☀️ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16
1. ಯೋಜನೆ: ಸ್ವಚ್ಛ ಭಾರತ ಅಭಿಯಾನ
(Swachh Bharath Abhiyan)
•─━━━━━═══════════━━━━━─••─━━━━━═══════════━━━━━─•
★ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
(Schemes of Central Government Of India)
💢ಪರಿಕಲ್ಪನೆ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. 2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ನವದೆಹಲಿಯ ರಾಜ್ಘಾಟ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಯೋಜನೆಗೆ ಚಾಲನೆ ನೀಡಿದ್ದರು. ಹೀಗೆ ಆರಂಭವಾದ ಈ ಯೋಜನೆ ಆಂದೋಲನ ಸ್ವರೂಪ ಪಡೆದುಕೊಂಡಿದೆ.
ವಿವಿಧ ಸಂಘ ಸಂಸ್ಥೆಗಳು ಇದೀಗ ನಿರಂತರ #ಸ್ವಚ್ಛ_ಭಾರತ_ಅಭಿಯಾನ ನಡೆಸುತ್ತಿವೆ. ದೇಶದ ಒಟ್ಟು 4,041 ನಗರಗಳು ಮತ್ತು ಪಟ್ಟಣಗಳನ್ನು ಈ ಆಂದೋಲನ ಒಳಗೊಂಡಿದೆ.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯಾದ 2019ರ ಅಕ್ಟೋಬರ್ 2ರೊಳಗೆ #ಸ್ವಚ್ಛ_ಭಾರತ ರೂಪಿಸುವುದು ಇದರ ಗುರಿ.
ಸ್ವಚ್ಛ ಭಾರತ ಕೋಶದಡಿಯಲ್ಲಿ 3.69 ಕೋಟಿ ರೂಪಾಯಿ ಸಂಗ್ರಹವಾಗಿದೆ. 2016-17ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಇದಕ್ಕಾಗಿ 9,000 ಕೋಟಿ ರೂ. ಮೀಸಲಿಟ್ಟಿದೆ. ವಿಶ್ವಬ್ಯಾಂಕ್ ಕೂಡ ಈ ಯೋಜನೆಗೆ ಹಣಕಾಸಿನ ಹಾಗೂ ತಾಂತ್ರಿಕ ನೆರವು ನೀಡಿದೆ.
💢 ಪರಿಣಾಮ:
ಆಂದೋಲನ ಪ್ರಾರಂಭದಲ್ಲಿ ದೇಶಾದ್ಯಂತ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಒಂದಷ್ಟು ಧನಾತ್ಮಕ ಬದಲಾವಣೆಗಳು ಹಲವೆಡೆ ಆಗಿವೆ.
ಕಸವಿಲೇವಾರಿ ಮುಂತಾದ ಸಮಸ್ಯೆಗಳಿದ್ದು, ಅದಕ್ಕೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಸಾಗಿದೆ. ಆದರೆ, ಸಮರ್ಪಕವಾಗಿ ಅನುದಾನ ಹಂಚಿಕೆ ಆಗದಿರುವ ಕಾರಣ ಸೇರಿ ವಿವಿಧ ಸಮಸ್ಯೆಗಳಿಂದಾಗಿ ಕ್ರಮೇಣ ಈ ಆಂದೋಲನ ಜನಪ್ರಿಯತೆಯನ್ನು ಕಳೆದುಕೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
(Courtesy :Vijayavani)

No comments:
Post a Comment