Revolution): ಇಂದಿರಾಗಾಂಧಿರವರ ವಿರುದ್ದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕೆಂದು ಲೋಕನಾಯಕ ಜಯಪ್ರಕಾಶ ನಾರಾಯಣ ರವರು ಒತ್ತಾಯಿಸುವುದರೊಂದಿಗೆ ಈ ಕ್ರಾಂತಿಗೆ ಮುನ್ನುಡಿ ಹಾಕಿದರು. *. ಜಯಪ್ರಕಾಶ ನಾರಾಯಣ ರವರೊಂದಿಗೆ ವಿ.ಎಂ. ತಾರಕುಂಡೆರವರೂ ಕೂಡಾ ಕ್ರಾಂತಿಗೆ ಕರೆ ನೀಡಿದರು. *. ಈ ಕ್ರಾಂತಿಯ ಮುಖ್ಯ ಉದ್ದೇಶ ಸಾಮಾಜಿಕ ಪರಿವರ್ತನೆಗಾಗಿ ಕಾರ್ಯಕ್ರಮ ಕೈಗೊಳ್ಳುವುದಾಗಿತ್ತು, ಆ ಮೂಲಕ ಸಂಪೂರ್ಣ ಕ್ರಾಂತಿಯನ್ನು ಮಾಡಬೇಕೇಂದು ಜಯಪ್ರಕಾಶ ನಾರಾಯಣ ರವರು ಒತ್ತಾಯಿಸಿ ಸಂಪೂರ್ಣ ಕ್ರಾಂತಿಗೆ(Total Revolution) ಕರೆ ನೀಡಿದರು.

Wednesday, 20 November 2013

* ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು:

* ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು:

 ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಬಡದೇಶವಾಗಿದ್ದ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ ಈಗ ಅಧಿಕ ವಾಗಿದ್ದು ಶ್ರೀಮಂತಿಕೆಯತ್ತ ದಾಪುಗಾಲಿರಿಸಿದೆ. ಆದರೆ ಭಾರತವನ್ನು ವಿದ್ಯುಚ್ಛಕ್ತಿ ಕೊರತೆ ಕಾಡುತ್ತಿದ್ದು ಪ್ರಗತಿಗೆ ಅಡಚಣೆಯಾಗಿ ಪರಿಣಮಿಸಿದೆ. ಭಾರತದ ತಲಾವಾರು ವಿದ್ಯುಚ್ಛಕ್ತಿ ಬಳಕೆಯ ಪ್ರಮಾಣ ಕೇವಲ 700 ಮೇಗಾವ್ಯಾಟ್ ಮಾತ್ರ. ದೇಶದ ಶೇ.20 ರಷ್ಟು ಮಂದಿಗೆ ವಿದ್ಯುತ್ ಲಭಿಸುತ್ತಿಲ್ಲ. ಜಗತ್ತಿನಲ್ಲೇ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರು ಭಾರತದ ಪ್ರಜೆಗಳು. ಭಾರತದ ವಿದ್ಯುತ್ ಕೊರತೆಯನ್ನು ನಿವಾರಿಸಲು ವಷ೯ಕ್ಕೆ 30 ರಿಂದ 40 ಸಾವಿರ ಮೇಗಾವ್ಯಾಟ್ ನಷ್ಟು ವಿದ್ಯುತ್ ಅಧಿಕವಾಗಿ ಉತ್ಪಾದನೆಯಾಗಬೇಕು. ಆದರೆ ಕಳೆದ ನಾಲ್ಕೈದು ವಷ೯ಗಳಲ್ಲಿ ಭಾರತದಲ್ಲಿ ಉತ್ಪಾದನೆಯಾಗಿರುವ ವಿದ್ಯುತ್ 550000 ಮೆಗಾವಾಟ್ ಗಳು. ಅಂದರೆ ಸನ್ನಿವೇಶದ ಜಟಿಲತೆ ಅರಿವಾಗಬಹುದು.

ಅಮೇರಿಕದೊಂದಿಗೆ ಮಾಡಿಕೊಂಡ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಫಲಿತಾಂಶಗಳಿಗೆ 2020ನೇ ಇಸ್ವಿವರೆಗಿನ ಕಾಲಾವಧಿ ಬೇಕಾಗುತ್ತದೆ. ಹಾಗೆ ಪ್ರಯೋಜನ ದೊರೆತರೂ ಸಿಗುವ ಹೆಚ್ಚಿನ ವಿದ್ಯುತ್ ಪ್ರಸಕ್ತ ಶೇ3ಕ್ಕೆ ಮತ್ತೆ ಶೇ3 ರಷ್ಟು ಸೇರಿ ಶೇ6 ರಷ್ಟು ಮಾತ್ರವಾಗುತ್ತದೆ. ಆದರೆ ಜನಸಂಖ್ಯಾ ಸ್ಫೋಟ ಮತ್ತು ವಿದ್ಯುತ್ ಬೇಡಿಕೆಯ ಆಧಿಕ್ಯ ಗಮನಿಸಿದರೆ ಈ ಪ್ರಮಾಣ ಏನೇನೂ ಅಲ್ಲ. ಇದರೊಂದಿಗೆ ಪ್ರಸರಣ ತೊಂದರೆ ಮತ್ತು ಕೆಲವೊಮ್ಮೆ ಸಂಭವಿಸುವ ತಾಂತ್ರಿಕ ಅಡಚಣೆಗಳು ಮತ್ತು ಅವುಗಳ ದುರಸ್ತಿಗೆ ಬೇಕಾಗುವ ವಿದ್ಯುತ್ ವೆಚ್ಚ ಮತ್ತಷ್ಟು ಆತಂಕವನ್ನುಂಟುಮಾಡಿವೆ.

 2012ರ ಜುಲೈ 30 ಮತ್ತು 31 ರಂದು ಉತ್ತರ ಭಾರತದ 22 ರಾಜ್ಯಗಳಲ್ಲಿ ವಿದ್ಯುತ್ ನಿಲುಗಡೆಯಾಗಿ ಸುಮಾರು 70 ಕೋಟಿಯಷ್ಟು ಜನರು ಇದರ ಭಾಧೆಗೊಳಗಾದರು. ಭಾರತದ ಪವರ್ ಗ್ರೀಡ್ ಗಳಲ್ಲಿ ತಲೆದೂರಿದ ತಾಂತ್ರಿಕ ಅಡಚಣೆಯಿಂದಾಗಿ ಈ ಭಾರೀ ವಿದ್ಯುತ್ ವ್ಯತ್ಯಯವಾಗಿತ್ತು. ಭಾರತದಲ್ಲಿ ಸರ್ಕಾರಿ ಸೇವೆಗೆ ಸಹಸ್ರಾರು ಎಂಜಿನಿಯರ್ ಗಳು ಸೇರ್ಪಡೆಗೊಳ್ಳುತ್ತಾರೆ. ಆದರೆ ಇವರ ತಾಂತ್ರಿಕ ಪ್ರತಿಭೆಯ ಪ್ರಯೋಜನ ಸಾರ್ವಜನಿಕರಿಗೆ ಲಭಿಸುವುದಿಲ್ಲ. ಏಕೆಂದರೆ ಈ ಇಂಜನಿಯರ್ ಗಳಿಂದ ಗುಮಾಸ್ತರ ಇಲ್ಲವೇ ಅಡಳಿತಾತ್ಮಕ ಸೇವೆ ಪಡೆಯುವ ಸರ್ಕಾರ ತಾಂತ್ರಿಕ ಕರ್ತವ್ಯದ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸುತ್ತದೆ. ಎಂಜಿನಿಯರ್ ಗಳಿಗೆ ತಾಂತ್ರಿಕ ಹೊಣೆಗಾರಿಕೆಗಳನ್ನು ವಹಿಸಿದಾಗ ಮಾತ್ರ ಅವರ ಕೌಶಲ್ಯ ವ್ರದ್ದಿಗೊಂಡು ದೇಶವಾಸಿಗಳಿಗೆ ಅದರ ಪೂರ್ಣ ಪ್ರಯೋಜನ ಲಭಿಸುತ್ತದೆ.
 ಇದಲ್ಲದೆ ವಿದ್ಯುತ್ ಕೊರತೆ ನೀಗಲು ಮತ್ತಷ್ಟು ಮಾರ್ಗೋಪಾಯಗಳಿವೆ.

 * ಭಾರತವು ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ಸಮರ್ಥವಾಗಿದೆ. ಆ ನಿಟ್ಟಿನಲ್ಲಿ ಗಮನ ಹರಿಸುವುದು ಅಗತ್ಯ.

 * ಭಾರತ ದೇಶವು ನೈಸರ್ಗಿಕ ಸಂಪನ್ಮೂಲವಾದ ಕಲ್ಲಿದ್ದಲನ್ನು ಬಳಸಿ ಶಾಖೋತ್ಪನ್ನ ವಿದ್ಯುತ್ ತಯಾರಿಸುತ್ತಿದೆ. ಆದರೆ ಮುಂದೆ ಕಲ್ಲಿದ್ದಲು ನಿಕ್ಷೇಪ ಬರಿದಾಗುವ ಸಾಧ್ಯತೆಯಿದೆ. ಇದರ ಬದಲಾಗಿ ಪ್ರಾಕ್ರತೀಕವಾಗಿ ಲಭಿಸುವ ಸೌರಶಕ್ತಿಯ ಸದ್ಬಳಕೆ ಮಾಡಿಕೊಂಡರೆ ಅಗತ್ಯವಿರುವ ಪ್ರಮಾಣದ ವಿದ್ಯುಚ್ಛಕ್ತಿ ಪಡೆಯಲು ಸಾಧ್ಯವಾಗುತ್ತದೆ.

* ಸೌರಶಕ್ತಿಯ ಉತ್ಪಾದನೆಯ ವೆಚ್ಚವೂ ಕಡಿಮೆ ಎಂಬ ಅಂಶ ಗಮನಾರ್ಹ. ಇದಲ್ಲದೆ ಸಕಲ ಪ್ರಾದೇಶಿಕ ವಿದ್ಯುಚ್ಛಕ್ತಿ ಜಾಲವನ್ನು ಬೆಸೆಯುವ ರಾಷ್ಟೀಯ ಗ್ರೀಡ್ ಸ್ಥಾಪನೆಗೆ ಸರ್ಕಾರ ಆದ್ಯ ಗಮನ ನೀಡಬೇಕು.

 * ಸಮುದ್ರದ ಅಲೆಗಳಿಂದಲೂ ವಿದ್ಯುತ್ ಉತ್ಪಾದನೆ ಸಾಧ್ಯ. ಭಾರತವು 7000km ನಷ್ಟು ಉದ್ದದ ಕರಾವಳಿ ತೀರ ಹೊಂದಿದೆ. ಇಂಥಾ ಸಮ್ರದ್ದ ಸಂಪನ್ಮೂಲದ ಸದ್ಬಳಕೆ ಸರ್ಕಾರದ ಪ್ರಥಮಾದ್ಯತೆ ಆಗಬೇಕಾಗಿದೆ.