"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 6 March 2018

☀️ PART VI— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART VI— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.


ಸ್ಪರ್ಧಾಳುಗಳ ಗಮನಕ್ಕೆ:
ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com


61. ಜಾಗತಿಕ ಆರ್ಥಿಕ ವೃದ್ಧಿ ದರವು (ಜಿಡಿಪಿ) 2017 ಮತ್ತು 2018ರಲ್ಲಿ ಕ್ರಮವಾಗಿ ಶೇ 3.6 ಮತ್ತು ಶೇ 3.7ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ. ಇದು ಈ ಹಿಂದಿನ ವರ್ಷಗಳ ಸರಾಸರಿ ಮಟ್ಟಕ್ಕಿಂತ ಹೆಚ್ಚಿಗೆ ಇದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


62. ಪೂರ್ವದ ಹಿಮಾಲಯದಲ್ಲಿ ಆಲ್ಪೈನ್ ಸಸ್ಯವರ್ಗ 4000 ಮೀಟರ್ ವರೆಗೆ ಕಂಡುಬರುತ್ತದೆ ಏಕೆಂದರೆ ಪೂರ್ವ ಹಿಮಾಲಯದಲ್ಲಿ ಮಾನ್ಸೂನ್ ಮಳೆ ಪಶ್ಚಿಮ ಹಿಮಾಲಯಕ್ಕಿಂತ ಹೆಚ್ಚಾಗಿರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


63. 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ
— ಜಿಎಸ್ ಟಿ ಅಂಕಿಅಂಶದ ಪ್ರಾಥಮಿಕ ವಿಶ್ಲೇಷಣೆ ಪ್ರಕಾರ, ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇಕಡಾ 50ರಷ್ಟು ಏರಿಕೆಯಾಗಿದ್ದು ಸಣ್ಣ ಉದ್ಯಮಿಗಳು ಸೇರಿದಂತೆ ಸ್ವಯಂಪ್ರೇರಿತ ತೆರಿಗೆ ದಾಖಲಾತಿಗಳ ಸಂಖ್ಯೆ ಹೆಚ್ಚಾಗಿದೆ.
— ಸರಕು ಮತ್ತು ಸೇವೆಗಳ ಭಾರತದ ಆಂತರಿಕ ವಹಿವಾಟುಗಳಲ್ಲಿ ಏರಿಕೆಯಾಗಿದ್ದು ಒಟ್ಟು ದೇಶೀಯ ಉತ್ಪನ್ನಗಳಲ್ಲಿ ಇದರದ್ದು ಶೇಕಡಾ 60ರಷ್ಟು ಕೊಡುಗೆಯಿದೆ.
— ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳು ಭಾರತದ ರಫ್ತಿನಲ್ಲಿ ಶೇಕಡಾ 70ರಷ್ಟು ಕೊಡುಗೆ ನೀಡಿವೆ.
— ಲಿಂಗಾನುಪಾತದ ಸರಾಸರಿಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕಡಿಮೆಯಿದ್ದು 63 ದಶಲಕ್ಷ ಮಹಿಳೆಯರ ಕೊರತೆಯಿದೆ.
— 2005-2006ರಲ್ಲಿ ಶೇಕಡ 36ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು ಇದೀಗ 2015-16ರಲ್ಲಿ ಶೇಕಡ 24ರಷ್ಟು ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


64. ಜಾಗತಿಕ ಪರಿಸರ ಸಾಧನಾ ಸೂಚ್ಯಂಕ(ಜಿಇಪಿಐ) ಬಿಡುಗಡೆ ಮಾಡಿದ 2017 ರ ವರದಿಯ ಪ್ರಕಾರ ಗ್ರೀನ್ ರ್ಯಾಂಕಿಂಗ್ ನಲ್ಲಿ ಸ್ವಿಜರ್ಲ್ಯಾಂಡ್ ಮೊದಲ ಸ್ಥಾನ ಪಡೆದಿದ್ದರೆ, ಫ್ರಾನ್ಸ್, ಡೆನ್ಮಾರ್ಕ್, ಮಾಲ್ಟಾ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದಿವೆ. ಭಾರತ 180 ದೇಶಗಳ ಪೈಕಿ 177ನೇ ಸ್ಥಾನ ಪಡೆದಿದೆ.
— 2016ರಲ್ಲಿ ಜಿಇಪಿಐ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತ 141ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 36 ಸ್ಥಾನ ಕುಸಿತ ಕಂಡಿದ್ದು 177ನೇ ಸ್ಥಾನ ಪಡೆದಿದೆ.
— ಜಿಇಪಿಐ ಒಟ್ಟು 180 ದೇಶಗಳ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ.
— ಸಮೀಕ್ಷೆಯಲ್ಲಿ ದೇಶದ ಗಾಳಿ, ನೀರಿನ ಗುಣಮಟ್ಟ, ನೈರ್ಮಲ್ಯ, ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಪ್ರಮಾಣ, ಅರಣ್ಯದ ಪ್ರಮಾಣ, ಅರಣ್ಯ ನಾಶದ ತೀವ್ರತೆ ಹೀಗೆ ಒಟ್ಟು 10 ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


65. ದೇಶದ ಪ್ರಮುಖ ಪರ್ವತ ಶ್ರೇಣಿಗಳು :
- ಅಜಂತಾ ಪರ್ವತ ಶ್ರೇಣಿ ಒಂದು ಸೀಮಿತ ವ್ಯಾಪ್ತಿಯನ್ನು ಹೊಂದಿದ್ದು, ಇದು ಮಹಾರಾಷ್ಟ್ರದಲ್ಲಿದೆ.
- ಅರಾವಳಿ ಪರ್ವತ ಶ್ರೇಣಿಗಳು ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯನ್ನು ಒಳಗೊಳ್ಳುತ್ತವೆ.
- ಸತ್ಪುರ ಶ್ರೇಣಿಗಳು ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಕಂಡುಬರುತ್ತವೆ.
- ಸಹ್ಯಾದ್ರಿ ಶ್ರೇಣಿಗಳು  ಗುಜರಾತ್, ಮಹಾರಾಷ್ಟ್ರ ಗಡಿಯಿಂದ ಪ್ರಾರಂಭವಾಗುತ್ತದೆ ಮತ್ತು ಗೋವಾ, ಕರ್ನಾಟಕವನ್ನು ದಾಟಿ ಕೇರಳದ ಕೇಪ್ ಕೊಮ್ರಿನ್ (Cape Comrin) ತುದಿಯವರೆಗೆ ತಲುಪುತ್ತದೆ.
- ಅಜಂತಾ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಕಂಡುಬರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


66. 1945ರಲ್ಲಿ ಸ್ಥಾಪಿಸಲ್ಪಟ್ಟ ಮತ್ತು ಒಂದು ಸಾರ್ವತ್ರಿಕ ಅಂತರಸರ್ಕಾರೀಯ ಸರ್ಕಾರಿ ಸಂಘಟನೆಯಾಗಿ ಮುಂದುವರಿಯುತ್ತಿರುವ ವಿಶ್ವಸಂಸ್ಥೆಯು ಆರಂಭಿಕ ಹಂತದಲ್ಲಿ 51 ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದ ವಿಶ್ವಸಂಸ್ಥೆಯ ಸದಸ್ಯತ್ವವು, ಭಾರತವೂ ಸೇರಿದಂತೆ ಪ್ರಸ್ತುತ ಇಂಥ 193 ಸದಸ್ಯ ರಾಷ್ಟ್ರಗಳನ್ನುನ ಹೊಂದಿದೆ.
— ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳನ್ನು ನೆರವೇರಿಸುವ ಸಲುವಾಗಿ, ಭದ್ರತಾ ಮಂಡಳಿಯಂಥ ಅಂಗದ ಮೂಲಕ ಅದಕ್ಕೊಂದು ‘ಸೈನಿಕ ಬಲ’ವನ್ನು ಒದಗಿಸಲಾಗಿದೆ. ಇದು ಐದು ಕಾಯಂ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದ್ದು, ಇಂಥ ಪ್ರತಿಯೊಂದು ಕಾಯಂ ಸದಸ್ಯರಾಷ್ಟ್ರಕ್ಕೂ ಯಾವುದೇ ನಿರ್ಣಯದ ಕುರಿತಾಗಿ ‘ನಿರಾಕರಣಾಧಿಕಾರ’ (ವೀಟೋ) ಚಲಾಯಿಸುವ ಸ್ವಾತಂತ್ರ್ಯ ನೀಡಲಾಗಿದೆ. ಜತೆಗೆ, ಸರದಿಯ ಆಧಾರದ ಮೇಲೆ ನೇಮಕಗೊಳ್ಳುವ 10 ತಾತ್ಕಾಲಿಕ ಸದಸ್ಯರಾಷ್ಟ್ರಗಳನ್ನೂ ಭದ್ರತಾ ಮಂಡಳಿ ಹೊಂದಿದೆ.
— ಚೀನಾ, ಫ್ರಾನ್ಸ್, ಇಂಗ್ಲೆಂಡ್ (ಬ್ರಿಟನ್), ರಷ್ಯಾ ಮತ್ತು ಅಮೆರಿಕ 5 ಕಾಯಂ ಸದಸ್ಯರಾಷ್ಟ್ರಗಳೆನಿಸಿಕೊಂಡಿದ್ದರೆ, ಓರ್ವ ತಾತ್ಕಾಲಿಕ ಸದಸ್ಯರಾಷ್ಟ್ರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 7 ಬಾರಿ ಸೇವೆ ಸಲ್ಲಿಸಿರುವ ಭಾರತವು, ಕಾಯಂ ಸದಸ್ಯತ್ವಕ್ಕಾಗಿನ ಯತ್ನವೂ ಸೇರಿದಂತೆ, ಭದ್ರತಾ ಮಂಡಳಿಯ ಸುಧಾರಣೆ/ಮರುರೂಪಣೆಗೆ ಸಂಬಂಧಿಸಿದ ಹೋರಾಟದ ಮುಂಚೂಣಿಯಲ್ಲಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


67. ಜಿಎಸ್‌ಟಿಯು ಹೆಚ್ಚುವರಿ ತೆರಿಗೆಯಂತೂ ಆಗಿರುವುದಿಲ್ಲ. ಸಿಜಿಎಸ್‌ಟಿಯು (ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆಯು) ಕೇಂದ್ರ ಅಬಕಾರಿ ಸುಂಕ, ಸೇವಾ ತೆರಿಗೆ ಹಾಗೂ ಹೆಚ್ಚುವರಿಯಾಗಿ ಕೇಂದ್ರ ಮಟ್ಟದಲ್ಲಿನ ಸುಂಕಗಳನ್ನು ಒಳಗೊಂಡಿರುತ್ತದೆ. ರಾಜ್ಯ ಮಟ್ಟದಲ್ಲಿಯಾದರೆ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ, ನಾಕಾ ತೆರಿಗೆ, ಲಾಟರಿ ತೆರಿಗೆ, ವಿದ್ಯುತ್ ಸುಂಕ, ಸರಕುಗಳ ಹಾಗೂ ಸೇವೆಗಳ ಪೂರೈಕೆಗೆ ಹಾಗೂ ಖರೀದಿ ತೆರಿಗೆಗೆ ಸಂಬಂಧಿಸಿದಂತೆ ಸರ್ಚಾರ್ಜ್‌ ಇವೆಲ್ಲವನ್ನೂ ಒಳಗೊಂಡಿರುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


68. ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಮಂಗೋಲರು ಚೆಂಗೀಸ್ ಖಾನನ ನೇತೃತ್ವದಲ್ಲಿ ದಾಳಿ ಮಾಡಿದರು. ಇಲ್ತಮಶ್ ಅವರನ್ನು ಯಶಸ್ವಿಯಾಗಿ ಹಿಮ್ಮೆಟಿಸಿದನು. ಈ ಸಾಧನೆಗಳಿಂದಾಗಿ ಬಾಗ್ದಾದಿನ ಖಲೀಫನು ಇಲ್ತಮಶ್‍ನಿಗೆ ಅಧಿಕೃತ ಅಧಿಕಾರ ಸಮ್ಮತಿ ಪತ್ರ ನೀಡಿದನು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


69. ಯಾವುದೇ ಒಂದು ಪ್ರದೇಶದಲ್ಲಿ ವಿವಿಧ ಬಗೆಯ ಸಸ್ಯಗಳು ಪ್ರಾಣಿಗಳ ಹಾಗೂ ಇನ್ನಿತರ ಜೀವಿಗಳ ಜೀವಿಸಂದಣಿಗಳಿರುತ್ತವೆ. ಈ ಎಲ್ಲ ಜೀವಿಸಂದಣಿಗಳನ್ನು ಒಟ್ಟಿಗೆ ಜೀವಿಸಮುದಾಯ(biotic community) ಎಂದು ಕರೆಯುತ್ತಾರೆ. ಜೀವಿಸಮುದಾಯದ ಜೀವಿಗಳು ಪರಸ್ಪರ ಪ್ರತಿವರ್ತಿಸುತ್ತವೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


70. ಈ ಕೆಳಕಂಡ ವಿಷಯಗಳು ಸಂವಿಧಾನದ ಏಳನೇಯ ಅನುಸೂಚಿಯ ಸಮವರ್ತಿ ಪಟ್ಟಿ - III ರಲ್ಲಿ ಒಳಗೊಳ್ಳುತ್ತವೆ.
— ನ್ಯಾಯಾಲಯ ನಿಂದನೆ ಒಳಪಡುತ್ತದೆ ಆದರೆ ಸರ್ವೋಚ್ಚ ನ್ಯಾಯಾಲಯದ ನಿಂದನೆ ಸೇರುವುದಿಲ್ಲ.
— ಮಾನಕಗಳನ್ನು ನಿಗದಿಪಡಿಸುವುದನ್ನು ಹೊರತುಪಡಿಸಿ ತೂಕಗಳು ಮತ್ತು ಅಳತೆಗಳು.


...ಮುಂದುವರೆಯುದು.

Monday, 5 March 2018

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ (Literacy in Karnataka State)

●.ಸಾಮಾನ್ಯ ಅಧ್ಯಯನ 1-ಪತ್ರಿಕೆ 2 : ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ
(Literacy in Karnataka State)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಕರ್ನಾಟಕದ ಅರ್ಥವ್ಯವಸ್ಥೆ
(Karnataka Economics)

★ ಕರ್ನಾಟಕ ಆರ್ಥಿಕ ಸಮೀಕ್ಷೆ
(Karnataka Economic Survey)


•► 2001 ರಿಂದ 2011ರ ದಶಕದಲ್ಲಿ, ಸಾಕ್ಷರತಾ ಪ್ರಮಾಣಗಳಲ್ಲಿ ಗಣನೀಯ ಮಟ್ಟಿಗೆ ಸಾಧನೆ ಆಗಿದೆ ಎನ್ನುವದು ಅಂಕಿಅಂಶಗಳಿಂದ ದೃಢಪಟ್ಟಿದೆ. 2001 ರಲ್ಲಿ 66.64% ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011 ರ ಹೊತ್ತಿಗೆ ಶೇ.75.60 ರಷ್ಟಾಗಿದೆ.

•► ಕರ್ನಾಟಕದ ಪುರುಷ ಮತ್ತು ಮಹಿಳಾ ಸಾಕ್ಷರತಾ ಪ್ರಮಾಣವು ರಾಷ್ಟ್ರದ ಒಟ್ಟಾರೆ ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿದೆ. ರಾಜ್ಯದ ನಗರ ಪ್ರದೇಶದ ಪುರುಷರ ಸಾಕ್ಷರತೆ ಶೇ.90ರ ಗಡಿ ದಾಟಿದೆ. ಇದರ ತದ್ವಿರುದ್ಧ ಗ್ರಾಮಾಂತರ ಪ್ರದೇಶದ ಮಹಿಳಾ ಸಾಕ್ಷರತೆ ಇನ್ನೂ ಶೇ.60ರ ಗಡಿಯನ್ನು ಸಹ ತಲುಪಿಲ್ಲ.

•► ಸಾಕ್ಷರತೆಯ ಪ್ರತಿಯೊಂದು ಮಾನದಂಡವನ್ನು ಅವಲೋಕಿಸಿದಾಗ ರಾಜ್ಯಮಟ್ಟದ ಸಾಕ್ಷರತೆಯ ಪ್ರಮಾಣ ರಾಷ್ಟ್ರದ ಸರಾಸರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿಗೆಯಿದೆ. 2001 ರಲ್ಲಿ ರಾಷ್ಟ್ರದ 16 ಪ್ರಮುಖ ರಾಜ್ಯಗಳಲ್ಲಿ ರಾಜ್ಯದ ಸಾಕ್ಷರತೆಯ ಸ್ಥಾನ 9 ಆಗಿದೆ (100 ಲಕ್ಷ ಕ್ಕಿಂತ ಹೆಚ್ಚಿರುವ ಜನಸಂಖ್ಯೆ). 2011 ರಲ್ಲಿಯೂ ಮೇಲಿನ ಸ್ಥಾನದಲ್ಲಿ ಮುಂದುವರೆದಿದೆ.

•► ಒಂದು ದಶಕದಲ್ಲಿ ರಾಜ್ಯದ ಒಟ್ಟಾರೆ ಸಾಕ್ಷರತೆಯ ಸಾಧನೆ ಶೇ.9.0. ರಾಜ್ಯದ ಪ್ರಗತಿಯು ಅಖಿಲ ಭಾರತದ ಸಾಧನೆಗಿಂತ ಸ್ವಲ್ಪ ಹೆಚ್ಚಿಗೆ ಇರುವುದನ್ನು ಸಾಕ್ಷರತಾ ಪ್ರಮಾಣವು ತೋರಿಸಿದೆ. 2001 ರಲ್ಲಿ ಸಾಕ್ಷರತಾ ಮಟ್ಟ ಕಡಿಮೆಯಿದ್ದ ಹಲವು ಜಿಲ್ಲೆಗಳು, ಉತ್ತಮ ಸಾಧನೆಗೆಯ್ದು ರಾಜ್ಯ ಮಟ್ಟದ ಸರಾಸರಿ ದಾಟಿದೆ.
- ಅಂತಹ ಜಿಲ್ಲೆಗಳೆಂದರೆ ಕಲಬುರಗಿ(ಯಾದಗಿರಿ ಸೇರಿ), ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ರಾಯಚೂರು, ಕೋಲಾರ, ಚಾಮರಾಜನಗರ, ವಿಜಯಪುರ ಮತ್ತು ಬೀದರ್.

•► ಲೋಕ ಶಿಕ್ಷಣ ಇಲಾಖೆಯು ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ಗ್ರಾಮಾಂತರ ಮತ್ತು ಹಿಂದುಳಿದ ಪ್ರದೇಶಗಳಲ್ಲಿ/ರಾಜ್ಯದ ಇತರೆ ಭಾಗದಲ್ಲಿ ಮಹಿಳೆಯರ ಸಾಕ್ಷರತೆಗೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ.

•► ಸಾರ್ವಜನಿಕ ಶಿಕ್ಷಣ ಇಲಾಖೆಯ, ಸರ್ವಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಇಲಾಖೆಗಳು ಕಲಿಕೆಗೆ ಶಾಲೆಗಳಲ್ಲಿ ಉತ್ತಮ ಸೌಲಭ್ಯ, ಆಕರ್ಷಕ ಪ್ರೋತ್ಸಾಹ ಶಿಕ್ಷಣದಲ್ಲಿ ಕಲಿಕೆ ಗುಣಮಟ್ಟದ ಸುಧಾರಣೆ ಮತ್ತು ಸಮುದಾಯದಲ್ಲಿ ಅರಿವುಗಳು ಹೆಚ್ಚಾಯಿತು ಎನ್ನಬಹುದಾಗಿದೆ.

Courtesy : Karnataka Economic Survey - 2017-18)

☀️ PART V— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್ (IAS/KAS Exam Preparation Notes Bits)

☀️ PART V— ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ ಬಿಟ್ಸ್
(IAS/KAS Exam Preparation Notes Bits)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷಾ ತಯಾರಿ
(IAS / KAS exam preparation notes)

★ ಸಾಮಾನ್ಯ ಅಧ್ಯಯನ
(general studies)


...ಮುಂದುವರೆದ ಭಾಗ.


ಸ್ಪರ್ಧಾಳುಗಳ ಗಮನಕ್ಕೆ:
— ಇಲ್ಲಿ ಹಂಚಿಕೊಂಡಿರುವ ಮಾಹಿತಿಯು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ. 
Gmail : yaseen7ash@gmail.com



51.  ಭಾರತ ಪರ್ಯಾಯ ದ್ವೀಪವು (Gondwanaland) ಗೊಂಡ್ವಾನಾ (ಖಂಡ)ದ ಭಾಗವಾಗಿದ್ದು, ಇದು ಉತ್ತರಕ್ಕೆ ಸಾಗಿತೆಂದು ತದನಂತರ ಭಾರತ, ಆಫ್ರಿಕಾ ಮತ್ತು ಇತರ ಭಾಗಗಳು ಪರಸ್ಪರ ಬೇರ್ಪಟ್ಟವು ಎಂದು ಭೂಗೋಳ ಶಾಸ್ತ್ರಜ್ಞರು ನಂಬುತ್ತಾರೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


52. 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 6.75ರಷ್ಟಿದ್ದು, ಮುಂದಿನ ವರ್ಷದಲ್ಲಿ ಶೇಕಡಾ 7ರಿಂದ 7.5 ಕ್ಕೆ ಜಿಡಿಪಿ ಏರಿಕೆಯಾಗುವ ಗುರಿ ಹೊಂದಲಾಗಿದೆ
— ಗ್ರಾಹಕ ದರ ಸೂಚ್ಯಂಕ(ಸಿಪಿಐ) ಹಣದುಬ್ಬರ ಸರಾಸರಿ 2017-18ರಲ್ಲಿ ಶೇಕಡಾ 3.3ರಷ್ಟಿದ್ದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.2017-18ರಲ್ಲಿ ದೇಶದ ಹಣದುಬ್ಬರ ಸರಾಸರಿ ಪ್ರಮಾಣದಲ್ಲಿ ಮುಂದುವರಿದಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


53. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರನ್ನು ನೇಮಿಸಿಕೊಳ್ಳವರು - ರಾಜ್ಯಪಾಲರು ಅದರಂತೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರಿಗೆ ವೇತನ ನೀಡುವುರು- ರಾಜ್ಯ ಸರ್ಕಾರ (The State Legislature) ಆದರೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು & ಸದಸ್ಯರನ್ನು ತೆಗೆದು ಹಾಕುವರು - ಸುಪ್ರೀಂ ಕೋರ್ಟ ವರದಿ/ಆದೇಶ ಮೇರೆಗೆ ರಾಷ್ಟ್ರಪತಿಗಳು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


54. ಮೂಲಭೂತವಾದ ಹಾಗೂ ಸೈಬರ್‌ ಅಪರಾಧಗಳನ್ನು ಹತ್ತಿಕ್ಕಲು ಕೇಂದ್ರ ಗೃಹ ಸಚಿವಾಲಯದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹ (ಕೌಂಟರ್‌ ಟೆರರಿಸಂ ಅಂಡ್‌ ಕೌಂಟರ್‌ ರ‍್ಯಾಡಿಕಲೈಸೇಶನ್‌- CTCR) ಮತ್ತು ಸೈಬರ್‌ ಮತ್ತು ಮಾಹಿತಿ ಭದ್ರತೆ (ಸೈಬರ್‌ ಅಂಡ್‌ ಇನ್ಫೋರ್ಮೇಶನ್‌ ಸೆಕ್ಯುರಿಟಿ- CIS) ಎಂಬ ಪ್ರತ್ಯೇಕ ವಿಭಾಗಗಳನ್ನು ಸೃಷ್ಟಿಸಲಾಗಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


55. ಯುನೆಸ್ಕೋದವರು ನಮ್ಮ ಮಲೆನಾಡು, ನೀಲಗಿರಿಯನ್ನು ಬಿಒಎಸ್ ಫೆರಿಕಾಲ್ ರಿಸರ್ವ್ ಅನ್ನಾಗಿ ಗುರುತಿಸಿದೆ. ಇದು ಅವರು ಗುರುತಿಸಿರುವ ದೇಶದ ಪ್ರಪ್ರಥಮ ಬಿಒಎಸ್ ಫೆರಿಕಾಲ್ ರಿಸರ್ವ್. ಇಲ್ಲಿ ವನ್ಯಜೀವಿಗಳ ಸಂರಕ್ಷಣೆ, ಕಾಡು ಜನರ ಬೆಳವಣಿಗೆ, ವೈಜ್ಞಾನಿಕ ಸಂಶೋಧನೆ ಇವೆಲ್ಲವೂ ನಡೆಯಲಿದೆ. .
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


56. ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಕಲ್ಪನೆ ಏನು ಎಂದರೆ ಪ್ರತಿಯೊಬ್ಬ ವಯಸ್ಕ ನಾಗರಿಕರಿಗೆ ಸರ್ಕಾರವೇ ಮೂಲಭೂತ ಜೀವನ ವೆಚ್ಚವನ್ನು ಪಾವತಿಸುವುದು.
— ಈ ಕಲ್ಪನೆಯನ್ನು ಮೊದಲಿಗೆ ಪ್ರಸ್ತುತ ಪಡಿಸಿದ್ದು ನೊಬೆಲ್ ಪ್ರಶಸ್ತಿ ವಿಜೇತ ಬರ್ಟ್ರೆಂಡ್ ರಸೆಲ್
— ಸಾರ್ವತ್ರಿಕ ಮೂಲ ಆದಾಯ ಯೋಜನೆಯ ಪ್ರಕಾರ ನಾಗರಿಕರು ತಮ್ಮ ಹಣಕಾಸು ಹಿನ್ನೆಲೆ, ಔದ್ಯೋಗಿಕ ಸ್ಥಿತಿಗತಿ ಅಥವಾ ಇತರ ಗುಣಗಳೇನೇ ಇದ್ದರೂ ಸರ್ಕಾರದಿಂದ ನಿರ್ದಿಷ್ಟವಾದ ನಿಯಮಿತ ಆದಾಯವನ್ನು ಪಡೆಯುತ್ತಾರೆ. ಅವರು ಆ ದೇಶದ ಪೌರರಾಗಿರುವುದು ಮತ್ತು ಕಾನೂನುಬದ್ಧವಾಗಿ ವಯಸ್ಕರಾಗಿರುವುದು ಈ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ನಾಗರಿಕರ ಏಕೈಕ ಅರ್ಹತೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

57.  ಪ್ರಮುಖ ಪರ್ಯಾಯ ದ್ವೀಪ (Peninsular) ಪ್ರದೇಶಗಳು          ಭೂವೈಜ್ಞಾನಿಕ ಕಾಲಾವಧಿ ಮತ್ತು ಯುಗಗಳು
ಎ. ಡೆಕ್ಕನ್ ಟ್ರ್ಯಾಪ್ಸ್                       - ಕ್ರೆಟೇಶಿಯಸ್ ಯುಗ
ಬಿ. ಪಶ್ಚಿಮ ಘಟ್ಟಗಳು                     - ಲೇಟ್ ಸೆನೊಜಾಯಿಕ್ ಯುಗ
ಸಿ. ಅರಾವಳಿ -                             - ಪ್ರಿ-ಕ್ಯಾಂಬ್ರಿಯನ್ ಯುಗ
ಡಿ. ನರ್ಮದಾ-ತಪತಿ - ಮೆಕ್ಕಲು ನಿಕ್ಷೇಪಗಳು       - ಪ್ಲೀಸ್ಟೋಸೀನ್ ಅವಧಿ
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


58. ಸಂಗಮ ಸಾಹಿತ್ಯದಲ್ಲಿ ಬರುವ ಚೋಳ ಅರಸರ ಎರ‍ಡು ಹೆಸರುಗಳೆಂದರೆ, ಕರಿಕಾಲ ಚೋಳ ಮತ್ತು ಕೋಸೆಂಗಾನನ್. ಉತ್ತರಾಧಿಕಾರಿಗಳನ್ನು ನೇಮಿಸುವ, ಅವರ ಸಂಬಂಧಗಳನ್ನು ಇತರೊಂದಿಗೆ ಬೆಸೆಯುವ ಮತ್ತು ಇದೇ ಅವಧಿಯಲ್ಲಿ ಹಲವಾರು ಬೇರೆ ರಾಜಕುಮಾರರೊಂದಿಗಿನ ಸಂಬಂಧಗಳಿಗೆ ಸರಿಯಾದ ಮಾನದಂಡಗಳಿರಲಿಲ್ಲ.
- ಉರೈಯೂರ್ (ಈಗಿನ ತಿರುಚನಾಪಳ್ಳಿಯ ಒಂದು ಭಾಗ) ಚೋಳರ ಹಳೇಯ ರಾಜಧಾನಿಯಾಗಿತ್ತು..
- ಕಾವೇರಿಪಟ್ಟಣಂ ಕೂಡಾ ಮೊದಲಿಗೆ ಚೋಳರ ರಾಜಧಾನಿಯಾಗಿತ್ತು.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


59. ಅಂತರರಾಷ್ಟ್ರೀಯ ವಲಸೆಯ ವರದಿ (ಇಂಟರ್ನ್ಯಾಷನಲ್ ಮೈಗ್ರೇಶನ್ ರಿಪೋರ್ಟ್) 2017 ಯನ್ನು '(ಡಿಸೆಂಬರ್ 18 ರಂದು)-ಇಂಟರ್ನ್ಯಾಷನಲ್ ಮೈಗ್ರೇಶನ್ ಡೇ' ಸಂದರ್ಭದಲ್ಲಿ  ಯುಎನ್ ಡಿಪಾರ್ಟ್ ಮೆಂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ಅಫೇರ್ಸ್ (UNDSA-ಯುಎನ್ ಡಿಎಸ್ಎ) ವು ಬಿಡುಗಡೆ ಮಾಡಿದೆ.
— ಇದರ ಪ್ರಕಾರ,
- ವಿದೇಶದಲ್ಲಿ ವಲಸಿಗರ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ.
- ಅಂತರರಾಷ್ಟ್ರೀಯ ವಲಸೆ ಪ್ರಪಂಚದ ಅನೇಕ ಭಾಗಗಳಲ್ಲಿ ಜನಸಂಖ್ಯಾ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುತ್ತದೆ ಮತ್ತು ಕೆಲವು ದೇಶಗಳಲ್ಲಿ ಅಥವಾ ಪ್ರದೇಶಗಳಲ್ಲಿ ಜನಸಂಖ್ಯೆಯ ಕುಸಿತವನ್ನು ಹಿಮ್ಮೆಟ್ಟಿಸುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━


60. ಜಿಎಸ್‌ಟಿಯ ಪ್ರಮುಖ ವೈಶಿಷ್ಟ್ಯಗಳು :
* ಜಿಎಸ್‌ಟಿಯು ಪರೋಕ್ಷ ತೆರಿಗೆಯಾಗಿದೆ.
* ವರ್ಷಕ್ಕೆ  ₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.
* ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.
* ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು  ನಾಲ್ಕು ಹಂತದಲ್ಲಿ (ಶೇ 5, 12, 18 ಮತ್ತು 28) ನಿಗದಿ.
* ವಿಲಾಸಿ ಸರಕು,  ತಂಪು ಪಾನೀಯ ಮತ್ತು  ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ     ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.
* ಜಿಎಸ್‌ಟಿ  ಗರಿಷ್ಠ ದರ ಶೇ 40ರಷ್ಟು

... ಮುಂದುವರೆಯುವುದು.