"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 12 December 2021

•► ಮ್ಯಾಂಗ್ರೋವ್ ಎಂದರೇನು? (what is Mangrove)

•►  ಮ್ಯಾಂಗ್ರೋವ್ ಎಂದರೇನು?
(what is Mangrove)

━━━━━━━━━━━━━
- ಕಡಲ ತೀರದ ಕಠಿಣ ಸ್ಥಿತಿಗಳಲ್ಲಿಯೂ ಬದುಕಬಲ್ಲ, ಲವಣದ ಅಂಶ ಹೆಚ್ಚಿದ್ದರೂ ಸಹಿಸಿಕೊಳ್ಳಬಲ್ಲ, ಒತ್ತಟ್ಟಾಗಿ ದಟ್ಟವಾಗಿ ಬೆಳೆಯುವ ವಿಶೇಷ ರೀತಿಯ ಕಾಡುಗಳಿಗೆ ಮ್ಯಾಂಗ್ರೋವ್ ಎಂದು ಕರೆಯುತ್ತಾರೆ.

- ಮ್ಯಾಂಗ್ರೋವ್ ಕಾಡುಗಳು ಉಷ್ಣವಲಯ ಮತ್ತು ಸಮಭಾಜಕ ಪಟ್ಟಿಯಲ್ಲಿ ಬೆಳೆಯುವ ನಿತ್ಯಹರಿದ್ವರ್ಣಗಳಾಗಿವೆ. ಅವು ಹೆಚ್ಚಿನ ಆರ್ದ್ರತೆಯ ಸ್ಥಿತಿಯಲ್ಲಿ ಬೆಳೆಯುತ್ತವೆ.

-  ಯಾವುದೇ ಸಸ್ಯವು ಸಹಿಸಿಕೊಳ್ಳಬಲ್ಲದಕ್ಕಿಂತ 100 ಪಟ್ಟು ಹೆಚ್ಚು ಉಪ್ಪಿನಂಶದ ನೀರಿನಲ್ಲಿ ವಾಸಿಸುವ ಸಾಮರ್ಥ್ಯವನ್ನು ಅವು ಹೊಂದಿವೆ.

- 2.50 ಕೋಟಿ ವರ್ಷಗಳ ಹಿಂದೆ ಮ್ಯಾಂಗ್ರೋವ್ ಕಾಡುಗಳ ಮೊದಲ ಪಳೆಯುಳಿಕೆ ಸಿಕ್ಕಿತ್ತು ಎಂದು ದಾಖಲಿಸಲಾಗಿದೆ. ಈ ಮರಗಳು ಸಂಕೀರ್ಣ ಬೇರುಗಳನ್ನು ಹೊಂದಿದ್ದು, ಹೆಚ್ಚಿನ ತೇವಾಂಶದಲ್ಲೂ, ಲವಣದ ಅಂಶವಿರುವ ಮಣ್ಣಿನಲ್ಲೂ ಬದುಕಬಲ್ಲವು.

- ಮ್ಯಾಂಗ್ರೋವ್ ಕಾಡುಗಳು ಶಾಶ್ವತವಾಗಿ ನೀರಿನಲ್ಲಿ ಮುಳುಗಿರುವುದರಿಂದ, ಅವುಗಳ ಆವಾಸಸ್ಥಾನದಲ್ಲಿ ಆಮ್ಲಜನಕದ ಅಂಶ ಕಡಿಮೆಯಿರುತ್ತದೆ. ಹಾಗಾಗಿ ಹೊರಚಾಚಿದ ಬೇರುಗಳಿಂದಲೇ ಬದುಕಲು ಬೇಕಾಗುವ ಅನಿಲಗಳನ್ನು ಅವು ಹೀರಿಕೊಳ್ಳುತ್ತವೆ. ಆ ಅನಿಲಗಳನ್ನು ಬೇರುಗಳಲ್ಲೇ ಹಿಡಿದಿಟ್ಟುಕೊಳ್ಳುವ ಈ ಮರಗಳು, ಪ್ರವಾಹದ ಸಮಯದಲ್ಲಿ ಮತ್ತೆ ಬಳಸಿಕೊಳ್ಳುತ್ತವೆ.

- ಕಳೆದ ಎರಡು ದಶಕಗಳಲ್ಲಿ, 35% ಮ್ಯಾಂಗ್ರೋವ್‌ಗಳು ನಾಶವಾಗಿವೆ. ಸೀಗಡಿ ಸಾಕಾಣಿಕೆ ಕೇಂದ್ರಗಳು ಈ ಸಸ್ಯಗಳ ಅಳಿವಿಗೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಠಿಣಚರ್ಮಿ ಕೃಷಿ ಪ್ರದೇಶವು ಮ್ಯಾಂಗ್ರೋವ್ ಕಾಡುಗಳನ್ನು ಕಡಿಮೆ ಮಾಡಲು ಕಾರಣವಾಗಿದೆ. 

- ನಮ್ಮ ಕರ್ನಾಟಕದ ಪಾಲು ಅಂದಾಜು ಪ್ರತಿಶತ ಶೇ.0.20ರಷ್ಟು ಮತ್ತು ಪಶ್ಚಿಮ ಬಂಗಾಳ ಅತಿ ಹೆಚ್ಚು ಅಂದರೆ ಶೇ.42.45ರಷ್ಟು ಪಾಲು ಹೊಂದಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳು ಸುಂದರ್ಬನ್ ರಾಷ್ಟ್ರೀಯ ಉದ್ಯಾನವನ್ನು ಹೊಂದಿದ್ದು, ಇದು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡು ಗಳಲ್ಲಿ ಒಂದಾಗಿದ್ದು ನಮ್ಮ  ದೇಶದ ಒಟ್ಟಾರೆ ಮ್ಯಾಂಗ್ರೋವ್ ಕಾಡುಗಳಲ್ಲಿ ಇದರದ್ದು ಸಿಂಹಪಾಲು.

No comments:

Post a Comment