"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 18 July 2014

★ ಕರ್ನಾಟಕದ ಬಡಜನರ ಆಹಾರ ಭದ್ರತೆಯ ಮೇಲೆ ಗುರಿಗೊಳಿಸಲಾದ ಪ್ರಸ್ತುತ ಸಾರ್ವಜನಿಕ ವಿತರಣಾ  ವ್ಯವಸ್ಥೆಯ ಸ್ಥಿತಿಗತಿಯ ಬಗ್ಗೆ ವಿವರಿಸಿರಿ.(300 ಶಬ್ಧಗಳಲ್ಲಿ)


★ ಕರ್ನಾಟಕದ ಬಡಜನರ ಆಹಾರ ಭದ್ರತೆಯ ಮೇಲೆ ಗುರಿಗೊಳಿಸಲಾದ ಪ್ರಸ್ತುತ ಸಾರ್ವಜನಿಕ ವಿತರಣಾ  ವ್ಯವಸ್ಥೆಯ ಸ್ಥಿತಿಗತಿಯ ಬಗ್ಗೆ ವಿವರಿಸಿರಿ.
(300 ಶಬ್ದಗಳಲ್ಲಿ)

ರಾಜ್ಯವು ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳವನ್ನು ಸಾಧಿಸಿದೆಯಾದರೂ ಬಡತನದಿಂದ ಬಳಲುತ್ತಿರುವ ಸಾಮಾನ್ಯ ಜನತೆ ತೀರಾ ಕೆಳಮಟ್ಟದ ಕೊಳ್ಳುವ ಸಾಮಥ್ರ್ಯದಿಂದಾಗಿ ಹೆಚ್ಚಿನ ಬೆಲೆಯ ಆಹಾರ ಧಾನ್ಯಗಳನ್ನು ಕೊಂಡುಕೊಳ್ಳಲು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಕಡಿಮೆ ಆಹಾರ ಸೇವನೆಯಿಂದಾಗಿ ಪೌಷ್ಟಿಕಾಂಶಗಳ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ಬಳಲುತ್ತಿರುವ ಈ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಆಹಾರ ಭದ್ರತೆಯ ಕ್ರಮವಾಗಿ ಗುರಿಗೊಳಿಸಲಾದ ಸಾರ್ವಜನಿಕ ವಿತರಣಾ
ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಬಡಜನರಿಗೆ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಬೇಕಾದಲ್ಲಿ ಆಹಾರ ಧಾನ್ಯಗಳನ್ನು ಬೆಳೆಯಲು ಬಳಸುವ ಭೂಮಿಯ ಒಟ್ಟು ವಿಸ್ತೀರ್ಣ ಹೆಚ್ಚಾಗಬೇಕು ಮತ್ತು ಆಹಾರ ಧಾನ್ಯಗಳ ಉತ್ಪಾದನೆಯ ಪ್ರಮಾಣವು
ಹೆಚ್ಚಾಗುತ್ತಿರಬೇಕು ರಾಜ್ಯದ ಆಹಾರ ಧಾನ್ಯಗಳ ಉತ್ಪಾದನೆಯ ಪ್ರಮಾಣವು ತೃಪ್ತಿಕರವಾಗಿದೆ
ಎಂದು ತಿಳಿಯಬಹುದಾಗಿದೆ.


* ಕರ್ನಾಟಕದಲ್ಲಿ ಬಡತನದ ಪ್ರಮಾಣ :

ಕರ್ನಾಟಕದಲ್ಲಿ ಬಡತನ ದೇಶದಲ್ಲಿರುವಂತೆ ಒಂದು ಜ್ವಲಂತ ಸಮಸ್ಯೆಯಾಗಿದ್ದು. ಅದು ರಾಜ್ಯದ ಬಡಜನರನ್ನು ಹತಾಶೆಯ ಪರಿಸ್ಥಿತಿಗೆ ತಳ್ಳಿದೆ. ರಾಜ್ಯದಲ್ಲಿ ಜೀವನಾವಶ್ಯಕ ಕೊರತೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನಸಂಖ್ಯೆ ಬಹಳಷ್ಟಿದೆ. ಬಡತನವು ಜನರ ಜೀವನಮಟ್ಟದ ಮೇಲೆ ಮತ್ತು ಅವರ ಆಹಾರ ಭದ್ರತೆಯ ಮೇಲೆ ತೀರಾ ಪರಿಣಾಮ ಬೀರುವುದು.

1990-2000 ರ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದ ಬಡತನದ ಪ್ರಮಾಣವು ಶೇ. 20 ರಷ್ಟಾಗಿತ್ತು. 2004-05 ರ ಯೋಜನಾ ಆಯೋಗದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 138.9 ಲಕ್ಷ ಅಂದರೆ ಶೇ 25. ರಷ್ಟು ಬಡಜನರಿದ್ದರು. ಈ ಸಮೀಕ್ಷೆಯ ಪ್ರಕಾರ ಗ್ರಾಮೀಣ ಭಾಗದಲ್ಲಿ ಶೇ. 20.80 ರಷ್ಟು ಮತ್ತು ನಗರ ಭಾಗದಲ್ಲಿ ಶೇ.32.60 ರಷ್ಟು ಬಡಜನರಿದ್ದರು.

* ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪ್ರಸ್ತುತ ಸ್ಥಿತಿಗತಿ :

ರಾಜ್ಯದಲ್ಲಿ ಗುರಿಗೊಳಿಸಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯು ರಾಜ್ಯಮಟ್ಟ, ಜಿಲ್ಲಾಮಟ್ಟ, ಮತ್ತು ತಾಲ್ಲೂಕು ಮಟ್ಟದಂತಹ 3 ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಹಾರ ಧಾನ್ಯಗಳನ್ನು ನೊಂದಾಯಿಸಿದ ಸಗಟುದಾರರು ಭಾರತೀಯ ಆಹಾರ ನಿಗಮದಿಂದ ತೆಗೆದುಕೊಂಡು ನಂತರ ತಾಲ್ಲೂಕು ಮಟ್ಟದ ಕಾಪು ದಾಸ್ತಾನಿನಲ್ಲಿ ಸಂಗ್ರಹಿಸಿಟ್ಟು ನ್ಯಾಯಬೆಲೆ ಅಂಗಡಿಗಳ ಮೂಲಕ ಅವುಗಳನ್ನು ಪಡಿತರ ಚೀಟಿದಾರರಿಗೆ ಸರಬರಾಜು ಮಾಡುತ್ತಾರೆ.

* ಫಲಿತಾಂಶಗಳು :

1. ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗೆ ಬಳಸುವ ಭೂ ವಿಸ್ತೀರ್ಣವು ನಿರಂತರವಾಗಿ ವ್ಯತ್ಯಾಸಗೊಳ್ಳುತ್ತಿದ್ದು, ಇದರಿಂದ ಆಹಾರ ಧಾನ್ಯಗಳ ಉತ್ಪಾದನೆಯಲ್ಲೂ ಸಹ ವ್ಯತ್ಯಾಸ ಉಂಟಾಗಿ ಬಡಜನರ ಆಹಾರ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

2. ರಾಜ್ಯದಲ್ಲಿ ಬಡತನದ ಪ್ರಮಾಣ ಶೇ 25 ರಷ್ಟಿದ್ದು, ಅದು ಗ್ರಾಮೀಣ ಪ್ರದೇಶಗಳಲ್ಲಿ ಶೇ.20.80 ಮತ್ತು ನಗರ ಪ್ರದೇಶಗಳಲ್ಲಿ ಶೇ. 32.60 ರಷ್ಟಿದೆ ರಾಜ್ಯದ ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು
ಹೆಚ್ಚು ಇದ್ದರೂ, ಇಲ್ಲಿ ಬಡತನದ ಪ್ರಮಾಣ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಾಗಿದೆ. ಇದರಿಂದ ನಗರ ಪ್ರದೇಶದ ಜನರ ಕೊಂಡುಕೊಳ್ಳುವ ಶಕ್ತಿಯ ಮೇಲೆ ಪರಿಣಾಮ ಉಂಟಾಗುತ್ತದೆ.

3. ರಾಜ್ಯದಲ್ಲಿ ಒಟ್ಟು 1,54,85,363 ಪಡಿತರ ಚೀಟಿದಾರರಿದ್ದು, ನ್ಯಾಯಬೆಲೆ ಅಂಗಡಿಗಳ ಒಟ್ಟು ಸಂಖ್ಯೆ 20,450 ಇದೆ. ಆದರೆ ಇದು ತುಂಬಾ ಕಡಿಮೆ ಆಗಿದೆ. ಏಕೆಂದರೆ ರಾಜ್ಯ ಸರ್ಕಾರ ಹೇಳುವ ಪ್ರಕಾರ 500 ಪಡಿತರ ಚೀಟಿದಾರರಿಗೆ 1 ನ್ಯಾಯಬೆಲೆ ಅಂಗಡಿ ಇರಬೇಕಾಗಿರುವುದರಿಂದ ರಾಜ್ಯದಲ್ಲಿ 30,000 ದಷ್ಟು ನ್ಯಾಯಬೆಲೆ ಅಂಗಡಿಗಳು ಇರಬೇಕಾಗುತ್ತದೆ.

4. ರಾಜ್ಯದ ಒಟ್ಟು ಪಡಿತರ ಚೀಟಿದಾರರಲ್ಲಿ ಶೇ.67.ರಷ್ಟು ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿದ್ದಾರೆ.

No comments:

Post a Comment