"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 21 April 2018

●.ಸೈಬರ್ ಫಿಸಿಕಲ್ ಸಿಸ್ಟಂ (ಸಿಪಿಎಸ್) : (Cyber Physical System)

●.ಸೈಬರ್ ಫಿಸಿಕಲ್ ಸಿಸ್ಟಂ (ಸಿಪಿಎಸ್) :
(Cyber Physical System)
━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ : 3 (ಪತ್ರಿಕೆ 4)
(General Studies : 3 (Paper 4)

★ ಪ್ರಚಲಿತ ಘಟನೆಗಳು
(Current Affairs)


ಕೇಂದ್ರ ಸರ್ಕಾರವು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆತೃತ್ವದಲ್ಲಿ ಭವಿಷ್ಯದ ತಂತ್ರಜ್ಞಾನ ಎಂದೇ ಕರೆಯಲಾಗಿರುವ ಸೈಬರ್ ಫಿಸಿಕಲ್ ಸಿಸ್ಟಂ(ಸಿಪಿಎಸ್) ಎಂಬ ಹೊಸ ಯೋಜನೆಯನ್ನು ಜಾರಿಯಲ್ಲಿ ತಂದಿದೆ.

ಭೌತಿಕ ಕಾರ್ಯಗಳನ್ನು ಕಂಪ್ಯೂಟರ್ ಆಧಾರಿತ ತಾಂತ್ರಿಕತೆ ಮೂಲಕ ನಿಯಂತ್ರಿಸುವ ತಂತ್ರಜ್ಞಾನಕ್ಕೆ ಸೈಬರ್ ಫಿಸಿಕಲ್ ಸಿಸ್ಟಂ (ಸಿಪಿಎಸ್) ಎಂದು ಕರೆಯುತ್ತಾರೆ.
ಉದಾ: ಗೂಗಲ್ ಮತ್ತು ತೆಸ್ಲಾದಂತಹ ಕೆಲ ಜಾಗತಿಕ ಕಂಪನಿಗಳು ಸ್ವಯಂ ಚಾಲಿತ ಕಾರನ್ನು ಅಭಿವೃದ್ದಿಪಡಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ಐಐಟಿಗಳಲ್ಲಿ ಪ್ರತ್ಯೇಕ ಸಂಶೋಧನ / ಅಧ್ಯಯನ ಕೇಂದ್ರಗಳು ಮತ್ತು ತರಗತಿಗಳನ್ನು ಸ್ಥಾಪಿಸಲಾಗುತ್ತದೆ. ಮಾನವರಹಿತ ವಾಹನ/ವಿಮಾನಗಳ ತಂತ್ರಜ್ಞಾನವು ರಕ್ಷಣಾ ಕ್ಷೇತ್ರಕ್ಕೂ ಸಾಕಷ್ಟು ಲಾಭದಾಯವಾಗಲಿದೆ.

ಭವಿಷ್ಯದ ಅವಶ್ಯತೆಯಾದ ಈ ತಂತ್ರಜ್ಞಾನ ಅಭಿವೃದ್ಧಿಗಾಗಿ ಸರ್ಕಾರ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳ ಸಹಕಾರದೊಂದಿಗೆ ಸ್ವಯಂಚಾಲಿತ ಕಾರು ಮತ್ತು ಮಾನವ ರಹಿತ ವಾಹನ/ವಿಮಾನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ.

No comments:

Post a Comment