☀️ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16
2. ಯೋಜನೆ: ನಮಾಮಿ ಗಂಗೆ
(Namami Ganga)
•─━━━━━═══════════━━━━━─••─━━━━━═══════════━━━━━─•
★ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು - 2015-16
(Central Government schemes)
💢ಪರಿಕಲ್ಪನೆ:
ನಮಾಮಿ_ಗಂಗೆ_ಯೋಜನೆ ಅಥವಾ ನಮಾಮಿ ಗಂಗಾ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ.
ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ಸೇರಿ ಗಂಗಾನದಿಯ ಸಮಗ್ರ ಅಭಿವೃದ್ಧಿ ಇದರ ಪ್ರಮುಖ ಉದ್ದೇಶ.
ಇದಕ್ಕಾಗಿ ಸರ್ಕಾರ ತನ್ನ ಚೊಚ್ಚಲ ಬಜೆಟ್ನಲ್ಲಿ 2,037 ಕೋಟಿ ರೂ. ಮೀಸಲಿರಿಸಿತ್ತು. 2014-15ರ ಮುಂಗಡ ಪತ್ರದಲ್ಲಿ ಮುಂದಿನ ಐದು ವರ್ಷಗಳ ಅವಧಿಗಾಗಿ 20,000 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಮೀಸಲಿರಿಸಲಾಗಿದೆ.
ಈ ಯೋಜನೆ ಪ್ರಕಾರ ಗಂಗಾ ನದಿ ಹರಿಯುವ ಎಂಟು ರಾಜ್ಯಗಳು, ನದಿ ದಂಡೆಯಲ್ಲಿರುವ 47 ಪಟ್ಟಣಗಳು, 12 ನದಿಗಳ ಸ್ವಚ್ಛತೆಗೆ ಆದ್ಯತೆ ಸಿಗಲಿದೆ. ಅಷ್ಟೇ ಅಲ್ಲ 2022ರ ವೇಳೆಗೆ ಗಂಗಾನದಿ ದಡದಲ್ಲಿರುವ 1,632 ಗ್ರಾಮಪಂಚಾಯಿತಿಗಳು ಬಯಲುಶೌಚದಿಂದ ಮುಕ್ತವಾಗಲಿವೆ.
ಈ ಯೋಜನೆಯ ಉಸ್ತುವಾರಿ ಜಲಸಂಪನ್ಮೂಲ ಸಚಿವಾಲಯದ್ದಾದರೂ, ಪರಿಸರ, ನಗರಾಭಿವೃದ್ಧಿ, ಬಂದರು, ಪ್ರವಾಸೋದ್ಯಮ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವಾಲಯಗಳೂ ಮಹತ್ವದ ಜವಾಬ್ದಾರಿ ಹೊಂದಿವೆ.
ನದಿ ದಡದ ಜನರ ಪಾಲ್ಗೊಳ್ಳುವಿಕೆಯಲ್ಲಿ ನದಿಯ ಸ್ವಚ್ಛತೆ ಕಾಪಾಡುವುದು, ನದಿ ಸಂರಕ್ಷಣೆ ಯೋಜನೆ ಜಾರಿಗೊಳಿಸುವುದು ಗಮನಾರ್ಹ ಅಂಶ.
ಗಂಗಾ_ಶುದ್ಧೀಕರಣ ಯೋಜನೆಗೆ ಸಹಕಾರಿಯಾಗುವ ‘ಭುವನ ಗಂಗಾ’ ಮೊಬೈಲ್ ಆಪನ್ನು ಈಗಾಗಲೇ ಬಿಡುಗಡೆಮಾಡಲಾಗಿದೆ. ಇದರ ಮೂಲಕ ಗಂಗಾ ನದಿಗೆ ತ್ಯಾಜ್ಯ ಬಿಡುಗಡೆ ಮಾಡುವ ಕೈಗಾರಿಕೆಗಳು ಅಥವಾ ವ್ಯಕ್ತಿಗಳ ಕುರಿತು ಫೋಟೊ ಸಹಿತ ಮಾಹಿತಿಯನ್ನು ಸರ್ಕಾರಕ್ಕೆ ನೀಡಬಹುದಾಗಿದೆ.
💢ಪರಿಣಾಮ:
ವಾರಾಣಸಿಯಿಂದಲೇ ಆ ಕೆಲಸ ಆರಂಭವಾಗಿದೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು, ವ್ಯಕ್ತಿಗಳು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಘಟ್ಟಗಳು ಸ್ವಚ್ಛವಾಗಿದ್ದು, ಆ ಘಟ್ಟಗಳ ನಿರ್ವಹಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ.
ನದಿ ಶುದ್ಧೀಕರಣಕ್ಕೆ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಕೂಡ ಕೈಜೋಡಿಸಿದೆ. ಗಂಗಾ ನದಿಯ ತೀರದಲ್ಲಿರುವ ಪ್ರದೇಶಗಳ ಅಂಕಿಅಂಶಗಳನ್ನು ಸ್ಯಾಟಲೈಟ್ ಮೂಲಕ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದೆ. ನದಿ ಮಾಲಿನ್ಯ, ಯೋಜನೆ ಪ್ರಗತಿ ಮತ್ತಿತರ ವಿಚಾರಗಳ ಮೇಲೂ ನಿಗಾ ಇಡಬಹುದಾಗಿದೆ.
ಗಂಗಾ_ನದಿ ದಡದಲ್ಲಿರುವ ಉದ್ಯಮಗಳಿಗೆ ರೇಟಿಂಗ್ ನೀಡಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್ ಉತ್ಪನ್ನಗಳು ಮತ್ತು ಇತರ ಸಾಮಗ್ರಿಗಳಿಗೆ ಸುರಕ್ಷತೆ ಪ್ರಮಾಣದ ಆಧಾರದ ಮೇಲೆ ನೀಡಲಾಗುವ ರೇಟಿಂಗ್ನಂತೆಯೇ ನಿರ್ಮಲ ಗಂಗಾ ರೇಟಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.
ಗಂಗಾ ನದಿಗೆ ತ್ಯಾಜ್ಯವನ್ನು ಹರಿಬಿಡುವ ಉದ್ಯಮಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಮೂರು ಮಾದರಿಯ ಶ್ರೇಣಿಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ಆಶ್ರಮಗಳು, ಮುನಿಸಿಪಾಲಿಟಿಗಳು, ಗ್ರಾಮ ಪಂಚಾಯಿತಿಗಳಿಗೂ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ.
ಗಂಗೆಗೆ ಕಲುಷಿತ ನೀರು ಸೇರುವುದನ್ನು ತಪ್ಪಿಸಲು ‘ಗಂಗಾ ಗ್ರಾಮ್ ಯೋಜನೆಗೆ ಚಾಲನೆ ನೀಡಲಾಗಿದೆ. ಇದರ ಅನ್ವಯ ನದಿಗೆ ಹೊಂದಿಕೊಂಡಿರುವ 1,600 ಗ್ರಾಮಗಳಲ್ಲಿ ಪಂಜಾಬ್ನ ಸೀಚೆವಲ್ ಮಾದರಿಯಲ್ಲಿ ಕೊಳಚೆ ನೀರು ಸಂಸ್ಕರಣ ಘಟಕಗಳು ತಲೆಯೆತ್ತಲಿವೆ.
ಮೊದಲ ಹಂತದಲ್ಲಿ 200 ಗ್ರಾಮಗಳಲ್ಲಿ ಯೋಜನೆ ಜಾರಿಯಾಗಲಿದೆ. ಚರಂಡಿ ನೀರನ್ನು ನದಿಗೆ ಸಂಸ್ಕರಿಸಿ ಬಿಡುವುದರ ಜತೆಗೆ ಗ್ರಾಮದ ಪ್ರತಿ ಮನೆಗೂ ಶೌಚಗೃಹ ನಿರ್ವಿುಸಲಾಗುತ್ತದೆ. ಇದರ ಅನ್ವಯ ಪ್ರತಿ ಗ್ರಾಮಕ್ಕೂ ಒಂದು ಕೋಟಿ ರೂ. ಅನುದಾನವನ್ನೂ ಒದಗಿಸಲಾಗುತ್ತಿದೆ.
(Courtesy : vijayavani)

No comments:
Post a Comment