"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 3 March 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-2: ಸಾಮಾನ್ಯ ಅಧ್ಯಯನಗಳು-1, ವಿಭಾಗ-2. & ವಿಭಾಗ-3 (PART -VII) ( KAS Mains Compulsory Paper II Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-2: ಸಾಮಾನ್ಯ ಅಧ್ಯಯನಗಳು-1, ವಿಭಾಗ-2. & ವಿಭಾಗ-3 (PART -VII)
( KAS Mains Compulsory  Paper II  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.


●. ವಿಭಾಗ-2

ಸಾಮಾಜಿಕ ಮತ್ತು ರಾಜಕೀಯ ದೃಷ್ಟೀಕೋನ (7 ಘಟಕಗಳು)

(1) ಸ್ವಾತಂತ್ರ ನಂತರದ ಕರ್ನಾಟಕ – ರಾಜಕೀಯ ಬಲವರ್ಧನೆಗಾಗಿ - ಸರ್ಕಾರಗಳ ಸತತ ಪ್ರಯತ್ನಗಳು - ಹಿಂದುಳಿದ ವರ್ಗಗಳು ಮತ್ತು ಸಾಮಾಜಿಕ ನ್ಯಾಯ - ಹಾವನೂರ ಸಮಿತಿ – ವೆಂಕಟಸ್ವಾಮಿ ಸಮಿತಿ – ಚಿನ್ನಪ್ಪರೆಡ್ಡಿ ಸಮಿತಿಯ ವರದಿಗಳು – ಇತ್ತೀಚಿನ ಧೋರಣೆಗಳು – ದಲಿತ ಚಳುವಳಿ - ದೇವರಾಜ ಅರಸ್ ಮತ್ತು ಭೂಸುಧಾರಣೆಗಳು ಭಾಷಾ ವಿವಾಧ: ಗೋಕಾಕ್ ಚಳುವಳಿ - ವಿವಾದಾಂಶಗಳು ಮತ್ತು ದೃಷ್ಟಿಕೋನಗಳು. ಅಂತರರಾಜ್ಯ ವಿವಾದಗಳು – ಗಡಿವಿವಾದಗಳು – ಮಹಾಜನ್ ಸಮಿತಿಯ ವರದಿ ಮತ್ತು ಅದರ ಪ್ರಭಾವ – ಜಲ ವಿವಾದಗಳು – ರೈತರ ಚಳುವಳಿಗಳು, ಪ್ರಾದೇಶಿಕ ಅಸಮತೋಲನ ಮತ್ತು ನಂಜುಂಡಪ್ಪ ಸಮಿತಿಯ ವರದಿ.

(2) ಸಮಾಜಿಕ ಬದಲಾವಣೆ ಮತ್ತು ಚಳುವಳಿಗಳು - ಸಾಮಾಜಿಕ ರಚನೆ ಮತ್ತು ಸಾಮಾಜಿಕ ಬದಲಾವಣೆ, ಸಮಾಜಿಕ ಬದಲಾವಣೆಯ ಸಿದ್ಧಾಂತಗಳು, ಅಸಂಘಟಿತ ಸಮಾಜ ಮತ್ತು ಸಾಮಾಜಿಕ ಚಳುವಳಿಗಳು. ಉದ್ದೇಶಿತ ಸಾಮಾಜಿಕ ಬದಲಾವಣೆ, ಸಾಮಾಜಿಕ ನೀತಿ ಮತ್ತು ಸಾಮಾಜಿಕ ಅಭಿವೃದ್ಧಿ.

(3) ಸಾಮಾಜಿಕ ಬದಲಾವಣೆ ಮತ್ತು ಆಧುನೀಕರಣ - ಸಂಘರ್ಷ ಪಾತ್ರದ ಸಮಸ್ಯೆಗಳು - ಪೀಳಿಗೆ ನಡುವಿನ ಅಂತರ, ಯುವಜನರ ಅಶಾಂತಿ ಮತ್ತಿ ಶಿಕ್ಷಣದ ವಾಣಿಜ್ಯೀಕರಣ, ಶೈಕ್ಷಣೀಕ ಶಕ್ತಿಯಾಗಿ ಭಾರತ ಹೊರಹೊಮ್ಮುವಿಕೆ – ಮಹಿಳೆಯ ಸ್ಥಾನಮಾನದ ಬದಲಾವಣೆ ಮತ್ತು ಸಾಮಾಜಿಕ ಚಳುವಳಿಗಳು, ಕೈಗಾರಿಕರಣ ಮತ್ತು ನಗರೀಕರಣ ನಿರ್ಬಂಧ ಗುಂಪುಗಳ ಪಾತ್ರ, ಸಂಸ್ಕೃತೀಕರಣ, ಪಾಶ್ಚೀಮಾತ್ಯೀಕರಣ ಮತ್ತು ಆಧುನೀಕರಣ – ಆಧುನೀಕರಣ ವಿರುದ್ಧ ಪಾರಂಪರಿಕತೆ, ಪ್ರಸ್ತುತ ಸಾಮಾಜಿಕ ಪಿಡುಗುಗಳು – ಮೂಲ ಭೂತವಾದಿತನ ಮತ್ತು ಭಯೋತ್ಪಾದನೆ, ನಕ್ಸಲ್ವಾದ, ಸ್ವಜನ ಪಕ್ಷಪಾತ, ಭ್ರಷ್ಠಾಚಾರ ಮತ್ತು ಕಪ್ಪುಹಣ.

(4) ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆ: ವಿಧಾನ ಮಂಡಲ; ಕಾರ್ಯಾಂಗ ಮತ್ತು ನ್ಯಾಯಾಂಗ, ಪಾರಂಪರಿಕ ಸಮಾಜದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಪ್ರಕಾರ್ಯ, ರಾಜಕೀಯ ಪಕ್ಷ ಮತ್ತು ಅದರ ಸಾಮಾಜಿಕ ಸಂಯೋಜನೆ.

(5) ಅಧಿಕಾರದ ವಿಕೇಂದ್ರೀಕರಣ: ಅಧಿಕಾರದ ವಿದೇಂದ್ರೀಕರಣ ಮತ್ತು ರಾಜಕೀಯ ಭಾಗವಹಿಸುವಿಕೆ. ಕೇಂದ್ರ ಸರ್ಕಾರ, ಸಂಸತ್ತು, ಸಚಿವ ಸಂಪುಟ, ಸರ್ವೋಚ್ಚ ನ್ಯಾಯಾಲಯ, ನ್ಯಾಯಿಕ ವಿಮರ್ಶೆ, ಕೇಂದ್ರ-ರಾಜ್ಯದ ಸಂಬಂಧಗಳು, ರಾಜ್ಯ ಸರ್ಕಾರ, ರಾಜ್ಯಪಾಲರ ಪಾತ್ರ, ಪಂಚಾಯತ್ ರಾಜ್, ಭಾರತದ ರಾಜಕಾರಣದಲ್ಲಿ ವರ್ಗ ಮತ್ತು ಜಾತಿ, ಪ್ರಾಂತೀಯ ರಾಜಕೀಯ, ಭಾಷೀಕರಣ ಮತ್ತು ಕೋಮುವಾದ, ಜಾತ್ಯಾತೀಕರಣ ಕಾರ್ಯನೀತಿಯ ಸಮಸ್ಯೆಗಳು ಮತ್ತು ರಾಷ್ಟ್ರೀಯ ಏಕೀಕರಣ, ರಾಜಕೀಯ ಭಾಗವಹಿಸುವಿಕೆ ಮತ್ತು ಮತದಾನ, ಮತ ಬ್ಯಾಂಕ್ ರಾಜಕೀಯ.

(6) ಸಾಮಾಜಿಕ ಆರ್ಥಿಕ ವ್ಯವಸ್ಥೆ: ಜಾಜಮಾನಿ ಪದ್ಧತಿ ಮತ್ತು ಸಾಂಪ್ರದಾಯಿಕ ಸಮಾಜದ ಮೇಲೆ ಅದರ ಪ್ರಭಾವ, ಮಾರುಕಟ್ಟೆ ಅರ್ಥವ್ಯವಸ್ಥೆ (Market Economy) ಮತ್ತು ಅದರ ಸಾಮಾಜಿಕ ಪರಿಣಾಮಗಳು, ವೃತ್ತೀಯ ವೈವಿಧ್ಯೀಕರಣ ಮತ್ತು ಸಾಮಾಜಿಕ ರಚನೆ, ವೃತ್ತಿ ಮತ್ತು ವೃತ್ತಿಪರ (Professionalisation), ಕಾರ್ಮಿಕ ಸಂಘಗಳ ಪಾತ್ರ, ಸಾಮಾಜಿಕ ನಿರ್ಣಾಯಕಗಳು ಮತ್ತು ಆರ್ಥಿಕ ಅಭಿವೃದ್ಧಿಯ ಪರಿಣಾಮ, ಆರ್ಥಿಕ ಅಸಮಾನತೆಗಳು, ಶೋಷಣೆ ಮತ್ತು ಭ್ರಷ್ಟಚಾರ, ಜಾಗತೀಕರಣ ಮತ್ತು ಅದರ ಸಮಾಜಿಕ ಪರಿಣಾಮ.

(7) ಗ್ರಾಮೀಣ-ಸಾಮಾಜಿಕ ವ್ಯವಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ – ಗ್ರಾಮ ಸಮುದಾಯದ ಸಾಮಾಜಿಕ ಸಾಂಸ್ಕøತಿಕ ಆಯಾಮಗಳು, ಸಾಂಪ್ರದಾಯಿಕ ಅಧಿಕಾರ ರಚನೆ, ಪ್ರಜಾಸತ್ತಾತ್ಮೇಕರಣ ಮತ್ತು ನಾಯಕತ್ವ, ಬಡತನ, ಖುಣತ್ವ, ಜೀತ ಕಾರ್ಮಿಕ, ಭೂಸುಧಾರಣೆಗಳ ಸಾಮಾಜಿಕ ಪರಿಣಾಮಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಹಸಿರುಕ್ರಾಂತಿ, ಗ್ರಾಮೀಣಾಭಿವೃದ್ಧಿಯ ಹೊಸ ಕಾರ್ಯತಂತ್ರಗಳು, ಬದಲಾಗುತ್ತಿರುವ ಗ್ರಾಮೀಣ ಚಿತ್ರಣ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-3

ಭಾರತೀಯ ಅರ್ಥವ್ಯವಸ್ಥೆ – ಯೋಜನೆ – ಗ್ರಾಮೀಣಾಭಿವೃದ್ಧಿ (8 ಘಟಕಗಳು)

(1) ಭಾರತದ ಆರ್ಥವ್ಯವಸ್ಥೆ: ಸ್ವಾತಂತ್ರಯ ನಂತರದ ಬೆಳವಣಿಗೆ – ಕೃಷಿಯ ಅನುಭವ, ಕೈಗಾರಿಕೆ ಮತ್ತು ತೃತೀಯ ವಲಯಗಳು, ಬೆಳವಣಿಗೆ ಮತ್ತು ಹಂಚಿಕೆ ನ್ಯಾಯ, ಬಡತನ ಮತ್ತು ಅಸಮಾನತೆ, ಯೋಜನಾ ಅವಧಿಯಲ್ಲಿ ಕರ್ನಾಟಕ ಅರ್ಥವ್ಯವಸ್ಥೆಯ ಬೆಳವಣಿಗೆ ಯುಗ, ರಾಜ್ಯ ಅರ್ಥ ವ್ಯವಸ್ಥೆಯಲ್ಲಿ ವೃದ್ಧಿ ಮತ್ತಿ ಕ್ಷೇತ್ರೀಯ ಬದಲಾವಣೆಗಳು ಮತ್ತು ಪರಸ್ಪರ ಸಂಪರ್ಕ.

(2) ಭಾರತ ಮತ್ತು ಅಂತರಾಷ್ಟ್ರೀಯ ಅರ್ಥಿಕ ಸಂಬಂಧಗಳು - ಬೆಳವಣಿಗೆ ಮತ್ತು ವ್ಯಾಪಾರ, ರಫ್ತುಗಳು ಮತ್ತು ಅಮದುಗಳ ಪರಿಮಾಣ, ಸಂಯೋಜನೆ ಮತ್ತು ಮಾರ್ಗ, ಆರ್ಥಿಕ ಅಭಿವೃದ್ಧಿಯಲ್ಲಿ ದೇಶೀಯ ಮತ್ತು ವಿದೇಶಿ ಬಂಡವಾಳ, ಭಾರತದ ವಿದೇಶಿ ವ್ಯಾಪಾರ ನೀತಿಯಲ್ಲಿ ಬದಲಾವಣೆಗಳು, ಸಂದಾಯಗಳ ಬಾಕಿ ಮತ್ತು ವಿದೇಸಿ ವಿನಿಮಯ, ಕರ್ನಾಟಕದ ರಫ್ತುಗಳು-ಪರಿಮಾಣ, ಸಂಯೋಜನೆ ಮತ್ತು ಮಾರ್ಗ

(3) ಅಭಿವೃದ್ಧಿಯ ಮಾರ್ಗಗಳು: ಪ್ರಾಂತ್ಯಗಳ ಮಧ್ಯೆ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ತಾರತಮ್ಯ, ತಾರತಮ್ಯಗಳನ್ನು ತಗ್ಗಿಸಲು ಸಾರ್ವಜನಿಕ ಕಾರ್ಯನೀತಿಗಳು, ವಿಶೇಷ ಆರ್ಥಿಕ ವಲಯಗಳ ನಿರೀಕ್ಷೆಗಳು ಮತ್ತು ಸಮಸ್ಯೆಗಳು, ಕರ್ನಾಟಕದ ಪ್ರಗತಿಯಲ್ಲಿ ತಾರತಮ್ಯ ಮತ್ತು ಸಾರ್ವಜನಿಕ ಕಾರ್ಯನೀತಿಗಳು, ಅಭಿವೃದ್ಧಿ ತಾರತಮ್ಯದ ಪರಿಹಾರ, ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಳು.

(4) ಯೋಜನೆ – ಯೋಜನೆಯ ಗುರಿಗಳು: ಉದ್ದೇಶಗಳು ಮತ್ತು ಪ್ರಸ್ತಾಪಗಳು, ಪಂಚವಾರ್ಷಿಕ ಯೋಜನೆಗಳ ಸಾಧನೆಗಳು ಮತ್ತು ವಿಫಲತೆಗಳು (1 ರಿಂದ 7ರ ವರೆಗಿನ ಪಂಚವಾರ್ಷಿಕ ಯೋಜನೆಗಳು) ಹೊಸ ಆರ್ಥಿಕ ನೀತಿಗಳ ಆಡಳಿತ ಕ್ರಮದಲ್ಲಿ ಅಭಿವೃದ್ಧಿ ಯೋಜನೆಗಳು (7ನೇ ಪಂಚವಾರ್ಷಿಕ ಯೋಜನೆಯ ನಂತರ) ಕರ್ನಾಟಕದಲ್ಲಿ ಯೋಜನೆಗಳು.

(5) ವಿಕೇಂದ್ರೀಕರಣ: ಉನ್ನತ ಯೋಜನೆ ಮತ್ತು ಮೂಲಭೂತ ಯೋಜನೆಯ ಸಾಧಕ ಮತ್ತು ಭಾದಕಗಳು ಪಂಚಾಯತ್ರಾಜ್ ಸಂಸ್ಥೆಗಳಲ್ಲಿ ಯಾಂತ್ರಿಕ ಯೋಜನೆ ಮತ್ತು ಅನುಭವ, ಯೋಜನೆ ರೂಪಿಸುವುದು ಮತ್ತು ಸಾಮಥ್ರ್ಯ ವೃದ್ಧಿಗೊಳಿಸುವುದು. ಯೋಜನೆ ಮತ್ತು ಹಣಕಾಸು, ಕರ್ನಾಟಕದಲ್ಲಿ ವಿಕೇಂದ್ರಿಕೃತ ಯೋಜನೆ, ಸಂಪನ್ಮೂಲ ಕ್ರೋಢೀಕರಣ ಮತ್ತು ವಹಿಸುವಿಕೆ, ಜಿಲ್ಲಾ ಯೋಜನಾ ಸಮಿತಿ, ರಾಜ್ಯ ಹಣಕಾಸು ಮತ್ತು ಸ್ಥಳೀಯ ಹಣಕಾಸುಗಳು, ರಾಜ್ಯ ಹಣಕಾಸು ಆಯೋಗ.

(6) ಗ್ರಾಮೀಣಾಭಿವೃದ್ಧಿ: ರಾಷ್ಟ್ರೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯ ಪ್ರಾಮುಖ್ಯತೆ, ಗಾಂಧಿಮಾರ್ಗದ ಗ್ರಾಮೀಣ ಅಭಿವೃದ್ಧಿ ಭೂಸುಧಾರಣೆಗಳು, ಬೇಸಾಯ ಮತ್ತು ಉತ್ಪಾದಕತೆಯ ಗಾತ್ರ, ನೀರಾವರಿ ಮತ್ತು ಒಣಬೇಸಾಯದ ಸಮಸ್ಯೆಗಳು, ಆಹಾರ ಭದ್ರತೆ, ಗ್ರಾಮೀಣ ಸಾಲ, ಕೃಷಿ ಮಾರುಕಟ್ಟೆ, ಕೃಷಿ ಕಾರ್ಮಿಕ, ಗ್ರಾಮೀಣ ಕೈಗಾರಿಕೆಗಳು ಮತ್ತು ಉದ್ಯೋಗ, ಕರ್ನಾಟಕ ಕೃಷಿಯ ಸಮಸ್ಯೆಗಳು, ಗ್ರಾಮೀಣ ಅರ್ಥಿಕತೆಯ ಮೂಲಸೌಕರ್ಯಗಳು (ಇಂಧನ, ನೀರಾವರಿ, ಸಾರಿಗೆ, ಸಂಪರ್ಕ (communication), ಮಾರುಕಟ್ಟೆಗಳು) ಗ್ರಾಮೀಣ ಸಾಮಾಜಿಕ ಮೂಲಸೌಕರ್ಯಗಳು-ವಸತಿ, ಕುಡಿಯುವ ನೀರು, ನೈರ್ಮಲ್ಯ ಮತ್ತು ಚರಂಡಿ ವ್ಯವಸ್ಥೆ, ಗ್ರಾಮೀಣ ಆರೋಗ್ಯ ವ್ಯವಸ್ಥೆಗಳು ಮತ್ತು ಅವುಗಳ ಹಂಚಿಕೆ, ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸಾಮಜಿಕ ಮೂಲಸೌಕರ್ಯಗಳು, ಕರ್ನಾಟಕದಲ್ಲಿ ಗ್ರಾಮೀಣ ಮಾರುಕಟ್ಟೆಗಳು, ಕರ್ನಾಟಕದಲ್ಲಿ ಗ್ರಾಮೀಣ ವಸತಿ ಮತ್ತು ಆರೋಗ್ಯ ಪಾಲನ ವ್ಯವಸ್ಥೆಗಳು.

(7) ಗ್ರಾಮೀಣಾಭಿವೃದ್ಧಿಯ ಪ್ರಾರಂಭದ ಹಂತಗಳು: ಬಡತನ ನಿರ್ಮೂಲನೆ ಹಾಗೂ ಉದ್ಯೋಗ, ಸೃಜನೆ ಕಾರ್ಯಕ್ರಮಗಳು, ಪಂಚವಾರ್ಷಿಕ ಯೋಜನೆ ಮತ್ತು ಒಟ್ಟಾರೆ ಅಭಿವೃದ್ಧಿ, ಗ್ರಾಮೀಣ ಹಣಕಾಸಿನ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸ್ವತ್ತು ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಸಂರಕ್ಷಣೆ – ಗ್ರಾಮ ಹುಲ್ಲುಗಾವಲುಗಳು ಮತ್ತು ಮರಮುಟ್ಟುಗಳು, ಜಲಭಾಗಗಳು, ಗ್ರಾಮೀಣ ಪ್ರದೇಶಗಳಲ್ಲಿ ನಗರ ಸೌಕರ್ಯಗಳನ್ನು ಒದಗಿಸುವಿಕೆ (ಪಿಯುಆರ್ಎ) ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳು, ಕರ್ನಾಟಕದಲ್ಲಿ ಸ್ವ-ಸಹಯಾ ಗುಂಪುಗಳು ಮತ್ತು ಕೀರು ಬಂಡವಾಳ ಸಂಸ್ಥೆಗಳು, ಕರ್ನಾಟಕದ ಗ್ರಾಮೀಣ ಕೆರೆ ಪುನರುಜೀವನ, ಕುಡಿಯುವ ನೀರು, ನೈರ್ಮಲ್ಯ ಮತ್ತು ಆರೋಗ್ಯ ಸಂರಕ್ಷಣೆಗೆ ಬಾಹ್ಯ ನೆರವು.

(8) ದತ್ತಾಂಶ ಸಂಗ್ರಹಣೆ ವಿಶ್ಲೇಷಣೆ-ಅರ್ಥ ವಿವರಣೆ: ಅಂಕಿಅಂಶಗಳ ದತ್ತಾಂಶ ಸಂಗ್ರಹಣೆ, ಅರ್ಥ ವಿವರಣೆ ಮತ್ತು ಗುಣಾವಗುಣ ವಿವೇಚನೆ, ಗ್ರಾಫ್ಗಳು ಮತ್ತು ಚಾರ್ಟ್ಗಳ ಅಧ್ಯಯನ, ಬಾರ್ ಗ್ರಾಫ್ಗಳು, ಲೈನ್ ಗ್ರಾಫ್ಗಳು ಮತ್ತು ಪೈಚಾರ್ಟ್ಗಳು, ಕೋಷ್ಠಕ ಮತ್ತು ರೇಖಾಕೃತಿ ದತ್ತಾಂಶದ ಮೇಲೆ ಆಧರಿತವಾದ ಸಮಸ್ಯೆಗಳು – ಅಂಕಿಅಂಶಗಳ ದತ್ತಾಂಶ ಪರ್ಯಾಪತೆ - ಸಂಭಾವ್ಯತೆಯನ್ನಾಧರಿಸಿದ ಸಮಸ್ಯೆಗಳು ಪರಿವರ್ತನೆಗಳು ಮತ್ತು ಸಂಯೋಜನೆಗಳು - ಪರಿಮಾಣಾತ್ಮಕ ಸಾಮಥ್ರ್ಯ - ಸಂಖ್ಯಾ ಅನುಕ್ರಮಗಳು, ಶ್ರೇಣಿಗಳು, ಸರಾಸರಿಗಳು, ಸಂಖ್ಯಾ ಪದ್ಧತಿಗಳು ಅನುಪಾತ ಮತ್ತು ಪ್ರಮಾಣ, ಲಾಭ ಮತ್ತು ನಷ್ಟ ಶೇಕಾಡಾವಾರು, ಸಮಯ ಮತ್ತು ಕೆಲಸ, ವೇಗ-ಸಮಯ-ಅಂತರ, ಸರಳಬಡ್ಡಿ, ವಿಶ್ಲೇಷಣಾತ್ಮಕ ಮತ್ತು ನಿರ್ಣಯಾತ್ಮಕ ಕಾರಣ, ಓದುವ ಗ್ರಹಿಕ.

...ಮುಂದುವರೆಯುವುದು.

(ಕೃಪೆ: ಯುಸಿಸಿ ಬೆಂಗಳೂರು) 

No comments:

Post a Comment